ಬತ್ತಿ ಹೋಯಿತೆ ನಿನ್ನೆದೆ ತುಳುವಪ್ಯೆ?
ಹತ್ತು ತಾಯಿಯ ಮಕ್ಕಳನ್ನು ಒಂದು
ಮಡಿಲಲ್ಲಿಟ್ಟು
ಎದೆಯ ನೊರೆ ಹಾಲು ಮೊಗೆ
ಮೊಗೆದು ಕುಡಿಸಿದ ಶಕ್ತಿ
ಅಪ್ಯೆ ತುಳುವಪ್ಯೆ!
ಮಾಯದ ಬೇಲಿ ಹಾಕಿ ಹೆಣ್ಣಿನ
ನೆರಿಗೆ ಗಂಡಿನ ಶಿರವ
ರಕ್ಷಿಸಿದ
ಶಕ್ತಿ ಅಪ್ಯೆ ತುಳುವಪ್ತೆ!
ಮತ ಬೇಧ ಇಲ್ಲದೆ ಮಸೀದಿಯ
ಭೇಟಿ ಮಾಡಿದೆ
ಶುಕ್ರವಾರದಂದು ನಿನ್ನಾಗಮನಕ್ಕಾಗಿ
ತೆರವು ಮಾಡುತ್ತಾರೆ ಮಸೀದಿಯನ್ನು ಬ್ಯಾರಿಗಳು.
ಶೇಖರಂಕರ’ನೊಂದಿಗೆ
ನಿನ್ನ ಮಾಯಯೆ ಭೇಟಿ !
ಬ್ಯಾರಿಗಳ
ಕಟ್ಟೆ ಪೂಜೆ ವೀಳ್ಯ ಮಲ್ಲ್ಲಿಗೆ
ನಿನಗಾಗಿ
ಇಲ್ಲಿ ಉದ್ಯಾವರದಲ್ಲಿ
ಅಲ್ಲಿ ಬಾರ್ಕೂರಲ್ಲಿ ಪಂಚಲಿಂಗೇಶ್ವರನ
ಓಕುಳಿಯಾಟದಲ್ಲಿ ಹಂಜಮಾನದವರ
ಯಜಮಾನಿಕೆ
ಬಂಬ್ರಾಣದ
ಬ್ಯಾರಿ ‘ಆಲಿ’ ಗೆ ತುಳುವರ
ಕೋಲ!
ಆಲಿ ಅಭಯ ನೀಡುತ್ತಾನೆ ಜೋಗದಲ್ಲಿ!
ಹತ್ತು ತಾಯಿಯ ಮಕ್ಕಳನ್ನು ಒಂದು
ಮಡಿಲಲ್ಲಿಟ್ಟು
ಎದೆಯ ನೊರೆ ಹಾಲು ಮೊಗೆ
ಮೊಗೆದು ಕುಡಿಸಿದ ತಾಯೆ
ಬತ್ತಿ ಹೋಯಿತೆ ನಿನ್ನೆದೆ ?
ಆನ ತರೆ ಕಡಿಯುತ್ತಾರೆ ಈಗ
ಇಲ್ಲಿ
ಪೊಣ್ಣ ನೆರಿ ಬಿಚ್ಚುತ್ತಾರೆ ಈಗ
ಇಲ್ಲಿ
ಹೆತ್ತ ಕರುಳ ಸಂಕಟ ಕೇಳದೇ
ನಿನಗೆ?
ಮಾಯವಾದೆಯ
ನೀನು ತುಳುವ ಮಣ್ಣಿನಿಂದ?
(1 ಪೊಣ್ಣ
ನೆರಿ=ಹೆಣ್ಣಿ ಸೀರೆಯ ನೆರಿಗೆ
2 ಆನ ತರೆ =ಗಂಡಿನ ತಲೆ
3 ಜೋಗ =ಲೌಕಿಕ)
13-1-2018
No comments:
Post a Comment