Thursday, September 3, 2015

ರಾವಣನ ಕನಕ ಲಂಕೆಯಲ್ಲಿ ಭಾಗ 5

ದಂತ ದೇವಾಲಯದ ಕೆಳಭಾಗದಲ್ಲಿ 

ಮುಸ್ಲಿಂ ಭಕ್ತರು ಮತ್ತು ಕ್ರೈಸ್ತರು ಇದನ್ನು `ಏಡಮ್ ಪೀಕ್ಎಂದು ಕರೆಯುತ್ತಾರೆ. ಅವರ ಪ್ರಕಾರ ಈವ್ ಆಡಮರು ದೇವರಿಂದ ಪರಿತ್ಯಜಿಸಲ್ಪಟ್ಟು ಇಲ್ಲಿಗೆ ಬಂದು ಬೀಳುತ್ತಾರೆ. ಹೀಗಾಗಿ ಹೆಜ್ಜೆ ಗುರುತು ಏಡಮನದ್ದು. ಆದ್ದರಿಂದ ಇದನ್ನು ಏಡಮ್ ಪೀಕ್ ಎನ್ನುವುದೂ ಇದೆ. 14ನೆಯ ಶತಮಾನದ ಪರ್ಷಿಯನ್ ಪದ್ಯದಲ್ಲಿ ಅಲ್ಲಾ, ಸಾಂಬಾರ ವಸ್ತು ಮತ್ತು ಹೂಗಳನ್ನು ಶ್ರೀ ಪಾದದಲ್ಲಿ ಸೃಷ್ಟಿ ಮಾಡಿ ಭೂಮಿಯನ್ನು ಸ್ವರ್ಗವನ್ನಾಗಿಸಿದ ಎಂದಿದೆ.
ಕ್ರೈಸ್ತರ ಪ್ರಕಾರ ಥಾಮಸ್ ಎನ್ನುವವನು ಶ್ರೀಲಂಕಾಗೆ ಮತಾಂತರ ಮಾಡಲು ಬಂದಾಗÀ ಇಲ್ಲಿ ಕೆಲವು ಕಾಲ ವಾಸವಿದ್ದ. ಹೀಗಾಗಿ ದೃಷ್ಟಿಯಿಂದ ಕೂಡಾ ಕ್ರೈಸ್ತರಿಗೆ ಇದು ಪವಿತ್ರ. ಒಟ್ಟಿನಲ್ಲಿ ಇದು ಮೂರು ಧರ್ಮಗಳವರಿಗೂ ಪವಿತ್ರ ಸ್ಥಳ.
ಆದರೆ ಹಿಂದುಗಳ ನಂಬಿಕೆಯಂತೆ ಇದು ಶಿವನ ಹೆಜ್ಜೆ ಗುರುತು. ಶಿವನ ನೆಲೆ. ಹೀಗೆ ಎಲ್ಲಾ ಧರ್ಮದವರಿಗೆ ಧಾರ್ಮಿಕ ಕ್ಷೇತ್ರವಾಗಿಯೂ ಶ್ರೀ ಪಾದ ಶ್ರೀಲಂಕನರಲ್ಲಿ ಮಹತ್ವ ಪಡೆದಿದೆ.
                ಇಂತಹ ರತ್ನ ಗರ್ಭ ಶ್ರೀ ಪಾದವನ್ನು ನಮ್ಮ ಪ್ರವಾಸ ಪಟ್ಟಿಯಲ್ಲಿ ಸೇರಿಸಿಲ್ಲ. ದೂರದಿಂದ ಲಿಂಗಾಕಾರದಲ್ಲಿ ಕಾಣುವ ಬೆಟ್ಟವನ್ನಷ್ಟೇ ತೋರಿಸಿ `ಶ್ರೀಪಾದಎಂದ. ನನ್ನಂತೆ ಕೆಲವರಿಗೆ ಬೇಸರವಾಯಿತು. ಆಗ ಕನಾಲ್ ಬೆಟ್ಟ ಹತ್ತಲು ಈಗಿನ ಪ್ರವಾಸಕಾಲದಲ್ಲಿ ಸಾಧ್ಯವಿಲ್ಲ ಎಂದ.
ಇದು ಸಮುದ್ರ ಮಟ್ಟದಿಂದ 7500 ಅಡಿ ಎತ್ತರದ ಪರ್ವತ ಪ್ರದೇಶ. ಇದರ ತುದಿಯಲ್ಲಿ ನಿಂತು ನೋಡಿದರೆ ಇಡೀ ಶ್ರೀ ಲಂಕಾವನ್ನು ಕಾಣಬಹುದು (?) ಎಂದ. ಇಲ್ಲಿಗೆ ಹತ್ತಲು 3ರಿಂದ 4 ಗಂಟೆ ಮತ್ತು ಇಳಿಯಲು 3ರಿಂದ 4 ಗಂಟೆ ಬೇಕು. ರಾತ್ರ್ರಿ 1 ಗಂಟೆಗೆ ಪ್ರಯಾಣ ಆರಂಭಮಾಡಿದರೆ ಸೂರ್ಯೋದಯದ ಹೊತ್ತಿಗೆ ಅಲ್ಲಿ ತಲುಪುತ್ತದೆ. ಜನರು ಅದರಲ್ಲೂ ವಿದೇಶಿಯರು ಪರ್ವತ ಹತ್ತುವುದು ಸೂರ್ಯೋದಯ ನೋಡಲು. ತಾನು ವರ್ಷಕ್ಕೆ ಮೂರ್ನಾಲ್ಕು ಬಾರಿ ವಿದೇಶಿ ಪ್ರಯಾಣಿಕರೊಡನೆ ಹತ್ತುತ್ತೇನೆಎಂದ. ಕನಾಲ್ ಮಾಹಿತಿ ತಪ್ಪಾಗಿಲ್ಲ. 2243ಮೀಟರ್ ಎತ್ತರದ ಶ್ರೀ ಪಾದಕ್ಕೆ ವರ್ಷಕ್ಕೆ 300,000 ಭಕ್ತರು ಬರುತ್ತಾರೆ.
ಬುದ್ಧ ತನ್ನ ಜೀವಿತಾವದಿಯಲ್ಲಿ ಶ್ರೀಲಂಕಾಗೆ ಭೇಟಿನೀಡಿದ್ದಾನೋ ಇಲ್ಲವೋ ಬೇರೆ ಮಾತು. ಆದರೆ ಬೌದ್ಧ ಧರ್ಮ ಇಲ್ಲಿ ಪ್ರಚಾರ ಆದುದು ಆಶೋಕನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರೆಯ ಮೂಲಕ. ಗಯೆಯ ಯಾವ ಬೋಧಿಯಡಿಯಲ್ಲಿ ಕುಳಿತು ತಥಾಗತ ಬುದ್ಧನಾದನೋ ಅದೇ ಬೋಧಿ ವೃಕ್ಷದ ರೆಂಬೆಯನ್ನು ತಂದು ಮಹೇಂದ್ರ  ಅನುರಾಧಪುರದಲ್ಲಿ ನೆಡುತ್ತಾನೆ. ಅದು ಈಗಲೂ ಜೀವಂತವಾಗಿದೆ. ಮುಂದೆ ಗಯೆಯ ಬೋಧಿವೃಕ್ಷ ನಾಶವಾದಾಗ ಮತ್ತೆ ಅನುರಾಧಪುರದ ಬೋಧಿವೃಕ್ಷದ ರೆಂಬೆಯನ್ನು ಭಾರತಕ್ಕೆ ತಂದು ಯಾ ಕ್ಷೇತ್ರದಲ್ಲಿ ಹಳೆಯ ಮರ ಇದ್ದ ಜಾಗದಲ್ಲಿ ನೆಡಲಾಯಿತು.
ನಾವು ಸ್ವಲ್ಪ ಬೆಳಕಿರುವಾಗಲೇ ಕ್ಯಾಂಡಿ ತಲುಪಿದೆವು.
ಕ್ಯಾಂಡಿಗೆ ಮೊದಲು ಡಚ್ಚರು ಅನಂತರ ಪೋರ್ಚುಗೀಸರು ಬಂದು ಕೆಲವು ಇಲ್ಲಿಯ ಅರಸರನ್ನು ಕ್ರೈಸ್ತ ಮತಕ್ಕೆ ಮತಾಂತರಗೊಳಿಸುವುದರಲ್ಲಿಯೂ ಯಶಸ್ವಿಯಾದರು. ಆದರೆ (1604-1635)ಸೇನರನಾಥ ಮತ್ತು ಅವನ ಮಗ 2ನೆಯ ರಾಜಾಸಿಂಗ ಅವರನ್ನು ಎದುರಿಸಿದ್ದರು. 1815ರಲ್ಲಿ ಬ್ರಿಟಿಷರು ವಶಪಡಿಸಿಕೊಳ್ಳುವವರೆಗೆ ಕ್ಯಾಂಡಿ ಶ್ರೀಲಂಕಾದ ಅರಸರ ರಾಜಧಾನಿ ಆಗಿತ್ತು ಮುಂದೆ ಕೊಲೊಂಬೋ ರಾಜಧಾನಿ ಆಯಿತು.
ಕ್ರಿ.. 4ರಿಂದ ಕ್ರಿ..1100 ರವರೆಗೆ ಅನುರಾಧಪುರ ಏಷ್ಯಾದಲ್ಲಿಯೇ ಗಮನ ಸೆಳೆದ ರಾಜಧಾನಿಯಾಗಿತ್ತು. ಮುಂದೆ ಹೊರದೇಶಗಳಿಂದ ಆದ ಆಕ್ರಮಣದಿಂದಾಗಿ ರಾಜದಾನಿಯುಪೊಲನ್ನುವರಗೆ ಸ್ಥಳಾಂತರವಾಯಿತು. ಅಲ್ಲಿಂದದಂಬದೆನಿಯಾಗೆ. ಅಲ್ಲಿಂದ ಮುಂದೆ ರಾಜಧಾನಿಯು ಬದಲಾಗುತ್ತಾ ಕೊನೆಗೆ ಕ್ಯಾಂಡಿಗೆ ಸ್ಥಳಾಂತರವಾಗುತ್ತದೆ. ರಾಜಧಾನಿ ಎಲ್ಲೆಲ್ಲಿ ಸ್ಥಳಾಂತರವಾಗುತ್ತದೆ ಅಲ್ಲಲ್ಲಿಗೆ ಬುದ್ಧನ ಹಲ್ಲುಗಳ ಕರಂಡಕವೂ ಸ್ಥಳಾಂತರವಾಗಿ ಅಲ್ಲಲ್ಲಿ ಅರಮನೆಯ ಆವರಣದ ಒಳಗೆ ಸುಂದರ ಬುದ್ಧ ದೇವಾಲಯ ನಿರ್ಮಾಣವಾಗುತ್ತದೆ. ಕ್ಯಾಂಡಿಯ ಪುಟ್ಟ ಅರಮನೆಯ ಸಂಕೀರ್ಣದಲ್ಲಿ ಈಗಿನಶ್ರೀ ದಲದ ಮಲಿಗಾವಾ  (Sri Dalada Maligawa )  ಎಂಬ ಅಮೋಘ ದೇವಾಲಯವನ್ನು ಕ್ಯಾಂಡಿಯ ಅರಸ ನಿರ್ಮಿಸುತ್ತಾನೆ. ಕ್ಯಾಂಡಿ ಪರ್ವತ ಪ್ರದೇಶವಾಗಿದ್ದು ಹೊರಗಿನವರಿಗೆ ಬರಲು ಆಗಿನ ಕಾಲದಲ್ಲಿ ಕಷ್ಟಸಾಧ್ಯವಾಗಿತ್ತು. ಹೀಗಾಗಿ ಸುರಕ್ಷತೆಯ ದೃಷ್ಠಿಯಿಂದ ಕ್ಯಾಂಡಿಯನ್ನು ಆಯ್ಕೆಮಾಡಿಕೊಳ್ಳುತ್ತಾನೆ.
ಸಿಂಹಳದ ದಂತ ಕಥೆಯ ಪ್ರಕಾರ ಭಾರತದ ಕುಶಿನಾರದಲ್ಲಿ ಬುದ್ಧ ಪರಿನಿರ್ವಾಣ ಆದ ಬಳಿಕ ಆತನ ಚಿತೆಯಿಂದ ತೆಗೆದ ದಂತವು ಅರಹತ್ ಕೆಮ (Arahat Khema)  ಎಂಬ ಅರಸನ ಪಾಲಿಗೆ ಬಂತು. ಮುಂದೆ ಅದು ಬ್ರಹ್ಮದತ್ತನ ಪಾಲಾಗುತ್ತದೆ. ಬ್ರಹ್ಮದತ್ತ ಅದನ್ನುದಂತ ಪುರಿ (ಈಗಿನ ಒರಿಸ್ಸಾದ ಪುರಿ)ಯಲ್ಲಿ ರಕ್ಷಿಸಿಡುತ್ತಾನೆ.ಬುದ್ಧ ದಂತ ಯಾವ ರಾಜನ ಬಳಿ ಇರುತ್ತದೆಯೋ ರಾಜ್ಯ ಸುಭಿಕ್ಷವಾಗುತ್ತದೆ ಎಂಬ ನಂಬಿಕೆ ಬೌದ್ಧರಲ್ಲಿ ಇತ್ತು ಮತ್ತು 
ದಂತ ದೇವಾಲಯದ ಕೆಳ ಅಂತಸ್ತಿನಲ್ಲಿ

ಈಗಲೂ ಇದೆ. ಹೀಗಾಗಿ ಬುದ್ಧ ದಂತವನ್ನು ರಕ್ಷಿಸಲು ಹಾಗೂ ಅದರ ಪಾವಿತ್ರ್ಯವನ್ನು ಕಾಪಾಡಲು ಎಲ್ಲಾ ಕಾಲದ ಬೌದ್ಧ ಧರ್ಮದ ಅರಸರು ಶ್ರಮಿಸಿದ್ದರು. ಶ್ರೀಲಂಕಾದ ಅರಸರು ಮತ್ತು ಈಗಿನ ಸರಕಾರವು ಅದೇ ಭಾವನೆಯನ್ನು ಹೊಂದಿದೆ. ಅಲ್ಲದೆ ಇಲ್ಲಿಯ ಪ್ರಜೆಗಳಿಗೂ ಬುದ್ಧ ದಂತ ಭಾವನಾತ್ಮಕ ವಿಷಯ. ಬುದ್ಧನ ಹಲ್ಲು ಮತ್ತು ಅನುರಾಧಪುರದ ಬೋಧಿವೃಕ್ಷ -ಇವೆರಡನ್ನೂ ರಕ್ಷಿಸುವುದು ಆಡಳಿತ ನಡೆಸುವವರ ಹೊಣೆಗಾರಿಕೆ ಮತ್ತು ಅವರಿಗೆ ಶುಭದಾಯಕ ಎಂಬ ನಂಬಿಕೆ ಇಲ್ಲಿ ಇದೆ



ಶ್ರೀದಲದ ಮಲಿಗಾವದಂತ ದೇವಾಲಯ:

ಬುದ್ದನ ಪವಿತ್ರ ದಂತ ಇರುವ ದೇವಾಲಯವನ್ನು  “ಶ್ರೀ ದಲದ ಮಲಿಗಾವಎಂದು ಕರೆಯುತ್ತಾರೆ. ದೇವಸ್ಥಾನದ ಮತ್ತು ಅರಮನೆಯ ಆವರಣ ವಿಶಾಲ ಭೂಪ್ರದೇಶವನ್ನು ಒಳಗೊಂಡಿದೆ. ಒಳಗೆ ಹೋಗಲು ಸೆಕ್ಯೂರಿಟಿ ಚೆಕ್ಕಿಂಗ್ ಇತ್ತು. ನಮ್ಮ ಮುಂದೆ ಇದ್ದ ಹುಡುಗಿಯೋರ್ವಳು ಎದೆ ಬಿಟ್ಟು ಆಧುನಿಕ ಉಡುಗೆ ತೊಟ್ಟಿದ್ದಳು. ಅವಳಿಗೆ ಸೆರಗಿನಂತೆ ಶಾಲನ್ನಾದರೂ ಹೊದ್ದು ಕೊಳ್ಳಲು ಸೂಚಿಸಿ ಆಕೆ ಹಾಗೆ ಮಾಡಿದ ಮೇಲೆ ಒಳಗೆ ಬಿಟ್ಟರು. ಅಪೂರ್ವ ದೇವಾಲಯದ  ಪ್ರವೇಶ ದ್ವಾರದಿಂದಲೆ ಬುದ್ಧನ ವಿವಿಧ ಮುದ್ರೆಯ ಮೂರ್ತಿಗಳು ಹಾಗೂ ಆತನಿಗೆ ಸಂಬಂಧ ಪಟ್ಟ ಚಿತ್ರಗಳು ಕಾಣಲು ಸಿಗುತ್ತವೆ. ‘ಹೇಮಮಾಲಿಎಂಬ ಬಾರತೀಯ ರಾಜಕುಮಾರಿ ಬುದ್ಧನ ದಂತವನ್ನು ತನ್ನ ತಲೆಯ ಕೂದಲ ಗಂಟಿನಲ್ಲಿ ಅಡಗಿಸಿ ಸಿಂಹಳಕ್ಕೆ ತಂದಳೆನ್ನುತ್ತಾರೆ. ರಾಜಕುಮಾರಿ ಹಾಗೂ ಆಕೆಯ ಪತಿದಂತಎಂಬ ಭಾರತೀಯ ರಾಜಕುಮಾರನ ತೈಲ ಚಿತ್ರ ದೇವಾಲಯದ ಉಪ್ಪರಿಗೆ ಹತ್ತುವ ಮೆಟ್ಟಲ ಗೋಡೆಯ ಮೇಲೆ ಇದೆ.  

No comments:

Post a Comment