ನಾನು ಸೈನಿಕನ ಮಡದಿಯಾಗಿ ಉತ್ತರ
ಭಾರತೀಯರ ಸಂಗದಲ್ಲಿದ್ದೆ. ಆಗ ನಾನು ಕನಕ
ಲಂಕೆಯ ಕಥೆ ಕೇಳಿದ್ದೆ:
“ಕೈಲಾಸದಲ್ಲಿ ಹಿಮದ ರಾಶಿಯ ಮೇಲೆ
ಕುಳಿತು ದಿನಾ ಹಿಮವನ್ನು ನೋಡಿ
ನೋಡಿ ಬೇಸತ್ತ ಪಾರ್ವತಿ ಗಂಡ
ಈಶ್ವರನಿಗೆ ಹೇಳುತ್ತಾಳೆ. ‘ನೀನು ನನಗಾಗಿ ಸಮುದ್ರದ
ಮಧ್ಯೆ ಒಂದು ಪುಟ್ಟ ದೇಶ
ನಿರ್ಮಿಸು”
ಎಂದು. (ಆದೇಶಿಸು(?)ತ್ತಾಳೆ.) ಈಶ್ವರನ ಅಣತಿಯಂತೆ ಸಮುದ್ರದ
ಗರ್ಭದಿಂದ ಚಿನ್ನದ ಗೋಪುರಗಳುಳ್ಳ ‘ಕನಕಲಂಕೆ’ ಎದ್ದುಬರುತ್ತದೆ.
ಸೊಗಸಾದ ಈ ನಗರವನ್ನು ‘ಕನಕ
ಲಂಕೆ’ ಎಂದು ಈಶ್ವರ ಕರೆಯುತ್ತಾನೆ.
ಇದರ ಅಂದಕ್ಕೆ ಅದರ ಸೃಷ್ಟಿಕರ್ತರು
ಮನಸೋಲುತ್ತಾರೆ. ತಾವು ಲಂಕೆಯಲ್ಲಿ ವಾಸಮಾಡುವ
ಮೊದಲು ಅದರ ಪೂಜೆಮಾಡಿಸಲು ಯೋಗ್ಯ
ಪುರೋಹಿತನ ಹುಡುಕಾಟ ನಡೆಯುತ್ತದೆ. ‘ಇಡಿ
ವಿಶ್ವದಲ್ಲಿ ರಾವಣನಿಗಿಂತ ಉತ್ತಮ ಪುರೋಹಿತ ಇಲ್ಲ’ ಎಂಬ ಉತ್ತರ ಅವನಿಗೆ ಸಿಗುತ್ತದೆ.
ಆಗ ರಾವಣನಿಗೆ ಕರೆಹೋಗುತ್ತದೆ. ರಾವಣ ಈಶ್ವರನ ಭಕ್ತನಲ್ಲವೆ?
ಅತ್ಯಂತ ಶ್ರದ್ಧಾ ಭಕ್ತಿಯಿಂದ ಕನಕಲಂಕೆಯ
ಪೂಜೆಯನ್ನು ಮಾಡುತ್ತಾನೆ. ಆತನ ಪೂಜೆಗೆ ಭಕ್ತಿಗೆ
ಮೆಚ್ಚಿದ ಈಶ್ವರ ರಾವಣನಿಗೆ “ನಿನಗೆ
ದಕ್ಷಿಣೆ ಏನು ಬೇಕು ಕೇಳು” ಎನ್ನುತ್ತಾನೆ.
ಆಗ ರಾವಣ ‘ಸ್ವಾಮಿ. ಈ
ಕನಕ ಲಂಕೆಯಿಂದ ನಾನೂ ಪ್ರಭಾವಿತನಾಗಿದ್ದೇನೆ. ಕೊಡುವುದಾದರೆ
ಈ ‘ಕನಕ ಲಂಕೆ’ಯನ್ನೇ ಕೊಡಿ’ ಎನ್ನುತ್ತಾನೆ. ಕನಕ ಲಂಕೆಯನ್ನು ರಾವಣನಿಗೆ
ಬಿಟ್ಟುಕೊಟ್ಟು ಈಶ್ವರ ಪಾರ್ವತಿಯೊಂದಿಗೆ ಮತ್ತೆ
ಕೈಲಾಸಕ್ಕೆ ಬರುತ್ತಾನೆ. ಸ್ಮಶಾನವಾಸಿ ಶಿವನಿಗೇಕೆ ಕನಕಲಂಕೆ? ಆತನನ್ನು ತಪಸ್ಸು ಮಾಡಿ
ಒಲಿಸಿಕೊಂಡ ಪಾರ್ವತಿಯೂ ನಿರಾಭರಣೆಯಾಗಬೇಕಲ್ಲವೆ?
ಈ ಕಥೆ ಬರಿಯ ಕಥೆ
ಆಗಿರಲಾರದು. ಲಂಕೆಯನ್ನು ‘ಶ್ರೀ’ ಲಂಕೆ ಎನ್ನುತ್ತಾರೆ. ಶ್ರೀ
ಪದಕ್ಕೆ ಇರುವ ಅರ್ಥವನ್ನು ಮುಂದೆ
ನೋಡಲಿರುವಿರಿ. ಅಲ್ಲದೆ ಲಂಕೆಯು ಮೊದಲು
ಕುಬೇರನ ರಾಜ್ಯವಾಗಿತ್ತು. ನಂತರ ರಾವಣನು ಅದರ
ಮೇಲೆ ಅಧಿಪತ್ಯವನ್ನು ಸ್ಥಾಪಿಸಿದನು. ಹೀಗೆ ಎಲ್ಲಾ ಮಗ್ಗುಲುಗಳಿಂದಲೂ
ಇದು ಶ್ರೀಮಂತ ದ್ವೀಪವಾಗಿತ್ತು.
“ಕಥೆ
ಚೆನ್ನಾಗಿದೆ ಇಂದ್ರಕ್ಕ. ಈಶ್ವರ ದೇವರಾದರೂ ಅವನಿಗೆ
ಹೆಂಡತಿಯ ಆಸೆಯನ್ನು ನೆರವೇರಿಸಬೇಕೆಂಬ ಕಾಳಜಿ ನೋಡಿ ನಮ್ಮ
ಮನೆಯ ಗಂಡುಸರು ಕನಕ ಲಂಕೆ
ಬಿಡಿ ಈ ಮಣ್ಣಿನ ಲಂಕೆ
ನೋಡಿ ಬರಲೂ ಸುಲಭದಲ್ಲಿ ಬಿಟ್ಟಿಲ್ಲ.”
ಎಂದರು ಒಬ್ಬ ಮಹಿಳೆ.
“ಬಿಡದೆ
ನೀವು ಇಲ್ಲಿಗೆ ಬಂದುದಾ?” ಎಂದು
ದಬಾಯಿಸಿದವರು ವಿನುತಕ್ಕ. ಆಗ ನಾನಂದೆ ಈಶ್ವರನ
ಸ್ವಭಾವ ಅನುಕರಣ ಯೋಗ್ಯ. ಶ್ರೀ
ರಾಮನೇನು ಕಡಿಮೆಯಾ? ಆತ ಮಡದಿಯ ಆಶೆಗೆ
ಸ್ಪಂಧಿಸಿದ್ದೇ ರಾಮಾಯಣವಾಯಿತಲ್ಲ. ಚಿನ್ನದ ಬಣ್ಣದ ಜಿಂಕೆಯನ್ನು
ತನಗೆ ತಂದುಕೊಡಬೇಕೆಂದು ಹೇಳಿದಾಗ ಆತ ಬಿಲ್ಲುಬಾಣ
ಹೆಗಲಿಗೇರಿಸಿ ಹೋದನಲ್ಲ? ಈಗಿನ ಯಾವ ಗಂಡನಾದರೂ
ಇಂತಹ ಆಪತ್ತನ್ನು ಮಡದಿಯ ಆಶೆಗಾಗಿ ಮೈಮೆಲೆ
ಎಳೆದುಕೊಳ್ಳಬಹುದಾ? ಹೇಳಿ. ಇಲ್ಲಿ ಯಾರಿಗಾದರೂ
ರಾಮನಂತಹ ಗಂಡ ಇದ್ದಾರಾ’ ಎಂದೆ. ``ಇದ್ಯಾವುದನ್ನೂ ನಮ್ಮ
ಪುರುಷರು ನೋಡಿ ಕಲಿತಿಲ್ಲ. ‘ಜಿಂಕೆ
ತರುವುದು ಬಿಡಿ. ನಾವೀಗ ಲಂಕೆಯಲ್ಲಿ
ಉಳಿದರೂ ಇನ್ನೊಂದು ಮದುವೆಯಾಗಿ ಹಾಯಾಗಿರುತ್ತೀವಿ”
ಎನ್ನುವವರು ಹೆಚ್ಚು. ರಾಮ ಶ್ರೀಲಂಕಾದೊಡನೆ
ಯುದ್ಧ ಮಾಡಿ ಮಡದಿಯನ್ನು ಮರಳಿ
ತಂದ. ಆದರೆ ಈಗಿನ ಗಂಡುಸರು
‘ಮಡದಿ ಲಂಕಾದಲ್ಲಿ ಉಳಿದರೆ ಉಳಿಯಲಿ ಎನ್ನುತ್ತಾರೆ.’
ಎನ್ನಲು ಮರೆಯಲಿಲ್ಲ.
ಕ್ಯಾಂಡಿ:
ಕ್ಯಾಂಡಿ
ಎಂದಾಗ ನಮಗೆ ಬುದ್ಧ ನೆನಪಾಗುತ್ತಾನೆ.
ಕ್ಯಾಂಡಿ ಬೌದ್ಧರಿಗೆ ಪವಿತ್ರ ಯಾತ್ರಾಸ್ಥಳ. ಭಾರತದಲ್ಲಿ
ನೆಲೆಕಳೆದುಕೊಂಡ ಭಾರತದ ಬೌದ್ಧ ಧರ್ಮ
ಶ್ರೀಲಂಕಾದಲ್ಲಿ ಪ್ರಮುಖ ಧರ್ಮವಾಗಿದೆ. ಬೇರೆ
ಯಾವ ಧರ್ಮವೂ ತಾನು ಜನ್ಮತಳೆದ
ಊರಿನಿಂದ ಪಲಾಯಾನವಾಗಬೇಕಾದ ಸ್ಥಿತಿ ತಲುಪಿಲ್ಲ. ಆ
ದುಸ್ಥಿತಿ ಬೌದ್ಧ ಧರ್ಮಕ್ಕೆ ಬಂದೊದಗಿದಿದೆ.
ಬಿಹಾರದ ನಳಂದದಲ್ಲಿ ಬೌದ್ಧಬಿಕ್ಷುಗಳಿಗಾಗಿ ಪ್ರಸಿದ್ಧ ಬೌದ್ಧ ವಿಶ್ವವಿದ್ಯಾಲಯ ಇತ್ತು.
ಚೀಣೀ ಯಾತ್ರಿಕ ಹ್ಯುಯೆನ್ತ್ಸಾಂಗ್
(ಕ್ರಿ.ಶ 629) ನಳಂದಕ್ಕೆ ಭೇಟಿ
ನೀಡಿದಾಗ ಇಲ್ಲಿ ಸಂನ್ಯಾಸಿಗಳಾಗಿದ್ದ 10,000 ವಿದ್ಯಾರ್ಥಿಗಳಿದ್ದರಂತೆ. ಇವರಿಗೆ ಮಹಾಯಾನ
ಪಂಥದ ಬೌದ್ಧ ಸಿದ್ಧಾಂತಗಳನ್ನು ಬೋಧಿಸಲಾಗುತ್ತಿತ್ತು.
ಕ್ರಿ.ಶ. 670ರಲ್ಲಿ ಬಂದ
ಚೀಣೀ ಯಾತ್ರಿಕ ಇ-ತ್ಸಿಂಗ್
ಇಲ್ಲಿ 3000 ಸಂನ್ಯಾಸಿಗಳಿದ್ದರು ಎಂದು ಬರೆಯುತ್ತಾನೆ.
ಶ್ರೀಲಂಕಾದಲ್ಲಿ
ಎಲ್ಲಾ ತಿಂಗಳ ಹುಣ್ಣಿಮೆಯಂದು ಸರಕಾರಿ
ರಜೆ ಇದೆ. ಗೌತಮ ಜನಿಸಿದ್ದು,
ಜ್ಷಾನೋದಯ ಪಡೆದುದು (ಬುದ್ಧನಾದುದು), ಪರಿನಿರ್ವಾಣಹೊಂದಿದ್ದು -ವೈಶಾಖ ಶುದ್ಧ ಹುಣ್ಣಿಮೆಯಂದು.
ಹೀಗಾಗಿ ಬೌದ್ಧ ಧರ್ಮಿಯರಿಗೆ ಈ
ಹುಣ್ಣಿಮೆ ಅತ್ಯಂತ ಪವಿತ್ರ. ಪಾಕಿಸ್ತಾನ
ಸೇರಿ ದಕ್ಷಿಣ ಏಷ್ಯಾ, ಪೂರ್ವ
ಏಷ್ಯಾದಲ್ಲಿ ಈ ದಿನ ರಾಷ್ಟ್ರೀಯ
ರಜೆ ಘೋಷಿಸಲಾಗಿದೆ.
ತುಳುವರ
ಜನಪದ ಸಂಸ್ಕøತಿಯಲ್ಲಿ ಬೇಸಗೆಯ
ತಿಂಗಳುಗಳ (ಮಾಯಿ, ಸುಗ್ಗಿ, ಪಗ್ಗು)
ಹುಣ್ಣಿಮೆಗೆ ಮಹತ್ವ ಇದೆ.
ಶ್ರೀಪಾದ:
ಶ್ರೀ ಲಂಕಾದ ಕಥೆಯಲ್ಲಿ ಬುದ್ಧ ಒಟ್ಟು ತನ್ನ
ಜೀವಮಾನದಲ್ಲಿ ಮೂರು ಬಾರಿ ಶ್ರೀಲಂಕಾಗೆ
ಭೇಟಿ ನೀಡಿದ್ದ ಎಂದು ಇಲ್ಲಿಯ
ಜನ ನಂಬುತ್ತಾರೆ. ಚೀನೀ ಕಥೆಯ ಪ್ರಕಾರ
ಬುದ್ಧ ಇಲ್ಲಿಗೆ ಬಂದಾಗ ಇಲ್ಲಿಯ
ಜನರು ಜೀವನ ನಿರ್ವಹಣೆಗೆ ತೊಂದರೆ
ಪಡುತ್ತಿದ್ದರು. ಆಗ ಬುದ್ಧ ಅವರನ್ನು
ಕಂಡು ಅನುಕಂಪ ಗೊಂಡು ಅವರಿಗಾಗಿ
ಶ್ರೀ ಪಾದವನ್ನು ಸಮೃದ್ಧಗೊಳಿಸಿದ. ಈ ಮೂಲಕ ಬಡ
ಜನರಿಗೆ ಜೀವನ ನಿರ್ವಹಣೆಯ ದಾರಿ
ತೋರಿಸಿದ. ಈ ಪರ್ವತದಲ್ಲಿ ಉತ್ಕøಷ್ಟ ಮಟ್ಟದ ಸಾಂಬಾರ
ವಸ್ತುಗಳು ಹೇರಳವಾಗಿದೆ. ಇದನ್ನು sweet spices ಎನ್ನುತ್ತಾರೆ. ಇದು
ಶ್ರೀ ಲಂಕಾದ ಆರ್ಥಿಕತೆಗೆ ಆಧಾರವಾಗಿದೆ.
ಚೈನಾದ ನಂಬುಗೆಯ ಪ್ರಕಾರ ಬುದ್ಧ
ಇಲ್ಲಿಯ ಜನರ ಕಷ್ಟವನ್ನು ಹೋಗಲಾಡಿಸಲು
ಈ ಬೆಟ್ಟದ ಗರ್ಭದಲ್ಲಿ
ರತ್ನ ಭಂಢಾರವನ್ನೇ ಸೃಷ್ಟಿಸಿದ. ಅಂದಿನಿಂದ ಸ್ಥಳೀಯರು ರತ್ನವನ್ನು ಅಗೆದು ತೆಗೆದು ಉತ್ತಮ
ಮಟ್ಟದ ಜೀವನ ನಿರ್ವಹಣೆ ಮಾಡುತ್ತಾರೆ.
ಶ್ರೀಪಾದದ ದಕ್ಷಿಣ ಪೂರ್ವ ಭಾಗದ
ರತ್ನಗಣಿಗಳು ವಿಶ್ವದಲ್ಲಿಯ ರತ್ನ ಗಣಿಗಳಲ್ಲಿಯೇ ಅತ್ಯಂತ
ಸಂಪದ್ಭರಿತ ಗಣಿಯಾಗಿದೆ. ಎತ್ತರದಲ್ಲಿ ಶ್ರೀಪಾದಕ್ಕಿಂತ ಎತ್ತರದ ಪರ್ವತಗಳಿವೆ. ಪಿದಿರುತಲಗಲ
(Pidirutalagala
Mountain)) ಎಂಬ ಬೆಟ್ಟ 8282 ಅಡಿ (2534 ಮೀಟರ್) ಎತ್ತರವಿದೆ. ಹಪುತಲೆ
(Haputhale
Mountain)
2351 ಮೀಟರ್ ಹಾಗೂ ತೊಟುಪಾಲ Totupala Mountain 2351 ಮೀಟರ್
ಎತ್ತರವಿದೆ. ಆದರೂ 2243ಮೀಟರ್ ಎತ್ತರದ ಶ್ರೀಪಾದಕ್ಕೆ
ಇರುವ ಪ್ರಾಮುಖ್ಯತೆ ಉಳಿದ ಬೆಟ್ಟಗಳಿಗೆ ಇಲ್ಲ.
ಇದರ ರತ್ನ ಗರ್ಭ ಮತ್ತು
ಇದಕ್ಕಿರುವ ದೈವಿಕ ಮಹತ್ವ ಮಾತ್ರವಲ್ಲ
ಈ ಬೆಟ್ಟದ ಅಂದವೂ
ಎಲ್ಲ ಬೆಟ್ಟಗಳಿಗಿಂದ ಮೊದಲ ಸ್ಥಾನವನ್ನು ತಂದೊಡ್ಡಿದೆ.
ಇಡಿಯ ಶ್ರೀ ಲಂಕಾವನ್ನು ರತ್ನ
ದ್ವೀಪ ಎಂದು ಕರೆಯುತ್ತಾರೆ. ಇಲ್ಲಿಯ
ಭೂಗರ್ಭ ಅದರಲ್ಲೂ ರತ್ನ ರಾಶಿ
ಅಗಾಧವಾಗಿವೆ, ಅಮೂಲ್ಯವಾಗಿವೆ. ಶ್ರೀ ಪಾದದಿಂದ ಹರಿದು
ಬರುವ ನದಿ ರತ್ನಪುರದ ಮೂಲಕ
ಹಾದುಹೋಗುತ್ತದೆ. (ಬಹುಷ ಕಲನಿ ನದಿ)
ಈ ನದಿಯಲ್ಲಿ
ಹರಳುಗಳ ಕಣಜ
ಇದೆ ಎನ್ನುತ್ತಾರೆ.
ಇಲ್ಲಿಯ ಹರಳುಗಳು
ಅಮೂಲ್ಯ. ಕೆಂಪು,
ನೀಲ, ಪಚ್ಚೆ,
ಹಳದಿ, ಮಾಣಿಕ್ಯ-
(ruby, starruby, abrandrit, cateyes, topaz, spinel,
eitrineamnethyst, moonstone, aquamarine,tourmalime, garnet, Zircon, topfivegem
---yellow and applegreen, and sapphires) ಹೀಗೆ ಬಣ್ಣ
ಬಣ್ಣದ ರತ್ನಗಳು ರತ್ನಪುರದ ನದಿಯಲ್ಲಿ
ದೊರಕುತ್ತವೆ. ಇಲ್ಲಿಯ ನೀಲ ಮತ್ತು
ಹಳದಿ ಹೆಚ್ಚು ಪ್ರಸಿದ್ಧ. (ಬರ್ಮಾರೂಬಿ
ಒಂದನೆಯ ಸಾಲಲ್ಲಿ ಬರುತ್ತದೆ ಎನ್ನುತ್ತಾರೆ)
ಹದಿಮೂರನೆಯ ಶತಮಾನದ ‘ಭುವನೇಕ ಬಾಹು
1’ ಎಂಬ ಅರಸ ಈಜಿಪ್ಟ ಅರಸನಿಗೆ
ಬರೆದ “twenty
seven caststles... filled with precious stones” ಎಂದಿದ್ದಾನೆ. ಈಶ್ವರ
ಪಾರ್ವತಿಗಾಗಿ ಸೃಷ್ಟಿಸಿದ ಕನಕ ಲಂಕೆ ಎಂಬ
ಉತ್ತರ ಭಾರತೀಯರ ಜಾನಪದ ಕಥೆಯನ್ನು
ಈ ಲೇಖನದ ಆರಂಭದಲ್ಲಿ
ಹೇಳಿದ್ದೆ. ಆ ಕಥೆ ಇಲ್ಲಿ
ನಿಜವೆನಿಸುತ್ತಿದೆ. ಶ್ರೀ ಎಂಬ ಹೆಸರು
ಸಂಪತ್ತನ್ನು ಧ್ವನಿಸುತ್ತದೆ. ‘ಶ್ರೀಲಂಕಾ’
‘ಶ್ರೀ ಪಾದ’ ಎಂಬಲ್ಲಿಯ ಶ್ರೀಯೂ ಇದನ್ನೇ ಧ್ವನಿಸುತ್ತದೆ.
ಸಿರಿ ಅಂದರೆ ಚಿಗುರು, ಬೆಳವಣಿಗೆ,
ಐಶ್ವ್ಚರ್ಯ, ಸೌಭಾಗ್ಯ, ಫಲವಂತಿಕೆ- ಇತ್ಯಾದಿ ಅರ್ಥಗಳಿವೆ. ಭೂಮಿಯ
ಫಲವತ್ತತೆಯ ದೃಷ್ಟಿಯಿಂದಲೂ ಶ್ರೀ(ಲಂಕಾ) ಎನ್ನುವುದು
ಅನ್ವರ್ಥ ನಾಮ. ಇಲ್ಲಿಯ ನೆಲ
ಫಲವತ್ತಾಗಿದೆ, ಭತ್ತ ಇಲ್ಲಿಯ ಪ್ರಮುಖ
ಬೆಲೆ. ಸು. 807,763 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. ದೇಶದ
ಪ್ರತಿಶತ 20ಜನರು ಭತ್ತ ಬೆಳೆಯುವ
ರೈತರು. ಅಕ್ಕಿ ರಫ್ತಾಗುತ್ತದೆ. ಭತ್ತದ
ನಂತರ ಟೀ ಇಲ್ಲಿಯ ಪ್ರಮುಖ
ಬೆಳೆ ಎಂದು ಹಿಂದಿನ ಪುಟಗಳಲ್ಲಿ
ಹೇಳಲಾಗಿದೆ. ರಬ್ಬರ್ ಇಲ್ಲಿಯ ವಾಣಿಜ್ಯ
ಬೆಲೆ.
‘ಕನಕ
ಲಂಕೆ’ ಎಂಬ ಹೆಸರು ಲಂಕೆಯ
ಸಂಪತ್ತನ್ನು ಧ್ವನಿಸುತ್ತದೆ. ಲಂಕೆ ಸಂಪಧ್ಭರಿತವಾಗಿತ್ತು ಎಂದು
ನಾವು ಅರ್ಥೈಸಬಹುದು. ಆಗಿನ ಜನಜೀವನ ಮಾತ್ರವಲ್ಲ
ರಾಜಭಂಡಾರವೂ ಕೃಷಿಯನ್ನೇ ಅವಲಂಬಿಸಿತ್ತು.
ಪ್ರಮುಖ
ನದಿಗಳ ಉಗಮ ಸ್ಥಳ ಶ್ರೀ
ಪಾದ. ಈ
ಪರ್ವತ ಶಿಖರದ ಮೇಲೆ ಅಪರೂಪದ
ಕಾಡುಪ್ರಾಣಿಗಳಿರುವ ಶ್ರೀಲಂಕಾದ
ರಾಷ್ಟ್ರೀಯ ಉದ್ಯಾನವನ ಇದೆ. ಕಾಡು ಪ್ರಾಣಿಗಳಿಗೆ
ಧಕ್ಕೆಯಾಗದಿರಲಿ ಎಂಬ ಆತಂಕದಿಂದ ಶ್ರೀ
ಲಂಕಾ ಸರಕಾರ ಈ ಬೆಟ್ಟದ
ಮೇಲೆ ಪ್ರವಾಸಿಗರು ಉಳಿದುಕೊಳ್ಳಲು ವ್ಯವಸ್ಥ್ತೆ ಮಾಡಿಲ್ಲ.
ಶ್ರೀ ಪಾದದ ಶಿಖರದ ಮೇಲೆ ‘ಹೆಜ್ಜೆಗುರುತು’(ಶ್ರೀ ಪಾದ) ಪೂಜೆಗೊಳ್ಳುತ್ತಿದೆ. ಶ್ರೀಪಾದಕ್ಕೆ ದೇವಾಲಯ ಕಟ್ಟಲಾಗಿದೆ. ಬೌದ್ಧರ ಪ್ರಕಾರ ಈ ಹೆಜ್ಜೆ ಗುರುತು ಬುದ್ಧನದು ಹೀಗಾಗಿ ಈ ಬೆಟ್ಟ ಪಾವಿತ್ರ್ಯ ಪಡೆದು ‘ಶ್ರೀಪಾದ‘ ಎನಿಸಿಕೊಂಡಿದೆ. ಬುದ್ಧನ ಮೂರನೆಯ ಶ್ರೀಲಂಕಾ ಭೇಟಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 7500 ಅಡಿ ಎತ್ತರವಿರುವ ಶ್ರೀಪಾದಕ್ಕೆ ಕೆಲನಿಯಿಂದ ಹೋಗಿ ಭೇಟಿ ನೀಡಿ ತನ್ನ ಹೆಜ್ಜೆ ಗುರುತನ್ನು ಬಿಟ್ಟು ಹೋದ ಎನ್ನುವುದು ಕಥೆ.
No comments:
Post a Comment