Sunday, April 6, 2014

ನೆಲಮೂಲದ ಉಪಾಸನೆ ನಾಗರಾಧನೆಯಲ್ಲಿ ಅಬ್ರಾಹ್ಮಣರು

Billas as naga patri/ನಾಗ ಪಾತ್ರಿಗಳಾಗಿ ಬಿಲ್ಲವರು

ತುಳುನಾಡು ನೆಲಮೂಲದ ಉಪಾಸನಾ ಆಚರಣೆಗಳನ್ನು ಉಳಿಸಿಕೊಂಡ ಕನ್ಯೆ ನೆಲ. ಜಾತೀಯ ಶ್ರೇಣೀಕೃತ ವ್ಯವಸ್ಥೆಯಡಿ  ದೈವಗಳ ಶ್ರೇಣೀಕತ  ಪರಂಪರೆ ಇದೆ. ಎಲ್ಲಾ ಜಾತೀಯ ಜನರಲ್ಲಿ ಆಯ್ದ ವ್ಯಕ್ತಿಗಳು ಆಯಾ ಶ್ರೇಣೀಕೃತ ಹಂತದಲ್ಲಿ ಸಂಬಂಧಪಟ್ಟ ದೈವಗಳಿಗೆ ಅರ್ಚನೆ, ಉಪಾಸನೆ, ಪೂನೀರ್ -ಮುಂತಾದ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅವರಲ್ಲಿ ಮುಖ್ಯವಾಗಿ ಬಿಲ್ಲವರು ಅನೇಕ ಕಡೆ ಅರ್ಚಕರಾಗಿ "ಪೂಜಾರಿ" ಎಂಬ ಜಾತಿನಾಮವನ್ನು ಪಡೆದರು. ಸಾಮಾನ್ಯವಾಗಿ ನಾಗನಿಗೆ ತನು ತಂಬಿಲ, ನಾಗ ಪ್ರತಿಷ್ಟಾಪನೆ, ನಾಗ ದರ್ಶನ ಮಾಡುವವರು ಬ್ರಾಹ್ಮಣರು. ನೆಲಮೂಲದ ಅಬ್ರಾಹ್ಮಣ ಮೂಲದವರು ನಾಗಪಾತ್ರಿಯಾಗಿ ನಾಗಶಿಲ್ಪ ಪ್ರತಿಷ್ಟಾಪರಾಗಿ ಇಡಿಯ ತುಳುನಾಡಿನಲ್ಲಿ ಇಲ್ಲ ಎಂದು ನಾವೆಲ್ಲ ಭಾವಿಸಿದ್ದರೆ ಅದು ತಪ್ಪಲ್ಲ. ಆದರೆ  ದೈವಗಳ ಪೂಜೆ, ಅರ್ಚನೆ ಮಾಡಿ ಪೂಜಾರಿ ಅನಿಸಿಕೊಂಡ ಪೂಜಾರಿಗಳೂ (ಪೂಜಾ  ಪದವೇ ದ್ರಾವಿಡ ಮೂಲದ್ದು) ಈಗಲೂ ನಾಗನ ದರ್ಶನ ಪಾತ್ರಿಗಳಾಗಿ , ಶಿಲ್ಪ ಪ್ರತಿಷ್ಟಾಪಕರಾಗಿ ಮುಂದುವರಿದಿದ್ದಾರೆ.

ನಾಗ ಶಿಲ್ಪಗಳ ಕ್ಷೇತ್ರ ಪರಿಧಿಯಲ್ಲಿ ಬಿಲ್ಲವ ನಾಗ ಪಾತ್ರಿ  ಸರ್ಪದ ರೀತಿಯಲ್ಲಿ ತೆವಲುತ್ತಾ ಬುಸುಗುಡುತ್ತಾ ಮುಡಿಂಜ(ಸ್ತೂಪ)ವನ್ನು ಮೂಸಿ ಭೂಮಿಯೊಳಗಿನ ಕಂಪನ್ನು ಆಘ್ರಾಣಿಸುವ ದೃಶ್ಯ (ವಿವರಗಳಿಗೆ ನೋಡಿ ಡಾ. ಇಂದಿರಾ ಹೆಗ್ಗಡೆ ತುಳುವರ ಮೂಲತಾನ ಆಲಡೆ) ರೋಚಕ! ಭಕ್ತರು ಭಾವಪರವಶರಾಗುತ್ತಾರೆ. ವೈದಿಕ ನಾಗಮಾಂಡಲಗಳ ನಾಟಕೀಯತೆ ಇಲ್ಲಿ ಇಲ್ಲ. ಭಕ್ತಿಯೇ ಪ್ರಧಾನ. ಇಲ್ಲಿ ಫಲವಂತಿಕೆಗೆ ಪ್ರಾರ್ಥನೆ ಪ್ರಧಾನವಾದುದು.

8-4-2014
ಉಚ್ಚಿಲದ ಬಳಿ ಮೇರರ ನಾಗಮೂಲಸ್ಥಾನ ಇದೆ.  ಅಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲಾ ಮೇಲ್ವರ್ಗದವರು ಹಾಲೆಯರು ಬರುತ್ತಾರೆ. ಅಲ್ಲಿ ಪ್ರಸಾದ ನೆಲದ ಮಣ್ಣು. ಹೀಗಾಗಿ ಯಾರಿಗೂ ಮೈಲಿಗೆ  ಆಗುವ ಸ್ಥಿತಿ ಬಾರದು. ಇಲ್ಲಿ ನಾಗ ಶಿಲ್ಪಗಳ ಕುಂಭಗಳನ್ನು ಹರಕೆಯ ರೂಪದಲ್ಲಿ ಪ್ರತಿಷ್ಟಾಪಿಸುತ್ತಾರೆ. ಕಾಡಿನ ನಡುವೆ ಒಂದು ಮರದಡಿ ಅನಾದಿ ಕಾಲದಿಂದಲೂ ಉಪಾಸನೆ ಗೊಳ್ಳುತ್ತಿದ್ದ ಅನೇಕ ಕುಂಭಗಳು ಇಲ್ಲಿ ಪುಡಿಪುಡಿಯಾಗಿವೆ. ಫಲವಂತಿಕೆಗೆ ಹರಕೆ ಹಾಕುವವರು ಹೊಸ ಕುಂಭವನ್ನು ಒಪ್ಪಿಸುವ ಹರಕೆ ಹಾಕುತ್ತಾರೆ. ಮಣ್ಣಿನಿಂದ ರಚಿತವಾದುದು ಕೊನೆಗೆ ಮಣ್ಣಿಗೇ ಸೇರಲು.

ಕಾಸಗೋಡಿನಲ್ಲಿ ಬಾಕುಡ ಜನಾಂಗದವರು ಉಲ್ಲಾಲ್ತಿ ಕೋಲ ಉಲ್ಲಾಯ ಕೋಲ ಪ್ರತಿವರ್ಷ ನಡೆಸುತ್ತಾರೆ. ಇಲ್ಲಿ ನಾಗ ಕನ್ನಿಗೆ ಉಲ್ಲಾಲ್ತಿ, ನಾಗಪುರುಷ  ಉಲ್ಲಾಯ. ಅಣ್ಣ ತಂಗಿಯರು ಅವಳಿ ಕನ್ಯೆಯರು, ಅವಳಿ ಪುರುಷರು.

ಕನ್ನಿ ಉಲ್ಲಾಲ್ತಿ 

1001 ಹೆಡೆಯ ಉಲ್ಲಾಯ 









ಮೇರರ ಕಾಡಿನ ಕ್ಷೇತ್ರಗಳಲ್ಲಿ ಮೇರರೇ ಮಣ್ಣಿನ ನಾಗಕಡ್ಯ/ಕಲಶಗಳನ್ನು ಪ್ರತಿಷ್ಟಾಪಿಸುತ್ತಿದ್ದಾರೆ.



No comments:

Post a Comment