Thursday, July 16, 2015

ಜಮ್ಮು ಕಾಶ್ಮೀರ ಭಾಗ 5




ಹಿಂದುಗಳೆಲ್ಲಿ:
ಇಲ್ಲಿ ಡಾ | ಭಟ್ಟ್ ಎಂಬ ಹೆಸರಿನ ಬೋರ್ಡ್ ನೋಡಿ ಆತ ಹಿಂದು ಇರಬಹುದೆ  ಎಂದು ಕೇಳಿದರೆ ಅಲ್ಲ ಎಂದು ಉತ್ತರ  ಬಂತು. ಮಾತನಾಡ ಹೋದರೆ ಆತನೂ ಮುಸ್ಲಿಮ್. ರಾಜ ಹೆಸರಿನವನೂ ಮುಸ್ಲಿಮ್. ಒಬ್ಬರೂ ಹಿಂದುಗಳೇ ಕಾಣಲಿಲ್ಲ. ಶಂಕಾರಾಚಾರ್ಯ ಶಿಖರÀ ಹತ್ತು ಇಲ್ಲಿಯಾದರೂ ಹಿಂದುಗಳರಿರಬಹುದೆಏ ಎಂದು ನೋಡಿದರೆ ಅಲ್ಲಿಯೂ ಇರಲಿಲ್ಲ. ಮಿಲಿಟರಿಯಲ್ಲಿ ಇರುವ ಹಿಂದು ಅರ್ಚಕರೊಬ್ಬರು ಪೂಜೆ ನಡೆಸುತ್ತಿದ್ದರು.
ಯಾಕೆ ಹೀಗೆ?
ನಮ್ಮ ಮರುಪ್ರಯಾಣದಲ್ಲಿ ಕಾಶ್ಮೀರ ಪಂಡಿತರೊಬ್ಬರು ರೈಲಿನಲ್ಲಿ ಸಹಪ್ರಯಾಣಿಕರಾಗಿ ಅವರ ಕಾಶ್ಮೀರದಲ್ಲಿಯಉಸಿರಿಗಾಗಿ ಹೋರಾಟ ಬಗೆಗಿನ ನೋವನ್ನು ಹೇಳಿದರು.  ಆತ ತನ್ನೊಬ್ಬನ ಕಥೆ ಹೇಳಲಿಲ್ಲ. ಅನೇಕರ ಕಷ್ಟ ಪರಂಪರೆಗಳನ್ನು ತಮ್ಮ ಹೃದಯ ಬಿಚ್ಚಿ ನಮ್ಮ ಮುಂದೆ ತೆರಿದಟ್ಟರು.

20 ವರ್ಷಗಳ ಹಿಂದೆ ಉಗ್ರಗಾಮಿಗಳ ಜೊತೆ ಸೇರಿ ಸ್ಥಳೀಯ ಮಸ್ಲಿಮ್ ಸಮುದಾಯದ ಕೆಲವರು  ಕಾಶ್ಮೀರಿ ಪಂಡಿತರನ್ನು ಅಮಾನುಷವಾಗಿ ನಡೆಸಿ ಇಲ್ಲಿಂದ ಓಡಿಸಿದುದರ ಪರಿಣಾಮ ಇಲ್ಲಿಯ ಪ್ರವಾಸೋದ್ಯಮದ ಮೇಲಾಗಿದೆ. 20 ವಷರ್ಗಳ ಹಿಂದೆ ಮುಸ್ಲಿಮರ ಹೊಡೆತಗಳಿಂದ ತಪ್ಪಿಸಿ ಹೋದ 45,000 ಕುಟುಂಬಗಳು ಈಗಲೂ ನಿರಾಶ್ರಿತರ ಶಿಬಿರದಲ್ಲಿವೆ. ಜಮ್ಮು ಮತ್ತು ಕಾಶ್ಮೀರ ಸರಕಾರ ಭಾರತ ಸರಕಾರದ ಜೊತೆ ನೀಡಿನಮ್ಮ ಕಾಶ್ಮೀರ ನಮ್ಮ ಮನೆಎಂಬ ಆವರ ಕೂಗಿಗೆ ಎಲ್ಲ ಸರಿಪಡಿಸುವ ಭರವಸೆಯನ್ನು ನೀಡುತ್ತಾ ವರ್ಷಗಳಿಂದ ಇವರನ್ನು ನಿರೀಕ್ಷೆಯಲ್ಲಿ ಇಟ್ಟಿದೆ. ವಿಧೇಶಗಳಲ್ಲಿ ಇರುವ ಕಾಶ್ಮೀರಿ ಪಂಡಿತರು ಅಂತ್ರ್ರಾಷ್ಟೀಯ ಸಮುದಾಯದ ಮೇಲೆ ಒತ್ತಡ ಹಾಕುತ್ತಿದ್ದಾರೆ.
20 ವರ್ಷಗಳ ಹಿಂದೆ ಏನಾಯಿತು ಎನ್ನುವುದ್ನು ನಮಗೆ ಅಲ್ಲಿಯ ಧರ್ಮ ಕಲಹದ ಬೇಗೆಯಲ್ಲಿ ಸುಟ್ಟು ಬದುಕಿಗಾಗಿ ಹಾರೈಸಿ ಬಂದವರು ವಿವರಿಸಿದಾಗ ಕೇಳಿದರೆಲ್ಲರ ಕಣ್ಣು ತೇವವಾಗಿತ್ತು. ಆತ ಅಂದಿನ ಜಮ್ಮು ಕಾಶ್ಮೀರದ ರಾಜ್ಯಪಾಲ ರನ್ನು ಸ್ಮರಿಸಿಕೊಂಡರು. ತಾವು ಬದುಕಿ ಉಳಿದುದು ಅವರ ಸಹಕಾರದಿಂದ. ಆತಕಾಶ್ಮೀರ ಬಿಟ್ಟು ಹೋಗ ಬಯಸುವ ಪಂಡಿತರನ್ನು  ಮಿಲಿಟರಿ ವಾಹನದ ಮೂಲಕ ಹೊರೆಗೆ ಹೋಗಲು ಅವಕಾಶ ಕಲ್ಪಿಸಿಎಂದು ಆಜ್ಞೆ ಹೊರಡಿಸಿದರು. ಆದರೆ ಇಲ್ಲಿಯ ಪರ್ವತ ಪ್ರದೇಶದ ಗುರ್ಜರ ಸಮುದಾಯದವರು ಮತಾಂತರ ಆಗಿದ್ದರು. ಮತಾಂತರಕ್ಕೆ ಒತ್ತಾಯಿಸಿ, ಪಾಕ್ ಆಕ್ರಮಿತ ಪಂಡಿತರ ಎಳೆಯ ಮಕ್ಕಳನ್ನು ಉಗ್ರಗಾಮಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಲು ಒತ್ತಡ ಹೇರಿ, ಇದನ್ನು ಒಪ್ಪದವರನ್ನು ಮನೆಯೊಳಗೆ ಕೂಡಿ ಬೆಂಕಿ ಹಚ್ಚುತ್ತಿದ್ದ ಕಣ್ಣೀರ ಕಥೆ ಇದು. ಕಥೆ ಕೇಳಿದ ರೈಲು ಪ್ರಯಾಣಿಕರು ಕಣ್ಣೊರಸಿಕೊಂಡರು.
 ಆತನೊಡನೆ ನಡೆದ ಸಂಭಾಷಣೆ:
ಇಷ್ಟೆಲ್ಲ ನಡೆದಾಗ ಅಲ್ಲಿಂದ ನಿಮ್ಮ ಮಿತ್ರವರ್ಗ ಇರಲಿಲ್ಲವೆ?
ಪಂಡಿತ: ದಿನಗಳಲ್ಲಿ ಎರಡೇ ಜಾತಿ ಇದ್ದುದು. ಹಿಂದು ಮತ್ತು ಮುಸ್ಲಿಮ್.
ನಾನು: ನಿಮ್ಮ ಮನೆ ಆಸ್ತಿ ಎಲ್ಲಾ ಏನಾಯಿತು.
ಪಂಡಿತ: ಬದುಕಿದರೆ ಸಾಕು ಎಂದು ಐವತ್ತರ ಹರೆಯದ ನಾನು ನನ್ನ ಇಬ್ಬರು ಗಂಡು ಮಕ್ಕಳನ್ನು ಮಡದಿಯನ್ನು ಜೊತೆಗೆ ಕಾಶ್ಮೀರದಿಂದ ಮಿಲಿಟರಿ ರಕ್ಷಣೆಯಲ್ಲಿ ಹೊರಬಂದೆ. ಅಗಿ ರಾಜ್ಯಪಾಲ ಜಗಮೋಹನ್ ಅವರು ನಮ್ಮ ಜೀವ ಉಳಿಸಲು ಮಿಲಿಟರಿಗೆ ಆದೇಶಿಸಿದುದರಿಂಧ  ನಮ್ಮ ಜೀವ ಉಳಿಯಿತು.
ನಾನು : ಗಲಾಟೆ ಮುಗಿದ ಮೇಲೆ ಮರಳಿ ನಿಮ್ಮ ಸ್ಥಾನಕ್ಕೆ ಹೊಗಬಹುದಿತ್ತಲ್ಲ?
ಪಂಡಿತ: ಹೋದೆವು. ಈಗಲೂ ಅದೇ ಊರಿನಿಂದ ಬರುತ್ತಿದ್ದೇವೆ. ನಮ್ಮ ಹಿರಿಯರು ಬಾಳಿ ಬದುಕಿರುವ ನೆಲವನ್ನು ನವು ಬದುಕಿರುವವರೆಗದರೂ  ನೋಡಿ ಬರುವ ಆಶೆಯಿಂದ. ನಮ್ಮ ಮನೆಯಲ್ಲಿ ಮುಸ್ಲಿಮ್ ಕುಟುಂಬವೊಂದು ವಾಸವಾಗಿದೆ. ಆಸ್ತಿಯನ್ನು ಯಾರ್ಯಾರೋ ಅನುಭವಿಸುತ್ತಿದ್ದಾರೆ.
ನಾನು : ದಾಖಲೆ ಪತ್ರಗಳು ನಿಮ್ಮ ಹೆಸರಲ್ಲಿ ಇದ್ದಿರಬೇಕಲ್ಲ. ?
ಪಂಡಿತ:: ಇತ್ತು. ಈಗ ಅನುಭವದಾರ ಬೇರೆ. ಬಾರಿ ಹೋಗಿ ನೋಡಿದಾಗ ನನ್ನ ಮನೆಯನ್ನು ನವೀಕರಿಸಿದ್ದಾರೆ.
ನಾನು: ನಿಮ್ಮ ದಾಖಲೆಗ:ಳು ಇಲ್ಲವೇ?
ಪಂಡಿತ: ಏನು ಮಾಡಲು ದಾಖಲೆಗಳು? ಈಗ ಅವರ ನಡುವೆ ಹೋಗಿ ಬಾಳುವ ಧೈರ್ಯವೂ ಇಲ್ಲ. ನಾನು ಇರುವಷ್ಟು ಕಾಲ ಹೋಗುತ್ತೇನೆ. ನನ್ನ ಪೂರ್ವಜರ ಮಣ್ಣಿನ ಸೆಳೆತ ನನ್ನನ್ನು ಅಲ್ಲಿಗೆ ಎಳೆಕೊಂಡು ಹೋಗುತ್ತದೆ.  ಮುಂದೆ? ಆತ ಮೇಲೆ ನೋಡಿ ಕಣ್ಣೀರು ಒರಸಿಕೊಂಡರು. ಇಡೀ ಭಾರತದಾದ್ಯಂತ ಹರಡಿದ ಕಾಸ್ಮೀರ ಪಂಡಿತರಿಂದ ಕಾಶ್ಮೀರದ ಸಂಸ್ಕøತಿಯನ್ನು ಆಗಲೀ ಪರಂಪರೆಯನ್ನಾಗಲೀ ಉಳಿಸಲು ಕಷ್ಟಸಾಧ್ಯ. ಶ್ರೀನಗರದ ಬಸಂತ್ ಬಾಗ್ (ದೂಮ್ ಪುರ) ದುರ್ಗಾ ದೇವಿಯ ಮಂದಿರವನ್ನು ಒಡೆದು ವಿಗ್ರಹಗಳನ್ನು ಭಗ್ನಗೊಳಿಸಲಾಗಿತ್ತು. ಶ್ರೀನಗರದ ಕೋಜ್ ಭಾಗ್ ಶಂಕರಾಚಾರ್ಯ ಶಿಲ್ಪದ ರುಂಡವನ್ನು ಬೇರ್ಪಡಿಸಲಾಗಿತ್ತು. ಆತ ಹೇಳುತ್ತಾ ಹೋದರು.
ಕಾಶ್ಮೀರಿ ಹಿಂದುಗಳ ಮನೆಗಳನ್ನು ಸುಟ್ಟುಹಾಕಲಾಗಿತ್ತು. ಕೆಲೆವೆಡೆ ದಂಪತಿಗಳು ಕಾಯ ಬಿಟ್ಟು ಕೈಲಾಸ ಸೇರುವ ವರೆಗೆ ಹಗ್ಗದಿಂದ ಜೀಪಿಗೆ ಕಟ್ಟಿ ಜೀಪನ್ನು ಓಡಿಸಲಾಗಿತ್ತು. ನೆಲದ ಮೇಲೆ ಕಾಶ್ಮೀರಿ ಪಂಡಿತರ ವಾಸದ ಊರುಗಳನ್ನೇ ಸುಡಲಾಗಿತ್ತು. ಪಂಡಿತರನ್ನು ಮಾತ್ರವಲ್ಲ ಸರ್ದಾಜಿಗಳನ್ನು, ಗುರ್ಜರರನ್ನು ಬಂದೂಕುಗಳ ತುದಿಯಿಂದ ತಿವಿದು  ಸಾವಿಗೆ ಶರಣಾಗಿ ಇಲ್ಲವೇ ಇಸ್ಲಾಂಗೆ ಶರಣಾಗಿ ಎಂದು ಎರಡು ಆಯ್ಕೆಗಳನ್ನು ನೀಡುತ್ತಿದ್ದರು. ಕುದಿಯುವ ಎಣ್ಣೆ ಮತ್ತು ಹುಲಿಯ ಬಾಯಿಯಿಂದ ತಪ್ಪಿಸಿ ತಮ್ಮದೇ ಮಾತೃಭೂಮಿ ಹೆಮ್ಮೆಯ ಕಾಶ್ಮೀರ, ಭಾರತ ಮಾತೆಯ ಮುಕುಟ ಮಣಿಯ ವಜ್ರದಷ್ಟು ಕಠೋರ ಆದಾಗ ರಾಜ್ಯದ ಗಡಿದಾಟಿ ಬಂದು ಪರಕೀಯರಾದರು. ಅತ್ತ ಕಾಶ್ಮೀರ ಒಗೆದು ಬಿಟ್ಟಿತು, ಇತ್ತ ಭಾರತ ಭರವೆಸಯನ್ನು ನೀಡುತ್ತಾ ದಿನ ತಳ್ಳಿತು.  ಮುಸ್ಲಿಮ್ ಮತ್ತು ಹಿಂದುಗಳೂ ಒಂದಾಗಿ ಬೆರೆತು ಬಾಳುವುದು ನಮ್ಮ ಸರಕಾರಕ್ಕೆ ಬೇಕಾಗಿಲ್ಲ. ಬ್ರಿಟಿಷರು ತೋರಿಸಿದ ದಾರಿ ಎರಡೂ ಧರ್ಮದವರನ್ನು ಒಡೆದು ಆಳಬೇಕೆಂಬುದು. ಅದೇ ಸಿದ್ಧಾಂತ ತತ್ವಗಳು ಮುಂದುವರಿಯುತ್ತಿವೆ.
ನಮ್ಮ ಹಳ್ಳಿಯಲ್ಲಿ ಸುಮಾರು 150ವರ್ಷಗಳ ಹಿಂದೆ ಬ್ಯಾರಿ ಕುಟುಂಬವೊಂದು ನಮ್ಮ ಗುತ್ತುಮನೆತನದ ಆಸ್ತಿಯನ್ನು ಖರೀದಿಸಿ ವ್ಯವಸಾಯ ಆರಂಭಿಸಿತ್ತು. ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಗದ್ದೆಗಳಲ್ಲಿ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ದೇವಸ್ಥಾನದ ಮುಂಭಾಗದ ಗದ್ದೆಯೇ ಅವರದು. ಇಡೀ ಗ್ರಾಮಕ್ಕೆ ಒಂದೇ ಮುಸ್ಲಿಮ್ ಕುಟುಂಬ ಇದ್ದುದು. ಈಗ ಇವರ ಮಕ್ಕಳು ಭಾಗ ಪಡೆದು ಕೆಲವರು ಊರಲ್ಲಿಯೇ ನೆಲಸಿದೆರೆ ಕೆಲವರು ದೂರ ಹೋಗಿದ್ದಾಎ. ಆದರೆ ಊರ ಬ್ಯಾರಿಗಳು ಇದುವರೆಗೂ ಅನ್ಯೋನ್ಯರಾಗಿದ್ದಾರೆ. ತುಳುಣಾಡಿನ ಭೂತಾರಾಧನೆಯಲ್ಲಿ ಇರುವ ಮತರಹಿತ ತತ್ವ ಮುಂಚಿನಂತೆ ನಡೆಯುತ್ತಿದೆ. ಹಿಂದುಗಳ ನಡುವೆ ಮುಸ್ಲಿಮ್ ಯಾವ ಭಯವೂ ಇಲ್ಲದೆ ಬಾಳುತ್ತಿರುವಾಗ ಮುಸ್ಲಿಮರ ನಡುವೆ ಹಿಂದುಗಳು ಬಾಳಲು ಯಾಕೆ ಸಾಧ್ಯವಾಗಿಲ್ಲ. ಅಲ್ಲಿದ್ದ ಆಸ್ತಿಪಾಸ್ತಿಯನ್ನು ಬಿಟ್ಟು ಬಂದ ಪಂಡಿತ ಸಮುದಾಯ ಅಲ್ಲಿಗೆ ಮರಳಲು ಅಂಜುತ್ತಿದ್ದಾರೆ. ಇತ್ತೀಚೆಗೆ ನಮ್ಮ ರಾಜ್ಯಪಾಲ ಭಾರದ್ವಾಜರವರು ಎಲ್ಲಾ ಧರ್ಮದವರಿಗೂ ಇಲ್ಲಿ ಸಮಾನಾವಕಾಶ ಇದೆಯೆಂದರು. ಇಂತಹ ಸಮನಾವಕಾಶವನ್ನು ಕಾಶ್ಮೀರದಲ್ಲಿ ಯಾಕಿಲ್ಲ? ಸರಕಾರ ವಿಷಯದಲ್ಲಿ ಯಾಕೆ ನಿಷ್ಕ್ರಿಯವಾಗಿವೆ.


ನಾವು ದಾಲ್ ಸರೋವರದಿಂದ ಗುಲ್ ಮಾರ್ಗ್ವರೆಗೆ ಟ್ಯಾಕ್ಸಿಯಲ್ಲಿ ಹೋಗಿದ್ದಾಗ ಸುಮಾರು 3 ಗಂಟೆಗಳ ಪ್ರಯಾಣದಲ್ಲಿ ಟ್ಯಾಕ್ಸಿ ಚಾಲಕ  20 ವರ್ಷಗಳ ಹಿಂದೆ ನಡೆದ ಕಾಶ್ಮೀರದ ಹಿಂಸೆಯಲ್ಲಿ  ತಾವು ಪಟ್ಟ ಬವಣೆಯ ಬಗ್ಗೆ ಹೇಳಿದ್ದರು. ತನ್ನ ಮಕ್ಕಳ ಬಾಲ್ಯ ದುಸ್ವಪ್ನದಂತೆ ಕಳೆದು ಹೋಯಿತು; ನಮ್ಮ ಮಕ್ಕಳಿಗೆ ಬಾಲ್ಯವೇ ಇರಲಿಲ್ಲ ಎಂದು ನೋವು ತೋಡಿಕೊಂಡರು. ತಪ್ಪಿಯೂ ಹಿಂದೂಗಳ ವಿಷಯ ಎತ್ತಲಿಲ್ಲ. ಆದರೂ ಬದುಕಿನ ಪ್ರಶ್ನೆ ಬಂದಾಗ “ನಾವು ಹಿಂದೂಗಳೂ, ಅಲ್ಲ, ಕ್ರೈಸ್ತರೂ ಅಲ್ಲ, ಮುಸ್ಲಿಮರೂ ಅಲ್ಲ. ನಾವು ಮನುಷ್ಯರು ಮಾತ್ರ. ನಮ್ಮನ್ನು ಮನುಷ್ಯರಂತೆ ಬಾಳಲು ಬಿಡಿಎನ್ನುವುದು ಪ್ರತಿವ್ಯಕ್ತಿಯ ಅಂತರಾಳದ ಕೂಗು ಆಗುತ್ತದೆ.

No comments:

Post a Comment