Tuesday, May 24, 2016

ಮಾನವನು ಮೊತ್ತ ಮೊದಲು ದೈವ/ದೇವರನ್ನು ಸಂಕೇತಿಸಿದ್ದು ಮರದ ಬುಡದ ಕಲ್ಲಿನಲ್ಲಿ,





             ಮಾನವನು ಮೊತ್ತ ಮೊದಲು  ದೈವ/ದೇವರನ್ನು ಸಂಕೇತಿಸಿದ್ದು ಮರದ ಬುಡದ ಕಲ್ಲಿನಲ್ಲಿ,

ಮಾನವ ದೇವರನ್ನು ಮೊದಲು ಸಂಕೇತಿಸಿದ್ದು  ಮರಗಳಲ್ಲಿ. ಮುಂದೆ ಗುಂಡು ಕಲ್ಲಿನಲ್ಲಿ. ಮುರಕಲ್ಲಿನಲ್ಲಿ ಸಂಕೇತಿಸುತ್ತಾನೆ. ಹೀಗೆ¸ಶಿವನನ್ನು ಸಂಕೇತಿಸಿದ ಶಿವ ದೇವಾಲಯಗಳನ್ನು ನಾವು ಭುವನೇಶ್ವರದಲ್ಲಿ ಕಾಣಬಹುದು. ಕರಾವಳಿಯಲ್ಲಿ  ನಾಗ, ನಾಗಬ್ರಹ್ಮನನ್ನು ಮತ್ತು ಅವನ ಪರಿವಾರ  ಶಕ್ತಿಗಳನ್ನು ಶಿಲೆಯಲ್ಲಿ ಮುರಕಲ್ಲನಲ್ಲಿ ಸಂಕೇತಿಸಿದ ಕೆಲವು ಕ್ಷೇತ್ರಗಳ ಛಾಯಾಚಿತ್ರಗಳು ನನ್ನ ದಾಖಲೆಯಲ್ಲಿ ಇವೆ. ತುಳುನಾಡಿನಲ್ಲಿ ಹೆಚ್ಚಿನ ದೈವಗಳನ್ನು ಕಲ್ಲಿನಲ್ಲಿಯೇ ಸಂಕೇತಿಸುತ್ತಿದ್ದರು. ಮೊಗವಾಡ ಅಥವಾ ಪ್ರತಿಮೆ ಬಂದುದು ಮುಂದಿನ ಬೆಳವಣಿಗೆ.  ಈಗಲೂ ಇಡಿಯ ಭಾತರದಲ್ಲಿ ಮರದ ಬುಡದ ಗುಂಡುಕಲ್ಲಿನಲ್ಲಿಯೂ ಮುರಕಲ್ಲಿನಲ್ಲಿಯೂ ದೈವವನ್ನು ಸಂಕೇತಿಸುತ್ತಾರೆ.
ನಮ್ಮ ಎಳತ್ತೂರು ಗುತ್ತು ಹಲವು ಕವಲು/ ಶಾಖೆ ಗಳಿರುವ ಗುತ್ತು.  ಮನೆಯ ದೈವಗಳಲ್ಲಿ ಒಂದಾದ ‘ಅಣ್ಣಪ್ಪ ಪಂಜುರ್ಲಿ’ ಚಾವಡಿಯ ಒಳಗೆ ಇತ್ತು. ಈಗಲೂ ಇದೆ. ಆ ದೈವಕ್ಕೆ ಕೋಳಿ ಬಲಿನೀಡಲು ಮನೆಯ ನೈಋತ್ಯ ಮೂಲೆಯ ತಾಳೆಮರದ ಬುಡದಲ್ಲಿ ಕಲ್ಲು ಹಾಕಿ ಸಂಕೇತಿಸಿದ್ದರು .ಮನೆಗೆ ಬಂದ ಅತಿಥಿಗಳಿಗೆ ಕಾಲು ತೊಳೆಯಲು ನೀರು ಕೊಟ್ಟು ಅಸರು ನೀಗಿಸಲು ಬೆಲ್ಲ ನೀರು ಕುಡಿಯಲು ಕೊಡುವುದು ತುಳುನಾಡಿನ ಸಂಪ್ರದಾಯ. ನಮ್ಮ ಮನೆಯ ಪಶ್ಚಿಮ ಬಾಗಿಲಿನಿಂದ ಚೆಂಬು ಹಿಡಿದು ಕಾಲು ತೊಳೆಯಲು  ಅತಿಥಿಗಳು ಹೊರಗೆ ಹೋಗಿ  ಅಂಗಳದ ಮೂಲೆಯ ತಾಳೆ ಮರದ ಬುಡದ ಕಲ್ಲಿನ ಮೇಲೆ ಕಾಲಿರಿಸಿ ಕಾಲು ತೊಳೆಯುತ್ತಿದ್ದರು. ಕೆಲವು ಸಂದರ್ಭದಲ್ಲಿ ಅತಿಥಿಗಳು ಆ ಕಲ್ಲಿನ ಬಳಿ ನಿಂತು ಕಲ್ಲಿಗೆ ಮೂತ್ರ ವಿಷರ್ಜನೆ ಮಾಡುತ್ತಿದ್ದರು. ನಾವು ಮನೆಯವರು ಚಡಪಡಿಸಿದರೂ ಬಂದವರಿಗೆ “ ಅದು ಭೂತದದ/ದೈವದ” ಕಲ್ಲು ಎಂದು ಹೇಳುತ್ತಿರಲಿಲ್ಲ. ಕಾರಣ ಅವರು ‘ಆತಂಕ ಪಡದಿರಲಿ’ ಎಂದು.



ಮಕ್ಕಳು ಕಲ್ಲಿನ ಮೇಲೆ ಮೂತ್ರ ವಿಸರ್ಜನೆ ಮಾಡುವುದು ಅದರ ಮೇಲೆ ಕುಳಿತುಕೊಳ್ಳುವುದು ಇತ್ತು. ಇದನ್ನು ತಪ್ಪಿಸಲು ಅಲ್ಲಿ ಒಂದು ಗುಡಿ ಕಟ್ಟಿ ಬೇರೆ ಶಿಲೆಯನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಕೋಳಿ ಆಹಾರ ಪಡೆಯುತ್ತಾ ಅಣ್ಣಪ್ಪ ಪಂಜುರ್ಲಿ ನೆಮ್ಮದಿಯಿಂದ   ಮನೆಯ ಮಕ್ಕಳ ಅತಿಥಿಗಳ ಕಿರಿ ಕಿರಿ ಇಲ್ಲದೆ.
ಹೀಗೆ ಪ್ರತಿಷ್ಠಾಪನೆ ಮಾಡುವ ಕಾಲದ ತಲೆಮಾರಿನವರಿಗೆ ಮಾಯಗಾರ ಅಣ್ಣಪ್ಪ ಪಂಜುರ್ಲಿ ಒಳಗೆ ಚಾವಡಿಯ ‘ಕೊಟ್ಯ’ದ  ಉಜ್ಜಾಲ್  ನಲ್ಲಿ ಇದ್ದಾನೆ ಎನ್ನುವುದು ಗೊತ್ತಿರಲಿಲ್ಲ. ಅವನು ಕಾಣ ಬಂದಿದ್ದು, ಕಂಡಿದ್ದು ಅಷ್ಟಮಂಗಳದವರಿಗೆ ಮಾತ್ರ. ಅದಿರಲಿ. ಈಗ ಹೊರಗಿನ ಗುಡಿ ತೆಗೆಯಬೇಕು ಎಂದು ಪಂಜುರ್ಲಿಗೆ ಮನೆಯ ಒಳಗೆ ಬೇರೆಯೇ ಕೋಣೆ ಮಾಡಿ ಉಜ್ಜಾಲ್ ಮಾಡಿದ್ದಾರೆ ಅಣ್ಣಪ್ಪ ಪಂಜುರ್ಲಿಗೆ. ಕೋಳಿ ಬಲಿ ಮುಂಚಿನ ಗುಡಿಗೆ ನಡೆಯುತ್ತಿದೆ.


ನನ್ನಬಾಲ್ಯ ಕಾಲದಲ್ಲಿ ಮಾತ್ರವಲ್ಲ ಈಗಲೂ ಎಷ್ಟೋ ಕಡೆ ಕಾಡಿನ ಮರದ ಬುಡದಲ್ಲಿ , ಮನೆಯಂಗಳದ ಮರದ ಬುಡದಲ್ಲಿ ಭೂತದ/ದೈವಗಳ ಹೆಸರಿನ ಕಲ್ಲುಗಳು ಇವೆ. ಅದಕ್ಕೆ ಕೋಳಿ ಕೊಯ್ದು ವುದೂ ಇದೆ. (ಕೆಲವಡೆ ಕಲ್ಲಿಗೆ ಹೆಸರು ಬರೆಸಿದ್ದಾರೆ”)
ಗಮ್ಮತ್ತು: ಕೆಲ ವರ್ಷಗಳ ಹಿಂದೆ ನಡೆದ  ಅಷ್ಟಮಂಗಳ ಪ್ರಶ್ನೆಯಲ್ಲಿ ನನ್ನ ಗುತ್ತು ಮನೆಯಲ್ಲಿ  “ಪಂಜುರ್ಲಿಗೆ ಗುಡಿಕಟ್ಟಿದ್ದು ತಪ್ಪು. ಅಣ್ಣಪ್ಪ ಪಂಜುರ್ಲಿ ಚಾವಡಿಯಲ್ಲಿ ಇರುವ ದೈವ” ಎಂಬ ಹೊಸ ಶೋಧ ಬಂತು. ಅಷ್ಟಮಂಗಳ ಪ್ರಶ್ನೆ ಇಡದವರ ಮನೆಯಂಗಳದಲ್ಲಿ ಅಣ್ಣಪ್ಪ ಪಂಜುರ್ಲಿ ಹೊರಗೆ ಗುಡಿಯಲ್ಲಿ ಇನ್ನೊಂದು ಗುತ್ತು ಮನೆಯಲ್ಲಿ ಇದ್ದಾನೆ,  ಈಗಲೂ ಇದ್ದಾನೆ. ಅಲ್ಲಿಗೆ ಬಂದ ಅಷ್ಟಮಂಗಳ ಪ್ರಶ್ನೆ ಹೇಳುವ ಬ್ರಾಹ್ಮಣ ಜ್ಯೋತಿಷಿ, “ ಅಣ್ಣಪ್ಪ ಪಂಜುರ್ಲಿ ರಕ್ತಾಹಾರದ ದೈವ ಅಲ್ಲ ಅದಕ್ಕೆ ಕೋಳಿ ಬಲಿ ನೀಡುವುದನ್ನು ನಿಲ್ಲಿಸಿ ಅಂದರಂತೆ.” ಹೀಗಾಗಿ ಇನ್ನೊಂದು ಗುತ್ತು ಮನೆಯವರು ತಮ್ಮ ಅಣ್ಣಪ್ಪ ಪಂಜುರ್ಲಿಗೆ ಈಗ ಕೋಳಿ ಬಲಿ ನಿಲ್ಲಿಸಿದರು.  


ಶೂದ್ರರ ಗೊಂದಲ:  ಎಂತ ಮಾರಾಯಾ ? ಯಾರ ಮಾತು ಕೇಳುವುದು? ಅನಾದಿಯಿಂದ ಬಂದ ಕಟ್ಟು ಕಟ್ಟಲೆಯನ್ನು ಹೇಗೆ ನಿಲ್ಲಿಸುವುದು? ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಮಂಡೆಕೊಡುವುದು?  

No comments:

Post a Comment