Monday, February 22, 2016

ನಾಗಲ್ಯಾಂಡ್‍ನ ರಾಜಧಾನಿ ಕೊಹಿಮಾದೊಳಗಿನ ಒಳಗಿನ ನೇಪಾಳಿ ಹಳ್ಳಿನಾಗಲ್ಯಾಂಡ್‍ನ ರಾಜಧಾನಿ ಕೊಹಿಮಾಗೆ ನೀವು ಪ್ರವಾಸ ಹೋದರೆ ಕ್ರೈಸ್ತೇತರರ ಮಂದಿರ ಮಸೀದಿ, ಬೌದ್ಧಾಲಯಗಳು ಇಲ್ಲಿ ಇಲ್ಲ ಎಂಬ ಉತ್ತರ ಸಿಗುತ್ತದೆ. ಅದು ನೀವಾಗಿ ವಿಚಾರಿಸಿದರೆ ಮಾತ್ರ ಉತ್ತರ. ಪ್ರವಾಸದ ಪಟ್ಟಿಯಲಿಯ್ಲೂ ಇದಾವುದೂ ಇಲ್ಲ. ಇಲ್ಲಿ ತಿರುಗಾಡ ಬೇಕಾದರೆ ಸ್ಥಳೀಯನೊಬ್ಬಜೊತೆಗೆ ಬೇಕೆಂದು ಸಲಹೆ ನೀಡಿದವ ನಮ್ಮ ಮಣಿಪುರದಿಂದ ನಮ್ಮನ್ನು ಕರೆ ತಂದ ಟ್ಯಾಕ್ಸಿ ಚಾಲಕ. ನಾವು ಉಳಕೊಂಡ ಹೊಟೇಲಿನವರಿಗೆ ಕೇಳಿದರೆ  ಮಹಿಳೇಯರೇ ನಡೆಸುವ ಕೊಹಿಮಾದ ಏಕೈಕ ಮೇಲ್ದರ್ಜೆಯ ಈ ಹೋಟೆಲಿನ ಸ್ವಾಗತ ಕಾರಿಣಿ ‘ಯಾರೂ ಗೈಡ್ ದೊರಕಲಾರರು ‘ ಎಂದಳು.
ಕೊನೆಗೆ ನಮ್ಮ ಪ್ರವಾಸ ರದ್ದಾಗಬಹುದೆಂದು ಬೆದರಿ ಟ್ಯಾಕ್ಸಿಯವ ಒಬ್ಬ ನೇಪಾಳಿಯನ್ನು ಕರೆತಂದ. ಆತ ಹಿಂದು ಎಂದು ತಿಳಿದೆವು. ಆತನಿಂದ ನೇಪಾಳಿ ಹಳ್ಳಿಯ ವಿಷಯ ತಿಳಿಯಿಯು.

ಇದೊಂದು ಪುಟ್ಟ ಹಳ್ಳಿ.  ಹೆಸರು ನೇಪಾಳಿ ಹಳ್ಳಿ.  ಇಲ್ಲಿ ವಾಸಿಸುವರಲ್ಲಿ ಬಹು ಸಂಖ್ಯಾತರು ನೇಪಾಳಿಗಳು  ನಾಗಾಲ್ಯಾಂಡ್‍ಗೆ  .ಸುಮಾರು 100 ವರ್ಷಗಳ ಹಿಂದೆ ನೇಪಾಳದಿಂದ ವಲಸೆ ಬಂದವರು. ಮತ್ತು ಕೆಲವರು ಬರ್ಮಾ ಕಡೆಯಿಂದ ಬಂದವರು. ಬರ್ಮಾ ನೇಪಾಳಿಗಳು. ಕೊಹಿಮಾ ನಗರದ ಹಿಂದೂಗಳು ಮತ್ತು ಇತರ ಭಾರತೀಯರು ನೇಪಾಳಿ ಹಳ್ಳಿಯಲ್ಲಿ ವಾಸ ಮಾಡುತ್ತಾರೆ. ಭಾರತದ ಯಾವುದೇ ಮೂಲೆಯಿಂದ ಬರುವ ಸರಕಾರಿ ಅಧಿಕಾರಿಗಳು, ನೌಕರರು ವರ್ಗವಾಗಿ ಇಲ್ಲಿಗೆ ಬಂದರೂ  ನೇಪಾಳಿ ಹಳ್ಳಿಯಲ್ಲಿ ಮನೆ ಮಾಡುತ್ತಾರೆ. ಗುತ್ತಿಗೆದಾರರು ಕೊಹಿಮಾಗೆ ಬಂದರೂ ನೇಪಾಳಿ ಹಳ್ಳಿಯಲ್ಲಿ ಮನೆ ಮಾಡುತ್ತಾರೆ.  ಆದರೆ ಇವರ ಮಡದಿ ಮಕ್ಕಳನ್ನು ಇಲ್ಲಿ ಇರಿಸುವುದು ಕಡಿಮೆ. ಅಸುರಕ್ಷತೆ ಇವರನ್ನು ಕಾಡುತ್ತದೆ.

ಆದರೆ ಪುರೋಹಿತರ ಕುಟುಂಬ  ಇತ್ತು. ಬಣ್ಣದ ಮಣಿಸರ ತೋರಿಸಿ ಇದು ತಮ್ಮ ಸಂಪ್ರದಾಯದ ತಾಳಿ ಎಂದರು

ರಾತ್ರಿ ಈ ಹಳ್ಳಿಯನ್ನು ಸುಮರು 15 ಮಂದಿ ಯುವಕರು ಸರದಿಯಂತೆ ಪಹರೆ ಕಾಯುತ್ತಾರೆ. ಹೀಗಾಗಿ ಇಲ್ಲಿ ಹಲವು ವರ್ಷಗಳಿಂದ ವಾಸವಿರುವ ನೇಪಾಳಿಗಳೂ (ಎಚ್ಚರದಿಂದ) ಸುರಕ್ಷತೆಯ ಜೀ ವನ ಸಾಗಿಸುತ್ತಿದ್ದಾರೆ.  ಸೈನಿಕ ಕೇಂದ್ರಗಳು  ಅಲ್ಲಲ್ಲಿ ಇವೆ. ಹೆದ್ದಾರಿಗಳಲ್ಲಿ ಮಾತ್ರವಲ್ಲ ಉಳಿದೆಡೆಯೂ ಸೈನಿಕರೆ ಪಹರೆ ಇದೆ.

ಕೊಹಿಮಾದ ನೇಪಾಳಿ ಹಳ್ಳಿಯ ಇರುವ  ಸುಮಾರು 20 ಸಾವಿರ ಜನರು ಮತ್ರ ಕೊಹಿಮಾದ  ಕ್ರೈಸ್ತೇತರರು. ಉಳಿದವರೆಲ್ಲ ಕ್ರೈಸ್ತರು.
ನೇಪಾಳಿಗಳು ಪ್ರಕಾರ ಅವರು ಇಲ್ಲಿಗೆ ಬಂದಾಗ ಈ ಪ್ರದೇಶ ಕೊರಕಲಿನ ದಟ್ಟ ಕಾಡಾಗಿತ್ತು. ಪಾರಾ ಮಿಲಿಟರಿಯವರು ಇಲ್ಲಿ ಕ್ಯಾಂಪ್ ಹಾಕಿದ್ದರು  ಹೀಗಾಗಿ ಕೊರಕಲಿನಲ್ಲಿಯೇ ಒಬ್ಬ ಸಾಧು ನೆಲೆಸಿದ್ದ.  ಸಾಧುಗೆ ಕನಸು ಬಿದ್ದು ದೇವಿ ಉಪಾಸನೆಗೆ ಪ್ರೇರಣೆ ಸಿಕ್ಕಿತ್ತು.  ಆತ ಭೂಮಿಯೊಳಗಿನಿಂದ ಮೂಡಿ ಬಂದಿರುವ ವಕ್ರ ಶಿಲೆಯಲ್ಲಿ ಒಂದನ್ನು ದುರ್ಗೆಗೂ ಇನ್ನೆರಡನ್ನು ಶಿವನಿಗೂ ಆರೋಪಿಸಿ ಉಪಾಸನೆ ಮಾಡಲಾರಂಭಿಸಿದ. ಸೈನಿಕರು ಯುದ್ಧಕ್ಕೆ ಹೋಗುವಾಗ ಈ ದೇವಿಗೆ ಪ್ರಾರ್ಥಿಸಿ ಹೋದರೆ ವಿಜಯಿಗಳಾಗಿ ಬರುತ್ತಿದ್ದರು ಎನ್ನುತಾರೆ ಇಲ್ಲಿ. ಹೀಗಾಗಿ ಇಲ್ಲಿಗೆ ಬಂದ ನೇಪಾಳಿ ಹಿಂದುಗಳು ಮಾನವರನ್ನು ಬೇಟೆಯಾಡುವ ಈ ಊರಲ್ಲಿ ನೆಲೆಸುವ ಧೈರ್ಯ ತೋರಿದ್ದರು. ಆದರೂ ನಾಗಾಗಳು ತೊಂದರೆ ನೀಡಿಲ್ಲವೆ? ಎಂದು ಪ್ರಶ್ನಿಸಿದರೆ ದೇವಿಯ, ಶಿವನ ಉಪಾಸನಾ ಶಿಲೆಯನ್ನು ಒಡೆಯಲು ಪ್ರಯತ್ನಿಸಿದ್ದರಂತೆ. ಆಗ ಅವರು ಇಲ್ಲಿಯೇ ವಾಂತಿ ಮಾಡಿ ಸತ್ತನಂತೆ. ಈಗ ಯಾರೂ ಇದರ ಗೊಡವೆಗೆ ಬರುವುದಿಲ್ಲ. ಆದರೆ ನವರಾತ್ರಿ ಜಾತ್ರೆ ನೋಡಲು ಎಲ್ಲರೂ ಬರುತ್ತಾರೆ ಎಂದರು ಪುರೋಹಿತರು.


ಪರ್ವತದ ಇಳಿಜಾರಿನ ಭೂಮಿಯಲ್ಲಿ ಒಂದು ದುರ್ಗೆಯ ಗುಡಿ ಇದೆ. ಅದಕ್ಕಿಂತ ಪುಟ್ಟದಾಗಿ ಕೊಂಚ ಎತ್ತರದಲ್ಲಿ ಶಿವನ ಗುಡಿ ಇದೆ. ಇರುವ ಇಕ್ಕಟ್ಟು  ಸ್ಥಳದಲ್ಲಿ ಶಿವನಿಗೆ ಗುಡಿ ಕಟ್ಟಿದ್ದಾರೆ. ಇವು ಪುಟ್ಟ ಏಕ ಕೋಣೆಯ ಗುಡಿಗಳು. ಶಿವನ ಗುಡಿಯ ಬಳಿಯ ಕೊರಕಲಿನಲ್ಲಿ ಇರುವ ಕಬಾಟಿನಂತಹ ಗೂಡು ಗಣೇಷ ಮತ್ತು óóಷಣ್ಮುಖರಿಗೆ ಗುಡಿಯಾಗಿದೆ. ಅಲ್ಲಿ ಇವರ ಶಿಲ್ಪಗಳನ್ನು ಪ್ರತಿಷ್ಠಾಪಿಸಿದ್ದಾರೆ. ಕೆಳಭಾಗದ ದುರ್ಗೆಯ ಗುಡಿಯ ಸ್ಥಳ ಸ್ವಲ್ಪ ವಿಶಾಲವಾಗಿದೆ. ದೇವಿ ಗುಡಿಯ ಪಕ್ಕದ ಹಾಲ್‍ನ ಮೇಲಿನ ಹಂತಹ ಮಂಟಪದಲ್ಲಿ ಅಯ್ಯಪ್ಪ ಫೋಟೋ, ಪುಟ್ಟಪರ್ತಿ ಸಾಯಿಬಾಬಾರ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತಿದ್ದಾರೆ. ಇವುಗಳೊಂದಿಗೆ ರಾಧಾ ಕೃಷ್ಣರ ವಿಗ್ರಹಗಳ ಪೂಜೆಯೂ ನಡೆಯುತ್ತಿದೆ. ಇವರು ಉಪಾಸಿಸುವ ದುರ್ಗೆಗೆ ಪ್ರಾಣಿ ಬಲಿ ಈಗಲೂ ಮುಂದುವರಿದಿದೆ.

ನವರಾತ್ರಿ ಉತ್ಸವಕ್ಕಾಗಿ ನಿರ್ಮಿಸಿದ ದುರ್ಗಾಲಯ ಚಾವಡಿಯಂತೆ ಬಯಲು ಬಾಗದಲ್ಲಿ ಇದೆ. ಮುಖ್ಯ ದೇವತೆಯಾಗಿ ದುರ್ಗೆಯ ಪ್ರತಿಮೆ ಇದೆ. ಪರಿವಾರ ದೇವತೆಗಳಾಗಿ ಲಕ್ಷ್ಮಿ ಶಾರದೆಯರ ಪ್ರತಿಮೆಗಳಿವೆ. ಇಲ್ಲಿಯ ಪಂಡಿತರ ಪ್ರಕಾರ ಇದು 64ನೆಯ ಶಕ್ತಿ ಪೀಠ. ಭಗವತಿಯ ಮೇಲಿನ ಭಾಗ  ಇಲ್ಲಿ ಬಿದ್ದಿದೆ ಎಂದು ಇವರು ನಂಬುತ್ತಾರೆ. ಇಲ್ಲಿ ಪೂಜೆ ಮಾಡಿದರೆ ಕಾಶಿಗೆ ತಲುಪುತ್ತದೆ ಎನ್ನುವುದು ಇಲ್ಲಿಯ ಭಕ್ತರ ನಂಬಿಕೆ.

ಇದರ ಮುಂದೆ ವಿಶಾಲ ಅಂಗಳ ಇದೆ. ಇಲ್ಲಿ ನವರಾತ್ರಿಗೆ ಕೋಣವನ್ನು ಕಡಿದು ಉತ್ಸವ ನೆರವೇರಿಸುತ್ತಾರೆ.
ನಾವುಹೋಗುವಾಗ ಕೋಣಗಳನ್ನು ಕಡಿಯಲು ಸಿದ್ಧತೆ ನಡೆದಿತ್ತು.

 ನೇಪಾಳಿ ಹಳ್ಹಿ ಹಿಂದೂ ಮಂದಿರ-ಇವೆಲ್ಲ
ನಾಗಾಲ್ಯಾಂಡ್  ಪ್ರವಾಸ ಪಟ್ಟಿಯಲ್ಲಿ ಹಾಕಿಲ್ಲ.

No comments:

Post a Comment