Wednesday, September 16, 2015

ರಾವಣನ ಕನಕ ಲಂಕೆಯಲ್ಲಿ ಭಾಗ 11

 ತಮಿಳು ಕುಟುಂಬ:
ಮರುದಿನ ಬೆಳಿಗ್ಗೆ ಎದ್ದು ಬೇಗನೆ ಸ್ನಾನಮಾಡಿ ಹೋಟೆಲ್ ಕಿಟಿಕಿಯಿಂದ  ನೋಡುವಾಗ ನಮ್ಮ ಹೊಟೇಲ್ ಹೊಲಗಳÀ ಮಧ್ಯೆ ಇರುವುದು ಕಂಡು ಆಶ್ಚರ್ಯವಾಯಿತು. ನಾನು ಹೋಟೆಲಿನಿಂದ ಹೊರ ನಡೆದೆ. ಗ್ವಾಲೆ ಫಾರೆಸ್ಟ್ ಲಾಡ್ಜ್ ಸುತ್ತಲೂ ವಾಣಿಜ್ಯ ಬೆಲೆಯಾಗಿರುವ ಸೊಪ್ಪು ಬೆಳೆಯುವ ಹೊಲಗಳಿವೆ. ಎಲ್ಲೂ ಭೂಮಿಯನ್ನು ಬೆಳೆಯದೆ ಬಿಟ್ಟಿಲ್ಲ. ಇಳಿಜಾರಿನಲ್ಲಿ ಭೂಮಿಕಾಣದಷ್ಟು ರೈತರು ಹೈಟೆಕ್ ಸೊಪ್ಪುಗಳನ್ನು ಬೆಳೆಯುತ್ತಾರೆ. (ಸಲಾಡ್ ಸೊಪ್ಪು)
ಲಾಡ್ಜ್ ಕೆಳಭಾಗದಲ್ಲಿ ಇರುವ ಪುಟ್ಟ ಮನೆಗಳ ಮುಂದೆ ಇರುವ ಕರಿ ಮಣ್ಣಿನ ಹೊಲದ ಮಧ್ಯೆ ಇಬ್ಬರು ಕೆಲಸಮಾಡುವವರನ್ನು ಕಂಡು ನಾನು ಅವರನ್ನು ಮಾತನಾಡಿಸಲು ಮೆಟ್ಟಲು ಇಳಿದೆ. ಇವರು ಕದಳಿವೇಲು (ಪ್ರಾಯ 60) ಮತ್ತು ಕಂದಸ್ವಾಮಿ (ಪ್ರಾಯ 60) ಸ್ವತಃ ಭೂಮಿ ಇರುವ ಕೃಷಿಕರು. ಯಾವುದೋ ಕಾಲದಲ್ಲಿ ಕೊಯ್ಯಂಬುತ್ತೂರು ಪ್ರದೇಶದಿಂದ ಇಲ್ಲಿಗೆ ಕೂಲಿಯಾಳುಗಳಾಗಿ ಬ್ರಿಟಿಷರ ಜೊತೆ ಬಂದವರು. ಈಗ ಸ್ವತಃ ಭೂಮಿ ಹೊಂದಿದ್ದಾರೆ. (ಈಗಲೂ ಇಲ್ಲಿ ಕೂಲಿ ಅಧಿಕ ಒಬ್ಬ ಪುರುಷನಿಗೆ ಶ್ರೀ ಲಂಕಾದ 600ರೂಪಾಯಿ ಕೂಲಿ ದಿನಕ್ಕೆ ಸಿಗುತ್ತದೆ. ಮಹಿಳೆಗೆ 350 ಸಿಗುತ್ತದೆ. (ಭಾರತದ 100ರುಪಾಯಿಗೆ ಶ್ರೀಲಂಕಾದ 220ರಿಂದ 230ರವರೆಗೆ ಸಿಗುತ್ತದೆ.)

ಒಂದೇ ಕುಟುಂಬವಾಗಿದ್ದ ಕದಳಿವೇಲು ಕಂದಸ್ವಾಮಿ ಭೂಮಿಯನ್ನು ಭಾಗ ಮಾಡಿಕೊಂಡು ಬೇರೆಯಾಗಿದ್ದಾರೆ. ಬ್ರಿಟಿಷರು ಶ್ರೀಲಂಕಾ ತೊರೆದು ಹೋದಾಗ ಇವರಿಗೆ ಬಳುವಳಿಯಾಗಿ ನೀಡಿದ ಭೂಮಿ ಇದು. ಈಗ ಇವರ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಿ ಭೂಮಿ ಭಾಗ ಆಗಿದೆ. ಇವರ ಭೂಮಿಯ ಬಳಿ ಸಿಂಹಳೀಯನ ಭೂಮಿ ಇದೆ. ಎರಡೂ ಕುಟುಂಬದವರು ಒಂದೇ ರೀತಿಯ ಹೈಟೆಕ್ ಬೆಳೆ ಬೆಳೆಯುತ್ತಾರೆ. ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತಾರೆ. ಜಾತಿ ಭೇದ ಇಲ್ಲ. ಶ್ರೀ ಲಂಕಾದಲ್ಲಿ ಎಲ್ಲೂ ಜಾತಿಭೇದ ಇಲ್ಲ ಎಂದು ತಿಳಿಯಿತು. ಕಾರಣ ಇಲ್ಲಿ ಬ್ರಾಹ್ಮಣ ಧರ್ಮ ಇಲ್ಲ. ಅಲ್ಪ ಸಂಖ್ಯಾತರಾಗಿ  ಕೆಲವೇ ಕೆಲವು ತಮಿಳು ಅರ್ಚಕರ ಬ್ರಾಹ್ಮಣರು ಇದ್ದಾರೆ.  ಹಿಂದುಗಳು, ಬೌದ್ಧರು, ಮುಸಲ್ಮಾನರು ಕ್ರೈಸ್ತರು ಅನೋನ್ಯವಾಗಿದ್ದಾರೆ. ಧರ್ಮ ಕಲಹ ಇಲ್ಲ. ಹಿಂದೂ ದೇವರು ಬೌದ್ಧಮಂದಿರದಲ್ಲಿ ಇದ್ದ, ರೆ ಹಿಂದೂ ಮಂದಿರದಲ್ಲಿ  ಬುದ್ಧನೂ ಇದ್ದಾನೆ. ಬುದ್ಧ ದೇವರನ್ನೇ ನಿರಾಕರಿಸಿ ಕಾರ್ಯ ಕಾರಣ ಸಂಬಂಧವನ್ನು ಅರ್ಥಾತ್ ಮನುಷ್ಯ ಪ್ರಯ್ತತ್ನವನ್ನು ಪ್ರತಿಪಾಸಿದವನು. ಆದರೆ ಅವನ ಅನುಯಾಯಿಗಳು ಆತನನ್ನು ದೇವರನ್ನಾಗಿಸಿದರು. ದುರ್ಬಲ ಮನಸ್ಸಿನ ಮಾನವನಿಗೆ ಸಂಕಟ ಬಂದಾಗ ದೇವರ ಅಗತ್ಯ ಇರುತ್ತದೆ. ತಮ್ಮ ದುಖಃತೋಡಿಕೊಂಡು ತನ್ನನ್ನು ರಕ್ಷಿಸಲು ಒಬ್ಬ ಇದ್ದಾನೆ ಎನ್ನು ಕಲ್ಪನೆಯೇ ಅವನ ಮನಸ್ಸಿಗೆ ಮುದನೀಡುತ್ತದೆ. ಹೀಗೆ ಬುದ್ಧ ದೇವರಾದ.
ತಮಿಳ್ ಈಳಂ. ಹೋರಾಟ ನಡೆಸುತ್ತಿದ್ದ ಶ್ರೀಲಂಕಾದ ಉತ್ತರ ಭಾಗದಲ್ಲಿ ಶೇಕಡಾ 10ರಷ್ಟು ತಮಿಳರು ಇದ್ದರೆ ದಕ್ಷಿಣದ ಪರ್ವತ ಪ್ರದೇಶದಲ್ಲಿ ಅದಕ್ಕಿಂತಲೂ ಹೆಚ್ಚು ತಮಿಳರು ಇದ್ದಾರೆ. ಸಾವಿರಾರು ತಮಿಳರನ್ನು ಬ್ರಿಟಿಷರು ಇಲ್ಲಿಯ ಟೀ ತೋಟದಲ್ಲಿ ರಬ್ಬರ್ ತೋಟದಲ್ಲಿ ಕೆಲಸಮಾಡಲು ಭಾರತದಿಂದ ಕರೆತಂದಿದ್ದರು. ಇವರೆಲ್ಲಿ ಕೆಲವರು ಸಣ್ಣ ರೈತರಾಗಿ ಜೀವನ ನಿರ್ವಣೆಮಾಡುತ್ತಿದ್ದಾರೆ. ಅಂತಹ ಇಬ್ಬರು ರೈತರನ್ನು ಭೇಟಿ ಮಾಡುವ ಅವಕಾಶವನ್ನು ನಾನು ಸಂಪಾದಿಸಿಕೊಂಡೆ.
ಮರಳಿ ಬಂದಾಗ ನಮ್ಮವರೆಲ್ಲ ಭೂರಿ ಉಪಹಾರದಲ್ಲಿ ಮುಳುಗಿದ್ದರು.

ಗಟ್ಟದಿಂದ ಕಡಲ ಕರೆಗೆ
ನಾವೀಗ ಮರಳಿ ಘಟ್ಟದಿಂದ (ನುವಾರಾ ಎಲಿಯಾದಿಂದ) ಸಮುದ್ರ ತೀರಕ್ಕೆ ಇಳಿಯಲಾರಂಭಿಸಿದೆವು. ನಮ್ಮನ್ನು ಹೊತ್ತು ಸಾಗುತ್ತಿದ್ದ ರಸ್ತೆಯಲ್ಲಿ ಬಸ್ಸೊಂದು ಕಣಿವೆಗೆ ಬಿದ್ದಿತ್ತು
ಆದರೆ ನಮ್ಮಲ್ಲಿಯಂತೆ ಜನಸಂದಣಿ ಅಲ್ಲಿ ದಟ್ಟವಾಗಿರಲಿಲ್ಲ. ನಾವು ಅದನ್ನು ಅಲ್ಲೇ ಮರೆತು ನಮ್ಮ ದಾರಿ ಸವೆಸಿದೆವು. ಬಸ್ಸಿನಲ್ಲಿ ಹರಿದ ಹಾಸ್ಯ ಲಹರಿಯಿಂದ ನಗೆ ಚಿಮ್ಮುತ್ತಿತ್ತು. ಮಹಿಳೆಯರು ಎಷ್ಟೊಂದು ಲವಲವಿಕೆಯಿಂದ ಇದ್ದರೆಂದರೆ ಹಾಸ್ಯ ತುಣುಕು ಎಸೆಯಲು ಅವರಲ್ಲಿ ಪೈಪೋಟಿ! ಕೆಲವು ರಾಂಪ್ಪ (ದಕ್ಷಿಣ ಕನ್ನಡದಲ್ಲಿರಾಂಪ ಹಾಸ್ಯ ಪ್ರಸಿದ್ಧವಾಗಿತ್ತು.) ಜೋಕ್ಸ್ಗಳೂ ಇದ್ದುವು. ತುಳು ಭಾಷೆಯಲ್ಲಿ ನಾವು ಆಡುತ್ತಾ ನಗುತ್ತಾ ಇರುವುದನ್ನು ನೋಡಿ ನಮ್ಮ ಗೈಡ್ ಕನಾಲ್ ಮತ್ತು ಸಾರಥಿ, ಸಹಾಯಕ - ಇವರೆಲ್ಲ ಪೆಚ್ಚು ಪೆಚ್ಚಾಗಿ ನಮ್ಮನ್ನು ನೋಡಿದರು. ನಾನು ಅವನಿಗಂದೆ: ಯಾವಾಗಲೂ ಗಂಡಂದಿರು ರಿಮೋಟ್ ಗುಂಡಿ ಒತ್ತಿದರೆ ಮಾತ್ರ ಬಗ್ಗುತ್ತಿದ್ದವರಿಗೆ ಇಲ್ಲೊಂದು ಸುವರ್ಣಾವಕಾಶ ಲಭಿಸಿದೆ. ನಗಲಿ ಬಿಡು. Wife is knief to cut out your life  ಎನ್ನುತ್ತಾರಲ್ಲ. ವಾಸ್ತವವಾಗಿ ಯಾರ ಬಾಳನ್ನು ಯಾರು ಕತ್ತರಿಸುತ್ತಾರೆ ಎಂದು ಪುರುಷನಾದ ನಿನಗೆ ಇಲ್ಲಿ ತಿಳಿಯುತ್ತದೆ. ಆತ ನಮ್ಮ ಹಾಸ್ಯಲಹರಿಗಳನ್ನು ಇಂಗ್ಲಿಷಿನಲ್ಲಿ ಹೇಳಬೇಕಂದ. ಆದರೆ ಎಲ್ಲವನ್ನೂ ಅವನಿಗೆ ಹೇಳಲಾಗುತ್ತದೆಯೇ? ಮಹಿಳೆಯರ ಗುಟ್ಟು ಮಹಿಳೆಯರಲ್ಲಿ ಇರಬೇಕಲ್ಲದೆ ಪುರುಷರಿಗೆ ಅರುಹಲಾದೀತೆ?
ನಾನೂ ಜೋಕ್ಸ್ ಹೇಳಬಹುದೆ?” ಎಂದು ಪಾಪದ ಹುಡುಗನಂತೆ ಕೇಳಿದ ಕನಾಲ್.  ಖಂಡಿತಾ ಎಂದು ಅನೇಕ ಮಹಿಳಾ ದನಿ  ಉಲಿಯಿತು. ಕನಾಲ್ ಜೋಕ್ಸ್ ಮುಗಿಸುವಾಗ ಹೆಗ್ಡೆಯವರ ದೂರವಾಣಿ ಕನಾಲ್ ದೂರವಾಣಿಗೆ ಬಂತು. ದೂರವಾಣಿಯಲ್ಲಿ ಮಾತನಾಡಲು ಆಗದಷ್ಟು ಗದ್ದಲ ಬಸ್ಸಿನಲ್ಲಿ. ಹೆಗ್ಗಡೆಯವರು ಮಾತನಾಡುತ್ತಾಏನದು ಗಲಾಟೆ ಬಸ್ಸಿನಲ್ಲಿ ನೀವೆಲ್ಲ ಸೇರಿ ಪಾಪದ ಗೈಡ್ ಜೀವ ತಿನ್ನಬೇಡಿಎಂದರು.
ಇದು ಇಡೀ ದಿನದ ಪ್ರಯಾಣ. ಬೆಂಗಳೂರಿನಿಂದ ಮಂಗಳೂರಿಗೆ ಬಸ್ಸು ಪ್ರಯಾಣ ಮಾಡಿದ ಅನುಭವ. ಸಮಯ ಕಳೆಯಲು ಒಂದು ಕಥೆ ಹೇಳಿ ಇಂದ್ರಕ್ಕ ಎಂದರು ಕೆಲವರು. ತರಂಗದಲ್ಲಿ ಪ್ರಕಟವಾದ ನನ್ನ ಕಥೆ ನಾಗ ಮಂಡಲ ಹೇಳಿದೆ. ತುಳು ಸಂಸ್ಕøತಿಯ ಕಥೆಯಾದುದರಿಂದ ಎಲ್ಲರೂ ಮೆಚ್ಚಿದರು. ಇವರಾರೂ ತರಂಗ ಓದಿಲ್ಲ. ಇನ್ನೊಂದು ಕಥೆ ಹೇಳಿ ಅಂದಾಗ ಸುಧಾದಲ್ಲಿ ಪ್ರಕಟವಾದಜೀಟಿಗೆಕತೆ ಹೇಳಿದೆ.
ಕುಟಿಗುಲ - ಕೆಲನಿ ನದಿ:
ನಮ್ಮ ಪ್ರಯಾಣದಲ್ಲಿ ದಾರಿಯ ಕುಟಿಗುಲಾದಲ್ಲಿ ಸಿಗುವ  ಪ್ರಸಿದ್ದ ಪ್ಲ್ಯಾಂಟೇಷನ್ ಹೋಟೇಲ್ನಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯಾಗಿತ್ತು. ಇದು ಕೆಲನಿ ನದಿ ದಡದ ಮೇಲೆ ಇದೆ. ಅಕಾಡೆಮಿ ಅವಾರ್ಡ್ ಪಡೆದ “The Bridge On The River Kwai”ಎಂಬ ಸಿನಿಮಾ ಶೂಟಿಂಗ್ ಇಲ್ಲೇ ನಡೆದಿತ್ತು ಎಂದ ಕನಾಲ್. ದೂರದ ತೂಗು ಸೇತುವೆ ತೋರಿಸಿಅಲ್ಲೇ ಶೂಟಿಂಗ್ ನಡೆದಿತ್ತುಎಂದೂ ಹೇಳಿದ.
ನದಿಗೆ ಮುಖಮಾಡಿರುವ ಹೋಟೇಲಿನ ಊಟದ ಹಾಲ್ನಲ್ಲಿ ಉಣ್ಣುತ್ತಾ ನದಿಯಲ್ಲಿ ಹರಿವ ನೀರು ಮತ್ತು ಅದರಾಚೆಗಿನ ಕಾಡಿನ ಸಿರಿಸೊಬಗನ್ನು ಸವಿಯಬಹುದು. ಇಲ್ಲಿ white water rafting ಯಾವಾಗಲೂ ನಡೆಯುತ್ತಿರುತ್ತದೆ ಎಂದ  ಆದರೆ ನಮಗೆ ಕಾಣಲು ಸಿಗಲಿಲ್ಲ.
ನಾನು ಸಾಂಸ್ಕøತಿಕ ಸಂಶೋಧಕಿ. ಹೋಟೇಲ್ ಒಳ ಪ್ರವೇಶಿಸುವಾಗ ನನ್ನ ಗಮನ ಸೆಳೆದುದು ಇಲ್ಲಿ ಜೋಡಿಸಿರುವ ಪುರಾತನ ಮರದ ಸಾಮಾನುಗಳು. ನಮ್ಮಲ್ಲಿ ಪಟ್ಟದ ಅರಸರು ಸತ್ತರೆ ಅವರ ಉತ್ತಾರಾಧಿಕಾರಿ ಮರಣಿಸುವಾತನ ಬಳಿ  ಇಲ್ಲವಾಧರೆ ಆತ ಬರುವವರೆಗೆ ಅರಸನ ಶವವನ್ನು ಉಪ್ಪಿನಲ್ಲೋ ಎಣ್ಣೆಯಲ್ಲೋ ಮುಳುಗಿಸುಡುವ ಪದ್ಧತಿ ಇತ್ತು. ಸಾಧನವನ್ನುಕಲೆಂಬಿಎನ್ನುತ್ತಾರೆ. ಅಂತಹ ಕಲೆಂಬಿಯನ್ನು ಇಲ್ಲೂ ನೋಡಿ ಆಶ್ಚರ್ಯವಾಯಿತು. ನಮ್ಮೂರ ಮರದ ಸಾಮಾನುಗಳನ್ನು ಹೋಲುವ ಆದರೆ ಬಲು ಜೋಪಾನವಾಗಿ ಕಾಯ್ದಿಟ್ಟ ಇಂತಹ ಅನೇಕ ವಸ್ತುಗಳೂ ಇದ್ದುವು. ಎಷ್ಟೆಂದರೂ ಭಾರತ ಶ್ರೀ ಲಂಕಾ ಅಕ್ಕ ಪಕ್ಕದ ದೇಶವಲ್ಲವೆ? ಕಟ್ಟಡಗಳೂ ನಮ್ಮೂರಿನÀಂತಿವೆÀ. ಹೆಂಚು ಪಕ್ಕಾಸುಗಳಿಂದ ರಚಿತವಾದ ಕಟ್ಟಡ. ಆಧುನಿಕತೆಯ ಮೆರಗು ಕೊಟ್ಟಿದ್ದರು. ತುಂಬಾ ಸುಂದರವಾಗಿತ್ತು

ನಮ್ಮಲ್ಲಿ ಕೆಲವರು ಊಟ ಮುಗಿಸಿ ನದಿಯ ಬಳಿ ಹೋದೆವು. ನದಿ ಆಳವಾಗಿತ್ತು. ಆದರೆ ದಡದಲ್ಲಿ ಬಂಡೆಗಳಿದ್ದುದರಿಂದ ಕಾಲುಚಾಚಿ ಕುಳಿತುಕೊಳ್ಳಲು ಸಾಧ್ಯವಿತ್ತು. ನಾವು ಕೆಲವರು ತಣ್ಣೀರಿನಲ್ಲಿ ಕಾಲುಚಾಚಿ ಕುಳಿತು ಹಿತಪಟ್ಟೆವು. ನನ್ನಂತ ಕೆಲವರಾದರೂ ಇಲ್ಲಿ ಬಾಲ್ಯಕಾಲಕ್ಕೆ ಮರಳಿದ್ದರು.


ನಮ್ಮ ಪಯಣ ಮುಂದುವರಿಯಿತು.
ಬಸ್ಸಿನ ದೂರ ಪ್ರಯಾಣ ಹಿತವಾಗದವರು ಈಗ ವಾಂತಿ ಮಾಡಲಾರಂಭಿಸಿದರು. ಮಂಗಳೂರಿಗೆ ಹೋಗುವ ಬಸ್ಸು ಐಷರಾಮಿ. ಇದು ದೂರ ಪ್ರಯಾಣ ಮಾಡಬಹುದಾದ ಬಸ್ಸು ಅಲ್ಲ. ಹೀಗಾಗಿ ಪ್ರಯಾಣ ತ್ರಾಸದಾಯಕವಾಯಿತು.
ದಾನೆಯೇ ಶರ್ವಣಕ್ಕ. ಇಂಬೆ ನಮನ್ ಬಸ್ಸ್ಡೇ ಕುಲ್ಲಾದ ತಿರ್ಗಾವೊಂದು ಉಲ್ಲೆ. ಬೆಂಗಳೂರುರ್ದು ಕುಡ್ಲಗ್ ಪೋಯಿಲೆಕ್ಕ ಡಬ್ಬೆ ಬಸ್ಸ್ಡ್. ನಮ್ಮ ಒಂಜಿ ದಿನೊನು ಲಗಡಿ ದೆತ್ತೆ (ಏನಿದು ಶರ್ವಾಣಕ್ಕ. ಇವನು ನಮ್ಮನ್ನು ಬಸ್ಸಿನಲ್ಲಿಯೇ ಸುತ್ತಿಸುತ್ತಿದ್ದಾನೆ. ಡಬ್ಬಾ ಬಸ್ಸಿನಲ್ಲಿ? ನಮ್ಮ ಒಂದು ದಿನವನ್ನು ಲಗಾಡಿ ತೆಗೆದ) ಎಂದು ನಮ್ಮ ಗುಂಪಿನ ಮುಂದಾಳು ಶರ್ವಾಣಕ್ಕನನ್ನು ಕೆಲವು ಮಹಿಳೆಯರು ಪ್ರಶ್ನಿಸಿದರು. “ಇಜ್ಜಿ ಇಜ್ಜಿ. ಆಯೆ ಮಲ್ಪುವೆ, ಮಲ್ಪುವೆ.” ಎಂದು ಸಮಾಧಾನಿಸಲು ಶರ್ವಾಣಕ್ಕ ಪ್ರಯತ್ನಿಸಿದರು.

ಎಂಚಿನ ಮಲ್ಪುವೆ ?’ (ಏನು ಮಾಡ್ತಾನೆ?) ಎಂದು ಒಬ್ಬಾಕೆ ತುಂಟಿ ಕೇಳಿದಾಗ ಎಲ್ಲರೂ ಗೊಳ್ಳೆಂದು ನಕ್ಕರು. “ಅಯೆ ದಾದ ಮಲ್ಪುನು. ಆಯನ ಬಾಸ್ ಪಂಡಿ ಲೆಕ್ಕ ಆಯೆ ಕೇನೊಡತ್ತ್.” (ಆತ ಏನು ಮಾಡುವುದು ಬಾಸ್ ಹೇಳಿದ ಹಾಗೆ ಆತ ಕೇಳಬೇಕಲ್ಲ?”) ಶರ್ವಾಣಕ್ಕನ ಉತ್ತರ. ‘ಬಾಸ್ ದಾದ ಪನರೆ ಉಂಡುನಂಕ್ ಕೊರ್ತಿನ ಇಟಿರ್ನರಿಟ್ ಇತ್ತಿ ಲೆಕ್ಕ ಕೊನಡ್’” (ಬಾಸ್ ಏನು ಹೇಳಲಿದೆ? ನಮಗೆ ಕೊಟ್ಟ ಇಟರ್ನರಿಯಲ್ಲಿ ಇದ್ದ ಹಾಗೆ ಕರೆದೊಯ್ಯಲಿ.) ಶರ್ವಾಣಕ್ಕನ ನಗುವಿಗೆ ದಬಾಯಿಸುವಿಕೆಯಿಂದ ಯಾವ ಬಾಧಕವೂ ಆಗಲಿಲ್ಲ

No comments:

Post a Comment