Wednesday, September 9, 2015

ರಾವಣನ ಕನಕ ಲಂಕೆಯಲ್ಲಿ ಭಾಗ 8



ಕನಾಲ್  ನಮ್ಮ ಸ್ಥಳೀಯ ಗೈಡ್ ಮತ್ತು ನಾನು ಹಾಗೂ ಗೀತಾ ಶೆಟ್ಟಿ

ಬಸ್ಸಿನಲ್ಲಿ ನಾನು ಹೆಚ್ಚಾಗಿ ಮುಂದಿನ ಸಾಲಲ್ಲಿ ಕುಳಿತಿರುತ್ತಿದ್ದೆ. ಕನಾಲ್ಬಳಿ ಸ್ಥಳೀಯ ಸಂಸ್ಕøತಿಯ ಪರಿಚಯ ಕೇಳುವುದು ನನ್ನ ಉದ್ದೇಶ. ಒಮ್ಮೆ ಇಲ್ಲಿ ಕೆಲವು ಕಿರಿಯ ವಯಸ್ಸಿನವರು ಕನಾಲ್ ಜೊತೆ ಹರಟೆ ಹೊಡೆಯತೊಡಗಿದ್ದರು. ಗೀತ ಶೆಟ್ಟಿ  ಅವರ ಬಳಿ ಹೋಗಿನೀವು ಅಲ್ಲಿ ಕೂರಬೇಡಿ ಮಾರಾಯ್ರೆ. ಅವನ ಜೊತೆ ಏನು ಹರಟೆ. ಇಂದ್ರಕ್ಕ ಕುಳಿತುಕೊಳ್ಳಲಿ. ಅವರು ನಮ್ಮ ದೊಡ್ಡ ಬರಹಗಾರರು ಗೊತ್ತಾ? ಅವರು ಅವನಲ್ಲಿ ಕೆದಕಿ ಕೆದಕಿ ಪ್ರಶ್ನೆ ಕೇಳುತ್ತಾರೆಎಂದರು.
ರಾಂಬೋಡಾ ಹಿಲ್:
ರಾಂಬೋಡಾ ಹಿಲ್ ನಮಗಾಗಿ ಮದ್ಯಾಹ್ನ ಊಟಕ್ಕೆ ಕಾದಿರಿಸಿದ ಹೋಟೇಲ್. ನಮ್ಮ ಬಸ್ಸು ನಿಂತಿದ್ದು ಒಂದು ಬೆಟ್ಟದ ತುದಿಯಲ್ಲಿ. ಬೆಟ್ಟದ ಇನ್ನೊಂದು ತುದಿಯಿಂದ ಕೆಳಗಿನ ಕಣಿವೆಗೆ ನೀರಿನ ಫಾಲ್ಸ್ ಬೀಳುತ್ತಿತು. ಇದೇ ರಾಂಬೋಡಾ ಪಾಲ್ಸ್! ಹೋಟೇಲ್ ಕೂಡಾ ಕಣಿವೆಯಲ್ಲಿ ಇದೆ. ಹೋಟೇಲಿಗೆ ಇಳಿಯುವ ರಸ್ತೆ  ತೀರಾ ಇಳಿಜಾರಾಗಿದೆ. ಹಾವು ಸುತ್ತಿದಂತೆ ಸುತ್ತಿ ಕೆಳಗೆ ತಲುಪುತ್ತದೆ. ಇಳಿಯಲು ಮೆಟ್ಟಲ ವ್ಯವಸ್ಥೆಯೂ ಇದೆರಸ್ತೆಯ ಮೂಲಕ ಹೋಗುವವರು ವ್ಯಾನಿನಲ್ಲಿ ಕುಳಿತು ಹೋದರು. ಒಂದೇ ವ್ಯಾನ್ ಕೆಳಗೆ ಮೇಲೆ ಸುತ್ತುತ್ತಾ ಇದ್ದುದರಿಂದ ನಾವು ಕೆಲವರು ನಡೆದೇ ಕೆಳಗೆ ಹೋದೆವು. ಹೋಟೇಲ್ ಒಳ ಹೊಕ್ಕು ನೋಡಿದಾಗ ಅಲ್ಲಿ ಹರಿವ ನದಿ ಇನ್ನೂ ಆಳದಲ್ಲಿ ಕಾಣುತ್ತಿತ್ತು. ಹೋಟೇಲ್ ಮುಂದಿನ ಕಣಿವೆ ಇನ್ನೂ ಆಳ ಇತ್ತು. ಬೆಟ್ಟದ ತುದಿಯಿಂದ ಇಳಿವ ನೀರಿನ ಝರಿ ಮನಮೋಹಕವಾಗಿತ್ತಾದರೂ ನಮ್ಮ ಗಗನ ಚುಕ್ಕಿ ಭರಚುಕ್ಕಿ, ಜೋಗ್ ಪಾಲ್ಸ್, ಮತ್ತು ಹೊಗೈನಕಲ್ ಫಾಲ್ಸ್ ಮುಂದೆ ಅಚ್ಚರಿ ಪಡುವಂತದೇನೂ ಇರಲಿಲ್ಲ. ಆದರೆ ಕಣಿವೆಯಲ್ಲಿ ಹೊಟೇಲ್ ಇರುವುದೇ ಅಚ್ಚರಿ.
ಇಲ್ಲಿ ಇಡೀ ಶ್ರೀಲಂಕಾಗೆ ಬೇಕಾಗುವಷ್ಟು ಥರ್ಮಲ್ ಪ್ರಾಜೆಕ್ಟ್ ಇಲ್ಲಿ ಉತ್ಪನ್ನವಾಗುತ್ತದೆ ಎಂದ ಗೈಡ್ ಕನಾಲ್.
ನಮಗೆ ಉದ್ದಕ್ಕೆ ಒಂದೇ ಸಾಲಿನಲ್ಲಿ ಹೊಟೇಲಿನಲ್ಲಿ ಊಟಕ್ಕಾಗಿ ಮೇಜು ಜೋಡಿಸಿದ್ದರು. 39 ಮಹಿಳೆಯರು ಎದುರು ಬದುರಾಗಿ ಕುಳಿತಿದ್ದೆವು. ಬಾರಿ ಸಂಪೂರ್ಣ ಶಾಖಾಹಾರ. ಆದರೆ ಊಟ ನೀಡುವವರು ವಿದೇಶಿಯರನ್ನು ಸತ್ಕರಿಸುವುದರಲ್ಲೆ ಮಗ್ನರಾಗಿದ್ದರು. ಇತ್ತ ಕಡೆ ಯಾರೂ ತಿರುಗಿ ನೋಡುವುದೇ ಇಲ್ಲ. ಕಾದು ಕಾದು ಬೇಸತ್ತ ಮಹಿಳೆಯರು ಕನಾಲ್ಗೆ ಕೇಳಿದರು. `ಇದು ಸರಿಯಲ್ಲ ಕನಾಲ್. ಇದು ಭಾರತೀಯರಿಗೆ ಮಾಡುವ ಅವಮಾನ.’ ಆತನೂ ಹೋಟೇಲ್ ಸಿಬ್ಬಂದಿಯ ವರ್ತನೆ ಕಂಡು ಬೇಸತ್ತಿದ್ದ. ಅವರ ಬಳಿ ಹೋಗಿ ಮಾತನಾಡಿನಾನೆಂದೂ ಇನ್ನು ಮುಂದೆ ಹೋಟೆಲಿನಲ್ಲಿ ನಮ್ಮ ಪ್ರವಾಸಿಗರಿಗೆ ಕಾದಿರಿಸುವುದಿಲ್ಲಎಂದ. ಹೀಗೆ ಇಲ್ಲಿಯ ನೆನಪು ಸಿಹಿಯಾಗಿಲ್ಲ.
ನುವಾರಾ ಎಲಿಯಾ:
ರಂಬೋಡಾ ಹಿಲ್ನಿಂದ ನುವಾರಾ ಎಲಿಯಾದ ಚಹಾ ತೋಟ ಮತ್ತು ಅಶೋಕ ವಾಟಿಕಾಕ್ಕೆ ಹೊರಟೆವು.
ಮೊದಲು ನುವಾರಾ ಎಲಿಯಾದತ್ತ ನಮ್ಮ ಪ್ರಯಾಣ

  ಬೆಟ್ಟಗಳನ್ನು ಸಿಂಬಿಯಂತೆ ಸುತ್ತುತ್ತಾ ಬಸ್ಸು ಮೇಲೇರಿ ಸಾಗಿತು. ಆನಂದಮಯ ಜಗ! ಎಂದ ಕುವೆಂಪು ನೆನಪಾದರು. ಸುತ್ತಲಿನ ಅದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶ! ಕಾಡು ಅಲ್ಲ. ಕುರುಚಲು ಗಿಡಗಳೂ ಇಲ್ಲ. ಹಸಿರಿನ ಹಾಸಿಗೆ ಹಾಕಿದಂತೆ ಕಾಣುವ ಬೆಟ್ಟಗಳು. ಇಂತಹ ಆಕಾಶದೆತ್ತರಕ್ಕೆ ಮುಖಮಾಡಿದ ಬೆಟ್ಟಗಳು ನಮ್ಮ ಶಿರಾಡಿ ಘಾಟ್ ಮತ್ತು ಚಾರ್ಮಾಡಿ ಘಾಟ್ಗಳಲ್ಲಿ ಇವೆ. ಆದರೆ ಇಲ್ಲಿ ಶ್ರೀಲಂಕಾದಲ್ಲಿ ಪರ್ವತಗಳ ತುಂಬಾ ಕೃಷಿ ಚಟುವಟಿಕೆಗಳು. ಎತ್ತರೆತ್ತರದಲ್ಲೂ ಸೊಪ್ಪು ಬೆಳೆಯುತ್ತಿದ್ದರು. ಮೊದಲೇ ಹೇಳಿದಂತೆ ಬೆಟ್ಟಗಳನ್ನು ಕೃಷಿಮಾಡದೆ ಎಲ್ಲೂ ಬಿಟ್ಟಿಲ್ಲ. ದಾರಿಯ ಪ್ರಯಾಣವೇ ರಮ್ಯ. ನಾವು ಹತ್ತುವ ಬೆಟ್ಟದ ಕೊರಕಲು ಮತ್ತು ಅದರಾಚೆಗಿನ ಬೆಟ್ಟದ ಕೊರಕಲು-ಎರಡೂ ಕಡೆ ಬೆಳೆದ ಬೆಳೆ -ನೋಡಲು ಕಣ್ಣಿಗೆ ಹಬ್ಬವಾಗುತ್ತಿತ್ತು. ಪರ್ವತದ ಇಳಿಜಾರಿನಲ್ಲಿ ಓಡಾಡುವುದು ಕಷ್ಟ. ಅಂತಹ ನೆಲದಲ್ಲಿ ಇರುವ ಹೊಲಗಳ ಬಗ್ಗೆ ಆಶ್ಛರ್ಯ ವ್ಯಕ್ತಪಡಿಸಿದಾಗ ನಮ್ಮ ಗೈಡ್ಚನ್ನಾಪ್ಲಾಂಟೆಷನ್ಎಂಬ ಗುಡ್ಡಗಾಡು ಜನರ ಕೃಷಿ ಪದ್ಧತಿಯ ವಿವರಣೆ ನೀಡಿದ.
ಚ್ಚನ್ನಾ ಕಲ್ಟಿವೇಷನ್: ದಟ್ಟ ಕಾಡಿನ ಮಧ್ಯೆ ಸಮ ತಟ್ಟು ಜಾಗ (ತು.ಪಡಿಲ್) ವನ್ನು ಆರಿಸಿ ಮರ ಮಟ್ಟು ಕಡಿದು ಸಮತಟ್ಟು ಮಾಡಿ ಅಲ್ಲಿ ಬೆಳೆ ಬೆಳೆಯುತ್ತಾರೆ. ನೆಲದಲ್ಲಿ ಉತ್ತಮ ಫಸಲು ಬರುತ್ತದೆ. ಮಣ್ಣಿನ ಸತ್ವ ಬರಿದಾದ ಮೇಲೆ ಬೇರೆ ಕಡೆ ಹೋಗಿ ಹೀಗೆಯೇ ಮಾಡುತ್ತಾರೆ. ಒಂದೆರಡು ವರ್ಷಗಳಲ್ಲಿ ಮರಕಡಿದ ಜಾಗದಲ್ಲಿ ಮತ್ತೆ ಮರಗಿಡಗಳು ಬೆಳೆಯುತ್ತವೆ. ಇದನ್ನು ಚ್ಚನ್ನಾ ಕಲ್ಟಿವೇಷನ್ ಎಂದು ಕರೆಯುತ್ತಾರೆ. ಚ್ಚನ್ನಾ ಕಲ್ಟಿವೇಷನ್ನನ್ನು ಕಾಡಿನಲ್ಲಿ ವಾಸಿಸುವ ಜನರು ಮಾಡುತ್ತಾರೆ. ಸರಕಾರ ಇದನ್ನು ಪ್ರೋತ್ಸಾಹಿಸುತ್ತದೆ ಎಂದ ಗೈಡ್. ಲೇಖಕಿಯರ ಸಂಘದಿಂದ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿದಾಗ ಬಿಳಿಗಿರಿ ರಂಗನ ಬೆಟ್ಟದ ಸೋಲಿಗರು ರೀತಿಯ ವ್ಯವಸಾಯ ಪದ್ಧತಿಯನ್ನು ನಮಗೆ ವಿವರಿಸಿದ್ದರು. ಅವರ ಪ್ರಕಾರ ಇದರಿಂದ ಕಾಡು  ನಾಶವಾಗುವುದಿಲ್ಲ. ಕಾಡು ಬೆಳೆಯುತ್ತದೆ. ನಮ್ಮ ಸರಕಾರ ಪದ್ಧತಿಯನ್ನು ನಿಷೇಧಿಸಿದೆ.
ನುವಾರ ಯಲಿಯಾಸಮುದ್ರ ಮಟ್ಟದಿಂದ 2200ಮೀಟರ್ ( ಎತ್ತರ ನಿಖರ ಅಲ್ಲ.) ಎತ್ತರ ಇರುವ ಭೂಭಾಗ. ಇದನ್ನು“Little England”ಎಂದೂ ಕರೆಯುತ್ತಾರೆ. ಬೇಟೆಯಾಡಲು ಹೋದ ಬ್ರಿಟಿಷರು ಸ್ಥಳವನ್ನು ಪತ್ತೆ ಹಚ್ಚಿದ್ದು 1819ರಲ್ಲಿ. ಆನೆಗಳ ಮೂಲಕ ಮತ್ತು ಎತ್ತಿನ ಬಂಡಿಗಳ ಮೂಲಕ ಸಾಮಾನು ಸಾಗಿಸಿ ಕಟ್ಟಿದ  ‘Resort’ ಇದು. ಇಲ್ಲಿ 18 ತೂತುಗಳ ವಿಶಾಲ ಗಾಲ್ಫ್ ಕ್ಲಬ್ಬ್ ಕೂಡಾ ರಚನೆಯಾಗಿದೆ.
ಇಲ್ಲಿಯ ಚಹಾ ವಿಶ್ವ ಪ್ರಸಿದ್ಧ. ಚಹಾದ ಗುಣ ಮಟ್ಟ, ಮಣ್ಣಿನ ಗುಣವನ್ನು ಮಾತ್ರವಲ್ಲ ಚಹಾತೋಟ ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ ಎನ್ನುವುದನ್ನೂ ಅವಲಂಬಿಸಿದೆ. ಬೆಟ್ಟಗಳ ಎತ್ತರ ಹೆಚ್ಚಿದಷ್ಟು ಚಾಪುಡಿ ಉತ್ತಮ ಗುಣಮಟ್ಟವನ್ನು ಪಡೆದಿರುತ್ತದೆ ಅದು ಎಳೆಯ ಚಿಗುರಿನ ಪುಡಿಯಾಗಿದ್ದರೆ ಅತ್ಯಂತ ಶೇಷ್ಟ ಟೀ ಪುಡಿ ಆಗಿರುತ್ತದೆ ಎಂದು ತಿಳಿದು ಬಂತು. ಹೀಗಾಗಿ ಶ್ರೀಲಂಕಾದ ಅದರಲ್ಲೂ ನುವಾರಾ ಎಲಿಯಾದ ಚಾ ಪುಡಿ ಹೆಸರುವಾಸಿ. ಇಲ್ಲಿಯ ಲುಬುಕೆಲಾ ಫ್ಯಾಕ್ಟರಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಗುಣಮಟ್ಟದ ಟೀ ಪುಡಿ ಉತ್ಪಾದಿಸುತ್ತದೆ

ಕಾಲದಲ್ಲಿ ಶ್ರೀ ಲಂಕಾಗೆ ಹೋಗುವಾಗ ಬ್ರಿಟಿಷರು ತಮ್ಮೊಂದಿಗೆ ಚಹಾ ಕೃಷಿಯನ್ನು ಮಾತ್ರವಲ್ಲ ತಮಿಳಿನ ಕೂಲಿಯಾಳುಗಳನ್ನು ಕರೆದುಕೊಂಡು ಹೋಗಿದ್ದರು. ಹೀಗಾಗಿ ಈಗಲೂ ನುವಾರಾ ಎಲಿಯಾದಲ್ಲಿ ತಮಿಳರ ಸಂಖ್ಯೆ 57.2%. ಸಿಂಹಳೀಯರ ಸಂಖ್ಯೆ 40%. ಈಗಲೂ ಚಹಾ ತೋಟದಲ್ಲಿ ತಮಿಳರೇ ಹೆಚ್ಚಾಗಿ ಇದ್ದಾರೆ. ಆದರೆ ಇಲ್ಲಿಯ ತಮಿಳರು ಮತ್ತು ಸಿಂಹಳೀಯರು ಅನ್ಯೋನ್ಯವಾಗಿ ಇದ್ದಾರೆ.  

ಚಹಾ ಕಾರ್ಖಾನೆಯಲ್ಲಿ . ಮೇನೇಜರ್ ಚಹಾದ ಚಿಗುರೆಲೆಗಳು ಪರಿವರ್ತಿತಗೊಂಡು ಚಾ ಪುಡುಯಾಗಿ ಮಹಿಳೆಯರ ಕೈಗೆ ಸಾಗುವ ವುವರಣೆ ನೀಡುತ್ತಿರುವುದು

No comments:

Post a Comment