ನೆನಪಾಗುತ್ತಿದೆ ಕರ್ಣ ನಿನ್ನ
ದೀಪಾವಳಿಯ ಬೆಳಕಲ್ಲಿ
ನಿನ್ನನ್ನೂ ಕಾಣುತ್ತಿದ್ದೇನೆ
ಮಹಾಬಲಿ ಚಕ್ರವರ್ತಿಯೊಂದಿಗೆ
ನಿನ್ನ ಯುಗದಲ್ಲಿ ಬಂದ ಕೃಷ್ಣನಿಗೂ ಮೊದಲು
ವಿಷ್ಣು ಬಂದಿದ್ದ. ವಾಮಾನವತಾರ ಎತ್ತಿ.
ಮಹಾಬಲಿಯನ್ನು ತುಳಿಯಲು.
ಈ ಜಗದ ಜನರ ಅಚ್ಚು ಮೆಚ್ಚಿನ ರಾಜ
‘ಮಹಾಬಲಿ ಚಕ್ರವರ್ತಿ!’
ತುಳುನಾಡಿಗೆ ಸಮೃದ್ಧಿಯನ್ನು ತಂದವ
ಆದರೂ ದೇವತೆಗಳ ಪಕ್ಷಪಾತಿ ವಿಷ್ಟು
ಬಲಿಯನ್ನು ತುಳಿದ.
ನಿನ್ನನ್ನು ಕೃಷ್ಣ ತುಳಿದಂತೆ
ಬಲಿ ಚಕ್ರವರ್ತಿ ಕಾಲವದು ಭುವಿಯಲ್ಲೇ ಸ್ವರ್ಗ
ಪ್ರಜೆಗಳಿಗೆ ಮೇಲಿನ ಸ್ವರ್ಗ ಬೇಡವಾಗಿದ್ದ ಕಾಲ
ಆದರೂ ವಂಚಿಸಿ ತುಳಿದ
ಆ ವಾಮನ!
ಧರೆಯ ಜನರಿಗೆ ಸ್ವರ್ಗ ಬೇಡವೆಂದು
ಕಾಯುತ್ತಿದ್ದೇನೆ ಎಲ್ಲರೊಂದಿಗೆ
ಪ್ರತಿ ದೀಪಾವಳಿಗೂ
ಮನ ಮನೆಗಳಲ್ಲಿ ಹೊಲ ಗದ್ದೆಗಳಲ್ಲಿ
ದೀಪ ಬೆಳಗಿ....ಆ ಮಹಾ ಬಲಿಗಾಗಿ.
No comments:
Post a Comment