Sunday, September 6, 2015

ರಾವಣನ ಕನಕ ಲಂಕೆಯಲ್ಲಿ ಭಾಗ 7


ಹೊಟೇಲ್ ಹಿಲ್ಟಾಪ್:
ಕ್ಯಾಂಡಿ ಬುದ್ಧ ದೇವಾಲಯದಿಂದ ಹೊರಬಂದಾಗ ಮಬ್ಬುಗತ್ತಲೆ ಕವಿಯಿತು. ಸರೋವರದ ಅಂದವನ್ನು ಸವಿಯಲಾಗಲಿಲ್ಲ. ನಾವು ಬಸ್ಸು ಹತ್ತಿಹಿಲ್ ಟಾಪ್ಹೋಟೇಲ್ಗೆ ಹೋದೆವು. ಹಿಲ್ ಟಾಪ್ಗೆ ನಮ್ಮ ಬಸ್ಸು ಹತ್ತಲಾಗದು ಎಂದು ಹೋಟೆಲಿನಿಂದ ವ್ಯಾನಿನ ವ್ಯವಸ್ಥೆಯಾಗಿತ್ತು. ಹೋಟೇಲ್ ಒಳಗೆ ಪ್ರವೇಶಿಸುತ್ತಲೇ ಎಲ್ಲರಿಗೂ ಸಂತೋಷವಾಯಿತು. ಬಂಟರ ಗತ್ತಿಗೆ ತಕ್ಕಂತಹ ಹೋಟೇಲ್ ವ್ಯವಸ್ಥೆ ಮಾಡಿರಬೇಕು ಎಂದರೊಬ್ಬರು. ಅಲ್ಲಿ ನಮ್ಮ ಬ್ಯಾಗೇಜ್ಗಳು ರಾಶಿ ಬಿದ್ದಿದ್ದುವು. ಅವರವರ ಬ್ಯಾಗೇಜನ್ನು ಗುರುತಿಸಿ ತೆಗೆಯಲು ಸೂಚಿಸಿದರು. ಒಂದೊಂದು ಕೋಣೆಯಲ್ಲಿ ಇಬ್ಬಿಬ್ಬರಂತೆ ಸೇರಿದೆವು. ನಮ್ಮ ಸಂಖ್ಯೆ. 39. ತುಳುವರಿಗೆ ವಿಷಮ ಸಂಖ್ಯೆ ಶ್ರೇಷ್ಟ.. 40 ಮಹಿಳೆÉಯರಲ್ಲಿ ಕೊನೆಯ ನಿಮಿಷದಲ್ಲಿ ಒಬ್ಬಾಕೆ ನಮ್ಮೊಂದಿಗೆ ಬರಲಾಗದೆ ಬೆಂಗಳೂರಲ್ಲಿ ಉಳಿದಿದ್ದರು. ಹೀಗಾಗಿ ನಾವು ವಿಷಮ ಸಂಖ್ಯೆ ಆದೆವು. ಆದ್ದರಿಂದ ನಮ್ಮ ಕೋಣೆಯಲ್ಲಿ ಮೂವರು ಉಳಿದುಕೊಳ್ಳುವುದು ಎಂದಾಯಿತು. ನಮ್ಮ ತಂಡದ ನಾಯಕಿ ಶರ್ವಾಣಿ ಒಂಟಿ ಮಹಿಳೆ ಒಂದು ಕೋಣೆಯಲ್ಲಿ ಉಳಿಯಲು ಅವಕಾಶ ನೀಡಲಿಲ್ಲ. ನಾನು, ಸರ್ವಾಣಿ, ಹಾಗೂ ಕೌಶಲ್ಯಕ್ಕ ಒಂದು ಕೋಣೆಯಲ್ಲಿ ಸೇರಿದೆವು.’
ನಾವು ಮೂವರು ಸ್ನಾನ ಮುಗಿಸಿ ಊಟಕ್ಕೆ ತೆರಳಿದೆವು. ಕೆಲವು ಮಹಿಳೆಯರು ಆಗಲೇ ಊಟ ಮುಗಿಸುವ ಹಂತದಲ್ಲಿದ್ದರು. ಇಲ್ಲಿಯೂ ಊಟದ ವೈವಿಧ್ಯತೆ ನೋಡಿ ಬೆರಗಾದೆವು. ಸಸ್ಯಹಾರದಲ್ಲಿ ಅನೇಕ ಬಗೆ ಇದ್ದುವು. ತರಹಾವಾರಿ ಬ್ರೆಡ್ಗಳು. ರಾತ್ರಿ ಊಟಮಾಡುವುದನ್ನು ನಿಲ್ಲಿಸಿದ್ದ ನನಗೆ ಇಲ್ಲಿ ಹೊಸ ಹೊಸ ಖಾದ್ಯಗಳ ರುಚಿ ನೋಡುವಾಸೆ ಇತ್ತು. ಸಸ್ಯಹಾರದಲ್ಲಿ ಎಷ್ಟೊಂದು ವೈವಿದ್ಯತೆ? ಎಲ್ಲಕ್ಕಿಂತ ಇಷ್ಟವಾದುದು ಸೌಟು ಹಾಕಿದ ಮೇಲೂ ನೀರು ಬಿಟ್ಟುಕೊಡದ ಗಟ್ಟಿ ಮೊಸರು. ಮತ್ತು ವಿಶೇಷ ರುಚಿ ಉಳ್ಳ ಮನ್ನಿ. (ಅಕ್ಕಿಯ ಅಥವಾ ರಾಗಿಯ ಹಲ್ವ) ಇಲ್ಲಿ ಬಡಿಸುವ ಸೌಟು ಕೂಟಾ ಮಂಗಳೂರಿನ ಕಡೆ ಇದ್ದ ಈಗ ಆ್ಯಂಟಿಕ್ ಆಗಿರುವ ಗೆರಟೆ ಸೌಟು. ಆದರೆ ಸೌಟು ಅಂದವಾಗಿ ಕಲಾತ್ಮಕವಾಗಿತ್ತು. ಮಣ್ಣಿನ ಸುಂದರ ಮಡಕೆ, ಬಿಸಲೆ (ತಟ್ಟೆ)ಗಳಲ್ಲಿ ಕಲಾತ್ಮಕವಾಗಿ ಜೋಡಿಸಿಟ್ಟಿದ್ದರು.
ಹೋಟೇಲಿನಲ್ಲಿ ಕೆಲವು ವಿದೇಶಿ ಪ್ರವಾಸಿಗರೂ ಇದ್ದರು. ಇವರ ಮೇಜಿನ ಬಳಿ ನಿಂತು ಸಂಗೀತಗಾರರು ಹಾಡುತ್ತಿದ್ದರು. ನಮ್ಮತ್ತ ಹಾಡುಗಾರರು ಕಣ್ಣೆತ್ತಿಯೂ ನೋಡಲಿಲ್ಲ. ಬಡ ಭಾರತೀಯರು ಎಂಬ ಅಸಡ್ಡೆ ಅವರಿಗೆ ಇದ್ದಂತೆ ಇತ್ತು. ನಾವೂ ಅವರ ಸಂಗೀತವನ್ನು ಸ್ವಾದಿಸುವ ಗೋಜಿಗೆ ಹೋಗಲಿಲ್ಲ.
ರಾತ್ರಿಯೇ ಬೆಂಗಳೂರಿಗೆ ದೂರವಾಣಿ ಮಾಡಿ ನಮ್ಮ ಸುಖಪ್ರಯಾಣದ ಬಗ್ಗೆ ಸುದ್ದಿ ನೀಡುವ ಕಾತರ ಕೆಲವರಲ್ಲಿ. ಆದರೆ ಹೋಟೇಲ್ನಲ್ಲಿ ದೂರವಾಣಿಗೆ ದುಬಾರಿ ಬೆಲೆ ಎಂದು ತಿಳಿಯಿತು. ನಾವು ಬೆಂಗಳೂರಿಗೆ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕ ಸಿಗಲಿಲ್ಲ. ಅಷ್ಟರಲ್ಲಿ ಗಿರೀಶ್ ರೈ ಅವರು ತಮ್ಮ ಮೊಬೈಲ್ನಲ್ಲಿ ಬಿದ್ದ ಸಂಖ್ಯೆಗಳನ್ನು ಗಮನಿಸಿ ಕರೆಮಾಡಿದರು. ಅವರ ಬಳಿ ಎಲ್ಲರಿಗೂ ಸುದ್ದಿಮುಟ್ಟಿಸಲು ಹೇಳಿದೆವು.
ಊಟ ಮುಗಿಸಿ ಕೋಣೆಗೆ ಬಂದೆವು. ಬರುತ್ತಲೇ ನಮ್ಮ ಹಿರಿಯಕ್ಕ ಕೌಸಲ್ಯಕ್ಕಳ ಬಳಿ ಕೇಳಿದೆ. “ಕೌಸÀಲ್ಯಕ್ಕ ನಾನು ಕ್ಷೇತ್ರಕಾರ್ಯದಲ್ಲಿ ಅನೇಕ ಬಂಟರ ಮತ್ತು ಜೈನರ ಮನೆಗಳಿಗೆ ಭೇಟಿ ನೀಡಿದ್ದೆ. ಒಂದೊಂದು ಮನೆಗಳಲ್ಲೂ ದೊಡ್ಡ ದೊಡ್ಡ ಕೋಣೆಗಳೇನೋ ಇವೆ. ಆದರೆ ಅಲ್ಲಿ ಇದ್ದ ದಂಪತಿಗಳ ಸಂಖ್ಯೆ ಕೋಣೆಗಳಿಗಿಂತ ಹೆಚ್ಚಿತ್ತು. ದಂಪತಿಗಳಿಗೆ ಪ್ರತ್ಯೇಕ ಕೋಣೆ ಕೊಡಲು ಸಾಧ್ಯವಾಗಿರಲಾರದು.’ ಎನ್ನುತ್ತಾ. ‘ಆದರೂ ವರ್ಷಕ್ಕೊಂದೋ ಎರಡುವರ್ಷಕ್ಕೊಂದೋ ಸಾಲಾಗಿ ಹೆರಿಗೆ ಆಗುತ್ತಿತ್ತು. ಇದು ಹೇಗೆ? ಎಂಬ ಪ್ರಶ್ನೆ ನನ್ನಲ್ಲಿ. ನಿಮಗೇನಾದರೂ ಗೊತ್ತೆ? ಎಂದೆ?”
ನನ್ನ ಮಾತು ಮುಗಿಯುವ ಮೊದಲೇ ಕೌಸಲ್ಯಕ್ಕ ಮತ್ತು ಶರ್ವಾಣಕ್ಕ ಗೊಳ್ಳೆಂದು ನಕ್ಕರು. ‘ನಾನು ತಮಾಷೆ ಮಾಡುತ್ತಿಲ್ಲ. 1997ರಿಂದ ಸುಮಾರು ಜನರಲ್ಲಿ ಕೇಳಿದೆ. ನನಗನ್ನಿಸುತ್ತದೆ ಬಂಟರಬ್ಬರ ತೇವು ಗೊಬ್ಬರ ಎಂಬ ಮಾತು ಸರಿ ಎಂದು. ಇವರ ಹನಿಮೂನ್ ಮನೆಯ ಹಿಂದಿನ ದಟ್ಟ ಕಾಡಿನ ಹಸಿರು ವನಸಿರಿಯ ಮಧ್ಯೆ ನಡೆದಿರಬೇಕಲ್ಲಎಂದೆ. ಆಗ ಕೌಸಲ್ಯಕ್ಕ, “ಅಯ್ಯೋ ಬಿಡು. ನಮ್ಮ ಮಹಿಳೆಯರು ಕಾಡುಗುಡ್ಡಗಳಿಗೆ ಹೋಗುತ್ತಿದ್ದುದು ಕಡಿಮೆ. ಹೋದರೂ ಒಬ್ಬೊಬ್ಬರೇ ಹೋಗುತ್ತಿದ್ದರಾ? ಅದು ಹೇಗೋ ಆಗುತ್ತಿತ್ತು ಮಕ್ಕಳು. ಅದನ್ನೆಲ್ಲ ಈಗ ಕಟ್ಟಿಕಂಡು ನಿನಗೇನಾಗಬೇಕುಎಂದರು ನಗುತ್ತಾ.
ಮುಂದೆ ಮಾತಿಗೆ ಮಾತು ಪೋಣಿಸಿ ನಗುತ್ತಾ ಅರ್ಧ ರಾತ್ರಿ ಕಳೆಯಿತು. ಬೆಳಿಗ್ಗೆ ಬೇಗನೇ ಎದ್ದು ಸ್ನಾನಾದಿ ಮುಗಿಸಿ ಹೊರಬಂದಾಗ ಸುಗ್ರಾಸ ಉಪಹಾರ ನಮ್ಮನ್ನು ಕಾದಿತ್ತು. ನಾವು ತಿಂಡಿಯ ಬಳಿ ಹೋದಾಗ ನಮ್ಮ ಪಕ್ಕದ ಕೋಣೆಯವರು ಸುದ್ದಿ ಬಿತ್ತರಿಸಿದರು. ‘ಇಂದ್ರಕ್ಕನ ಕೋಣೆಯಲ್ಲಿ ರಾತ್ರಿ ಇಡೀ ನಗು ಕೇಳಿಸುತ್ತಿತ್ತು. ಇವರು ಮಲಗಲೇ ಇಲ್ಲಎಂದು. “ಹೌದಾ ಇಂದ್ರಕ್ಕ ರಾತ್ರಿ ನಾವೂ ಹರಟೆಗೆ ಬರುತ್ತೇವೆ ನಿಮ್ಮ ಕೋಣೆಗೆ.’ ಎಂದರು ಕೆಲವರು.
ದಿನ ಫೆಬ್ರವರಿ 4. ಶ್ರೀಲಂಕಾ ಸ್ವಾತಂತ್ರ್ಯಗೊಂಡ ದಿನ 1948 ಫೆಬ್ರವರಿ 4ರಂದು ಶ್ರೀ ಲಂಕಾ ಸ್ವತಂತ್ರವಾಯಿತು. ನಾವು ಹೋಟೇಲ್ ಸಿಬ್ಬಂದಿಗೆ ಅಭಿನಂದನೆ ಹೇಳಿ ಹೊರಟೆವು.
ದಾರಿಯಲ್ಲಿ ನಮ್ಮ ರಾಜಕಾರಿಣಿಗಳು ಬ್ಯಾನರ್ ಹಾಕುವಂತೆ ಎಲ್ಲೂ ಬ್ಯಾನರಾಗಲೀ ರಾಜಕಾರಣಿಗಳ ಚಿತ್ರಗಳಾಗಲೀ ಇರಲಿಲ್ಲ. ಸ್ವಾತಂತ್ರ್ಯ ದಿನದ ಶುಭಾಶಯವನ್ನು ಕೋರುವ ಬ್ಯಾನರೂ ಇಲ್ಲ. ಇಲ್ಲಿ ಎರಡು ರಾಷ್ಟ್ರ ಮಟ್ಟದ ಪಾರ್ಟಿಗಳು ಮಾತ್ರ. United National Partyª  & Sri Lanka Freedom Party.  ಇದನ್ನು ದ್ವಿಪಕ್ಷ ಪದ್ಧತಿ ಎನ್ನುತ್ತಾರೆ. ಚುನಾವಣೆಯಲ್ಲಿ ಹೆಚ್ಚು ಮತಗಳಿಸಿದವು ಮೊದಲ ಪಕ್ಷವಾಗಿ ಕಡಿಮೆ ಮತಗಳಿಸಿದ ಪಾರ್ಟಿ ಎರಡನೆಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಪಕ್ಷಕ್ಕೆ ಒಂದು ಬಣ್ಣ ಮತ್ತೊಂದು ಪಕ್ಷಕ್ಕೆ ಮತ್ತೊಂದು ಬಣ್ಣ. ಆಯಾ ಬಣ್ಣದ ಪೇಪರ್ಗಳಿಂದ ತೋರಣ ಕಟ್ಟಿದಂತೆ ಕಟ್ಟಿದ್ದರು. ಅದೇ ಶುಭಾಶಯ ಸಾರುವ ಸಂಕೇತವಂತೆ. ಸಾವಿನ ಸೂಚಕಕ್ಕೆ ಬಿಳಿ ಪೇಪರ್ ಗರಿಗಳ ತೋರಣ ಕಟ್ಟುತ್ತಾರೆ ಎಂದ ನಮ್ಮ ಗೈಡ್ ಕನಾಲ್.
ರತ್ನ ಪ್ರದರ್ಶನಾಲಯ:
ದಿನ ಕ್ಯಾಂಡಿಯಲ್ಲಿಯೇಮಹಿಳೆಯರೇ ನಿಮಗೆ ಇಷ್ಟವಾಗುವ ರತ್ನಭಂಡಾರವನ್ನು ತೋರಿಸುತ್ತೇನೆ. ಭೂಗರ್ಭದ ರತ್ನ ಸಂಗ್ರಹಾಲಯಕ್ಕೆ ಹೋಗೋಣGem museum.    ಇಲ್ಲಿ ರತ್ನದ ಗಣಿಗಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತೋರಿಸುತ್ತಾರೆಎಂದ ಕನಾಲ್. ವಸ್ತುಸಂಗ್ರಹಾಲಯ ಎಂದು ನಮ್ಮನ್ನು ಬಿದಿರಿನ ತಡಿಕೆಗಳಿಂದ ರಚಿಸಿದ ಓಣಿಯ ಮೂಲಕ ಕರೆದೊಯ್ದರು. ಇದು  ಗಣಿಯ ಒಳಗೆ ಹೋದ ಅನುಭವ ನೀಡಿತು. ಇಕ್ಕಟ್ಟಾದ ದಾರಿಯಲ್ಲಿ ನಡೆದೆವು. ಒಬ್ಬ ಹೋಗುವಷ್ಟು ದಾರಿ ಇತ್ತುಸುಮಾರು 10 ಅಡಿಗಳ ಅಂತರದಲ್ಲಿ ಒಣಿಯ ಪಕ್ಕದಲ್ಲಿ 2 ಘಿಅಗಲ ಜಾಗದಲ್ಲಿ ಬುಟ್ಟಿ ಹಿಡಿದು ರತ್ನ ಹುಡುಕುವ ಕೆಲಸಗಾರರ ಮಣ್ಣಿನ ಶಿಲ್ಪಗಳು. ಕಲ್ಪನೆ ಅದ್ಭುತವಾಗಿತ್ತು. ನಿಜವಾಗಿಯೂ ಮೆಚ್ಚುವ ಕಲ್ಪನೆ. ಓಣಿಯಲ್ಲಿ ಯಾರಾದರೂ ಇದಿರಿನಿಂದ ಬಂದರೆ ಇಲ್ಲಿ ನಿಂತು ಒಬ್ಬರು ಮತ್ತೊಬ್ಬರಿಗೆ ಜಾಗ ಬಿಡಬೇಕಿತ್ತು. ಸಂದಿ ಗೊಂದಿಗಳಲ್ಲಿ ಹೋಗಿ ದೊಡ್ಡದಾದ ಚಾವಡಿಗೆ ಪ್ರವೇಶ ಪಡೆದೆವು. ಇಲ್ಲಿ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಹರಿವ ನದಿ, ಅದರ ಬಳಿ ಗುಂಡಿ ತೋಡುವುದು, ನೀರಿನಲ್ಲಿ ರತ್ನಗಳನ್ನು ಹುಡುಕಿ ತೆಗೆಯುವುದು ಇತ್ಯಾದಿ ವಿವರಣೆಗಳಿದ್ದುವು. ನಿಜವಾಗಿಯೂ ಭೂಮಿಯು ಏನೆಲ್ಲ ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆಯಲ್ಲವೆ?
ನಾವು ಪ್ರಾತ್ಯಕ್ಷಿಕೆ ನೋಡಿದಾಗ ಆಫ್ರಿಕಾದ ಹೊಳೆಯಲ್ಲಿ ವಜ್ರವನ್ನು ಆರಿಸುವ ಸಿನಿಮಾ ದೃಶ್ಯ ನೆನಪಿಗೆ ಬಂತು. ಆದರೆ ಪ್ರಾತ್ಯಕ್ಷಿಕೆಯಲ್ಲಿ ನದಿಯ ಬಳಿಯ ರತ್ನ ಶೋಧಿಸುವ ಆಳದ ಕಂದಕವನ್ನು ಕೂಡಾ ತೋರಿಸಿದ್ದರು. ಇದು ಶ್ರೀ ಪಾದದಲ್ಲಿ ಉಗಮಗೊಂಡು ಹರಿವ ಕಲನಿ ನದಿಯಂತೆ
ಮುಂದೆ ರತ್ನ ಮಾರಾಟದ ಹಾಲ್ಗೆ ನಡೆದೆವು. ಇಲ್ಲಿ ರತ್ನಗಳನ್ನು ಅಂದವಾಗಿ ಜೋಡಿಸಿದ್ದರು. ಬಣ್ಣ ಬಣ್ಣದ ಕಣ್ಣು ಕೋರೈಸುವ ರತ್ನಗಳು. ಕೆಲವರು ಖರೀದಿಸಿರು. ನಾನು ಫೋಟೋ ಕ್ಲಿಕ್ಕಿಸಿಕೊಂಡೆ. ಅಲ್ಲಿಂದ ಹೊರನಡೆದೆವು.
ಎಲ್ಲರೂ ಉಲ್ಲಸಿತರಾಗಿದ್ದರು. ಗೂಡಿನಿಂದ ಬಿಟ್ಟ ಪಕ್ಷಿಗಳಂತೆ ಗರಿಗೆದರಿ ಹಾರುವ ಅವಕಾಶ. ಗುಂಪಿನಲ್ಲಿ ಕಾದಂಬರಿಯ ಕಥಾನಾಯಕಿಯರಂತೆ ಗಂಡನಿಲ್ಲದೆ ಜೀವನವಿಲ್ಲ ಎನ್ನುವವರು ಇದ್ದಿರಬಹುದು. ಆದರೆ ಹೆಚ್ಚಿನವರು ಸುಸಂದರ್ಭದಲ್ಲಿ ಮನಸ್ಸಿನ ಎಲ್ಲಾ ಒತ್ತಡಗಳನ್ನು ಮರೆತು ಹಾಯಾಗಿ ನಕ್ಕು ನಲಿದರು. Wife is a knief to cut out your life’ಅಂದನಂತೆ ಪುಣ್ಯಾತ್ಮನೊಬ್ಬ. ಮಾತನಾಡುತ್ತಾ ನಾನಂದೆ ಪುರುಷರು ಯಾಕಂದರಿಬಹುದು ಹೀಗೆ? ವಾಸ್ತವವಾಗಿ ಗಂಡನೇ ಚೂರಿ ಹಾಕುವುದು. ಹೆಣ್ಣಿನ ಕನಸುಗಳಿಗೆ. ಅದರ ಮೇಲೂ ಇಂತಹ ಮಾತುಗಳು! ಹೆಣ್ಣಿನ ಭಾವನೆಗಳು ಅವನಿಗೆ ಲಕ್ಷ್ಯವೇ ಅಲ್ಲ. ಈಗೀಗ ಹೆಣ್ಣು ಮಕ್ಕಳು ಮದುವೆಯೆಂದರೆ ಬೆಚ್ಚಿಬೀಳುವುದು ನೋಡುವಾಗ ಪುರುಷನೂ ಸ್ವಲ್ಪ ಬದಲಾಗಬೇಕಾದ ಕಾಲ ಎದುರು ಬರುವುದರಲ್ಲಿ ಸಂದೇಹ ಇಲ್ಲ.
ಗಮ್ಮತ್ತೋ ಗಮ್ಮತ್ತು:
 ನಮ್ಮ ಪ್ರವಾಸದಲ್ಲಿರುವ ಮಹಿಳೆಯರಿಗೆತಮ್ಮಗಂಡ-ದಿರನ್ನು ಬಿಟ್ಟು ಬಂದಿದ್ದಕ್ಕೆ ಗಮ್ಮತ್ತೋ ಗಮ್ಮತ್ತು. ಬಹುóಷಃ ಇದು ಎಂದೂ ಮರೆಯಲಾಗದ ಅನುಭವ. ಗಂಡ ಮಾತ್ರವಲ್ಲ ಯಾವ ಬಂಟನೂ ಬರಲಿಲ್ಲ. ಪುರುಷರಿಲ್ಲದೆ ಮಹಿಳೆಯರು ಮಾತ್ರ ಪ್ರಯಾಣ ಮಾಡುವುದರಲ್ಲಿ ಹೆಚ್ಚಿನ ಗಮ್ಮತ್ತು ಇದೆ ಕೆಲವರಿಗೆ ಈಗ ಗೊತ್ತಾಯಿತು. ಯಾವ ರಿಮೋಟ್ ಕಂಟ್ರೋಲ್ ಇಲ್ಲದೆ, ಅಲ್ಲಿ ಕೂತಿದ್ದು ತಪ್ಪು, ಇಲ್ಲಿ ನಿಂತಿದ್ದು ತಪ್ಪು, ನೀನು ಹಾಗೆ ಏಕಂದೆ, ಅವನ ಮುಂದೆ ಹಲ್ಲು ಕಿರಿಯಬೇಕಿತ್ತೆ? ನೀವು ಹೆಂಗುಸರೇ ಹೀಗೆ - ಕೇಳಿದಷ್ಟು ಕೊಡು. ಏನು ಚರ್ಚೆ? ಅವನು ಕೇಳಿದಷ್ಟು ಕೊಡಲು ಅದೇನು ದುಡ್ಡಲ್ಲವಾ? ಮರದ ಮೇಲಿಂದ ಬರುತ್ತಾ? ಇಂತಹ ಯಾವ ಕಿರಿಕಿರಿಯೂ ಇಲ್ಲ. ನಮ್ಮ ವಯಸ್ಸು ಮರೆತುಹೋಯಿತು

ಬಸ್ಸಿನಲ್ಲಿ ಹಾಸ್ಯ ಹೇಳಬೇಕೆಂಬ ಕೋರಿಕೆ. ಸರಿ ಆರಂಭವಾಯಿತು. ಹೇಳುತ್ತಾ ಹೇಳುತ್ತಾ ಅದು ತನ್ನ ಮರ್ಯಾದೆಯ ಪರಿಧಿ ಮೀರಬಹುದು ಎಂದು ಅನಿಸಿದಾಗ `ಜೋಕ್ಸ್ ಹೇಳ ಬಹುದು. ಆದರೆ ಅದು ಸೊಂಟದ ಮೇಲಿನ ಮಾತುಗಳಾಗಿರಲಿಎಂದೆ. ರೋಹಿಣಿಸೊಂಟದ ಕೆಳಗಿನ ಮಾತು ನಮ್ಮವರು ಆಡಲಾರರು. ಹಾಗೆ ಆಡಿದರೆ  ಸುದ್ದಿ ಬೆಂಗಳೂರಿಗೆ ಮುಟ್ಟದಿರುತ್ತದಾ? ಭಯ ಇಲ್ಲವಾ?’ ಎಂದರು. ಹಾಗಾದರೆ ಇಲ್ಲೂ ಭಯ ಬಿಟ್ಟಿಲ್ಲ ಕೆಲವರಿಗೆ. ಪುರುಷಪ್ರಧಾನ ಸಮಾಜದ ಮಾತೃಪ್ರಧಾನ ಕುಟುಂಬದ ಮಹಿಳೆಯರಿಗೆ! ಆದರೂ ಹಾಸ್ಯ ಲಹರಿ ಎಗ್ಗಿಲ್ಲದೆ ಹರಿಯಿತು. ನಾವು ಆಡಿದ ಭಾಷೆ ತುಳು ಆದರೂ ಡ್ರೈವರ್, ಕ್ಲೀನರ್ ಗೈಡ್ ಎಲ್ಲರೂ ನಮ್ಮವರ ಗಮ್ಮತ್ತು ನೋಡಿ ಸಂತೋಷ ಪಟ್ಟರು. ಕನಾಲ್ ನಮ್ಮ ಮಹಿಳೆಯರ ಕೇಕೇ ನಗು ಕಂಡು ತಾನೂ ಹಾಸ್ಯದಲ್ಲಿ ಭಾಗವಹಿಸುವುದಾಗಿ ಹೇಳಿದೆ. ಸುಮಾರು ಜೋಕುಗಳನ್ನು ಆತನೂ ಹೇಳಿದ

No comments:

Post a Comment