Kata joota |
ಆಸ್ಟ್ರೇಲಿಯನ್ ಮೂಲನಿವಾಸಿಗಳ ಪವಿತ್ರ ಕ್ಷೇತ್ರ.
ಇಂದಿನ ಶ್ರೀಮಂತ ನಾಗರಿಕ ರಾಷ್ಟ್ರ ಆಸ್ಟ್ರೇಲಿಯಕ್ಕೆ ಬ್ರಿಟಿಷರು ತಲುಪುವ ಸುಮಾರು ಮೂವತ್ತು ಸಾವಿರ ವರುಷಗಳ ಮೊದಲು ಆಪ್ರಿಕಾದಿಂದ ಬುಡಗಟ್ಟು ಗುಂಪುಗಳು ಈ ಖಂಡಕ್ಕೆ ಬಂದಿವೆ ಎನ್ನುತ್ತಾರೆ ಮಾನವ ಶಾಸ್ತ್ರಜ್ಞರು. ಆದರೆ ಮೂಲ ನಿವಾಸಿಗಳ ಪ್ರಕಾರ ಅವರು ಎಲ್ಲಿಂದಲೋ ಬಂದವರಲ್ಲ. ಅದು ಅವರು ಹಿರಿಯರ ನೆಲ. ಉಲುರು ಮತ್ತು ಕಾಟಾಜೂಟಾದ ಶಿಲಾ ಕ್ಷೇತ್ರಗಳಲ್ಲಿ ಅವರ ಹಿರಿಯರ ‘ಸ್ಪಿರಿಟ್’ ಇದೆ.
ಆಸ್ಟ್ರೇಲಿಯಾ ಖಂಡವನ್ನು ಬಿಳಿಯರು ತಮ್ಮ ಅನ್ವೇಷಣೆ ಎಂದು ಕರೆದರು. ಆಗ ಅವರನ್ನು ಗೆರಿಲ್ಲಾ ರೀತಿಯಲ್ಲಿ ಮೂಲನಿವಾಸಿಗಳು ಎದುರಿಸಿದರು. ಮೂಲನಿವಾಸಿಗಳನ್ನು ಬ್ರಿಟಿಷರು ‘ಅಬ್‍ಒರಿಜಿನಲ್ಸ್’ ಎಂದು ಕರೆದರು. ಅವರನ್ನೆಲ್ಲ ಬರ್ಬರ ರೀತಿಯಲ್ಲಿ ಕೊಂದರು. ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಹತ್ಯೆ ಮಾಡಿದರು. 2012ರಲ್ಲಿ ನೂಸಾದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಬದಿ ಫಲಕ ಕಂಡೆ. ಬ್ರಿಟಿಷರು ‘200 ಮೂಲನಿವಾಸಿಗಳನ್ನು ಗುಂಡಿಕ್ಕಿ ಕೊಂದ ಸ್ಥಳ’ ಎಂದಿತ್ತು. ಹಾಗೂ ಇದು ಕೊನೆಯ ಹತ್ಯೆ ಎಂದು ಬರೆಯಲಾಗಿತ್ತು.
ಈ ಘರ್ಷಣೆಯ ಕಾಲದಲ್ಲಿ ಅವರ ಮಹಿಳೆಯರ ಮೇಲೆ ಅತ್ಯಾಚಾರಗಳಾದುವು. ಸಾಮಾನ್ಯವಾಗಿ ಒಂಟಿ ಪುರುಷರೇ ಐರೋಪ್ಯದೇಶದಿಂದ ಬಂದವರು. ಮೂಲನಿವಾಸಿಗಳ ಹೆಣ್ಣನ್ನು ಅವರ ಗಂಡಂದಿಂರಿಂದ ಕಸಿದರು. ಮಕ್ಕಳನ್ನು ಹೆತ್ತವರಿಂದ ಕಸಿದು ಗಾಡಿಯಲ್ಲಿ ತುಂಬಿಸಿ ಕ್ಯಾಂಪ್‍ಗೆ ಕಳುಹಿಸಲಾಯಿತು. ಬ್ರಿಟಿಷ್ ಪುರುಷನಿಗೆ ಮೂಲನಿವಾಸಿ ಹೆಣ್ಣಿನಿಂದ ಜನಸಿದ ಮಕ್ಕಳಿಗೂ ಇದೇ ಗತಿಯಾಯಿತು. ಇದಕ್ಕಿಂತ ಭಯಾನಕವೆಂದರೆ ಅವರ ಲೈಂಗಿಕ ಭಾಗಗಳನ್ನು ಪರೀಕ್ಷಿಸುವುದು. ಮೂಲನಿವಾಸಿಗಳನ್ನು ಬೇರು ಸಹಿತ ಕಿತ್ತೊಗೆಯಬೇಕು ಎಂಬ ಬಿಳಿಯರ ಹಠ. ಈ ಖಂಡ ತಮ್ಮದೇ ಆನ್ವೇಷಣೆ. ತಮ್ಮ ಬ್ರಿಟನ್ ರಾಣಿಗೆ ಸೇರಿದ್ದು ಎಂದು ಘೋಷಿಸುತ್ತಾರೆ. ಆದರೆ ಆಸ್ಟ್ರೇಲಿಯಾ ಮೂಲ ನಿವಾಸಿಗಳ ಪ್ರಕಾರ “ಈ ಭೂಮಿ ಎಲ್ಲರ ಸ್ವತ್ತು. ಹಾರುವ ಹಕ್ಕಿ ಈಜುವ ಮೀನು, ಪ್ರಾಣಿ, ಕ್ರಿಮಿಕೀಟ, ಹಸಿರು ಸಿರಿ, ಎತ್ತರೆತ್ತರ ಬೆಳೆಯುವ ಮರ” ಎಲ್ಲವೂ ಈ ಭೂಮಿಯಲ್ಲಿ ಹಕ್ಕನ್ನು ಪಡೆದಿವೆ.
ಇಲ್ಲಿಯ ಕೆಂಪು ಮರಳು ಭೂಮಿಯಲ್ಲಿ ಶಿಲಾಪರ್ವತಗಳಿವೆ. ವಿಶ್ವದ ವಿಸ್ಮಯದಂತೆ ಬೃಹತ್ತಾದ ಶಿಲಾ ಪರ್ವತಗಳು ಅಲ್ಲಲ್ಲಿ ಬಣ್ಣಗಳೊಂದಿಗೆ ಮೇಲೆದ್ದು ಬಂದಿವೆ. ಅವು ಸೂರ್ಯ ಕಿರಣಗಳನ್ನು ಸೆಳೆದು ಹಲವು ಬಣ್ಣಗಳನ್ನು ಪ್ರತಿಫಲಿಸುತ್ತವೆ. ಆಸ್ಟ್ರೇಲಿಯಾ ಖಂಡದ ಮಧ್ಯ ಭಾಗದ ನಾನು ನೋಡಿದ ಎರಡು ಪಾಕೃತಿಕ ಅಚ್ಚರಿಗಳನ್ನು ಉರುಲು ಮತ್ತು ಕಾಟಾ ಜೂಟಾ ಎಂದು ಮೂಲನಿವಾಸಿಗಳ ಭಾಷೆಯಲ್ಲಿ ಕರೆಯುತ್ತಾರೆ. ಉಲುರು ಮತ್ತು ಕಾಟಾ ಜೂಟಾವು ಠಿiಣರಿಚಿಟಿಣiರಿಚಿಡಿಚಿ ಚಿಟಿಜ ಥಿuಟಿಞuಟಿಣರಿಚಿಣರಿಡಿಚಿ ಎನ್ನುವ ಎರಡು ಬುಡಗಟ್ಟುಗಳ ಪವಿತ್ರ ಕ್ಷೇತ್ರ. ಈ ಎರಡು ಪಂಗಡಗಳನ್ನು ಒಟ್ಟಾಗಿ ‘ಅನಂಗು’ ಎಂದು ಕರೆಯುತ್ತಾರೆ.ಅವರ ಪಾಲಿಗೆ ಇವು ಬರೇ ಶಿಲಾ ಶಿಖರಗಳಲ್ಲ. ಅದಕ್ಕಿಂತ ಹೆಚ್ಚಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ದಂತ ಕಥೆಗಳ ಕ್ಷೇತ್ರ. ಇಲ್ಲಿಯ ಉಲುರು ಮತ್ತು ಕಾಟಾ ಜೂಟಾದ ಗುಹೆಗಳಲ್ಲಿ ಅವರು ಸಾವಿರಾರು ವರುಷ ಬದುಕುನ ಕಟ್ಟಿಕೊಂಡಿದ್ದರು. ಅವರ ಪೈಂಟಿಂಗ್‍ಗಳನ್ನು ಈ ಪರ್ವತಗಳ ಗುಹೆಗಳಲ್ಲಿ ಈಗಲೂ ಕಾಣಬಹುದು. ಈ ಗುಹೆಗಳ ಒಳಗೆ ಕುಳಿತು ಅವರು ತಮ್ಮ ಜನಾಂಗಕ್ಕೆ ಹಾಡಿನ ಮೂಲಕ ಪರಂಪರೆಯ ಕಥೆಯನ್ನು ಹೇಳುತ್ತಿದ್ದರು. ಆಚರಣೆಗಳೂ ಇಲ್ಲಿಂಯೇ ನಡೆಯುತ್ತಿತ್ತು. ದೇಹಕ್ಕೂ ಪೈಂಟ್ ಬಳಿದು ಡ್ಯಾನ್ಸ್ ಮಾಡುವುದು ಈಗಲೂ ಇದೆ.
ಪ್ರಾಣಿಗಳಿಗೂ ಈ ಗುಹೆಗಳು ವಾಸಸ್ಥಾನ. ಅಂತೆಯೇ ಮೂಲನಿವಾಸಿಗಳಿಗೂ. ಹೀಗಾಗಿ ಇವು ಇವರ ಪವಿತ್ರ ಕ್ಷೇತ್ರ. ಅವರ ಸಂಸ್ಕøತಿ ವಾಹಕಗಳಾಗಿ ಪಕ್ಷಿಗಳೂ ಇದ್ದುವು.
ಹಲವಾರು ವರ್ಷಗಳ ಕಾಲ ಆಸ್ಟ್ರೇಲಿಯಾದ ಬಿಳಿಯರ ಸರಕಾರ ‘ಉಲುರುವನ್ನು ಂಥಿeಡಿs ಖoಛಿಞ ಎಂದೂ ಏಚಿಣಚಿಖಿರಿuಣಚಿ ವನ್ನು ಓಲ್ಗಾಸ್’ ಎಂದು ಕರೆಯುತ್ತಿತ್ತು. ಮೂಲ ನಿವಾಸಿಗಳ ಹೋರಾಟದ ಫಲವಾಗಿ 1993ರಲ್ಲಿ ಅನಂಗು ನಿವಾಸಿಗಳ ಭಾಷೆಯಲ್ಲಿ ಉಲುರು ಮತ್ತು ಕಾಟಾಜೂಟಾ ಎಂದು ಮರು ನಾಮಕರಣ ಮಾಡಲಾಯಿತು.
ಇವು ಎರಡು ಹಂತಗಳಲ್ಲಿ ಪ್ರಾಕೃತಿಕ ವಿಶ್ವ ಪರಂಪರೆಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 1987ರಲ್ಲಿ ಉಲುರು ಮತ್ತು ಕಾಟಾ ಜೂಟಾವು 2ನೆಯ ಮತ್ತು 3ನೆಯ ಮಾನದಂಡಗಳಿಂದ ಪ್ರಾಕೃತಿಕ ವಿಶ್ವ ಪರಂಪರೆಗೆ ಸೇರಿತು. 1994ರಲ್ಲಿ 5ನೆಯ ಮತ್ತು 6ನೆಯ ಮಾನದಂಡಗಳಿಂದ ಸಾಂಸ್ಕøತಿಕ ಕ್ಷೇತ್ರ ಎಂದು ವಿಶ್ವ ಪರಂಪರೆಗೆ ಸೇರಿತು.
ಕಲ್ಚರಲ್ ಹೆರಿಟೇಜ್ ಮಾನವರಿಂದ ನಿರ್ಮಿತವಾದವು. ಶಿಲ್ಪಗಳು, ಗುಹೆಗಳಲ್ಲಿ ಈಗಲೂ ಉಳಿದಿರುವ ಪೈಂಟಿಂಗ್ಸ್ ಬರಹಗಳು, ಕಟ್ಟಡಗಳು ಹಾಗು ಮಣ್ಣಿನ ಕೆಲಸಗಳು.
ಪ್ರಾಕೃತಿಕ ಹೆರಿಟೇಜ್ ಪ್ರಕೃತಿದತ್ತ ವಿವರಗಳು. ಜಿಯೊಲಾಜಿಕಲ್ ಬದಲಾವಣೆ, ಮರಗಿಡಗಳು, ಪ್ರಾಣಿಗಳು ಹಾಗೂ ಅಲ್ಲಿಯ ಕಮ್ಯುನಿಟಿ ಮತ್ತು ಫಾಸಿಲ್ಸ್ -ಮುಂತಾದ ಪ್ರಾಕೃತಿಕ ಅಚ್ಚರಿಗಳ ಕ್ಷೇತ್ರ ಇದು. ಇದನ್ನು ಮಿಕ್ಸಡ್ ಸೈಟ್ ಎನ್ನುತ್ತಾರೆ.2001ರಲ್ಲಿ ವಿಶ್ವದಲ್ಲಿ ಬರೇ 23 ಮಿಕ್ಸಡ್ ಸೈಟ್ಗಳು ಉಳಿದಿವೆಯಂತೆ.
ವಿಶ್ವದ ನೈಸರ್ಗಿಗಿಕ ಅಚ್ಚರಿಗಳಲ್ಲಿ ಒಂದು:
340 ಮೀಟರ್ ಎತ್ತರದ ಉಲುರು ಬುಡದ ಸುತ್ತಳತೆ 9.4ಕಿಲೋಮೀಟರ್ ಇದೆ. ಆದರೆ ಪ್ರವಾಸಿಗರ ನಡಿಗೆಯ ದಾರಿ 10. 5 ಕಿಲೋಮೀಟರ್ ಇದೆ. ಈ ಡೂಮ್‍ಗಳ ಸುತ್ತ ಎರಡು ನಡಿಗೆಯ ದಾರಿ ಇದೆ. ಒಂದು ವಿಂಡ್ಸ್ ವಾಕ್ ಮತ್ತೊಂದು Wಚಿಟಠಿಚಿ ಉoಡಿgeತಿಚಿಟಞ. ಈ ಸುತ್ತನ್ನು ನನ್ನ ಮಗಳು ಸರಿತಾ ಹೆಗ್ಡೆ 1.30 ಗಂಟೆಯಲ್ಲಿ ಪೂರೈಸಿದಳು. ಅವರ ಪವಿತ್ರ ಕ್ಷೇತ್ರ ಎಂದು ಗುರುತಿಸಿರುವ ಸ್ಥಳಗಳ ಬಳಿ ನಡಿಗೆ ಇಲ್ಲ.
ಕಾಜೂಟಾಕ್ಕೆ ಒಂದು ಪ್ರದಕ್ಷಿಣೆ (ಸುತ್ತು) 8 ಕಿಲೋಮೀಟರ್ ಇದೆ. ಸುಮಾರು 3 ಗಂಟೆಯ ನಡಿಗೆ ಇದು ಎನ್ನುತ್ತಾರೆ. ಈ ಸುತ್ತು ನಡಿಗೆಯಲ್ಲಿ ಕಾಟಾ ಜೂಟಾದಲ್ಲಿ ಎರಡು ಕಡೆ ವೀಕ್ಷಣಾ ಕೇಂದ್ರ ಇದೆ. (ನೆಲದ ಮೇಲೆ) ಉಳಿದೆಡೆ ನಿಲ್ಲಲು ಅವಕಾಶ ಇಲ್ಲ.
ಬಹಿರ್ಮುಖವಾಗಿ ದೂರದ ನನ್ನ ಕಣ್ಣಿಗೆ ಆನೆಯ ಆಕಾರದಲ್ಲಿ ಇದ್ದಂತೆ ಕಾಣುತ್ತಿದೆ. ಆನೆಯ ಗಜಪೃಷ್ಟಕ್ಕೆ ತಾಗಿ ಮತ್ತೊಂದು ಆನೆಯ ಸೊಂಡಿಲು ಬಗ್ಗಿಸಿ ನಿಂತಂತೆ ಭಾಸವಾಯಿತು. ಇವು ಪಂಚಶಿಲಾ ಶಿಖರಗಳಂತೆ ನೋಡುವ ಕಣ್ಣುಗಳನ್ನು ಚಕಿತಗೊಳಿಸುತ್ತದೆ. ಕಾಟಾ ಜೂಟಾದ ಎಡದಿಂದ ಎರಡನೆಯ ಶಿಖರ ಮೌಂಟ್ ಓಲ್ಗಾ 546ಮೀಟರ್ ಎತ್ತರ ಇದೆ. ಇವು ಕೆಂಪು ಬಣ್ಣವನ್ನು ಅಧಿಕ ಪ್ರತಿಪಲಿಸುತ್ತದೆ. ಕಾಟಾಜೂಟಾವು 36 ಶಿಲಾ ಡೂಮ್‍ಗಳನ್ನು ಹೊಂದಿವೆ. ಇದು ಇದು 35 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿದೆ.
ಉಲುರು ಮತ್ತು ಕಾಟಾ ಜೂಟಾ ಎರಡೂ ಒಂದೇ ಶಿಲಾಮೂಲದ ತಳಹದಿ ಹೊಂದಿರುವ ಶಿಲಾಶಿಖರಗಳಾಗಿವೆ.
ಶಿಲಾ ಶಿಖರಗಳ ಹಿಂದಿನ ರಹಸ್ಯ:
ಮಿಲಿಯಗಟ್ಟಲೆ ವರ್ಷಗಳ ಹಿಂದೆ ನದಿ ಮತ್ತು ಒಳಭಾಗದ ಸಮುದ್ರದಿಂದ ಹೊರಬಿದ್ದ ಕೆಸರು ಮಿಶ್ರಿತ ಮರಳು ಮಣ್ಣಿನಿಂದ ಉಲುರು ಕಾಟಾ ಜೂಟಾ ಮತ್ತು ಮೌಂಟ್ ಕನ್ನಾರ್ ಸೃಷ್ಟಿಯಾಗಲು ಕಾರಣವಾಯಿತೆಂದು ಹೇಳಲಾಗುತ್ತಿದೆ. ಅಂದರೆ ಆಸ್ಟ್ರೇಲಿಯಾ ಸಮುದ್ರದ ಕುದುರು ಆಗಿ ಬೆಳೆಯುತ್ತಿದ್ದಾಗಲೇ ಈ ಕ್ರಿಯೆ ನಡೆದಿರಬೇಕು.
ಕೆಸರು ಮಿಶ್ರಿತ ಮರಳು ಪದರ ಪದರಗಳಾಗಿ ಒಂದರ ಮೇಲೆ ಒಂದು ಕಲೆತು ಸ್ಯಾಂಡ್ ಸ್ಟೋನ್ ಆಗಿ ಬೆಳೆಯಿತು. ಹೀಗೆ ಒಂದೆಡೆ ಕಲೆತ ಕೆಸರು ಮಿಶ್ರಿತ ಮರಳು ಶಿಲಾ ರೂಪದಲ್ಲಿ ತೀರ್ವ ವೇಗವಾಗಿ ಬೆಳೆದು ನಿಂತಿದೆ. ಈ ಸ್ಯಾಂಡ್ ಸ್ಟೊನ್ ಅನ್ನು ಅರ್ಕೋಸ್ ಎಂದು ಕರೆಯುತ್ತಾರೆ. ಈ ಸ್ಯಾಂಡ್ ಸ್ಟೋನ್ ಶಿಲೆಯ ಸಣ್ಣ ಕಣಗಳನ್ನು ಬರಿಗಣ್ಣಿನಿಂದ ನೋಡಲು ಕೂಡಾ ಸಾಧ್ಯವಾಗುತ್ತದೆ. ಆದರೆ ಎಲ್ಲಾ ಕಣಗಳು ಸಣ್ಣ ಕಣಗಳಾಗಿಲ್ಲ.
ಮರಳುಗಾಡಿನ ರಭಸವಾಗಿ ಬೀಸುವ ಗಾಳಿಯಲ್ಲಿ ಕೆಸರು ಮಿಶ್ರಿತ ಕೆಂಪು ಮರಳು ಮಣ್ಣು ಅಲೆಯಾಗಿ, ಪದರ ಪದರವಾಗಿ ಶೇಖರವಾಗಿ ಸುಂದರ ದೃಶ್ಯಶಿಲ್ಪದಂತೆ ಉಲುರು ಮತ್ತು ಕಾಟ ಜೂಟಾ ಶಿಖರ ಸಮೂಹ ಎತ್ತರೆತ್ತರ ಬೆಳೆಯಿತು. ದೂರದಿಂದ ಇದು ನೀಲ ಶಿಲಾ ಶಿಖರಗಳಂತೆ ಕಣ್ಣಿಗೆ ಕಂಡರೂ ಅದರ ವಾಸ್ತವ ಬಣ್ಣ ಭೂಮಿಯ ಕೆಂಪು ಬಣ್ಣ.
ಉಲುರು ಮತ್ತು ಕಾಟಾ ಜೂಟಾದ ಈ ಶಿಲಾ ಶಿಖರಗಳ ಮೇಲೆ ಇರುವ ಪ್ರತಿ ಒಂದು ನೈಸರ್ಗಿಕ ಬದಲಾವಣೆಗಳ ಹಿಂದೆ ಮೂಲನಿವಾಸಿಗಳ ಮೌಖಿಕ ಪರಂಪರೆಯ ಕಥೆ ಇದೆ. ಅದನ್ನು ಹಾಡುಗಳ ಮೂಲಕ ಉಳಿಸಿಕೊಂಡು ಬರಲಾಗಿದೆ. ಅವರ ಹಿರಿಯರ ಸ್ಪಿರಿಟ್ ಇಲ್ಲಿಯೇ ಇದೆ ಎಂದು ಅವರು ನಂಬುತ್ತಾರೆ. ಅವರ ಬದುಕು ಮತ್ತು ನಂಬಿಕೆಯನ್ನು ಗಟ್ಟಿಗೊಳಿಸಲು ಹಾಗೂ ಆ ಪರಂಪರೆ ತಲೆಮಾರಿನಿಂದ ತಲೆಮಾರಿಗೆ ಹರಿಯಲು ಈ ಶಿಲಾ ವೈಚಿತ್ರ್ಯದ ಅಧ್ಬುತಗಳನ್ನು ಸಾಕ್ಷೀಕರಿಸುತ್ತಾರೆ. ಇದನ್ನು ಹಾಡಿನಕಥೆಗಳ ಮೂಲಕ ಮುಂದಿನ ತಲಮಾರಿಗೆ ದಾಟಿಸುತ್ತಾರೆ. ಹಿರಿಯ ಪುರುಷನ ತನ್ನ ಸೋದರಳಿಯನಿಗೆ ಎಲ್ಲವನ್ನೂ ತಿಳಿಸಿ ಮುಂದಿನ ತಲೆಮಾರಿನ ಯಜಮಾನನಾಗಿ ಸಜ್ಜುಗೊಳಿಸುತ್ತಾನೆ. ಇಲ್ಲಿ ಯಾವ ದೇವರ ಕಲ್ಪನೆಯೂ ಇಲ್ಲ. ಅಂತಹ ಹಲವು ಕಥೆಗಳು ಈ ಅದ್ಭುತ ಶಿಲಾ ಶಿಖರಕ್ಕೆ ಸಂಬಂಧ ಪಟ್ಟಂತೆ ಇವೆ. ಮುಖ್ಯವಾಗಿ ಇವರ ಹಾಡುಗಳು ಕಥೆಗಳು ಮತ್ತು ಇವರ ಕಲೆ (ಪೈಂಟಿಗ್) ಇವರ ಸಂಸ್ಕøತಿಯನ್ನು ಮುಂದಿನ ತಲೆಮಾರಿಗೆ ಹರಿಸುವ ವಾಹಕಗಳು. ಮೂಲನಿವಾಸಿಗಳಿಗೆ ಕಲೆಯೇ ಬದುಕು. ಈಗ ಅನ್ನ ನೀಡುವ ಕಾಯಕವೂ ಅದೇ.
ಮೂಲನಿವಾಸಿಗಳ ಭಾವನೆಗಳನ್ನು ನಂಬಿಕೆಗಳನ್ನು ಕೊನೆಗೂ ಗೌರವಿಸಿದ ಬಿಳಿಯರ ಸರಕಾರ 1326 ಚದರ ಕಿಲೋಮೀಟರ್ ವ್ಯಾಪ್ತಿಯ ನ್ಯಾಷನಲ್ ಪಾರ್ಕ್‍ನ್ನು ನಿರ್ಮಾಣ ಮಾಡಿತು. ಈ ಇಡೀ ರಾಷ್ಟ್ರೀಯ ಉದ್ಯಾನವನವು ವಿಶ್ವಪರಂಪರೆಯ ತಾಣದಲ್ಲಿ ಸೇರಲು ಉಲುರು-ಕಾಟಾ ಜೂಟಾ ಕಾರಣವಾಗಿದೆ. ಈ ಉದ್ಯಾನವನದ ನಿರ್ವಹಣೆಯ ಹೊಣೆ ಮೂಲನಿವಾಸಿಗಳಿಗೆ ವಹಿಸಿದ್ದಾರೆ. ಪ್ರವಾಸಿಗರಿಗೆ ಕಲೆಯ ಪರಿಚಯ ಮಾಡುತ್ತಾ ಕಲಾಕೃತಿಗಳನ್ನು ಮಾರುತ್ತಾರೆ.
ಮೂಲನಿವಾಸಿಗಳಲ್ಲದೆ ಇತರರು ಈ ಬಿಸಿಲು ಮರುಭೂಮಿಯಲ್ಲಿ ಬದಕಲು ಸಾಧ್ಯವಿಲ್ಲ. ಅವರಿಗೆ ಆಹಾರ ನೀರು ಬಿಡಿ ಬೆಂಕಿಯೂ ಸಿಗಲು ಸಾಧ್ಯವಿಲ್ಲ ಎನ್ನುತ್ತಾರೆ ಈ ಬಗ್ಗೆ ಅಧ್ಯಯನ ಮಾಡಿದವರು. ಮೂಲನಿವಾಸಿಗಳು ಬೆಂಕಿ ಇಲ್ಲದೆ ಬೆಂಕಿಯನ್ನು ಹೊತ್ತಿಸಬಲ್ಲರು. ನೀರಿನ ಮೂಲಗಳನ್ನು ಕಂಡು ಹಿಡಿಯ ಬಲ್ಲರು, ಹಾಗೂ ಆಹಾರದ ಮೂಲಗಳಾದ ಸಸ್ಯ, ಹಣ್ಣು ಗೆಡ್ಡೆಗಳ ಜಾಗವನ್ನು ಗುರುತಿಸ ಬಲ್ಲರು. ಹಾಗೂ ಪ್ರಾಣಿಗಳನ್ನು ಹಿಡಿಯಬಲ್ಲರು. ಹಲ್ಲಿಯ ಅನೇಕ ಪ್ರಬೇಧಗಳಿವೆ ಇಲ್ಲ. ಇಲ್ಲಿ ಬದುಕಿರುವ ಎಲ್ಲಾ ಪ್ರಾಣಿಗಳು ಇವರ ಆಹಾರದ ಮೂಲ. ಬೇಟೆಯಾಡಿ ಕಟ್ಟಿಗೆಗಳಿಂದ ಸುಟ್ಟು ತಿನ್ನುತ್ತಾರೆ. ಇಲ್ಲಿಯ ನಾಯಿ ಡೆಂಗೂವನ್ನೂ ತಿನ್ನುತ್ತಿದ್ದರು. ಈಗ ಅದು ರಕ್ಷಿತ ಪ್ರಾಣಿ.
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
1 ಕೆಲವು ಪ್ರಾಣಿಗಳು ಉರುಳು ಶಿಲಾ ಪರ್ವತದ ನೈಸರ್ಗಿಕ ಗುಹೆಯಲ್ಲಿ ಇರುತ್ತವೆ. ಆದರೆ ಎಲ್ಲಾ ಗುಹೆಗಳಿಗೆ ಮಾನವ ಹೋಗಲಾಗದು. ಒಂದು ಗುಹೆಯಲ್ಲಿ ಸಾವಿರಾರು ವರುಷಗಳ ಹಿಂದಿನ ಪ್ರಾಣಿಗಳ ಅಸ್ಥಿಪಂಜರ ಇವೆಯೆನ್ನುತ್ತಾರೆ. ಆ ಪ್ರಾಣಿಗಳು ಇಂದಿನ ಆಸ್ಟ್ರೇಲಿಯಾದಲ್ಲಿ ಇಲ್ಲ. ಅವು ನಶಿಸಿಹೋಗಿದೆಯೆನ್ನುತ್ತಾರೆ ವಿಜ್ಞಾನಿಗಳು.
2 ಅನಂಗು ಜನಾಂಗದ ನಂಬಿಕೆಯಲ್ಲಿ ಖುನಿಯ (ಹೆಬ್ಬಾವು) ಕಥೆ ಇದೆ. ಅದನ್ನು ಚಿತ್ರದಮೂಲಕ ಉಲುರು ಬಳಿ ಹಾಕಲಾಗಿದೆ. ಇಡ ಅವು ಉಲುರು ಕ್ಯಾಂಪ್‍ನಲ್ಲಿ ಇರುವಾಗ ‘ಲಿರು’ ಎಂಬ ವಿಷಪೂರಿತ ಯೋಧ ಹಾವುಗಳು ಖುನಿಯಾ ಮೇಲೆ ದಾಳಿ ಮಾಡುತ್ತವೆ. _ಹೀಗೆ ಈ ಹೋರಾಟದಲ್ಲಿ ಅವರ ದೇಹದ ಭಾಗಗಳು ಉಲುರು ಶಿಲಾ ಪರ್ವದತ ವಿವಿದೆಡೆಗಳಲ್ಲಿ ಕಾಣಬಹುದು ಎನ್ನುವುದು ಇಲ್ಲಿಯ ಅನಂಗು ಮೂಲನಿವಾಸಿಗಳ ನಂಬಿಕೆ.
3 ನಾವು ಹೆಲಿಕಾಪ್ಟರ್ ಮೂಲಕ ಏರಿಯಲ್ ವ್ಯೂ ನೋಡಿದಾಗ ಉಲುರು ತುದಿ ಅಂಗಳದಂತೆ ಕೆಪು ಬಣ್ಣದಿಂದ ಚಪ್ಪಟೆ ಕಾಣುತ್ತಿತ್ತು. ಹೆಲಿಕಾಪ್ಟರ್ ಬೆಟ್ಟದ ದೂರದಿಂದಲೇ ತಿರುವು ಮುರುವು ಸುತ್ತುತ್ತದೆ.
ಉಪಸಂಹಾರ:
ಭಾರತದಲ್ಲಿ ಆದರೆ ಇಂತಹ ಪ್ರಾಕೃತಿಕ ಅಚ್ಚರಿಗಳಿಗೆ ರಾಮಯಣ ಮಹಾಭಾರತಗಳನ್ನು ಜೋಡಿಸುತ್ತಾರೆ. ಇಲ್ಲಿಯ ಮೂಲನಿವಾಸಿಗಳು ಕ್ರೈಸ್ತ ಮತಕ್ಕೆ ಮತಾಂತರ ಆದರೂ ಕ್ರಿಸ್ತನನ್ನು ಇಲ್ಲಿಗೆ ಎಳೆದು ತರಲಿಲ್ಲ. ಧರ್ಮ ಬೇರೆ. ಸಂಸ್ಕøತಿ ಬೇರೆ ಎಂದು ತಮ್ಮ ಪರಂಪರೆಯ ಶ್ರದ್ದಾಕೇಂದ್ರವನ್ನು ಜೀವದ ಹಂಗು ತೊರೆದು ಕಾದಿಟ್ಟುಕೊಂಡರು.
ಡಾ. ಇಂದಿರಾ ಹೆಗ್ಗಡೆ
No comments:
Post a Comment