Wednesday, July 15, 2015

ಜಮ್ಮು ಕಾಶ್ಮೀರ ಭಾಗ-4

ಶಂಕರಾಚಾರ್ಯ ಶಿಖರ
 ಶಂಕಾರಾಚಾರ್ಯರ ಶಿಖರ ನೋಡಲು ಹೊರಟಾಗನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ”  ಎಂಬ ಶ್ಲೋಕ  ನೆನಪಾಯಿತು.   ಗುಂಗಿನಲ್ಲಿ ಶಂಕರಾಚಾರ್ಯ ಶಿಖರದಲ್ಲಿ ಶಾರಾದಾ ಪೀಠ ಇರಬಹುದೇ? ಎಂದು ಮನಸ್ಸು ಪ್ರಶ್ನಿಸಿತು. ಕಾಶ್ಮೀರ ಭಾಷೆಯ ಲಿಪಿಯ ಹೆಸರೂ  ‘ಶಾರದಾ ಲಿಪಿ’. ವಿಚಾರಿಸಲಾಗಿ ಶಾರದಾ ಪೀಠ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದೆಯೆಂದು ತಿಳಿದು ಬಂತು.  Deodars ಪರ್ವತ ಶಿಖರದ ದಟ್ಟ ಫೈನ್ ಮರಗಳ ಕಾನನದ ಮಧ್ಯೆ ಮಹಾಕಾಳಿ, ಭದ್ರ ಕಾಳಿ ಎನ್ನುವ ಹೆಸರಲ್ಲಿ ಒಂದು ದೇವಸ್ಥಾನ ಇದೆಯೆಂದು ತಿಳಿದು ಬಂತು. ವಿಶಾಲ ಪ್ರದೇಶದಲ್ಲಿ ಶಾರದಾ ಶಕ್ತಿ ಪೀಠ ಇದೆ. ಆದರೆ ಅತ್ಯಧಿಕ ಮಳೆ ಮತ್ತು ಹಿಮಪಾತದಿದಾಗಿ ದೇವಸ್ಥಾನ ಜೀರ್ಣವಾಗಿತ್ತು. ಇಲ್ಲಿಯ ಕಾಶ್ಮೀರ ಪಂಡಿತರು ಜೀವ ರಕ್ಷಣೆಗಾಗಿ ಕಾಶ್ಮೀರ ಬಿಟ್ಟು ಹೋದ ಮೇಲೆ ಮಂದಿರ ಅನಾಥವಾಯಿತು. ಆದರೆ ಸ್ಥಳೀಯರ ಶ್ರದ್ಧೆ ಮತ್ತು ಆಸಕ್ತಿಯಿಂದಾಗಿ ಇದೀಗ ಮತ್ತೆ ಜೀವ ಪಡೆದು ಭಕ್ತರ ಹಂಬಲದಿಂದ ಎದ್ದು ನಿಂತಿದೆ! ಚೈತ್ರನವಮಿ ಇತರರಿಗೆ ರಾಮನವಮಿ ಆದರೆ ಇಲ್ಲಿಮಾ ಭದ್ರಕಾಳಿ ನವಮಿ. ಅಂದು ಜಮ್ಮು ಕಾಶ್ಮೀರದ ವಿವಿದೆಡೆಯಿಂದ ಭಕ್ತರು ಬಂದು ಉತ್ಸವವನ್ನು ಆಚರಿಸುತ್ತಾರೆ.

ಚಾರ್ ಚಿನಾರ್ 

 ನಾವು ನೋಡಲು ಹೊರಟ ಶಂಕರಾಚಾರ್ಯ ಶಿಖರ ದಾಲ್ ಸರೋವರದ ಶಿಕಾರ ಹತ್ತು ಇಳಿಯುವ ಬಳಿಯೇ ಇದೆ. ಗುಲ್ ಮಾರ್ಗ ದಿಂದ ಬರುತ್ತಾ ನಾವು ಶಂಕರಾಚಾರ್ಯ ಶಿಖರ ನೊಡಲು ಯೋಜನೆ ರೂಪಿಸಿದ್ದು. ಶಂಕರಾಚಾರ್ಯ ಶಿಖರವನ್ನು ಗೋಪಾದ್ರಿ ಶಿಖರ ಎಂದೂ ಹೇಳುತ್ತಾರೆ. ಇದು ಕಾಶ್ಮೀರ ನಗರದಿಂದ 1000 ಅಡಿ ಎತ್ತರದಲ್ಲಿ ಇದೆ. ಈಗ ಸೇನೆಯ ಸುಪರ್ದಿಯಲ್ಲಿ ಇರುವ ದೇವಾಲಯದ ಬೆಟ್ಟದ ಒಂದು ಹಂತದ ವರೆಗೆ ಕಾರು ಹೋಗುವ ಒಳ್ಳೆಯ ರಸ್ತೆ ಇದೆ. ಆದರೂ ಅಲ್ಲಿಂದಲೂ 250 ಮೆಟ್ಟಲುಗಳನ್ನು ನೇರವಾಗಿ ಹತ್ತಿ ಶಿಖರ ತಲುಪಬೇಕು. ಶಿಖರದ ತುತ್ತ ತುದಿಗೆ ತಲುಪಲು ಶಿಖರದ ಪರ್ವತವನ್ನು ಕೊರೆದು ಮೆಟ್ಟಲು ಮಾಡಿದ್ದಾರೆ. ಮೆಟ್ಟಲು ಎತ್ತರವಿದ್ದು ನೇರವಾಗಿ ಇರುವುದರಿಂದ ಹತ್ತಲು ಸ್ವಲ್ಪ ಶ್ರಮವಾಗುತ್ತದೆ. ಶಿಖರದ ತುದಿಯಲ್ಲಿ ಶಿವ ಮಂದಿರ ಇದೆ. ಇದು ಒಂದೇ ಕೋಣೆಯ ಗುಡಿ. ಗುಡಿಯ ಒಳಗೆ ಸುಮರು 3/4ಅಡಿ ಎತ್ತರ ವಿರಬಹುದಾದ ಶಿವನ ಲಿಂಗ ಇದೆ. ಪಾಣಿ ಪೀಠ ನೆಲದ ಮಟ್ಟಿದಲ್ಲಿಯೇ ಇದೆ. ಇಲ್ಲಿ ಒಬ್ಬ ವ್ಯಕ್ತಿಯ ಪ್ರದಕ್ಷಿಣಾ ಪಥಕ್ಕೆ ಬೇಕಾಗುವಷ್ಟು ಮಾತ್ರ ಜಾಗ ಇದೆ. ವಾಸ್ತವವಾಗಿ ಪರ್ವತ ಶಿಖರವೇ ಶಿವ ಲಿಂಗದಂತೆ, ಗೋಪುರ ಮಾದರಿಯಲ್ಲಿ ಇದೆ. ಹಿಗಾಗಿ ಇಲ್ಲಿ ಸ್ಥಳಾವಾಕಾಶ ಇಲ್ಲ.
ಗರ್ಭಗುಡಿಯಿಂದ ಹೊರಗೆ ಬಂದು ಪಶ್ಚಿಮ ದ್ವಾರದಿಂದ ಕೆಲವೇ ಮೆಟ್ಟಲು ಕೆಳಗೆ ಇಳಿದರೆ ಅಲ್ಲಿ ಶಂಕಾರಾಚಾರ್ಯರು ತಪೋನಿರತರಾಗಿದ್ದ ಸನ್ನಿಧಿ ಇದೆ. ಅದನ್ನು ಸಂರಕ್ಷಿಸಿ ಇಟ್ಟಿದ್ದಾರೆ.
ಸೈನಿಕರ ಹದ್ದಿನ ಕಣ್ಣುಗಳು ಎತ್ತರದ ಬೆಟ್ಟದಿಂದ ನಿಂತು ನೋಡುತ್ತವೆ.
ಕ್ಷೇತ್ರಕ್ಕೆ ಕ್ರಿಸ್ತ ಪೂರ್ವ 2500ವರ್ಷಗಳ ಇತಿಹಾಸ ಇದೆ.

GopadUy ಎನ್ನುವ ಕಾಶ್ಮೀರ ಅರಸ 6ನೆಯ ಶತಮಾನದಲ್ಲಿ ಶಿಖರದಲ್ಲಿ ಈಗಿನ ಶಿವ ಮಂದಿರವನ್ನು ಕಟ್ಟಿದ್ದ. ಹೀಗಾಗಿ ಬೆಟ್ಟವನ್ನು ಅವನ ಹೆಸರಿನಿಂದ  Gopadri, ಎಂದು ಕರೆಯುವುದು ರೂಢಿಯಾಯಿತು.  ಈಗಲೂ ಕೆಳಭಾಗದ ರಸ್ತೆಗೆ Gupkar road   ಎನ್ನುತ್ತಾರೆ. ಸಂಜೆ ಐದು ಗಂಟೆಗೆ ರಸ್ತೆಯ ಪ್ರವೇಶವನ್ನು ಪ್ರವಾಸಿಗರಿಗೆ ನಿಷೇಧಿಸುತ್ತಾರೆ. ಮುಂಜಾನೆ 9 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಬೆಟ್ಟಕ್ಕೆ ಪ್ರವೇಶಿಸಲು ಪ್ರವಾಸಿಗರಿಗೆ ಅವಕಾಶ ಇದೆ. ಆದರೆ ಸೈನಿಕರ ತಪಾಸಣೆ ಇದೆ. ನಮ್ಮ ಮುಂದೆ ಒಬ್ಬ ವಿದೇಶಿ ಪ್ರವಾಸಿಗರ ಗುಂಪು ಶಿಖರದ ಮೆಟ್ಟಲು ಬಳಿ ಬಂದರಾದರೂ ಅಲ್ಲಿಂದ ಮೆಟ್ಟಲು ಹತ್ತುವ ಮೊದಲು ತಪಾಸಣೆ ಮಾಡಿ ಮರಳಿ ಕಳಿಸಿದರು. ಕಾರಣ ನಮಗೆ ಗೊತ್ತಾಗಲಿಲ್ಲ. ನಾವು ನಮ್ಮ ವಾಹನ ನಿಲ್ಲಿಸಿ ಪ್ರವೇಶ ದ್ವಾರದ ಬಳಿ ನಡೆದು ಹೋಗುತ್ತಿದ್ದಾಗನೀವು ಕರ್ನಾಟಕದವರಾ?” ಎಂದ ಶಿಸ್ತಿನ ಮಿಲಿಟರಿ ಅಧಿಕಾರಿ. ನಾವು ಹೌದು ಎಂದಾಗ ಅವನ ಮೊಗ ಊರಗಲವಾಯಿತು.  ಅವನ ಸಂತಸಕ್ಕೆ ಪ್ರತಿಕ್ರಿಯೆ ನೀಡಲು ನಮ್ಮಲ್ಲಿ ಸಮಯ ಇಲ್ಲ, ಐದು ಗಂಟೆಗೆ ಮೆಟ್ಟಲ ಪ್ರವೇಶ ನಿಲ್ಲಿಸುತ್ತಾರೆ ಎಂದು ದಡಬಡಸಿ ನಾವು 250 ಮೆಟ್ಟಲು ಹತ್ತಲು ಮುಂದಾದೆವು. ಕಾಶ್ಮೀರದಂತ ಊರಿನಲ್ಲಿ ಒಬ್ಬ ಕನ್ನಡಿಗನನ್ನು ಕಂಡಾಗ ಎಂತಹ ಸಂತಸ ಉಂಟಾಗುತ್ತದೆ ಎಂಬ ಅನುಭವ ಸೈನ್ಯ ಜೀವನದಲ್ಲಿ ಅಸ್ಸಾಂ, ಲಡಾಕ್ ಮುಂತಾದೆಡೆ ಇದ್ದ ನಮಗೆ ತಿಳಿದ ವಿಚಾರವೇ. ಹೀಗಾಗಿ ಮರಳಿ ಬರುವಾಗÀ ಆತನನ್ನು ವಿಚಾರಿಸಿದೆವು. ಆತನ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದ. ಎಂದು ತಿಳಿಯಿತು.  ಆಗ ತಿಳಿಯಿತು ಒಮ್ಮೆ ಕೆಳಭಾಗದ ದ್ವಾರದಿಂದ ಪ್ರವೇಶ ಪಡೆದರೆ  ಮತ್ತೆ ಮರಳಲು ಸಮಯದ ನಿರ್ಬಂದ ಇಲ್ಲ ಎಂದು.
ನಾವು ಏದುಸಿರು ಬಿಡುತ್ತಾ ಸಾರಿಸುತ್ತಾ ಬೆಟ್ಟ ಹತ್ತಿ ಮೊದಲು ನೋಡಿದ್ದು ದಾಲ್ ಸರೋವರದ ಭೂಮತೆಯನ್ನು!  ಸರೋವರದ  ಮೇಲಿರುವ ಬೋಟು ಮನೆಗಳು ಸರೋವರದ ಒಟ್ಟಂದಕ್ಕೆ ಅಡಚಣೆಯಾಗಿವೆ. ಇದು ತೇಲುವ ದೋಣಿ ಮನೆಗಳ ವಿಶ್ವ.   ‘ಚಾರ್ ಚಿನಾರ್ಯಾಕಿಷ್ಟು ಪ್ರಸಿದ್ಧ ಎನ್ನುವುದಕ್ಕೆ ಇಲ್ಲಿ ಕಾಣುವ ಸುಂದರ ದೃಶ್ಯ ಉತ್ತರ ನೀಡುತ್ತದೆ. ಶಿವನ ಗರ್ಭಗುಡಿಯ ಬಳಿ ಕಾಶ್ಮೀರದ ಸೌಂದರ್ಯ ಸವಿಯುವಷ್ಟು ಸ್ಥಳಾವಾಕಾಶ ಇಲ್ಲ. ದಾಲ್ ಸರೋವರದ ಭಾಗ ಮಾತ್ರ ಕಾಣುತ್ತದೆ. ಕೆಳ ಹಂತದಲ್ಲಿ ಇನ್ನೊಂದು ದಿಕ್ಕಿನ ಪರ್ವತ ಕಣಿವೆಗಳನ್ನು ಪರ್ವತಗಳನ್ನೂ ನೋಡಬಹುದು.

ದಾಲ್ ಸರೋವರದಶಿಕಾರ
ದಾಲ್ ಸರೋವರದಶಿಕಾರತುಂಬ ಪ್ರಸಿದ್ಧ. ದೋಣಿ ಮನೆಯಲ್ಲಿ ವಾಸ್ತವ್ಯ ಹೂಡಿದರೆ ಅವರು ಶಿಕಾರದ ವ್ಯವಸ್ಥೆ ಮಾಡುತ್ತಾರೆ. (ಹೆಗ್ಗಡೆಯವರು ಎಲ್ಲವನ್ನೂ ಇಂಟರ್ ನೆಟ್ ಮೂಲಕ ವ್ಯವಸ್ಥೆ ಮಾಡಿದ್ದರು.) ದಾಲ್ ಸರೋವರದಲ್ಲಿ ಪುಟ್ಟ ಸುಸಜ್ಜಿತ ದೋಣಿಯಲ್ಲಿ ಸುತ್ತಾಡುವುದನ್ನುಶಿಕಾರಎಂದು ಕರೆಯುತ್ತಾರೆ. ನಮ್ಮಲ್ಲಿ ಸಮಯದ ಅನುಕೂಲ ಇದ್ದರೆ ಇಡೀ ದಿನ ಶಿಕಾರ ಮಾಡಬಹುದು.


ದಾಲ್ ಸರೋವರದ ಹಣೆಯ ಸಿಂಧೂರ ತಿಲಕಚಾರ್ ಚಿನಾರ್’ :
ದಾಲ್ ಸರೋವರದ ಮಧ್ಯ ಕುದುರು(ನಡುಗೆಡ್ಡೆ) ನಾಲ್ಕು ಮೂಲೆಯಲ್ಲಿ ನಾಲ್ಲು ಸೊಂಪಾಗಿ ಬೆಳೆದ ಚಿನಾರ್ ಮರಗಳಿರುವುದರಿಂದಾಗಿ   ಕುದುರನ್ನುಚಾರ್ ಚಿನಾರ್ಎಂದು ಕರೆಯುತ್ತಾರೆ. ಇದು ಸುಮಾರು 100ಅಡಿ ಉದ್ದ 80 ಅಡಿ ಅಗಲ ಇರಬಹುದಾದ ನಡುಗೆಡ್ಡೆ.
ನೋಡುವವರ ಕಣ್ಮಣ ತಣಿಸುವ ಕಾಶ್ಮೀರದ ರಾಜ ವೃಕ್ಷ ಚಿನಾರ್. ಹಸಿರು-ಕಂದು-ಕೆಂಪು-ಅರಶಿನ -ಹೀಗೆ ಮಿಶ್ರ ಬಣ್ಣದಿಂದ ಕೂರೀ ಮರ ನೋಡುಗರನ್ನು ಆಕರ್ಷಿಸುತ್ತದೆ. ಮರದ ಎಲ್ಲಾ ಭಾಗಗಳು ಉಪಯುಕ್ತವಾಗಿದ್ದು  ಚಿನಾರ್ ಮರ ಕಾಶ್ಮೀರಿ ಸಂಸ್ಕøತಿಯ ಭಾಗವಾಗಿದೆ. ನೀರಿನ ಆಶ್ರಯ ಇರುವಲ್ಲಿ ಅನೇಕ ವರ್ಷಗಳ ಕಾಲ ಬದುಕುವ ಮರ ಪೂರ್ವ ಹಿಮ ಪರ್ವತ ಭಾಗದಲ್ಲಿ ಹೆಚ್ಚಾಗಿ ಇವೆ ಎಂದು ತಿಳಿದು ಬಂತು.
ನಾವು ಶಿಕಾರದಲ್ಲಿಚಾರ ಚಿನಾರ್ ಬಳಿಸಾಗಿದೆವು. ಮೊದಲ ದಿನ ಶಂಕರಾಚಾರ್ಯ ಪರ್ವತದಿಂದ ಚಾರ್ ಚಿನಾರದ ದೂರ ಸೌಂದರ್ಯವನ್ನು ಕಂಡು ಆನಂದಿಸಿದ್ದೆವು. ಈಗ ಅದರ ಬುಡಕ್ಕೆ ತಲುಪಿದೆವು. ಶಿಕಾರದನ್ನು ಚಿನಾರ್ ನಡುಗೆಡ್ಡಯ ಪಕ್ಕದಲ್ಲಿ ನಿಲ್ಲಿಸಿಇಳಿಯುತ್ತೀರಾಎಂದ. ಹೆಗ್ಗಡೆಯವರುಬೇಡ ಇಲ್ಲಿಂದಲೇ ನೋಡಿದರೆ ಸಾಕುಅಂದರು. ಜೀವನ್ ಶೆಟ್ಟಿಯವರುಇಳಿಯೋಣಎಂದರು. ನಾವೆಲ್ಲ ಇಳಿದು ಒಂದು ಸುತ್ತು ಹಾಕಿದೆವು.  ಶಂಕರಾಚಾರ್ಯ ಶಿಖರದಿಂದ ಕಾಣುವಾಗ ಚಾರ್ ಚಿನಾರ್ ದಾಲ್ ಸರೋವರದ ಹಣೆಯ ಮೇಲಿನ ಸಿಂದೂರ ತಿಲಕದಂತೆ ದಾಲ್ ಸರೋವರದ ಮಧ್ಯ ಇದ್ದು ಶೋಭಿಸುತ್ತಿದೆ. ದೂರದಿಂದ ಕಾಣುವ   ನೋಟದ ಸೊಬಗು ಇಲ್ಲಿ ಇಲ್ಲ.


ಚಾರ್ ಚಿನಾರ್ ಬಳಿ ಒಂದು ಹಡುಗು ಮನೆ ಇದೆ. ಇಲ್ಲಿಗೆ ಬಂದವರಿಗೆ ಕಾಶ್ಮೀರದ ವಿಶೇಷ ಚಹಾ ‘‘(Kahva)ಹಾಗೂ ಪಕೋಡಾ ಮಾಡಿ ಕೊಡುವುದು ಇವರ ವೃತ್ತಿ. ನಾವು ಹೋಗುವ ಎರಡು ದಿನದ ಮೊದಲು ಇಲ್ಲಿಗೆ ಸೋನಿಯಾ ಗಾಂಧಿ ಬಂದಿದ್ದರಂತೆ. ನಾವು ಇಲ್ಲಿಗೆ ಭೇಟಿ ನೀಡಿದ್ದು 4ನೆಯ ತಾರೀಕು. ಅಕ್ಟೋಬರ್ 2ರಂದು ಸೋನೀಯಾ ಗಾಂಧಿ ಇಲ್ಲಿಗೆ ಭೇಟಿ ನೀಡಿದ್ದು.  ‘ಜಮ್ಮುವಿನಲ್ಲಿ ನಮ್ಮ ಪ್ರಯಾಣಕ್ಕೆ ತಡೆ ತಂದು ಅಲ್ಲಿಂದ ಇಲ್ಲಿಗೆ ಬಂದಿರಬೇಕುಎಂದು ಕೊಂಡೆವು. ಸೋನಿಯಾ ಗಾಂಧಿ ತಾವು ನೀಡಿದ್ದ ಪಕೋಡಾ ಮತ್ತು ಕಾಶ್ಮೀರಿ ಚಾ  ‘ಕಹ್ವಾಸವಿದು ಹೋದುದಾಗಿನಮಗೂಕಹ್ವಾಮಾಡುವುದಾಗಿ ಹೇಳಿದೆ.  ನಮ್ಮಲ್ಲಿ ಪಕೋಡಾ ಕರಿಯುವಷ್ಟು ಹೊತ್ತು ಕಾಯಲು ಸಮಯ ಇರಲಿಲ್ಲ. ಆದರೆ ಶಿಕಾರ ನಡೆಸುವವರ ಬಡತನ ಕಂಡು ಕಹನಾ ಮತ್ತು ಪಕೋಡಾ ಸವಿದು ಹೋಗಲು ನಿರ್ಧರಿಸಿದೆವು. ಆತ ನೀಡಿದ ಬಿಸಿ ಬಿಸಿ ಪಕೋಡಾ ತಿನ್ನುವಾಗಸೋನಿಯಾ ಗಾಂಧಿ ತನ್ನಲ್ಲಿ ಎಲ್ಲಾ ಸಮಸ್ಯೆ ಬಗ್ಗೆ ಕೇಳಿದರು, ತಾನು ಎಲ್ಲವನ್ನೂ ಹೇಳಿದೆ, ಖಾಸಗಿ ಸಮಸ್ಯೆ ಮಾತ್ರವಲ್ಲ ದಾಲ್ ಸರೋವರದ ಸಾರ್ವಜನಿಕ ಸಮಸ್ಯೆನ್ನೂ ಹೇಳಿದೆಎಂದು ಹೆಮ್ಮೆಯಿಂದ. “ಆಕೆ ಏನಂದರುಎಂದೆ. “ದೇಖೇಗಾಎಂದರು ಎಂದ ಸ್ವಲ್ಪ ಸಪ್ಪೆ ಮುಖದಿಂದ.

ಕಬೂತರ್ ಕಾನಾ


ಚಾರ್ ಚಿನಾರ್ನಂತಹ ಆದರೆ ಅದಕ್ಕಿಂತ ದೊಡ್ಡ ನಡುಗೆಡ್ಡಯನ್ನುಕಬೂತರ್ ಕಾನಾಎನ್ನುತ್ತಾರೆ. ನೂರಾರು  ಪಾರಿವಾಳಗಳಿಗೆ ಆಶ್ರಯ ನೀಡಿದ ನಡುಗೆಡ್ಡೆ ಪಾರಿವಾಳಗಳ ಹೆಸರಿನಿಂದ ಗುರುತಿಸಿಕೊಂಡು ಖಬೂತರ್ ಖನಾ ಆಗಿದೆ. ಸೈನಿಕರ ಸುಪರ್ದಿಯಲ್ಲಿ ಇರುವ ಇಲ್ಲಿ ಕಟ್ಟಡಗಳಿವೆ. ಇದನ್ನು ಕಾಶ್ಮೀರದ ದೊರೆ ಹರಿಸಿಂಗ್ ನಿರ್ಮಿಸಿದನಂತೆ.

ತೇಲುವ ತೋಟ:
ದಾಲ್ ಸರೋವರ ತೇಲುವ ತೋಟಗಳು ಇರುವ ಬಗ್ಗೆ ಕೇಳಿದ್ದೆ. ನಾನು ಶಿಕಾರದವರನ್ನು ಬಗ್ಗೆ ವಿಚಾರಿಸಿದೆ. ಆತ ಖಂಡಿತಾ ತೋರಿಸುವುದಾಗಿ ಹೇಳಿದ.ದಾಲ್ ಸರೋವರದ ಅನೇಕ ಭಾಗಗಳಲ್ಲಿ ವಿಶೇಷವಾಗಿ ನಾಗಿನಿ ಸರೋವರದಲ್ಲಿ ತಾವರೆಯ ತೋಟವನ್ನು ಸರಕಾರ ಬೇಲಿ ಹಾಕಿ ರಕ್ಷಿಸಿದ ವಿಚಾರ ಹಿಂದೆ ತಿಳಿಸಿದ್ದೆ. ಆದರೆ ಎಲ್ಲೆಲ್ಲೂ ನೈದಿಲೆ ಯಥೇಚ್ಚವಾಗಿ ಬೆಳೆಯುತ್ತದೆ. Àರೋವರದಲ್ಲಿ ಬೆಳೆಯುವ ನೈದಿಲೆ ಗಿಡಗಳು ಬಹುಪಯೋಗಿವಾಗಿವೆ. ನೈದಿಲೆಯ ಎಲೆ ದಂಟು ಎಲ್ಲವೂ ಪಶು ಆಹಾರ. ಇದು ಆಡುಗಳಿಗೆ ಉತ್ತಮ ಅಹಾರ. ಹೀಗಾಗಿ ಇದಕ್ಕೆ ಪಶು ಆಹಾರವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿದೆ. ಖಾಸಗಿ ಒಡೆತನದಲ್ಲಿ ಇರುವ ನೈದಿಲೆಯ ತೋಟವನ್ನು ಮಾರುತ್ತಾರೆ.  ಮುನ್ನಾ ದಿನ ಸಂಜೆ ಅಥವಾ ಮುಂಜಾನೆ ಬಡ ಮಹಿಳೆಯರೇ ದೋಣಿ ನಡೆಸಿ ನೈದಿಲೆ ಗಿಡಗಳನ್ನು ಕೊಯಿದು ಮಾರು ಕಟ್ಟೆಗೆ ಸಾಗಿಸುವುದನ್ನು ಇಲ್ಲಿ ಕಾಣಬಹುದು. ಕೆಲವು ಸಂಬಂಧ ಪಟ್ಟ ಇಲಾಖೆಯವರು ಯಂತ್ರದ ಮೂಲಕ ಕುಯಿದು ಸಾಗಿಸುತ್ತಾರೆ. ಯಂತ್ರದ ಮೂಲಕ ಕುಯಿದಾಗ  ಕುಯ್ದ ಸ್ಥಳ ಒಂದೇ ಮಟ್ಟವಗುತ್ತದೆ. ಕೈಯಲ್ಲಿ ಎಳೆದು ಕಡಿಯಲಿ ಅಥವಾ ಯಂತ್ರದ ಮೂಲಕ ಕಡಿಯಲಿ, ಹಾಗೆ ಕಡಿದ ಮೇಲೆ ಉಳಿಯುವ ನೈದಿಲೆ ಬೇರುಗೆಡ್ಡೆಗಳು ತಳ ತೊರೆದು ಕೆಸರಿನೊಂದಿಗೆ ತೇಲುತ್ತವೆ. ಇವು ತೇಲುತ್ತಾ ತೇಲುತ್ತಾ ಅದರ ಮೇಲೆ ಹುಲ್ಲು ಕಡ್ಡಿ ಬೆಳೆದು ಮಣ್ಣಿನ ಪದರ ನಿರ್ಮಾಣವಾಗುತ್ತzಹಿಗೆ ತೇಲುವಗಡ್ಡೆಗಳ ಜೊತೆ ಕೆಸರು ಬೆರೆತು ಸುಮಾರು ಒಂದರಿಂದ ಒಂದುವರೆ ಅಡಿಗಳಷ್ಟು ದಪ್ಪಗೆ ಇರುವ ಮಣ್ಣಿನ ದ್ವೀಪಗಳಾಗುತ್ತವೆ. ಸುಮಾರು 12ರಿಂದ 16 ಅಡಿಗಳಷ್ಟು ಆಳ ಇರುವ ನೀರಿನ ಮೇಲೆ ತೇಲುವ ದ್ವೀಪಗಳ ಮೇಲೆ ಮಣ್ಣಿನ ಗುಪ್ಪೆ ಮಾಡಿ ಅಥವಾ ಒಡೆದ ಮಡಕೆಗಳಲ್ಲಿ ಮಣ್ಣು ತುಂಬಿಸಿ ತರಕಾರಿ ಬೀಜ ಬಿತ್ತುತ್ತಾರೆ. ನೀರುಣಿಸುವಂತುಲ್ಲಿ, ಗೊಬ್ಬರ ಹಾಕುವುವುದಿಲ್ಲ. ಆದರೂ ಒಳ್ಳೆಯ ಇಳುವರಿಯನ್ನು ಇಂತಹ ತೋಟದ ಮಾಲಿಕರು ಪಡೆಯುತ್ತಾರೆ. ಕಲ್ಲಂಗಡಿ ಹಣ್ಣು ಸೋರೆಕಾಯಿ ನಮ್ಮನ್ನು ಅಣಕಿಸುವಂತೆ ತೇಲುವ ತೋಟದ ಸಂದಿಗೊಂದುಗಳಲ್ಲಿ ಇಣುಕುತ್ತಿತ್ತು. ತಾವರೆ ಎಲೆ ಮತ್ತು ದಂಟಿನಲ್ಲಿ ಸೈನೆಡ್ ಅಂಶ ಇದೆಯೆಂತೆ. ಇದನ್ನು ತಿಂದರೆ ಜಾನುವಾರಗಳು ಸಾಯುತ್ತವೆ. ಆದರೆ ಅವುಗಳು ತಾವರೆಯ ಎಲೆಗಳನ್ನು ಮೂಸುವುದೂ ಇಲ್ಲ ಎಂದರು. ಜಾನುವರುಗಳಿಗೆ ದೈವದತ್ತ ವರ ಇದು

 ಕಾಶ್ಮೀರದ ಬಾಷೆ ಕಾಶ್ಮೀರಿ:
ಇಲ್ಲಿಯ ಬಾಷೆ ಕಾಶ್ಮೀರಿ. 4,611,000 ಕಾಶ್ಮೀರಿಯನರು ಕಾಶ್ಮೀರಿ ಭಾಷೆ ಮಾತನಾಡುತ್ತಾರೆ. ಮೂಲತಃ ಇದರ ಲಿಪಿಶಾರದಾ ಲಿಪಿಯಾಗಿತ್ತು. ಶಾರದೆ ಕಾಶ್ಮೀರ ಪುರದವಳೆನ್ನುವುದಕ್ಕೆ ಇದಕ್ಕಿಂತ ದೊಡ್ಡ ಮಾಹಿತಿ ಬೇಡ.  ಆದರೆ ಭಾಷೆಯ ಗ್ರಂಥಸ್ಥ ಸಾಹಿತ್ಯ ಅಷ್ಟೇನೂ ಇರಲಿಲ್ಲ. ಪ್ರಾಚೀನತಮ ಸಾಹಿತ್ಯ ಎಂದರೆ ಹದಿನಾಲ್ಕನೆಯ ಶತಮಾನದಲ್ಲಿ ಬರೆದ ಲಲ್ಲೇಶ್ವರಿಯ ಭಕ್ತಿಗೀತೆಗಳು.  ಮುಂದೆ ಪರ್ಷಿಯನ್ ಅರೆಬಿಕ್ ಮತ್ತೆ ದೇವನಾಗಿರಿ ಕೂಡಾ  ರೂಢಿಸಲಾಗಿದೆ. ಆದರೆ ಸೂಫಿ ಮತ್ತು ದೇಶಿ ಬರಹಗಳು ಕಾಶ್ಮೀರಿ ಲಿಪಿಯ ಕಾಶ್ಮೀರಿ ಭಾಷೆಯಲ್ಲಿವೆ. ಪ್ರಸಿದ್ಧ ಕಾಶ್ಮೀರಿ ಕವಿ ಒಚಿhmu ಉಚಿmi. ನಾವು ಭೇಟಿಯಾದ ಮುಸ್ಲಿಮರೆಲ್ಲರೂ ತಮ್ಮೊಳಗೆ ಕಾಶ್ಮೀರಿ ಮಾತನಾಡುತ್ತಿದ್ದರು. ಹಾಗೂ ಕಾಶ್ಮೀರಿ ಭಾಷೆಯ ಬಗ್ಗೆ  ಬಹಳ ಹೆಮ್ಮೆ ಪಡುತ್ತಿದ್ದಾರೆ. ಆದರೆ ಕಾಶ್ಮೀರಿ ಭಾಷೆ ಸರಕಾರದ ಅಧಿಕೃತ ಭಾಷೆಯಾಗಿಲ್ಲ. ಹಲವು ವರ್ಷಗಳ ಹೋರಾಟದ ಪರಿಣಾಮವಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಶ್ಮೀರಿ ಭಾಷೆಯನ್ನು ಕಲಿಸಲಾಗುತ್ತದೆ. ಉರ್ದು ಮಾತನಾಡುವವರು ನಮ್ಮ ಗಮನೆಕ್ಕೆ ಬಂದಿಲ್ಲ.

ಕಾಶ್ಮೀರಿ ಸುಂದರಿಯರು:

  ಕಾಶ್ಮೀರದ ಸುಂದರಿಯರನ್ನು ನೋಡುವಾಗ ಆನಂದವಾಗುತ್ತದೆ. ಸಲ್ವರ್ ಕಮೀಜ್ ತೊಟ್ಟು ತಲೆಯನ್ನು ದುಪಟ್ಟದಿಂದ ಮುಚ್ಚಿದ ಇವರ ಕೆನ್ನೆಯನ್ನು ಸೂರ್ಯ ಚುಂಬಿಸುವಾಗ ಮುಳುಗುವ ಸೂರ್ಯನ  ಕೆಂಪು ಕೆನ್ನೆಯ ಮೇಲೆ ಹರಡಿದಂತಾಗುತ್ತದೆ. ಸೌಂದರ್ಯ ಎನ್ನುವುದು ದೇವರು ಕೊಡುವ ವರ ಅಲ್ಲವೆ?  ನನಗೆ ಕೂಡಲೇ ಅಲ್ಲಮ ಪ್ರಭುವಿನವಚನ ನೆನಪಾಯಿತು. “ಹೆಣ್ಣು ಮಾಯೆಯಲ್ಲ, ಹೊಣ್ಣು ಮಾಯೆಯಲ್ಲ. ಮನದ ಮುಂದಿನ ಆಶೆಯೇ ಮಾಯೆ ಕಾಣಾ ...”
ನಾವು ವಿಮಾನ ನಿಲ್ದಾಣದಿಂದ ಹೊರಟು ನಾಗಿಣಿ-ದಾಲ್ ಸರೋವರದ ಭಾಗದಲ್ಲಿ ಶಿಕಾರ ಹತ್ತಿದಾಗಲೂ ಸುಂದರ ಕನ್ಯೆಯರು ತಮ್ಮ ರೂಪಲಾವಣ್ಯದಿಂದ ಕಣ್ಮನ ಸೆಳೆದ ವಿಚಾರ ಹಿಂದೆ ಹೇಳಿದ್ದೆ. ಎಂತಹ ಸ್ನಿಗ್ಧ ಸೌಂದರ್ಯ! ಮಗುವಿನ ಮುಗ್ಧತೆ?   ಹುಡಿಗಿಯರು ತಮ್ಮ ಸ್ವÀಂತ ದೋಣಿಯನ್ನು ತಾವೇ ನಡೆಸಿಹೋಗುತ್ತಿದ್ದರು. ಯಾವ ಪರದೆಯಿಂದಲೂ ಮರೆಮಾಚದೆ ಮಾಮೂಲಿ ಮಹಿಳೆಯರಂತೆ ದೋಣಿ ನಡೆಸುತ್ತಿದ್ದರು. ದಾಲ್ ಸರೋವರದ ನಡುಗೆಡ್ಡೆಗಳಲ್ಲಿ ವಾಸಿಸುವ ಕುಟುಂಬದವರು ಕಾಲೇಜಿಗೆ, ಶಾಲೆಗೆ ಹೋಗಬೇಕಾದರೆ ದೋಣಿ ನಡೆಸೇ ಹೋಗಬೇಕು. ಎಷ್ಟೇ ಬಡವರಾದರೂ ತಮ್ಮ ತಮ್ಮ ಮನೆಗಳಲ್ಲಿ ಒಂದೊಂದು ಪುಟ್ಟ ದೋಣಿ ಇದ್ದೇ ಇರುತ್ತದೆ. ಇದು ಐಷರಾಮದ ಶಿಕಾರ ಅಲ್ಲ.  ಯೌವ್ವನದ ಸೌಂದರ್ಯ ವಯಸ್ಸಾದ ಮಹಿಳೆಯರಲ್ಲಿ ಕಾಣಬರಲಿಲ್ಲ. ಬಹುಷ ಅವರು ಆರೋಗ್ಯದ ಕಡೆಗೆ ಅಷೊಂದು ಗಮನ ಕೊಡುವುದಿಲ್ಲ ಎಂದೆನಿಸಿತು. ಇದಕ್ಕೆ ಬಡತನ ಕಾರಣ ಇರಬಹುದು.
ಜಮ್ಮುವಿನಲ್ಲಾಗಲೀ ಕಾಶ್ಮೀರದಲ್ಲಾಗಲೀ ಬೂರ್ಖಾ ಹಾಕಿದ ಮಹಿಳೆಯರು ಅಪರೂಪಕ್ಕೆ ಕಾಣ ಬರುತ್ತಾರೆ.

ದಿಲ್ಲಿ, ಜಮ್ಮು ಮತ್ತು ಖಾಶ್ಮೀರದಲ್ಲಿ ಕಾಲೇಜಿಗೆ ಹೋಗುವ ಹೆಣ್ಣಮಕ್ಕಳು ಘೋಷ ಹಾಕುವುದು ಕಡಿಮೆ. ದಕ್ಷಿಣ ಭಾರತದ ಹೆಚ್ಚಿನ ಮುಸ್ಲಿಮ್ ಮಹಿಳೆಯರು ಅದರಲ್ಲೂ ಆರ್ಥಿಕವಾಗಿ ಕೆಳವರ್ಗದವರು ತಮ್ಮನ್ನು ಘೋಷದ ಒಳಗೆ ಮರೆಮಾಡುವುದರಲ್ಲಿ ಹೆಚ್ಚು ಉತ್ಸುಕರಾಗಿದ್ದಾರೆ.

No comments:

Post a Comment