ಬುದ್ಧ ದಂತ ಶ್ರೀಲಂಕಾಗೆ ತಲುಪಿದ
ಹಿನ್ನೆಲೆ:
ಇಲ್ಲಿಯ
ಕಥೆಯಂತೆ ಬುದ್ಧ ಸತ್ತು 800ವರ್ಷಗಳ
ಬಳಿಕ ಅಂದರೆ ಸುಮಾರು ಕ್ರಿ.ಶ. 4ನೆಯ ಶತಮಾನದಲ್ಲಿ
ಈ ಬುದ್ಧ ದಂತ
ಕಳಿಂಗ ಅರಸ ಗುಹಸೇನನ ಕೈವಶವಾಗುತ್ತದೆ.
ಕಳಿಂಗ ಅರಸನು ಈ ಬುದ್ಧ
ದಂತವನ್ನು ಪೂಜಿಸಲು ತೊಡಗುತ್ತಾನೆ. ಆಗ
ಕಳಿಂಗದ ಜನರು ಪಾಂಡು ಮಹಾರಾಜನಲ್ಲಿ
‘ಗುಹಸೇನÀ ದೇವರಲ್ಲಿ ಶ್ರದ್ದೆ ಇಲ್ಲದವ, ಬುದ್ಧನ
ಹಲ್ಲನ್ನು ಪೂಜೆ ಮಾಡುತ್ತಾನೆ’ ಎಂದು ದೂರುತ್ತಾರೆ. (ಬುದ್ಧನ
ಬೋಧನೆಯಂತೆ ದೇವರಿಲ್ಲ,) ಪಾಂಡು ಮಹಾರಾಜ ಬುದ್ಧ
ದಂತವನ್ನು ನಾಶಮಾಡುವ ಉದ್ಧೇಶದಿಂದ ಅದನ್ನು ತನ್ನಲ್ಲಿಗೆ ತರಲು
ಆಜ್ಞೆ ನೀಡುತ್ತಾನೆ. ಆದರೆ ಬುದ್ಧ ದಂತ
ಬರುವಷ್ಟರಲ್ಲಿ ಅರಸನ ಮನಸ್ಸು ಪರಿವರ್ತನೆಗೊಂಡು
ಆತನೂ ಬೌದ್ಧ ಧರ್ಮವನ್ನು ಒಪ್ಪಿಕೊಳ್ಳುತ್ತಾನೆ.
ಈ ವಿಷಯ ಕ್ಷೀರಧಾರ
ಅರಸನಿಗೆ ತಿಳಿದು ಆತ ತನ್ನ
ಸೇನೆಯೊಂದಿಗೆ ಪಾಂಡುರಾಜನ ಮೇಲೆ ದಂಡೆತ್ತಿ ಬರುತ್ತಾನೆ.
ಯುದ್ಧದಲ್ಲಿ ಕ್ಷೀರಧಾರ ಸಾವನ್ನಪ್ಪುತ್ತಾನೆ.
ಉದೆನಿಯ
ರಾಜಕುಮಾರ ಬುದ್ಧ ದಂತವನ್ನು ಭಕ್ತಿಯಿಂದ
ಪೂಜಿಸಲು ಆರಂಭಿಸುತ್ತಾನೆ. ಹೀಗಾಗಿ ಈತನನ್ನು ‘ದಂತ’ ಎಂದೇ ಕರೆಯುತ್ತಾರೆ. ಈತನ ಭಕ್ತಿಯನ್ನು ಕಂಡ
ಪಾಂಡುರಾಜ ತನ್ನ ಮಗಳು ರಾಜಕುಮಾರಿ
ಹೇಮಮಾಲಿಯನ್ನು ದಂತನಿಗೆ ಮದುವೆಮಾಡಿಕೊಡುತ್ತಾನೆ.
ಇಷ್ಟರಲ್ಲಿ
ಕ್ಷೀರಧಾರ ಅರಸನ ಮಗ ಬೃಹತ್
ಸೇನೆಯೊಂದಿಗೆ ಪಾಂಡು ರಾಜ್ಯಕ್ಕೆ ದಂಡೆತ್ತಿ
ಬರುತ್ತಾನೆ. ಆಗ ಪಾಂಡು ರಾಜನು
ಮಗಳನ್ನು ಮತ್ತು ಅಳಿಯನನ್ನು ಕರೆದು
ಬುದ್ಧನ ದಂತದ ಪುಟ್ಟ ಕರಂಡಕವನ್ನು
ಅವರಿಗೆ ಒಪ್ಪಿಸಿ ಅದರ ರಕ್ಷಣೆಯ
ಭಾರವನ್ನು ಹೊರಲು ಹೇಳಿ ನಗರದಿಂದ
ಹೊರಗೆ ಕಳುಹಿಸುತ್ತಾನೆ.
‘ದಂತ
ಮತ್ತು ರಾಜಕುಮಾರಿ ಹೇಮಮಾಲಿ’
‘ಬುದ್ಧ ದಂತ’ದ ಕರಂಡಕವನ್ನು ರಾಜಕುಮಾರಿಯ
ಕೂದಲ ಗಂಟಿನಲ್ಲಿ ಅಡಗಿಸಿ ಬ್ರಾಹ್ಮಣರ ವೇóಷÀಲ್ಲಿ ಶ್ರೀಲಂಕಾದತ್ತ
ಪ್ರಯಾಣಿಸುತ್ತಾರೆ. ಈ ಕಾಲದಲ್ಲಿ ಬ್ರಾಹ್ಮಣರು
ಇತರ ಧರ್ಮದವರನ್ನು ಸಹಿಸುತ್ತಿರಲಿಲ್ಲ ಎನ್ನುವುದು ಈ ಕಥೆಯಿಂದ ನಾವು
ಅರಿಯಬಹುದು.
ಮೊಗಲರ ಕಾಲದಲ್ಲಿ ರಾಜಗಿರ್ನಲ್ಲಿ ನಡೆದ ಬೌದ್ಧ
ಸಂನ್ಯಾಸಿಗಳ ಸಾಮೂಹಿಕ ಹತ್ಯೆಯನ್ನು ಇಲ್ಲಿ
ನೆನಪುಮಾಡಿಕೊಳ್ಳಬಹುದು. ಆದರೆ
ಮೊಗಲರ ಆಗಮನಕ್ಕೂ ಮೊದಲು ಇದ್ದ ಪ್ರಾಚೀನ
ಭಾರತದಲ್ಲಿ ಬೌದ್ಧರನ್ನು ನಡೆಸುತ್ತಿದ್ದ ರೀತಿಕೂಡಾ ಒಪ್ಪಿಕೊಳ್ಳುವಂತಹದಲ್ಲ. ದಂತ ಮತ್ತು ಹೇಮಮಾಲಿ
ಬ್ರಾಹ್ಮಣರ ವೇಷ ಹಾಕಿ ಭಾರತದಿಂದ
ತಪ್ಪಿಸಿಕೊಂಡು ಬರಬೇಕಾದರೆ ಆ ಕಾಲದಲ್ಲಿ ಬ್ರಾಹ್ಮಣರಿಗೆ
ಅನ್ಯ ಧರ್ಮದ ಬಗ್ಗೆ ಇದ್ದ
ಅಸಹನೆ ಅರಿವಾಗುತ್ತದೆ. ಬೌದ್ಧ ಧರ್ಮ ಹೊರದೇಶಗಳಿಂದ
ಭಾರತಕ್ಕೆ ಆಮದಾದ ಧರ್ಮ ಅಲ್ಲ.
ಭಾರತದ ಹಿಂದುವೊಬ್ಬ ಉಪದೇಶಿಸಿದ, ಮಾನವೀಯತೆಯಿಂದ ಬದುಕಲು ಕಲಿಸಿ ಕೊಟ್ಟ
ಧರ್ಮ. ಇಂತಹ ಧÀರ್ಮವೊಂದು
ಭಾರತದಲ್ಲಿ ನೆಲೆಕಳೆದುಕೊಂಡದ್ದು ನಿಜಕ್ಕೂ ನೋವಿನ ಸಂಗತಿ.
ಕತೆಯ ಪ್ರಕಾರ ಕಳಿಂಗದ (ಒರಿಸ್ಸಾ)
ತಾಮ್ರಲಿಪ್ತಿ ಬಂದರಿನಿಂದ ದೋಣಿಯ ಮೂಲಕ ಪ್ರಯಾಣ
ಆರಂಭಿಸಿ ಲಂಕಾಪಟ್ಟಣಕ್ಕೆ ದಂತ ಮತ್ತು ರಾಜಕುಮಾರಿ
ಹೇಮಮಾಲಿ ತಲುಪುತ್ತಾರೆ. (ಬುದ್ಧ ಬದುಕಿರುವಾಗ ತನ್ನ
ಧರ್ಮ ಶ್ರೀ ಲಂಕಾದಲ್ಲಿ ಸುಮಾರು
2500ವರ್ಷಗಳವರೆಗೆ ಸುರಕ್ಷಿತವಾಗಿರುತ್ತದೆ ಎಂದು ಹೇಳಿದ್ದಾನೆ ಎಂದು
ನಂಬಲಾಗುತ್ತದೆ.) ಆ ಕಾಲದಲ್ಲಿ ಶ್ರೀಲಂಕಾದ
ಅನುರಾಧ ಪುರದಲ್ಲಿ ‘ರಾಜ
ಮೆಘವನ್ನ’
ಆಳುತ್ತಿದ್ದ. ಆತ ಭಾರತದಿಂದ ಶ್ರೀಲಂಕಾಕ್ಕೆ
ಬುದ್ಧ ದಂತ ಬಂದ ಸುದ್ದಿ
ಕೇಳಿ ಸಂಭ್ರಮ ಪಟ್ಟು ಬರಮಾಡಿಕೊಳ್ಳುತ್ತಾನೆ.
ತನ್ನ ಅರಮನೆಯ ಬಳಿಯೇ ಸುಂದರ
ಮಂದಿರ ಕಟ್ಟಿ ಅದರಲ್ಲಿ ಆನೆ
ದಂತವನ್ನು ಪ್ರತಿಷ್ಠಾಪಿಸುತ್ತಾನೆ.
ಅಲ್ಲಿಂದ
ಇಲ್ಲಿಯವರೆಗೂ ಪ್ರತಿವರ್ಷ ಬುದ್ಧ ದಂತವನ್ನು ಮೆರವಣಿಗೆ
ಮಾಡಿ ‘ಪೆರಹರ’ ಎಂಬ ವಾರ್ಷಿಕ ಹಬ್ಬವನ್ನು
ಬುದ್ಧನ ಹೆಸರಲ್ಲಿ ಒಂದು ತಿಂಗಳ ಕಾಲ
ಜೂನ್ ಆಗಸ್ಟ್ ತಿಂಗಳ ಮಧ್ಯೆ
ಆಚರಿಸುತ್ತಿದ್ದರು. ನೂರಕ್ಕೂ ಹೆಚ್ಚು ಆನೆಗಳೊಂದಿಗೆ
ಅಷ್ಟೆ ಚೆಂಡೆವಾದಕರೊಂದಿಗೆ ಆಚರಿಸಲ್ಪಡುವ ಈ ಹಬ್ಬ ವಿಶ್ವ
ಪ್ರಸಿದ್ಧವಾಗಿದೆ. ಯುನೇಸ್ಕೋದ ಪರಂಪರೆಯ ಪಟ್ಟಿಯಲ್ಲಿ ಈ
ದೇವಾಲಯ ಸೇರಿದೆ. ಇತ್ತೀಚಿನ ವರ್ಷಗಳಲ್ಲಿ
ಮೊದಲಿನಷ್ಟು ಅದ್ದೂರಿಯಾಗಿ ಹಬ್ಬ ನಡೆಯುವುದಿಲ್ಲ ಬರೇ
ಹತ್ತು ದಿನಗಳು ಮಾತ್ರ ನಡೆಯುತ್ತದೆ
ಎನ್ನುತ್ತಾನೆ ಕನಾಲ್. ಈ ಹಬ್ಬದಲ್ಲಿ
ಬುದ್ಧನ ‘ನಕಲಿ ದಂತ’ವನ್ನು (Replica) ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ.
ಈ ಅಪೂರ್ವ ದೇವಾಲಯಕ್ಕೆ ಕೆಲವು
ಸ್ಥಳೀಯ ಸಂಘಟನೆಗಳಿಂದ ಆತಂಕ ಎದುರಾಗಿತ್ತು. ಮೊದಲ
ಬಾಂಬ್ ದಾಳಿಯನ್ನು ಜನತಾ ವಿಮುಕ್ತಿ ಎಂಬ
ಸಂಸ್ಥೆ ಹೊತ್ತುಕೊಂಡಿತ್ತು. 1998ರ ಜನವರಿ 25ರಲ್ಲಿ
ತಮಿಳ್ ಈಳಂ(ಐಖಿಖಿಇ) ಆತ್ಮಹತ್ಯಾ
ಧಾಳಿಯನ್ನು ದೇವಾಲಯದ ಒಳಗೆ ನಡೆಸಿ 8 ಮಂದಿ ಸಾವಿಗೀಡಾಗಿ
25 ಮಂದಿ ಗಾಯಗೊಂಡಿದ್ದರು. ಜತೆಗೆ ದೇವಸ್ಥಾನ ಸ್ವರೂಪಕ್ಕೂ
ಧಕ್ಕೆಯಾಗಿತ್ತು. ಮತ್ತೆ ಇದನ್ನು ಸರಿಪಡಿಸಲಾಯಿತು.
ಇಲ್ಲಿ
‘ಮಲವಟ್ಟೆ ಮತ್ತು ಅಸ್ಗೀರಿಯಾ’( Malwatte and Asgiriya) ಎಂಬ
ಎರಡು ವರ್ಗದವರು ವಾರ್ಷಿಕ ಬದಲಾವಣೆಯಲ್ಲಿ (ಪರ್ಯಾಯ)
ಪೂಜೆಯನ್ನು ಮಾಡುತ್ತಾರೆ. ದಿನಕ್ಕೆ ಮೂರು ಹೊತ್ತು
ಪೂಜೆ ನಡೆಯುತ್ತಿದೆ. ಬುಧವಾರ ದಂತಕ್ಕೆ ಆಯುರ್ವೇದ
ಪದ್ಧತಿಯಲ್ಲಿ ಅಭಿಷೇಕ ಇದೆ. ಪರಿಮಳಯುಕ್ತ
ಹೂ ಮತ್ತು ಗಿಡಮೂಲಿಕೆಗಳ ರಸದಿಂದ
ತಯಾರಿಸಿದ ಔಷದೀಯ ರಸದಿಂದ ಅಭಿಷೇಕ
ಮಾಡಿ ಅಭಿಷೇಕದ ರಸವನ್ನು ಭಕ್ತರಿಗೆ
ನೀಡುತ್ತಾರೆ,
ನಾವು ದೇವಾಲಯದ ಒಳಪ್ರವೇಶಿಸುವಾಗ ಕೇರಳದ
ದೇವಸ್ಥಾನದ ಒಳಗೆ ಹೋದಂತೆ ಅನುಭವವಾಯಿತು.
ಕಟ್ಟಡದ ಒಳಬಾಗ ಕೇರಳದ ಮಾದರಿಯಲ್ಲಿದೆ. ಮೂಲಕಟ್ಟಡದಲ್ಲಿ ಮರವನ್ನು
ಹೆಚ್ಚು ಬಳಸಲಾಗಿದೆ. ಕೇರಳದ ಮಾದರಿಯ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಟ್ಟ
ಚೆಂಡೆ ವಾದಕರು ಗರ್ಭಗುಡಿಯ ನೆಲಭಾಗದ
ಬಾಗಿಲ ಎದುರು ನಿಂತು ಚೆಂಡೆವಾದನ
ಮಾಡುತ್ತಿದ್ದರು. ಕರ್ನಾಟಕ ಕರಾವಳಿಯ ಯಕ್ಷಗಾನ
ಕಲೆಯ ನಾಡಿನವರಾದ ನಮಗೆ ಚೆಂಡೆವಾದಕರ ‘ಚೆಂಡೆಯ
ಪೆಟ್ಟು’ ಮೈನವಿರೇಳಿಸಿತು. ಇಡಿಯ ಪರಿಸರದಲ್ಲಿ ಚಂಡೆ
ನಿನಾದ ಮಾರ್ದನಿಸಿ ದೈವಕಳೆ ತಂದಿತ್ತಿತ್ತು. ನಾವು
ಮೆಟ್ಟಲೇರಿ ಮಹಡಿ ಹತ್ತಿ ದಂತ
ಇರುವ ಗರ್ಭಗುಡಿಯ ಮುಂದೆ ನಿಂತೆವು. ಪೂಜೆಯನ್ನು
ನೋಡಿದೆವಾದರೂ ಹೂವಿನ ರಾಶಿಯಲ್ಲಿ ದಂತ
ಇದ್ದ ಕರಂಡಕವನ್ನು ಗಮನಿಸಲಾಗಲಿಲ್ಲ. ಕರಂಡಕವನ್ನು ದಿನಕ್ಕೆ ಒಮ್ಮೆ ತೆರೆಯುತ್ತಾರೆ
ಎಂದ ಗೈಡ್.
ಅಲ್ಲಿಂದ
ಮರಳಿ ಬೇರೆ ದಾರಿಯಲ್ಲಿ ಮೆಟ್ಟಲು
ಇಳಿದೆವು. ಅಲ್ಲಿಯೂ ಮೇಲೆ ಇದ್ದ
ಗರ್ಭಗುಡಿಯ ಪ್ರತಿಕೃತಿಯಂತೆ ಮೇಲಿನ
ಗುಡಿಯ ಅಡಿಯಲ್ಲಿ ಗುಡಿಯೊಂದು ಇತ್ತು. ಇದಕ್ಕೆ ಬೆಳ್ಳಿಯ ಬಾಗಿಲು ಇದೆ.
ಅದನ್ನು ಮುಚ್ಚಿದ್ದರು. ಮುಚ್ಚಿದ ಬಾಗಿಲಿನ ಮುಂದೆ
ಸಾಂಪ್ರದಾಯಿಕ ಉಡುಗೆಯಲ್ಲಿ ನಿಂತು ಚಂಡೆ ವಾದಕರು
ಚಂಡೆ ಬಾರಿಸುತ್ತಿದ್ದರು.
ಹೊರಬರುವ
ದಾರಿಯಲ್ಲಿಯೂ ಅನೇಕ ಬುದ್ಧ ವಿಗ್ರಹಗಳಿವೆ.
ಅಲ್ಲಿ ಪ್ರಾಕೃತ ಭಾಷೆಯ ಬೃಹತ್
ತಾಡಪತ್ರವನ್ನು ಜೋಪಾನವಾಗಿ ಕನ್ನಡಿಯೊಳಗಿನ ಗಂಟಿನಂತೆ ಪ್ರದರ್ಶನಕ್ಕೆ ಇಟ್ಟಿದ್ದಾರೆ ಬುದ್ಧನ ಬೋಧನೆ ಇದ್ದುದು
ಆಗಿನ ಜನಸಾಮಾನ್ಯರ ಭಾಷೆಯಾದ ಪ್ರಾಕೃತದಲ್ಲಿ.
ಕೆಳಭಾಗದಲ್ಲಿ
ವಿಶಾಲ ಹಜಾರದಂತಿರುವ ಪೂಜಾ ಕೋಣೆಯಲ್ಲಿ ಚಿನ್ನದ
ಬಣ್ಣದ ಬುದ್ಧನ ಎತ್ತರದ ಮೂರ್ತಿ
ಭೂಮಿಸ್ಪರ್ಶಾ ಮುದ್ರೆಯಲ್ಲಿ ಇದೆ. ಅದರ ಮುಂದೆ
ಮೊಟ್ಟೆಯಾಕಾರದ ಮೊಟ್ಟೆಯಷ್ಟೆ ಪುಟ್ಟ ಗಾಜಿನ ಪೆಟ್ಟಿಗೆಯಲ್ಲಿ
ಕೆಂಡದಂತೆ ಪ್ರಜ್ವಲಿಸುವ ಸುಂದರವಾದ
ಪುಟ್ಟ ಶಿಲ್ಪ ಇದೆ. ಆಶ್ಚರ್ಯವೆಂದರೆ
ನಾವು ನಡೆದಾಡುವ ದಿಕ್ಕಿನತ್ತ ತಿರುಗಿ ನಮ್ಮನೇ ನೋಡುತ್ತಾನೆ
ಈ ಪುಟ್ಟ ಬುದ್ಧ!
ಇವನ ನೋಟ ಮಾತ್ರ ತಿರುಗುವುದಲ್ಲ.
ಇಡಿಯ ಶಿಲ್ಪವೇ ತಿರುಗಿ ನಮ್ಮನ್ನು
ಚಕಿತಗೊಳಿಸುತ್ತದೆ. ಈ ದೇವಾಲಯದ ಪ್ರಾಂಗಣದಲ್ಲಿ
ಬಣ್ಣ ಬಣ್ಣದ ಅನೇಕÀ ಬುದ್ಧರ
ಹಾಗೂ ಬೋಧಿಸತ್ವರ ಶಿಲ್ಪಗಳಿವೆ. ಭೂಮಿ ಸ್ಪರ್ಶಾ ಮುದ್ರೆ,
ಧರ್ಮ ಚಕ್ರಪ್ರವರ್ತನ ಮುದ್ರೆ, ಧ್ಯಾನ ಮುದ್ರೆ-ಹೀಗೆ ವಿವಿಧ ಮುದ್ರೆಯಲ್ಲಿ
ಇವೆ. ಇವನ್ನೆಲ್ಲ ನೋಡಿ ವಿಶಾಲ ಪ್ರಾಂಗಣಕ್ಕೆ
ಬಂದೆವು.
ಈ ದೇವಾಲಯಕ್ಕೆ ಹೊಂದಿಕೊಂಡಂತೆ
ಕ್ಯಾಂಡಿಯ ಸುಂದರ ಸರೋವರವನ್ನು ಕ್ರಿ.ಶ. 1798ರಲ್ಲಿ ರಾಜಾ
ವಿಕ್ರಮ ರಾಜ ಸಿಂಗ ನಿರ್ಮಿಸಿದ್ದ.
ಹಿಂದೆ ಇಲ್ಲಿ ಇದ್ದ ಭತ್ತದ
ಗದ್ದೆಗಳ ಜಾಗದಲ್ಲಿ ಈ ಸುಂದರ ಸರೋವರವನ್ನು
ಕಟ್ಟಲಾಗಿದೆ. ಇದಕ್ಕಾಗಿ ಸಾವಿರಾರು ಕೂಲಿಗಳು ದುಡಿದಿದ್ದರು. ಈ
ಸರೋವರದ ಪರಿಸರವೇ ಅಧ್ಬುತವಾಗಿದೆ. ಇಲ್ಲಿ
ಸ್ನಾನ ಘಟ್ಟವೂ ಇದೆ. ಆದರೆÉ
ದೇಶವು ಆಪತ್ತಿನಲ್ಲಿದ್ದಾಗ ಸಮೃದ್ಧ ಭತ್ತದ ಬೆಳೆ
ತೆಗೆಯುತ್ತಿದ್ದ ನೆಲದಲ್ಲಿ ಸರೋವರ ನಿರ್ಮಿಸ ಬಾರದೆಂಬ
ಒತ್ತಡ ರಾಜನ ಮೇಲಿತ್ತು. ಆದರೆ
ಆತ ತನ್ನ ಕನಸನ್ನು ನನಸುಗೊಳಿಸಿದ.
ಮುಂದೆ ಇಲ್ಲಿಗೆ ಬ್ರಿಟಿಷರ ಆಗಮನವಾಗುತ್ತದೆ.
ಇಂದು ಸರೋವರವೂ ಒಂದು ಪ್ರವಾಸಿ
ಕೇಂದ್ರ.
No comments:
Post a Comment