ನಮ್ಮ ಮೊಗಸಾಲೆ ಮುಂದೆ
ಜುಳು ಜುಳು ಎಂದು
ಹರಿವ ಸುಗ್ಗಿಯ ತೋಡನೀರು
ಹಾವು ಸರಿದಂತೆ ಕಾದ ನೆಲದ ಮೇಲೆ ಮೆಲ್ಲ ಮೆಲ್ಲನೆ
ಹರಿದು ತೋಡು ತುಂಬಿದರೆ
ಡುಡಂ ಎಂದು ಜಿಗಿತ.
ಮೊಗಸಾಲೆಯ ಬಾಜರದಿಂದ
ಅಂಗಿ ಬಿಚ್ಚಿದ ಬಾಲ
ಬಾಲೆಯರ
ನೀರಲ್ಲಿ ಥಕಥೈ ಕುಣಿತ
.
ನೀರೆರಚಿ ಹಾರಾಡಿ
ಚೀರಾಡಿ
ಬಾಕಿಮಾರಿನ ಕಟ್ಟೆ
ಒಡೆದಾಗ
ಹುಣಸೆ ಮರದ ಚಾಟಿ
ಹಿಡಿದು
ಬರುವ ನಿಯಂತ್ರಕರು.
‘ಗೊಮ್ಮಟಗಳೇ” ಎಂದದ್ದು
ಬಾಲರಿಗೆ
‘ಧಗಣೆಗಳೇ’ ಎಂದದ್ದು
ಬಾಲೆಯರಿಗೆ
ಬಾಲೆಯರು ‘ಅಕ್ಕ’
ಯಾಕಲ್ಲ?
ಡಾ.ಇಂದಿರಾ ಹೆಗ್ಗಡೆ
olleya prashne (Y)
ReplyDeleteSatwika Shetty