Sunday, September 29, 2019

ಅಮೆರಿಕಾ 2
ನಾವು ಕೆನಡಾದಿಂದ ಅಮೆರಿಕದ ಗಡಿ ದಾಟಿದ್ದು:

ನಾವು ಅಮೇರಿಕಾದ ನೂೈಜೆರ್ಸಿಯಿಂದ ಕೆನಡಾಕ್ಕೆ ಪ್ರವಾಸ ಹೋಗಿದ್ದು ಬಸ್ಸಿನಲ್ಲಿ.
ಚಿನೀಯರೇ ಹೆಚ್ಚಾಗಿ ಇರುವ ಅಮೆರಿಕದಲ್ಲಿ ಚಿನೀಯರು ಪ್ರವಾಸ ನಡೆಸುತ್ತಾರೆ. ಇದನ್ನು ಗೂಗಲ್ ನಲ್ಲಿ ಹುಡುಕಿ ಅವರನ್ನು ಸಂಪರ್ಕಿಸಿ ನಮ್ಮಿಬ್ಬರಿಗೂ ಎರಡು ಆಸನವನ್ನು ಚೀನೀಯರ ಆ ಬಸ್ಸಿನಲ್ಲಿ ಕಾದಿರಿಸಿದರು.

ಮಿಕ್ಕಿದ್ದು ಕಥೆಯಲ್ಲಿ ಮುಂದೆ ಹೇಳ್ತೀನಿ. ನೆನೆಪು ಆದರೆ ಮೂಡು ಆದರೆ, ಈಗ ತಕ್ಷಣ ನೆನಪಾದುದು ಕೇಳಿ.

ನಮ್ಮ ಬಸ್ಸು ಕೆನಡಾ ಸುತ್ತಿ ಸುತ್ತಿ ಮರಳಿತು. ಮರಳಿ ಅಮೆರಿಕಕ್ಕೆ ಕರೆದುಕೊಂಡು ಬರುವಾಗ ಎರಡು ರಾಜ್ಯಗಳ ಗಡಿ ಎದುರಾಯಿತು. ಅಲ್ಲಿ ಬಸ್ಸು ನಿಂತಿತು. ಡ್ರೈವರ್ ತನ್ನ ಮಾಮೂಲಿ ಕೆಲಸ ನಿರ್ವಹಿಸಲೆಂದು ಒಳಗೆ ಕಛೇರಿಗೆ ಹೋದ. ಅಷ್ಟೆತ್ತರದ ಕಮಾನುಗಳು  ಅಮೆರಿಕದ ಪ್ರವೇಶವನ್ನು ಸಾರುತ್ತಿತ್ತು. ನಾನು ಬಸ್ಸಿನಿಂದ ಇಳಿದು ಕ್ಯಾಮಾರಾ ಕಿಕ್ಕಕ್ಕಿಸಿದೆ. ಕೂಡಲೇ ಸೆಕ್ಯೂರಿಟಿ ಆಕ್ಷೇಪಣೆ ಮೌಖಿಕವಾಗಿ ಬಂತು. ಮಾತಿನ ಹಿಂದೆ ಆ ನರಮಾನಿಯೂ ಬರಬೇಕೆ? ಎಷ್ಟೆಂದರೂ ಬಿಳಿಯರ ಮುಂದೆ ನಾವು ಅಂಜುವುದು ಅಧಿಕ! ನಮ್ಮ ಹೆಗ್ಗಡೆಯವರ ರಕ್ತ ಮುಖಕ್ಕೆ ಸರಕ್ಕಂತ ಚಿಮ್ಮಿತು. ಅಷ್ಟರಲ್ಲಿ ಆತ “ಯಾರದು ಪೋಟೋಕ್ಲಿಕ್ಕಿಸಿದ್ದು ?” ಎಂದು ಬಸ್ಸಿನ ಬಳಿ ಬರಬೇಕೇ?
“ನಾನು. ಆದರೆ ಸ್ಸಾರಿ. ಪೋಟೋ ತೆಗೆಯಬಾರದೆಂದು ಗೊತ್ತಿರಲಿಲ್ಲ.” ಎಂದೆ.
“ ಸರಿ ಈಗಲೇ ಡಿಲಿಟ್ ಮಾಡು” ಎಂದ.
“ ಆಯ್ತು’’ ಉತ್ತರಿಸಿದೆ,
ಆತ ಬಳಿ ಹೋಗಿ ಕ್ಯಮರಾ ನೀಡಿದೆ.
“ ಓಕೆ. ಓಕೆ. “ ಅಂದ ಆತ.
ಆತ ಕೆನಡದವ.  ಓಕ ಓಕೆ ಎಂದು ಮರಳಿದ. ಬಸ್ಸಿನಲ್ಲಿ ಕೂತಿದ್ದ ಹೆಗ್ಗಡೆಯವರ ಮುಖ ಧುಮ್ ಧುಮ್ ಎನ್ನುತ್ತಿತ್ತು. ಹೆಂಡತಿ ಮಾಡುವ ತಪ್ಪು ಕೆಲಸಗಳು ಗಂಡನಿಗೆ ಮುಜುಗುರ ತರಿಸಿತ್ತದೆಯಲ್ಲವೆ? ನಾನೇನು ಅಂತಹ ಮಹಾಪರಾದ ಮಾಡಿದೆ? ಎಂದು ನಾನು ತರ್ಕಿಸಿದೆ.

ಮನೆಗೆ ಬಂದು ನೋಡಿದಾಗ ಎರಡು ಕ್ಲಿಕ್ ಗಳು ನನ್ನ ಕೆಲಸಕ್ಕೆ ಸಾಕ್ಷಿನೀಡಲೆಂದು ಅಡಗಿ ಕುಳಿತಿದ್ದುವು.

ನೋಡಿ ಅದನ್ನು ನೀವೀಗ!




No comments:

Post a Comment