Friday, September 11, 2015

ರಾವಣನ ಲಂಕೆಯಲ್ಲಿ ಭಾಗ 9

ಚಹಾ ಕಾರ್ಖಾನೆಯ ಮನೇಜರ್ ನಮ್ಮ ತಂಡದ ಕೆಲವರೊಂದಿಗೆ  
ಚಹಾದ ಇತಿಹಾಸ:
 ಎದ್ದ ಕೂಡಲೇ ನಾವು ಬೆಳಿಗ್ಗೆಚಾ..” ಎನ್ನುತ್ತೇವೆ. ಚಾ ಕುಡಿಯದಿದ್ದರೆ ಕೆಲವರಿಗೆ ತಲೆ ಸಿಡಿಯುತ್ತದೆ. ಸುಮಾರು 1960ರವರೆಗೆ ನಮ್ಮೂರಿನಲ್ಲಿ ಚಾ ಕುಡಿಯುವವರೆಂದರೆ ಹೈಕ್ಲಾಸ್ ಎಂದು ಭಾವಿಸಲಾಗಿತ್ತು. ಬೆಲ್ಲದ ಕಾಪಿ ಕೆಲವರಲ್ಲಿ ರೂಢಿಯಲ್ಲಿತ್ತು. ಬೆಳಿಗ್ಗೆ ಎದ್ದು ಗಂಜಿ ಉಣ್ಣುವ ಅಭ್ಯಾಸ ಟೀ ಕುಡಿಯುವ ಅಭ್ಯಾಸ ಆದ ಮೇಲೂ ಮುಂದುವರಿದಿತ್ತು. ಆದರೆ ಈಗ ನಮ್ಮ ಹಳ್ಳಿಯಲ್ಲೂ ಗಂಜಿ ಉಣ್ಣುವುದು ಬಿಟ್ಟು ಬೆಳಿಗ್ಗೆ ಟೀ -ತಿಂಡಿಯ ಹಂತಕ್ಕೆ ತಲುಪಿದ್ದಾರೆ. ಅಂತಹ ಪ್ರಭಾವಿ ಚಹಾದ ಇತಿಹಾಸದ ಬಗ್ಗೆ ತಿಳಿಯುವುದು ಮುಖ್ಯ.
ಕ್ರಿ.ಪೂರ್ವ 2,737ರಲ್ಲಿ ಚೀನಾದ ದೊರೆ ಶೆನ್ ಹುಂಗ್ ಬಿಸಿನೀರು ಕುಡಿಯುತಿದ್ದ ಸಂದರ್ಭದಲ್ಲಿ ಇಲ್ಲಿಂದ `ಟಾ ಆಹ್ಲಾದತೆ ಜಗತ್ತಿಗೆ ಪರಿಚಯ ಆಯಿತು. ನೀರಿನೊಳಗೆ ಬಿದ್ದ ಎಲೆಯಿಂದ ನೀರು ಘಮಘಮಿಸಿ ಕುಡಿಯಲು ಆಹ್ಲಾದಕರವಾಯಿತು. ಆರಂಭದಲಿ ನಡೆದ ಸಂಶೋಧನೆಗಳ ಫಲವಾಗಿ ಔಷದೀಯ ಬಳಕೆಗಾಗಿ ಉಪಯೋಗವಾದ ಚಹಾ ಮುಂದೆ 100ವರ್ಷಗಳಲ್ಲಿ ಚಹಾ ಪಾನೀಯವಾಗಿ ಜನಪ್ರಿಯವಾಯಿತು.
ಇಲ್ಲಿ ಭತ್ತದ ನಂತರದ ಪ್ರಮುಖ ಬೆಲೆ ಚಹಾ. ಚಹಾ ಪುಡಿ ಮಾಡುವ ಕಾರ್ಖಾನೆ ಐಚಿbuಞಚಿಟe ದಲ್ಲಿ ಹಸಿರು ಚಿಗುರು ತುಂಬಿದ ಬುಟ್ಟಿಯಲ್ಲಿಯ ಚಿಗುರು ಕಾರ್ಖಾನೆಯ ಉರುಳು ಮಂಚದಲ್ಲಿ ಉರುಳುತ್ತಾ ವಿವಿಧ ಹಂತಗಳಲ್ಲಿ ಹಾದು ಚಹಾ ಪುಡಿಯಾಗಿ ಘಮಘಮಿಸಿ ಹೊರಬರುವವರೆಗಿನ ಹಂತಗಳು ನಿಜಕ್ಕೂ ಅಚ್ಚರಿ. ವೈವಿಧ್ಯಮಯ ಪುಡಿಯನ್ನು ಅದರ ಗುಣಮಟ್ಟದ ಮೇಲೆ ರಟ್ಟಿನ ಡಬ್ಬಗಳಲ್ಲಿ ಜೋಡಿಸಿದ್ದರು. ಚಹಾದ ಗಿಡದ ಮೊದಲ ಚಿಗುರಿನಿಂದ ಮಾತ್ರವಲ್ಲ ಪ್ರಕ್ರಿಯೆಯಲ್ಲೂ ಮೊದಲು ದೊರಕುವ ಪುಡಿ ಉತ್ತಮ ಗುಣ ಮಟ್ಟದ್ದು. ಕೊನೆಗೆ ಉಳಿಯುವ ಧೂಳು ಪುಡಿ ಅತ್ಯಂತ ಕಡಿಮೆ ಗುಣಮಟ್ಟದ್ದು ಎಂದು ವಿವರಿಸಿದರು.
ಉದ್ದವಾದ ಉರುಳು ಮಂಚದಲ್ಲಿ ಹರಡಿದ್ದ ಹಸಿ ಚಿಗುರು ಕೆಳಗೆ ಜಾರಿ ಹೋಗುತ್ತಿತ್ತು, ನಾವು ಹೋದ ದಿನ ಕಾರ್ಖಾನೆಯ ಯಂತ್ರಗಳು ರಜೆ ಪಡೆದುದರಿಂದ ಅದ್ಯಾವ ಪ್ರಕ್ರಿಯೆಗಳನ್ನು ನೋಡುವ ಅವಕಾಶ ಲಭ್ಯವಾಗಲಿಲ್ಲ. ಅಂದು ಶ್ರೀಲಂಕಾ ಸ್ವತಂತ್ರಗೊಂಡ ದಿನವಾದ್ದರಿಂದ ಚಹ ಕಾರ್ಖಾನೆಗೆ ರಜೆ. ಆದರೂ ಪ್ರವಾಸಿಗಳಿಗಾಗಿ ಕಾರ್ಖಾನೆ ತೆರೆದಿತ್ತು
ನಮಗೆ ನೀಡಿದ ಸಕ್ಕರೆ ಹಾಲು ಬೆರಸದ ಚಹಾದ ಕನ್ನವನ್ನು ಕುಡಿದಾಗ ಸ್ವಾದಿಷ್ಟವೆನಿಸಿತು. ಕಂಪೆನಿಯ ಲೆಕ್ಕದಲ್ಲಿ ಪ್ರವಾಸಿಗರಿಗೆ ನೀಡಿದ ಆತಿಥ್ಯ  ಆದ್ದರಿಂದ ನಮ್ಮಿಂದ ಹಣ ಪಡೆಯದೆ ಸಕ್ಕರೆ ಹಾಲು ಬೆರಸದ ಚಹಾದ ಸ್ವಾದವನ್ನು ಸವಿಯುವ ಅವಕಾಶ ನೀಡಿದರು. ಬಹಶಃಃ ಉತ್ತಮ ಗುಣಮಟ್ಟದ ಚಹಾ ಪುಡಿಯಲ್ಲಿ ಮಾತ್ರ ಇಂತಹ ರುಚಿ ಇರಬೇಕು. ಹೀಗಾಗಿ ವಿದೇಶಿಯರು ಚಾ ಕನ್ನವನ್ನು ಕುಡಿಯಲು ಹೆಚ್ಚು ಇಷ್ಟ ಪಡುತ್ತಾರೆ ಎಂಬ ಗುಟ್ಟು ಶ್ರೀ ಲಂಕಾದ ಚಹಾ ಸೇವಿಸಿದ ಮೇಲೆ ತಿಳಿಯಿತು. ಇಲ್ಲಿ ಉತ್ಪಾದಿಸಲಾಗುವ ಚಹಾ ವಿಶ್ವ ಪ್ರಸಿದ್ಧ. ಹೀಗಾಗಿ ನಮ್ಮಲ್ಲಿ ಕೆಲವರು ಚಹಾಪುಡಿ ಖರೀದಿಸಿದರು.


ಶ್ರೀಲಂಕಾದ ಮಹಿಖಳೆಯರು
ನಾನು ಇಲ್ಲಿ ಕೆಲಸ ಮಾಡುವ ಮಹಿಳೆಯರ ಪೋಟೋ ಕ್ಲಿಕ್ಕಿಸಿಗೊಂಡೆ. ಅವರ ಉಡುಗೆಗಾಗಿ. ಭಾಷೆಬಾರದೆ ಇದ್ದರೂ ಪೋಟೋಗೆ ಫೋಸ್ ಕೊಟ್ಟು ಸಹಕರಿಸಿದರು.

ಈಗ ನಮ್ಮ ಪ್ರಯಾಣ ಸೀತೆ ರಾಮನಿಗಾಗಿ ಕಾದು ಕುಳಿತ ಅಶೋಕ ವನಕ್ಕೆ, ಈಗಿನ ಬಾಟನಿಕಲ್ ಗಾರ್ಡ್ನ್ಗೆ.





ಅಶೋಕವನ:



ಗಗನ ಸಖಿಯೊಂದಿಗೆ ಸರ್ವಾಣಿ ರೈ

ನಾವು ಶ್ರೀ ಲಂಕಾದ ವಿಮಾನ ಹತ್ತಿದಾಗಲೇ ಶ್ರೀಲಂಕಾ ಉಡುಗೆಯಲ್ಲಿ ಗಗನ ಸಖಿ ಪಕ್ಷಿ ಉಲಿದಂತೆ ಉಳಿದಿದ್ದಳು  “ಪ್ರವಾಸ ಹೊರಟವರು ನೀವು ಮಹಿಳೆಯರು ಮಾತ್ರವೆ? ಗಂಡುಸರು ಯಾರೂ ಇಲ್ಲವೇ?” ಅಷ್ಟೇ ಆತ್ಮೀಯತೆಯಿಂದ ನಾನು ಉತ್ತರ ನೀಡಿದ್ದೆ: “ಪುರುಷರನ್ನು ಕರೆತಂದರೆ ಅವರು ಲಂಕಾದ ಹೆಣ್ಣುಗಳನ್ನು ಅಪಹರಿಸಿದರೆ? ರಾವಣನ ಮೇಲಿನ ಪ್ರತೀಕಾರಕ್ಕೆ?’ ಕಿಸಕ್ಕನೆ ಬಂದ ನಗುವನ್ನು ಅದುಮಿ  “ರಾವಣ ಅಪಹರಿಸಿದ್ದು ಸೀತೆಯನ್ನು ವರಿಸಲೆಂದಲ್ಲಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿ ಭೋಗಿಸಬೇಕೆಂದೂ ಅಲ್ಲ. ಹಾಗೆ ಭೋಗಿಸಲು ಆತ ಮನಸ್ಸು ಮಾಡಿದ್ದರೆ ಅದನ್ನು ತಡೆಯುವವರು ಅಲ್ಲಿ ಇರಲಿಲ್ಲ. ಆತ ಸೀತೆಯನ್ನು ಅಪಹರಿಸಿದ್ದು ಸಂಪೂರ್ಣ ರಾಜಕೀಯ ಲಾಭಕ್ಕಾಗಿ. ತನ್ನ ಸೋದರಿಯ ಮೈಮೇಲೆ ಪರಪುರುಷ ಕೈಮಾಡಿದಾಗ ಅರಸನಾದವನು ಸುಮ್ಮನೆ ಕುಳಿತರೆ ಪ್ರಜೆಗಳಿಗೆ ಅವನ ಮೇಲೆ ವಿಶ್ವಾಸವೇ ಉಳಿಯುವುದಿಲ್ಲ. ಸೈನ್ಯ ಇಲ್ಲದವನ ಮೇಲೆ ಯುದ್ಧ ಮಾಡುವುದಕ್ಕಿಂತ ಅವನನ್ನು ಉಪಾಯವಾಗಿ ಮಣಿಸಿದರೆ ಎರಡೂ ಕಡೆಯ ಜೀವ ಹಾನಿ ತಪ್ಪುತ್ತದೆ. ಅಲ್ಲದೆ ಸೈನ್ಯವೇ ಇಲ್ಲದವನ ಮೇಲೆ ಯುದ್ಧವನ್ನು ಘೋಷಿಸುವುದಕ್ಕಿಂತ ಸೀತೆಯನ್ನು ಅಪಹರಿಸುವುದು ಹೆಚ್ಚು ಕ್ಷೇಮ ಎಂದು ಭಾವಿಸಿದ್ದ.” ಎಂದಿದ್ದಳು. ಬಗ್ಗೆ ಮುಂದೆ ನಮ್ಮ ಬಸ್ಸಿನಲ್ಲಿ ಮಾತಾಯಿತು. “ಅದು ನಿಜ. ಸೀತೆಯ ಮೇಲೆ ರಾವಣ ಅತ್ಯಾಚಾರ ನಡೆಸಲಿಲ್ಲ. ವಿಷಯದಲ್ಲಿ ರಾವಣ ಸಂಭಾವಿತ. ಆತ ತನ್ನ ಮನೆಯಲ್ಲಿ ಕೂಡಾ ಆಕೆಯನ್ನು ಇರಿಸಲಿಲ್ಲ. ಅಶೋಕ ವನದದಲ್ಲಿ ಇಟ್ಟಿದ್ದ. ಈಗ ನಮ್ಮ ಭಾರತದಲ್ಲಿ ಇರುವ ಆಧುನಿಕ ರಾವಣರು ಮಹಿಳೆಯರ ಬಟ್ಟೆ ಬಿಚ್ಚುತ್ತಾ ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ.” ಎಂದೆ ನಾನು. ಅದನ್ನು ಕೇಳಿದ ನಮ್ಮ ಮಹಿಳೆಯೋರ್ವಳುನಮ್ಮ ಹುಡುಗಿಯರೂ ಕಡಿಮೆಯಿಲ್ಲ.’ ಎನ್ನುತ್ತಾ ಹುಡುಗಿಯರು ಉಡುವ ಬಟ್ಟೆಯೇ ಇಂತಹ ಅನಾಚಾರ ಬಲಾತ್ಕಾರಗಳಿಗೆ ಕಾರಣ ಎಂಬಂತೆ ಮಾತನಾಡಿದರು. ಅವರ ಮಾತಿಗೆ ಹೆಚ್ಚಿನ ಮಹಿಳಾವೃಂದ ಪ್ರತಿರೋಧ ವ್ಯಕ್ತಪಡಿಸಿತು.


 ಸೀತೆಯನ್ನು ರಾವಣ ಮೊದಲಿಗೆ ಮಂಡೋದರಿಯ ಬಳಿಗೆ ಕರೆದೊಯ್ದು ಅವಳ ಸುಪರ್ದಿಗೆ ಬಿಟ್ಟ ವಿಚಾರ ನನಗೆ ಇಲ್ಲಿ ತಿಳಿಯಿತು. ಮಂಡೋದರಿಯ ಬಳಿ ಆಕೆ ಹೆಚ್ಚು ದಿನಗಳು ಇರಲಿಲ್ಲ. ಅಲ್ಲಿಂದ ಬೇರೊಂದು ಗುಹೆಯಲ್ಲಿ ಇರಿಸಿದ್ದಇಲ್ಲಿ ಗುಹೆಯನ್ನುಕುಟುವಾಎಂದು ಕರೆಯುತ್ತಾರೆ. ಸೀತೆ ವಾಸ ಇದ್ದ  ಗುಹೆಸೀತಾ ಕುಟುವಾ( Seeta kotuwa or sitakotuwa) ಎಂದು ಹೆಸರು ಪಡೆಯಿತು. ಮುಂದೆ ಅದುಗೂರುಲು ಪೊಟ Goorulu pota’  ಎಂದು ಕರೆಯಲ್ಪಟ್ಟಿತು. ಜಾಗ ಮಂಡೋದರಿಯ ಅರಮನೆಯ ಬಳಿ ಇತ್ತು. ಅವಶೇಷಗಳಡಿ ಹೂತು ಹೋದ ಕಾಲದ ಪಟ್ಟಣ Mahiyngamದಿಂದ ಇದು ಸು, 10 ಕಿಲೋಮೀಟರ್ ದೂರ ಇದೆ. ಅಲ್ಲಿಯೂ ಸೀತೆ ಹೆಚ್ಚು ಕಾಲ ಇರುವುದಿಲ್ಲ. ಮುಂದೆ ಆಕೆಯನ್ನು ಆಶೋಕವನದಲ್ಲಿ ಇರಿಸುತ್ತಾನೆ. ಅಶೋಕವನ ಎತ್ತರದ ಬೆಟ್ಟ ಪ್ರದೇಶ. ಹಿಂದೆ ಇಲ್ಲಿಯ ಒಟ್ಟಾರೆ ಪ್ರದೇಶವೇ ಅಶೋಕವನ ಆಗಿತ್ತು ಎಂದ ಗೈಡ್. ರಾವಣ ಕುದುರೆಗಾಡಿಯಲ್ಲಿ ಅಶೋಕ ವನದ ಬೆಟ್ಟ ಹತ್ತುತ್ತಿದ್ದನಂತೆ. ಕುದುರೆ ಹೆಜ್ಜೆಗಳ ಐತಿಹ್ಯ ಬೆಟ್ಟ ಹತ್ತುವ ಜಾಗದಲ್ಲಿ ಇದೆಯೆನ್ನುತ್ತಾರೆ ಶ್ರೀಲಂಕನರು. ಸೀತಾ ಹೂ ಎಂಬ ಹೂವು ಕೂಡಾ ಇಲ್ಲಿಯ ವಿಶೇಷವಂತೆ. ಅದನ್ನು ನೋಡುವುದು ಕಷ್ಟಸಾಧ್ಯ ಎಂದು ಗೊತ್ತಾಯಿತು. ದಾರಿಯಲ್ಲಿ ಸೀತೆಯ ಕಣ್ಣೀರಿನಿಂದ ಉಂಟಾದ ಕೊಳವೂ ಇದೆಯಂತೆಇದುವರೆಗೆ ಬಂದ ಬರಗಾಲಗಳಲ್ಲೂ ಇದು ಬತ್ತಿಲ್ಲ ಎನ್ನುತ್ತಾರೆ.


ಸೀತಾವಾಟಿಕಾ:

ಸೀತಾವಾಟಿಕಾ ನುವಾರಾ ಎಲಿಯಾ ನಗರಕ್ಕೆ ಸಮೀಪವೇ ಇದೆ. ಹಗ್ಕಲಾ ಬಂಡೆಯ ಬಳಿ ಇರುವ ಹಗ್ಕಲಾ ಉದ್ಯಾನವನ ಆಶೋಕವಾಟಿಕಾದ ಭಾಗವಾಗಿ ಇದೆ. ಇದು ಎತ್ತರದ ಜಾಗವಾಗಿದ್ದು ಇಲ್ಲಿಯ ಬಂಡೆಯ ಮೇಲೆ ಸೀತೆ ಕುಳಿತಿರುತ್ತಿದ್ದಳು ಎನ್ನುತ್ತಾರೆ. ನುವಾರಾ ಎಲಿಯಾ ಅಥವಾ ಅಶೋಕವನದ ಸೌಂದರ್ಯ ಮನೋಹರವಾಗಿದ್ದು, ಸೀತೆಯ ಮನಸ್ಸು ಇಲ್ಲಿಯ ಪ್ರಕೃತಿ ಸೌಂದರ್ಯ ಕಂಡು ಅರಳಬಹುದು ಎಂದು ಸೀತೆಯನ್ನು ರಾವಣ ಇಲ್ಲಿ ಇಟ್ಟಿದ್ದನಂತೆ



No comments:

Post a Comment