Tuesday, September 15, 2015

ರಾವಣನ ಕನಕ ಲಂಕೆಯಲ್ಲಿ ...ಬಾಗ 10


ನಾವು ಮೊದಲು ಅಶೋಕವನದ ಒಂದು ಭಾಗವಾಗಿದ್ದು ಈಗ ಬಟಾನಿಕಲ್ ಗಾರ್ಡನ್ (147 ಎಕ್ರೆ) ಉದ್ಯಾನವನಕ್ಕೆ ಹೋದೆವು. ಇಲ್ಲಿಯ ವಿವರ ನೀಡುವ ಮೊದಲು ಶ್ರೀ ಲಂಕನರಿಗೆ ರಾಮಾಯಣದ ಐತಿಹ್ಯಗಳ ಬಗ್ಗೆ ಇರುವ ಭಾವನೆಗಳ ಬಗ್ಗೆ ತಿಳಿಯೋಣ.
ರಾಮಾಯಣಕ್ಕೆ ಸಂಬಂಧಿಸಿದ 60 ಸ್ಥಳಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಅಭಿವೃದ್ಧಿ ಪಡಿಸುವಲ್ಲಿ ಇದುವgಗೆ ಶ್ರೀ ಲಂಕಾ ಸರಕಾರ ಉತ್ಸಾಹ ತೋರಿಸಿರಲಿಲ್ಲ ಎನ್ನುತ್ತಾನೆ ಕನಾಲ್. ಲಂಕಾ ಸರಕಾರಕ್ಕೆ ಪಾಶ್ಚಾತ್ಯ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಇದ್ದ ಮುತುವರ್ಜಿ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಇರಲಿಲ್ಲ. ಭಾರತೀಯರ ಬಗ್ಗೆ ಒಂದು ರೀತಿಯ ಉದಾಸೀನತೆ ಇತ್ತು ಎನ್ನಲು ಆತ ಹಿಂಜರಿಯಲಿಲ್ಲ. ಅನುಭವ ನಮಗೆ ಹಿಲ್ಟಾಪ್ ಹೋಟೇಲ್ನಲ್ಲಿ ಮತ್ತು ಅದಕ್ಕಿಂತ ಹೆಚ್ಚಾಗಿ ರಾಂಬೋಡಾ ಹಿಲ್ನಲ್ಲಿ ಆಯಿತು. ಆದರೆ 21ನೆಯ ಶತಮಾನವು ಲಂಕಾ ಸರಕಾರವನ್ನು ಭಾರತದತ್ತ ಹೊರಳಿಸುತ್ತಿದೆ. ಪಾಶ್ಚಾತ್ಯ ರಾಷ್ಟ್ರ್ರಗಳು ಆರ್ಥಿಕ ದುಸ್ಥಿತಿಯಿಂದ ತತ್ತರಿಸುತ್ತಿರುವಾಗ ತಮ್ಮ ಪ್ರವಾಸೀ ಸ್ಥಾನಗಳಿಗೆ ಜನರನ್ನು ಆಕರ್ಷಿಸಿ ಪುನರುಜ್ಜೀವನಗೊಳಿಸಲು ಭಾರತದ ಕಡೆಗೆ ನೋಡಲೇ ಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇದೀಗ ಲಂಕಾ ಸರಕಾರ ರಾಮಾಯಣಕ್ಕೆ ಸಂಬಂಧಿಸಿದ ಐತಿಹ್ಯಗಳ ಸ್ಥಳಗಳನ್ನು ಪ್ರವಾಸೀ ಕೆಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಯತ್ನದತ್ತ ಹೊರಳುತ್ತದೆ. ಪ್ರಯತ್ನ ಪ್ರವಾಸಿ ದೃಷ್ಟಿಯಿಂದ ಮಾತ್ರವೇ ಹೊರತು ವಾಸ್ತವವಾಗಿ ರಾಮಾಯಣ ಕಾಲದ ಐತಿಹಾಸಿಕ ಸ್ಥಳಗಳು ಇವಲ್ಲ ಎನ್ನುವುದು ಭೂಗರ್ಭಶಾಸ್ತ್ರಜ್ಞರ ಮತ್ತು ಇತರ ವಿದ್ವಾಂಸರ ಅಭಿಪ್ರಾಯ. ಸ್ಥಳೀಯರಿಗೂ ಬಗ್ಗೆ ಆಸಕ್ತಿ ಇಲ್ಲ. ಅಶೋಕವನ ನೋಡುವಾಗ ನಮಗೂ ಹಾಗೆಯೇ ಅನಿಸಿದೆ. ಇದು ವಾಲ್ಮೀಕಿ ವರ್ಣಿಸಿರುವಅಶೋಕ ವನ ಆಗಿರಲಾರದುಎಂದೆನಿಸಿತು. ಈಗಉದರ ನಿಮಿತ್ತಂ ಬಹುಕೃತ ವೇಷಂ.’
ಅಶೋಕವನವನ್ನುಅಶೋಕ ವಾಟಿಕಾಎಂದು ಕರೆಯುತ್ತಾರೆ. ಇವರು ತೋರಿಸುವ ಅಶೋಕ ವನದಲ್ಲಿ ಅಶೋಕ ವೃಕ್ಷಗಳೂ ಇಲ್ಲ. ನನ್ನ ಒತ್ತಡಕ್ಕೆ ಕಟ್ಟು ಬಿದ್ದು ಬೊಟಾನಿಕಲ್ ಗಾರ್ಡನಿನ ಮಧ್ಯ ಭಾಗದಲ್ಲಿ ಎರಡು ಮರ ತೋರಿಸಿಅದುವೆ ಅಶೋಕ ಮರಎಂದ ಕನಾಲ್. ನಾನು ಬಾಲ್ಯದಲ್ಲಿ ಅಶೋಕ ವೃಕ್ಷ ನೋಡಿದ್ದೆ. (ಮುಂದೆ ನಾನು ಬುದ‍್ದ ಪ್ರವಾಸಲದಲಿ ಕೆಂಪು ಹೂಗಳ ಕಂಪು ಸೂಸುವ ಅಶೋಕ ವನ ನೋಡಿದೆ.)  ಹೂ ದೇವ ಮುಡಿಗೆ ಶ್ರೇಷ್ಠವಂತೆಇಲ್ಲಿಂದ ಮರಳಿ ಅದೇ ದಾರಿಯಲ್ಲಿ ಒಂದೆರಡು ಕಿಲೋಮೀಟರ್ ಹೋದಾಗ ಸಿಗುವ ಸೀತಾ ಮಂದಿರಕ್ಕೆ ಬಸ್ಸು ಹತ್ತಿಯೇ ಬಂದೆವು.


ಸೀತಾ ಅಮ್ಮನ್ ಮಂದಿರ 

ಈಗಿನ ಬೋಟಾನಿಕಲ್ ಉದ್ಯಾವನದಿಂದ ಸುಮಾರು 2ಕಿಲೋಮೀಟರ್ ದೂರದಲ್ಲಿ ಅದೇ ರಸ್ತೆಯಲ್ಲಿ (ನುವರ ಎಲಿಯ ಬದುಲ ರಸ್ತೆಯಲ್ಲಿ ಹಗ್ಕಲದಲ್ಲಿ) ‘ಸೀತಾ ಅಮ್ಮನ್ಎಂಬ ಹೆಸರಿನ ಪುಟ್ಟ ದೇವಸ್ಥಾನ ಇದೆ. ಮುಖ್ಯ ರಸ್ತೆಯಿಂದ ನಾಲ್ಕೈದು ಮೆಟ್ಟಲು ಕೆಳಗೆ ಇಳಿದು ಮೆಟ್ಟು ಕಳಚಿ ಸೀತಾ ಅಮ್ಮನ್ ಮಂದಿರದ ನೆಲಕ್ಕೆ ಕಾಲಿಟ್ಟರೆ ಹಿಮಗೆಡ್ಡೆಯ ಮೇಲೆ ಕಾಲಿಟ್ಟ ಅನುಭವವಾಗುತ್ತದೆ. ಪ್ರತಿ ಹೆಜ್ಜೆಯಲ್ಲೂ ಇದೇ ಅನುಭವ. ಸೀತಾ ಪರಿವಾರ ಇರುವ ಗುಡಿಯನ್ನು ಸೀತೆ ವಾಸವಿದ್ದ ಗುಹೆಯ ಮೇಲಿನ ಬಂಡೆಯಲ್ಲಿ ಕಟ್ಟಲಾಗಿದೆ ಎನ್ನುತ್ತಾರೆ.


ಹನುಮಂತನ ಹೆಜ್ಜೆ ಗುರುತು 
  ಇಲ್ಲಿ ಹರಿವ ತೊರೆಯನ್ನು  `ಸೀತಾ ಎಲಿಯಾಎಂದು ಕರೆಯುತ್ತಾರೆ. ತೊರೆಯಲ್ಲಿ ಸೀತೆ ಸ್ನಾನ ಮಾಡುತ್ತಿದ್ದಳಂತೆ. ಕೆಳಗೆ ನೀರಿನ ಝರಿಸೀತಾ ಎಲಿಯಾಹರಿದುಹೋಗುವುದರಿಂದ ಇದರ ನೆಲ ಮಂಜುಗಡ್ಡೆಯಂತೆ ಇದೆ. ಝರಿಯ ಎಡಕ್ಕೆ ಮೇಲ್ಭಾಗ ಇಳಿಜಾರಾದ ಎತ್ತರದ ಪರ್ವತ ಇದೆ. ಕೆಳಗೆ ಹರಿವ ತೊರೆಯಿಂದ ಬೆಟ್ಟದ ಕಡೆಗೆ ಸಾಗುವ ಹೆಜ್ಜೆ ಗುರುತುಗಳು(?) ಶಿಲೆಯ ಮೇಲೆ ಇದೆ. ನೀರಿನ ಮೇಲೆ ಹಾಸಿರುವ ಶಿಲಾಪದರದ ಮೇಲೆ ಇಟ್ಟ ಹೆಜ್ಜೆ ಹೂತು ಹೋದಂತೆ ಮೃದು ಶಿಲೆಯಡಿಯ ಶುಭ್ರ ನೀರು ಕಾಣುತ್ತದೆ. (ಸುಮಾರು ಎಳೆಂಟು ಗುರುತುಗಳಲ್ಲಿ ಒಂದೆರಡು ಗುರುತು ಮಾತ್ರ ಪಾದದ ಅಳತೆಯಲ್ಲಿ ಇದೆ.) ಗುರುತುಗಳುಹನುಮಂತನ ಹೆಜ್ಜೆಎನ್ನುವ ನಂಬಿಕೆ ಇಲ್ಲಿಯದು. ಸೀತೆ ಕುಳಿತ ಅಶೋಕ ಮರದ ಮೇಲಿನಿಂದ ಹನುಮಂತ ಕೆಳಗೆ ಹಾರಿದ ಒತ್ತಡಕ್ಕೆ ಶಿಲೆ ಒಳಗೆ ಆತನ ಹೆಜ್ಜೆ ಹೂತುಹೋದ ಗುರುತು ಎನ್ನುತ್ತಾರೆ. ಸೀತಾ ಗುಡಿಯ ಬೆಟ್ಟದ ತುದಿಯಲ್ಲಿ ಹನುಮಂತ ದೇವಸ್ಥಾನ ಇದೆಯೆನ್ನುತ್ತಾರೆ. ಬೆಟ್ಟ ಹತ್ತುವುದು ಸುಲಭವಲ್ಲ. ಇಳಿಜಾರಾದ ರಸ್ತೆ ಎಂದ ನಮ್ಮ ಗೈಡ್.
ಸೀತೆ ಕುಳಿತ ಬಂಡೆಯ ಕೆಳಭಾಗದ ಸ್ಪಟಿಕದಂತಹ ನೀರು ಕುಡಿಯಲು ಯೋಗ್ಯವಾಗಿಲ್ಲ. ಇದು ಸೀತೆಯ ಶಾಪವಂತೆ. (ಅಥವಾ ಸೀತೆಯ ಕಣ್ಣೀರು ಹರಿವ ನೀರಿಗೆ ಬೆರೆತಿರಬಹುದು ಎಂಬ ನಂಬಿಕೆಯೆ?) ಆದರೆ ಝರಿಯು ಕೆಳಗೆ ಹರಿದಂತೆ  ಕೆಳಬಾಗದ ನೀರನ್ನು ಕುಡಿಯ ಬಹುದು ಎನ್ನುತ್ತಾರೆ ಇಲ್ಲಿಯವರು. ಸೀತೆ ಸ್ನಾನ ಮಾಡಿದ ಜಾಗಕುಳಿತಬಂಡೆ, - ಹೀಗೆ ತೋರಿಸುವುದರಲ್ಲಿ ಇಲ್ಲಿ ಉತ್ಸಾಹ ಜಾಸ್ತಿ.


ಇಲ್ಲಿ ನಾಲ್ಕು ಒರಟಾದ ಶಿಲಾ ವಿಗ್ರಹಗಳಿವೆ. ಇವುಗಳನ್ನು ರಾಮ, ಸೀತೆ ಲಕ್ಷ್ಮಣ ಮತ್ತು ಹನುಮಂತ ಎನ್ನುತ್ತಾರೆ. ಸುಮಾರು 100ವರ್ಷಗಳ ಹಿಂದೆ ಶಿಲೆಗಳು ಬೆಳಕಿಗೆ ಬಂದುವು. ಆದರೆ ಶತ ಶತಮಾನಗಳಿಂದ ವಿಗ್ರಹಗಳಿಗೆ ಪೂಜೆ ನಡೆಯುತ್ತಿತ್ತು ಎನ್ನುತ್ತಾರೆ. ವಿಗ್ರಹಗಳ ಪೀಠಗಳ ಮೇಲ್ಭಾಗದಲ್ಲಿ ಶ್ರೀರಾಮ ಪರಿವಾರದ ಅಮೃತ ಶಿಲೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಆಧುನಿಕ ಶಿಲ್ಪಗಳು ಉತ್ತರಭಾರತದ ಭಕ್ತನೋರ್ವ ಆಸಕ್ತಿಯಿಂದ ಮಾಡಿದ ಸೇವೆಯಂತೆ. ಶಿಲ್ಪಗಳು ಉತ್ರರ  ಭಾರತದ sಸಂಪ್ರದಾಯದಲ್ಲಿವೆ. ಇಲ್ಲಿಯ ಅರ್ಚಕರು ತಮಿಳರು. ಇಂತಹುದೇ ಇನ್ನೊಂದು ಪುಟ್ಟ ಗುಡಿ ಇದೆ.
ಬಹಳ ನಿರೀಕ್ಷೆ ಇಟ್ಟು ಹೋದ ನನಗೆ ಸೀತೆ ಇದ್ದ ಅಶೋಕವನ ನೋಡಿ ನಿರಾಶೆಯಾಯಿತು. ಇಲ್ಲಿ ಅಶೋಕವೃಕ್ಷ ಅಥವಾ ಯಾವ ವನವೂ ಇಲ್ಲ. ದೊಡ್ಡ ಬೆಟ್ಟ ಇದೆ. ಬೆಟ್ಟದ ಬುಡದಲ್ಲಿ ನೀರಿನ ತೋಡು ಅದರ ಮೇಲೆ ದೇವಸ್ಥಾನದೇವಸ್ಥಾನ ಇರುವುದು ಮುಖ್ಯ ರಸ್ತೆ ಮತ್ತು ಬೆಟ್ಟದ ಇಕ್ಕಟ್ಟಾದ ಸ್ಥಳದಲ್ಲಿ. ಅತ್ತ ಪುರಾತತ್ವ ನೋಟವೂ ಕಾಣದೆ ಇತ್ತ ಆಧುನಿಕತೆಯೂ ಇಲ್ಲದೆ ಪುಟ್ಟ ಗೋಪುರದ ದೇವಾಲಯ ಇದು. ಇದರ ಬಗ್ಗೆ ಶ್ರೀ ಲಂಕಾ ಸರಕಾರದ ಗಮನ ಕೊಟ್ಟಂತೆ ಇಲ್ಲ. ಬಹುಷ ಭಾರತದಲ್ಲಿ ಮಂದಿರ ಇದ್ದಿದ್ದರೆ ಅದು ಯಾತ್ರಾ ಸ್ಥಳವಾಗುತ್ತಿತ್ತೊ! ಏನೊ!
ನಾವು ಇಲ್ಲಿಂದ ವರೇಲಿ ಪೇಟೆಗೆ ಹೋದೆವು. ಇಲ್ಲಿಂದ ಕೆಲವರು ತಮ್ಮ ಊರಿಗೆ ದೂರವಾಣಿ ಮಾಡಿದರು. ನಾನು ಹೆಗ್ಗಡೆಯವರಿಗೆ ದೂರವಾಣಿ ಮಾಡಿ ಕನಾಲ್ ದೂರವಾಣೀ ಸಂಖ್ಯೆ ಕೊಟ್ಟೆ. ಪೇಟೆಯಲ್ಲಿ ಕೆಲವರು ಸಣ್ಣ ಪುಟ್ಟ ವಸ್ತುಗಳನ್ನು ಖರೀದಿಸಿದರು. ಅಷ್ಟರಲ್ಲಿ ಕತ್ತಲಾಯಿತು.
ಗಾಲ್ವೇ ಫಾರೆಸ್ಟ್ ಲಾಡ್ಜ್:
ರಾತ್ರಿ ಉಳಕೊಳ್ಳಲು ನುವಾರಾ ಎಲಿಯಾದಲ್ಲಿ ಇರುವಗಾಲ್ವೇ ಫಾರೆಸ್ಟ್ ಲಾಡ್ಜ್ಗೆ ಬಂದೆವು. 52 ಕೋಣೆಗಳಿರುವ ಸುಸಜ್ಜಿತ ಲಾಡ್ಜ್ 2000 ಅಡಿ ಎತ್ತರದ ಬೆಟ್ಟದ ಇಳಿಜಾರಿನಲ್ಲಿ ಇದ್ದು ಸುತ್ತ ಬೆಟ್ಟಗಳಿಂದಾವೃತವಾಗಿದೆ. ಲಾಡ್ಜ್ ಮೇಲ್ಭಾಗ ಬೆಟ್ಟ ಸಾಲುಗಳು. ಕೆಳಭಾಗದಲ್ಲಿ ಇನ್ನೂ ತಗ್ಗು ಇದ್ದು ಇಲ್ಲಿ ಹೊಲಗಳಿವೆ. ಅದರಾಚೆ ಬೆಟ್ಟಸಾಲುಗಳಿವೆ. ಇಲ್ಲಿ ಚಳಿಯಿಂದ ಥರಗುಟ್ಟಿದೆವು. ಕೆಲವರು ಮನೆಯಿಂದ ತಂದಿದ್ದ ಶಾಲನ್ನು ಬೆಂಗಳೂರಿನಲ್ಲಿ ಬಸ್ಸು ಹತ್ತುವಾಗ ಶ್ರೀ ಲಂಕಾದಲ್ಲಿ ಸೆಖೆ ಎಂದ ಬೇರೆಯವರ ಸಲಹೆಯ ಮೇರೆಗೆ ತಮ್ಮನ್ನು ಕಳುಹಿಸಲು ಬಂದವರ ಕೈಗೆ ನೀಡಿದ್ದರು. ಅಂತವರು ಇಲ್ಲಿ ಬೇಸರಿಸಿಕೊಂಡರು. ಇಲ್ಲಿ ವರ್ಷದ ಎಲ್ಲಾ ದಿನಗಳಲ್ಲಿ 12ಡಿಗ್ರಿ ಸೆಲ್ಸಿಯಟ್ ಉಷ್ನಾಂಶ ಮಾತ್ರ ಎನ್ನುತ್ತಾರೆ. ವರ್ಷದ 12 ತಿಂಗಳೂ ಒಂದೇ ಸಮನಾಗಿ ವಾತಾವರಣ ಇದೆ. ಶ್ರೀ ಲಂಕಾವನ್ನು ಆಳುತ್ತಿದ್ದ ಬ್ರಿಟಿಷರಿಗೆ ಇದು ನೆಚ್ಚಿನ ತಾಣವಾಗಿತ್ತಂತೆ.
ನಾವು ಇಲ್ಲಿಗೆ ಬಂದಾಗ ರಾತ್ರಿಯಾಗಿತ್ತು. ಕೊರೆವ ಚಳಿಯಲ್ಲಿ ಹೊರಗೆ ಇಣುಕಲಾಗಲಿಲ್ಲ.
ಎಂದಿನಂತೆ ಸ್ನಾನ ಮುಗಿಸಿ ಊಟದ ಚಾವಡಿಗೆ ಹೋದೆವು. ಇಲ್ಲೂ ಊಟಮಾಡುವಾಗ ಸಂಗೀತಗಾರರು ಹಾಡುತ್ತಿದ್ದರು. ಆದರೆ ಹಿಲ್ ಟಾಪ್ ಹೊಟೇಲಿನ ಸಂಗೀತಗಾರರು ನಮ್ಮನ್ನು ಉದಾಸೀನತೆಯಿಂದ ನೋಡಿದಂತೆ ಇವರು ನೋಡಲಿಲ್ಲ. ನಮ್ಮನ್ನು ಕಂಡು ಹಿಂದಿ ಚಿತ್ರಗೀತೆಗಳನ್ನು ಹಾಡಿದರು. ಇದರಿಂದ ಉತ್ತೇಜನಗೊಂಡ ಶರ್ವಾಣಿ ಅಕ್ಕ ಸಂಗೀತಗಾರರಿಗೆ ನಗದು ಭಕ್ಷೀಸು ಕೊಟ್ಟು ಪ್ರೋತ್ಸಾಹಿಸಿದರು. ‘ನಾವು ಪ್ರೋತ್ಸಾಹಿಸಿದರೆ ಅವರು ಭಾರತೀಯರ ಬಗ್ಗೆ ಉದಾಸೀನ ಮಾಡರು. ಕೊನೆಯಲ್ಲಿ ಎಲ್ಲವೂ ಹಣಕ್ಕಾಗಿ ತಾನೆ ನಡೆಯುವುದು?’ ಎಂದರು ಶರ್ವಾಣಿಯವರು.
ದಿನ ಊಟ ಆದ ಮೇಲೆ ಅನೇಕರು ನಮ್ಮ ಕೋಣೆಗೆ ಬಂದರು. ನಾನು ಶರ್ವಾಣಿ ಅಕ್ಕ ಮತ್ತು ಕೌಶಲಕ್ಕ ಇದ್ದಲ್ಲಿಗೆ. ಸ್ವಲ್ಪಹೊತ್ತು ಹಗುರಮಾತುಗಳಿಂದ ನಕ್ಕು ನಗೋಣ ಎಂದು.
ಇಂದ್ರಕ್ಕ ನೀವು ಬರಹಗಾರರು ನಾವು ಇಲ್ಲಿ ಆಡಿದ್ದೆಲ್ಲವನ್ನು ಬರೆಯಲು ಹೋಗಬೇಡಿ.’ ಎನ್ನಲು ಮರೆಯಲಿಲ್ಲ ನನ್ನ ಸೋದರಿಯರು. ‘ಖಂಡಿತಾ ಇಲ್ಲ. ಹಾಗೆಲ್ಲ ಬರಹಗಾರರು ವೈಯುಕ್ತಿಕ ವಿಷಯಗಳನ್ನು ಬರೆಯುವುದಿಲ್ಲ. ಒಂದಿಷ್ಟು ನಮ್ಮ ನಮ್ಮ ಅನುಭವಗಳನ್ನು ಹಂಚೋಣ. ತಮಾಷೆಯಾಗಿ ಅಥವಾ ಅರಿವಿಗಾಗಿಎಂದೆ. ಭಿನ್ನ ಭಿನ್ನ ವ್ಯಕ್ತಿತ್ವದ ತಮ್ಮ ತಮ್ಮ ಗಂಡಂದಿರಿಂದ ಬಿಡುಗಡೆಗೊಂಡು ಸ್ವಲ್ಪ ಕಾಲವಾದರೂ ಸಂಸಾರದ ಜಂಜಡಗಳನ್ನು ಮರೆಯುವ ಅವಕಾಶ ಇದು. ‘ಒಂದಿಷ್ಟು ಮನಸ್ಸು ಬಿಚ್ಚಿ ಆಡುವಾ. ನಕ್ಕು ನಲಿಯುವಎಂದವರೇ ಹೆಚ್ಚು. ಹಾಗಂತ ನಾವ್ಯಾರೂ ಸ್ತ್ರೀವಾದಿಗಳಲ್ಲ. ಅಪ್ಪಟ ಬಂಟ ಸುಮುದಾಯದ ಬಂಟ ಮಹಿಳೆಯರ ಘನತೆಯ ಅರಿವುಳ್ಳ ಪ್ರಜ್ಞಾವಂತ ಗೃಹಿಣಿಯರು. ಮಾತೃವಂಶೀಯ ಮಹಿಳೆಯರು; ಆದರೆ ಪುರುಷಪ್ರಧಾನ ಸಮಾಜದವರು. ಹೀಗಾಗಿ ಪುರುಷನ ಭಯ ಇಲ್ಲಿ ಅಧಿಕ. ಪುರುಷ ಗಂಡನೂ ಆಗಿರಬಹುದು ಸೋದರನೂ ಆಗಿರಬಹುದು.

ನಾವು ರಾತ್ರಿ ಸುಮಾರು ಹೊತ್ತು ಮಾತನಾಡುತ್ತಾ ಕುಳಿತೆವು. ಕೆಲವರು ಕ್ಯಾಂಡಿಯಲ್ಲಿ ನೋಡಿ ಬಂದ ಬುದ್ಧನ ಬಗ್ಗೆ ಕೇಳಿದರು. ಬುದ್ದ ಹೇಗೆ ಸತ್ತ ಎಂದರೊಬ್ಬರು. ಬುದ್ಧ ತನ್ನ ಮರಣಕ್ಕೆ ಮೊದಲು ಮಾಲದ ಪಾವಕ್ಕೆ ಭೇಟಿ ನೀಡಿದ್ದ. ಇಲ್ಲಿಯ ಕಬ್ಬಿಣದ ಆಚಾರಿ ಕುಂಡ ಎಂಬವನ ಮನೆಯಿಂದ ಬುದ್ಧ ತನ್ನ ಊಟವನ್ನು ಹೇಳಿ ತರಿಸುತ್ತಾನೆ. ಎಳೆ ಹಂದಿ  (ಸೂಕರ್ ಮದ್ದವ ) ಮಾಂಸವನ್ನು ಆತ ಬೇಯಿಸಿ ಬುದ್ಧನಿಗೆಂದು ತಂದಿದ್ದ. ಅದನ್ನು ತನಗೆ ಬಡಿಸಿ ಅನಂತರ ಉಳಿದ ಸನ್ಯಾಸಿಗ:ಳಿಗೆ ಬಡಿಸಲು ಬುದ್ಧ ಹೇಳುತ್ತಾನೆ. ಸ್ವಲ್ಪ ತಿಂದುಬೇಡ ಯಾರಿಗೂ ಬಡಿಸಬೇಡ ಎಲ್ಲವನ್ನು ಮಣ್ಣಿನೊಳಗ ಹೂತು ಬಿಡು ಎನ್ನುತ್ತಾನೆ.’ ಅಷ್ಟರಲ್ಲಿ ಬುದ್ಧ ಅಸ್ವಸ್ಥನಾಗುತ್ತಾನೆ. ತನ್ನ ಆಪ್ತ ಶಿಷ್ಯ ಆನಂದನ ಬಳಿ ಕುಶಿನಾರಕ್ಕೆ ಹೋಗೋಣ ಎನುತ್ತಾನೆ. ಅಲ್ಲಿ ಆತ ಮರಣವನ್ನಪ್ಪುತ್ತಾನೆ.
ಬುದ್ಧನಿಗೆ ವಿಷವುಣಿಸಿದವರು:

ಆಗ ಅದರಲ್ಲಿ ವಿಷ ಹಾಕಿತ್ತಾ? ಯಾರು ಹಾಕಿದ್ದು, ಯಾಕೆ? ಹಾಗಾಯಿತು? -ಹೀಗೆಲ್ಲ  ಮುಗ್ಧ ಪ್ರಶ್ನೆಗಳ ಸುರಿಮಳೆ
ನಾನಂತೂ ಹಾಕಲಿಲ್ಲ ನಾನು ಅಲ್ಲಿ ಇರಲಿಲ್ಲಎಂದೆ ನಗುತ್ತಾ. ಅಂದಿನ ಚರ್ಚೆಯಲ್ಲಿ ಬುದ್ಧನೇ ತುಂಬಿಕೊಂಡಿದ್ದ. ಇದರ ಮಧ್ಯೆ ಒಬ್ಬಾಕೆಯ ಪ್ರಶ್ನೆ, “ಬುದ್ದ ದೇವರಲ್ಲವಾ? ಆತ ಮಾಂಸ ತಿನ್ನುತ್ತಾನಾ?” “ಬುದ್ದನೇ ಯಾಕೆ? ಶ್ರೀರಾಮ ಸೀತೆ ಮಾಂಸ ತಿನ್ನುತ್ತಿದ್ದರು. ಮೂಲ ವಾಲ್ಮೀಕಿ ರಾಮಾಯಣದ (ಅನುವಾದ ವಿದ್ವಾನ್  ರಂಗನಾಥ ಶರ್ಮ)ದಲ್ಲಿ ಶ್ರೀ ರಾಮ, ಲಕ್ಷ್ಮಣ, ಸೀತೆ ಸರಯೂ ನದಿ ದಾಟಿದ ದಿನ ಜಿಂಕೆ ಮಾಂಸದೂಟ ಮಾಡಿದ್ದ ವಿವರಣೆ ಇದೆ. ಆತ ಸೂರ್ಯ ವಂಶದ ಕ್ಷತ್ರಿಯ. ಕ್ಷತ್ರಿಯರು ಮಾಂಸಹಾರಿಗಳು. ಅದರಲ್ಲೂ ಬೇಟೆಯ ಮಾಂಸ ಪ್ರಿಯರು. ಬುದ್ಧನೂ ಶಾಕ್ಯ ವಂಶದ ಕ್ಷತ್ರಿಯ. ಆದರೆ ಬುದ್ಧ ಇತಿಹಾಸ ಪುರುಷ, ಶ್ರೀ ರಾಮ ಪುರಾಣ ಪುರುಷಎಂದೆ ನಾನು.

No comments:

Post a Comment