Saturday, September 28, 2019

ಮಯೂರವರ್ಮ-ಮಹಾಬಲಿ- ಪರಶುರಾಮ

ಮಯೂರವರ್ಮನು ತುಳುನಾಡಿಗೆ ಬ್ರಾಹ್ಮಣರನ್ನು ಅಹಿಚ್ಛತ್ರದಿಂದ ಕರೆಸಿಕೊಂಡ ಎಂದು ತುಳುನಾಡಿನಲ್ಲಿ ಪ್ರಚಲಿತ ನಂಬಿಕೆ. ಹಾಗಿದ್ದಲ್ಲಿ ಮಯೂರವರ್ಮನ ಕಾಲದ ತುಳುನಾಡು ಎಂದರೆ ಘಟ್ಟದ ಮೇಲಿನ ಭಾಗವೇ ಇರಬಹುದು. ಇದನ್ನು ನಾವು ಎರಡು ದೃಷ್ಟಾಂತಗಳಿಂದ ವಾದಿಸಿಬಹುದು.

1 ಮಹಾಬಲಿಯನ್ನು ವಾಮನ ತುಳಿದುದು ಘಟ್ಟದ ಮೇಲಿನ ಈ ಭಾಗದಿಂದ ಎನ್ನುತ್ತದೆ. ಶಿಕಾರಿಪುರದ ಕೇದಾರೇಶ್ವರ ದೇವಾಲಯದ ಮುಂದಿರುವ ಫಲಕ.  “ಈ ಸ್ಥಳವನ್ನು ಪುರಾಣೇತಿಹಾಸಗಳ ಪ್ರಕಾರ ವಿಷ್ಣು-ತ್ರಿವಿಕ್ರಮನಿಂದ ಶಿಕ್ಷಿಸಲ್ಪಟ್ಟ ಬಲಿ ಚಕ್ರವರ್ತಿಯ ಮಾತೃನಗರವೆಂದೂ ಅನಾದಿ ರಾಜಧಾನಿಯೆಂದೂ
ಕರೆಯಲಾಗುತ್ತಿತ್ತು. ಮತ್ತು ಇದೇ ಅಲ್ಲದೆ ತನ್ನ ಧಾರ್ಮಿಕ ಪ್ರತಿಭೆಯಿಂದ ದಕ್ಷಿಣ ಕೇದಾರವೆಂದೂ ಪ್ರಸಿದ್ಧಿಯಾಗಿತ್ತು. ಬಳ್ಳಿಗಾವೆ, ಬೆಳಗಾಮಿ, ಬಳ್ಳಿಗಾಮೆ ಬಳ್ಳಿಗ್ರಾಮ ಮತ್ತು ಬಲಿಪುರವೆಂದು ಪ್ರಸಿದ್ಧಿ ಪಡೆದಿತ್ತು.”

2 ಇಲ್ಲೇ ಇರುವ ಇನ್ನೊಂದು ಫಲಕದಲ್ಲಿ ಪರಶುರಾಮನು ತಾನು ಕ್ಷತ್ರಿಯರಿಂದ ಗೆದ್ದ ರಾಜ್ಯವನ್ನು ಬ್ರಾಹ್ಮಣರಿಗೆ ಧಾರೆಯೆರೆದು ದಾನ ಕೊಟ್ಟ ಬಳಿಕ ದಾನ ನೀಡಿದ ಭೂಮಿಯಲ್ಲಿ ತಾನು ಇರಲಾರೆ ಎಂದು ಈ ಕ್ಷೇತ್ರದ ಬಳಿ ನಿಂತು ಕಡಲಿನತ್ತ ಕೊಡಲಿ ಬೀಸಿ ತನ್ನ ವಾಸಕ್ಕೆ ನೆಲೆ ಕೆಳಿದನಂತೆ. ಆಗ ತೆಂಕಲಿನ ಕನ್ಯಾಕುಮಾರಿಯಿಂದ ಬಡಗಿನ ಗುಜರಾತಿನ ಗೋಪಾರದವರೆಗೆ ಕಡಲು ಬೂಮಿಯನ್ನು ಬಿಟ್ಟು ಕೊಟ್ಟಿತಂತೆ.

ಹೀಗಿರುವಾಗ ಪರಶುರಾಮನಿಗಿಂತ ಮೊದಲು ಅವತಾರ ವೆತ್ತಿದ ವಾಮನ ಬಲಿಯನ್ನು ತುಳಿದಾಗ ತುಳುನಾಡು ಅಸ್ಥಿತ್ವದಲ್ಲಿ ಇರಲಿಲ್ಲ. ತುಳುನಾಡು ನೀರಿನಿಂದ ಅರ್ಥಾತ್ ಕಡಲಿನಿಂದ ಆವೃತವಾಗಿತ್ತು ಎಂದಾಯಿತು. ನಂತರದ ಅವತಾರದಲ್ಲಿ ಬಂದ ಪರಶುರಾಮನು ಕಡಲ ಕೆಳಗಿನ ಭೂಮಿಯನ್ನು ಪಡೆದ ಎಂಬುದು ಪುರಾಣ ಕಥೆ.  ಪುರಾಣವದರೂ ಕೆಲವೊಂದು ಸಂದರ್ಭದಲ್ಲಿ ಅದರಲ್ಲಿ ಐತಿಹಾಸಿಕ ವಿಷಯಗಳೂ ಅದರಲ್ಲಿ ಸೇರ್ಪಡೆ ಗೊಳ್ಳುವ ಸಾಧ್ಯತೆ ಇರುತ್ತದೆ.
ಹೀಗಾಗಿ ಪರಶುರಾಮನ ಕಾಲದಲ್ಲಿ ಘಟ್ಟದ ಬುಡದ ವರೆಗೆ ಆವರಿಸಿತ್ತೇ ಎಂದು ಜಿಜ್ಷಾಸೆ ಹುಟ್ಟುತ್ತದೆ.

ಕೆಲವೇ ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಪ್ರಣವೇಶ್ವರ ದೇವಾಲಯದ ಹಿಂದೆ ನಡೆದ ಉತ್ಖನನದಲ್ಲಿ ಅಹಿಚ್ಛತ್ರದಿಂದ 40 ಜನ ಯಜ್ಷವೇದಿ ಬ್ರಾಹ್ಮಣರನ್ನು ತಾಳಗುಪ್ಪದ ಪ್ರಣವೇಶ್ವರ ದೇವಾಲಯದಲ್ಲಿ ಯಜ್ಷವನ್ನು ನಡೆಸಲು ಕರೆಸಿಕೊಂಡ ಬಗ್ಗೆ ಇತಿಹಾಸಕಾರರು ಸಂಶೋಧನೆ ಮಾಡಿದ್ದಾರೆ. ಈ ಬಗ್ಗೆ ಅವರಿಗೆ ಇಲ್ಲಿ ಕೆಲವು ಕುರುಹುಗಳು ದೊರಕಿವೆ. ಈ ಕ್ಷೇತ್ರ ವೇದ, ವೇದಾಂತ, ತರ್ಕಶಾಸ್ತ್ರ ಇತ್ಯಾದಿಗಳನ್ನು ಗುರುಕುಲ ಮಾದರಿಯಲ್ಲಿ ಕಲಿಸಲಾಗುತ್ತಿತ್ತು. ಇಲ್ಲಿಯ ಕಂಬದ ಮೇಲಿನ 5ನೆಯ ಶತಮಾನದ ಸಂಸ್ಕøತ ಶಾಸನದಲ್ಲಿ ಮಯೂರವರ್ಮನು ಮಯೂರ ಶರ್ಮ ಎಂಬ ಬ್ರಾಹ್ಮಣ ಕುಲದಲ್ಲಿ ಜನಿಸಿದನೆಂದೂ ಹೇಳುತ್ತದೆ.
ಮಯೂರವರ್ಮನೇ ಮೂಲತಃ ಬ್ರಾಹ್ಮಣನಾಗಿರುವಾಗ ಅವನ ಕಾಲದಲ್ಲಿ ಈ ಬಾಗದಲ್ಲಿ ಬ್ರಾಹ್ಮಣರು ಇದ್ದರು ಎಂದು ನಾವು ನಂಬಬೇಕಾಗುತ್ತದೆ.
ಒಟ್ಟಿನಲ್ಲಿ ಈ ಅಧ್ಯಯನ ಎನ್ನುವುದ ಹುಡುಕಾಟವನ್ನು ಬಯಸುತ್ತದೆ. 

No comments:

Post a Comment