Sunday, September 29, 2019

ಭಾರತೀಯರು ಮತ್ತು ಚೀನೀಯರು ಎಲ್ಲಿ ಹೋದರೂ ಪುಟ್ ಪಾತ್ ವ್ಯಾಪಾರ ಬಿಡಲಾರರು

ಅಮೆರಿಕಕ್ಕೆ ಹೋಗುವುದು ಒಂದು ಫ್ಯಾಷನ್. ಅಥವಾ ಗೀಳು ಎನ್ನುವುದು ಸರಿಯಾದೀತೆ? ಇರಲಿ. ಗೀಳು ನಮಗೂ ಹತ್ತಿತು. ನಮಗೂ ಅಂದರೆ ನನಗೆ ಮತ್ತು ನನ್ನ ಜೀವನ ಸಂಗಾತಿಗೆ. ಹೇಗೆ ಹೋಗುವುದು? ಮಿತ್ರರು ಸಲಹೆ ಇತ್ತುದು ಪ್ರವಾಸಿಗರ ಜೊತೆ ಹೋಗಬಹುದು ಎಂದು. ಆದರೆ ಪ್ರವಾಸಿಗರ ಜೊತೆ ಹೋದರೆ ನ್ಯೂಜೆರ್ಸಿಯಲ್ಲಿಮ ಇರುವ ನನ್ನ ಅಕ್ಕನ ಮಗಳ ಮನೆಗೆ ಭೇಟಿ ನೀಡಲು ಸಾಧ್ಯ ಇಲ್ಲ. ಅದಕ್ಕಿಂತ ಮುಖ್ಯವಾಗಿ ಪ್ರವಾಸಿಗರ ಪಟ್ಟಿಯಲ್ಲಿ ಇರುವ ಎಲ್ಲಾ ಸ್ಥಳಗಳು ನಮಗೆ ನೊಡಲಪೇಕ್ಷೆ ಇಲ್ಲ. ನಮಗೆ ಅಪೇಕ್ಷ್ಷೆ ಇರುವ ಸ್ಥಳಗಳು ಅಲ್ಲಿ ಬಹಳ ಕಡಿಮೆ. ಹೀಗಾಗಿ ನಾವಿಬ್ಬರೇ ಅಮೆರಿಕ ಹೋಗಯವ ದೈರ್ಯ ತಗೊಂಡು ಆಯಿತು. ಅಮೆರಿಕಾ ವೀಸ ಮದ್ರಾಸ್ಗೆ ಹೋಗಿ ಮಾಡಿಕೊಂಡು ಬಂದಾಯಿತು. ಕೆನಡಾ ವೀಸ ಬೆಂಗಳೂರಲ್ಲಿಯೇ ಕುಳಿತುಮಾಡಿದ್ದಾಯಿತು. ಅಮೆರಿಕಾದ ಓರ್ಲೆಂಡೋ, ಮಯಾಮಿಗೆ ನ್ಯೂಜೆರ್ಸಿಯಿಂದ ವಿಮಾನ ಸೀಟು ಕಾದಿರಿಸಿದ್ದೂ ಆಯಿತು. ಅದೇ ವೇಗದಲ್ಲಿ ಒರ್ಲೆಂಡೋ ಮತ್ತು ಮಯಾಮಿಯಲ್ಲಿ ಹೊಟೆಲ್ರಾಮಾದಲ್ಲಿ ನಮಗೆ ವಸತಿ ಕಾಯ್ದಿರಿಸಿದ್ದೂ ಆಯಿತು.

ಇಷ್ಟ ಸಿದ್ಧತೆ ಮಾಡಿ ಹೆಗ್ಡೆÉಯವರು ನನಗೆ ವರದಿ ಒಪ್ಪಿಸಿದಾಗನಾನು ಭೇಷ್ಎಂದೆ.

ಬಿಳಿಯರ ನಾಡಿಗೆ ಪ್ರಯಾಣ. ಆಸ್ಟ್ರೇಲಿಯಾದ ನೈರ್ಮಲ್ಯ, ಪೋಲೀಸರ ದಕ್ಷತೆ, ಕಾನೂನಿನ ಬಿಗಿತ ಕಂಡು ಬಂದಿದ್ದ ನಮಗೆ ಅಮೆರಿಕಾ ಪ್ರವಾಸ ಆತಂಕ ಏನೂ ಅನ್ನಿಸಲಿಲ್ಲ.

ನಾವು ಮಯಾಮಿಯಿಂದ ಕ್ಯೂಸ್ ನಲ್ಲಿ ಪ್ರಯಾಣಿಸಲು ಟಿಕೆಟ್ ಕಾದಿರಿಸಿದ್ದೆವು. ನಮ್ಮ ಹಡಗು ಬಹಾಮಾಕ್ಕೆ ಹೋಗಲಿತ್ತು. ರೋಹಿತ್ ಗೆಳೆಯರು ಬಹಾಮಾಕ್ಕೂ ವೀಸಾ ಬೇಕೆಂದರಂತೆ. ಹಡಗಿನಲ್ಲಿ ಸೀಟು ಕಾದಿರಿಸುವಾಗ ವಿಷಯದಲ್ಲಿ ಅವರು ಸಲಹೆ ನೀಡಿರಲಿಲ್ಲ. ಆದರೂ ಸಂಬಂಧಪಟ್ಟವರಿಗೆ ದೂರವಾಣಿ ಮಾಡ ವಿಚಾರಿಸಿದಾಗ ವೀಸಾ ಬೇಕಾಗುತ್ತದೆ ಎಂದರು.
ನಾವು ಹಡಗಿನಿ9ಂದ ಇಳಿದು ಬಹಾಮಾ ಪ್ರವೆಶ ಪಡೆಯುವುದಿಲ್ಲ ಎಂದರೂ ಅವರು ಕೇಳಲಿಲ್ಲ.
ಕೊನೆಗೆ ವೀಸಾ ಮಾಡಲು ನ್ಯೂಯಾಕ್ ನಗರ ತಲುಪಿದೆವು. ನ್ಯೂಜೆರ್ಸಿಯಿಂದ ನ್ಯೂಯಾರ್ಕ್ಗೆ ಪ್ರಯಾಣಿಸುವಾಗ ರೋಹಿತ್ ಜೊತೆಯಾದ.

ನ್ಯೂಯಾರ್ಕ್ ರೈಲು ನಿಲ್ದಾಣದಿಂದ ನ್ಯೂಯಾರ್ಕ್ ರಸ್ತೆಯಲ್ಲಿ ಬಹಾಮ ವೀಸಾ ಕಚೇರಿಯನ್ನು ಹುಡುಕುತ್ತಾ ನಡೆದೆವು. ಗಗನ ಚುಂಬಿ ಕಟ್ಟಡಗಳ ನಡುವೆ ವಿಶಾಲ ರಸ್ತೆಯಂಚಿನ ವಿಶಾಲ ಕಾಲುದಾರಿ(ಪುಟ್ ಪಾತ್) ಯಲ್ಲಿ ಅಮಾಯಕರಂತೆ ನಮ್ಮ ಗುರಿ ಹುಡುಕುತ್ತಾ ನಡೆದಡೆವು. ದಾರಿ ಮಧ್ಯೆ ವಿಳಾಸ ಕೆಲವರನ್ನು ವಿಳಾಸ ಕೇಳಿದೆವು. ಯಾರ ಬಳಿಯೂ ವಿಳಾಸ ಕೇಳಲು ಹೆಗ್ಡೆಯವರು ಸಿದ್ಧರಿಲ್ಲ. ಆದರೆ ನಾನು ಕೇಳಿಯೇ ಸಿದ್ದ. ದಾರಿಯಲ್ಲಿ ಸ್ಟುಡಿಯೋ ಹುಡುಕಿ ಫೋಟೋ ತೆಗೆಸಿಕೊಂಡಿದ್ದು ಆಯಿತು. ನಾವು ನಮ್ಮ ಪೋಟೋ ತೆಗೆದುಕೊಂಡು ಹೋಗಿರಲಿಲ್ಲ. ವೀಸಾ ಪಡೆಯಲು ನಮ್ಮ ಗುರುತಿನ ಪೋಟೋ ಬೇಕಾಗುತ್ತದೆಯಲ್ಲವೆ?

ನಾವು ಅಲ್ಲಿ ತಲುಪಿದಾಗ ಇನ್ನೂ ಕಛೇರಿ ತೆರೆದಿರಲಿಲ್ಲ. ಜನರು ಕಸದ ಬ್ಯಾಗ್ಗಳನ್ನು ಪುಟ್ ಪಾತಿನಲ್ಲಿ ತಂದು ಇಡುತ್ತ್ತಿದ್ದರು. ನಮ್ಮಲ್ಲಿಯ ಡನ್ ಲಪ್ ಹಾಸಿಗೆಯಂತಹ ಹೊಸ ಹಾಸಿಗೆಯಂತಿರುವ ಹಾಸಿಗೆಯೂ ರಸ್ತೆಗೆಯಲ್ಲಿ ಒರಗಿ ನಿಂತಿತು. ಸ್ವಲ್ಪ ಹೊತ್ತಲ್ಲಿ ಕಸದ ಗಾಡಿ ಬಂತು. ಎಲ್ಲವನ್ನೂ ಹೇರಿ ಹೊರಟೇ ಹೋಯಿತು. ನಮ್ಮಲ್ಲಿ ಮಧ್ಯಮ ದರ್ಜೆಯ ಶ್ರೀಮಂತರು ಕೂಡಾ ಅಷ್ಟು ಒಳ್ಳೆಯ ಹಾಸಿಗೆಯನ್ನು ಬಿಸಾಕಲು ಒಪ್ಪುವಂತಹುದಲ್ಲ.

ನಾವು ನಿಂತ ಹಾಗೆಯೇ ಬಹಮಾ ವೀಸಾ ಕಛೇರಿಯ ಬಳಿ ನಿಂತ ಒಬ್ಬಾತ ಬಾಗಿಲಿಲ್ಲಿ ನಿಂತಾಕ್ಷಣ ಕಚೇರಿ ಬಾಗಿಲು ತೆರೆಯಿತು. ಆತ ಒಳಗೆ ಹೋದ ಕೂಡಲೇ ಸರಕ್ಕನೆ ಬಾಗಿಲು ಬಿತ್ತು. ನಾವು ಇದೇಕೆ ಹೀಗೆ ಎಂದು ಪರಿಕ್ಷಾತ್ಮಕ ದೃಷ್ಟಿಯಿಂದ ನೋಡುತ್ತಾ ಇದ್ದೆವು. ಒಬ್ಬಾಕೆ ತನ್ನ ಪರ್ಸ್ನ್ನು ಬಾಗಿಲಿ ಚಿಲಕದ ಬಳಿ ಮುಟ್ಟಿಸಿದ್ದು ಗಮನಕ್ಕೆ ಬಂತು. ಬಹುóóಷಃ ಅವರ ಬ್ಯಾಗೊಳಗೆ ಏನೋ ಬಾಗಿಲು ತೆರೆಯುವ ರಹಸ್ಯ ತಂತ್ರ ಇರಬೇಕೆಂದು ಭಾವಿಸಿದೆವು. ಅವಳ ಹಿಂದೆಯೇ ನಾವು ಒಳಹೋಗಲು ಪ್ರಯತ್ನಿಸಿದರೆಇನ್ನೂ ಕಛೇರಿ ತೆರೆಯಲು ವೇಳೆ ಇದೆ. ನಾವು ಬಾಗಿಲು ತೆರೆಯುತ್ತೇವೆಎಂದಳಾಕೆ. ಸ್ವಲ್ಪ ಹೊತ್ತಿನಲ್ಲಿ ಕಛೇರಿ ಬಾಗಿಲು ನಮಗಾಗಿ, ಫಲಾನುಭವಿಗಳಿಗಾಗಿ ತೆರೆಯಿತು.

ಅದೇ ದಿನ ವೀಸಾ ನೀಡಲು ಸಾದ್ಯವೇ ಇಲ್ಲ ಎಂದರು ಕಚೇರಿಯವರು. ಒಂದು ವಾರ ಬೇಕು ಎಂದರು. ಒಂದು ವಾರ ಆಗುವುದಿದ್ದರೆ ನಮಗೆ ವೀಸಾದ ಅವಶ್ಯಕತೆ ಇಲ್ಲ ಎಂದೆವು. ಅಲ್ಲಿ ಸೋಫಾದಲ್ಲಿ ಕುಳಿತೇ ಇದ್ದೆವು. ಸ್ವಲ್ಪ ಹೊತ್ತಲ್ಲಿ ಮತ್ತೆ ಕರೆದ. ನಾಳೆ ಬನ್ನಿ ಎಂದ. ಮರುದಿನ ನಾವು ವೀಸಾ ಪಡೆಯಲು ನಮ್ಮ ಬಂಧು ರೋಹಿತ್ ಬರುವುದಾಗಿ ಹೇಳಿದೆವು. ಆತ ಒಪ್ಪಿದ.
ಈಗ ನಾವು ಆರಾಮವಾಗಿ ನ್ಯೂಯಾಕ್ ಬೀದಿ ರಸ್ತೆ ರಸ್ತೆಗಳಲ್ಲಿ ಸಂಚರಿಸಿದೆವು.
ನಾನು ಪುಟ್ ಪಾತಿನಲ್ಲಿ ಒಂದೆಡೆ ನಿಂತಿದ್ದೆ. ಹೆಗ್ಡೆಯವರು ಏನೋ ವಿಚಾರಿಸಲು ಹೋದರು. ನನ್ನನ್ನುಮೆಡಮ್ ಜೀಅಂದ ಹಾಗಾಯಿತು. ನ್ಯೂಯಾರ್ಕನಲ್ಲಿ ಭಾರತೀಯ ಭಾಷೆಯಲ್ಲಿ ಕರೆಯುವವರು ಯಾರು ಎಂದು ಅತ್ತ ಇತ್ತ ನೋಡಿದೆ. ಅತ್ತ ಕಡೆ ಪುಟ್ ಪಾತಿನ ಪುಟ್ಟ ಅಂಗಡಿಯ ಕೌಂಟರ್ ಕಿಟಿಕಿಯಿಂದನಾನೇ ನಾನೆ ಕರೆದೆಎಂದ ಹಿಂದಿಯಲ್ಲಿ. ಹತ್ತಿರ ಹೋಗಿ ನೋಡಿದೆ. ಅದು ಗಾಡಿಯನ್ನೇ ಪುಟ್ಟ ಹೋಟೇಲ್ ಆಗಿ ಪರಿವರ್ತಿಸಿದ ಹೊಟೇಲ್. ಬೆಂಗಳೂರಿನ ನಮ್ಮ ಪುಟ್ ಪಾತ್ ಹೊಟೇಲಿನಂತೆಯೇ. ಇತ್ತು ಆದೆರೆ ಅಂಗಡಿಯ ರೀತಿಯಲ್ಲಿ ಸಜ್ಜಾಗಿಸಿದ ಗಾಡಿ ಅದು. ಸ್ವಚ್ಛವಾಗಿತ್ತು. ಆತ ನನ್ನ ಸೀರೆ ನೋಡಿ ಮೇಡಮ್ ಜೀ ಎಂದಿದ್ದ. ಭಾರತೀಯರು ಮತ್ತು ಚೀನೀಯರು ಎಲ್ಲಿ ಹೋದರೂ ಪುಟ್ ಪಾತ್ ವ್ಯಾಪಾರ ಬಿಡಲಾರರು ಎಂದು ನನ್ನ ಮಗ ಹೇಳಿದ ಮಾತು ನೆನಪಾಯಿ

No comments:

Post a Comment