Sunday, July 6, 2014

Traditional Bunt Marriage

Traditional Bunt Marriage 


 ಇದು ಬಂಟರ ಸಾಂಪ್ರದಾಯಿಕ ಮದುವೆಯ ಚಿತ್ರ. ಹಿಂದೆಬ್ರಾಹ್ಮ ಪುರೋಹಿತರಿಲ್ಲದೆ ಯೇ ಬಂಟರ ಗುತ್ತಿನಾರರ ಮುಂದಾಳತ್ವದಲ್ಲಿ ಇಂತಹ ಮದುವೆಗಳು ನಡೆಯುತ್ತಿತ್ತು. ಮದುವೆಯ ಮೊದಲು ಮನೆಯಲ್ಲಿ ಮುರ್ತ ನಡೆಯುತ್ತಿತ್ತು.  ಆಗ ಗುತ್ತಿನಾರರ ಮಡದಿ ಅಥವಾ ವಧುವಿನ ಸೋದರತ್ತೆ ಹುಡುಗಿಯ ಕೊರಳಿಗೆ ಕರಿಮಣಿ ಹಾಕಿ ಕಾಲಿಗೆ ಕಾಲುಂಗುರ ಇಟ್ಟು ಕೈಬೆರಳಿಗೆ ಒಡ್ಡಿ ಉಂಗುರ ತೊಡಿಸುತ್ತಿದ್ದಳು.


 ಬಂಟರ ಮದುವೆಗಳಿಗೆ ಪುರೋಹಿತರ ಪ್ರವೇಶ ಇರುತ್ತಿರಲಿಲ್ಲ. ಯಾವುದೇ ವೈದಿಕ ಶಾಸ್ತ್ರಗಳು ಇರುತ್ತಿರಲಿಲ್ಲ ಬ್ರಾಹ್ಮಣರೂ ಶೂದ್ರರ ವಿವಾಹದಲ್ಲಿ ಪೌರೋಹಿತ್ಯ ವಹಿಸುತ್ತಿರಲಿಲ್ಲ. ಆಗ ನಡೆಯುತ್ತಿದ್ದುದು ಬಂಟ ಮದುವೆ. ಬಂಟ ದಾರೆ ಎಂದೂ ಹೇಳುತ್ತಾರೆ.
ವಧು ಹಾಗೂ ವರನ ಬಲಗೈ ಹೆಬ್ಬೆರಳನ್ನು ಹೆಣೆದು ಜೊತೆಯಾಗಿ ಅವರು ಭೂಮಿಯನ್ನು ಮುಟ್ಟಿ ಬೇಕು. ಹೀಗೆ  ಮೂರು ಬಾರಿ ಭೂಮಿ/ಮಣ್ಣು ಮುಟ್ಟಿ  ಈ ವಿವಾಹಕ್ಕೆ ಭೂಮಿಯನ್ನು ಸಾಕ್ಷಿಯನ್ನಾಗಿಸಬೇಕು.


ಮುಂದೆ ಬದಲಾದ ಕಾಲಘಟ್ಟದಲ್ಲಿ ಬ್ರಾಹ್ಮಣ ಪುರೋಹಿತರ ಪ್ರವೇಶ ಆಗುತ್ತದೆ. ಆರಂಭದ ದಿನಗಳಲ್ಲಿ ಪುರೋಹಿತರೂ ಬಂಟರ  ಮದುವೆಗೆ ಭೂಮಿಯನ್ನು ಸಾಕ್ಷಿಯನ್ನಾಗಿಸುತ್ತಿದ್ದರು. ಬಂಟರು ಪೃಥ್ವೀ ಪೂಜಕರು ಕ್ಷೇತ್ರ ರಕ್ಷಕರು ಮತ್ತು ಕ್ಷೇತ್ರ ಕಕ್ಷಕರು. ಹೀಗಾಗಿ ಅವರಿಗೆ ಭೂಮಿಯ ಸಾಕ್ಷಿ ಮುಖ್ಯ. ಅಗ್ನಿ ಸಾಕ್ಷಿ ಅಲ್ಲ. ಬಂಟರು ಕನ್ಯಾ ದಾನ ಮಾಡಬಾರದು. ದಾನ ಮಾಡಿ ಹೆಣ್ಣನ್ನು ಹೊರಗೆ ಕೊಡುವುದಿಲ್ಲ. ಬಂಟರು ದಾನ ಸ್ವೀಕರಿಸುವುದಿಲ್ಲ.  ಈ ಅರ್ಥ ದಲ್ಲಿ ಬಂಟರ ಹೆಣ್ಣಿಗೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ "ಅಲ್ಲ ಈ  ಅರ್ಥ  ದಲ್ಲಿಯೂ ಕನ್ಯಾದಾನ ಇಲ್ಲ.

ಅಪರೂಪಕ್ಕೆ ಈಗಲೂ ಮೇಲಿಂತೆ  ಕೆಲವು ಬ್ರಾಹ್ಮಣ ಪುರೋಹಿತರು ಬಂಟರ ಮದುವೆಯನ್ನು ಭೂಮಿ ಸಾಕ್ಷಿಯನ್ನಾಗಿ ಮಾಡಿಸುತ್ತಾರೆ.

ಹೆಚ್ಚಿನ ವಿವರಗಳಿಗಾಗಿ ಓದಿ (ಡಾ. ಇಂದಿರಾ ಹೆಗ್ಗಡೆ ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ .ಕನ್ನಡ ಪುಸ್ತಕ ಪ್ರಾಧಿಕಾರ ಕನ್ಡಡ ಭವನ  ಜೆ.ಸಿ ರಸ್ಬೆ  ಬೆಂಗಳೂರು ದೂರವಾಣಿ  080 22484516 ಅಥವಾ ಎಸ್ . ಆರ್ . ಹೆಗ್ಡೆ 9845021929

No comments:

Post a Comment