“ತುಳುವರ ಮೂಲತಾನ
ಆದಿ ಆಲಡೆ :ಪರಂಪರೆ ಮತ್ತು ಪರಿವರ್ತನೆ” ನನ್ನ ಡಿಲಿಟ್ ನಿಬಂಧ. ಕ್ಷೇತ್ರಕಾರ್ಯಾಧಾರಿತ ಕೃತಿ. ಸಂಶೋಧಿಸಿದ
ವಿಷಯಗಳಿಗೆ ಪೋಟೋ ಹಾಗೂ ಕ್ಷೇತ್ರ ವಿವರಗಳೊಂದಿಗೆ ಖಚಿತ ಮಾಹಿತಿ ನೀಡಿ ಬರೆದ ಕೃತಿ. ನವಕರ್ನಾಟಕ ಪಬ್ಲಿಕೇಷನ್
ಈ ಕೃತಿಯನ್ನು ಚಿತ್ರಗಳೊಂದಿಗೆ ಪ್ರಕಟಿಸಿ ನನ್ನ ಕ್ಷೇತ್ರಕಾರ್ಯಕ್ಕೆ ಗೌರವ ನೀಡಿದೆ. ಈ ಮೂಲಕ ಖಚಿತತೆ ಒದಗಿಸಿದೆ. ಅಂತೆಯೇ ಅಸಂಖ್ಯ
ಓದುಗರು ಇದನ್ನು ಕೊಂಡು ಓದಿದ್ದಾರೆ. ಸಾಮಾನ್ಯ ಓದುಗರು ಮಾತ್ರವಲ್ಲ ವಿದ್ವಾಂಸರು ಈ ಕೃತಿಯನ್ನು ಆಕರಗ್ರಂಥವಾಗಿ
ಬಳಸಿಕೊಂಡಿದ್ದಾರೆ. ಸಂಶೋಧನಾ ಕೃತಿಯನ್ನು ನವಕರ್ನಾಟಕ ಪ್ರಕಟಿಸಿದ್ದೇ ಕೆಲವರಿಗೆ ಆಶ್ಚರ್ಯ! ಆದರೆ
2014ರಲ್ಲಿ ಪ್ರಕಟ ಆಗಿದ್ದ ಈ ಶೋಧ ಕೃತಿ 2016ರಲ್ಲಿ ಮರುಮುದ್ರಣಗೊಂಡು ಇಂದು ನನ್ನ ಕೈ ತಲುಪಿದೆ.
ನನ್ನ ಪ್ರಕಾಶಕರಿಗೆ ಮತ್ತು ಓದುಗರಿಗೆ ನನ್ನ ಅನಂತಾನಂತ ವಂದನೆಗಳು.
No comments:
Post a Comment