Sunday, February 21, 2016

ನಾಗಾಲ್ಯಾಂಡ್: ಆಹ್ಲಾದಕರ ಪ್ರಕೃತಿ .........




ಭಾರತದ ಈಶಾನ್ಯ ಪೂರ್ವ ಮೂಲೆಯ 8 ಸೋದರಿ ರಾಜ್ಯಗಳಲ್ಲಿ ನಾಗಲ್ಯಾಂಡ್ ಒಂದು.  ಎಲ್ಲಾ ವಿಧದಲ್ಲೂ ತನ್ನ ಅನನ್ಯತೆಯನ್ನು ಅಸ್ಮಿತೆಯನ್ನು ಉಳಿಸಿಕೊಂಡ ಸ್ವತಂತ್ರ ಮನೋಭಾವದ ವೀರ ಭೂಮಿ ಇದು. ಈ ಭೂಮಿಯ ವಿಸ್ತೀರ್ಣ 16,579 ಚದರ ಕಿಲೋಮೀಟರ್. 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ 1,980,602.
ಈಶಾನ್ಯ ರಾಜ್ಯಗಳಾದ ಮಣಿಲಪುರ, ತ್ರಿಪುರ, ಮಿಜೋರಾಂ ಪ್ರವಾಸ ಒಂದು ಸುತ್ತಿನಲ್ಲಿ ಹಾಕಿದ್ದೆವು. ನಾಗಲ್ಯಾಂಡ್ ಹೋಗಬೇಕಾದರೆ ಒಂದೋ ಅಸ್ಸಾಮ್ ಧೀಮಾಪುರ ಮೂಲಕ ಹೋಗಬೇಕು.  ಅಥವಾ ಕಲ್ಕತ್ತಾದಿಂದ ವಿಮಾನ ಮೂಲಕ ಮಣಿಪುರಕ್ಕೆ ಹೋಗಿ ಅಲ್ಲಿಂದ ಹೋಗಬೇಕು.

ಹೊಟೇಲ್ ಮುಂದೆ ನಾಗಾ hut 


ವಿಮಾನ ನಿಲ್ದಾಣದಿಂದ  ಟ್ಯಾಕ್ಸಿ ಮಾಡಿ ನಾವು ಇಂಪಾಲದ ಹೊಟೇಲ್ ಸೇರಿದೆವು. ನಾಗಾಲ್ಯಾಂಡ್‍ಗೆ ಇಲ್ಲಿಂದ ಟ್ಯಾಕ್ಸಿ ಮಾಡಿ ಹೋಗುವ ಯೋಜನೆ ಹಾಕಿ ಬಂದಿದ್ದೆವು. ಸಂಜೆ ಟ್ಯಾಕ್ಸಿ ಗೊತ್ತುಪಡಸಿಸಲು ಹೊರಟರೆ ಯಾರಿಂದಲೂ ಸಕಾರಾತ್ಮಕ  ಪ್ರತಿಕ್ರಿಯೆ ಬರಲಿಲ್ಲ.

ಟ್ಯಾಕ್ಸಿಯವನ ಕಛೇರಿ ಹುಡುಕಿ ಹೋದಾಗ ಅದು ಅರ್ಧ ಒಡೆದಿತ್ತು. ಆತ ನಮ್ಮನ್ನು ಒಳಗೆ ಕುಳ್ಳಿಸಿ ಅದ್ಯಾರಿಗೆ ಕರೆ ಕಳಿಸಿದನೋ, ಮರಳಿ ಬರುವಂತಿಲ್ಲ, ಅಲ್ಲಿ ಇರುವಂತಿಲ್ಲ. ಇಬ್ಬರು ಮಹಿಳೆಯರೊಂದಿಗೆ ಅವನ ಗುಹೆಯಂತ ಅಂತಃಪುರದಲ್ಲಿ ಕುಳಿತುಕೊಳ್ಳಲು ಆತಂಕ. ಕೊನೆಗೂ ಯಜಮಾನ ವ್ಯಕ್ತಿ ಬಂದ. ನಾಗಾಲ್ಯಾಂಡ್ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ.್ಮ ಆ ದಿನಗಳಲ್ಲಿ ಅಲ್ಲಿ ಅಂತಹ ವಾತಾವರಣ ಇತ್ತು. ದುಬಾರಿ ಬೆಲೆ. ಆದೂ ಬೆಳಿಗ್ಗೆ ಹೇಳುವುದಾಗಿ ಹೇಳಿದ. ಅಲ್ಲಿಂದ ಮರಳಿದ ನಾವು ಮತ್ತೆ ಹೊಟೇಲಿನವರಿಗೆ ಹೇಳಿ ಒಬ್ಬ ಡ್ರೈವರನ್ನು ಕರೆಯಿಸಿದೆವು. ಅವನೂ ದುಬಾರಿಯಾದರೂ ಕನಿಷ್ಟ ಗುರುತು ಪರಿಚಯ ಇಲ್ಲದ ನಾಡಿನಲ್ಲಿ ಆತಂಕದ ವಾತಾವರಣ ಇರುವಾಗ ಹಣದ ವಿಚಾರ ನಗಣ್ಯವಾಗುತ್ತದೆ. ಈ ತುರ್ತು ಕಾಲದಲ್ಲಿ ಪ್ರವಾಸ ಬಂದ ನಮ್ಮ ತಪ್ಪು ಹೀಗಾಗಿ ಈ ಪ್ರವಾಸ ದುಬಾರಿ ಆಯಿತು.


ಆದರೂ ಹೋಟೇಲ್ ನಲ್ಲಿ ನಿಂತ ನೋಡಿದರೆ “ ಇದರ ಮುಂದೆ ಊಟಿ ಕೊಡೈಕನಲ್ ಅತವಾ ಇನ್ಯಾವುದೇ ಪ್ರವಾಸಿ ತಾಣ ಏನೇನೂ ಅಲ್ಲ ಎನಿಸಿತು. ಇಲ್ಲಿಂದಲೆ ಎತ್ತರದ ಶಿಖರದ ಮೇಲೆ , ಇಳಿಜಾರು ಹಂತದಲ್ಲಿ ನಿಮಿಸಿರುವ ಇರುವ ಕೆಥ್ಡ್ರಾಲ್ ಚರ್ಚ್ ಆಕರ್ಷಿಸುತ್ತಿತ್ತು. ಎಡದಿಕ್ಕಿಗಡ ದೂರದಲ್ಲಿ ನಾಗಾಲ್ಯಾಂಡ್ ಶಾಸಕರ ಭವನ ತನ್ನ ಭವ್ಯತೆಯಿಂದ ನಾಗಾಲ್ಯಾಂಡ್‍ನ ಪ್ರಕೃತಿಕ ಸೌಂದರ್ಯವನ್ನು ಕೆಣಕುವಂತಿತ್ತು. ನಮ್ಮ ಹೊಟೇಲಿನ ಇಳಿಜಾರಿನಲ್ಲಿ ನಾಗಾ ಪೀಪ್‍ಲ್ಸ್ ಪಾಟಿ ಕಟ್ಟಡ. ಅದರಲ್ಲಿ ಹುಂಜದ ಚಿತ್ರ ಹೊತ್ತ ಧ್ವಜ ಹಾರಾಡುತ್ತಿತ್ತು.



 ನಾವು ಹೋಗಿದ್ದು ಶಾನಿವಾರ ಸಂಜೆ ಮೂರು ಗಂಟೆಗೆ. ಆಗಲೇ ಕತ್ತಲಾವರಿಸುತ್ತಿತ್ತು.
ಇಲ್ಲಿಂದ ಎತ್ತ ನೋಡಿದರೂ ಮಂಜು ಮುಸುಕಿದ ಬೆಟ್ಟಗಳು. ಅವುಗಳ ವರ್ಣ ವಿನ್ಯಾಸ ನನಗಂತೂ ವಿವರಣೆಗೆ ದಕ್ಕುವುದಿಲ್ಲ.




ಹೊಟೇಲ್ ಸಿಬ್ಬಂದಿಗೆ ಗೈಡ್ ಕೇಳಿದಾಗ ಅವರು ಇಲ್ಲಿ ಗೈಡ್ ಸಿಗುವುದಿಲ್ಲ ಎಂದರು. ಆದರೆ ವಿದೇಶಿಗಳ ಒಂದು ದಂಡು ನಮ್ಮ ಹೊಟೇಲಿನಲ್ಲಿ ಉಳಕೊಂಡಿತ್ತು. ಅವರಿಗೆ ಅಲ್ಲಿಯ ಸರಕಾರವೇ ಆತಿಥ್ಯ ನೀಡಿತ್ತು.

ಶಾಸಕರ ಭವನ


ಕೊನೆಗೆ ನಮ್ಮ ಟ್ಯಾಕ್ಸಿಯವನು ಎಲ್ಲೋ ಸುತ್ತಿ ಒಬ್ಬ ನೇಪಾಲಿಯನ್ನು ಕರೆದು ತಂದ.

ಇಲ್ಲಿ ಬುಡಗಟ್ಟು ಮುಖಂಡನೇ ತನ್ನ ಕ್ಷೇತ್ರ ಪರಿಧಿಗೆ ರಾಜ. ಆತನೇ ನಿರ್ಣಾಯಕ. ಉದಾಹರಣೆಗೆ ಮೋನ್ ಜಿಲ್ಲೆಯ ಶ್ಯಾಂಗು ಹಳ್ಳಿಯಲ್ಲಿ ‘ಚು ಬಸ್ತಿ’ಯ ‘ಅಂಗ್’ ಎನ್ನುವವನು ಮುಖ್ಯಸ್ಥ. ಹೀಗಾಗಿ ಬುಡಗಟ್ಟು ಮುಖಂಡನ ಭೂಮಿ ಯಾವ ದೇಶದಲ್ಲಿ ಇದೆ ಎನ್ನುವುದು ಮುಖ್ಯ ಅಲ್ಲ. ಅದು ಅವನ ಭೂಮಿ ಎನ್ನುವುದು ಬುಡಗಟ್ಟು ಜನಾಂಗಗಳಿಗೆ ಮುಖ್ಯ. ಯಾವ ದೇಶದ ನಿಯಮಗಳಿಗೂ ಬದ್ಧರಾಗಲು ಇಲ್ಲಿಯ ನಾಗಾ ಬುಡಗಟ್ಟುಗಳು  ಸಿದ್ಧರಿಲ್ಲ.  ಹೀಗಾಗಿ ನಾಗಾಲ್ಯಾಂಡ್ ಭೂಶಿಖರದ ಪೂರ್ವದ ಭಾಗದ ಇಳಿಜಾರಿನ ಸ್ವಲ್ಪಭಾಗ ಈಗಲೂ ಬರ್ಮಾದೊಳಗಿದೆ. ಒಂದು ಹಳ್ಳಿಯ ಮುಖಂಡನ ಕೆಲವು ಭೂಮಿ ಬರ್ಮಾ ದೇಶಕ್ಕೆ ಸೇರಿದೆ.

ನಾಗಾಲ್ಯಾಂಡ್ ಬರ್ಮಾದ ನೇರ ಆಡಳಿತದಲ್ಲಿತ್ತು.  ಸುಮಾರು 1816ರಿಂದ ಅಸ್ಸಾಂ ಮತ್ತು ನಾಗಾಲ್ಯಾಂಡ್ ಬರ್ಮಾದ ದಬ್ಬಾಳಿಕೆಯಿಂದ ಪ್ರಕ್ಷುಬ್ದ ಸ್ಥತಿಯನ್ನು ತಲುಪಿತ್ತು. 1862ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಅಸ್ಸಾಮನ್ನು ತನ್ನ ಆಡಳಿತ ವ್ಯಾಪ್ತಿಗೆ ಪಡೆದು ಕ್ರಮೇಣ ಇಂದಿನ ನಾಗಾ ಪರ್ವತ ಶ್ರೇಣಿಗಳಿಗೂ ತನ್ನ ಅಧಿಪತ್ಯವನ್ನು ವಿಸ್ತರಿಸಿತ್ತು. 1892ನಲ್ಲಿ  ಖಿueಟಿsಚಿಟಿg ಚಿಡಿeಚಿ ಉಳಿದು ಇತರೆ ಎಲ್ಲಾ ಪ್ರದೇಶಗಳನ್ನು ತನ್ನ ಸಾರ್ವಭೌತೆಯಡಿ ಈಸ್ಟ್ ಇಂಡಿಯಾ ಕಂಪೆನಿ ತಂದರಜ್ಯೀ ಭಾಗÀದ ಎಲ್ಲ ರಾಜ್ಯಗಳನ್ನು ಸೇರಿಸಿ  ‘ಅಸ್ಸಾಂ ರಾಜ್ಯ’ ಮಾಡಿತು.  ಆದರೆ ಭಾರತ ಸ್ವತಂತ್ರ ಆದಾಗ ನಾಗಲ್ಯಾಂಡ್ ಭಾರತದ ಜೊತೆ ವಿಲೀನಗೊಳ್ಳಲು ಸಿದ್ಧರಿಲಿಲ್ಲ.
ನಾಗಾ ಎನ್ನುವ ಪದದ ಮೂಲ ‘ನಾಕಾ’. ಬರ್ಮಾ ಭಾಷೆಯಲ್ಲಿ ‘ನಾಕಾ’ ಎಂದರೆ ಛೇದಿಸಿದ (ಓಚಿಞಚಿ iಟಿ) ಕಿವಿಯವರು ಎಂದರ್ಥ. ಇವರು ಬೆತ್ತಲೆಯಾಗಿದ್ದುದನ್ನು ಕಂಡ ಬ್ರಿಟಿಷರು ಇವರನ್ನು ಓಚಿಞeಜ  ಎಂದು ಕರೆದರು.  ಮುಂದೆ ಹಿಂದಿಯ ನಂಗಾ ಪದ ನಾಗಾ ಆಯಿತು ಎನ್ನುವ ಮಾಹಿತಿ ಇದೆ. ನಾಗಾಗಳು ಮನುಷ್ಯರನ್ನು ಬೇಟೆಯಾಡುವ  ನರಮಾಂಸ ಭಕ್ಷಕರಾಗಿದ್ದವರು. ಈಗಲೂ ಬೆತ್ತಲೆ ನಾಗಾಗಳಿರುವ ಮೋನ್ ಜಿಲ್ಲೆಯಲ್ಲಿ ‘ಹೆಡ್ ಹಂಟಿಗ್’ ನಡೆಯುತ್ತಿದೆ; ನರಮಾಂಸಭಕ್ಷಣೆ ಮುಂದುವರಿದಿದೆ ಎನ್ನುತ್ತಾರೆ.
ನಾಗ ಮುಖಂಡರು ಗಾಂಧೀಜಿಯನ್ನು ಭೇಟಿಯಾಗಿದ್ದರು. ಗಾಂಧೀಜಿ ಇವರ ಮುಖಂಡರೊಡನೆ ನಡೆಸಿದ ಸಂಧಾನದಲ್ಲಿ ಇವರ ಸ್ವಾಯತ್ತತೆಗೆ ಭಂಗ ತರುವುದಿಲ್ಲ ಎಂಬ ವಾಗ್ಧಾನ ಇತ್ತು. ‘ನೀವು ಭಾರತದಂತೆ ಸ್ವತಂತ್ರರು. ಯಾರೂ ನಿಮ್ಮ ಸ್ವಾಯತ್ತತೆಯನ್ನು ಕಸಿಯಲಾರರು ಆದರೆ ಭಾರತದೊಂದಿಗೆ ಸ್ನೇಹದಿಂದಿರಿ’ ಎಂಬ ಮಾಹಿತಿ ಇದೆ. ನಾಗಾಗಳು ಇಚ್ಚಿಸಿದಲ್ಲಿ ಮಾತ್ರ ನಾಗಾಲ್ಯಾಂಡ್ ಭಾರತದ ಭಾಗವಾಗಬಹುದು ಇಲ್ಲವಾದಲ್ಲಿ ತಾನು ಜೀವಿಸಿರುವವರೆಗೆ ನಾಗಾಲ್ಯಾಂಡ್ ಸ್ವತಂತ್ರವಾಗಿವಾಗಿ ಇರುತ್ತದೆ ಎಂದಿದ್ದರು.  (ಭಾರತ ಪೋರ್ಸ್ ಮಾಡಿದರೆ ಒಭ ನಾಗಾನನಿಗೆ ಗುಂಡಿಕ್ಕುವ ಮೊದಲು ನನಗೆ ಗುಂಡಿಕ್ಕಲು ಹೇಳುವೆ ಎಂದಿದ್ದರಂತೆ.) ಗಾಂಧೀಜಿ ನೀಡಿದ ಭರವಸೆಯಿಂದ 8 ಮಂದಿಯ ನಾಗಾ ಕಮಿಟಿಯವರು ಭಾರತದೊಂದಿಗೆ ವಿಲೀನವಾಗಲು ಒಪ್ಪಿದರು.

ನೇಪಾಲಿ ಗೈಡ್ ಜೊತೆ ಎಸ್. ಆರ್. ಹೆಗ್ಡೆ

ಭಾರತಕ್ಕೆ ನಾಗಾಲ್ಯಾಂಡ್ ವಿಲೀನವಾದರೂ ಕೆಲವು ವಿಶೇಷಾಧಿಕಾರಗಳನ್ನು ಸಂವಿಧಾನದಲ್ಲಿ ಈ ರಾಜ್ಯಕ್ಕೆ ಕಲ್ಪಿಸಿಕೊಡಲಾಗಿದೆ. ನಾಗಗಳ ಸ್ವತಂತ್ರ ಬದುಕಿನ ಹಕ್ಕನ್ನು ಭಾರತ  ಕಸಿಯದಂತೆ ಎಚ್ಚರ ವಹಿಸಿಲಾಯಿತು ಆಯಾ ಬುಡಗಟ್ಟುಗಳ ಸ್ವಾಯತ್ತ ಅಧಿಕರವನ್ನು ಅವರಲ್ಲಿ ಉಳಿಸಿಕೊಡಲಾಗಿದೆ. ಬುಡಗಟ್ಟುಗಳವರೇ ಆರಿಸಿರುವ ಸ್ಥಳೀಯ ಕೌನ್ಸಿಲ್ ಇದೆ. ಪ್ರತಿಯೊಂದು ಬುಡಗಟ್ಟುಗಳು ಶ್ರೇಣೀಕೃತ ಮಂಡಳಿಗಳನ್ನು ಹೊಂದಿವೆ. ತಮ್ಮ ಬುಡಗಟ್ಟುಗಳ ಕಲಹ, ನ್ಯಾಯ ತೀರ್ಮಾನಗಳನ್ನು ಇಂತಹ ಶ್ರೇಣೀಕೃತ ಮಂಡಳಿಗಳು ನೋಡಿಕೊಳ್ಳುತ್ತವೆ. (ಭಾರತ ಸ್ವಾತತಂತ್ರ್ಯ ಆಗುವವರೆಗ ಇಂತಹ ವ್ಯವಸ್ಥೆ ತುಳುನಾಡಿನಲ್ಲೂ ಇತ್ತು. (ಡಾ.ಇಂದಿರಾ ಹೆಗ್ಗಡೆ 2009) ಒಟ್ಟು 14 ನಾಗಾ ಬುಡಗಟ್ಟುಗಳಿವೆ.  ಎಲ್ಲಾ ಬುಡಗಟ್ಟುಗಳವರು ಒಬ್ಬರಿಂದೊಬ್ಬರು ಭಿನ್ನ ಸಂಸ್ಕøತಿಯವರು ಮತ್ತು. ಸ್ವತಂತ್ರ ಪ್ರವೃತ್ತಿಯವರು.
ಈಗಲೂ ನಾಗಾಗಳ ಪ್ರತಿ ಬುಡಗಟ್ಟಿಗೂ ತನ್ನದೇ ಆಡಳಿತ ಮಂಡಳಿ ಇದೆ. ಖಿueಟಿsಚಿಟಿg  ಜಿಲ್ಲೆಯವರಿಗೆ ವಿಶೇಷ ಆಡಳಿತ ಕೌನ್ಸಿಲ್ ಇದೆ. ನಾಗಾಗಳು ಸರ್ಕಾರದ ಕಾನೂನನ್ನು ಮಾನ್ಯ ಮಾಡುವುದು ಕಡಿಮೆ. ನಾವು ಕಂಡಂತೆ ಗಾಂಧಿ ಜಯಂತಿಯ ಯಾವ ಆಚರಣೆಗಳೂ ಇಲ್ಲಿ ಇಲ್ಲ. ಸ್ವಾತಂತ್ರ್ಯ ದಿನಾಚರಣೆ ಇವರು ಆಚರಿಸುವುದಿಲ್ಲ. ಇವರು ಎಂದೂ ಯಾರ ಅಧೀನವಾಗಿಯೂ ಇರಲಿಲ್ಲ. ಬ್ರಿಟಿಷರ ಆಡಳಿತಕ್ಕೂ ಇವರು ಬಗ್ಗಿರಲಿಲ್ಲ. ನಾಗಾಗಳು ಹುಟ್ಟು ವೀರರು, ಧೈರ್ಯಶಾಲಿಗಳು, ನಿರ್ದಾಕ್ಷಿಣ್ಯರು. ಆದರೆ ತಮ್ಮ ಬುಡಗಟ್ಟು ನಾಯಕನ ಮಾತು ಮೀರಿ ನಡೆಯುವವರಲ್ಲ. ನಾಯಕ ನೀಡುವ ಪರಂಪರೆಯ ಪದ್ಧತಿಯ ನ್ಯಾಯ ತೀರ್ಮಾನಗಳನ್ನು ಈಗಲೂ ಒಪ್ಪುತ್ತಾರೆ.

ತಾವು ಭಾರತೀಯರಲ್ಲ ನಾಗಾಗಳು ಎನ್ನುವ ಇವರ ಪ್ರಕಾರ ನಾಗಾಲ್ಯಾಂಡ್ ನಾಗಗಳದ್ದೇ. ನಾಗ ಒಂದು ಸ್ವತಂತ್ರ ರಾಷ್ಟ್ರವಾಗಬೇಕೆಂದು ‘ನಾಗ ಪೀಪುಲ್ಸ್ ಪ್ರೆಂಟ್’ ಈಗಲೂ ಹೋರಾಡುತ್ತಿದೆ. ನಾಗ ಮುಖಂಡ ನಾಗಾಲ್ಯಾಂಡನ್ನು ಭಾರತಕ್ಕೆ ಹಸ್ತಾಂತರ ಮಾಡಿದ್ದು ಅನಂತರ ಕಾಲದಲ್ಲಿ. ಮಹಾತ್ಮಾ ಗಾಂದಿಜೀಯವರು ಬದುಕಿದ್ದಾಗ ನಾಗಾ ಮುಖಂಡನಲ್ಲಿ “10 ವರ್ಷಗಳ ಕಾಲ ಭಾರತದೊಳಗೆ ಸೇರಿ ನೋಡಿ. ಭಾರತೊಂದಿಗೆ ಒಂದಾಗಿ ಇರುವುದು ಸರಿಯೆನಿಸದಿದ್ದಲ್ಲಿ ಮತ್ತೆ ನಿಮ್ಮದೇ ರಾಷ್ಟ್ರ ನಿರ್ಮಾಣ ಮಾಡಿ ಎಂದರಂತೆ. ಈ ಸಲಹೆಗೆ ಸಮ್ಮತಿಸಿ ನಾಗಾ ಜನರ ಭೂಮಿಯನ್ನು ಭಾರತದೊಳಗೆ ಸೇರಿಸಿದ ಮುಖಂಡನನ್ನೇ ಗುಂಡಿಕ್ಕಿ ನಾಗಾಗಳು ಕೊಂದು ಹಾಕಿದ್ದರು. ಆವತ್ತಿನಿಂದಲೂ ನಾಗಾ ಭೂಮಿಯನ್ನು ಭಾರತದಿಂದ ಬೇರೆಯಾಗಿಸಬೇಕೆಂಬ ಹೋರಾಟ ನಡೆಯುತ್ತದೆ. ಐತಿಹಾಸಿಕವಾಗಿ, ಭೌಗೋಳಿಕವಾಗಿ ಮತ್ತು ಸಾಂಸ್ಕøತಿಕವಾಗಿ ನಾಗಾಲ್ಯಾಂಡ್ ಭಾರತದಿಂದ ಬೇರೆಯೇ ಆದ ದೇಶ, ನಾಗಾ ಯಾವತ್ತೂ ಭಾರತದ ಭಾಗವಾಗಿರಲಿಲ್ಲ ಎನ್ನುವುದು ಇವರ ಮುಖಂಡರಲ್ಲೊಬ್ಬನಾದ ಫಿಝೋನ ವಾದವಾಗಿತ್ತು. ಹಿಂದೂಗಳನ್ನು ಪ್ರತಿನಿಧಿಸುವ ಭಾರತೀಯರು ಹೊರಗಿನವರು. ಇವರು ವರ್ಗರಹಿತ ನಾಗ ಜನಾಂಗವನ್ನು ನಾಶಮಾಡುತ್ತರೆ ಎನ್ನುವುದು ಅವರ ಅಪನಂಬಿಕೆಗಳಲ್ಲಿ ಒಂದು. (ಓ.ಓ.ಅ. )”

‘ನಮ್ಮಲ್ಲಿ ಜಾತೀಯತೆ ಇಲ್ಲ. ಜಾತಿಯ ತಾರತಮ್ಯ ಇರುವ  ಬ್ರಾಹ್ಮಣ ಧರ್ಮದ ಆಧಾರದ ಮೇಲೆ ಸಂವಿಧಾನ ರಚಿಸಲಾಗಿದೆ. ಹೀಗಾಗಿ ತಮ್ಮಂತಹ ಬುಡಗಟ್ಟು ಜನಾಂಗಗಳಿಗೆ ಭಾರತೀಯ ಸಂವಿಧಾನವನ್ನು ಒಪ್ಪಲಾಗದು’ ಎನ್ನುವ ಧೋರಣೆ ಇವರದು.
ಭಾರತಕ್ಕೆ ನಾಗಲ್ಯಾಂಡ್ ವಿಲೀನ ಗೊಂಡಾಗ ಈಶಾನ್ಯ ಭಾರತದ ಇತರ ರಾಜ್ಯಗಳಂತೆ ನಾಗಲ್ಯಾಂಡ್ ಅಸ್ಸಾಂ ರಾಜ್ಯ ಎಂದು ಕರೆಸಿಕೊಂಡಿತ್ತು. 1956ರಲ್ಲಿ ಭಾರತ ವಿಮೋಚನಾ ರಂಗದ ಬೆಳವಣಿಗೆಯಾಯಿತು. 1963ರಲ್ಲಿ ನಾಗಲ್ಯಾಂಡ್ ಅಸ್ಸಾಂನಿಂದ ಪ್ರತ್ಯೇಕಗೊಂಡು  ಭಾರತದ 16ನೆಯ ರಾಜ್ಯವಾಯಿತು. ಆದರೆ ನಾಗಾಗಳ ಆಕಾಂಕ್ಷೆಗಳನ್ನು ಮತ್ತು ಹಕ್ಕುಗಳನ್ನು ಭಾರತ ದಮನ ಮಾಡಿದೆ ಎನ್ನುವುದು ನಾಗಾಗಳ ಆರೋಪ. “ಭಾರತೀಯರನ್ನು ಬ್ರಿಟಿಷರು ಕಡೆಗಳಿಸಿದುದಕ್ಕೆ ಭಾರತ ಸ್ವತಂತ್ರವಾಯಿತು ಹಾಗೆಯೇ ನಮ್ಮನ್ನು ಭಾರತ ಕಡೆಗಣಿಸುತ್ತಿದೆ. ನಾವೂ ಸ್ವತಂತ್ರ ರಾಗಬೇಕು. ನಮ್ಮನ್ನು ಭಾರತಕ್ಕೆ ಒಪ್ಪಿಸಿದ್ದು ಬ್ರಿಟಿಷ್ ಸರಕಾರ.” ಎಂಬುದು ಕೆಲ ನಾಗಾ ಜನರ ವಾದ.  ‘ನಾಗ ಪೀಪುಲ್ಸ್ ಪ್ರೆಂಟ್ ’ಈಗ ಅಧಿಕಾರದಲ್ಲಿರುವ ಪಕ್ಷ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಇದ್ದರೂ ಅದು ನಗಣ್ಯ. ಕಾಶ್ಮೀರಕ್ಕಿಂತಲೂ ಹೆಚ್ಚು ಇಲ್ಲಿ ಸೈನಿಕರ ಸರ್ಪಗಾವಲು ಎಂದು ನನಗನಿಸಿತ್ತು. ಶ್ರೀನಗರದಲ್ಲಿ ನಾವು ಸೈನಿಕರನ್ನು ನಿರೀಕ್ಷಿಸಿ ಹೋಗಿದ್ದೆವು. ಇಲ್ಲಿ ನಿರೀಕ್ಷಸಿರಲಿಲ್ಲ. ಆದರೂ ಪ್ರವಾಸಿಗರಿಗೆ ಆತಂಕ ತಪ್ಪಿಲ್ಲ. ಹೊಸಮುಖಳಗಳನ್ನು ಕಂಡರೆ ಅಪಹರಿಸುತ್ತಾರೆ. ಒಬ್ಬ ಕಂಟ್ರಾಕ್ಟರನ ಕಿರಿಯ ಸೋದರ ರಜೆಯಲ್ಲಿ ಅಣ್ಣನ ಮನೆಗೆ ಬಂದಿದ್ದನಂತೆ. ಆತನನ್ನು ಅಪಹರಿಸಿದ ನಾಗಗಳು 3ಲಕ್ಷ ರೂಪಾಯಿ ಕೇಳಿದರಂತೆ. ಅಷ್ಟನ್ನು ಕೊಟ್ಟು ತಮ್ಮನನ್ನು ಬಿಡಿಸಿದ ಅಣ್ಣ ನುಡಿದನಂತೆ, ‘ ನೀನು ಇನ್ನೆಂದೂ ಇಲ್ಲಿಗೆ ಬರಬೇಡ. ನಾನು ಇಲ್ಲಿಗೆ ಬಂದು ಹಲವು ವರ್ಷಗಳಾಯಿತು. ನನ್ನ ಮುಖ ಪರಿಚಯ ಹೆಚ್ಚನವರಿಗೆ ಇದೆ. ಆದರೆ ನಿನ್ನಂತಹ ಹೊಸ ಮುಖಗಳನ್ನು ಅವರು ಹೀಗೆಯೇ ಅಪಹರಿಸುತ್ತಾರೆ’ ಎಂದು ಗ್ವಾಹಟಿಯ ಹುಡುಗನನ್ನು ಮರಳಿ ಕಳುಹಿಸಿದರಂತೆ. (ಅಪಹರಣಕ್ಕೆ ಒಳಗಾದ ಯುವಕ ಅರುಣಾಚಲದ ಬಂಬ್‍ಡಿಲ್ಲಾ ಜಿಲ್ಲೆಯ  ಹೊಟೇಲ್‍ನಲ್ಲಿ ಅರುಣಾಚಲ ಪ್ರವಾಸದಲ್ಲಿ ಸಿಕ್ಕಿದ. ‘ಶಿಪಾಯಿ ಪೋಂಗ್’ನಲ್ಲಿ ಸ್ವಾಗತಕಾರನಾಗಿ ಇದ್ದ. ಆತ ಕೆಲವು ದಿನ ಬೆಂಗಳೂರಲ್ಲಿ ನೌಕರಿಯಲ್ಲಿದ್ದು ಕನ್ನಡ ಕಲಿತಿದ್ದ. ಭಾಷೆ ಬಂಧುತ್ವ ಅವನನ್ನು ಮನಸ್ಸು ಬಿಚ್ಚಿ ಮಾತನಾಡಿಸಿತು. ಆತ ತಾನು ಅಪಹರಣಕ್ಕೆ ಒಳಗಾದ ವಿಷಯವನ್ನು ವಿವರವಾಗಿ ಹೇಳಿದ.)

ನಾಗಾಲ್ಯಾಂಡ್‍ನಲ್ಲಿ ಅಪಘಾತಗಳು ಯಾರಿಂದ ಆದರೂ ಹೊಡೆತ ತಿನ್ನುವವರು ಹೊರ ರಾಜ್ಯದವರು. ಪೊಲೀಸ್ ವ್ಯವಸ್ಥೆ ಹೆಸರಿಗೆ ಮಾತ್ರ. ಇಲ್ಲಿ ಒಂದು ರೀತಿಯ ಬಿಗುವಿನ ವಾತಾವರಣ ಇದೆ. ಓಡಾಡಲು ಆತಂಕವಾಗುತ್ತದೆ. ಟ್ಯಾಕ್ಸಿಗಳವರು ನಾಗಾಗಳ ಬಗ್ಗೆ ನಮಗೆ ಭಯ ಹುಟ್ಟಿಸುತ್ತಾರೆ. ಕೆಲವೇ ಟ್ಯಾಕ್ಸಿಗಳವರು ಕೊಹಿಮಾಗೆ ಪ್ರವೇಶ ಪಡೆಯುತ್ತಾರೆ. ಗ್ವಾಹಟಿಯಿಂದ ದಿಮಾಪುರದವರೆಗೂ ಹೋಗಲು ಎಲ್ಲ ಟ್ಯಾಕ್ಸಿಯವರು ಒಪ್ಪುವುದಿಲ್ಲ. ಹಾಗೆಯೇ ಮಣಿಪುರದಿಂದ ಕೊಹಿಮಾಗೆ ಹೋಗಲು ಆತಂಕ ತೋರಿಸುತ್ತಾರೆ. ಇದು ವಾಸ್ತವ!


ಬುಡಗಟ್ಟು ಜನಾಂಗಗಳ ಪರಂಪರೆಯ ಜೀವನ ಪದ್ಧತಿ- ದಾರಿಹೋಕರನ್ನು ದೋಚುವುದು, ಅಪಹರಿಸುವುದು ಮುಂತಾದ ಪ್ರವೃತ್ತಿ ಮುಂದುವರಿದಿದೆ. ದೊಡ್ಡ ಕಂಪನೆಗಳು ರಸ್ತೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡರೂ ಅಪಹರಣ ಮತ್ತು ಸಾಮನು ಸರಬರಾಜು ಮಾಡದ ಹಾಗೆ ರಸ್ತೆ ತಡೆ ನಡೆಯುತ್ತದೆ.
ಇಂತಹ ಸ್ವತಂತ್ರ ಮನೋಭಾವದ ಜನರನ್ನು ಬ್ರಿಟಿಷರು ಪ್ರತಿಶತ ನೂರರಂತೆ ಕ್ರೈಸ್ತಧರ್ಮಕ್ಕೆ ಮತಾಂತರ ಮಾಡಿರುವುದು ನಿಜಕ್ಕೂ
ಅಚ್ಚರಿ!  ಬ್ರಿಟಿಷರ ಕಾಲದಲ್ಲಿ  14 ನಾಗಾ ಬುಡಗಟ್ಟುಗಳನ್ನೂ ಮಿಷನರಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದಾರೆ. ಮುಖಂಡನ ಆದೇಶ ಇಲ್ಲದೆ ಒಂದು ಬುಡಗಟ್ಟಿನ ಸದಸ್ಯ ತನ್ನಿಚ್ಚೆಯಂತೆ ಮತಾಂತರ ಆಗಲು ಅವಕಾಶ ಇಲ್ಲ. ಹೀಗಾಗಿ ಈಗ ಇರುವ ನಾಗಗಳು 100ಕ್ಕೆ 100 ಕ್ರೈಸ್ತರು ಎನ್ನುತ್ತಾರೆ ಇಲ್ಲಿ. ನಾಗಾಲ್ಯಾಂಡ್‍ನ ಒಟ್ಟು 1,988 ಮಿಲಿಯ ಜನರಲ್ಲಿ 90.02% ಕ್ರೈಸ್ತರು ಎನ್ನತ್ತದೆ ಅಂಕಿ ಅಂಶ. ಬಹಳ ಹಿಂದೆ ಇಲ್ಲಿಗೆ ವಲಸೆ ಬಂದವರು ನೇಪಾಳಿಗಳು. ಇವರು  ಗುಂಪಾಗಿ ಒಂದು ಊರಲ್ಲಿ ನೆಲಸಿ ಅದು ನೇಪಾಳಿ ಹಳ್ಳಿ ಆಯಿತು. ಇವರ ಮತ್ತು ಇತರ ಬಾರತೀಯರ ಸಂಖ್ಯೆ  20 ಸಾವಿರ.


ನಾಗಾಗಳು ತಮ್ಮ ಬುಡುಗಟ್ಟುಗಳ ಆಚರಣೆಗಳ ಬಗ್ಗೆ ಅಪಾರ ಅಭಿಮಾನ ಇರುವವರು. ಕ್ರೈಸ್ತ ಮತಕ್ಕೆ ಮತಾಂತರ ಆಗಿದ್ದರೂ ಇವರ ಬುಡಗಟ್ಟು ಪದ್ಧತಿಯಲ್ಲಿ ಚರ್ಚ್‍ಗೆ ಹಿಡಿತ ಇಲ್ಲ. ಪ್ರಾರ್ಥನೆಗಷ್ಟೇ ಚರ್ಚ್. ವಿವಾಹ ಸಮಯದಲ್ಲಿ ಮನೆಗೂ ಅಥವಾ ಮದುವೆ ಮಂಟಪಕ್ಕೂ ಫಾದ್ರಿಯನ್ನು ಕರೆಸಿ ಕ್ರೈಸ್ತ ವಿವಾಹದ ವಿಧಿವಿಧಾನಗಳನ್ನು ಪೂರೈಸುತ್ತಾರೆ. ಚರ್ಚ್‍ಗೆ ಹೋಗುವುದು ಮನೆಯಲ್ಲಿಯೇ ವಿವಾಹ ನೆರವೇರಿಸುವುದು ಅವರವರ ಇಚ್ಛೆ! ಫಾದರಿ ತನ್ನ ಕೆಲಸವನ್ನು ಮುಗಿಸಿದ ಮೇಲೆ ಇವರು  ತಮ್ಮ ಬುಡಗಟ್ಟು ಆಚರಣೆಗಳನ್ನು ವಿವಾಹದಲ್ಲೂ ಮುಂದುವರಿಸುತ್ತಾರೆ.
ಇಲ್ಲಿ ಸುಪ್ರಸಿದ್ಧ ಕೆಥಡ್ರಾಲ್ ಚರ್ಚ್ ಪರ್ವತದ ಶಿಖರದ ತುದಿಯಲ್ಲಿ ಇದೆ. ವಾಹನ ರಸ್ತೆ ಇದ್ದರೂ ಏದುಸಿರು ಬಿಡುತ್ತಾ ಶಿಖರ ಹತ್ತುವುದು ತಪ್ಪುವುದಿಲ್ಲ. ನಾವು  ಚರ್ಚ್ ಒಳಗೆ ಹೋದಾಗ ಸಮವಸ್ತ್ರ ಧರಿಸಿರುವ ಇಬ್ಬರು ಮೂವರು ಪ್ರೌಢಶಾಲಾ ಹುಡುಗಿಯರು ನಮ್ಮೊಂದಿಗೆ ಅರಳು ಹುರಿದಂತೆ ನಗು ಮಗುತ್ತಾ ಇಂಗ್ಲಿಷ್‍ನಲ್ಲಿ ಮಾತನಾಡಿದರು. ಆ ಚರ್ಚ್ ವಾತವಾರಣದಲ್ಲಿ ಆ ಮುಗ್ಧಮಕ್ಕಳ ಸ್ನೇಹ ಪೂರ್ಣ ನಗು ನಮ್ಮನ್ನು ಮುದಗೊಳಿಸಿತು. ಅದರ ಮೊದಲು ಚಚ್‍ನ ಒಳಗೆ ಹೋಗಿ ಶಿಲುಬೆಗೇರಿದ ಯೇಸುವನ್ನು ನೋಡಿ ಆತಂಕ ಕಡಿಮೆಯಾಗಿರಲಿಲ್ಲ. ಧರ್ಮ ಯಾವುದಾದರೇನು? ಮಾನವ ಬುದ್ಧಿ ಅದೇ ಎಂದೆನಿಸಿತು.
ನಾಗಾಗಳು ಮನೆಯಲ್ಲಿಯೇ ಬೀರ್ ತಯಾರಿಸುತ್ತಾರೆ. ಬ್ರ್ಯಾಂಡೆಡ್ ಕಂಪೆನಿಗಳ ಮಧ್ಯ ಮಾರಾಟಕ್ಕೆ ನಾಗಾಲ್ಯಾಂಡ್‍ನಲ್ಲಿ ನಿಷೇಧ ಹೇರಲಾಗಿದೆ. ಏನಿದ್ದರೂ ಸ್ಥಳೀಯರು ತಯಾರಿಸಿದ ಬೀರ್, ಮಧ್ಯ ಕುಡಿಯಬೇಕು.  ಮಧ್ಯದಂಗಡಿಗಳು ಇಲ್ಲಿಲ್ಲ.
ನಾಗಾಗಳು ಹೆಡ್ ಹಂಟಿಗ್ /ಶಿರ ಬೇಟೆಗೆ ಬಹಳ ಪ್ರಸಿದ್ಧರು.  14 ನಾಗಾ ಬುಡಗಟ್ಟುಗಳಲ್ಲಿ ಮೊನ್ ಜಿಲ್ಲೆಯಲ್ಲಿ ಹೆಡ್ ಹಂಟಿಂಗ್ ಈಗಲೂ ಮೂಂದುವರಿದಿದೆ. ಉಳಿದವರು ನಿಲ್ಲಿಸಿದ್ದಾರೆ. ಹೆಡ್ ಹಂಟ್ ಮಾಡಿ ರುಂಡವನ್ನು ಚೆಂಡಾಡುತ್ತಾರೆ ಎನ್ನುತ್ತಾರೆ. ನರಮಾಂಸವನ್ನೂ ಈಗಲೂ ತಿನ್ನುತ್ತಾರೆ. ಅಪರಿಚಿತರು ಅವರ ಕ್ಷೇತ್ರದೊಳಗೆ ಪ್ರವೇಶಿಸಿದರೆ ಈ ರೀತಿ ಮಾಡುತ್ತಾರೆ. ಕೆಲವೊಮ್ಮೆ ಪರಕೀಯರಲ್ಲಿ ಒಬ್ಬನ ರುಂಡ ಕತ್ತರಿಸಿ ಅವನ ಮಾಂಸದಡುಗೆಯನ್ನು ಅವನ ಸಂಗಾತಿಗಳಿಗೂ ಬಡಿಸಿ ಉಣ್ಣಲು ಒತ್ತಡ ತರುತ್ತಾರೆ.


ಇಲ್ಲಿ ಅಧಿಕಾರದಲ್ಲಿ ಇರುವ ಪಕ್ಷ ನಾಗಾಲ್ಯಾಂಡ್ ಪೀಪುಲ್ಸ್ ಫ್ರಂಟ್. ಅದರ ಧ್ವಜ ಹುಂಜ.
ಭಾನುವಾರ ಇಡೀ ಕೊಹಿಮಾ ತಣ್ಣನೆ ಮಲಗಿರುತ್ತದೆ. ನಾವು ಹೋದುದು ಅಕ್ಟೋಬರ್ 2ರ ಭಾನುವಾರ. ಅಂದೂ ತಣ್ಣನೆ ಮಲಗಿತ್ತು. ಎಲ್ಲೂ ಭಾರತದ ಧ್ವಜ ಕಾಣಲೇ ಇಲ್ಲ. ಅವರಿಗೆ ಭಾರತದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಥವಾ ಗಾಂಧಿ ಜಯಂತಿಯಲ್ಲಿ ಆಸಕ್ತಿ ಇಲ್ಲ.
ಮಂಗೋಲಿಯ ಮೂಲದ ನಾಗಾ ಮಹಿಳೆಯರು ನೋಡಲು ಈಶಾನ್ಯ ಭಾರತದ ಇತರ ಪಂಗಡಗಳಂತೆ. ಅದರೆ ಪುರುಷರು ಆಜಾನು ಬಾಹುಗಳು. ಸ್ತ್ರೀ ಪುರುಷರಿಬ್ಬರೂ ಬಂಗಾರದÀ ಹೊಳಪಿನ ಮೈ ಬಣ್ಣದವರು.
ನಾಗಾಗಳು ತಮ್ಮ ಬುಡುಗಟ್ಟುಗಳ ಆಚರಣೆಗಳ ಬಗ್ಗೆ ಅಪಾರ ಅಭಿಮಾನ ಇರುವವರು. ಕ್ರೈಸ್ತ ಮತಕ್ಕೆ ಮತಾಂತರ ಆಗಿದ್ದರೂ ಚರ್ಚ್‍ಗೆ ಇವರ ಬುಡಗಟ್ಟು ಪದ್ಧತಿಯಲ್ಲಿ ಹಿಡಿತ ಇಲ್ಲ. ಪ್ರಾರ್ಥನೆಗಷ್ಟೇ ಚರ್ಚ್. ವಿವಾಹದಲ್ಲಿ ಮನೆಗೂ ಅಥವಾ ಮದುವೆ ಮಂಟಪಕ್ಕೂ ಫಾದರಿಯನ್ನು ಕರೆಸಿ ಕ್ರೈಸ್ತ ವಿವಾಹದ ವಿಧಿವಿಧಾನಗಳನ್ನು ಪೂರೈಸುತ್ತಾರೆ. ಮತ್ತೆ ತಮ್ಮ ಬುಡಗಟ್ಟು ಆಚರಣೆಗಳನ್ನು ಮುಂದುವರಿಸುತ್ತಾರೆ. ಭಾನುವಾರ ಇಡೀ ಕೊಹಿಮಾ ತಣ್ಣನೆ ಮಲಗಿರುತ್ತದೆ.
ಹೆಚ್ಚಿನ ನಾಗಾಗಳು ಸುಭಾಸ್ ಚಂದ್ರ ಬೋಸ್ ಹಾಗೂ ಇಂಡಿಯನ್ ನೇಷನಲ್ ಆರ್ಮಿ ಬಗ್ಗೆ ತಿಳಿದಿದ್ದಾರೆ. ಜಪಾನರೊಂದಿಗೆ ನಡೆದ ಯುದ್ಧದಲ್ಲಿ ಭಾsÀಗಿಗಳಾಗಿದ್ದಾರೆ. ಬ್ರಿಟಿಷ್ ಸೈನಿಕರನ್ನು ಹದ್ದಿನ ಕಣ್ಣಿನ ನಾಗಾಗಳಿಂದ ರಕ್ಷಿದವರೂ ಕೆಲವು ನಾಗಾಗಳು. ಹೀಗಾಗಿ ಕೊಹಿಮಾದಲ್ಲಿ ಎಡನೆಯ ಮಹಾಯುದ್ಧದಲ್ಲಿ ಹೋರಾಡಿದ ಸೈನಿಕರ 2,337 ಸಮಾಧಿಯನ್ನು ಎರಡನೆಯ ಮಹಾಯುದ್ಧ ಕ್ಷೇತ್ರ Garrison    ಪರ್ವತದಲ್ಲಿ ರಕ್ಷಿಸಿಟ್ಟಿದ್ದಾರೆ. ಅದರಲ್ಲಿ ಹೀಹೆ ಬರೆಯಲಾಗಿದೆ," ನಾವು ಇಂದು  ಇದರ ಉಸ್ತುವಾರಿಯನ್ನು ಕಾಮನ್‍ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ ನೋಡಿಕೊಳ್ಳುತ್ತಿದೆ.

ನಾಗಾ ಬುಡಗಟ್ಟುಗಳ ಜೀವನ ವಿಧಾನ, ಬೇಟೆಯಾಡುವ ರೀತಿ. ಮೀನು ಬೇಟೆ, ಅವರ ಗುಡಿಸಲು, ಅವರ ಪೂಜಾ ವಿಧಾನ, ಹಾಗೂ ಅವರು ಪೋಷಾಕು -ಇವೆಲ್ಲವನ್ನು ನೋಡಬೇಕಾದರೆ  ವಸ್ತು ಪ್ರದರ್ಸನಾಲಯಕ್ಕೆ ಹೋಗಬೇಕು. ನಾಗ ವ್ಯಕ್ತಿಗಳ ಪೈಂಟಿಂಗ್ ಉರುಗಳು, ಇದ್ದವು ತರುಣಿಯರು ಮೈ ಮೇಲೆ ಬಟ್ಟೆ ಇಲ್ಲದೆ ನಿಂತ ಪೈಂಟಿಂಗ್ ನಮ್ಮ ಹಿರಿಯರು ಕಾಡಿನಲ್ಲಿ ಹೇಗೆ ಬದುಕುತ್ತಿದ್ದರು ಎಂಬುದನ್ನು ನಾವೂ ನೆನೆಪಿಸಿಕೊಳ್ಳಬಹುದು. ಮೈಯಲ್ಲಿ ಬಟ್ಟೆ ತೊಡುತ್ತಿದ್ದುದು ಕಡಿಮೆ.
ನಾಗಾ ಹೆರಿಟೇಜ್ ವಿಲೇಜ್:
ನಾಗಾಗಳು ವಾಸವಿರುವ ಹಳ್ಳಿಗೆ ಪ್ರವಾಸಿಗರು ಹೋಗಲು ಸಾಧ್ಯವಿಲ್ಲ. ಅಂತಹ ಮುಕ್ತ ವಾತವರಣ ಇಲ್ಲಿ ಇಲ್ಲ. ಆದ್ದರಿಂದ ಪ್ರವಾಸಿಗರಿಗಾಗಿ ‘ನಾಗಾ ಹೆರಿಟೇಜ್ ವಿಲೇಜ್’ನ್ನು ಸರಕಾರ ರಚಿಸಿದೆ. ‘ನಾಗಾ ಹೆರಿಟೇಜ್ ವಿಲೇಜ್’ಗೂ ಅಲ್ಲಿಯ ಕಾರ್ಯದರ್ಶಿಯ ಅನುಮತಿ ಪಡೆದೇ ಹೋಗಬೇಕು.
ನೇಪಾಲಿ ಗೈಡ್ ನಮ್ಮನ್ನು ಕರೆದೊಯ್ದ. ಅರ್ಧ ಶಿಖರ ಹತ್ತಿ ನೀವೆಲ್ಲಾ ಇಲ್ಲೆ ನಿಲ್ಲಿ ನಾನು ಹೋಗಿ ನೋಡಿ ಬರುತ್ತೇನೆ ಎಂದ. ಮರಳಿ ಬಂದವನೇ “ನನಗೂ ಆತಂಕವಾಗುತ್ತದೆ. ಅಲ್ಲಿ ಕೇಳಲು ಜನ ಇಲ್ಲ” . ಮರಳೋಣ ಎಂದ. ನಾವು ನಿರಾಶರಾದೆವು ಶಿಖರಗಳು ಮುಸುಕು ಸರಿಸುವ ಅಂದ ನೋಡುತ್ತಾ ಸ್ವಲ್ಪ ಹೊತ್ತು ನಿಲ್ಲೋಣ ಎಂದೆವು. ಅಷ್ಟರಲ್ಲಿ ಶಿಖರದ ಕಡೆಗೆ ಒಂದಯ ಕಾರ್ ಹೋಯಿತು. ಆತ ನೇಪಾಳಿಯನ್ನು ಕರೆದ. ಹಾಗೂ ನಮ್ಮನ್ನು ಹೆರಿಟೇಜ್ ಒಳಗೆ ಕರೆದೊಯ್ಯಲು ಸೂಚಿಸಿದ.


ನಾಗಾಲ್ಯಾಂಡ್‍ನ 11ಜಿಲ್ಲೆಯ ಹದಿನಾಲ್ಕು ಬುಡಗಟ್ಟುಗಳ ಪುರಾತನ ಗುಡಿಸಲುಗಳ ಮಾದರಿಗಳನ್ನು ಪರ್ವತ ಶಿಖರದ ಮುಂದೆ ಇರುವ ಕೊರಕಲಿನಲ್ಲಿ ರಚಿಸಿ ಬೆಟ್ಟದ ಮೇಲೆ ‘ನಾಗ ಹೆರಿಟೇಜ್ ವಿಲೇಜ್’ ಎಂದು ಹೆಸರು ನೀಡಿದ್ದಾರೆ. ಒಂದು ಗುಡಿಸಲಿಗಿಂತ ಮತ್ತೊಂದು ಗುಡಿಸಲು ಭಿನ್ನ. ಆಯಾ ಬುಡಗಟ್ಟಿನ ಗುಡಿಸಲುಗಳ ಮೇಲೆ ಬುಡಗಟ್ಟಿನ ಹೆಸರು ಇದೆ.  ಒಂದೊಂದು  ಗುಡಿಸಲುಗಳ ಮುಂದೆ ಅವರ ಬೇಟೆಯಾಡುವ ಪ್ರಾಣಿಗಳ ಭಿತ್ತಿ ಚಿತ್ರಗಳು, ಮರದ ಉರುಗಳು, ವಾದ್ಯ ಪರಿಕರಗಳು ಇವೆ.  ಕೆಲವು ಗುಡಿಸಲಿನ ಮುಂದೆ ಅವರು ಉರುಳಿಸುತ್ತಿದ್ದ ತಲೆಬುರುಡೆಗಳ ಮಾದರಿಯನ್ನು ನೇತು ಹಾಕಿದ್ದಾರೆ.
ಆಯಾ ಗುಂಪಿನ ಗುಡಿಸಲಿನಲ್ಲಿ ಮರದ ಬೃಹತ್ ಗಾತ್ರದ ದೋಣಿಯಾಕರದ ಭಿನ್ನ ಭಿನ್ನ ಡೋಲುಗಳು ಇವೆ. ಆಪತ್ಕಾಲದಲ್ಲಿ ತಮ್ಮವರನ್ನು ಒಂದುಗೂಡಿಸಲು ಈ ಡೋಲು ಬಡಿಯುತ್ತಿದ್ದರಂತೆ.
ಇವರ ಕ್ರೈಸ್ತ ಮತಾಂತರ ಪೂರ್ವಕಾಲದ ಉಪಾಸನೆಯ ಶಿಲೆ ‘ಸ್ಪಿರಿಟ್ ಸ್ಟೋನ್’ ನಿಲುವುಗಲ್ಲಿನಂತೆ ಇದೆ. ಇತರೆಡೆ ಇರುವಂತೆ ಇಲ್ಲೂ ಸ್ಪಿರಿಟ್ ಸ್ಟೋನ್ ಇರುವ ಸ್ಥಳ ಸಮಾಧಿ ಸ್ಥಳವೂ ಆಗಿತ್ತು.
ವರ್ಷಕ್ಕೆ ಒಮ್ಮೆ ಡಿಸೆಂಬರ್ ತಿಂಗಳ 1ನೇ ತಾರೀಖಿನಿಂದ 10ರವರೆಗೆ ಎಲ್ಲಾ ಬುಡಗಟ್ಟುಗಳವರು ಇಲ್ಲಿ ಸೇರಿ ಉತ್ಸವ ನಡೆಸುತ್ತಾರೆ.

ಹೆರಿಟೇಜ್ ಹಳ್ಳಿಯ ಹೊರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಅವರ ವಾಸದ ಮನೆಗಳು ಇವೆ.
ಮಣಿಪುರದ ಸದಾರ್ ಹಿಲ್ ವರೆಗೆ ನಾಗಾಗಳು ಇದ್ದಾರೆ. ಆದರೆ ನಾಗಾ ಭೂಮಿಯಲ್ಲಿ ಇರುವ ನಾಗಾಗಳು ಮಣಿಪುರದ ನಾಗಾಗಳನ್ನು ಎರಡನೆಯ ದರ್ಜೆಯ ನಾಗಗಳು ಎಂದು ಭಾವಿಸುತ್ತಾರೆ ನಾಗಾ ಭೂಮಿಯ ನಾಗಾಗಳಲ್ಲಿ ಮೇಲರಿಮೆ ಇದೆ.
ವರ್ಣರಂಜಿತ ಮೋಡಗಳಿಗೆ ಜನ್ಮ ನೀಡುತ್ತದೆ ನಾಗಾಲ್ಯಾಂಡ್. ಬಣ್ಣದ ಮೋಡಗಳು ಅಲ್ಲಿಯ ಗಿರಿಶಿಖರಗಳ ಮೇಲೆ ನರ್ತಿಸುತ್ತಾ ಜನರನ್ನು ಮುದಗೊಳಿಸುತ್ತವೆ. ಪುಟ್ಟ ಮರ ಗಿಡಗಳಿಂದ ಅಲಂಕೃತವಾದ ಪರ್ವತಗಳ ಕೊರಕಲುಗಳು, ಅಲ್ಲಿಂದ ಏಳುವ ಕಪ್ಪು ಬಿಳಿಮೋಡಗಳ ಚಿನ್ನಾಟದ ವರ್ಣರಂಜಿತ ವಿಹಂಗಮ ನೋಟ! ಪ್ರಕೃತಿಯ ನಾಟ್ಯವನ್ನು ನೋಡುವಾಗ ಮನಸ್ಸು ಪುಳಕಗೊಳ್ಳುತ್ತದೆ. ಇಳಿಜಾರಲ್ಲೇ ಕಟ್ಟಿರುವ ಟಿನ್ ಶೀಟ್ ಮನೆಗಳು, (ನಗರದ ಹೊರಗೆ ಹುಲ್ಲು ಚಾವಣಿಗಳ ಗುಡಿಸಲುಗಳೂ ಇವೆ.) ಸುತ್ತು ಬಳಸಿ ಸಾಗುವ ರಸ್ತೆಗಳು!
ಇಲ್ಲಿ ವರ್ಷ ಪೂರ್ತಿ ತಂಪು ಹವೆ ಇವೆಯಂತೆ. ಇಲ್ಲಿಯ ಅತ್ಯಂತ ಮೇಲ್ದರ್ಜೆಯ ಹೊಟೇಲು ಕೋಣೆಗಳಲ್ಲಿ ಹವಾನಿಯಂತ್ರಣವೂ ಇಲ್ಲ, ಫ್ಯಾನೂ ಇಲ್ಲ. ಪ್ರಕೃತಿ ದೇವಿಯೇ ಹವಾಮಾನವನ್ನು ಹಿತವಾಗಿರುಸುತ್ತಾಳೆ.



ನಾಗಲ್ಯಾಂಡ್‍ನ  ಆರ್ಥಿಕತೆ:
ನಾಗಲ್ಯಾಂಡ್‍ನ  ಆರ್ಥಿಕತೆಯು ಮುಖ್ಯವಾಗಿ ಬೇಸಾಯವನ್ನು ಅವಲಂಬಿಸಿದೆ. ನಮ್ಮ ರಸ್ತೆ ಪ್ರಯಾಣದಲ್ಲಿ ದಾರಿಯುದ್ಧಕ್ಕೂ ಕೊರಕಲು ಭಾಗದಲ್ಲಿ ಒಂದರ ಕೆಳಗೆ ಒಂದರಂತೆ ರಚಿಸಿದ ಭತ್ತದ ಗದ್ದೆಯ ಬಂಗಾರ ತೆನೆಗಳು ಕಂಡುಬಂದುವು. ಭೂದೇವಿಗೆ ಬಂಗಾರದ ಒಡವೆಯನ್ನು ತೊಡಿಸಿ ಸಿಂಗರಿಸಿದಂತಹ ಸೊಗಸು ಕಂಡಿತು! ತೆನೆ ಹೊತ್ತ ಪೈರು ತೆನೆಯ ಭಾರಕ್ಕೆ ಭೂಮಿಗೆ ಒರಗದಂತೆ ಅಂದವಾಗಿ ಹೆಣಿಗೆಯಿಂದ ನೇಯ್ದಿದ್ದಾರೆ. ಮಧ್ಯಾಹ್ನವಾದರೂ ಕಣಿವೆಗಳಿಂದ ಏಳುವ ಬಣ್ಣ ಬಣ್ಣದ ಮೋಡಗಳು ಚಿನ್ನಾಟ, ಚೆಲ್ಲಾಟ ಕಡಿಮೆಯಾಗಿಲ್ಲ. ಇಂತಹ ರಸ್ತೆ ಪ್ರಯಾಣಕ್ಕೆ ಸ್ವಾರ್ಥ ಮನಸ್ಸುಗಳಿಂದ ಎರಗಬಹುದಾದ ಆತಂಕ ಎದುರಾಗಿತ್ತು.


ನಾವು 1-10-2011ರಂದು ಇಂಪಾಲದಿಂದ ನಾಗಾಲ್ಯಾಂಡ್ ರಾಜಧಾನಿ ಕೊಹಿಮಾಗೆ ಹೋಗುವ ಯೋಜನೆ ಹಾಕಿದ್ದೆವು. ನಾಗಾಲ್ಯಾಂಡ್‍ನಿಂದ ಮಣಿಪುರ ಹೆದ್ದಾರಿಗೆ ಬರುವ ರಸ್ತೆ ಬಂದ್ ಆಗಿ ಆಗಲೇ 63 ದಿನ ಆಗಿತ್ತಂತೆ. ಹೀಗಾಗಿ ಕೊಹಿಮಾದಲ್ಲಿ ಒಂದು ದಿನ ಇದ್ದು ಬರಲು 15 ಸಾವಿರ ರೂಪಾಯಿ ನೀಡಬೇಕಾಯಿತು. ಇಂಫಾಲದಿಂದ ಕೊಹಿಮಾದ ದೂರ ಸುಮಾರು 140 ಕಿಲೋಮೀಟರ್. ಇಂಫಾಲದಿಂದ ನಾಗಲ್ಯಾಂಡ್‍ನ ರಾಜಧಾನಿ ಕೊಹಿಮಾಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸುಟ್ಟು ಕರಕಲಾಗಿದ್ದ ಲಾರಿಗಳು ನಿಂತಿದ್ದುವು. ಫ್ಲೈವುಡ್ ಲಾರಿಯಿಂದ ಬರುತ್ತಿದ್ದ ಬೆಂಕಿ ಮೂರು ದಿನವಾದರೂ ಆರಿರಲಿಲ್ಲ. ನಾವು ಹೋಗುವಾಗಲೂ ಬೆಂಕಿ ಉರಿಯುತ್ತಿತ್ತು.


ನಾವು ಕೊಹಿಮಾದಿಂದ ಮರಳಿ ಇಂಪಾಲಕ್ಕೆ ಮರಳುವಾಗ ಸೇನಾಪತಿ ಹೆಸರಿನ ಹಳ್ಳಿಯಲ್ಲಿ ನಮ್ಮ ಕಾರನ್ನು ಕೈಯಲ್ಲಿ ದೊಣ್ಣೆ ಹಿಡಿದ ಒಳ್ಳೆಯ ಮೈಕಾಂತಿಯ ಸುಂದರ, ಸದೃಢ ಸುಮಾರು ಮಂದಿ ತರುಣರು ತಡೆದು, ನಮ್ಮ ಕಾರ್‍ಗೆ ಒಂದು ಪ್ರದಕ್ಷಿಣೆ ಹಾಕಿ ಮರಳಿದರು. ಹೀಗಾಗಿ ಕಾರಿನಿಂದ ಇಳಿಯದೆ ಸುಟ್ಟ ಲಾರಿಗಳ ಫೋಟೋ ತೆಗೆಯಬೇಕಾಯಿತು.

ಮಣಿಪುರಕ್ಕೆ  ಆರ್ಥಿಕ ದಿಗ್ಭಂದನ
ಮಣಿಪುರ ನಾಗಾಲ್ಯಾಂಡ್ ಹೆದ್ದಾರಿ 39ರಲ್ಲಿ  2010ರಿಂದಲೂ ಅಸ್ಸಾಂ ಕಡೆಯಿಂದ ಸರಕು ಸಾಗಿಸುವ ಎಲ್ಲಾ ವಾಹನಗಳನ್ನು ತಡೆದು ಸುಟ್ಟುಹಾಕುವ (Economic Blockade)    ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಎಪ್ರಿಲ್ 12, 2010ರಲ್ಲಿ The All Naga Students’ Association Manipur (ANSAM) ªÀÄvÀÄÛ the Naga Students’ Federation (NSF)  ಆರಂಭಿಸಿದ ಈ ತಂತ್ರವನ್ನು 2011ರಲ್ಲಿ ಕುಕ್ಕೀಸ್ ಎಂಬ ಸದಾರ್ ಹಿಲ್ ಭಾಗದ ಗುಡ್ಡಗಾಡು ಜನಾಂಗ ಮುಂದುವರಿಸುತ್ತಿದೆ. ಈ  ತಡೆಯಿಂದಾಗಿ ಮಣಿಪುರದ ಜನರ ಜೀವನ ಬಹಳ ದುಬಾರಿಯಾಗಿದೆ. ಈಗಲೂ ಭತ್ತದ ಬೆಳೆಯನ್ನೆ ಅವಲಂಬಿಸಿರುವ ಇಲ್ಲಿಯ ಜನತೆಗೆ ಏರಿದ ಅಗತ್ಯ ವಸ್ತುಗಳ ಬೆಲೆಗಳನ್ನು ಸುಧಾರಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಣಿಪುರದ ರಾಜಧಾನಿ ಇಂಫಾಲದ ಒಳಗೂ ‘ಜನರನ್ನು ದರೋಡೆ ಮಾಡುವುದು ಅನಿವಾರ್ಯ’ ಎಂಬಂತೆ ಅಲ್ಲಿಯ ಸ್ಥಿತಿ ಹದಗೆಟ್ಟಿದೆ.



ಇಂಪಾಲದಲ್ಲಿ  ಯಾವ ಪೆಟ್ರೋಲ್ ಬಂಕ್ ನೋಡಿದರೂ ಕಾರುಗಳು ಒಂದು ದಿಕ್ಕಿನಲ್ಲಿ, ದ್ವಿಚಕ್ರ ವಾಹನಗಳು ಮತ್ತೊಂದು ದಿಕ್ಕಿನಲ್ಲಿ ಸುಮಾರು ಕಿಲೋಮೀಟರ್Àದವರೆಗೆ ಪೆಟ್ರೋಲ್‍ಗಾಗಿ ಸಾಲುಗಟ್ಟಿ ನಿಂತಿತ್ತು.  ಒಂದು ಬಂಕಲ್ಲಿ ಪೆಟ್ರೋಲ್ ಬರುತ್ತದೆ ಎಂದು ಗೊತ್ತಾದ ಕ್ಷಣ ರಾತ್ರಿಯಿಂದ ಅಲ್ಲಿ ಸರದಿಯಲ್ಲಿ ಗಾಡಿ ನಿಲ್ಲಿಸುತ್ತಾರೆ. ತಮ್ಮಲ್ಲಿ ಇರುವ ಪೆಟ್ರೋಲನ್ನು ಖಾಲಿ ಮಾಡಿ ಬಂಕ್ ಮುಚ್ಚಿ ಬಂಕ್‍ಗಳವರು ಮನೆಗೆ ತೆರಳುತ್ತಾರೆ. ಒಂದು ಲೀಟರ್ ಪೆಟ್ರೋಲ್ ಬೆಲೆ 150ರಿಂದ 200. ಇದು ಸರಕಾರ ನಿಗದಿ ಪಡಿಸಿದ ಬೆಲೆ. ಸಾಮಾನ್ಯರ ಅಡುಗೆ ಮನೆಗೆ ಬೇಕಾಗುವ ಒಂದು ಗ್ಯಾಸ್ ಸಿಲಿಂಡರ್ 1700ರಿಂದ 2000ವರೆಗೆ ಇದೆ. ಕಳ್ಳದಂಧೆಯಲ್ಲಿ ಪೆಟ್ರೋಲ್ ಮಾರಾಟವಾಗುತ್ತದೆ. ಬಡ ಮಹಿಳೆಯರು ನೀರಿನ ಬಾಟಲಿನಲ್ಲಿ ಪೆಟ್ರೋಲ್ ತುಂಬಿಸಿ ರಸ್ತೆ ಬದಿ ಕುಳಿತು ಜೇನು ತುಪ್ಪ ಮಾರಿದಂತೆ ಪೆಟ್ರೋಲ್ ಮಾರುತ್ತಾರೆ. ಹೀಗಾಗಿ ಇಂಪಾಲದಲ್ಲಿ 45ಕಿಲೋಮೀಟರ್ ದೂರದವರೆಗೆ ಸುತ್ತಾಡಲು 3000 ರೂ. ನಾವು ನೀಡಬೇಕಾಯಿತು. ಗ್ವಹಟಿಯಿಂದ ನಾಗಾಲ್ಯಾಂಡ್‍ನ ಆರ್ಥಿಕ ನಗರ ಧೀಮಾಪುರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 39 ನಾಗಾಲ್ಯಾಂಡ್‍ನ ರಾಜಧಾನಿ ಕೊಹಿಮಾಗೆ ಮೂಲಕ ಮಣಿಪುರದ ರಾಜಧಾನಿ ಇಂಪಾಲಕ್ಕೆ ಸಂಪರ್ಕ ಕಲ್ಪಿಸಿದೆ.  ಇದು ಸರಕು ಸಾಗಣೆಯ ಮಾರ್ಗ. ಹೆದ್ದಾರಿ ತಡೆಯಿಂದಾಗಿ ಅಗತ್ಯ ವಸ್ತುಗಳನ್ನು ಸುತ್ತು ಬಳಸು ರಸ್ತೆಯ ಮೂಲಕ ಸಾಗಿಸುವಾಗ ಮಾಮೂಲಿ ಸಮಯಕ್ಕಿಂತ ನಾಲ್ಕೈದು ದಿವಸಗಳು ಹೆಚ್ಚಿಗೆ ಬೇಕಾಗುತ್ತದೆ. ಹೀಗಾಗಿ ಹೊರಗಡೆಯಿಂದ ಬರುವ ಎಲ್ಲಾ ಸಾಮಾನುಗಳಿಗೂ ಇಂಪಾಲದಲ್ಲಿ ಇಲ್ಲಿ ಬೆಲೆ ಅಧಿಕ.
ಈ ಬಾರಿ ಹೆದ್ದಾರಿಯನ್ನು ಬಂದ್ ಮಾಡಿದವರು ಕುಕ್ಕಿಗಳು. ಇವರು ಈಶಾನ್ಯ ಭಾರತದ ಬರ್ಮಾ ಮತ್ತು ಬಾಂಗ್ಲಾ ದೇಶಗಳಲ್ಲಿ ಹರಡಿರುವ ಪ್ರಬಲ ಗುಡ್ಡಗಾÀಡು ಸಮುದಾಯ. ಸದಾರ್ ಹಿಲ್ ಡಿಸ್ಟ್ರಿಕ್ ಡಿಮಾಂಡ್ ಕಮಿಟಿ ಅನಿರ್ದಾಷ್ಟಾವಧಿಯ ಮುಷ್ಕರ/ತಡೆಯನ್ನು ಇಂಪಾಲ ಗ್ವಹಟಿ ರಾಷ್ಟ್ರೀಯ ಹೆದ್ದಾರಿ 39 ಮತ್ತು ಇಂಪಾಲ ಜಿರಿಬನ ಸಿಲ್‍ಚಾರ್ ರಾಷ್ಟ್ರೀಯ ಹೆದ್ದಾರಿ 53ರಲ್ಲಿ (ಸೇನಾಪತಿ ಜಿಲ್ಲೆ)  ಆರಂಭಿಸಿದೆ. ಕುಕ್ಕಿಗಳೇ ಅಧಿಕವಾಗಿರುವ ಸದಾರ್ ಹಿಲ್ ಅನ್ನು full-fledged revenue district ಘೋಷಿಸಬೆಕೆನ್ನುವುದು ಕುಕ್ಕಿಗಳ ಹಕ್ಕೊತ್ತಾಯ. ಇದನ್ನು ಈ ಭಾಗದ ನಾಗಾಗಳು ವಿರೋಧಿಸುತ್ತಾರೆ. ಹೀಗಾಗಿ ಎರಡೂ ಹೆದ್ದಾರಿಗಳಲ್ಲಿ The  United Naga council (UNC) ನವರೂ ತಡೆಯೊಡ್ಡಿದ್ದಾರೆ. ಸದಾರ್ ಪರ್ವತಗಳ Kangpokpi ಭಾಗದಲ್ಲಿ ಲಾರಿ ಡ್ರೈವರ್‍ಗಳನ್ನು ಇಳಿಸಿ ಅವರನ್ನು ಥಳಿಸಿ ಅವರ ಲಾರಿಗಳಿಗೆ ಬೆಂಕಿ ಕೊಡುವ ಕಾಯಕ ನಡೆಯುತ್ತಿದೆ.






No comments:

Post a Comment