ಜಮ್ಮು
ನಗರದ ರಘುನಾಥ ಮಂದಿರ:
ಹುಲಿ
ಮತ್ತು ಆಡು ಒಂದೇ ನದಿಯ
ಒಂದೇ ಭಾಗದಲ್ಲಿ ಒಟ್ಟಿಗೆ ನೀರು ಕುಡಿಯುವುದನ್ನು
ಕಂಡ ರಾಜ ಜಂಬೂ ಇಲ್ಲಿ
ರಘುನಾಥ ಮಂದಿರವನ್ನು ನಿರ್ಮಿಸುತ್ತಾನೆ. ರಘುನಾಥ ಮಂದಿರ ಜಮ್ಮು
ನಗರದ ಪ್ರಮುಖ ಆಕರ್ಷಣೆ. ಯಾತ್ರಾರ್ಥಿಗಳಿಗೆ
ಮಾತ್ರವಲ್ಲ ಪ್ರವಾಸಿ ತಾಣವಾಗಿಯೂ ಇದು
ಆಕರ್ಷಣೆಯನ್ನು ಪಡೆದಿದೆ. ಅನೇಕ ಗುಡಿಗಳ ಸಮೂಹ
ಇದು. ಉತ್ತರಭಾರತದ ವಿಶಾಲ ಭೂಪ್ರದೇಶ ಇರುವ
ದೇವಸ್ಥಾನಗಳಲ್ಲಿ ಇದೂ ಒಂದು. ಕ್ರಿ.ಶ. 1835ರಲ್ಲಿ ಜಮ್ಮು
ಕಾಶ್ಮೀರದ ಅರಸ ಮಹರಾಜ ಗುಲಾಬ್
ಸಿಂಗ್ ಈ ದೇವಸ್ಥಾನವನ್ನು ಕಟ್ಟಲು
ಆರಂಭಿಸುತ್ತಾನೆ. ಆತನ ಮಗ ದೇವಸ್ಥಾನದ
ಕೆಲಸವನ್ನು ಮುಗಿಸುತ್ತಾನೆ. ಶ್ರೀಮಂತ ದೇವಸ್ಥಾನ ಇದು.
ಇಲ್ಲಿ ರಕ್ಷಣಾ ಇಲಾಖೆಯ ಭದ್ರತಾ
ವ್ಯವಸ್ಥೆ ಜೋರಾಗಿಯೇ ಇದೆ. ನಮ್ಮನ್ನು ನೋಡಿದ
ಒಬ್ಬ ಭದ್ರತಾ ಸಿಬ್ಬಂದಿ ‘ಕರ್ನಾಟಕದಿಂದ
ಬಂದಿರಾ’ ಎಂದು ಕನ್ನಡದಲ್ಲಿ ಕೇಳಿದೆ.
ನಮ್ಮ ಮೊಗದಲ್ಲೂ ಆತ್ಮೀಯ ಮಂದಹಾಸ ಮಿನುಗಿತು.
ಆತ ಉತ್ತರಕರ್ನಾಟಕದವ. “ದೇವಸ್ಥಾನದ ಒಳಗೆ ಜೋಕೆ. ಇಲ್ಲಿ
ಇರುವ ಪಂಡಿತರು ಲೂಟಿಕೋರರು. ನಿಮ್ಮ
ಜೋಬು ಖಾಲಿ ಮಾಡಲು ಪ್ರಯತ್ನಿಸುತ್ತಾರೆ
ತಟ್ಟೆಗೆ ದುಡ್ಡು ಹಾಕುವ ಅಗತ್ಯ
ಇಲ್ಲ.’ ಎಂದೆಲ್ಲ ವಿವರಿಸಿ ‘ಸಂಜೆಯಾಗುತ್ತಾ
ಶರಾಬಿಗಳಾಗುತ್ತಾರೆ. ಅವರಿಗೆ ತಟ್ಟೆಗೆ ಬಿದ್ದ
ಹಣದಿಂದಲೇ ಮದವೇರಿದೆ’ ಎಂದ. ನಾವು ಬೆಚ್ಚಿ
ಬಿದ್ದೆವು.
ಈ
ಮಂದಿರದ ಪ್ರವೇಶ ದ್ವಾರವೆ ಭದ್ರವಾಗಿತ್ತು.
ಮೊಘಲರ ಶೈಲಿಯ ಪ್ರಭಾವ ಈ
ದೇವಸ್ಥಾನದ ವಾಸ್ತುವಿನ ಮೇಲಾಗಿದೆಯೆನ್ನುತ್ತಾರೆ. ಒಳಗಡೆ ಹೋಗುವಾಗ ವಿಶಾಲ
ಪ್ರಾಂಗಣ ಎದುರಾಯಿತು. ಉತ್ತರ ಭಾರದತ ಯಾವ
ದೇವಸ್ಥಾನವೂ ಇಷ್ಟು ವಿಶಾಲ ಪ್ರದೇಶವನ್ನು
ಹೊಂದಿಲ್ಲವೆನ್ನುತ್ತಾರೆ. ಒಟ್ಟು ಏಳು ಗುಡಿಗಳಿದ್ದು
ಏಳು ಗುಡಿಗಳಿಗೂ ಪ್ರತ್ಯೇಕ ಶಿಖರ ಇದೆ. ತಮ್ಮ
ತಮ್ಮ ಗುಡಿಯ ಮುಂದೆ ನಿಂತ
ಅರ್ಚಕರು ಭಕ್ತರ ಜೊತೆ ಮಾತನಾಡುತಾ
ಅರ್ಚಣೆ ಮಾಡುತ್ತಾ ಹೊಸಬರನ್ನು ಕಂಡು “ಆವೋ ಆವೋ”
ಎನ್ನುವಾಗ ಬೆಂಗಳೂರಿನ ಚಿಕ್ಕ ಪೇಟೆ ಬೀದಿಯಲ್ಲಿ
ನಡೆಯುವವರನ್ನು ಸೀರೆ ವ್ಯಾಪಾರಕ್ಕೆ ಅಂಗಡಿಗೆ
ಬರಲು ಬೀದಿಯಲ್ಲಿ ನಿಂತ ಹುಡುಗರು ಒತ್ತಾಯಿಸುವುದು
ನೆನಪಾಯಿತು.
ಈ
ದೇವಸ್ಥಾನದ ಒಳಭಾಗ ಚಿನ್ನದ ಲೇಪನವನ್ನು ಹೊಂದಿದೆ.
ನಾವು ರಘುನಾಥನ ಗರ್ಭಗುಡಿಯ ಬಳಿ
ಮೊದಲು ಹೋದೆವು. ಅಲ್ಲಿ 500ರ ನೋಟುಗಳನ್ನು ಒಂದು
ದೊಡ್ಡ ಹರಿವಾಣದಲ್ಲಿ ನೀಟಾಗಿ ಜೋಡಿಸಿದ್ದರು. ದೇವರಿಗೆ
ನೋಟಿನ ಆರತಿ ಎತ್ತಲು ಜೋಡಿಸಿದಂತೆ
ಆ ಹರಿವಾಣ ಇತ್ತು.
ಭಕ್ತಾದಿಗಳಿಗೆ ಆ ತಟ್ಟೆ ತೋರಿಸಿ
“ಹಾಕಿ..ಹಾಕಿ..ದೇವರಿಗೆ ಹಣ
ಹಾಕಿ’ಎಂದು ಹಿಂದಿಯಲ್ಲಿ ಒತ್ತಾಯಿಸುತ್ತಾ.
ದೇವರಿಗೆ ಬಗ್ಗಿ ನಮಸ್ಕರಿಸಲು ಹೇಳಿ
ಬಾಗಿದವರ ಬೆನ್ನಿಗೆ ಗುದ್ದುತ್ತಿದ್ದ ಪೂಜಾರಿ. ಇದೆಂತ ಆಶೀರ್ವಾದ ಎಂದು ಕೊಂಡೆವು. ಇವನ್ನೆಲ್ಲ
ನೋಡುತ್ತಾ ರಾಮ ಸೀತೆ ಲಕ್ಷ್ಮಣರ
ಅಮೃತ ಶಿಲೆಯ ಶಿಲ್ಪಗಳು ಅಸಾಹಕತೆಯಿಂದ
ನಿಂತಿದ್ದುವು. ದೋಗ್ರಾ ಜನರ ಅಧಿದೇವತೆಗಳಿವರು. ಭಕ್ತರು ಹತ್ತು ರೂಪಾಯಿ
ನೀಡಿದರೆ ಅದನ್ನೆತ್ತಿ ತಟ್ಟೆಯ ಆಚೆ ಬದಿ
ಕೆಳಗೆ ಹಾಕುತ್ತಿದ್ದರು. ಅಲ್ಲಿ ಎಷ್ಟು ಹಣ
ಶೇಖರವಾಗಿದೆ ಎಂದು ನಮಗೆ ಕಾಣುತ್ತಿರಲಿಲ್ಲ.
ನಾವು ಸರದಿಯಲ್ಲಿ ನಿಂತು ತಟ್ಟೆಗೆ ಹಾಕದೆ
ಮರಳಿದೆವು. ಪುಣ್ಯವಶಾತ್ ಆತ ಯಾವುದೇ ಪ್ರತಿಕ್ರಿಯೆ
ನೀಡಲಿಲ್ಲ.
ಯಾವುದೇ
ಅಬ್ರಹ್ಮಣ ಅರ್ಚಕರಿರುವ ಜನಪಸ ಗುಡಿಗಳಲ್ಲಿ ಹಣವು
ಮುಖ್ಯವಾಘುವುದೇ ಇಲ್ಲ. ಅಲ್ಲಿ ಜನರ
ಭಕ್ತಿಯೇ ಮುಖ್ಯ. ಆದರೆ ಬ್ರಾಹ್ಮಣ
ಅರ್ಚಕರಿರುವ ಇಂತಹ ಶಿಷ್ಟ ಪರಂಪರೆಯ
ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಭಕ್ರ
ಹಣವೇ ಪ್ರಧಾನ. ಜನರನ್ನು ಅಕರ್ಷಣೆಗೊಳಿಸಲು
ಕಟ್ಟಡಗಳೂ ಮುಖ್ಯವಾಗುತ್ತವೆ.
ಮರಳುವಾಗ
ಹೊರಾಂಗಣದ ವೈಷ್ಣವಿಯ ಗುಡಿ ಕಂಡಿತು. ಒಳಗೆ
ನಡೆದೆವು. ಅಲ್ಲಿರುವ ಹಾಲ್- ಚಾವಡಿ ಕಿಂಡಿಯಲ್ಲಿ
ವೈಷ್ಣವಿಯ ಅಲಂಕೃತ ಶಿಲ್ಪ ಕಂಡಿತು.
ನೆಲದ ಮೇಲೆ ಅನೇಕ ಪಿಂಡಿಗಳಿದ್ದುವು.
ಪಿಂಡಿಗಳಿಗೆ ಪ್ರದÀಕ್ಷಿಣೆ ಹಾಕುತ್ತಾ
ನಾವು ವೈಷ್ಣವಿಯ ಕಿಂಡಿಯತ್ತ ಸಾಗುತ್ತಿದ್ದೆವು. ಮುಂದೆ ಎಸ್. ಅರ್
ಹೆಗ್ಗಡೆ. ಅವರ ಹಿಂದೆ ನಾನು ನನ್ನ
ಹಿಂದೆ ಎಮ್ ಜೆ. ಶೆಟ್ಟಿ.
ಅವರ ಹಿಂದೆ ಸುಯೋಜ. ಅಷ್ಟರಲ್ಲಿ
ಭಕ್ತನೊಬ್ಬನ ಬೆನ್ನಿಗೆ ಜೋರಾಗಿ ಬಡಿದ ಸದ್ದಿಗೆ
ನೆರೆದವರು ಬೆಚ್ಚಿಬಿದ್ದರು. ಇಂತಹ ಗುದ್ದನ್ನು ನಾವು
ತುಳುವಿನಲ್ಲಿ ‘ಗುಡ್ದಮ್’ ಎನ್ನುತ್ತೇವೆ. ಎಲ್ಲರ ಕಣ್ಣಿನಲ್ಲೂ ಅಚ್ಚರಿ.
ಹೆಗ್ಗಡೆಯವರ ಹಿಂದೆ ಹೋದ ನನಗೆ
ಪೈಸೆ ಡಾಲೋ ಪೈಸೆ ಡಾಲೋ
ಎಂದು ಒತ್ತಾಯಿಸಿದಾಗ ನಾನೆಂದ ‘ನಾವು ಬಂದಿರೋದು
ಮಾತೆಯಿಂದ ಪಡೆಯಲು. ಅವಳಿಗೆ ನೀಡಲಲ್ಲ.
ಅವಳಿಗೆ ಕೊಡಲು ನಾವಾರು?’ ಅವನು
ತಟ್ಟನೆ ಉತ್ತರಿಸಿದ. “ಮಾತಾ ನಿನ್ನ ಗಂಡನಿಗೆ
ಕೊಟ್ಟಿದ್ದಾಳೆ. ನಮಗೆ ಎನು ಕೊಟ್ಟಿದ್ದಾಳೆ?”
ಎಂದ. ನಾನು ಆಶ್ಚರ್ಯಗೊಂಡೆ. ನಮ್ಮ
ಮೊಗದ ಬಾವ ಗಮನಿಸಿಯೋ ಎನೋ
ನನ್ನ ಹಿಂದೆ ಬಂದ ಜೀವನ್
ಶೆಟ್ಟಿಯವರ ಬೆನ್ನಿಗೆ ಮೆತ್ತಗೆ ಗುದ್ದಿದ ಪಂಡಿತ.
ಆದರೆ ನನಗೆ ಆತ ‘ಮಾತಾ
ಕೊಟ್ಟಿದ್ದು ನಿನ್ನ ಗಂಡನಿಗೆ’ ಎಂದು
ಹೇಳಿದ್ದರ ಮರ್ಮ ತಿಳಿಯಲಿಲ್ಲ. ಆಗ
ಹೆಗ್ಗಡೆಯವರು ಹೇಳಿದರು “ಆತ ನನಗೆ ಒಂದು
ರೂಪಾಯಿ ನಾಣ್ಯ ಕೊಟ್ಟು ‘ದೇವಿಯ
ಪ್ರಸಾದ ಇದು ಮಾತೆ ನಿನಗೆ
ಇನ್ನೂ ಹೆಚ್ಚು ಕೊಡುತ್ತಾಳೆ’ ಎಂದ.
ನಾನು ಅದನ್ನು ಜೋಬುಗಿಳಿಸಿ ಬಂದೆ.
ತಟ್ಟೆಗೆ ಏನೂ ಹಾಕಲಿಲ್ಲ.” ಎಂದರು.
ಮುಂದೆ ಅದೇ ಅಂಗಣದಲ್ಲಿ ಇರುವ
ಯಾವ ದೇವರ ಬಳಿಯೂ ಹೋಗುವ
ಮನಸ್ಸಾಗಲಿಲ್ಲ.
ಸಂಸ್ಖøತ ಹಸ್ತ ಪ್ರತಿಗಳ
ಭಂಡಾರವೇ ಈ ದೇವಾಲಯದಲ್ಲಿ ಇದೆ
ಎಂದು ಗೊತ್ತಾಯಿತು. ಆದರೆ ನಾವೇನೂ ಸಂಸ್ಕøತ ಬಲ್ಲವರಲ್ಲವಲ್ಲ.
‘ರಣಬಿರೇಶ್ವರ
ಚಾರ್ ದಾಮ
ಜಮ್ಮುವಿನ
ನಗರದಲ್ಲಿ ರಣಬೀರೇಶ್ವರ ದೇವಾಲಯ ಇದೆ. ನಮ್ಮ
ಟ್ಯಾಕ್ಸಿ ಇಳಿಜಾರು ಕಾಂಕ್ರಿಟ್ ರಸ್ತೆಯಲ್ಲಿ
ನಿಂತಿತು. ದೇವಸ್ಥಾನ ಜಮ್ಮು ತಾವಿ ನದಿಗೆ
ಮುಖಮಾಡಿದೆ. ನದಿಗೆ ಇಳಿಯಲು ಮೆಟ್ಟಲುಗಳಿವೆ.
ದೇವಸ್ಥಾನ ತಗ್ಗು ಪ್ರದೇಶದಲ್ಲಿ ಇರುವುದರಿಂದ
ನದಿಗೆ ಹತ್ತಿರವೇ ಇದೆ. ರಕ್ಷಣಾ ವ್ಯವಸ್ಥೆ
ಚೆನ್ನಾಗಿದೆ.
ದೋಗ್ರಾ
ಅರಸ ರಣಬೀರ್ 1883ರಲ್ಲಿ ಈ ಮಂದಿರವನ್ನು
ಕಟ್ಟಿದ. ಅವನ ಬೃಹತ್ ಶಿಲ್ಪವನ್ನು
ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ರಣಬೀರ ರಾಜ ಪ್ರತಿಷ್ಠಾಪಿಸಿದ
ಈ ಶಿವ ದೇವಸ್ಥಾನ
‘ರಣಬಿರೇಶ್ವರ’ನೆಂದು ಕರೆಯಲ್ಪಟ್ಟಿದೆ. ಸುಮಾರು
7/7.5 ಅಡಿ ಎತ್ತರದ ಶಿವನ ಲಿಂಗ
ಇಲ್ಲಿಯ ಮುಖ್ಯ ಆಕರ್ಷಣೆ. ಪಾಣಿ
ಪೀಠ ಬೆಳ್ಳಿಯದು. ಈ ಬೃಹತ್ ಲಿಂಗದ
ಸುತ್ತ ಸ್ಪಟಿಕ ಲಿಂಗಗಳಿವೆ. ಎತ್ತರವಾದ
ಶಿವನ ಮೂರ್ತಿ ಶಿಲ್ಪವೂ ಇದೆ.
ನರ್ಮದಾ ನದಿಯಿಂದ ತಂದ ಅನೇಕ
ಸಾಲಿಗ್ರಾಮ ಶಿಲೆಗಳಿಗೂ ಇಲ್ಲಿ ಪೂಜೆ ನಡೆಯುತ್ತಿದೆ.
ಇದನ್ನು
ಚಾರ್ ದಾಮ ಎಂದೂ ಕರೆಯುತ್ತಾರೆ
ಎಂದ ಟ್ಯಾಕ್ಸಿ ಚಾಲಕ. ಅನೇಕ ದೇವರನ್ನು
ಪ್ರತಿಷ್ಠಾಪಿಸಲಾಗಿರುವ ಇಲ್ಲಿ ಮುಖ್ಯ ನಾಲ್ಕು
ಗರ್ಭಗುಡಿಗಳು ಇರುವುದರಿಂದ ಚಾರ್ ಧಾಮ್ ಎಂದು
ಹೆಸರು ಎಂದನಾತ.
ಭಾರತದ
ಎಲ್ಲ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳನ್ನು ಇಲ್ಲಿ ರಚಿಸಲಾಗಿದೆ. ಅವುಗಳಿಗೆ
ಅರ್ಚನೆಯೂ ನಡೆಯುತ್ತದೆ. ಉಳಿದಂತೆ ಪಾರ್ವತಿಗಣಪತಿ, ಕಾರ್ತಿಕೇಯ,
ಮಹಾ ವಿಷ್ಣು, ಲಕ್ಷ್ಮಿ, ಸರಸ್ವತಿ,
ಕೃಷ್ಣ, ರಾಮ, ಸೀತೆ ನಂದಿ,
ಎಲ್ಲರೂ ಇಲ್ಲೇ ಒಟ್ಟಾಗಿದ್ದಾರೆ. ಹೊರ
ಆವರಣದ ಹಾಲ್ ನಲ್ಲಿ ಸೀತೆ
ಅಶೋಕವನದಲ್ಲಿ ಮಲಗಿರುವ ಸುಂದರ ಶಿಲ್ಪ
ನೋಡಲು ಗೊಂಬೆಯಂತೆ ಹಿತವಾಗುತ್ತದೆ. ಅವಳ ಬಳಿ ಸೇವಕಿಯರಂತೆ
ಕುಳಿತ ಶಿಲ್ಪಗಳಿವೆ. ಒಂದು ಕೈಯಲ್ಲಿ ಬೆಟ್ಟ
ಹಿಡಿದ ಹನುಮಂತ ಶಿಲ್ಪ ಆಕಾಶದೆತ್ತರಕ್ಕೆ
ಬೆಳೆದ ನಿಂತಿದೆ. ಇವೆಲ್ಲವನ್ನೂ ಒಬ್ಬ ಸಾಧು ನಡೆಸಿಕೊಡುತ್ತಿದ್ದಾರೆ.
ಎಂದ ಡ್ರೈವರ್. ಎಲ್ಲವೂ ಅಚ್ಚು ಕಟ್ಟು.
ಹಣಕ್ಕಾಗಿ ಯಾರೂ ಅಸಹ್ಯವಾಗಿ ನಡೆದುಕೊಳ್ಳಲಿಲ್ಲ
ಅಥವಾ ಹಲ್ಲುಗಿಂಜಲಿಲ್ಲ. ಎಲ್ಲವೂ ವ್ಯಸ್ಥಿತವಾಗಿನಡೆಯುತ್ತಿತ್ತು.
ಕಾಳಿ
ಮಾ ದೇವಸ್ಥಾನ
ಜಮ್ಮು
ನಗರದಿಂದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಮ್ಮು ತಾವಿ ನದಿ
ಹರಿಯುತ್ತಿದೆ. “ಇಲ್ಲಿ ಕಾಳಿಮಾತಾ ಮಂದಿರ
ಮುಖ್ಯ ಶಕ್ತಿ ಸ್ಥಳ ಇದನ್ನು
ನೋಡಲೇ ಬೇಕು” ಎಂದ ನಮ್ಮ ಡ್ರೈವರ್.
ಇಲ್ಲಿಂದ ಪಾಕಿಸ್ತಾನ 15 ಕಿಲೋಮೀಟರ್ ದೂರವಂತೆ. ಈ ನದಿಯ ದಂಡೆಯ
ಮೇಲೆ ದೋಗ್ರಾ ಅರಸರಿಂದ ರಚಿಸಲ್ಪಟ್ಟ
‘ಬಾಹು’ಎಂಬ ಹೆಸರಿನ ಕೋಟೆ
ಇದೆ. ವಾಹನ ಚಾಲಕನ ಪ್ರಕಾರ
ಜಮ್ಮುವಿನ ಜನ ಸಂಖ್ಯೆಯಲ್ಲಿ ಸುಮಾರು
80% ದೋಗ್ರಾ ಜನರು. ಭಾನುವಾರ ಮತ್ತು ಮಂಗಳವಾರ
ಇಲ್ಲಿ ಭಕ್ತರ ಸಂಖ್ಯೆ ಹೆಚ್ಚು. ಇದು ದೊಗ್ರಾ ಜನರ
ಕುಲ ದೈವ. ಈಕೆಯನ್ನು ‘ಮಹಾ
ಮಾಯ’ ‘ಮಹಾ ಕಾಳಿ’ ಎಂದೆಲ್ಲ ಕರೆಯುತ್ತಾರೆ.
ಪಾಕಿಸ್ತಾನ
ಕಡೆಯಿಂದ ಅಥವಾ ಮೊಘಲರು, ಮುಸ್ಲಿಮರು
ಧಾಳಿಯಿಡಲು ಬರುತಿದ್ದರೆ ಅವರಿಗೆ ಜಮ್ಮು ತಾವಿ
ಸೇತುವೆಯ ಈಚಿನ ಭಾಗದಿಂದ ಏನೋ
ಕಾಣಿಸುತ್ತಿರಲಿಲ್ಲವಂತೆ. ಮಂಜು ಕವಿದು ದರಷ್ಟಿ
ಗೋಚರವಾಗುತ್ತಿರಲಿಲ್ಲವಂತೆ. ಹೀಗಾಗಿ ಪಾಕಿಸ್ತಾನಕ್ಕೆ ತೀರಾ
ಹತ್ತಿರವಿದ್ದರೂ ಈ ಕಾಳಿ ಮಾ
ದೇವಿಯ ಹತ್ತಿರ ಯಾರಿಗೂ ಬರಲಾಗಲಿಲ್ಲ
ಎನ್ನುತ್ತಾರೆ ಸ್ಥಳೀಯುರು.
ಕಾಳಿ
ಮಾತಾ ದೇವಸ್ಥಾನಲಿರುವ ಸ್ಥಳ ಮೂಲತಃ ಬೆಟ್ಟದ
ಕಾಡು ಪ್ರದೇಶ. ಕಾಳಿ ಮಾತಾ
(ಃಚಿತಿeಥಿ Wಚಿಟi ಒಚಿಣಚಿ
i) ಮಂದಿರ ಜಮ್ಮು ತಾವಿ ನದಿಗೆ
ಮುಖ ಮಾಡಿ ಕಟ್ಟಲ್ಪಟ್ಟಿದೆ. 300 ವರುಷಗಳ
ಹಿಂದೆ ಖಚಿರಿಚಿ ಃಚಿhuಟoಛಿhಚಿಟಿ ಎಂಬವನಿಂದ
ನಿರ್ಮಿಸಲ್ಪಟ್ಟ ಕಾಲಿ ಮಾ ಗುಡಿಯ
ಹೊರ ಕೋಟೆ ದೋಗ್ರಾ ಅರಸರಿಂದ
ಪುನಃನಿರ್ಮಾಣ ಆಗಿದೆ. ಃಚಿgh-e-ಃಚಿhu
ಎಂಬ ಹೆಸರಿನ ತೋಟವನ್ನೂ ಇದರೊಳಗೆ
ನಿರ್ಮಿಸಿದ್ದಾರೆ. ಕೋಟೆಯ ಒಳಗೆ ಪ್ರವೇಶವಾಗುತ್ತಲೇ
ಅಂಗಡಿ ಬೀದಿಗಳಿವೆ. ಈ ಅಂಗಡಿಗಳ ಓಣಿಯಲ್ಲಿ
ಸುಮಾರು ಸುತ್ತು ನಡೆದು ಕಾಳಿಮಾ
ಗುಡಿ ತಲುಪಬೇಕು. ನಾವು ನಡೆಯುವಾಗ ‘ಆವೋ ಆವೋ ಮಾತಾ
ಕೋ ಚಡಾವು’ ಎನ್ನುತ್ತಾರೆ ಅಂಗಡಿ
ಜನ. ಇದರ ಗುಡಿ ನೋಡಲು
ಕಾಳಿಮಾತಾ ಗುಡಿ ತುಳುನಾಡಿನ ಗುಡ್ಡದ
ಶಕ್ತಿ ದೈವದ (ಬೂತ) ಗುಡಿಗಳಂತೆ
ಇದೆ. ಕಾಳಿ ಮಾ ಗುಡಿ
ಒಂದೇ ಕೋಣೆಯ ಗುಡಿ. ಅಕ್ಕ
ಪಕ್ಕ ಕಟ್ಟಡ ಇದ್ದರೂ ಗರ್ಭಗುಡಿಯ
ಮುಂದೆ ಬಲಿಪೀಠ ಮಾತ್ರ ಇದೆ.
ಗರ್ಭಗುಡಿಯ ಒಳಗೆ ಹೋಗಿ ಕಾಳಿಯ
ಮುಂದೆ ನಿಂತು ಎಲ್ಲರೂ ಬೇಡಬಹುದು.
ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. (ಭೂತದ ಗುಡಿಗಳ ಒಳಗೆ
ಎಲ್ಲರಿಗೂ ಪ್ರವೆಶ ಇಲ್ಲ) ವೈದಿಕ
ದೇವಸ್ಥಾನದ ಸ್ವರೂಪ ಇಲ್ಲಿ ಕಾಣಲಿಲ್ಲ.
ಜನಪದ ಸಂಸ್ಕøತಿಯ, ನೆಲದ
ಸಂಸ್ಕøತಿಯ ದೈವ ಎಂದು
ಗೊತ್ತಾಗುತ್ತದೆ. ಬಲಿಕುಂಡದಲ್ಲಿ ಕಟ್ಟಿ ಹಾಕಿರುವ ಕೆಲವು
ಮೇಕೆ ಮತ್ತು ಕುರಿಗಳನ್ನು ಕಂಡೆವು.
ಅವು ಮಾತೆಗೆ “ಬಲಿಚಡಾನೆಕೆಲಿಯೆ” (ಬಲಿಗಾಗಿ)
ಅರ್ಪಿಸಿದ ಪ್ರಾಣಿಗಳು. ಆದರೆ ಇತ್ತೀಚಿನ ವರ್ಷಗಳಲ್ಲಿ
ಪ್ರಾಣಿ ಬಲಿ ಇಲ್ಲಿ ನಿಂತಿದೆ
ಎಂದು ಗೊತ್ತಾಯಿತು. ಆದರೂ ಪರಂಪರೆಯಿಂದ ಬಂದ
ನಂಬಿಕೆಗಳನ್ನು ಸಂಪ್ರದಾಯಗಳನ್ನು ಬಿಡಲಾಗದ ಭಕ್ತರು ತಮ್ಮ
ತಮ್ಮ ಹರಕೆಯ ಕುರಿ ಮೇಕೆಗಳನ್ನು
ಮಾತೆಯ ಗುಡಿಗೆ ತಂದು ಒಪ್ಪಿಸುತ್ತಾರೆ.
ತಾವು “ಬಲಿಚಡಾನೆಕೇಲಿಯೆ ” ಹುರಿ ಮೇಕೆ ನೀಡುವುದು.
ಗುಡಿಯ ವ್ಯವಸ್ತಾಪಕರು ಬಲಿನೀಡದೆ ಹೋದರೆ ಅದು ತಮ್ಮ
ಕೈ ಮೀರಿದ ಮಾತು ಎಂದು
ಕುರಿ ಮೇಕೆಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ.
ಇಂತಹ
ವ್ಯವಸ್ಥೆ ತುಳುನಾಡಿನಲ್ಲಿಯೂ ಇದೆ. ಹಿರಿಯಡ್ಕದ ವೀರ
ಭದ್ರ ಸಿರಿಆಲಡೆಯಲ್ಲಿ ಕೋಳಿಯನ್ನು ತಂದು ಬಲಿಗಾಗಿ ನೀಡುತ್ತಾರೆ.
.ಆ ದೇವಾಲಯದಲ್ಲಿ ಬ್ರಾಹ್ಮಣ ಅರ್ಚಕರ ವೈಷ್ಣವಾಗಮ ಅರ್ಚಣೆ
ಸೇರ್ಪಡೆಯಾದ ಮೇಲೆ ಕೋಳಿಯ ಬಳಿ
ನಿಂತಿದೆ. ಕೆಲವು ಭಕ್ತರು ತಾವು
ತಂದ ಕೋಳಿಯನ್ನು ಅಲ್ಲಿಯೇ ಬಿಟ್ಟು ಹೋದರೆ
ಕೆಲವರು ಕೋಳಿಯ ಬೆಲೆಯನ್ನು ದೇವರ
ಹುಂಡಿಗೆ ಹಾಕಿ ಹೋಗುತ್ತಾರೆ. ಧರ್ಮಸ್ಥಳದ
ಅಣ್ಣಪ್ಪನ ಬೆಟ್ಟಕ್ಕೂ ಕೋಳಿ ಎಸದು ಹೋಗಿ
ತಮ್ಮ ಪಾಲಿನ ಕಾನ್ಕೆಯನ್ನು ಕೊಟ್ಟು
ಹೋಗುವ ಸ್ಥಳೀಯ ಭಕ್ತರಿದ್ದಾರೆ. ಆಡಳಿತ
ವ್ಯವಸ್ಥೆ ಜನಪದ ಆಚರಣೆಗೆ ಪರಿವರ್ತನೆ
ತಂದರೂ ಪರಂಪರಾಗತ ನಂಬಿಕೆಗಳನ್ನು ಭಕ್ತರು ಅಷ್ಟು ಬೇಗ
ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ. ಜಮ್ಮುವಿನ ಕಾಳಿಮಾ ಕ್ಷೇತ್ರದಲ್ಲಿ ಪ್ರಾಣಿ
ಬಲಿಯನ್ನು ನಿಷೇಧಿಸಿರುವುದರಿಂದ ದೇವಸ್ಥಾನದ ಆಡಳಿತ ಮಂಡಳಿ ಈ
ಪ್ರಾಣಿಗಳನ್ನು ಹರಾಜು ಹಾಕಿ ಅದರ
ಹಣವನ್ನು ಹುಂಡಿಗೆ ಹಾಕುತ್ತಾರೆ ಎಂದು
ಗೊತ್ತಾಯಿತು.
ಜಮ್ಮುವಿನ
ತ್ರಿಕೂಟ ಶಿಖರದ ಮೇಲೆ ಕುಳಿತ
ವೈಷ್ಣವಿ ಕೂಡಾ ಈ ಕಾಳಿಮಾತೆಯ
ಅಂಶ ಎಂದು ನಂಬಿಕೆ ಇಲ್ಲಿ
ಇರುವುದರಿಂದ ಈ ಕಾಳಿ ಮಾತೆಯ
ಮೇಲೆ ಅತೀವ ಭಕ್ತಿ ಮತ್ತು
ಶ್ರದ್ಧೆ ಜನರಲ್ಲಿ ಇದೆ. ಕಾಲಿಮಾ
ದೇವಿಯ ಬಳಿ ಬಂದು ಭಕ್ತರು
‘ಮನ್ನತ್’ ಬೇಡಿದರೆ ಆಕೆ ನಿರಾಶೆಗೊಳಿಸುವುದಿಲ್ಲ
ಎನ್ನುವುದು ನಂಬಿಕೆ ಇಲ್ಲಿದೆ.
ಗುಡಿಯಿಂದ
ಈಚೆ ಬರುವಾಗ ದಾರಿಯಲ್ಲಿ ಮೂರು
ಎಳೆಯ ಬಾಲೆಯರು (ಪುಷ್ಪವತಿಯರಾಗದ)ಕನ್ಯಾಪೂಜೆಯ ವ್ರತ ಹಿಡಿದು ಕುಳಿತಿದ್ದರು.
ಇದು ಇಲ್ಲಿಯ ಸಂಪ್ರದಾಯ. ಅವರು
ಉಪವಾಸ ವ್ರತ ಹಿಡಿದು ಭಕ್ತರು
ಕೊಟ್ಟ ಭಿಕ್ಷೆಯಲ್ಲಿ ಆ ದಿನ ಕಳೆಯುತ್ತಾರೆ.
ನಾವು
ಮರಳುವಾಗ ಅಂಗಡಿ ಬೀದಿಗಳ ಮೂಲಕ
ಮರಳಲಿಲ್ಲ ಕೋಟೆಯ ಬಾಗಿಲು ನಮಗೆದುರಾಗಿ
ಕಂಡಿತು. ಹಳೆಯ ಕಾಲದ ಮರಗಳು
ಅದು ಕಾಡು ಪ್ರದೇಶ ಆಗಿತ್ತು
ಎನ್ನುವುದನ್ನು ಸಂಕೇತಿಸುತ್ತಿತ್ತು. ಮಣ್ಣಿನ ರಸ್ತೆ ಆದರೂ
ಇದೇ ವಾಸಿ ಎಂದು ಆ
ದಾರಿಯಿಂದ ಕಾಳಿಯ ಕೋಟೆಯಿಂದ ಹೊರನಡೆದೆವು.
ಜಮ್ಮುವಿನಲ್ಲಿ
ಟ್ಯಾಕ್ಸಿಗಳ
ಬಗ್ಗೆ ನಮಗೆ ಮೆಚ್ಚುಗೆಯಾಯಿತು. ಉತ್ತರ
ಭಾರತದಲ್ಲಿ ಎಲ್ಲಾ ಕಡೆ ಟ್ಯಾಕ್ಸಿ
ಅಸೋಷಿಯೇಷನ್ಸ್ ಇದೆ. ಹೀಗಾಗಿ ಎಲ್ಲಾ
ಟ್ಯಾಕ್ಸಿಯವರು ಒಂದೇ ಮೊತ್ತ ಪಡೆಯುತ್ತಾರೆ.
ನಾವು ಡ್ರೈವರ್ ಬಳಿ ಮಾತನಾಡಿ
ಟ್ಯಾಕ್ಸಿಯ ಹಣ ನೀಡಬೇಕಿಲ್ಲ. ಅಸೋಷಿಯನ್
ಹಣ ಪಡೆದು ರಸೀದಿ ನೀಡುತ್ತದೆ.
ಹೀಗಾಗಿ ಟ್ಯಾಕ್ಸಿ ಪಡೆಯುವುದು ಇಲ್ಲಿ ಕಿರಿಕಿರಿಯ ವಿಷಯವಲ್ಲ.
ಶ್ರೀ ನಗರದಿಂದ ಮರಳಿದ ಮೇಲೆ
ನಮ್ಮಲ್ಲಿ ಇದ್ದ ಸಮಯವನ್ನು ಟ್ಯಾಕ್ಸಿಯವ
ವ್ಯರ್ಥ ಗೊಳಿಸಲಿಲ್ಲ. ರಘುನಾಥ ಮಂದಿರ, ಕಾಳಿಮಾ...ಮುಂತಾದ ಕ್ಷೇತ್ರಗಳು ಆತನ
ಆಸಕ್ತಿಯಿಂದ ನಾವು ನೋಡಿದ್ದು.
No comments:
Post a Comment