Tuesday, July 14, 2015

ಜಮ್ಮು ಕಾಶ್ಮೀರ -ಭಾಗ 3




 ಅದ್ಭುತ ಸೃಷ್ಟಿ ಕಾಶ್ಮೀರ
 ಜಮ್ಮು ವಿಮಾನ ನಿಲ್ದಾಣದಲ್ಲಿ ರಕ್ಷಣಾ ವ್ಯವಸ್ಥೆ ಜೋರಾಗಿಯೇ ಇತ್ತು. ಇಲ್ಲಿಯ ರಕ್ಷಣೆ ನೋಡಿದಾಗ ನಮ್ಮ ಶ್ರೀಲಂಕಾ ಪ್ರವಾಸ ನೆನಪಾಯಿತು. ಕೊಲೊಂಬೋದಲ್ಲಿಯೂ ಹೀಗೇಯೇ ಇತ್ತು. ವಿಮಾನ ನಿಲ್ದಾನದ ಹೊರಗೆಯೇ ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದರು.

 ಬಾನಿನಲ್ಲಿ ಹಾರಟ ಮಾಡುವಾಗ ನೋಡಬೇಕು ಕಾಶ್ಮೀರ ಕಣಿವೆಗಳ ಸೊಗಸನ್ನು!  ಪರ್ವತಗಳನ್ನು ಏರಿ, ಇಳಿದು, ಏರಿ ಇಳಿದು ಹೋಗಬೇಕಾಗಿದ್ದ ಮಾರ್ಗ ಇದು.  ಶಿಲಾ ಪದರಗಳ ಪರ್ವತ ಅದ್ಭುತ ಶಿಖರಗಳು ಶಿಲಾ ತರಂಗಗಳಂತೆ ಕಾಣುತ್ತಿತ್ತು ಮೇಲಿನಿಂದ! ಏನು ಸೃಷ್ಟಿಯೋ? ಎಂಥ ಮಾಯೆಯೋ? ಕಾಳಿದಾಸನ ಕಳುಹಿಸಿದ ಮೇಘದಂತೆ ನಾವು ಶಿಖರಗಳ ಮೇಲಿಂದ ತೇಲುತ್ತಿದ್ದವೆವು. ಕೆಳಗೆ ಪರ್ವತ ಸಾಲುಗಳು, ಅಲ್ಲಲ್ಲಿ ಹರಿಯುವ ನದಿಗಳ ಬಳಕುದಾರಿ. ಮಧ್ಯೆ ಸಮತಟ್ಟು ಜಾಗದಲ್ಲಿ ಅಲ್ಲಲ್ಲಿ   ಗುಂಪು ಗುಂಪಾಗಿ ಕಾಣುವ ಊರುಗಳು ಆಗೊಮ್ಮೆ ಈಗೊಮ್ಮೆ ಕಾಣುತ್ತಿದ್ದುವು.

 ಆಗೊಮ್ಮೆ ಈಗೊಮ್ಮೆ  ವಿಮಾನ ಕಂಪಿಸುತ್ತಿದ್ದು. ಭೂಮಿಯ ಅಯಸ್ಕಾಂತೀಯ ಶಕ್ತಿ ವಿಮಾನವನ್ನು ಎಳಕೊಳ್ಳುತ್ತದೋ, ಶಿಲಾ ಪರ್ವತಕ್ಕೆ ನಮ್ಮ ವಿಮಾನ ಬಡಿಯುತ್ತದೋ ಎಂದೆನಿಸಿತು. ಒಂದೇ ಕ್ಷಣ! ನಮ್ಮ ವಿಮಾನದ ಕೆಳಗೆ ಮೋಡಗಳು ಓಡುತ್ತಿದ್ದುವು, ಕಾಳಿದಾಸನ ಸಂದೇಶವನ್ನು ಹೊತ್ತ ಮೋಡ ಈಗಲೂ ಪ್ರಯಾಣಿಸುತ್ತಲೇ ಇದೆ.
 ಕಾಶ್ಮೀರದ ವಿಮಾನ ನಿಲ್ದಾಣದಲ್ಲಿ ರಕ್ಷಣಾ ವ್ಯವಸ್ಥೆ ಎಷ್ಟು ಬಿಗಿಯಾಗಿತ್ತೆಂದರೆ ವಿಮಾನಗಳಿಗೆ ಪ್ರಯಾಣಿಕರನ್ನು ಇಳಿಸಲು ಅನುಮತಿಗಾಗಿ ಬಹಳ ಹೊತ್ತು ಕಾಯಬೇಕಾಯಿತು.


 ನಮ್ಮ ವಸತಿ ವ್ಯವಸ್ಥೆ ಇದ್ದುದು ದಾಲ್ ಸರೋವರದ ಹಡಗುಮನೆ/ಬೋಟ್ ಹೌಸ್ನಲ್ಲಿ. ಮುಂಗಡ ಕಾದಿರಿಸಿದ್ದ ಹೌಸ್ ಬೋಟ್ಗೆ ಟ್ಯಾಕ್ಸಿ ಹಿಡಿದು ಹೊರಟೆವು. ನಾವು ನಮ್ಮ ಸರಂಜಾಮು ಇಳಿಸಲೆಂದು ದಾಲ್ ಸರೋವರಕ್ಕೆ ಮೊದಲು ಹೋಗುವುದು ಎಂದು ನಿರ್ಣಯವಾಯಿತು. ದಾಲ್ ಸರೋವರದ ಮುಂದೆ ನಮ್ಮ ಟ್ಯಾಕ್ಸಿ ನಿಂತಾಗಎಷ್ಟು ವರ್ಷದ ಕನಸುಎಂದು ಕೊಂಡೆ. ಸರೋವರ ಕಂಡು ಮುದವೆನಿಸಲಿಲ್ಲ. ಪತ್ರಿಕೆಗಳಲ್ಲಿ ಓದಿ ಕಂಡ ಕನಸು ಇದಕ್ಕಿಂತ ಸುಂದರವಾಗಿತ್ತು.  ನನ್ನ ಪತಿ ಸೀತಾರಾಮ ಹೆಗ್ಗಡೆಯವರು ಎಲ್ಲಾ ವ್ಯವಸ್ಥೆಯನ್ನು ಇಂಟರ್ ನೆಟ್ ಮೂಲಕ, ಮಾಡಿದ್ದರು. ವ್ಯಕ್ತಿಯ ಮುಖ ಪರಿಚಯ ನಮಗಿಲಗಲ. ಅವರ ದೂರವಾಣಿ ಇದೆ. ದೂರವಾಣಿ ಕೈ ಕೊಟ್ಟರೆ? ಆದರೆ ಹಾಗಾಗಲಿಲ್ಲ. ಸಂಬಂಧ ಪಟ್ಟ ವ್ಯಕ್ತಿಯನ್ನು ಹುಡುಕುವವರೆಗ ಟ್ಯಾಕ್ಸಿಯನ್ನು ನಿಲ್ಲಲು ಸೂಚಿಸಿದರು.

 ಒಂದು ಭಾಗದಲ್ಲಿ ಬೋಟ್ ಹೌಸ್ಗಳು ನಿಂತಿದ್ದುವು. ರಸ್ತೆ ಬದಿಯ ದಂಡೆಯ ಬಳಿ ಯಾವ ಬೋಟ್ ಹೌಸ್ಗಳೂ ಇಲ್ಲ. ಎಲ್ಲಾ ಬೋಟ್ ಹೌಸ್ಗಳಿಗೂ ದೋಣಿಯ ಮೂಲಕವೇ ಹೋಗಬೇಕು. ದಾಲ್ ಸರೋವರದ ಭಾಗದ ಹೆಸರುನಾಗಿನಿ ಸರೋವರ.’ :

ದಾಲ್ ಸರೋವರದ ಬಳಿ ನಿಂತಿದ್ದ ಶಿಕಾರದಲ್ಲಿ (ಸುಸಜ್ಜಿತ ದೋಣಿ) ಕುಳಿತುಕೊಳ್ಳಲು ನಮಗೆ ಸೂಚಿಸಲಾಯಿತು. ಆತಂಕ ಮತ್ತು ಸಂತೋಷದ ಮಿಶ್ರ ಭಾವವದಿಂದ ನಾವು ಶಿಕಾರ ಹತ್ತಿದೆವು. ಒಂದು ಶಿಕಾರದಲ್ಲಿ ನಾಲ್ಕು ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಇದೆ. ಸರೋವರದ ನೀರು ತಿಳಿಯಾಗಿತ್ತು. ನೀರಿನಡಿ ಬೆಳೆದ ವೃಕ್ಷಗಳು ಗೋಚರವಾಗುತ್ತಿತ್ತು.  ನಮ್ಮ ಶಿಕಾರ ಮಂಭಾಗದಲ್ಲಿ ಇರುವ ದೋಣಿ ಮನೆಗಳನ್ನು ದಾಟಿ ಓಣಿ ಸರೋವರದ ಮೂಲಕ ಮಂದೆ ಹೋಯಿತು? ಆಗ ಏನೋ ಆತಂಕ! ಎಲ್ಲರ ಮುಖದಲ್ಲಿ ಆತಂಕ ಇದ್ದರೂಇವರು ನಮ್ಮನ್ನು ನೀರಲ್ಲಿ ಮುಳಿಗಿಸಿ ಬಿಟ್ಟರೆ ಯಾರಿಗೂ ಗೊತ್ತಾಗದುಎಂದು ನಗುತ್ತಾ ಹೇಳಿದವರು ಸುಯೋಜ. ಹಾಗೆ ಮುಳುಗಿಸವುದು ಸುಲಭನಾ? ಎಂದರು ಹೆಗ್ಗಡೆಯವರು. ‘ಸುಲಭ ಅಲ್ಲದೆ ಇನ್ನೇನು? ನಾವು ಸತ್ತ ಮೇಲೆ ನಮ್ಮ ಹೆಣ ಸಿಕ್ಕಿ ಅದರ ಇನ್ ವೇಷ್ಟಿಗೇಷನ್ ನಡೆಯಬಹುದು.  ಆದರೆ ಎಷ್ಟು ಕಾಲ? ನಮ್ಮ ಮಕ್ಕಳು ಅವರ ಕೆಲಸದ ಮಧ್ಯೆ ಇಲ್ಲಿಗೆ ಹೋರಾಡಲು ಬರುವುದು-ಅದೆಲ್ಲಾ ಅಷ್ಟು ಸುಲಭವಲ್ಲ.” ನಗುತ್ತಾ ನುಡಿದ ಜೀವನ್ ಶೆಟ್ಟಿಯವರ ಮಾತಿಗೆ ಉತ್ತರಿಸುತಾ  “ನೋಡಿ ಶೆಟ್ಟಿಯವರೇ. ಇವರೆಲ್ಲ ನಮ್ಮಂತಹ ಪ್ರವಾಸಿಗರನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಒಂದು ವೇಳೆ ನೀವು ಹೇಳುವಂತಹ ಘಟನೆ ನಡೆದರೆ ಮತ್ತೆ ಇಲ್ಲಿಗೆ ಪ್ರವಾಸಿಗರು ಬರಲಾರರು. ಹೀಗಾಗಿ ಅಂತದ್ದೆನ್ನೆಲ್ಲ ನಾವು ಊಹಿಸುವುದು ಬೇಡ.”

 ಸುಮಾರು ಅರ್ಧಗಂಟೆ ಪ್ರಯಾಣವನ್ನು ಇಕ್ಕಲೆಗಳಲ್ಲಿ ಇರುವ ದೋಣಿ ಅತಿಥಿ ಗೃಹಗಳ ನಡುಬಾಗದದಿಂದ ಹಾದು ಮುಗಿಸಿದಾಗ ಶಿಕಾರ ಒಂದು ತೇಲುವ ಹಡಗಿನ ಮುಂದೆ ನಿಂತಿತು. ಇದರ ಹೆಸರುಮಹಾ ಜೋಗ್ದೋಣಿ ಮನೆಯ ಮುಂದೆ ವಿಶಾಲ ತಿಳಿನೀರಿನಂಗಳ.  ಅದರಲ್ಲಿ ತಾವರೆಯ ತೋಟ. ತಾವರೆಯ ತೋಟಕ್ಕೆ ಕಬ್ಬಿಣದ ಬೇಲಿ ಹಾಕಲಾಗಿದೆ. ಹೂ ಅರಳುವ ಕಾಲ ಆಗಿದ್ದರೆ ಇಲ್ಲಿಯ ವಾಸಕ್ಕೆ ಹೆಚ್ಚು ವಿಧಿಸಿಯಾರು ಎಂದೆನಿಸಿತು.

 ನಾವು ಹಡಗು ಮನೆಯ ಒಳ ಹೋದೆವು. ಐಷರಾಮಿ ಬೋಟ್ ಹೌಸು. ಪ್ರವೇಶ ದ್ವಾರದ ದೊಡ್ಡ ಹಾಲ್.  ಮತ್ತೊಂದು ಊಟದ ಮೇಜುಗಳಿರುವ ಭೋಜನ ಕೋಣೆ. ಎರಡು ಮಲಗುವ ಕೋಣೆಗಳು. ಮತ್ತೊಂದು ಅತಿಥಿ ಕೋಣೆ. ಮಕ್ಕಳು ಅಥವಾ ನಮ್ಮದೇ ಸ್ಥಳೀಯ ಅತಿಥಿ ಬಂದರೆ ಎಂದು ಅತಿಥಿ ಕೋಣೆ ಎಂದರು ಬೋಟ್ ಹೌಸ್ನವರು.  ಬೋಟ್ಹೌಸ್ ಐಷರಾಮಿಯಾಗಿದೆ. ನಾವು ಚಳಿಯಿಂದ ಗಡ ಗಡ ನಡುಗುವುದನ್ನು ಕಂಡು ಹೆಗ್ಗಡೆಯವರು  ಕಾಶ್ಮೀರದ ದಾಲ್ ಸರೋವರದ ನೀರಿನ ಮೇಲೆ ಮನೆ ಮಾಡಿ ಚಳಿಗಂಜಿದೆಡೆಂತಯ್ಯಾ.......ಎಂದು ಹೆಗ್ಗಡೆಯವರು ನಗುತ್ತಾ ನುಡಿದರು. ಬೋಟಿನಲ್ಲಿ ಇದ್ದ ಹುಡುಗ ಹಾಲ್ ಬುಖಾರಿಗೆ ಬೆಂಕಿಹಾಕಿ ಚಳಿಕಾಯಲು ವ್ಯವಸ್ಥೆ ಮಾಡಿದ. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾ ಎಂದು ಆತ ಕೇಳಿದಾಗ ಸರಿ ಎಂದೆವು. ಅರ್ಧ ಗಂಟೆಯಲ್ಲಿ ಒಳ್ಳೆಯ ಊಟವನ್ನು ಐಷರಾಮಿಯಾಗಿ ಉಂಡೆವು. ಸಸ್ಯಹಾರಿಯಾದ ನನಗೂ ಒಳ್ಳೆಯ ಊಟ ನೀಡಿದನಾತ. ಮತ್ತೆ ಶಿಕಾರದ ಮೂಲಕ ಮೊಘಲ್ ಗಾರ್ಡನ್ ನೋಡಲು ಹೊರಟೆವು.

ಮುಂದಿನ ಪ್ರವಾಸ ಮುನ್ನ ಹೌಸ್ ಬೋಟು ಬಗ್ಗೆ ಸ್ವಲ್ಪ ಹೇಳೋಣ. ಹೌಸ್ ಬೋಟ್ ಒಂದು ಪುಟ್ಟ್ ಹಡಗಿನಂತೆ ಇದೆ. ದೋಣಿಯಂತಿಲ್ಲ. ಸಣ್ಣ ಬೋಟುಗಳು ಕೆಲವು ಣಿರೊಳಗೆ ಕಂಬ ಹಾಕಿ ಆಧಾರ ಕೊಟ್ಟಿದ್ದೂ ಇವೆ. ದೊಡ್ಡ್ ಬೋಟುಗಳು ನೀರಿನ ಮೇಲೆ ತೇಲುತ್ತದೆ ಆದರೆ ದಡದಲ್ಲಿ ಕಟ್ಟಿ ಹಾಕಿದ್ದಾರೆ. ಇವುಗಳ  ಹಿಂಭಾಗದಲ್ಲಿ ಮಣ್ಣಿನ ನೆಲ ಇದೆ. ಒಂದು ದ್ವೀಪ ಅದು. ಬೋಟ್ ಯಜಮಾನನ ಬಂಗಲೆ ಮನೆ ಹಿಂಭಾಗದ ದ್ವೀಪದಲ್ಲಿ ಇದೆ. ನಮ್ಮ ಬೋಟ್ ನೇರ ಹಿಂಭಾಗದಲ್ಲಿ ಪಾರ್ಟಿ ಹಾಲ್ ಕೂಡಾ ಇದೆ. ಇದರ ಧಣಿಗೆ ಸೇರಿದ ಇದರ ಹಿಂದಿನ ದ್ವೀಪ ಭೂಮಿಯಲ್ಲಿ ಕೃಷಿ ನಡೆಯುತ್ತದೆ. ಪ್ರಯಾಣಕ್ಕೆ ಶಿಕಾರವನ್ನು ಮಾತ್ರ ಅವಲಂಬಿಸಬೇಕಾದ ಬಡ ಜನರ ಕೂಲಿ ಹೇಗೆ ಎಂದು ಜಮೀನಿನ ಒಡೆಯನಲ್ಲಿ ವಿಚಾರಿಸಿದೆ. ದಿನಕ್ಕೆ 300 ರೂಪಾಯಿ ಎಂದ ಆತ. ಒಳ್ಳೆಯ ಫಸಲು ಬರುತ್ತದೆ. ಹೀಗಾಗಿ ನಷ್ಟ ಇಲ್ಲ ಎನ್ನುತಾನೆ. ಅವನ ಮಡದಿ ಮಕ್ಕಳು ಇಲ್ಲಿಯ ಪ್ರಶಾಂತ ವಾತಾವರಣ ಇಷ್ಟ ಪಡುತ್ತಾರೆ ಹೀಗಾಗಿ ನಾವು ಇಲ್ಲಿಯೇ ಇದ್ದೇವೆ ಎಂದ. ನಾವು ದ್ವೀಪದಲ್ಲಿ ಸ್ವಲ್ಪ ತಿರುಗಿ ಸ್ಯಾನಿಟರಿ ವ್ಯವಸ್ಥೆಯ ಬಗ್ಗೆ ಕುಡಿಯುವ ನೀರಿನ ಬಗ್ಗೆ ವಿಚಾರಿಸಿದೆವು. ಇಲ್ಲಿ ನೀರು ರೀ ಸೈಕ್ಲಿಂಗ್ ನಡೆಯುತ್ತಿದೆ. ಕುಡಿಯಲು ಅಡುಗೆಗೆ ನೀರಿನ ವ್ಯವಸ್ಥೆ ಇದೆ. ಯಾವ ಕಳೆ ಕೊಳೆಯನ್ನೂ ಸರೋವರಕ್ಕೆ ಬಿಡುವಂತಿಲ್ಲ.

ಇಂತಹ ಅನೇಕ ನಡುಗೆಡ್ಡಗಳು ಸರೋವರದ ಒಳಗೆ ಇವೆ. ಅಲ್ಲಿ ವಾಸದ ಮನೆಗಳಿವೆ. ಶಾಲೆ ಕಾಲೇಜು ಹೋಗುವವರು ಇಲ್ಲಿಂದಲೇ ಹೋಗುತ್ತಾರೆ. ಪ್ರತಿ ಮನೆಗಳಲ್ಲೂ ಒಂದಕ್ಕಿಂತ ಹೆಚ್ಚು ಶಿಕಾರಗಳಿವೆ. ಶಿಕಾರ ತೇಲಿಸುವ ಕಾಶ್ಮೀರಿ ಕನ್ಯೆಯರು ತಮ್ಮ ಸ್ನಿಗ್ಧ ಸೌಂದರ್ಯದಿಂದ ಪ್ರವಾಸಿಗÀರನ್ನು ಮೂಕರನ್ನಾಗಿಸುತ್ತರೆ. ನಾನು ಕಂಡಂತೆ ಜಮ್ಮು ಕಾಶ್ಮೀರಿ ಮಹಿಳೆಯರು ಘೋಷ ಹಾಕುವುದಿಲ್ಲ. ಕಾಲೇಜು ವಿದ್ಯಾರ್ಥಿನಿಗಳೂ ಮಾಮೂಲು ಹುಡುಗಿಯರಂತೆ ಹೋಗುತ್ತ್ತಾರೆ. ಕಾಶ್ಮೀರಿ ಪಂಡಿತ ಹುಡುಗಿಯರಿಗೂ ಮುಸ್ಲಿಮ್ ಹುಡುಗಿಯರಿಗೂ ಉಡುಗೆಯಲ್ಲಿ ಯಾವ ಭೇದವೂ ಕಾಣಿಸದು.



ದಾಲ್ ಸರೋವರದಲ್ಲಿ ಇರುವ ದೋಣಿಮನೆಗಳು ಪ್ರವಾಸಿಗರ ಅಕರ್ಷಣೆಯ ಕೇಂದ್ರ. ಆದರೂ ಅನೇಕ ದೋಣಿಮನೆಗಳು ಪ್ರವಾಸಿಗರಿಗರ ಕೊರತೆಯನ್ನು ಎದುರಿಸುತ್ತಿದೆ. 20 ವರ್ಷಗಳ ಹಿಂದೆ ಉಗ್ರಗಾಮಿಗಳ ಜೊತೆ ಸೇರಿ ಸ್ಥಳೀಯ ಮಸ್ಲಿಮ್ ಸಮುದಾಯ ಕಾಶ್ಮೀರಿ ಪಂಡಿತರನ್ನು ಅಮಾನುಷವಾಗಿ ನಡೆಸಿ ಇಲ್ಲಿಂದ ಓಡಿಸಿದುದರ ಪರಿಣಾಮ ಇಲ್ಲಿಯ ಪ್ರವಾಸೋದ್ಯಮದ ಮೇಲಾಗಿದೆ. ಮತಾಂತರಕ್ಕೆ ಒತ್ತಾಯಿಸಿ, ಪಾಕ್ ಆಕ್ರಮಿತ ಪಂಡಿತರ ಎಳೆಯ ಮಕ್ಕಳನ್ನು ಉಗ್ರಗಾಮಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಲು ಒತ್ತಡ ಹೇರಿ, ಇದನ್ನು ಒಪ್ಪದವರನ್ನು ಮನೆಯೊಳಗೆ ಕೂಡಿ ಬೆಂಕಿ ಹಚ್ಚುತ್ತಿದ್ದ ಕಣ್ಣೀರ ಕಥೆಯನ್ನು ಇಲ್ಲಿಂದ ಮಿಲಿಟರಿ ವಾಹನದಲ್ಲಿ ಓಡಿ ಬಂದ ಪಂಡಿತರೊಬ್ಬರು ನಮಗೆ ವಿವರಿಸಿದ್ದು ನಾವು ಜಮ್ಮುವಿನಿಂದ ಸಿಮ್ಲಾಗೆ ಹತ್ತಿದ ರೈಲಿನಲ್ಲಿ. ಅವರು ನಮ್ಮ ಸಹಪ್ರಾಯಣಿಕರಾಗಿದ್ದರು. ತಮ್ಮ ಸಹೋದರಿ ಮತ್ತು ಮಡದಿಯೊಂದಿಗೆ ತಾವು ಬಾಳಿ ಬದುಕಿ, ಉಟ್ಟ ಬಟ್ಟೆಯಲ್ಲಿ ಊರು ಬಿಟ್ಟು ಬಂದ ಊರನ್ನು ನೋಡಿ ಮರಳುತ್ತಿದ್ದರು. ಅಂದಿನ ದಿನಗಳಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ಬದುಕಿಸಿಕೊಂಡು ಕಾಶ್ಮೀರ ಕಣಿವೆಯಿಂದ ಜೀವಂತವಾಗಿ ಮಡದಿ ಮತ್ತು ಸಹೋದರಿಯರೊಂದಿಗೆ ದೆಹಲಿಗೆ ಆಶ್ರಯ ಬಯಸಿ ಬಂದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಕಣ್ಣೀರು ಸುರಿಸಿ ಹೇಳಿದರು. 70 ವಯಸ್ಸಿನ ಆಜಾನು ಬಾಹು ಸುಂದರ ಶರೀರದ ಕಾಶ್ಮೀರಿ ಪಂಡಿತ.  ತಾನು ಬಿಟ್ಟು ಬಂದ ತನ್ನ ಮನೆ ಆಸ್ತಿಯನ್ನು ನೋಡಲು ಪರಕೀಯನಂತೆ ಕಾಶ್ಮೀರಕ್ಕೆ  ಬಂದಿದ್ದ. “ ಆಗಾಗ್ಗೆ ಬರುತ್ತಾ ನಮ್ಮ ಮನೆಯ ಪರಿಸರವನ್ನು ದೂರದಿಂದ ನೋಡುತ್ತೇವೆ. ಈಗ ನನ್ನ ಮನೆಯಲ್ಲಿ ಬೇರೆ ಮುಸ್ಲಿಮ್ ಕುಟುಂಬ ಇದೆ. ಮನೆಯನ್ನು  ರಿಪೇರಿ ಮಡಿದ್ದಾರೆ. ದಾಖಲೆ ನನ್ನ ಹೆಸರಿನಲ್ಲಿಯೇ ಇದೆ. ಆದರೆ ನಾನು ಮಾತ್ರ ಅಲ್ಲಿಗೆ ಪರಕೀಯಎಂದರಾತ. “ನಮ್ಮ ಮುಸ್ಲಿಂ ಮಿತ್ರರು ಕೆಲವರು ಇದ್ದಾರೆ. ಅವರನ್ನು ಮಾತನಾಡಿಸಿ ಬಂದೆ. ನಮ್ಮ ಹಿರಿಯರು ಬಾಳಿ ಬದುಕಿದ ಸ್ಥಳ. ನಾನೂ ನನ್ನ ಮಕ್ಕಳನ್ನು ಪಡೆದುದು ಅಲ್ಲಿಯೇ.”
ವಿಷಯ ಮುಗಿದ್ ಅಧ್ಯಾಯ.  ನಾವೀಗ ಮೊಘಲ್ ಗಾರ್ಡನ್ಸ್ ನೋಡಲು ಶಿಕಾರ ಹತ್ತಿದೆವು.

ನೀರಿನಿಂದ ಮೇಲೆ ಬಂದು ನಮಗಾಗಿ ಕಾದಿದ್ದ ಟ್ಯಾಕ್ಸಿ ಹತ್ತಿ ಮೊಘಲ್ ಗಾರ್ಡನ್ ನೋಡಲು ಹೊರಟೆವು. ನಮ್ಮ ಗಾಡಿ ಸರೋವರಕ್ಕೆ ಪ್ರದಕ್ಷಿಣೆ ಹಾಕುವಂತೆ ಸರೋವರದ ದಡದ ರಸ್ತೆಯಲ್ಲಿ ಸಾಗಿ ಸರೋವರದ ದಡದಲ್ಲಿಯೇ ನಿಲುಗಡೆಯಾಯಿತು.
ಶಾಲಿಮಾರ್ ಗಾರ್ಡನ್ : ಉದ್ಯಾನವನದ ಹಿಂಭಾಗದಲ್ಲಿ ಪರ್ವತ ಶಿಖರಗಳು. ಮುಂಬಾಗದಲ್ಲಿ ದಾಲ್ ಸರೋವರ. ನೂರ್ ಜಹಾನ್ಗಾಗಿ ಜಹಂಗೀರ್ ಇದನ್ನು ಕ್ರಿ.. 1616ರಲ್ಲಿ ನಿರ್ಮಿಸಿದ. 539 ಅಡಿ ಉದ್ದ 182 ಅಡಿ ಅಗಲದ ಉದ್ಯಾನವನದ ಪ್ರಮುಖ ಆಕರ್ಷಣೆ ನೀರಿನ ಝರಿಗಳು. ಪರ್ವತ ಶಿಖರ ಕಡೆಯುಂದ ಉದ್ಯಾನವನದ ಮಧ್ಯ ಭಾಗದಲ್ಲಿ ನಾಲ್ಕು ಹಂತಗಳಲ್ಲಿ ಒಂದರ ಕೆಳಗೆ ಇನ್ನೊಂದರಂತೆ ಧುಮುಕುತ್ತಾ ಬರುವ ನೀರು ಕೊನೆಗೆ ದಾಲ್ ಸರೋವರ ಸೇರುತ್ತದೆ. ನಾಲ್ಕನೆಯ ಹಂತದಲ್ಲಿ ಹೊಳೆಯುವ ಕಪ್ಪು ಗ್ರಾನೆಟ್ ಕಲ್ಲಿನಿಂದ ರಚಿಸಿದ ಸ್ನಾನದಕೊಳ ಇದೆ. ಇದರ ಬಳಿ bಚಿಟಿque hಚಿಟಟ ಇದೆ. ಇದು ರಾಣಿವಾಸದವರಿಗೆ ಮೀಸಲಾಗಿತ್ತು ಎನ್ನುತ್ತಾರೆ. ಮಧ್ಯ ಮಧ್ಯ ಎತ್ತರಕ್ಕೆ ಚಿಮ್ಮುವ ಝರಿಗಳಿವೆ. ಮೂಲತಃ ಇದನ್ನು ಫರಾ ಭಕ್ಷಾ ಅಂದರೆಡಿಲೈಟ್ ಫುಲ್ಎಂದು ಕರೆಯುತ್ತಿದ್ದು ಇದೀಗ ಉದ್ಯಾವನಪ್ರೇಮಿಗಳ ಉದ್ಯಾನವನಎಂದು ಕರೆಸಿಕೊಳ್ಳುತ್ತಿದೆ.

ನೂರ್ ಜಹಾನ್ ಸೋದರ ನಿರ್ಮಿಸಿರುವ ನಿಶಾಂತ್ ಉದ್ಯಾನವನ ಹಾಗೇ ಷಹಜಹಾನನ ಚೆಸ್ಮೆ ಶಾಹಿ ಗಾರ್ಡನ್ ನಲ್ಲಿ ಚೆಸ್ಮೆ ಶಾಹಿ ತೋಟ ನೋಡಿ ಮರಳಿದೆವು. ಆದರೆ ಇಲ್ಲಿ ಮೈ ದುಂಬಿ ಅರಳಿ ನಿಂತಿರುವ ಬಣ್ಣ ಬಣ್ಣದ ವಿಭಿನ್ನ ಹೂಗಳ ಸೊಬಗು ಹಿಮ ಪ್ರದೇಶದಲ್ಲಿ ಅಲದೆ ದಕ್ಷಿಣ ಭಾರತದಲ್ಲಂತೂ ಕಾಣಲು ಸಾಧ್ಯ ಇಲ್ಲ.  ಚೆಸ್ಮೆ ಶಾಹಿಯ ಶ್ರೇಷ್ಠತೆ ಅರಳುವ ಹೂಗಳಿಂದ ಮಾತ್ರವಲ್ಲ ಆಕಾಶದೆತ್ತರಕ್ಕೆ ಚಿಮ್ಮುವ ಝರಿಗಳ ಸೊಬಗಿನಲ್ಲಿ ಕೂಡಾ ಇದೆ.
 
ದಾಲ್ ಸರೋವರ 

ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವದಾಲ್ ಸರೋವರ  ವಿಶ್ವ ಪ್ರಸಿದ್ಧ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರೋವರ ಒಂದು ಪ್ರಮುಖ ಆಕರ್ಷಣೆ. ಸುಮಾರು 18 ಚದರ ಮಿಲೋಮಿಟರ್ ಸುತ್ತಳತೆಯ ಸರೋವರ ಕಾಶ್ಮೀರದಲ್ಲಿ ಎರಡನೆಯದು. ಐದುಸರೋವರಗಳು ಒಂದಕ್ಕೊಂದು ಸಂಪರ್ಕ ಪಡೆದಿವೆ.  ಪರ್ವತಗಳಿಂದ ಒಸರುವ ಝರಿಗಳು ನೀರಿನ ಮೂಲವನ್ನು ಪೂರೈಸುತ್ತದೆ. ಸರೋವರದ ಸುತ್ತಲೂ ಇರುವ ಹಿಮಾಲಯದ ಮುಗಿಲು ಮುಟ್ಟುವ ಪರ್ವತ ಶಿಖರಗಳ ಪ್ರತಿಕೃತಿಗಳು ತಿಳಿನೀರ ಸರೋವರದೊಳಗೆ ನಿಧಾನವಾಗಿ ತೇಲುವುದನ್ನು ನೋಡಿ ಅನುಭವಿಸ ಬೇಕು. ದೋಣಿ ನಡೆಸುವವರ ಪ್ರಕಾರ ಕನ್ನಡಿಯಂತಿರುವ  ದಾಲ್ ಸರೋವರದ ಆಳ 12 ಅಡಿಯಿಂದ 16 ಅಡಿಗಳು! ವಿಶಾಲ ದಾಲ್ ಸರೋವರವು ಸರಕಾರದ ಒಡೆತನದಲ್ಲಿ ಮಾತ್ರ ಇಲ್ಲ. ಇದರ ಕೆಲವು ಭಾಗಗಳು ಖಾಸಗಿ ವ್ಯಕ್ತಿಗಳ ಒಡೆತನಗಳಲ್ಲೂ ಇವೆ. ಸರೋವರದ ಪಶ್ಚಿಮ, ಉತ್ತರ ಭಾಗದಲ್ಲಿ ಮತ್ತು ಪೂರ್ವ ಭಾಗದಲ್ಲಿ ಪರ್ವತ ಸಾಲುಗಳು ಪ್ರತಿಕೃತಿಗಳು ತೇಲುತ್ತವೆ. ಉತ್ತರ ಭಾಗದಲ್ಲಿ ಕಾಣುವ ಮೊಘಲ್ ಗಾರ್ಡನ್ನಲ್ಲಿ  ಹಂತ ಹಂತವಾಗಿ ಧುಮುಕುವ  ಜಲಧಾರೆಯನ್ನು ಇಲ್ಲಿಂದಲೇ ನೋಡಿ ಆನಂದಿಸಬಹುದು.



ನೀರಿನ ಮೇಲೆ ಶಿಕಾರಿಹೋಗುವಾಗ ತಾವರೆಯ ತೋಟವನ್ನು, ತೇಲುವ ತೋಟವನ್ನು, ಐಷರಾಮಿ ತೇಲುವ ದೋಣಿ ಮನೆಗಳನ್ನು (ಜೋಗ್) ಚಾರ್ ಚಿನಾರನ್ನು ಹಾಗೂ ಹರಿದಾಮವನ್ನು .....ನೋಡುತ್ತಾ ತೇಲುತ್ತಾ ಸಾಗುವುದೇ ಒಂದು ಸುಂದರ ಅನುಭವ. ಆಳವಾದ ನೀರು ಇರುವ ಗಂಭೀರ ಪ್ರಶಾಂತ ಸರೋವರ ಇದು. ಆದುದರಿಂದ ಆಳ ಇದ್ದರೂ ಆತಂಕ ಆಗದು.
ದಾಲ್ ಸರೋವರದ ಒಂದು ಮುಖ್ಯ ಭಾಗನಾಗಿನಿ ಸರೋವರ’.

ನಾಗಿನಿ ಸರೋವರ :
ಭಾರತೀಯ ಸಂಸ್ಕøತಿಯಲ್ಲಿ ತಕ್ಷಶಿಲೆ ಮಹತ್ವ ಪಡೆದಿದೆ. ‘ತಕ್ಷಕನಾಗ ರಾಜ. ತಕ್ಷಶಿಲೆ ಈಗಿನ ಪಾಕಿಸ್ತಾನದಲ್ಲಿ ಇದ್ದರೂ ಮೂಲತಃ ನಾಗ ಕ್ಷೇತ್ರವದು. ದಾಲ್ ಸರೋವರದ ಒಂದು ಭಾಗನಾಗಿನಿ’. ಆದರೆ ಇಲ್ಲಿ ನಾಗಿನಿ ಹೆಸರಿನ ಮೂಲ ಸರ್ಪ ಅರ್ಥಾತ್  ‘ನಾಗಅಲ್ಲ ಎನ್ನುತ್ತಾರೆ. (ನಿರೇ ನಾಗ ಎಂಬ ಬಗ್ಗೆ ಶಂಬಾರವರು ವಾದ ಇಲ್ಲಿ ಪ್ರಸ್ತುತ)  ಶ್ರೀ ನಗರದ ಪೂರ್ವ ಭಾಗದಲ್ಲಿ ಇರುವ ಸರೋವರ Zabarwan  ಎಂಬ ಪರ್ವತದ ತಪ್ಪಲಲ್ಲಿ ಇದೆ. ಇದರ ಸುತ್ತಲೂ ಇರುವ ಮರಗಳ (willow and popla)  ಪ್ರತಿಫಲನದಿಂದ ಇದರ ಆಳ ನೀರು ನೀಲಿಯಾಗಿ ಕಾಣುತ್ತದೆ. ಹೀಗಾಗಿ ಇದನ್ನುನಾಗಿನಿ ಸರೋವರಎನ್ನುತ್ತಾರೆ ಎನ್ನುವ ವಾದ ಇದೆ.  ಹಸಿರು ಮರಗಳ ಪ್ರತಿಫಲನ ಇಲ್ಲದೆ ಕೂಡಾ ಆಳವುಳ್ಳ ನೀರೂ ನೀಲಿಯಾಗಿ ಕಾಣುತ್ತದೆ. ತುಳುನಾಡಿನಲ್ಲಿ ಇಂತಹ ಗುಂಡಿಗಳನ್ನುಬಿರ್ಮೆರೆ ಗುಂಡಿ’ (ನಾಗ ಗುಂಡಿ/ಆಳ) ಎಂದು ಕರೆಯುವ ವಾಡಿಕೆ.  ಆಳ ಇರುವ ಗುಂಡಿಗಳಲ್ಲಿ ಹಾವುಗಳ ವಾಸ ಕೂಡಾ ಅಧಿಕ. ಯಮುನೆಯಲ್ಲಿ ಕೃಷ್ಣ ಕಾಳಿಂಗ ಮರ್ದನ ಮಾಡಿದ್ದು ಕೂಡಾ ಆಳ ಗುಂಡಿಯಲ್ಲಿ.
 ನಾಗಿನಿ ಸರೋವರವು ಚಳಿಗಾಲದಲ್ಲಿ ಹಿಮದಿಂದ ಮುಚ್ಚಿರುತ್ತದೆ. ಅದನ್ನು ನೊಡಲೆಂದೆ ಪ್ರವಾಸಿಗರು ಬರುತ್ತಾರೆ.  ತಾವರೆಯ ಹೂ ಅರಳುವ ಕಾಲದಲ್ಲಿ ಅರಳಿದ, ಅರಳುವ ತಾವರೆಯ ವಿಶಾಲ ತೋಟ ನೋಡುಗರನ್ನು ವಿಶೆÉೀಷ ಸೌಂದರ್ಯದಿಂದ ಆಕರ್ಷಿಸುತ್ತದೆ.
 ಗೌರಿ ಮಾರ್ಗ:

ನಾವು ತಾವರೆಯ ತೋಟದ ಮುಂದೆ ಇದ್ದ ಹಡಗು ಮನೆಯಲ್ಲಿ ತಂಗಿದ್ದೆವು. ಆದರೆ ನಾವು ಅಲ್ಲಿದ್ದದು ಅಕ್ಟೋಬರ್ ತಿಂಗಳು.  ಇದು ತಾವರೆ ಅರಳಿ ನಗುವ ಕಾಲ ಆಗಿಲ್ಲ, ನಾಗಿನಿ ಹಿಮದ ಹೊದಿಕೆಯನ್ನು ಹೊದ್ದುಕೊಂಡು ಮಲಗಿದ ಕಾಲವೂ  ಆಗಿರಲಿಲ್ಲ.
ಗುಲ್ ಮಾರ್ಗ್: ಶ್ರೀನಗರದಿಂದ 56 ಕಿಲೋಮೀಟರ್ ದೂರ ಇರುವ ಗುಲ್ಮಾರ್ಗ್ ಸೌಂದರ್ಯದ ಬಗ್ಗೆ ಬಹಳ ಕೇಳಿದ್ದೆವು. ಪರ್ವತ ಶಿಖರಗಳ ಮಧ್ಯದಲ್ಲಿ ಇರುವ ತಪ್ಪಲು/ಕಣಿವೆ ಭಾಗವೇ ಗುಲ್ ಮಾರ್ಗ. ಇಲ್ಲಿಯ ಕುರಿಗಾಹಿಗಳ ಪ್ರಕಾರ ಇದು ಗೌರಿ ಮಾರ್ಗ. ನಾವು ಒಂದು ಟ್ಯಾಕ್ಸಿ ಗೊತ್ತುಮಾಡಿ ಗುಲ್ಮಾರ್ಗ್ ಹೊರಟೆವು. ದಾರಿಯಲ್ಲಿ ಸೇಬು ತೋಟ ಹೊಕ್ಕು ಸೇಬು ಗಿಡದಡಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡೆವು. ಸೇಬು ಕೀಳಲು ಅವಕಾಶ ಇಲ್ಲ. ಕಿತ್ತರೆ 20ರೂ ದಂಡ ಎಂದರು. 20 ರೂ ಕೊಟ್ಟು ಸೇಬು ಕೀಳೋಣ ಎಂದೆ. ಹೆಗ್ಡ್ಡೆಯವರು ಗುಡುಗಿದಂಡ ಕೊಡುವುದೂ ಬೇಡ. ನೀನು ಸೇಬು ಕೀಳುವುದೂ ಬೇಡಎಂದರು. ನನ್ನ ಮುಂದೆಯೇ ಒಬ್ಬ ಪ್ರವಾಸಿಗನನ್ನು ಸೇಬು ಕೀಳಲು ತೋಟದ ಮಾಲಿ ಕರೆದೊಯ್ದ. ನಾನು ಬರಿ ಕೈಲಿ ಮರಳಿದೆ. ಸಾಕಷ್ಟು ಸೇಬು ಖರೀದಿಸಿ ಗಾಡಿಗೆ ಹಾಕಿ ಹೊರಟೆವು. ದಾರಿಯಲ್ಲಿ ಸೇಬನ್ನು ಕಡಿದಾಗ ಅದರ ರಸ ಚಿಮ್ಮಿ ಅಕ್ಕಪಕ್ಕದಲ್ಲಿ ಆಸೀನರಾದವರಿಗೆ ಪ್ರೋಕ್ಷಣೆಯಾಯಿಯಿತು. ಎಷ್ಟೊಂದು ರಸಭರಿತ ಸೇಬು! ಅದೆಷ್ಟು ರುಚಿ! ತೀರಾ ಅಗ್ಗ. ಒಳ್ಳೆಯ ಜಾತಿಯ ಅಗತಾನೇ ಕಿತ್ತ ತಾಜಾ, ರುಚಿಯಾದ ಸೇಬಿನ ಬೆಲೆ ಹೆಚ್ಚೆಂದರೆ 30 ರೂ ಕಿಲೊ. 20 ರೂಪಾಯಿ. ಪೀರ್ 20 ರೂಪಾಯಿಗೆ ಕಿಲೊ. ತಳ್ಳುವ ಗಾಡಿಯಲ್ಲಿ ಮಾರುವುದು 10 ರುಪಾಯಿಗೆ ಒಂದು ಕಿಲೊ. ಎಲ್ಲ ಹಣ್ಣುಗಳೂ ರುಚಿ ಇದ್ದುವು.
ನಮ್ಮ ಮುಂದಿನ ಪ್ರಯಾಣದಲ್ಲಿ ಸೇಬನ್ನು ತಿನ್ನುದುರಲ್ಲಿ ಪೈಪೋಟಿ ನಡೆಯಿತು. ಸ್ವಲ್ಪ ದೂರ ಹೋದಾಗ ಕಾರು ನಿಲ್ಲಿಸಿದ ಡ್ರೈವರ್ಇಲ್ಲಿ ಗೈಡ್ ತೆಗೆದುಕೊಳ್ಳಿ. ಶಿಖರದ ತುದಿಗೆ ಹೋಗಲು ಗೈಡ್ ಬೇಕಾಗುತ್ತದೆಎಂದ. ಅವನ ಮಾತಿಗೆ ಒಪ್ಪಿ ಗೈಡಗೆ ನೀಡಬೇಕಾದ ಹಣದ ಬಗ್ಗೆ ಮಾತನಾಡಿ ಅವನನ್ನು ಹತ್ತಿಸಿಕೊಂಡೆವು. ಆತ 600ರೂಪಾಯಿ ಕೇಳಿದ.  ಜಿಗ್ ಜಾಗ್ ರೀತಿಯಲ್ಲಿ ಹಾವು ಸರಿದಂತೆ ಮೇಲೇರಿ ಗುಲ್ ಮಾರ್ಗ್ ತಲುಪಿದೆವು. ಫೈನ್, ದೇವದಾರು ಕಾಡುಗಳ  ನಡುವೆ ಮಾಡಿದ ರಸ್ತೆ ಇದು. ಬಾನೆತ್ತರದ ತಲಪಲು ಹಾತೊರೆಯುವ ಮರಗಳಿರುವ ದಾರಿ ಪ್ರಯಾಣಕ್ಕೆ ಉತ್ಸಾಹ ತುಂಬುತ್ತಿತ್ತು. ಮರಗಳಿರುವ ಪರ್ವತದ ಮೇಲ್ಭಾಗದ ಪಡಿಲ್ (ಸಮತಟ್ಟು) ಭಾಗವೇ ಕುರಿಗಾಹಿಗಳ ಗೌರಿಮಾರ್ಗ ಅಥವಾ  ಗುಲ್ ಮಾರ್ಗ್. ಇಲ್ಲಿ ವಾಹನಗಳ ಪ್ರಯಾಣದ ಕೊನೆಯ ಘಟ್ಟ. ಇಲ್ಲಿಂದ ಮುಂದಕ್ಕೆ ಕುದುರೆ ಹತ್ತಿ ಹೋಗಬೇಕು ಎಂದ ಗೈಡ್.



 ಗೌರಿಮಾರ್ಗವನ್ನು  ಸುಲ್ತಾನ್ ಯೂಸಫ್ ಕಂಡು ಹಿಡಿದ. ಮುಂದೆ ಗುಲ್ ಮಾರ್ಗ ಆಗಿ ಇದು ಜಹಂಗೀರನಿಗೂ ಅಚ್ಚು ಮೆಚ್ಚಿನ ವಿಹಾರ ಧಾಮ ಆಗಿತ್ತು. ಚಳಿಗಾಲದಲ್ಲಿ ಹಿಮದ ಜಾರುನೆಲದ ಪಂದ್ಯಾಟ ಇಲ್ಲಿ ನಡೆಯುತ್ತಿತ್ತು. ಹಿಮದ ಜಾರುನೆಲದ ಮೇಲೆ ಸ್ಕೂಟರ್ನ್ನು ಓಡಿಸುವ ಪಂದ್ಯವೂ ಇಲ್ಲಿ ನಡೆಯುತ್ತದೆ. ಹದಿನೆಂಟು ಬಿಲಗಳಿರುವ ಇಲ್ಲಿಯ ಗಾಲ್ಫ್  ವಿಶ್ವ ಪ್ರಸಿದ್ಧ.
 ನಮಗೆ ಇಲ್ಲಿಯ ಹೆಚ್ಚಿನ ಮಾಹಿತಿ ಇಲ್ಲದೆ ಗೈಡ್ನ್ನು ಅವಲಂಬಿಸುವುದು ಅನಿವಾರ್ಯ ಆಗಿತ್ತು. ಕುದುರೆ ಬಳಿ ಹೋದರೆ ಹಲವಾರು ಕುದುರೆ ಸವಾರರು ಬೆನ್ನು ಬಿದ್ದರು. ಕಾಲಿನ ಚೀಲ ಬೂಟು, ಕೋಟು ಧರಿಸಬೇಕು, ಮೇಲೆ ವಿಪರೀತ ಚಳಿ ಎಂದರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿ ಗೊಂದಲಗೊಳಿಸಿದರು. ಗಮ್ ಬೂಟು, ಕೋಟು, ಕುದುರೆ ಎಂದು ಒಬ್ಬೊಬ್ಬರಿಗೆ 1000ರೂಪಾಯಿಯ ಮೇಲಾಗಿತ್ತು. ಮುಖ್ಯವಾಗಿ ಕುದುರೆ ಮೇಲೆ ಇವರು ಹೇಳುವ ಮಾರ್ಗದಲ್ಲಿ ಹೋಗಲು ಎಂಟು ಗಂಟೆ ಬೇಕಿತ್ತು. ನಮ್ಮ ಕಾರ್ಯಕ್ರಮದ ಪ್ರಕಾರ 5 ಗಂಟೆಯ ಮೊದಲು ಶಂಕರಾಚಾರ್ಯ ಶಿಖರ ತಲುಪಬೇಕಿತ್ತು. ಹೀಗಾಗಿ ಹೆಗ್ಗಡೆಯವರುಕೋಟೂ ಬೇಡ ಕುದುರೆಯೂ ಬೇಡ. ಗಮ್ ಶೂ ಕೂಡಾ ಬೇಡ. ನಾನು ಲಡಾಕ್ನಲ್ಲಿ 2 ವರ್ಷ ಜೀವನ ಮಾಡಿ ಬಂದವ. ಬನ್ನಿ ನೀವು ಎಷ್ಟು ಎತ್ತರಕ್ಕೆ ಸಾಧ್ಯನೋ ಅಷ್ಟು ಎತ್ತರಕ್ಕೆಕೇಬಲ್ ಕಾರ್ನಲ್ಲಿ ಹೋಗಿ ಬರೋಣಎಂದರು. ನಾವೆಲ್ಲ ಶಿಸ್ತಿನ ಸಿಪಾಯಿಗಳಂತೆ ಹೆಗ್ಗಡೆಯವರ ಹಿಂದೆ ಹೋದೆವು. ಕೇಬಲ್ ಕಾರ್ ಬಳಿಗೆ ಹೋಗಲು  2 ಕಿಲೋಮೀಟರ್ ದೂರದ ನಡಿಗೆ ಇತ್ತು. ನಾವು ಕೇಬ್ಲ್  ಕಾರ್ ಬಳಿ ಹೋಗಿ ಒಂದನೆಯ ಘಟ್ಟಕ್ಕೆ ಗುಲ್ ಮಾರ್ಗ್ನಿಂದ ಕೊಂಗ್ದೋರಿಗೆ Gulmarg to Kongdori)  ಟಿಕೆಟ್ ಪಡೆದು ಕೇಬ್ಲ್ ಕಾರ್ ಹತ್ತಿದೆವು. ಒಂದನೆಯ ಹಂತಕ್ಕೆ 300 ರೂಪಾಯಿ. ಮಕ್ಕಳಿಗೆ 150/250 ರೂ.ಎರಡನೆಯ ಹಂತ ಸೇರಿ 500 ರೂಪಾಯಿ. ಟಿಕೆಟ್. ಸೈನಿಕರ ಸುಪರ್ದಿಯಲ್ಲಿ ಇವು ಇತ್ತು. ಇದೂ ಒಂದು ಹೊಸ ಅನುಭವ. ಸೃಷ್ಟಿಯ ಸೊಬಗನ್ನು ಸವಿಯುತ್ತಾ ಸಾಗುವ ಉತ್ಸಾಹ. ನಮ್ಮೊಂದಿಗೆ ಗೈಡ್ ಕೂಡಾ ಇದ್ದ. ಗುಲ್ ಮಾರ್ಗ್ನಿಂದ ಕೊಂಗ್ದೋರಿಗೆ ಕೇಬ್ಲ್ ಕಾರ್ ಮೇಲ್ಮುಖವಾಗಿ ಸಾಗುವಾಗ ನೆಲದ ಮೇಲೆ ಇರುವ ಡೇರೆಗಳು ಕಾಣುತ್ತಿದ್ದುವು. ಗುರ್ಜರರ ಬಗ್ಗೆ ತಿಳಿದಿದ್ದ ನಾನುಇವರು ಗುರ್ಜರರಾಎಂದು ಕೇಳಿದೆ. ಹೌದು ಎಂದ. ಇವರು ಹಿಂದುವಾಗಿ ಉಳಿದರಾ? ಎಂದಕ್ಕೆ ಆತ ಇಲ್ಲ ಮುಸ್ಲಿಮರು ಎಂದ. ನಾವು ಮಾತನಾಡಲಿಲ್ಲ. ಕುದುರೆ ಸವಾರರು ತೋರಿಸುತ್ತೇವೆ ಎಂದಿದ್ದ ಮಕ್ಕಳ ಉದ್ಯಾನವನವೂ ಇಲ್ಲಿಂದ ಕಾಣುತ್ತಿತು.
ಕೊಂಗ್ದೋರ್ನಲ್ಲಿ ಇಳಿದ ನಾವು ಸುತ್ತ ಕಣ್ಣಾಡಿಸಿದಾಗ ಅಲ್ಲಿ ಚಳಿಯಿರಲಿಲ್ಲ. ಸ್ವೆಟರ್ ಅಗತ್ಯವೂ ಇರಲಿಲ್ಲ. ಹೆಗ್ಗಡೆಯವರು ಸ್ವೆಟರ್ ಹಾಕದೆ ಬಂದಿದ್ದರು. ಇಲ್ಲಿ ಅಬ್ಬಾ ಎನ್ನುವ ಪ್ರಕೃತಿ ಸೌಂದರ್ಯ ಕಾಣಲಿಲ್ಲ. ಆದರೆ ಮೇಲಿನ ಶಿಖರ ನಮ್ಮನ್ನು ಕೈಬೀಸಿ ಕರೆಯುಉತ್ತಿತ್ತು. ‘ ಬಾ ನನ್ನಷ್ಟು ಎತ್ತರಕ್ಕೆಎಂದು. ಹೆಗ್ಗಡೆಯವರು ಒಂದೇ ಘಟ್ಟದ ಟಿಕೆಟ್ ಪಡೆದಿದ್ದರು. ನನ್ನಲ್ಲಿ ಮತ್ತು ಜೀವನ ಶೆಟ್ಟರಲ್ಲಿ ಇದ್ದ ಉತ್ಸಾಹ ಹೆಗ್ಗಡೆ ಮತ್ತು ಸುಯೋಜರಿಗೆ ಇಲ್ಲ. ಹೀಗಾಗಿ ಹೆಗ್ಗಡೆಯವರ ಮತ್ತು ಜೀವನ್ಶೆಟ್ಟರ ಬಳಿ ಮೇಲಿನ ಹಂತಕ್ಕೆ ಹೋಗೋಣ ಎಂದೆ. ಜೀವನ್ ಶೆಟ್ಟಿ ಅನುಮೋದಿಸಿದರು. ಸರಿ ಅಲ್ಲಿಯೇ ಟಿಕೆಟ್ ಪಡೆದು ಮೇಲಿನ ಹಂತಕ್ಕೆ -Kongdori to Apherwat  ಹೊರಟೆವು. ದಾರಿಯಲ್ಲಿ ಹಿಮದ ಪದರಗಳ ಮೇಲೆ ನಮ್ಮ ಕೇಬ್ಲ್ ಕಾರ್ ನೆರಳು ನಮ್ಮನ್ನು ಅನುಸರಿಸುತ್ತಿತ್ತು. ಇಲ್ಲಿ ಇಳಿಯುವಾಗ ನಿಜವಾಗಿ   ಖುಷಿ ಸಿಕ್ಕಿತು. ಸಮುದ್ರ ಮಟ್ಟದಿಂದ 13,800 ಕಿಲೋಮೀಟರ್ ಎತ್ತರದ ಶಿಖರದ ಮೇಲೆ ನಿಂತು ಸುತ್ತಲಿನ ಪ್ರಕೃತಿಯನ್ನು ನೋಡುವ ಅವಕಾಶ! ನನ್ನ ಮಟ್ಟಿಗೆ ಸೃಷ್ಟಿಯೇ ದೇವರು! ಅಂತಹ ದೇವರ ಸೃಷ್ಟಿ ಚಾತುರ್ಯ ನೋಡುವ ಮತ್ತೊಂದು ಮುಖ, ಬೇರೆಡೆ ಕಾಣದ ಮುಖ ಕಾಣುವ ಅವಕಾಶ! ಮಿಂಚು ಹೊಡೆದರೆ ಕೇಬಲ್ ಕಾರ್ಗೆ ಡೇಮೇಜ್ ಆಗುತ್ತದೆಯಂತೆ. ಚಳಿಗಾಳದಲ್ಲಿ 3 ಗಂಟೆಗೆ ªಟಿಕೆಟ್ ಮಾರಟ ನಿಂತು ಹೋಗುತ್ತದೆ. ಚಳಿಯ ಕಾಲದಲ್ಲಿ ಇಲ್ಲಿಯ ನೋಟವೇ ಅದ್ಭುತ ಎನ್ನುತ್ತಾರೆ. ನಾವು ಶೀಖರದಲ್ಲಿ ಇಳಿದಾಗ ನಾವೆಷ್ಟು ಎತ್ತರದಲ್ಲಿ ಇದ್ದೇವೆ ಎನಿಸಿತು. ರೋಮಾಂಚನ! ಸಮುದ್ರ ಮಟ್ಟಕ್ಕಿಂತ 13,550 ಎತ್ತರದಲ್ಲಿ ನಾವಿದ್ದೆವು. ಮುನ್ನಾದಿನ ಬಿದ್ದ ಹಿಮ ಅಲ್ಲಲ್ಲಿ ಪಸರಿಸಿತ್ತು. ಎತ್ತಿಕೊಂಡರೆ ಕೈ ಒದ್ದೆಯಾಗದಷ್ಟು ಗಟ್ಟಿ ಇತ್ತು ಹಿಮ.  ಕೇಬಲ್ ಕಾರ್ ಇಳಿಯುವ ಪುಟ್ಟ ಕಟ್ಟಡದಂತಹ ವ್ಯವಸ್ಥೆ  ಉಳಿದು ಯಾವುದೇ ಕಟ್ಟಡ ಇಲ್ಲ. ಮಾನವ ಸುಲಭದಲ್ಲಿ ಬರಲಾಗದ ಶಿಖರಗಳಲ್ಲವೆ?  ಇಲ್ಲಿಂದಲೂ ಸ್ವಲ್ಪ ಎತ್ತರ ಸುಮಾರು 3ಕಿಲೋಮೀಟರ್ ಹತ್ತಿದರೆ ಅದು ಶಿಖರದ ತುದಿ ಆಗುತ್ತಿತ್ತು. ಅಲ್ಲಿ ಸೈನಿಕರ ಕ್ಯಾಂಪ್ ಇತ್ತು. ಆದರೆ ಕಲ್ಲುಬಂಡೆಗಳನ್ನು ಮೆಟ್ಟಿ ಅಲ್ಲಿ ಹೋಗಲು ಕಷ್ಟ ಎಂದು ನಮ್ಮನ್ನು ಹೋಗಗೊಡಲಿಲ್ಲ. ಕೆಲವರು ಹೋದರು.  ಮೇಲೆ ನಿಂತಾಗ ಕೆಳಗಿನ ದೃಶ್ಯ ನೋಡುವುದೆ ಒಂದು ಆನಂದ. ಆಕಾಶದ ಸೂರ್ಯ ನಸು ನಗುತ್ತಾ ನಮ್ಮನ್ನು ಸ್ವಾಗತಿಸುತ್ತಿದ್ದ.  ನೆಲದ ಮೇಲೆ ಹಿಮದ ಹರಡು. ಅದರ ಮೆಲೆ ಎಳೆ ಬಿಸಿಲು! ಕುವೆಂಪುರವರ  “ಆನಂದಮಯ ಜಗ ಹೃದಯಎಂಬ ಕವನ ನೆನಪಾಯಿತು. ಆನಂದಮಯ ಸೃಷ್ಟಿ! ಓರೆ ಕೋರೆ ಶಿಖರದ ಬಳಿ ನಿಂತು ಫೋಟೋ ಕ್ಲಿಕ್ಕಿಸಲು ಅಲ್ಲಿ ಸ್ಥಳಾವಕಾಶ ಇರಲಿಲ್ಲ. ಆದರೂ ಸೂರ್ಯನ ಬಿಸಿಲಿನ ಜೊತೆ ಸಂಧಾನ ಮಾಡಿ ಕ್ಲಿಕ್ಕಿಸುವ ಅನಿವಾರ್ಯತೆ ಉಂಟಾಯಿತು.



ನಾವು ಮೇಲೆ ಹೋಗುವಾಗ ಅಲ್ಲಿಉಸಿರಾಟದ ತೊಂದರೆಯಿದೆ, ಆಮ್ಲಜನಕದ ತೊಂದರೆ ಇದೆ. ಚಳಿಗೆ ಕಾಳು ಹಿಮದ ಮೇಲೆ ಇಡಲಾಗದು...’ ಹೀಗೆಲ್ಲಾ ನಮ್ಮ ಗೈಡ್, ಮತ್ತು ಕುದುರೆಯವರು ಹೆದರಿಸಿದ್ದರು. ಹೆಗ್ಗಡೆಯರು ನೀಡಿದ ಧೈರ್ಯದಿಂದ ನಾವೆಲ್ಲ ಸ್ವೆಟರ್ನಲ್ಲಿ ಹೋದರೆ ಹೆಗ್ಗಡೆಯವರು ಸ್ವೆಟರ್ ಕೂಡಾ ಹಾಕಿರಲಿಲ್ಲ. ಸುಯೋಜ ಮಾಮೂಲಿ ಚಪ್ಪಲ್ ಹಾಕಿದ್ದರು. ಎಲ್ಲವೂ ಮಾಮೂಲಿಯಾಗಿತ್ತು ಉಸಿರಾಟದ ತೊಂದರೆಯಾಗಲೀ ಚಳಿಯಾಗಲೀ ಇರಲಿಲ್ಲ. ಹಿತವಾದನುಭವ. ಇಲ್ಲಿ ಕಾಫಿಯ ವ್ಯವಸ್ಥೆ ಇತ್ತು. ನಮ್ಮ ಗೈಡ್ಗೆ ಕೇಳಿದೆವು. “ ನೀನು ಗೈಡ್ ಆಗಿ ಬಂದಿದ್ದೀಯ. ಎನೂ ವಿವರಿಸಲೇ ಇಲ್ಲ.” “ಇದೇ ಇರುವುದು. ಬೇರೆ ಏನೂ ಇಲ್ಲ ವಿವರಿಸಲುಎಂದ. ಇದು ಸುಲಿಗೆ ಎನಿಸಿತು. ಇಷ್ಟಕ್ಕೇ ಗೈಡ್ ಅವಶ್ಯಕತೆ ಯಾಕೆ? ಆತ ಹೊರೆ! ನಾವು ಮರಳಿ ಬಂದಾಗ ಗಂಟೆ 12.15 ಆಗಿತ್ತು. ಆದರೆ ಟ್ಯಾಕ್ಸಿಯವನು ನಾಪತ್ತೆ. ಮಧ್ಯಾಹ್ನದ ಊಟವನ್ನಾದರೂ ಮುಗಿಸೋಣ ಎಂದುವೈಷ್ಣವಿ ಹೊಟೇಲ್ಬೋರ್ಡು ನೋಡಿ ಹೋದೆವು. ಇಲ್ಲಿ ಅನೇಕವೈಷ್ಣವಿ ಹೊಟೆಲ್ಗಳಿದ್ದುವು”  ಎಲ್ಲವನ್ನೂ ನಡೆಸುವವರು ಮುಸ್ಲಿಮರು. ಆದರೆ ಇಲ್ಲಿ ಸಸ್ಯಹಾರ ಮಾತ್ರ ಒದಗಿಸಲಾಗುತ್ತಿತ್ತು.
ನಾವುಪರೋಂಟ್ತಿಂದು ಹೊರನಡೆದಾಗ ಟ್ಯಾಕ್ಸಿಯವ ಬಂದ.
ಮರಳಿ ಬರುತ್ತಾ ಗೈಡನ್ನು ದಾರಿಯಲ್ಲಿ ಇಳಿಸಿ ಯಾವ ಮಾತೂ ಆಡದೆ ಆತ ಹೇಳಿದ್ದ ಹಣ ನೀಡಿದೆವು. ಇವೆಲ್ಲವೂ ಒಂದು ಸರ್ಕಲ್. ನಾವು ಪ್ರವಾಸಿಗರು ಅದರಲ್ಲೂ ಹಿಂದುಗಳು ಇವರನ್ನು ಎದುರು ಹಾಕಿಕೊಳ್ಳುವುದು ಸಾಧ್ಯ ಇಲ್ಲ. ಟ್ಯಾಕ್ಸಿಯವನೂ, ಒಟ್ಟು ವ್ಯವಸ್ಥೆಯ ಒಳಗೆ ಇರಲೇ ಬೇಕಾಗುತ್ತದೆ. ಬುದ್ಧಿವಂತರು ಅವರ ಶೋಷಣೆಯಿಂದ ತಪ್ಪಿಸಿಕೊಳ್ಳಬಹುದು. ನಮಗೆ ಭೇಟಿಯಾದ ಪ್ರವಾಸಿ ತಂಡವೊಂದು ಕುದುರೆ ಮೇಲೆ ಕುಳಿತು ಅವರು ಹೇಳಿದ್ದನ್ನೆಲ್ಲ ತೊಟ್ಟು, ಕೇಳಿದ್ದಷ್ಟು ನೀಡಿ, ಕುಂಡೆ ನೋಯಿಸಿ ಕುದುರೆ ಹತ್ತಿ ಮೇಲೆ ಹತ್ತದೆ ಬರೇ ಶಿಖರದ ತಳಭಾಗದಲ್ಲಿ ಸುತ್ತು ಹಾಕಿ ಮಕ್ಕಳ ತೋಟ ನೋಡಿ ಮರಳಿದರಂತೆ. ಶಿಖರ ಹತ್ತಲು ಆಗಲಿಲ್ಲ. ಕಾರಣ ಶಿಖರದ ಮೇಲೆ ಕುದುರೆ ಹತ್ತುವುದಿಲ್ಲ. ನಾವು ಕೇಬಲ್ ಕಾರ್ನಲ್ಲಿ ಹತ್ತಿದೆವು ಎಂದಾಗಎಲ್ಲವೂ ಮೋಸ!’ ಎಂದರು. ಆದರೆ ಪ್ರವಾಸೋದ್ಯಮವನ್ನು ಅವಲಂಬಿಸಿ ಬದುಕುತ್ತಿದ್ದ ಅವರ ಬಡತನವನ್ನು ನೋಡುವಾಗಮೋಸವೂ ಅನಿವಾರ್ಯ ಕರ್ಮ ಇವರಿಗೆಎಂದೆನಿಸುತ್ತದೆ. ಆದರೆ ಹಿಂದುಗಳನ್ನು ಅಮಾನುಷವಾಗಿ ಇಲ್ಲಿಂದ ಓಡಿಸುವಾಗ ಇದನ್ನೆಲ್ಲ ಯೋಚಿಸಬೇಕಿತ್ತು ಎಂದೆನಿಸಿತು. ಶ್ರೀಮಂತರು ವ್ಯಾಪಾರಕ್ಕಾಗಿ ಕಾಶ್ಮೀರದಿಂದ ಹೊರಗೂ ಹೋಗುತ್ತಾರೆ. ಆದರೆ ಬಡ ಶ್ರಮ ಜೀವಿಗಳು ಪ್ರವಾಸಿಗರನ್ನು ಅವಲಂಬಿಸಿ ಬದುಕುತ್ತಿದ್ದಾರೆ.

ನಾವು ಶಂಕಾರಾಚಾರ್ಯ ಶಿಖರದ ಬಳಿ ಐದು ಗಂಟೆಯ ಮೊದಲು ತಲುಪಬೇಕಿತ್ತು.


All rights reserved © Indira Hegde

No comments:

Post a Comment