Tuesday, June 14, 2016

ಕೊನೆಯ ಕೊಡುಗೆ

June 15-1969 



ನೀನಿತ್ತ ಕೊನೆಯ ಕೊಡುಗೆ
ಆಜೀವ ಕೊರಗು
ನೀನಿಲ್ಲದೆ ಬದುಕಬೇಕಾದ ಕೊರಗು

ನೀನು ಜೊತೆಯಾದಂದಿನಿಂದಲೂ
ಹಾಲನ್ನೇ ಕುಡಿಸಿದೆ
ಕೊನೆಯದಿನ ಕುಡಿಸಿದ್ದು ಹಾಲಾಹಲ


ಕನ್ನಡಿ ಹಾವು ಕಚ್ಚಿದಂತೆ
ಸಾವು ತಾರದ ಹಾಲಾಹಲ ಬದುಕಲೂ ಬಿಡದು
ಇರಬೇಕು ದೇಹ ಕರಗಬೇಕು ನೋವಿನಲ್ಲಿ



No comments:

Post a Comment