Monday, August 31, 2015

ರಾವಣನ ಕನಕ ಲಂಕೆಯಲ್ಲಿ ಒಕ್ಕೆಲಕಲೆ ಪೊಂಜೊವು..... ಭಾಗ 3

ಪಿನ್ನವೆಲಾದ ಆನೆ ಅನಾಥಾಲಯ:




ಟೆಮಿರಿಂಡ್ ಹೋಟೇಲನಿಂದ ಪಿನ್ನೆವಾಲಾದ ಆನೆ ಪಾರ್ಕ್ಗೆ ನಮ್ಮ ಬಸ್ಸು ಹೊರಟಿತು. ಇಲ್ಲಿಯ ಆನೆಗಳ ಅನಾಥಾಶ್ರಮ ವಿಶ್ವ ಪ್ರಸಿದ್ಧವಾಗಿದೆ. ಹೀಗಾಗಿ ಇದು ಪ್ರಸಿದ್ಧ ಪ್ರವಾಸೀ ತಾಣ. 1975ರಲ್ಲಿ ಸ್ಥಾಪಿಸಲಾದ ಅನಾಥ ಆನೆಗಳಲ್ಲಿ ಕೆಲವೇ ದಿನಗಳಲ್ಲಿ ಒಂದು ಆನೆ ಮರಿಹಾಕಿತು. ಅದೇ ವರ್ಷ 5 ಆನೆಗಳ ಜನನವಾಯಿತು. ಐದು ಆನೆಗಳು 1997ರಲ್ಲಿ 56 ಆನೆಗಳಿಗೆ ಜನ್ಮನೀಡಿದುವು. 1998ರಲ್ಲಿ ಆನೆಗಳ ಸಂಖ್ಯೆ 63ಕ್ಕೆ ಹೋಯಿತು. 2000ದಲ್ಲಿ 70, 2003ರಲ್ಲಿ 65. ಮೊದಲ ಮರಿಹಾಕಿದಾಗಲೇ ಅನಾಥ ಆನೆ ಸಾಕಣೆ ಕೇಂದ್ರ ವಿಶ್ವದ ಗಮನಸೆಳೆಯಿತು. ಇಲ್ಲಿಯ ಆನೆಗಳು ಶಿಸ್ತಿನ ಸಿಪಾಯಿಗಳಂತೆ ಇವೆ. ಮುದಿ ಆನೆಯಿಂದ ಹಿಡಿದು, ಮರಿ ಆನೆಗಳವರೆಗೆ ಇರುವ ಆನೆಗಳ ಅವಿಭಕ್ತ ಕುಟುಂಬವನ್ನು ನೋಡುವುದೇ ಆನಂದ. ‘ಮಹಾ ಒಯ (iveಡಿ ಒಚಿhಚಿ ಔಥಿಚಿ) ನದಿಯಲ್ಲಿ ಸ್ವಚÀಂದವಾಗಿ 2ಗಂಟೆಗಳ ಕಾಲ ವಿಹರಿಸುವ ಆನೆಗಳು, ಮರಿ ಆನೆಗಳ ಜೊತೆ ನೀರಾಟವಾಡುತ್ತವೆ. ಆನೆಗಳು ನೀರಾಟ ಮುಗಿಸಿ ನಮ್ಮೆಲ್ಲರ ಮುಂದೆ ಶಿಸ್ತಿನ ಸಿಪಾಯಿಗಳಂತೆ ಮನೆಗೆ ಹೋದುವು. ಇವುಗಳಿಗೆ ಮಾನವರ ಹೆಸರನ್ನು ಇಡಲಾಗಿದೆ. ‘ವಿಜಯ, ನೀಲ, (ಗಂಡಾನೆಗಳು) ಕುಮಾರಿ, ಅನುಷಾ, ಮೈಥಿಲಿ ಕೊಮಾಲಿ -ಇತ್ಯಾದಿ ಆಕರ್ಷಕ ಹೆಸರುಗಳಿವೆ.
ಇದು ಪ್ರವಾಸಿ ಕೇಂದ್ರವಾದುದರಿಂದ ಇಲ್ಲಿ ಅಂಗಡಿಗಳು ಯೇಥೇಚ್ಚವಾಗಿವೆ. ಇಲ್ಲಿ ನಾವು ಕರೆನ್ಸಿಗಳನ್ನು ವಿನಿಮಯ ಮಾಡಿ ಕೊಂಡೆವು. ಭಾರತದ 100 ರೂಪಾಯಿಗೆ ಇಲ್ಲಿಯ ಅಂಗಡಿಗಳಲ್ಲಿ 220 ರೂಪಾಯಿ ಸಿಕ್ಕಿತು. ಮುಂದೆ ಕೆಲವು ಕಡೆ ಇದಕ್ಕಿಂತಲೂ ಹೆಚ್ಚು ಸಿಕ್ಕಿತು. ಎಲ್ಲಾ ಕಡೆ ನಮ್ಮ ಹಣವನ್ನು ಶ್ರೀ ಲಂಕಾ ಹಣದೊಂದಿಗೆ ವಿನಿಮಯ ಮಾಡಬಹುದಿತ್ತು.
ಅಲ್ಲಿಂದ ನಾವು 40 ಕಿಲೋಮೀಟರ್ ದೂರದ ಕ್ಯಾಂಡಿಗೆ ಹೊರಟೆವು. ಮಾರ್ಗ ಮಧ್ಯದಲ್ಲಿ ಒಂದು ಆಯುರ್ವೇದ ಕೇಂದ್ರ (heಡಿbe gಚಿಡಿಜeಟಿ)ಕ್ಕೆ ಭೇಟಿ ನೀಡಿದೆವು. ಇಲ್ಲಿ ಅನೇಕ ಬಗೆಯ ಔಷದೀಯ ಗಿಡಗಳನ್ನು ಪರಿಚಯಿಸಿದರು. ಕೆಲವೊಂದು ನಮ್ಮಲ್ಲಿ ಇದ್ದುದು. ಇಲ್ಲಿ ಚಿಕಿತ್ಸೆ ನೀಡುತ್ತಾರೆ. ಜತೆಗೆ ಇಲ್ಲಿ ಔಷಧಿಯನ್ನು ತಯಾರಿಸಿ ಬಾಟ್ಲಿಂಗ್ ವ್ಯವಸ್ಥೆ ಮಾಡಿ ಮಾರುತ್ತಾರೆ. ಬೆಲೆ ಮಾತ್ರ ದುಬಾರಿ. ನಮ್ಮ ಮಹಿಳೆಯರಲ್ಲಿ ಇಬ್ಬರು ತರುಣಿಯರಿಗೆ ಮೇಕಪ್ ಮಾಡಿ ತೋರಿಸಿದರು. ಮೇಕಪ್ ಕೈಗಳು ಪುರುಷರದ್ದಾದುದರಿಂದ ನಾವು ತುಳು ಭಾಷೆಯಲ್ಲಿ ತರುಣಿಯರನ್ನು ಛೇಡಿಸದೆ ಇರಲಿಲ್ಲ. ‘ಇವರಿಗೆ ನಾವು ಮುದುಕಿಯರಾಗಿ ಕಾಣುತ್ತೇವೆ. ನಮ್ಮ ಚರ್ಮದ ನೆರಿಗೆ ತೆಗೆದರೆ ಆಗ ಇವರ ಔಷಧಕ್ಕೆ ಬೆಲೆ ಬರುತ್ತದೆಎಂದೆ ನಾನು. ನಮ್ಮ ಭಾಷೆ ಮಸಾಜ್ ಮಾಡುವವನಿಗೆ ಅರ್ಥ ಆಗಿಲ್ಲ. ಮೇಕಪ್ ಮಸಾಜ್ ಪರಿಣಾಮಕಾರಿಯಾಗಿತ್ತು ಎಂದರೆ ತಪ್ಪಾಗಲಾರದು.
ಬೆಲೆ ಹೆಚ್ಚಾದರೂ ಕೆಲವರು ಸೌಂದರ್ಯ ಸಾಧನಗಳನ್ನು ಖರೀದಿಸಿದರು.
ನಮ್ಮ ಕಾರ್ಯಕ್ರಮದಂತೆ ಇಲ್ಲಿಂದ ಶ್ರೀ ಲಂಕಾದ ಜಾನಪದ ನೃತ್ಯ ನೋಡಲು ಹೋಗಬೇಕಿತ್ತು ಆದರೆ ಕ್ಯಾಂಡಿಗೆ ಹೋಗಲು ತಡವಾಯಿತು ಎಂದು ನೃತ್ಯನೋಡುವ ಕಾರ್ಯಕ್ರಮ ರದ್ದಾಯಿತು. ನಮ್ಮ ಮಹಿಳೆಯರು ಪ್ರತಿಭಟಿಸದೆ ಉಳಿಯಲಿಲ್ಲ. ‘ನೀನು ಬೇಕೆಂದೇ ಆಯುರ್ವೇದ ಸೆಂಟರಿನಲ್ಲಿ ನಮ್ಮನ್ನು ಬಿಟ್ಟು ಮಾಯವಾದೆ.’ ಎಂದರು. ನಮ್ಮ ಬಂಟ ಮಹಿಳೆಯರ ಗತ್ತನ್ನು ಕೊಲೊಂಬೋ ವಿಮಾನ ನಿಲ್ದಾಣದಲ್ಲಿ ನೋಡಿ ಬೆರಗುಗೊಂಡು ಬೆಚ್ಚಿದ್ದ ಕನಾಲ್ ಇಲ್ಲಿ ಪೆಚ್ಚಾದ. ಆದರೆ ಆತನಿಂದಾಗಿ ಅಲ್ಲಿ ನಮ್ಮ ಸಮಯ ಹಾಳಾದುದು ಸುಳ್ಳಲ್ಲ. ನಮ್ಮ ಬಸ್ಸು ಕ್ಯಾಂಡಿಯತ್ತ ಓಡಿತು. ದಾರಿಯಲ್ಲಿಗೆಂದಾಳೆಎಳನೀರು ನೋಡಿ ಕುಡಿಯಬೇಕು ಎಂದೆವು ಕೆಲವರು. ಗೈಡ್ ಪ್ರಕಾರ ಗೆಂದಾಳೆ ಎಳನೀರು ಬೆಳಿಗ್ಗೆ ಮಾತ್ರ ಕುಡಿಯಬೇಕು. ಅದರಲ್ಲಿ ಇರುವ ಸಕ್ಕರೆ-ಪೌಷ್ಟಿಕಾಂಶ ರಾತ್ರಿ ಮಲಗುವ ಮೊದಲು ಬೆವರಿನ ರೂಪದಲ್ಲಿ ಹೋಗಬೇಕು. ಆದರೆ ನನಗೆ ಈತ ಹೆಳುವುದರಲ್ಲಿ ಸತ್ಯಾಂಶ ಇದೆಯೋ ಅನುಮಾನ. ನಮ್ಮೂರಿನಲ್ಲಿ ಜ್ಞಾನ ಯಾಕೆ ಇಲ್ಲ? ‘ಬಸ್ಸು ನಿಲ್ಲಿಸಿ 39ಮಂದಿ ಮಹಿಳೆಯರು ಇಳಿದರೆ ಮತ್ತೆ ಹತ್ತುವಾಗ ಸಮಯ ಕೈಜಾರುತ್ತದೆ. ಮೊದಲೇ ಗುತ್ತುಗಳ ಗತ್ತಿನ ಮಹಿಳೆಯರು. ಪಾಪದ ಕನಾಲ್ನಿಂದ ಹೇಗೆ ನಿಭಾಯಿಸಲು ಸಾಧ್ಯ? ಎಂದು ಈತ ತಪ್ಪಿಸಿಕೊಳ್ಳೋಕೆ ಕಾರಣ ನೀಡುತ್ತಾನೆಯೋ? ಹಾಗಂತ ಕನಾಲ್ನಲ್ಲಿ ನಗುತ್ತಾ ಕೇಳಿದೆ. ಆತ ಪ್ರಾಮಾಣಿಕವಾಗಿ ಹೇಳಿದಅದಕ್ಕಾಗಿ ಹೇಳಿಲ್ಲ. ಸಿಂಹಳೀಯರು ಹಾಗೆಯೇ ತಿಳಿದಿದ್ದೇವೆ.’ ಎಂದ.

ಬಸ್ಸಿನಲ್ಲಿ ಸುಮ್ಮನೆ ಕೂರುವಾಗ ಸಮಯ ಕಳೆಯಲು ``ಇಂದ್ರಕ್ಕ ನೀವೊಂದು ಕಥೆ ಹೇಳಿಎಂದರು ಶರ್ವಾಣಕ್ಕ. ಆಗ ಭಾರತದ ಉತ್ತರ ಭಾಗದಲ್ಲಿ ಲಂಕೆ ಸೃಷ್ಟಿಯಾದ ಬಗ್ಗೆ ಇರುವ ಜನಪದ ಕಥೆಈಶ್ವರ ಪಾರ್ವತಿಗಾಗಿ ಸೃಜಿಸಿದ ಕನಕ ಲಂಕೆ ನೆನಪಾಯಿತು

No comments:

Post a Comment