Monday, September 21, 2015

ರಾವಣನ ಕನಕ ಲಂಕೆಯಲ್ಲಿ ---ಭಾಗ 12

ಶ್ರೀಲಂಕಾದ ಶಿಕ್ಷಣ ಪದ್ಧತಿ:
ಪ್ರಯಾಣದಲ್ಲಿ ನಾನು ಕನಾಲ್ ಬಳಿ ಇಲ್ಲಿಯ ಶಿಕ್ಷಣ ಪದ್ಧತಿಯ ಬಗ್ಗೆ ಕೇಳಿದೆ. ಕನಾಲ್ ಇಲ್ಲಿ ಉಚಿತ ಶಿಕ್ಷಣ ಎಂದಾಗ ನನಗೆ ಆಶ್ಚರ್ಯವಾಯಿತು. ಈಗಿನ ಇಲ್ಲಿಯ ಶಿಕ್ಷಣ ಪದ್ಧತಿಯು 19ನೆಯ ಶತಮಾನದಲ್ಲಿ ಇಲ್ಲಿ ಆಳುತ್ತಿದ್ದ ಬ್ರಿಟಿಷ್ ಸರಕಾರದ ಕೊಡುಗೆ. ಇಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಶಿಕ್ಷಣವ್ಯವಸ್ಥೆ ಇದೆ. ಪ್ರಾರ್ಥಮಿಕ, ಲೋವರ್ ಸೆಕೆಂಡರಿ, ಹಾಗೂ ಹೈಸ್ಕೂಲು ಶಿಕ್ಷಣವನ್ನು ಉಚಿತವಾಗಿ ಕಾಲೇಜು ಶಿಕ್ಷಣ ಸಂಸ್ಥೆಯಲ್ಲಿ ಪಡೆಯಬಹುದು. ಪ್ರಾರ್ಥಮಿಕ, ಲೋವರ್ ಸೆಕೆಂಡರಿ, ಮಕ್ಕಳಿಗೆ ಪುಸ್ತಕ ಮತ್ತು ಉಡುಗೆ ಕೂಡಾ ಸರಕಾರದಿಂದಲೇ ಉಚಿತವಾಗಿ ನೀಡಲಾಗುತ್ತದೆ. 1938ರಲ್ಲಿ ಬ್ರಿಟಿಷ್ ಸರಕಾರ ಉಚಿತ ಶಿಕ್ಷಣ ವ್ಯವಸ್ಥೆ ಮಾಡಿದ್ದು ಈಗಲೂ ಅದು ಮುಂದುವರಿಯುತ್ತಿದೆ. ಸ್ಥಳೀಯ ಪ್ರಾದೇಶಿಕ ಭಾಷೆಯ ಪ್ರಾಬಲ್ಯವನ್ನು ಗಮನಿಸಿ ಸಿಂಹಳ ಅಥವಾ ತಮಿಳ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಇದೆ. ಪ್ರಥಮ ಭಾಷೆ ಮತ್ತು ಲೆಕ್ಕ ಕಡ್ಡಾಯ. ಪರೀಕ್ಷೆ ಇದೆ. ಪರೀಕ್ಷೆಯಲ್ಲಿ ಪಾಸಾದವರಿಗೆ ವಿಶ್ವವಿದ್ಯಾಲಯದಿಂದ ಹೊರಬರುವವರೆಗೆ ಪ್ರತಿ ತಿಂಗಳೂ ಆರ್ಥಿಕ ಸಹಾಯವನ್ನು ಸರಕಾರ ನೀಡುತ್ತದೆ. ವಿದ್ಯಾರ್ಥಿಗಳು  ತಮಗೆ ಇಷ್ಟ ಬಂದ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಬಹುದು. 6 ವರ್ಷ ಪ್ರಾಥಮಿಕ ಶಿಕ್ಷಣ. ಜ್ಯೂನಿಯರ್ ಸೆಕೆಂಡರಿ 5 ವರ್ಷ. ನಂತರ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ((General Certificate of Education (G.C.E ))  ಕುಳಿತು ಎರಡು ವರ್ಷದ ಸೀನಿಯರ್ ಸೆಕೆಂಡರಿಗೆ ಹೋಗುತ್ತಾರೆ. ಮುಂದೆ ವಿಶ್ವ ವಿದ್ಯಾಲಯ ಪ್ರವೇಶಕ್ಕೆ(G.C.E.) ಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾರೆ. ವೈದ್ಯಕೀಯ ಓದುವಾಗÀ ಇಂಗ್ಲಷ್ ಭಾಷೆ ಶಿಕ್ಷಣ ಮಾಧ್ಯಮವಾಗಿ ಇದೆ.
ಟೈಗರ್ ಜೊತೆ ಹೋರಾಟ ಇರದೇ ಹೋಗಿದ್ದರೆ ನಮ್ಮ ಪುಟ್ಟ ದೇಶ ಇನ್ನೂ ಅಭಿವೃದ್ದಿ ಹೊಂದುತ್ತಿತ್ತುಎಂಬ ಕನಾಲ್ ಹೇಳಿಕೆ ನಿಜ ಅನಿಸಿತು.
ಹೊಟೇಕ್ ಸೀಸ್ಯಾಂಡ್:


ನಮ್ಮ ಬಸ್ಸು ಸಮುದ್ರತೀರ ತಲುಪಿದಾಗ ನಮಗೆಲ್ಲ ಹಾಯೆನಿಸಿತು. ಮೀನುಗಾರರ ಹಡಗುಗಳು ಲಂಗರು ಹಾಕಿದ್ದ ದಾರಿಯಲ್ಲಿಯೇ ನಮ್ಮ ಬಸ್ಸು ಚಲಿಸತೊಡಗಿತು. ಇಲ್ಲಿ ಮುಸ್ಲಿಮ್ ಮೀನುಗಾರರನ್ನುಮರಕಾಲರುಎನ್ನುತ್ತಾರೆ ಎಂದ ಕನಾಲ್ತುಳುನಾಡಿನಲ್ಲಿ ಮೀನುಗಾರರನ್ನುಮರಕಾಲರೆಂದು ಕರೆಯುತ್ತಾರೆ. ಹೀಗಾಗಿ ನನಗೆ ಮರಕಾಲ ಎನ್ನುವುದು ವೃತ್ತಿನಾಮ ಆಗಿರಬೇಕು ಎಂಬ ಸಂದೇಹ ಆಯಿತು. ಆದರೆ ಬಗ್ಗೆ ಹೆಚ್ಚು ತಿಳಿಯಾಗಲಿಲ್ಲ . ‘Bentota River’ ದಡದಲ್ಲಿ ಬಸ್ಸು ನಮ್ಮನ್ನು ಇಳಿಸಿತು. ಅಲ್ಲಿ ನಿಂತ ದೋಣಿಯನ್ನು ಹೋಲುವ ಸಣ್ಣ ಹಡಗಿನಲ್ಲಿ ಹತ್ತಲು ಸೂಚನೆಯನ್ನು ನಮ್ಮ ಗೈಡ್ ನೀಡಿದ. ಅವನ ಮಾತಿನಂತೆ ಹಡಗು ಹತ್ತಿದೆವು. ನಮ್ಮ ಹಡಗು ಚಲಿಸಿತು. ಅದು ತಲುಪಿದ್ದು 84 .ಸಿ ಕೋಣೆಗಳುಳ್ಳ ಬೆಂಟೋಟದ Hotel  Ceysand ಗೆ. ಕೊಲೊಂಬೋ ನಗರದಿಂದ 65 ಕಿಲೋ ಮೀಟರ್ ದಕ್ಷಿಣಕ್ಕೆಬೆಂಟೋಟಾನದಿ ಮತ್ತು ಸಮುದ್ರದ ಮಧ್ಯೆ ಸುಂದರ ಪರಿಸರದಲ್ಲಿ ಹೋಟೇಲ್ ಇದೆ. ಇದರ ಮುಂಭಾಗದಲ್ಲಿ ಬೆಂಟೋಟಾ ನದಿ; ಹಿಂಭಾಗದಲ್ಲಿ ಸಮುದ್ರ.. ಹಡಗಿನಂತಿರುವ ದೊಣಿಯಲ್ಲಿ ನದಿ ದಾಟಿ ಹೋಟೇಲ್ಗೆ ಹೋಗಬೇಕು. ಬೋಟಿನಲ್ಲಿ ಕುಳಿತು ನದಿನೀರಿನಲ್ಲಿ ತೇಲುವಾಗ ಬಸ್ಸು ಪ್ರಯಾಣದಲ್ಲಿ ಗೈಡ್ ಕನಾಲ್ ಮೇಲೆ ಆಗಿದ್ದ ಬೇಸರ ದೂರವಾಯಿತು. ಬೋಟ್ನಿಂದ ಇಳಿದಾಗ ನಮ್ಮನ್ನು ಕಾಡು ಸಂಪಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು ಸ್ವಾಗತಕಾರಿಣಿಯರು ಶ್ರೀಲಂಕಾ ಉಡುಗೆಯಲ್ಲಿ.
ನಮ್ಮ ನಮ್ಮ ಲಗ್ಗೇಜ್ ಆರಿಸಿ ಅದರೊಂದಿಗೆ ಕೋಣೆಗೆ ಹೋಗಿ ಹಿಂಬಾಗಿಲು ತೆರೆದಾಗ ಆಶ್ಚರ್ಯ! ನಮ್ಮ ಮುಂದೆ ಸಮುದ್ರ. ನಮ್ಮಲ್ಲಿ ಎಲ್ಲರೂ ಕರಾವಳಿ ತೀರದವರು. ಆದರೂ ಸಮುದ್ರ ಕಂಡರೆ ಅಚ್ಚು ಮೆಚ್ಚು. ಅಲ್ಲದೆ ನಮ್ಮ ಸಮುದ್ರ  ಉಗ್ರ. ಇಲ್ಲಿ ಶಾಂತವಾಗಿದೆ. ಹಿಂದೂ ಮಹಾ ಸಾಗರ ಅಲ್ಲವೆ?


ಹಿಂದೂ ಮಹಾಸಾಗರ:
ಸೂರ್ಯ ಕಂತುವ ಮೊದಲು ಹಿಂದೂ ಮಹಾಸಾಗರಕ್ಕೆ ಲಗ್ಗೆಯಿಟ್ಟರು. ಸಮುದ್ರಕ್ಕೆ ಇಳಿಯುವ ಉಡುಗೆಯಲ್ಲಿಯೇ ಕೆಲವರು ಬಂದಿದ್ದರು. ಸಮುದ್ರದದಲ್ಲಿ ಮುಂದೆ ಮುಂದೆ ನಡೆದಂತೆ ಆಶ್ವರ್ಯವಾಯಿತು. ನಮ್ಮ ಬೆಟ್ಟುಗದ್ದೆಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿದಂತೆ ನಡೆದಷ್ಟು ಸಮತಟ್ಟು ನೆಲಅಥವಾ ಕಾಸರಗೋಡು ಜಿಲ್ಲೆಯ ಕುಳೂರು ಭಾಗದಲ್ಲಿ ಇಡೀ ಬಯಲಲ್ಲಿ ಅಂತರ್ಜಲ ಉಕ್ಕಿ ಸಮುದ್ರದಂತೆ ತೋರಿದಂತೆ. ನಡೆದರೆ ಆಳ ಇಲ್ಲದ ಕಡಲು. ಕಾಸರಗೋಡಿನ ಬಯಲಿಗೆ ಇಳಿಯಲು ಭಯವಾಗಿತ್ತು. ಕಡು ನೀಲಿ ಬಣ್ಣದ ನೀರು ಕಂಡು. ಆದರೆ ಇಲ್ಲಿ ಹಾಗಲ್ಲ. ಮುಂದೆ ಮುಂದೆÉ ನಡೆದರೂಪಡಿಲ್ (ಸಮತಟ್ಟು)ನೆಲ. ನಿಂತ ಕಾಲಡಿಯ ಉಸುಕನ್ನು ತೆರೆ ಸರಿಸಿ ಕಚಗುಳಿ ಇಡುತ್ತದೆ. ಆದರೆ ದಡದಲ್ಲಿ ನಿಂತ ಕೆಲವು ಮಹಿಳೆಯರು ನಾವು ಮುಂದೆ ಹೋಗುವಾಗ ಆತಂಕದಿಂದ ಬೊಬ್ಬೆ ಹಾಕಿದರು. ‘ಏನು ಇಂದ್ರಕ್ಕ. ನೀವೂ ಮಗುವಿನಂತೆ ಮಾಡುವುದಾ? ” ಎಂದರು. ನಾನಂದೆ ಸಮುದ್ರ ನಮ್ಮ ಸಮುದ್ರದಂತೆ ಅಲ್ಲ. ಶಾಂತವಾಗಿದೆ. ಆಳ ಇಲ್ಲ  ಎಂದು ನಮಗಿಂತ ಸುಮಾರು 50 ಅಡಿ ದೂರ ಇದ್ದವರೂ ನಮ್ಮಷ್ಟೆ ಮೊಣಕಾಲುದ್ದ ನೀರಿನಲ್ಲಿ ಇರುವುದನ್ನು ತೋರಿಸಿದೆ. ಸಮುದ್ರ ಸ್ನಾನ ಮಾಡಿ ಬಂದವರಿಗೆ ಈಜು ಕೊಳದ ಬಳಿ ತಣ್ಣೀರು ಮೀಯಲು ವ್ಯವಸ್ಥೆ ಇತ್ತು.
ರಾತ್ರಿ ಊಟ ಆದ ಮೇಲೆ ಎಲ್ಲರೂ ಈಜುಕೊಳದ ಬಳಿ ಸೇರುವುದು ಎಂದಾಯಿತು. ಅಲ್ಲಿ ಆರಾಮ ಕುರ್ಚಿಗಳು ಬೇಕಾದಷ್ಟು ಇದ್ದುವು. ಎಲ್ಲರ ಕೋಣೆಗಳ ಹಿಂಬಾಗಿಲಿನಿಂದ ಈಜುಕೊಳಕ್ಕೆ ಬರಲು ಸುಲಭ ಇತ್ತು.
ಇಲ್ಲಿಯ ಹೋಟೇಲ್ನಲ್ಲಿ ನಮಗೆ ರಾಜಾತಿಥ್ಯ. ನಾವು ಕುಳಿತಲ್ಲಿಗೆ ಸವಿ ಸವಿಯಾದ ಊಟ ಬರುತ್ತಿತ್ತು. ತಮಗೆ ಇಷ್ಟವಾದ ಊಟ ಅಥವಾ ತಿಂಡಿಯನ್ನು ಆಯ್ಕೆ ಮಾಡುವ ಅವಕಾಶವೂ ಇತ್ತು. ಎಲ್ಲರೂ ಊಟ ರಾತ್ರಿಯ ಭೋಜನವನ್ನು ಸಂತೋಷದಿಂದ ಸವಿದರು. ಯಾವಾಗಲೂ ತಮ್ಮದೇ ಕೈಅಡುಗೆಯಿಂದ ಬೇಸತ್ತಿದ ನನ್ನಂತವರಿಗೆ ಇದೊಂದು ಅಪೂರ್ವ ಅವಕಾಶ ಆಗಿತ್ತು. ಊಟವೂ ರುಚಿಯಾಗಿತ್ತು. ಎಲ್ಲಾ ಹೋಟೆಲುಗಳಿಗಿಂತ ಇಲ್ಲಿ ಸ್ವಲ್ಪ ಹೆಚ್ಚಾಗಿ ಹಣ್ಣುಗಳು ಹಾಗೂ ಹಣ್ಣಿನ ರಸದ ವ್ಯವಸ್ಥೆ ಇತ್ತು.
ಊಟ ಆದಕೂಡಲೇ ಎಲ್ಲರೂ ಈಜುಕೊಳದ ಬಳಿ ಸೇರಿದೆವು. ಕತ್ತಲೆಯಲ್ಲೂ ಸಮುದ್ರ ಮಿನುಗುತ್ತಿತ್ತು. ಸುಂದರ ನೋಟವನ್ನು ಆನಂದಿಸುತ್ತಾ ನಾವೆಲ್ಲ ಹಾಸ್ಯದ ಲಹರಿಯಲ್ಲಿ ತೇಲಿದೆವು. ಮನಸ್ಸು ತುಂಬಾ ನಕ್ಕೆವು. ಸುಮಾರು ಹೊತ್ತು ಹರಟೆ ಹೊಡೆದು ಮಲಗಲು ಹೋದೆವು.

ಬೆಳಿಗ್ಗೆ ಉಪಹಾರ ಸವಿಯುವಾಗ ಶ್ರೀ ಲಂಕಾದ ಪರಂಪರಾಗತ ಉಡುಗೆ ತೊಟ್ಟ ಇಬ್ಬರು ಮಹಿಳೆಯರ ಪೋಟೋ ಕ್ಲಿಕ್ಕಿಸಿಗೊಂಡೆ. ಸಿರಿಮಾವೊ ಭಂಡಾರನಾಯಕೆಯ ಮೂರ್ತಿಯಲ್ಲೂ ಇಂತಹುದೇ ಉಡುಗೆ ಇದೆ. ಆದರೆ ಗಗನ ಸಖಿ ಸಿಂಹಳದ ಆಧುನಿಕ ಸೆರಗಿನ ಪಟ್ಟಿ ಹೊಂದಿರುವ ಉಡುಗೆಯನ್ನುಅದೇ ಪರಂಪಾರಗತ ಉಡುಗೆಎಂದು ಒತ್ತಿಹೇಳಿದ್ದಳು. ನಾನು ಬಗ್ಗೆ ಅವಳಲ್ಲಿ ಚರ್ಚೆ ಮಾಡದೆನೋಡೋೀಣ ಶ್ರೀ ಲಂಕಾದಲ್ಲಿ ಪರಂಪರೆಯ ಉಡುಗೆಯವರು ದೊರಕುತ್ತಾರೋಎಂದಿದ್ದೆ. ಆಶೆ ಇಲ್ಲಿ ಕೊನೆಮುಟ್ಟಿತು.
ಹೋಟೇಲಿನಲ್ಲಿ ರತ್ನಗಳ ಮಾರಾಟದ ವ್ಯವಸ್ಥೆಯಿತ್ತು. ರತ್ನ ಖಚಿತ ಒಡವೆಗಳನ್ನು ಇಲ್ಲಿ ಪ್ರದರ್ಶಿಸಿ ಮಾರಾಟಮಾಡುತ್ತಿದ್ದರು. ನಮ್ಮಲ್ಲಿ ಕೆಲವರು ಖರೀದಿಸಿದರು.
ಉಪಹಾರ ಮುಗಿಸಿ ಕೊಲೊಂಬೋಗೆ ಪಯಣಿಸಿದೆವು. ದಾರಿಯಲ್ಲಿ ನಮಗೆ ಶಾಪಿಂಗ್ ಮಾಡಲು ಅವಕಾಶ ಕೊಟ್ಟರು. ಅಲ್ಲಿಂದ ಶ್ರೀಲಂಕಾದ ಕಲಾವಸ್ತುಗಳ ಅಂಗಡಿಯೊಂದಕ್ಕೆ ಹೋದೆವು. ಅಲ್ಲಿ ಅನೇಕ ಬಗೆಯ ವಸ್ತುಗಳು ಇದ್ದುವು. ಅವುಗಳಲ್ಲಿ ನನ್ನ ಗಮನ ಸೆಳೆದುವುಗಳು ವಿವಿಧ ಭಂಗಿಯ ಬುದ್ಧ ವಿಗ್ರಹಗಳು, ಬೋದಿಸತ್ವ. ವಿಗ್ರಹಗಳು- ಎಲ್ಲವೂ ಕಾಷ್ಠ ಶಿಲ್ಪಗಳು. ಹೆಡೆ ಬಿಚ್ಚಿ ನಿಂತ ಮರದ ನಾಗರ ಹಾವುಗಳು ಹಾಗೂ ಕೆಲವು ಲೋಹ ಶಿಲ್ಪಗಳು. ಕೆಲವರು ಸಾಮಾನು ಖರೀದಿಸಿದರು.
ವೀರೇಂದ್ರ ಸೆಹವಾಗ್ ಜೊತೆ ಫೋಟೋ:
ಮಧ್ಯಾಹ್ನ ಹೋಟೇಲೊಂದರಲ್ಲಿ ನಮಗೆ ಊಟದ ವ್ಯವಸ್ಥೆ ಇತ್ತು. ಭಾರತೀಯ ಹೋಟೇಲ್. ಊಟ ಮುಗಿಸಿ ಹೌಸ್ ಆಫ್. ಫ್ಯಾಷನ್ಗೆ ಹೋದೆವು. ನಮ್ಮ ಮಹಿಳೆಯರು ಈಗ ಉಲ್ಲಸಿತರಾದರು. ಶ್ರೀ ಲಂಕಾದಲ್ಲಿ ಎಲ್ಲವೂ ಅಗ್ಗ ಎಂದು ಕೆಲವರು ಕೊಲೊಂಬೋವನ್ನು ದೋಚುವಂತೆ ಇಲ್ಲಿ ಖರೀದಿಸಿದರು. ಆದರೆ ಇದಕ್ಕಾಗಿ ಸಮಯ ಹಾಳಾಯಿತು, ಕನಾಲ್ ತೋರಿಸಬೇಕಾದುದನ್ನು ತೋರಿಸಲಿಲ್ಲ. ಎಂದು ನಿರಾಶೆಪಟ್ಟವರು ನನ್ನಂತೆ ಕೆಲವರು.

  ಹೌಸ್ ಆಫ್. ಫ್ಯಾಷನ್ಗೆ ನಮ್ಮ ಕ್ರಿಕೆಟ್ ತಾರೆ ಸೆಹ್ವಾಗ್ ಬಂದಿದ್ದ. ನಮ್ಮ ಮಹಿಳೆಯರಿಗೆ ಅವನೊಡನೆ ನಿಂತು ಛಾಯಾಚಿತ್ರ ತೆಗೆಯುವಾಸೆ. ಆತ ವಯಸ್ಕ ಮಹಿಳೆಯರು ಮಾತ್ರ ತನ್ನೊಂದಿಗೆ ಫೋಟೋ ತೆಗೆಸಬಹುದು ಅಂದ. ನಮ್ಮವರಲ್ಲಿ ಕೆಲವರು ಸರದಿಯಲ್ಲಿ ನಿಂತು ಒಬ್ಬೊಬ್ಬರಾಗಿ ಫೋಟೋ ಕ್ಲಿಕ್ಕಿಸಿಕೊಂಡರು.
ಬೇರೆ ಎರಡು ಮೂರು ಅಂಗಡಿಗಳಲ್ಲಿ ಖರೀದಿ ಮುಗಿಸಿ ಕೊಲೊಂಬೋ ನೌಕಾ ನೆಲೆಯ ಬಳಿ ಇದ್ದ ಗ್ರ್ಯಾಂಡ್ ಒರಿಯಂಟ್ ಹೋಟೇಲ್ಗೆ ಬಂದಾಗ ಸಂಜೆಯಾಯಿತು. ಕೊಲೊಂಬೋದ ವಿಶ್ವ ಪ್ರಸಿದ್ಧ ಬುದ್ದ ದೇವಾಲಯಗಳನ್ನು ದಿನ ತೋರಿಸುವುದಾಗಿ ಹೇಳಿದ್ದ ಕನಾಲ್. ನಮ್ಮ ಪಟ್ಟಿಯಲ್ಲಿ (ಇಟನುರಿ) ಬಗ್ಗೆ ಮಾಹಿತಿ ಇತ್ತು. 100 ವರ್ಷಗಳ ಹಿಂದಿನ ಕ್ಲಾಕ್ ಟವರ್, ಭಂಡಾರನಾಯಿಕೆ ಮೆಮೋರಿಯಲ್ ಇಂಟರ್ನ್ಯಾಷನಲ್ ಹಾಲ್ ಎಲ್ಲವನ್ನೂ ನೋಡಲಾಗಲಿಲ್ಲ. ಆದರೆ ಇಲ್ಲಿ ಇರುವ ಬೌದ್ಧ ಮತ್ತು ಹಿಂದೂ ದೇವಸಮೂಹಗಳು ಪೂಜೆಗೊಳ್ಳುತ್ತಿರುವ ದೇವಾಲಯ ಗಂಗಾರಾಮ್ ದೇವಾಲಯಕ್ಕೆ ಕರೆದೊಯ್ಯುವುದಾಗಿ ಹೇಳಿದ. ಆದರೆ ಹೋಟೇಲ್ಗೆ ಹೋದ ಮೇಲೆ ಆತ ಕೂಡಿಸಿ ಕಳೆಯುವ ಲೆಕ್ಕದಲ್ಲಿ ನಿರತನಾದ. ಮಹಿಳೆಯರು ಬಿಡಬೇಕೆ? ನಾಳೆ ತೋರಿಸುತ್ತೇನೆ. ಈಗ ಇಲ್ಲಿಯೇ ಶಾಪಿಂಗ್ ಮಾಡಿ. ನಿಮ್ಮ ನಿಮ್ಮ ಪಾಸ್ ಪೋರ್ಟು ಹಿಡಿದು ಹೊರಗೆ ಹೋಗಿ ಎಂದ.
ಕೊಲೊಂಬೋ ತಮಿಳರು:
ನಾವು ಶ್ರೀ ಲಂಕಾ ಪ್ರವಾಸ ಹೋದಾಗ ಶ್ರೀಲಂಕಾದ ಉತ್ತರಭಾಗದಲ್ಲಿ ತಮಿಳು ಈಳಂ ಜತೆ ಯುದ್ಧ ತೀವ್ರಗೊಂಡಿತ್ತು. ಶ್ರೀಲಂಕಾ ತಮಿಳರ ನೆರವಿಗೆ ಧಾವಿಸಬೇಕೆಂಬ ತಮಿಳುನಾಡಿನ ಮುಖ್ಯ ಮಂತ್ರಿ ಕರುಣಾನಿಧಿಯವರು ಕೇಂದ್ರ ಸರಕಾರಕ್ಕೆ ಒತ್ತಡ ಹೇರುತ್ತಿದ್ದರು, ಯುದ್ಧ ನಡೆಯುವುದು ಉತ್ತರ ಭಾಗದಲ್ಲಿ; ನಾವು ಹೋಗುವುದು ದಕ್ಷಿಣಭಾಗಕ್ಕೆ ಎಂದು ಯಾವ ಅಳುಕನ್ನೂ ಮನಸ್ಸಿನಲ್ಲಿ ಇಡದೆ ಹೋಗಿದ್ದೆವು. ಆದರೆ ಶ್ರೀಲಂಕಾದ ಸಾಮಾನ್ಯ ಜನತೆಗೆ ನಾವು ಭಾರತೀಯರು. ಅದರಲ್ಲೂ ದಕ್ಷಿಣ ಭಾರತದವರು. ಹೀಗಾಗಿ ಸಿಂಹಳೀಯರು ನಮ್ಮನ್ನು ಸಂಶಯಾಸ್ಪದವಾಗಿ ನೋಡುತ್ತಿದ್ದರು. ನಮ್ಮ ಮೇಲೆ ಏನೋ ಗುಮಾನಿ. ಆರಂಭದಲ್ಲಿ ಕನಾಲ್ ಹೇಳಿದ್ದನಿಮ್ಮ ನಿಮ್ಮ ಪಾಸ್ ಪೋರ್ಟು ಕೈಯಲ್ಲಿ ಇರಲಿ.’ ಎಂದು. ಸಿಂಹಳೀಯರು ಭಾರತೀಯರನ್ನು ಸಂಶಯದಿಂದಲೆ ನೋಡುತ್ತಾರೆ ಎಂಬ ಆತಂಕ ನಮಗೆ. ಆದರೆ ಇಲ್ಲಿಯ ತಮಿಳರು ಕೂಡಾ ನಮ್ಮನ್ನು ಅಸಮಧಾನದಿಂದ ನೋಡುತ್ತಿದ್ದರು. ನಾವು ಕೊಲೊಂಬೋ ಬೀದಿಯಲ್ಲಿ ಗುಂಪಾಗಿ ಹೋಗುತ್ತಿದ್ದಾಗಡೌನ್ ಡೌನ್ ಇಂಡಿಯಾಎಂಬ ಕೂಗು ಕೇಳಿಸಿತು. ಇವರು ತಮಿಳು ವ್ಯಾಪಾರಿಗಳು. ತಮಿಳ್ ಈಳಂಗೆ ಭಾರತ ಸರಕಾರ ಸಹಾಯ ನೀಡಬೇಕಿತ್ತು ಎನ್ನುವುದು ಅವರ ನೋವು. ಶ್ರೀಲಂಕಾದ ಪ್ರಜೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯಲ್ಲಿ ಲಿಪ್ಟ್ನಲ್ಲಿಭಾರತದ ಬಗ್ಗೆ ಕೊಲೊಂಬೋ ತಮಿಳರ ನಿಲುವೇನು?’ ಎಂದು ಕೇಳಿದೆ. ಆತ ಅಳುಕುತ್ತಾ ಹೇಳಿದಭಾರತ ತಮಿಳು ಪಡೆಗೆ ನೆರವು ನೀಡಬೇಕು
ಭಾರತದಿಂದ ಕೆಲಸ ಅರಸಿ ಬಂದ ತಮಿಳರಿಂದಾಗಿ ಶ್ರೀಲಂಕಾ ಹಿಂದುಳಿದ ದೇಶವಾಗಿದೆ. ದೇಶದ ಸಂಪಾದನೆಯೆಲ್ಲ ಉಗ್ರಗಾಮಿಗಳ ಜೊತೆ ನಡೆವ ಯುದ್ಧಕ್ಕೆ ಖರ್ಚಾಗುತ್ತದೆ. ಹೀಗಾಗಿ ಯಾವುದೇ ಅಭಿವೃದ್ದಿ ನಡೆಸಲು ಸಾಧ್ಯಾಗುವುದಿಲ್ಲಎನ್ನುವುದು ಶ್ರೀ ಲಂಕನರ ನೋವು. ಅವರ ಪ್ರಕಾರ ಪ್ರಪಂಚÀ ಅತ್ಯಂತ ಪ್ರಭಾವಶಾಲಿ ಉಗ್ರರು ಎಂದರೆ ತಮಿಳ್ ಟೈಗರ್ಸ್ ಕನಾಲ್ ಕೂಡಾ ಕೇಳಿದ್ದ, “ಯಾವ ಉಗ್ರಗಾಮಿಗಳ ಬಳಿ ಹಡಗು ಹೆಲಿಕಾಪ್ಟರ್, ವಿಮಾನಗಳಿವೆ ಹೇಳಿ?” ಎಂದು.
ಶ್ರೀಲಂಕನರ ಪ್ರಕಾರ ಭಾರತದಿಂದ ಪ್ರತ್ಯೇಕವಾಗಲು ಬಯಸುವ ಕಾಶ್ಮೀರಿಗಳು ನೆಲದ ಮಕ್ಕಳು. ನಾನದನ್ನು ಸ್ವಲ್ಪ ತಿದ್ದಿ ಹೇಳಿದೆ. ‘ನೆಲದ ಮಕ್ಕಳು ಅಲ್ಲ ಕಾಶ್ಮೀರಕ್ಕೆ ಪಾಕಿಸ್ತಾನದಿಂದ ಬರುವ ಉಗ್ರಗಾಮಿಗಳುಎಂದು. “ಇರಲಿ ಆದರೂ ಭಾರತ ಇಬ್ಬಾಗವಾಗುವವರೆಗ ಭಾರತ ಪಾಕಿಸ್ತಾನ ಒಂದು ರಾಷ್ಟ್ರವಾಗಿತ್ತು. ಆದರೆ ತಮಿಳರು ಆಶ್ರಯನೀಡಿದ ಮನೆಯ ಮೇಲೆ ಹಕ್ಕು ಸ್ಥಾಪಿಸುವುದು ಎಷ್ಟರ ಮಟ್ಟಿಗೆ ಸರಿ. ಶ್ರೀಲಂಕಾಕ್ಕೆ ಕೆಲಸ ಅರಸಿ ಬಂದ ಉಗ್ರಗಾಮಿ ತಮಿಳರು ಶ್ರೀಲಂಕಾದಲ್ಲಿ ತಮಿಳ್ ರಾಷ್ಟ್ರ ಕಟ್ಟಲು ಮುಂದಾಗಿರುವುದು ನ್ಯಾಯವೆ? ಸುಮಾರು 25ವರ್ಷಗಳ ಹಿಂದೆ ಇವರನ್ನು ಶ್ರೀಲಂಕಾ ಸರಕಾರ ಸಮಾನತೆಯಿಂದ ಕಾಣದೆ ಹೋಗಿರಬಹುದು. ಆದರೆ ಈಗ ಹಾಗಿಲ್ಲ. ಶ್ರೀಲಂಕಾ ಸ್ವಾತಂತ್ರ್ಯಗೊಂಡ ಮೇಲೆ ಸಿಂಹಳವನ್ನು ರಾಷ್ಟ್ರಭಾಷೆ ಎಂದು ಘೋಷಿಸಿದ ಕಾಲದಿಂದಲೇ ಇವರು ತಿರುಗಿ ಬಿದ್ದಿದ್ದಾರೆ. ಅಲ್ಲಿಂದಲೆ ಅವರು ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ನಾಂದಿ ಹಾಡಿದ್ದರು.” ಕನಾಲ್ ಮಾತುಕೇಳಿಸೂರ್ಯ ಮುಳುಗದ ನಾಡನ್ನಾಳಿದ ಬ್ರಿಟಿಷರು ತಾವು ಆಳಿದ ದೇಶಗಳಲ್ಲಿ ಇಂತಹ ಕೊಡುಗೆ ಕೊಟ್ಟು ಹೋದುದು ನ್ಯಾಯವೆ?’ ಎಂದು ಕೊಂಡೆ. ಅವನು ಮುಂದುವರಿಸಿ ಹೇಳಿದ, “ಶ್ರೀಲಂಕಾ ಸರಕಾರ ತನ್ನ 60% ಬೊಕ್ಕಸವನ್ನು ಉಗ್ರಗಾಮಿಗಳ ಜೊತೆ ಹೋರಾಡಲು ವ್ಯಯಿಸುತ್ತದೆ. ಹೀಗಾಗಿ ಇಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ನಮ್ಮಲ್ಲಿ ಹಣದ ಕೊರತೆ ಇದೆ.” ಎಂದ.
ಡೌನ್ಡೌನ್ ಇಂಡಿಯಾ:
 ನಮ್ಮ ಮಹಿಳೆಯರತ್ತ ನೋಡಿಡೌನ್ ಡೌನ್ ಇಂಡಿಯಾ...ಡೌನ್ ಡೌನ್ ಇಂಡಿಯಾ.” ಎಂದು ಒಕ್ಕೊರಲಿನಿಂದ ಹೇಳಿದವರು ತಮಿಳರು. ಆದರೆ ಗಟ್ಟಿಯಾಗಿ ಹೇಳಲು ಶ್ರೀಲಂಕಾ ಪೋಲಿಸರ ಭಯ ಅವರಿಗಿತ್ತು. ತಮಿಳ್ ವ್ಯಾಘ್ರಗಳ ಜೊತೆ ಘನ ಘೋರ ಯುದ್ಧ ನಡೆಯುತ್ತಿದ್ದ ದಿನಗಳವು. ಪ್ರಭಾಕರನ್ ಲಂಕಾ ಸೈನಿಕರ ಸೆರೆಯಾಗಿದ್ದಾನೆ. (ಆದರೆ ಕೆಲವು ತಿಂಗಳ ನಂತರ ಆತನ ಹೆಣ ಸಿಕ್ಕಿತ್ತು) ರಾಜಕೀಯ ಕಾರಣಕ್ಕಾಗಿ ವಿಷಯವನ್ನು ಬಹಿರಂಗ ಪಡಿಸುವುದಿಲ್ಲ ಎಂಬ ಸುದ್ದಿ ಅಲ್ಲಿ ಹರಡಿತ್ತು. ಭಾರತ ತಮಿಳ್ ವ್ಯಾಘ್ರಗಳ ಹೋರಾಟಕ್ಕೆ ನೆರವಾಗಬೇಕು ಎನ್ನುವುದು ಶ್ರೀಲಂಕಾ ತಮಿಳರ ನಿರೀಕ್ಷೆಯಾಗಿತ್ತು. ಆದರೆ ಭಾರತ ನಿರ್ಲಿಪ್ತ ನಿರೀಕ್ಷಕ ರಾಷ್ಟ್ರವಾಗಿತ್ತು. ಹೀಗಾಗಿ ಇಲ್ಲಿಯ ತಮಿಳರಿಗೆ ಭಾರತೀಯರ ಮೇಲೆ ಅಸಹನೆ. ಇದು ಕೊಲೊಂಬೋದ ತಮಿಳರ ನಿರೀಕ್ಷೆ ಮಾತ್ರ. ಗಟ್ಟಸಾಲಿನಲ್ಲಿ ಇರುವ ತಮಿಳು ರೈತರು -ಕಂದಸ್ವಾಮಿಯಂತವರು ತಮ್ಮ ದುಡಿಮೆಯಾಯಿತು ತಾವಾಯಿತು ಎನ್ನುತ್ತಾರೆ, ಇವರಿಗೆ ಯಾರಿಂದಲೂ ಯಾವ ಭಾಧಕವೂ ಇಲ್ಲ ಎನ್ನುವುದು ಅವರ ಅಭಿಪ್ರಾಯ.  
ನಾವು ಇಲ್ಲಿ ಓಡಾಡುವಾಗ ನಮ್ಮಭಾರತ ಮಹಿಳಾ ಪಡೆಯನ್ನು ಕಂಡು ಸ್ಥಳೀಯರು ಬೆರಗು ಗೊಂಡಂತೆ ನಮ್ಮನ್ನೇ ಗಮನಿಸುತ್ತಿದ್ದರು. ಅಲ್ಲಿ ಮಹಿಳೆಯರು ಓಡಾಡುವುದೆ ಇಲ್ಲ. ಕೊಲೊಂಬೋ ನಗರದಲ್ಲಿ ಕೆಲವೇ ಕೆಲವು ಮಹಿಳೆಯರು ಓಡಾಡುವುದು ಕಣ್ಣಿಗೆ ಬಿತ್ತು. ಅದೂ ಹೊರಗಡೆಯಿಂದ ಬಂದವರು ಎಂಬ ಗುಮಾನಿ. ಉಳಿದಂತೆ ಎಲ್ಲೂ ಮಹಿಳೆಯರು ಓಡಾಡುವುದು ಕಾಣಲಿಲ್ಲ.s ಇಲ್ಲಿ 20% ಮಹಿಳಾ ಉದ್ಯೋಗಿಗಳು ಮಾತ್ರ ಎಂದ ನಮ್ಮ ಗೈಡ್. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಮಹಿಳೆಯರು Sexual abuse ಗೆ ಒಳಗಾಗುವುದು ಹೆಚ್ಚು ಎನ್ನುತ್ತದೆ ಇಲ್ಲಿಯ ಸುದ್ದಿ ಮಾಧ್ಯಮ. ಕೊಲೊಂಬೋ ನಗರದೊಳಗೆ ಪತಿ ಪತ್ನಿಯರು ಓಡಾಡುವುದು ಇದೆ ಎಂದ ಗೈಡ್. ಆದರೆ ನಮಗೆ ಬೆರಳೆಣಿಕೆಯಷ್ಟು ಮಹಿಳೆಯರೂ ಕಾಣಲಿಲ್ಲ. ಕಂಡವರಲ್ಲಿ ಹೆಚ್ಚಾಗಿ ಪ್ರವಾಸಿಗರು. ವಿಷಯದಲ್ಲಿ ಶ್ರೀ ಲಂಕಾ ಭಾರತಕ್ಕಿಂತ ಹಿಂದುಳಿದಿದೆ ಎಂದು ವಿಚಾರಿಸಲಾಗಿ ತಿಳಿಯಿತು.
ಗ್ರ್ಯಾಂಡ್ ಒರಿಯಂಟಲ್ ಹೊಟೇಲ್:

ನಾವು ಉಳಿದು ಕೊಂಡ 62 ಕೋಣೆಗಳುಳ್ಳ ಸುಸಜ್ಜಿತ Grand Oriental Hotel   ಇದ್ದುದು ಶ್ರೀ ಲಂಕಾ ನೌಕಾನೆಲೆಯ ಬಳಿ. ಇದು ಬ್ರಿಟಿಷರ ಕಾಲದ ಕಟ್ಟಡ. 1936ರಲ್ಲಿ ಇದನ್ನು ಕಟ್ಟಲಾಯಿತಂತೆ. ಇದರ ಕೊನೆಯ ಅಂತಸ್ತಿನಲ್ಲಿ ಊಟದ ಚಾವಡಿ ಇದೆ. ಉಪ್ಪರಿಗೆಯ ಮೇಲೆ ನಿಂತರೆ ಕಡಲು ಹಾಗೂ ನೌಕಾ ನೆಲೆಯ ಸುಂದರ ದೃಶ್ಯ ಕಾಣುತ್ತದೆ. ಹೋಟೇಲ್ ಒಳಗಿನಿಂದ ಸುಂದರ ದೃಶ್ಯ ನೋಡಿ ಆನಂದಿಸಲೆಂದು ಎಲ್ಲಾ ಕಡೆ ಗಾಜು ಅಳವಡಿಸಲಾಗಿದೆ. ಆದರೆ ಪೋಟೋ ತೆಗೆಯಲು ಅನುಮತಿ ಇಲ್ಲ. ಇಲ್ಲಿ ನಮಗೆ ಬೊಂಬಾಯಿಯಿಂದ ಬಂದ ಪವಾಸಿಗರ ಭೇಟಿಯಾಯಿತು. ಅವರಲ್ಲಿ ಕನ್ನಡಿಗರೂ ಇದ್ದರು. ನಾವು ನೋಡದೇ ಬಂದಿದ್ದ 30,000 ವರುಷಗಳಷ್ಟು ಹಿಂದಿನ ವಿಶ್ವಪ್ರಸಿದ್ಧ ಪುರಾತತ್ವ ನೆಲೆ  ‘Belilena’ ವನ್ನು ತಾವು ಸಂದರ್ಶಿಸಿದುದಾಗಿ ಇವರು ಹೇಳಿದರು.
ಸೀಮಾ ಮಲಕ್:


ಗಂಗಾರ಻ಮ್ ಘಾಟ್ 

ಬೆಳಿಗ್ಗೆ ಎದ್ದ ಕೂಡಲೇ ಗಂಗಾರಾಮ್/ಮಯ ದೇವಸ್ಥಾನಕ್ಕೆ ಹೋಗಲು ಸಿದ್ಧರಾಗಿರಾಗಿರಬೇಕು ಎಂದು ಕನಾಲ್ ಹೇಳಿದ. ನಾವೆಲ್ಲ ಸಿದ್ಧರಾಗಿ ಹೊರಟೆವು. ಇಲ್ಲೇ ಹತ್ತಿರ ಇದೆ. ಸಾಧ್ಯ ಇದ್ದವರು ನಡೆದು ಬನ್ನಿ ಇಲ್ಲವಾದÀರೆ ಆಟೋದಲ್ಲಿ ಹೋಗಬಹುದು. ಆದರೆ ಪಾಸ್ ಪೋರ್ಟು ಕೈಯಲ್ಲಿ ಇರಲಿ ಎಂದ ಕನಾಲ್. ನಾವು ಕೆಲವರು ನಡೆದು ಹೋಗಲು ಸಿದ್ಧರಾದೆವು. ನಡೆದೂ ನಡೆದೂ ಸುಸ್ತಾದರೂ ಈತ ಹೇಳಿದ ದೇವಸ್ಥಾನ ಸಿಗಲಿಲ್ಲ. ಕೊನೆಗೂ ನೀರಿನ ಮಧ್ಯೆ ತೇಲುವ ಸುಂದರ ಮಂದಿರಗಳು ತನ್ನ ಶ್ರೀಮಂತ ವಾಸ್ತುಶೈಲಿಯಿಂದ ನಮ್ಮ ಗಮನ ಸೆಳೆಯಿತು. ಇದು ಗಂಗಾರಾಮ ಮಂದಿರದ ಭಾಗವಂತೆ. ‘ಸೀಮಾ ಮಲಕ ದೇವಸ್ಥಾನ ಇದು ಇರುವುದು ಬೈರಾ ಸರೋವರದಲ್ಲಿ.  ಇದನ್ನು ಘಾಟ್ ಎಂದೂ ಕರೆಯುತ್ತಾರೆ ಇಲ್ಲಿ ಪಿಂಡ ಬಿಡುತ್ತಾರಂತೆ  ಗಂಗಾರಾಮಯ ದೇವಸ್ಥಾನಕ್ಕೆ ಇನ್ನೂ ಅರ್ಧ ಫರ್ಲಾಂಗು ದೂರಹೋಗಬೇಕೆಂದರು. ಕೆಲವರು ಆಗಲೇ ಅದನ್ನು ದರ್ಶಿಸಿ ಮರಳಿದ್ದರು.
ಗಂಗಾರಾಮ್ ಘಾಟ್ 

ಸೀಮಾ ಮಲಕ ದೇವಸ್ಥಾನ ನೀರಿನ ಮಧ್ಯದಲ್ಲಿ ಪಿರಾಮಿಡ್ ಆಕಾರದ ಗರ್ಭ ಗುಡಿ ಇರುವ ಸ್ವಲ್ಪ ದೊಡ್ಡ ಗುಡಿ. ಅದರ ಅಕ್ಕ ಪಕ್ಕ ಅದಕಿಂತ ಸಣ್ಣ್ಣ ಗಾತ್ರದ ಗುಡಿಗಳು. ಒಂದು ಗುಡಿಯಿಂದ ಮತ್ತೊಂದು ಗುಡಿಗೆ ಹೋಗಲು ಮರದ ಪುಟ್ಟ ಸೇತುವೆಗಳು. ದಡದಿಂದ ಮುಖ್ಯ ಗುಡಿಗೆ ಹೋಗಲು 10 ಮೀಟರ್ನಷ್ಟು ಉದ್ದದ ಮರದ ಸೇತುವೆ. ಇವು ನೀರಿನಲ್ಲಿ ತೇಲುತಿರುವಂತೆ ಭಾಸವಾಗುತ್ತಿತ್ತು. ಆದರೆ ನೆಲದಿಂದ ಕಂಬ ಹಾಕಿ ಅದರ ಮೇಲೆ ಕಟ್ಟಲಾಗಿದೆ. ಇದು ಆಧುನಿಕ ಮಂದಿರವಾಗಿದೆ. ಇದನ್ನು ನಿರ್ಮಿಸಿದ ಕಲಾವಿದ eoಜಿಜಿಡಿeಥಿ ಃಚಿತಿಚಿ. ಎನ್ನುತ್ತಾರೆ. ಗಂಗಾರಾಮಯ ದೇವಸ್ಥಾನದ ಬಿಕ್ಕುಗಳಿಗಾಗಿ ನಿರ್ಮಿಸಿದ ಪುಟ್ಟ ಮಂದಿರದ ಮಧ್ಯಬಾಗದ ಪೀಠದಲ್ಲಿ ಕುಳಿತು ಬೌದ್ಧ ಬಿಕ್ಕುವೊಬ್ಬರು ಸೌಮ್ಯ ಸ್ವರದಲ್ಲಿ ಮಂದಗತಿಯಲ್ಲಿ ಪಾಲಿಭಾಷೆಯ ಮಂತ್ರಘೋಷ ಹೇಳುತ್ತಿದ್ದರು. ಅವರ ಮುಂದೆ ಕಲಶ ಇತ್ತು. ಬೌದ್ಧ ವಿಗ್ರಹ ಇರಲಿಲ್ಲ. ಅಲ್ಲಿಯ ವಾತಾವರಣ ಪ್ರಶಾಂತವಾಗಿತ್ತು. ಇದರ ಪ್ರದಕ್ಷಿಣಾ ಪಥದ ಹೊರಸುತ್ತಿನಲ್ಲಿ ಬುದ್ಧನ ಭಿನ್ನ ಮುದ್ರೆಗಳ ಶಿಲ್ಪ, ಬೋಧಿಸತ್ವರ ಶಿಲ್ಪಗಳು ಇದ್ದುವು. ಅದಕ್ಕೆ ತಾಗಿದಂತೆ ಇರುವ ಇನ್ನೊಂದು ನಡುಗಡ್ಡೆÀ್ಡಯಲ್ಲಿ ಅರಳಿ ಮರ ಇತ್ತು. ಅದರ ಬುಡದಲ್ಲೂ ವಿವಿಧ ಭಂಗಿಯ ಬುದ್ಧನ ಶಿಲ್ಪಗಳು. ಗಣಪತಿ ಶಿಲ್ಪಕೈಯಲ್ಲಿ ರುಂಡ ಹಿಡಿದು ನಿಂತಿರುವ ಹನ್ನೆರಡು ಕೈಗಳುಳ್ಳ óಣ್ನುಖ. ಅವನ ಕಾಲಬುಡದಲ್ಲಿ ನವಿಲು. ಒಂದು ಕೈಯಲ್ಲಿ ಹೂ ಹಿಡಿದು ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದ ವಿಲಕ್ಷಣ ಶಿಲ್ಪದ ನಾಗ ಹೆಡೆಗಳ ಕಿರೀಟ ಮಾತ್ರವಲ್ಲದೆ ಮೈತುಂಬಾ ಹೆಡೆಬಿಚ್ಚಿದ ನಾಗಗಳು ಸುತ್ತುಹಾಕಿದ್ದುವು. ಇಂತಹ ಶಿಲ್ಪವನ್ನು ಬೌದ್ಧ ಸಂಪ್ರದಾಯದಲ್ಲಾಗಲೀ ಹಿಂದೂ ಸಂಪ್ರದಾಯದಲ್ಲಾಗಲೀ ನಾನು ನೋಡಿಲ್ಲ. ಇದು ಕುದುರೆಯ ಹಿಂದೆ ನಿಂತಿದ್ದು ಇದರ ಕಾಲಬುಡದಲ್ಲಿ ಮತ್ತೊಂದು ಪುಟ್ಟ ಶಿಲ್ಪವೂ ನಾಗಹೆಡೆಯ ಕಿರೀಟ ಧರಿಸಿನಿಂತಿತ್ತು. ಪ್ರವೇಶದ್ವಾರದಲ್ಲಿ ಕೈಯನ್ನು ದಿಂಬಿನಂತೆ ಮಾಡಿ ಆರಾಮವಾಗಿ ಮಲಗಿರುವ ಬುದ್ಧ ಶಿಲ್ಪ.
ಗಂಗಾರಾಮ್ ಮಂದಿರದ ಒಳ ಭಾಗದ ಪ್ರಾರ್ಥನಾ ಸಭಾ.


ಇಲ್ಲಿಂದಗಂಗಾರಾಮಯ ಟೆಂಪ್ಲ್’’ಗೆ ಹೋದೆವು. ಇದು ಸುಮಾರು 2000 ವರ್ಷಗಳ ಹಿಂದೆ ಕಟ್ಟಲಾದ ಬೌದ್ಧ ವಿಹಾರವೂ ಹೌದು ಚೈತ್ಯವೂ ಹೌದು. ಇಲ್ಲಿ ಬೌದ್ಧ ಬಿಕ್ಕುಗಳು ಇದ್ದರು. ಇಲ್ಲಿ ಬೌದ್ಧ ಗ್ರಂಥಗಳ ವಾಚನಾಲಯ, ವಸ್ತುಸಂಗ್ರಹಾಲಯ ಇವೆ. ಇಲ್ಲಿ ವಿವಿಧ ಮುದ್ರೆಯಲ್ಲಿ ಕುಳಿತಿರುವ ಅನೆೀಕಾನೇಕ ಬುದ್ಧ ಶಿಲ್ಪಗಳನ್ನು ಪೀಠಗಳನ್ನು ಒಂದರ ಹಿಂದೆ ಎತ್ತೆರೆತ್ತರ ಏರಿಸಿ ಅಂದವಾಗಿ ಜೋಡಿಸಿ ಪ್ರತಿಷ್ಟಾಪಿಸಿದ್ದಾರೆ. ಇದ್ದುವು. ಥಾಯಿಲ್ಯಾಂಡ್ ಮಯಿನ್ಮಾರ್ ಹಾಗೂ ಜಪಾನಿನ ಬೌದ್ಧ ಯಾತ್ರಾರ್ಥಿಗಳು ತಮ್ಮ ಪುಣ್ಯಸಂಪಾದನೆಗಾಗಿ ನೀಡಿರುವ ಶಿಲ್ಪಗಳಿವು. ಹಿಂದುಗಳು ಕಾಶಿಯಲ್ಲಿ ಶಿವಲಿಂಗ ಸ್ಥಾಪಿಸಿದಂತೆ ತಾರನಾಥ ಸ್ತೂಪಗಳಂತೆ. (ಕನಾಲ್ ಬಗ್ಗೆ ಹೆಚ್ಚು ತಿಳಿದಿಲ್ಲ. ಬುದ್ಧನ ಬಗ್ಗೆ ನನ್ನ ಅಲ್ಪ ಜ್ಞಾನ ಅರಿವಾದ ಮೇಲೆ ನನ್ನಿಂದ ತಿಳಿದು ಕೊಳ್ಳುವುದರಲ್ಲಿ ಹೆಚ್ಚು ಆಸಕ್ತಿ ತೋರಿಸಿದ)
 ಇಲ್ಲಿ ಚಿನ್ನದ ಬಣ್ಣದ ಮೂಲ ಶಿಲ್ಪಧರ್ಮಚಕ್ರ ಪ್ರವರ್ತನಮುದ್ರೆಯಲ್ಲಿ ಇದೆ. ಗೌತಮ ಬುದ್ಧನಾಗುವ ಮೊದಲು ನಿರಾಹಾರ ತ್ಯಜಿಸಿ ಕಠಿಣ ತಪಸ್ಸು ಮಾಡುತ್ತಿದ್ದಾಗಿನ ಎಲುಬಿನ ಹಂದರದಂತೆ ಕಡೆದ ಶಿಲ್ಪ ಇದರ ಬಲಭಾಗದಲ್ಲಿ ಇದ್ದು ಆಕರ್ಷಕವಾಗಿದೆ. ಎಡಭಾಗದ ಬುದ್ಧ ಶಿಲ್ಪ ಭೂಮಿಸ್ಪರ್ಶಾ ಮುದ್ರೆಯಲ್ಲಿದೆ. ಶ್ರೀ ಲಂಕಾ ಬೌದ್ಧ ದೇವಾಲಯಗಳಲ್ಲಿ ಬುದ್ಧನ ಇಕ್ಕಲೆಗಳಲ್ಲಿ ದೊಡ್ಡದಾದ ಆನೆಯ ಎರಡು ದಂತಗಳನ್ನು ಬುದ್ಧನ ಶಿಲ್ಪಗಳ ಹಿಂದೆ ಇದಿರು ಬದಿರಾಗಿ ಅಲಂಕರಿಸಿರುವುದು ವಿಶೇಷ. ಇದರ ತುದಿ ಮತ್ತು ಬುಡದಲ್ಲಿ ಚಿನ್ನದ ಹಿಡಿಗಳಿರುತ್ತವೆ.
ಹಿಂದೂ ದೇವರುಗಳು ಕೂಡಾ ಇರುವ ದೇವಾಲಯದ ಒಂದು ಅರಳಿ ಮರದ ಬೇರಿನ ಒಳಗೆ ಬುದ್ಧನ ನಿಂತ ಶಿಲಾ ಶಿಲ್ಪ ಇದ್ದು ಅವನ ಪಾದಗಳು ಬೇರಿನಡಿ ಸೇರಿಹೋಗಿದೆ. ಬಲಗೈ ಅಭಯ ಮುದ್ರೆಯಲ್ಲಿ ಇದೆ. ಎಡಗೈ ಬೆರಳುಗಳು ಭುಜದ ಬಳಿ ಇದೆ. ಅನೇಲ ಕಾಲದಿಂದ ಬಿಸಿಲು ಮಳೆಗೆ ಒಡ್ಡಿದ್ದ ಶಿಲ್ಪ ಸವೆದು ಹೋಗಿದೆ. ಅರಳಿ ಮರದಲ್ಲಿ ಇತರ ದೇವರುಗಳ ವಿಗ್ರಹಗಳೂ ಇದ್ದುವು. ಇಲ್ಲಿ ಬಿಂದಿಗೆಯಲ್ಲಿ ನೀರು ತೆಗೆದು ಮರದ ಸುತ್ತ ಪ್ರೋಕ್ಷಿಲು ಸಲಹೆ ನೀಡಿದರು. ನಮ್ಮವರೆಲ್ಲರೂ ಬಿಂದಿಗೆಯಲ್ಲಿ ವೃಕ್ಷಾಭಿಷೇಕ ಮಾಡಿದರು.

ಕ್ಷೇತ್ರದಲ್ಲಿ ಬೌದ್ಧ ಬಿಕ್ಕುವೊಬ್ಬರು ಆನೆಯ ಮರಿಗೆ ಸೌಟಿನಲ್ಲಿ ಬಾಯಿಗೆ ಹಾಕಿ ತಿನಿಸುವ ದೃಶ್ಯ ಕಂಡೆವು. ಬುದ್ಧನ ಪ್ರಾಣಿ ದಯೆಯ ನೆನಪಾಯಿತು.
ಗಂಗಾರಾಮಯ ಮಂದಿರ ವಾಸ್ತವವಾಗಿ ನಾವಿದ್ದ ಗ್ರಾಂಡ್ ಹೋಟೇಲಿನಿಂದ 7ಮೈಲುಗಳ ದೂರದಲ್ಲಿ ಇದೆ. ಆದರೆ ನಮಗೆ ದೂರದ ನಿಖರತೆಯ ಬಗ್ಗೆ ಸಂದೇಹ.
ನಾವು ಸಿಂಹಳಕ್ಕೆ, ರಾವಣನನ ಲಂಕೆಗೆ ವಿದಾಯ ಹೇಳಿ ಬಸ್ಸು ಹತ್ತಿದೆವು. ವಿಮಾನ ನಿಲ್ದಾಣಕ್ಕೆ ಅರ್ದ ಫರ್ಲಾಂಗು ದೂರದಲ್ಲಿ ನಮ್ಮ ಬಸ್ಸು ನಿಂತಿತು. ಸೆಕ್ಯುರಿಟಿ ಚೆಕ್ಕಿಂಗ್ ಅಂದ ಕನಾಲ್. ಅಲ್ಲಿಂದ ಮುಂದೆ ಹೊರಗಿನ ಬಸ್ಸು ಹೋಗುವಂತಿಲ್ಲ. ವಿಮಾನ ನಿಲ್ದಾಣದಿಂದ ವ್ಯಾನ್ ಬರುತ್ತದೆ.
ನಾಲ್ಕು ರಾತ್ರಿ ಐದು ದಿನಗಳ ಸಿಂಹಳ ಪ್ರವಾಸದಲ್ಲಿ ನೆನಪಿನಲ್ಲಿ ಉಳಿದುದು ಬೌದ್ಧ ದೇವಾಲಯಗಳು ಮಾತ್ರವಲ್ಲ ಅಲ್ಲಿಯ ಸುಗ್ರಾಸ ಭೋಜನ ಕೂಡಾ. ಸಸ್ಯಹಾರದ ಇಷ್ಟು ರುಚಿಯಾದ ಹಾಗೂ ವೈವಿಧ್ಯ ಭೋಜನ ನಾನು ಇನ್ನೆಲ್ಲೂ ಮಾಡಿರಲಿಲ್ಲ.
ಶ್ರೀ ಲಂಕಾ ವಿಮಾನ ನಿಲ್ದಾಣದಲ್ಲಿ ಕೆಲವರು ಪರಿಷ್ಕøಕಲಿ(ನೀರಾ) ಖರೀದಿಸಿದರು. ನಾನು ತೆಂಗಿನ ಚಿಪ್ಪಿನ ಕಲಾತ್ಮಕ ಕೈಲ್ (ಸೌಟು) ಕೊಂಡು ಕೊಂಡೆ. ಬೆಂಗಳೂರಿಗೆ ಬಂದು 2 ಕೈಲ್ಗಳನ್ನು ನನ್ನ ಮಗಳಿಗೆ ಬಹುಮಾನವಾಗಿ ನೀಡಿದೆ. ಖುಷಿಪಟ್ಟಳು ಆಕೆ.

ಅಲ್ಲಿಗೆ ಶ್ರೀಲಂಕಾ ಮರೆಯಾಯಿತು.
  ಕ್ಷಮಿಸಿ ನಾನು ಭೋಜನ ಪ್ರಿಯಳಲ್ಲ, ಹೊಟ್ಟೆಬಾಕಳೂ ಅಲ್ಲ. ಆದರೂ ಅಲ್ಲಿಯ ಊಟದ ನೆನೆಪು ಇಂದಿಗೂ ಮುದನೀಡುತ್ತದೆ.

No comments:

Post a Comment