Thursday, June 29, 2017

ಕುವೈಟ್ ಬಂಟಾಯನ 2017

WELCOMING


‘ಎಲ್ಲರೂ ನಮ್ಮವರು’

ಅರಬ್ ರಾಷ್ಟ್ರಕ್ಕೆ ಪ್ರವಾಸ ಹೋಗುವುದು ನನ್ನ ಕನಸಾಗಿರಲಿಲ್ಲ. ಆದರೆ ಹೆಗ್ಡೆಯವರಿಗೆ ಹೋಗಲು ಆಸಕ್ತಿ ಇತ್ತು. ಅರಬ್ ರಾಷ್ಷ್ರಗಳಲ್ಲಿ ಇರುವ ಬಂಟರ ಸಂಘ, ತುಳುಕೂಟಗಳು ತುಳು ಸಂಸ್ಕøತಿಯ ಬಗ್ಗೆ, ಬಂಟ ಸಂಸ್ಕøತಿಯ ಬಗ್ಗೆ ತಮ್ಮ ಸಮಾರಂಭಗಳ ಮುಖ್ಯ ಅತಿಥಿಗಳಾಗಿ ಮಾತನಾಡಲು ಕೆಲವರನ್ನು ಕರೆದುದು ಅವರ ಗಮನಕ್ಕೆ ಬಂದಾಗ “ ಎಂತ ಮಾರಾಯ್ತಿ? ತುಳು ಸಂಸ್ಕøತಿ ಬಗ್ಗೆ, ಬಂಟರ ಸಮಗ್ರ ಜೀವನದ ಬಗ್ಗೆ ಅಧ್ಯಯನ ಮಾಡಿ ಕೃತಿ ಬರೆದು ವಿದ್ವಾಂಸರಲ್ಲಿ ಗುರುತಿಸಿಕೊಂಡ ಇವರ ಗಮನಕ್ಕೆ ನೀನು ಬರುವಿದಿಲ್ಲ ಯಾಕೆ?” ಎನ್ನುತ್ತಿದ್ದರು. “ಅದಕ್ಕೆ ಎರದು ಕಾರಣಗಳಿವೆ. 1 ನನ್ನ ಕೃತಿಗಳನ್ನು ಅವರು ಓದಿರುವುದಿಲ್ಲ. 2 ನಾನು ಮಹಿಳೆ. ಮಾತೃ ಪ್ರಧಾನ ಸಂಸ್ಕøತಿಯಲ್ಲಿ ಮಹಿಳೆಗೆ ಹಿಂದಿನ ಆಸನ.” ಇದು ನಾನು ಹೆಗ್ಡೆಯವರಿಗೆ ಅಂದು ನೀಡಿದ್ದ ಉತ್ತರ.
ನನ್ನ ಈ ನಂಬಿಕೆಯನ್ನು ಬುಡಮೆಲು ಮಾಡಿದ್ದು ಕುವೈಟ್ ಬಂಟರ ಸಂಘ.
ತುಳುನಾಡಿನಲ್ಲಿ ಬೆಂಗಳೂರಲ್ಲಿ ನಾನೆಷ್ಟೋ ಬಂಟರ ಸಂಘಗಳಲ್ಲಿ, ತುಳು ಸಂಘ ಸಂಸ್ಥೆಗಳ ಸಮಾರಂಭಗಳಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನ ಭಾಷಣಕಾರಳಾಗಿ ಭಾಗವಹಿಸಿದ್ದೆ. ನಮ್ಮ ಬಂಟ ಸಮುದಾಯದ ಘನತೆವೆತ್ತ ಹೆಮ್ಮೆಯ ವಿದ್ವಾಂಸರೊಬ್ಬರು ಹೇಳಿದ್ದರು, ”ನಮ್ಮವರು ಬರಹಗಾರರನ್ನು ಭಾಷಣಕ್ಕೆ ಕರೆಯುತ್ತಾರೆ. ಭಾಷಣ ಮುಗಿಸಿ ವೇದಿಕೆ ಇಳಿಯುವಾಗ ಯಾರೂ ಇರುವುದಿಲ್ಲ. ನಮ್ಮನ್ನು ಕರೆದ ಸಂಘಟಕರು ಅದೇ ವೇದಿಕೆಯಲ್ಲಿ ಇರುವ, ಅಥವಾ ಅಲ್ಲಿ ಹಾಜರಾಗಿರುವ ಸಿರಿವಂತರ ಹಿಂಬಾಲಕರಾಗಿ ಹೋಗುತ್ತಾರೆ. ನಾವು ಅನಾಥರಂತಾಗುತ್ತೇವೆ.” ಇದು ನಿಜ ಕೂಡಾ. ಆದರೆ ದೂರದ ಕುವೈಟ್‍ನಲ್ಲಿ ಹೀಗಾಗಲಿಲ್ಲ ಎನ್ನುವುದು ಅತಿಥಿಯಾಗಿ ಹೋದ ನನ್ನ ಹೆಮ್ಮೆ.
ಮೊದಲ ಬಾರಿಗೆ ವಿದೇಶಕ್ಕೆ ಒಂಟಿಯಾಗಿ ಪ್ರಯಾಣ ಎಂದಾಗ ನಾನು ತುಸು ಅಳುಕಿದೆ. ನನಗೆ ಕೆಲಸದ ಒತ್ತಡವೂ ಇತ್ತು. ಎಸ್ ಆರ್. ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಉದ್ಘಾಟಣೆಗೆ, ಎಸ್ ಆರ್. ಹೆಗ್ಡೆ ‘ನುಡಿ ಚಿತ್ರ’ ಬಿಡುಗಡೆಗೆ ನಾನು ಊರಲ್ಲಿ ಇರುವ ಅಗತ್ಯ ಇತ್ತು.  ಆದರ ಚಾರಿಟೇಬಲ್ ಟ್ರಸ್ಟ್‍ನ ಕೃಷ್ಣಮೂರ್ತಿ ಮತ್ತು ಜ್ಯೋತಿ ಚೇಳಾೈರು ಟಸ್ಟನ ಕೆಲಸವನ್ನು ತಾವು ನೋಡಿಕೊಳ್ಳುವುದಾಗಿ ಹೇಳಿದರು.  ನಾನು ಆಹ್ವಾನವನ್ನು ಒಪ್ಪಿಕೊಳ್ಳಲೇ ಬೇಕು ಎಂದು ನನ್ನ ಮಕ್ಕಳು ಒತ್ತಡ ಹಾಕಿದರು. ಹೀಗೆ ನಾನು ಕುವೈಟ್ ವಿಮಾನ ಏರ ಬೇಕಾಯಿತು. ಬೇಂಗಳೂರು ವಿಮಾನ ನಿಲ್ದಾಣದಲ್ಲಿ ಮಿಮಿಕ್ರಿ ಕಲಾವಿದ ಅಶೋಕ ಪೊಳಲಿ ಮತ್ತು ಗಾಯಕ ವಿಶ್ವಾಸ ಗುರುಪುರ ಜೊತೆಯಾದರು.

ನಾವು ವಿಮಾನದಿಂದ ಇಳಿದು ನಿಲ್ದಾಣದಿಂದ ಹೊರಬರುತ್ತಿದ್ದಂತೆ ನಮ್ಮನ್ನು ಎದುರ್ಗೊಂಡವರು ಕುವೈಟ್ ಬಂಟರ ಸಂಘದ ಅಧ್ಯಕ್ಷ ಯದುನಾಥ ಆಳ್ವ ಮತ್ತು ಅವರ ತಂಡ. ಅಲ್ಲಿಂದ ನೇರವಾಗಿ ನಮ್ಮನ್ನು ಕುವೈಟ್‍ನ ಭವ್ಯ ಹೊಟೇಲ್ ‘ORINTIEL RESTAURANT"  ಗೆ ನಮ್ಮನ್ನು ಕರೆದೊಯ್ದು ‘ಸ್ವಲ್ಪ ಸುಧಾರಿಸಿ’ ಎಂದು ಅವರು ಮರಳಿದರು. ಕೋಣೆಯ ಒಳಗೆ ಹೋದಾಗ ಚಳಿಗಾಲದಲ್ಲಿ ಕಾಶ್ಮೀರದ ದಾಲ್ ಸರೋವರದ ಒಳಗೆ ಬೋಟ್ ಮನೆಗೆ ಹೊಕ್ಕಂತಾಯತು. ಕುವೈಟ್‍ನ ಮರುಭೂಮಿಯ ಶಾಖ ಹೊರಗೆ. ಹಾಗಾಗಿಯೇ ಒಳಗೆ ವಿಪರೀತ ಚಳಿ! ಸುದಾರಿಸಿಕೊಳ್ಳೋಣ ಎಂದಾಗ ಮಸಾಲೆ ದೋಸ ಮತ್ತು ವಡಾ ಬಂತು. ಬೆಂಗಳೂರು ಮಂಗಳೂರಲ್ಲೂ ಅನೇಕ ಕಡೆ ಅಷ್ಟು ಒಳ್ಳೆಯ ಮಸಾಲೆ ದೋಸೆ ಸಿಗುವುದಿಲ್ಲ. ದೋಸೆ ತಿಂದು ರಜಾಯಿ ಹೊದ್ದು ಮಲಗಿದ್ದೆ. ಎಂದೂ ಬಾರದ ನಿದ್ದೆ ಬಂದಿತ್ತು. “ಊಟಕ್ಕೆ ಕರೆದೊಯ್ಯಲು ಬರುತ್ತೇವೆ ಸಿದ್ಧರಾಗಿ” ಎಂದ ಯದುನಾಥ ಆಳ್ವ ಅವರ ಕರೆ ಎಬ್ಬಿಸಿತು.


ನಿರೂಪಕನಾಗಿ ಭಾರತದಿಂದ ಬಂದ ಸಾಹಿಲ್ ರೈ (ಈತ ಸಿನಿಮಾ ನಟ ಕೂಡಾ) ಅಶೋಕ ಪೊಳಲಿ, ವಿಶ್ವಾಸ್ ಗುರುಪುರ ನಾನು ಮತ್ತು ಯದುನಾಥ್ ಅವರ ಪತ್ನಿ ಶಾಲಿನಿ ಎಲ್ಲರೂ ಶಿರ್ವದ N. SATISHCHANDRA SHETTY ಶೆಟ್ಟಿ ಅವರ ಒರಿಯಂಟಲ್ ರೆಸ್ಟೋರೆಂಟ್ಗೆ ಮಧಾಹ್ನದ ಊಟಕ್ಕೆ ಹೋಗಿ ಸೊಗಸಾದ ಭಾರತೀಯ ಶೈಲಿಯ ಊಟ ಸವಿದೆವು.
ಮತ್ತೆ ಸ್ವಲ್ಪ ವಿರಾಮದ ಬಳಿಕ ಯದುನಾಥ್ ದಂಪತಿಗಳು ಅವರ ಕುಟುಂಬ ಮಿತ್ರರಾದ ಪ್ರಕಾಶ್ ಭಟ್ ಮತ್ತು ನೇಹಾ ಪ್ರಕಾಶ್ ಭಟ್ ಜೊತೆಗೆ ಬಂದರು. ನಾವು ಒಟ್ಟಾಗಿ ಹೋದುದು ಕುವೈಟ್ ಟವರ್ ಸಂದರ್ಶಿಸಲು. ಇರಾಕ್‍ನ ದೊರೆ ಸದ್ದಾಂ ಹುಸೇನ್ ಅವರ ಕೋಪಕ್ಕೆ ಪುಡಿಪುಡಿಯಾದ ನಗರದ ಕೆಲವು ನೆನಪುಗಳಲ್ಲಿ ಕುವೈಟ್ ಟವರ್ ಕೂಡಾ ಒಂದು. ಅರ್ದ ಒಡೆದು ಹೋಗಿದ್ದ ಕುವೈಟ್ ಟವರನ್ನು ಮತ್ತೆ ಮರು ನಿರ್ಮಿಸಿದರಂತೆ.



ಪರ್ಷಿಯನ್ ಕಡಲಿನ ಮಧ್ಯ ಎದ್ದು ಬಂದ ಈ ಕುದುರು, ದ್ವೀಪವಾಗಿ ಬೆಳೆದರೂ ಇಲ್ಲಿ ಗಾಳಿಯಲ್ಲೂ ಈಗಲೂ ಮರುಭೂಮಿಯೇ.  ಮರಳು ಗಾಳಿಯಲ್ಲಿ ಕಣಗಳಾಗಿ ಬೆರೆತಿವೆ. ಇರಾಕ್ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ಉಸಿರಾಟದೊಂದಿಗೆ ಮರಳು ಮಿಶ್ರಿತ ಹೊಗೆಯೂ ಸೇರುತ್ತಿತ್ತಂತೆ. ತೈಲ ಸುಟ್ಟು ಹೊಗೆ ಆಕಾಶಕ್ಕೇರಿ ಅಲ್ಲಿ ಸ್ಟಾಕ್ ಆಗಿದೆಯಂತೆ. ಯಾವಾಗಲೊಮ್ಮೆ ಮಳೆಯ ಮೋಡ ಕೆಳಗಿಳಿಯುವಂತೆ ಕರಿಯ ಹೊಗೆ ಕೆಳಗಿಳಿದು ಗಾಳಿಯೊಂದಿಗೆ ಬೆರೆಯುತ್ತದೆಯಂತೆ. ಕರಿಸಿಂಬಳ ಮೂಗಿನಿಂದ ಇಳಿಯುವ ಪರಿ ಹೇಗಿರಬಹುದು? ನಾವು ಹೋದ ದಿನಗಳಲ್ಲೂ ಮಂಜುಕವಿದಂತೆ ಆಕಾಶ ಇತ್ತು. ‘ಅದು ಮಂಜು ಕವಿದುದು ಅಲ್ಲ ಮರಳು ಮೋಡವಾಗಿ ಇಳಿಯುತ್ತಿರುವುದು ಭೂಮಿಗೆ’ ಎಂದಾಗ ನಮಗೂ ಅಚ್ಚರಿ.  





ಅದಿರಲಿ ಪರ್ಷಿಯನ್ ಕಡಲಿಗೆದುರಾಗಿ ಇರುವ ಈ ಟವರ್ ಒಂದು ಅದ್ಭುತ ಆಕರ್ಷಣೆ! ಈ ಸಮುಚ್ಛಯದಲ್ಲಿ ಮೂರು ಟವರ್‍ಗಳಿವೆ. ಮುಖ್ಯ ಟವರ್‍ನ ಎತ್ತರ 614 ಅಡಿ. ಇದು ಎರಡು ಗೋಲ/ಗುಮ್ಮಟಗಳನ್ನು ಹೊಂದಿದೆ. ಸಮುದ್ರದ ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸಿ ಇದರ ಒಂದು ಟವರ್ ನಲ್ಲಿ ಸಂಗ್ರಹಿಸಲಾಗಿದೆಯಂತೆ. ನಾನು ನೋಡಿಲ್ಲ. ಅದೇ ಗೋಲದಲ್ಲಿ ಮೇಲಿನ ಬಾಗದಲ್ಲಿ ಉಪಹಾರ ಗೃಹ ಇದೆ. 90 ಜನರು ಇಲ್ಲಿ ಉಪಹಾರ ಮಾಡಬಹುದು. ಸ್ವಾಗತಕಾರ ಚಾವಡಿ ಲಾಂಜ್ ಎಲ್ಲಾ ಇದೆ.
ಲಿಪ್ಟ್ ಮೂಲಕ ನಾವು ಮೇಲೆ ಹೋದೆವು. ಆದರೆ ಉಪಹಾರ ಗೃಹಕ್ಕೆ ಅಲ್ಲ. ನಾವು ಪ್ರವಾಸಿಗರಿಗಾಗಿ ವ್ಯವಸ್ಥೆ ಮಾಡಿದ ಭಾಗದಲ್ಲಿ ನಿಂತೆವು. ನಾವು ನಿಂತೇ ಇದ್ದೆವು ಕಡಲು ನಮಗೆ ಸುತ್ತುತ್ತಾ ಇತ್ತು. ಇದೇನಿದು ಎಂದು ನೋಡುವಾಗ  ಟವರ್ ಸುತ್ತುತ್ತಾ ಇದೆಯೆಂದರು. ಈ ಗೋಲ ಒಂದು ಸುತ್ತು ಹಾಕಲು 30 ನಿಮಿಷ ತೆಗೆದುಕೊಳ್ಳುತ್ತದೆಯಂತೆ.


ತೆರೆಗಳಿಲ್ಲದೆ ಕಡಲು, ಕಡಲ ಮಡಿಲಲ್ಲಿ ಆಡುವ ಮಕ್ಕಳು, ಕೋಳಿ ಮರಿಗಳಂತೆ ಕಾಣುವ ನಿಲುಗಡೆಯಲ್ಲಿರು ವಾಹನಗಳು, ಕಟ್ಟಡಗಳು ಇತ್ಯಾದಿ ಇತ್ಯಾದಿ................
ಆ ದಿನ ನಾನು ಬಂಟಾಯನದ ಸಾಂಸ್ಕøತಿಕ ಕಾರ್ಯಕ್ರಮದ ರಿಹರ್ಸಲ್ ನೋಡಲು ಅವರೊಂದಿಗೆ ಹೊರಟೆ. ಅಂದೇ ಅಲ್ಲಿದ್ದ ಸಡಗರ ಸಂಭ್ರಮ ಕಂಡು ಬೆರಗುಗೊಂಡೆ. ಸಾಹಿಲ್ ರೈ ಕೂಡಾ ಅಲ್ಲಿಗೆ ಬಂದಿದ್ದ. ನಿರೂಪಕನಾಗಿ ಕೆಲವು ಪೂವಧ ಸಿದ್ಧತೆಗಳಿಗಾಗಿ.
ಚಿಕ್ಕ ಪಟ್ಟ ಬಾಲೆ ಬಾಳೆಯರ ನೃತ್ಯ ಮತ್ತೆ ಮತ್ತೆ ಅಭ್ಯಾಸಮಾಡಲಾಯಿತು. “ಕಮರೊಟ್ಟು ಗ್ರಾಮೊಡು.......ಗುತ್ತುಡು ಗುಡ್ಡೆದ ಭೂತ ಉಂಡುಯೇ……” ಈ ಹಾಡಿಗೆ ನೃತ್ಯ ಮತ್ತೆ ಮತ್ತೆ ಅಭ್ಯಾಸಮಾಡಿಸಲಾಯಿತು. ಒಬ್ಬಾಕೆ ಮುದ್ದಾದ ಬಾಲೆಯನ್ನು ಬಳಿಗೆ ಕರೆದು ಪ್ರೀತಿಯಿಂದ ಕೇಳಿದೆ. “ ಬೂತ ಪಂಡ ಎಂಚಿನೆಂದ್ ಗೊತ್ತುಂಡ ಮಗಾ?” (ಭೂತ ಎಂದರೆ ಏನೆಂದು ತಿಳಿದಿಯೇ ಮಗಾ?” )
‘ಹಾಂ (ಅಹುದು)’ ಆಕೆಯ ಉತ್ತರ. ನನಗೂ ಖುಷಿಯಾಯಿತು. ಮಗುವಿಗೆ ಭೂತಾರಾಧನೆಯ ಬಗ್ಗೆ ಭೂತದ ಬಗ್ಗೆ ತಿಳಿದಿದೆ ಎಂದು. ಎಷ್ಟೆಂದರೂ ಬೂತಾರಾಧಕ ಮನೆತನದವಳಲ್ಲವೆ?
“ ದಾದೆ ಪನ್ಲೆ ತೂಕ” (ಏನು ಹೇಳಿ ನೋಡೋಣ)
ನಾನು ಮಾತು ಮುಗಿಯುವಷ್ಟರಲ್ಲಿ ನನ್ನ ಕೆನ್ನಗೆ ಅಪ್ಪಳಿಸಿ ಬಂತು ‘ಘೋಸ್ಟ್!’ ನನ್ನ ಬಳಿ ಇದ್ದ ಸಾಹಿಲ್ ಜೋರಾಗಿ ನಕ್ಕ. ನಾನು ಪೆಚ್ಚಾಗಿದ್ದೆ.







“ನಾಳೆಯ ಭಾಷಣಕ್ಕೆ ಈ ಟಾಪಿಕ್ ತೆಗೆಯುವಿರಾ?”
“ಹೇಗೆ ತೆಗೆಯಲಿ ಸಾಹಿಲ್. ಅವಳ ಹೆತ್ತವರು ಇರಲಿ, ನಮ್ಮೂರಲ್ಲಿಯ ಎಷ್ಟು ಜನರಿಗೆ ಭೂತಾರಾಧನೆಯ ಬಗ್ಗೆ ತಿಳಿದಿದೆ. ನಮ್ಮ ಹಿರಿಯರು ನಂಬಿಕೊಂಡು ಬಂದ ದೈವ ನಮಗೆ ಕೇಡು ಬಗೆಯದು ಎಂಬ ವಿಶ್ವಾಸವೇ ಇಲ್ಲದ ಜನರನ್ನು ನಾನು ಭೂತಾರಾಧನೆಯ ಅಂಗಳದಲ್ಲಿ ಮನೆಯಲ್ಲಿ ನೋಡುತ್ತಿದ್ದೇನೆ. ಈ ಮಗುವಿಗೆ ಆಕೆ ಹೇಳುವ ‘ಘೋಸ್ಟ್’ ಅನ್ನು ಉಪಾಸನೆ ಮಾಡುವುದೂ ಗೊತ್ತಿರಲಾರದು” ಎಂದೆ.
ಅಂದು ಅಥಿತಿಯಲ್ಲದೆಯೂ ಅತಿಥಿಯ ಎಲ್ಲಾ ಗೌರವಗಳನ್ನು ಪಡೆದು ಆಸೀನಳಾಗಿದ್ದೆ.
ಮರುದಿನ ನಡೆದ ‘ಬಂಟಾಯ£’À ಕಾರ್ಯಕ್ರಮವಂತು ಬಹಳ ದೊಡ್ಡ ಹಬ್ಬ. ಅವರ ಸಂಭ್ರಮದ ಜೊತೆ ಪಾಲುದಾರರಾಗದೆ ಇರಲು ಸಾಧ್ಯವೇ ಇಲ್ಲ. ಅಂತಹ ಸೆಳೆತ ಅವರ ಕಾರ್ಯಕ್ರಮಕ್ಕೆ ಅದರ ಸಂಭ್ರಮಕ್ಕೆ ಇತ್ತು.
ಸಾಂಸ್ಕøತಿಕ ಕಾರ್ಯಕ್ರಮದ ನಡುವೆ ಸಭಾ ಕಾರ್ಯಕ್ರಮ ಇಟ್ಟಿದ್ದರು. ಕುವೈಟ್ ರಾಯಭಾರಿ ಸುನಿಲ್ ಜೈನ್ ಅತಿಥಿಯಾಗಿ ಬಂದುದು ಕಾರ್ಯಕ್ರಮದ ಆಯೋಜಕರಿಗೆ ಬಲ ತಂದಿತ್ತು. ನಾನು ಮೊತ್ತ ಮೊದಲ ಬಾರಿಗೆ ಭಾರತದ ರಾಯಭಾರಿಯೊಂದಿಗೆ ಪರಿಚಯಮಾಡಿಕೊಂಡು ಹರಟುವ ಅವಕಾಶ ತೊರೆತುದು ನನಗೂ ಅಭಿಮಾನ ತಂದಿತ್ತು.
ಅಂದಿನ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಕೊನೆಗೆ ಯಕ್ಷಗಾನ ಇತ್ತು. ಉಡುಪಿಯ ತಂಡ ಬಂದು ಉತ್ತಮ ಪ್ರದರ್ಶನ  ನೀಡಿ ಕೆಲವರಿಗೆ ಬಾಲ್ಯದ ನೆನಪುಗಳ ಬುತ್ತಿಯನ್ನು ಬಿಚ್ಚಿಸಿದರು. ( ಮನೆಯವರಿಗೆ ಹೇಳದೆ ಗುಟ್ಟಾಗಿ ಆಟ ನೋಡಲು ಹೋದುದ ಇತ್ಯಾದಿ) ನವಿಶ್ವಾಸ್ ಗುರುಪುರ, ಅಶೋಕ್ ಪೊಳಲಿ ಉತ್ತಮ ಪ್ರದರ್ಶನ ನೀಡಿದರು. ಮುಂಬಯಿಯಿಂದ ತನ್ನ ಪತ್ನಿ ಅನು ಪಾವಂಜೆಯ ಜೊತೆ ಬಂದ ‘ಚಿತ್ರ ಮಿತ್ರ’ ಖ್ಯಾತಿಯ ಕಲಾವಿದ ತನ್ನ ಅದ್ಭುತ ಪ್ರತಿಭೆಯಿಂದ ನೆರೆದವರನ್ನು ಬೆರಗು ಗೊಳಿಸಿದ. ಆತನ ಮಡದಿ ಅನು ಪಾವಂಜೆ ಕೂಡಾ ಕಲಾವಿದ ಕುಟುಂಬ ದಿಂದ ಬಂದ ಕಲಾವಿದೆ. ಜೊತೆಗೆ ಬರಹಗಾರ್ತಿ ಕೂಡಾ. ಎರಡು ಉತ್ತಮ ಕೃತಿಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ನೀಡಿದ್ದಾಳೆ. ಒಂದು ಪ್ರವಾಸ ಕಥನ ಮತ್ತೊಂದು ಕವನ ಸಂಕಲನ.
ಒಟ್ಟು ಕಾರ್ಯಕ್ರಮವನ್ನು ಮತ್ತಷ್ಟು ಹುರುಪು ಗೊಳಿಸಿದ್ದು ಯುವ ಅಭಿನೇತ ಸಾಹಿಲ್ ರೈಯ ಚೇತೋಹಾರಿ ನಿರೂಪಣೆ.

ಕುವೈಟ್ ಬಂಟರ ಸಂಘ ಅತಿಥಿಗಳಾಗಿ ಅಹ್ವಾನಿಸಿದ ಎಲ್ಲರನ್ನೂ ಗೌರವಪೂರ್ವಕ ಸನ್ಮಾನಿಸಿದ್ದು ಒಂದು ಅಪೂರ್ವ ಸಂಭ್ರಮ. ಯಕ್ಷಗಾನ ಕಲಾವಿದರು, ಮಿಮಿಕ್ರಿ ಕಲಾವಿದ, ಗಾಯಕ, ಚಿತ್ರ ಮಿತ್ರ ಮಾತ್ರವಲ್ಲ ನನ್ನನ್ನೂ ಸೇರಿಸಿ ಎಲ್ಲರನ್ನೂ ಕುವೈಟ್ ರಾಯಭಾರಿಯ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಿದ್ದು ಮರೆಯಲಾಗದ ನೆನಪು.
ಭಾರತದಿಂದ ಕಾರ್ಯಕ್ರಮಕ್ಕೆ ಹೋದವರು ಚೆನ್ನಾಗಿ ಕಾರ್ಯಕ್ರಮ ನೀಡುತ್ತಾರೆ ನಿಜ. ಉತ್ತಮ ಕಲಾವಿದÀರು ಎಂದು ಗುರುತಿಸಿಕೊಂಡವರನ್ನು ಮಾತ್ರ ಇಂತಹ ಕಾರ್ಯಕ್ರಮಗಳಿಗೆ ವಿದೇಶದಲ್ಲಿ ಇರುವ ಭಾರತೀಯರು ಆಹ್ವಾನಿಸುತ್ತಾರೆ. ಆದರೆ ಬಂಟಾಯನದ ಸಂದರ್ಭದಲ್ಲಿ ಅವರದೇ ಸದಸ್ಯರು ನೀಡಿದ ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡಾ ಅಲ್ಲಿಗೆ ಬಂದ ಅತಿಥೇಯ ತಂಡಗಳಿಗೆ, ವ್ಯಕ್ತಿಗಳಿಗೆ “ನಾವು ನಿಮಗಿಂತ ಕಮ್ಮಿ ಇಲ್ಲ” ಎಂದು ಸವಾಲೊಡ್ಡಿದಂತಿತ್ತು. ಪುಟ್ಟ ಮಕ್ಕಳಿಂದ ತೊಡಗಿ ತರುಣಿಯರೂ ಸೇರಿ ಉತ್ತಮ ಕಾರ್ಯಕ್ರಮ ನೀಡಿದರು.
ಮರುದಿನ ನಡೆದ GETTOGETHER ಕೂಟ ಆಪ್ತ ಸಮಾಲೋಚನ ಶಿಬಿರದಂತಿತ್ತು. ಬಹಳ, ಬಹಳ ಆತ್ಮೀಯವಾಗಿ ನಡೆದ ಈ ಕೂಟದಲ್ಲಿ ಆತ್ಮೀಯ ನುಡಿಗಳು ನನ್ನ ಮತ್ತು ಚಿತ್ರ ಮಿತ್ರ ಪ್ರಕಾಶ್‍ನ ಮನದಾಳದ ನೋವನ್ನು ಸವರಿತು. ಒಂದು ಕ್ಷಣ ನೆರೆದಜನರೂ ಭಾವುಕರಾದರು. ‘ಎಲ್ಲರೂ ನಮ್ಮವರು’ ಎಂಬ ಆತ್ಮೀಯ ಭಾವದೊಂದಿಗೆ ಕುವೈಟ್ ಬಂಟರ ಸಂಘದ 2017ರ ಬಂಟಾಯನಕ್ಕೆ ತೆರೆ ಬಿತ್ತು. ಈ ಸಂದರ್ಭದಲ್ಲಿ ಕುವೈಟ್ ಬಂಟರ ಸಂಘದ ಸದಸ್ಯರು ಮತ್ತು ಸದಸ್ಯರಲ್ಲದ ಇತರರು, ನಮ್ಮನ್ನು ಆತ್ಮೀಯವಾಗಿ ಆದರಿಸಿದರು.

 ಮರುದಿನ ಶಾಲಿನಿ ತನ್ನ ಪುಟ್ಟ ಮಗ ನೈತಿಕ ಮಗನೊಂದಿಗೆ ನನ್ನನ್ನೂ ಕುವೈಟ್ ಮರುಭೂಮಿಮತ್ತು ಕಡಲ ಲೋಕದ ಅದ್ಭುತ ಲೋಕಕ್ಕೆ ಕರೆದೊಯ್ದರು. ನೈತಿಕ್ “ದೊಡ್ಡಾ ದೊಡ್ಡಾ “ ಎನ್ನುತ್ತಾ ಮತ್ಸ್ಯ ಪ್ರಪಂಚದ ಬಗ್ಗೆ, ಮರುಭೂಮಿಯ ಪ್ರಾಣಿ ಪ್ರಪಂಚದ ಪ್ರಶ್ನೆಗಳನ್ನು ಕೇಳುತ್ತಾ ನಡೆದಾಗ ನನಗೂ “ಎಲ್ಲರೂ ನನ್ನವರು” ಎನ್ನುವ ಭಾವ. ಊರಿಗೆ ಬಂದ ಮೇಲೂ ಕೆಲವೇ ಗಂಟೆಗಳ ಕಾಲ ನನ್ನೊಂದಿಗೆ “ದೊಡ್ಡಾ “ ಎಂದು ನಡೆದು ಬಂದ ನೆನಪು ಊರಿಗೆ ಬಂದ ಮೇಲೂ ಕೆಲವು ದಿನ ಕಾಡಿತು!



ಕೊನೆಗೆ ನಾನು ಅಂದು ತುಳು ಭಾಷೆಯಲ್ಲ ಮಾಡಿದ ಭಾಷಣವನ್ನು ಮೆಚ್ಚಿ   ಯು ಟ್ಯೂಬ್ ಗೆ ಹಾಕಿ ಅದರ ಕೊಂಡಿಯನ್ನು ನನಗೆ ಕಳಿಸಿಕೊಟ್ಟರು.




No comments:

Post a Comment