Wednesday, April 9, 2014

ಬಸರೂರು ಮಾರಿಯಮ್ಮ ಮತ್ತು ವೀರ ಭದ್ರ

'ಬಸ್ರೂರು ನಗರದಲ್ಲಿದ್ದ ಅನೇಕ ದೇವಾಸ್ಥಾನಗಳಲ್ಲಿ ದೇವಿಯ ದೇವಾಲಯವು ಮುಖ್ಯವಾದವುಗಳಲ್ಲಿ ಒಂದಾಗಿತ್ತು. ಅಲ್ಲಿ ಪ್ರತಿವರ್ಷವೂ ಕೊಂಡಾಡುತ್ತಿದ್ದ ದೇವಿಯ ಹಬ್ಬದ (ಬಹು಼ಶಃ ನವರಾತ್ರಿ ಪೂಜೆಯ ದುರ್ಗಾ ಪೂಜೆಯ)ದಿನದಂದು ಆ ದೇವಾಲಯಕ್ಕೆ ಪಡುವ ಕೇರಿ ಮತ್ತು ಮೂಡಕೇರಿಯ ಸೆಟ್ಟಿಕಾರ ಸಂಘಗಳವರು ಕುರಿ ಅಡಕೆಮರ ಮುಂತಾದ ತಮ್ಮ ತಮ್ಮ ಕಾಣಿಕೆಗಳನ್ನು ಪೂರ್ವನಿರ್ದಿಷ್ಟ ಬೀದಿಗಳಲ್ಲಿ ಕೊಂಡು ಹೋಗುವುದು ವಾಡಿಕೆಯಾಗಿತ್ತು.. ಆದರೆ ಕ್ರಿ. ಶಕ 1455ರಲ್ಲಿ ದೇವಿಯ  ಹಬ್ಬದ ದಿನದಲ್ಲಿ ತಮ್ಮ ಲೆಕ್ಕದ ಕಾಣಿಕೆಗಳನ್ನು ಯಾವ ಬೀದಿಗಳಲ್ಲಿ ಮೆರೆಸಿಕೊಂಡು ಹೋಗುವುದೆಂಬ ವಿಷಯವಾಗಿ ಈ ಎರಡು ಕೇರಿಯ ಸೆಟ್ಟಿಕಾರರುಗಳ ಸಂಘಗಳ  ನಡುವೆ ತೀವ್ರ ವೈಮನಸ್ಸು ಹುಟ್ಟಿ ಹಿಂಸಾಕೃತ್ಯಗಳಲ್ಲಿ ಕೊನೆಗೊಂಡಿತು. ಇದರಿಂದ ಕಳವಳಗೊಂಡ ಎರಡು ಕೇರಿಯ ಸೆಟ್ಟಿಕಾರರೂ ಕಂದಾವೂರ ಗ್ರಾಮದವರ ಮಧ್ಯಸ್ಥಿಕೆಯಲ್ಲಿ ಒಂದುಗೂಡಿ ತಮ್ಮ ತಮ್ಮೊಳಗಿನ ವಿವಾದಗಳನ್ನು ಚರ್ಚಿಸಿ ಸಮಧಾನದ ಒಪ್ಪಂದವೊಂದನ್ನು ರಚಿಸಿ ಸಹಿಹಾಕಿದರು. (ಕೆ. ವಿ ರಮೇಶ ಮತ್ತು ಎಂ.ಜೆ. ಶರ್ಮ  ತುಳುನಾಡಿನ ಅರಸುಮನೆತನಗಳು ಪು 56)

ಬಸ್ರೂರುಮಾರಿ ದುರ್ಗೆಯಾಗಿದೆ.


ಬಸ್ರೂರು ಮಾರಿ ಗುಡಿಯಲ್ಲಿ ಮಾರಿ ದೇವತೆಯ ಜೊತೆ ಬೆತ್ತಲೆ ಸ್ತ್ರೀ ಮೂರ್ತಿ ಇದೆ. ಈ ಪ್ರತಿಮೆಯನ್ನು ಬೆತ್ತಲೆ ಪರಮೆಶ್ವರಿ ಎನ್ನುತ್ತಾರೆ. ಬೆತ್ತಲೆಯ ಪರಮೇಶ್ವರಿ ಮುಂದೆ ವೀರ ಭದ್ರನ ಪ್ರತಿಮೆ ಇದೆ.
ಜೊತೆಯಲ್ಲಿ ಆದಿ ದೈವ ನಾಗ ಮತ್ತು ಚಿಕ್ಕು ಇದೆ.` ಕಟ್ಟೆ ಚಿಕ್ಕು’ ಹಿಂದೆ ಪೂಜೆ ನಡೆಯುತ್ತಿತ್ತು. ಕಟ್ಟೆ ಚಿಕ್ಕು ಕಟ್ಟೆಗೆ ಹಂಡೆ ಕವಚಿ ಹಾಕಲು ಹೇಳಿ ಅದನ್ನು 48 ದಿವಸ ತೆರೆಯಬಾರದು ಎಂದು ಆದೇಶಿಸಿತ್ತು. ಆದರೆ ಭಕ್ತರಿಗೆ ಅವಸರ. ಅವಧಿಗೆ ಮೊದಲೇ ತೆರೆದು ನೋಡಿದಾಗ ಅಮ್ಮನ ಕತ್ತು ಮಾತ್ರ ಕಂಡಿತು.


ಮಾರಿಯಮ್ಮ ಗುಡಿಯಿಂದ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸೂಳೆಯರ ಕೇರಿ ಇತ್ತು. ಕೇರಿಯ ಹುಡುಗಿಯರಿಗೆ ವೀರ ಭದ್ರನು ಕನಸಿನಲ್ಲಿ ಆಕರ್ಷಣೆ ಗೊಳಿಸುತ್ತಿದ್ದ. ಆ ಹುಡುಗಿಯರು  ಬೆಳಿಗ್ಗೆ ಸತ್ತು ಹೋಗುತ್ತಿದ್ದರು. ಭಕ್ತರು ಅಮ್ಮನಿಗೆ ದರ್ಶನ ಸಮಯದಲ್ಲಿ ದೂರು ಕೊಡುತ್ತಾರೆ. ಅಮ್ಮವೀರಭದ್ರನಿಗೆ ಸಂಕೋಲೆ ಹಾಕುತ್ತಾಳೆ. ವೀರ ಭದ್ರನ ದೃಷ್ಠಿ(ಹೆಣ್ಣುಮೋಹ) ತಣಿಯಲು ತಾನೇ  ಬತ್ತಲೆಯಾಗಿ ನಿಲ್ಲುತ್ತಾಳೆ



veera Bhadra Basaruru






ಅಮ್ಮನ ತಲೆ ಮತ್ತು ಬತ್ತಲೆ ಪರಮೇಶ್ವರಿ ಬಸ್ರೂರು

 ಕ್ರಿ.ಶ. 1455ರಲ್ಲಿ ಬಸ್ರೂರು ದೇವಿಯ ಹಬ್ಬದ ಆದಿ ಅಯನಕ್ಕೆ ಕುರಿಯನ್ನೂ ಅಡಕೆಯನ್ನೂ ಮೆರವಣಿಗೆಯಲ್ಲಿ ಕೊಂಡು ಹೋಗುವುದು ವಾಡಿಕೆಯಲ್ಲಿತ್ತು. ಈ ಬಗ್ಗೆ ಕೇರಿ ಕೇರಿಗಳ ಒಳಗೆ ವಾದವಿವಾದಗಳಾದುವು . ಕೊನೆಗೆ ಒಪ್ಪಂದದಲ್ಲಿ ವಾದ ಮುಕ್ತಾಯವಾಯಿತು.

No comments:

Post a Comment