Monday, July 13, 2015

ಜಮ್ಮು -ಕಾಶ್ಮೀರದ ನೆಲದಲ್ಲಿ-ಭಾಗ 1 (2001)

ನಾವು ಜಮ್ಮು, ಕಾಶ್ಮೀರ, ಸಿಮ್ಲಾ, ಕುಲು ಮನಾಲಿ  ಪ್ರವಾಸ ಹೊರಟಾಗ ನಮ್ಮ ಬಹುಕಾಲದ ಕುಟುಂಬ ಮಿತ್ರರಾದ ಶ್ರೀಯುತ ಮದಗ ಜಗಜೀವನ ಶೆಟ್ಟಿ ಮತ್ತು ಆವರ ಮಡದಿ ಸುಯೋಜ ಶೆಟ್ಟಿಯವರು ಜೊತೆÉ ನೀಡಿದರು. ಬೆಂಗಳೂರಿನಿಂದ ದೆಹಲಿಗೆ ನಾವು ಬಾನಿನಲ್ಲಿ ತೇಲಿ ಹೋದೆವು. ಅಲ್ಲಿಂದ ರೈಲಿನಲ್ಲಿ ಜಮ್ಮುವಿಗೆ ರೈಲಿನಲ್ಲಿ. ಜಮ್ಮು ಕಾಶ್ಮೀರ ಭಾರತದ ಮುಕುಟ ಮಣಿ. ಅದರಲ್ಲಿ ಜಮ್ಮು ಬೇರೆ ಕಾಶ್ಮೀರ ಬೇರೆ. ಜಮ್ಮು ಕಾಶ್ಮೀರಕ್ಕೆ ಕೆಳಭಾಗದಲ್ಲಿ ಇದ್ದರೆ ಕಾಶ್ಮೀರ ಇನ್ನೂ ಎತ್ತರೆತ್ತರ ಏರಿ ನಿಂತಿದೆ.

ಜಮ್ಮುವಿನ ಹಿನ್ನೆಲೆ: ಕಾಶ್ಮೀರ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ. ಆದರೆ ಇದರ ಚಳಿಗಾಲದ ರಾಜಧಾನಿ ಜಮ್ಮು. ಜಮ್ಮು ನಗರ ಸಮುದ್ರ ಮಟ್ಟದಿಂದ 305 ಮೀಟರ್ ಎತ್ತರದಲ್ಲಿ ಇದೆ. ರಾಜಾ ಜಂಬೂ ಲೋಚನನಿಂದಾಗಿ (ಎಚಿmboo ಐoಛಿhಚಿಟಿ )ಈ ನಗರಕ್ಕೆ ಜಮ್ಮು ಎಂಬ ಹೆಸರುಂಟಾಯಿತು. ಈತ ಕ್ರಿ. ಪೂರ್ವ 14ನೆಯ ಶತಮಾನದಲ್ಲಿ ಇದ್ದ ಅರಸ.  ರಾಜಾ ಜಂಬೂ ಲೋಚನ ಬೇಟೆಗೆ ಹೋದಾಗ ಈ ಜಾಗದಲ್ಲಿ ಆಡು ಮತ್ತು ಹುಲಿಗಳು ಒಟ್ಟಿಗೇ ಜಮ್ಮು ತಾವಿ ನದಿಯ ನೀರು ಕುಡಿದು ಅವುಗಳು ಆಟವಾಡುತ್ತಿದ್ದುದನ್ನು ಕಂಡನಂತೆ. ಈ ನೆಲ ಮನುಷ್ಯನಲ್ಲಿ ಶಾಂತಿ ಸಮಧಾನವನ್ನು ತರಬಲ್ಲುದು ಪ್ರಜೆಗಳೆಲ್ಲ ಅನ್ಯೋನ್ಯರಾಗಿ ಬಾಳಬಹುದು ಎಂದು ಭಾವಿಸಿದ ರಾಜ ಜಂಬೂ ಲೋಚನ ಇಲ್ಲಿ ನಗರವನ್ನು ನಿರ್ಮಿಸುತ್ತಾನೆ. ಜಂಬೋ ಲೋಚÀನ ನಿಮಿಸಿದ ನಗರಕ್ಕೆ ‘ಜಂಬೂ’ ಎಂದು ಹೆಸರಾಯಿತು. ಕಾಲಾನು ಕಾಲದಲ್ಲಿ ಜನರ ಬಾಯಿಯಲ್ಲಿ ಜಮ್ಮು ಎಂದುಳಿಯಿತು.
ಇಲ್ಲಿ ಹರಿಯುವ ‘ಜಮ್ಮು ತಾವಿ’ ನದಿ ದಡದ ಮೇಲೆ ಜಮ್ಮು ನಗರ ಇದೆ. ನಗರದ ಹೃದಯ ಭಾಗದಲ್ಲಿ ಪ್ರಸಿದ್ಧ ರಘುನಾಥ ಮಂದಿರ ಇದೆ. ಈ ಜಮ್ಮು ನಗರವು ದೇವಾಲಯಗಳ ನಗರ ಎನಿಸಿಕೊಂಡಿದೆ.

 ಜಮ್ಮು ಎಂದಾಗ ವೈಷ್ಣವಿ ನೆನಪಾಗುತ್ತಾಳೆ. ವೈಷ್ಣವಿ ಎಂದಾಗ ಜಮ್ಮು ನೆನಪಾಗುತ್ತದೆ. ನಾನು ಸೈನಿಕನ ಮಡದಿಯಾಗಿ ಉತ್ತರ ಭಾರತದಲ್ಲಿ ಇರುವಾಗ ಜಮ್ಮುವಿನ ಕೆಲವು ಸ್ಥಳೀಯರು ಜಮ್ಮು ಪರ್ವತದ ಶಿಖರ ಏರಿ ಅವಿತು ಕುಳಿತ ಮಾತಾ ವೈಷ್ಣವಿಯ ಬಗ್ಗೆ ಹೇಳುತ್ತಿದ್ದರು. 5300 ಮೀಟರ್ ಎತ್ತರದ ಬೆಟ್ಟ ಹತ್ತಲು ಆಗಿನ್ನೂ ಈಗಿನಷ್ಟು ಸುಲಭದ ಮಾರ್ಗ ಇರಲಿಲ್ಲ. ಆದರೂ ಭಕ್ತರು ನಡೆದೇ ಹತ್ತುತ್ತಿದ್ದರು. ಈಗಲೂ ಹತ್ತುತ್ತಾರೆ. ಕೆಲವರು ಡೋಲಿಯಲ್ಲೂ ಹೊರಿಸಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಕುದುರೆ ಮೇಲೆ ಕುಳಿತು ಕುಂಡೆ ನೋವು ಮಾಡಿಕೊಂಡು ದಣಿದು ಹೋಗುತ್ತಾರೆ. ಮತ್ತೆ ಕೆಲವರು ಹೆಲಿಕಾಪ್ಟರ್‍ನಲ್ಲೂ ಹತ್ತುತ್ತಾರೆ.

ನಾವು ಜಮ್ಮು ರೈಲುನಿಲಾಣ್ದದಲ್ಲಿ ಬೆಳಿಗ್ಗೆ 6 ಗಂಟೆಗೆ ಇಳಿದು ಹೊರಬರುವಾಗ ನಮ್ಮನ್ನು ಸ್ವಾಗತಿಸಿದ್ದು ಮಂಜಿನ ಮುಸುಕು ಧರಿಸಿದ ಸುಂದರ ಪರ್ವತಗಳ ಸಾಲುಗಳು. ಇಂತಹ ಮುಗ್ಧ ಪ್ರಕೃತಿಯ ರಸಸ್ವಾದನೆಗೆ ಭಂಗ ತಂದುದು ‘ಕಟ್ರಾ ಕಟ್ರಾ’ ಎಂಬ ಕೂಗು. ಹೆಗ್ಡೆಯವರು ಇಲ್ಲಿಂದ ಕಟ್ರಾಗೆ ಹೋಗುವ ವ್ಯವಸ್ಥೆ ಮಾಡಿರಲಿಲ್ಲ. ಇಲ್ಲಿಂದ 48 ಕಿಲೋ ಮೀಟರ್ ದೂರದ ಕಟ್ರಾ ತಲುಪಲು ಟ್ಯಾಕ್ಸಿಗೊತ್ತುಮಾಡುವ ಯೋಜನೆ ಹಾಕಿದ ನಮಗೆ  ಟ್ಯಾಕ್ಸಿ ನಿಲ್ದಾಣಕ್ಕೆ ಹೋಗುವ ಅಗತ್ಯ ಬರಲಿಲ್ಲ. ರೈಲು ನಿಲ್ದಾಣದ ಮುಂಭಾಗದಲ್ಲೇ ಸುಸಜ್ಜಿತ ಬಸ್ಸುಗಳು ನಿಂತಿದ್ದುವು.

ನಾವು ನಮ್ಮ ನಮ್ಮ ಸರಂಜಾಮಿನೊಂದಿಗೆ ಬಸ್ಸು ಹತ್ತಿದೆವು. ಸುಮಾರು 2 ಕಿಲೋಮೀಟರ್ ದೂರ ಹೋದಾಗ ರಸ್ತೆಯಲ್ಲಿ ನಮ್ಮ ಬಸ್ಸು ಗಕ್ಕನೆ ನಿಂತಿತು. ನಮ್ಮ ವಾಹನದ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿದ್ದುವು. ನಮ್ಮೆದೆ ಧಸಕ್ಕೆಂದಿತು! ಎಷ್ಟೆಂದರೂ ಪಾಕಿಸ್ತಾನದ ನೆರೆಯ ಭಾಗ. ಇಲ್ಲಿಂದ 15 ಕಿಲೋಮೀಟರ್ ಮಾತ್ರ ದೂರವಂತೆ ಪಾಕಿಸ್ತಾನ! ಸುಮಾರು ಹೊತ್ತು ವಾಹನಗಳು ಮಿಸುಕಲಿಲ್ಲ. ಕೆಲವರು ಕೆಳಗಿಳಿದು ಕಾರಣ ಹುಡುಕಲು ಹೋದಾಗ ನಮ್ಮ ಪ್ರಧಾನ ಮತ್ರಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಸ್ತೆ ಮೂಲಕ, ನಾವು ಹೋಗುವ ದಾರಿಯಲ್ಲಿ ಪ್ರಯಾಣಿಸುವವರಿದ್ದಾರೆ ಎಂದು ತಿಳಿಯಿತು. ಆದರೆ ನಮ್ಮಂತಹ ಸಾರ್ವಜನಿಕರನ್ನು ಎಷ್ಟು ಹೊತ್ತು ತಡೆಹಿಡಿಯುತ್ತಾರೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಅನೇಕರು ವೈಷ್ಣವಿ ದೇವಿಯ ಬೆಟ್ಟಕ್ಕೆ ಹೋಗಲು ಹೆಲಿಕಾಪ್ಟರ್‍ನಲ್ಲಿ ಬೇಗನೇ ಆಸನ ಕಾದಿರಿಸಿದ್ದರು. ಹೀಗಾಗಿ ಎಲ್ಲರಿಗೂ ಆತಂಕ. ಆದರೆ ನಮ್ಮ ಬಸ್ಸು 8.30ಗೆ ಚಲಿಸಿತು!  ದಾರಿಯಲ್ಲಿ ಕಾಪಿ ಕುಡಿಯಲು ನಿಲ್ಲಿಸಿದ. ಅಲ್ಲಿ ಬಾತ್ ರೂಂ ವ್ಯವಸ್ಥೆ ಸರಿ ಇರಲಿಲ್ಲ.
ಕಟ್ರಾದಲ್ಲಿ ನಮಗಾಗಿ ನಾಲ್ಕು ಹಾಸಿಗೆಗಳ ಕೋಣೆ ಕಾದಿರಿಸಿದ್ದರು. ನಾವು ತಡವಾಗಿ ಇಲ್ಲಿಗೆ ತಲುಪಿದುದರಿಂದ ಬೇಗ ಸ್ನಾನ ಮುಗಿಸಲು ಸಾಧ್ಯವಾಗÀಲಿಲ್ಲ. ಸ್ನಾನ ಗೃಹ ಒಂದೇ ಆಗಿತ್ತು. ಕೊನೆಯ ಸರದಿಯಲ್ಲಿ ಸ್ನಾನ ಮುಗಿಸಬೇಕಾಗಿ ಬಂದ ಜೀವನ ಶೆಟ್ಟಿಯವರು ಕೊರೆವ ಚಳಿಯಲ್ಲೂ ತಣ್ಣೀರು ಸ್ನಾನಮಾಡಿ ಹೆಚ್ಚು ಪುಣ್ಯಸಂಪಾದಿಸಿದರು.
ಬೆಟ್ಟದ ಬುಡದಿಂದ ಭಕ್ತರು ಕುಳಿತ ಡೋಲಿ ಹೊರುವ ಮನುಷ್ಯರಾಗಲೀ, ಕುದುರೆಯ ಜೊತೆ ಇರುವ ಕುದುರೆ ಸವಾರರಾಗಲೀ ನಡೆದೇ 13 ಕಿಲೋ ಮೀಟರ್ ಶಿಖರ ಹತ್ತಬೇಕು. ಕಾಲು ದಾರಿ ಕೂಡಾ ಇದೆ. ಆದರೆ ಇಳಿಜಾರಾದ ಶಿಲಾ ಬೆಟ್ಟವನ್ನು ಹತ್ತುವುದು ಎಲ್ಲರಿಂದಲೂ ಸಾಧ್ಯವಾಗದು. ಆದರೂ ಮಿಲಿಯಗಟ್ಟಲೆ ಜನರು ಪ್ರತಿವರ್ಷ ಈ ಬೆಟ್ಟ ಹತ್ತಿ ನೆಮ್ಮದಿ ಕಂಡುಕೊಳ್ಳುತ್ತಾರೆ. ತಮ್ಮ ಜನ್ಮ ಸಾರ್ಥಕವಾಯಿತು ಎಂದು ಧನ್ಯತೆಯಿಂದ ಅಂತರ್ಮುಖಿಯಾಗುತ್ತಾರೆ. ನಮ್ಮ ದೈಹಿಕ ಶಕ್ತಿ ಮತ್ತು ಬೆಟ್ಟದ ಎತ್ತರದ ಅರಿವಿದ್ದ ನಾವು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದೆವು. ಈಗ ನಮ್ಮಲ್ಲಿ ಸಮಯದ ಅಭಾವ ಇದ್ದ ಕಾರಣ, ದಡಬಡಿಸಿ ಟ್ಯಾಕ್ಸಿಮಾಡಿ ಹೆಲಿಪ್ಯಾಡ್ ತಲುಪಿದೆವು. ಹೆಲಿಕಾಪ್ಟರ್‍ನಲ್ಲಿ ಮುಂಭಾಗದಲ್ಲಿ ಕೂರುವಾಸೆ ನನಗಿತ್ತು. ಆದರೆ ಒಬ್ಬ ತರುಣಿಯನ್ನು ಅಲ್ಲಿಗೆ ಕಳುಹಿಸಿದರು. ಹಿಂದಿನ ಆಸನದಲ್ಲಿ ಕುಳಿತು ಯುವತಿಯನ್ನು ಮರೆತು ಪರ್ವತ ಶಿಖರಗಳ, ಚಿತ್ತಾರ ಬರೆದ ಪ್ರಕೃತಿಯನ್ನು ಮನಸಾರೆ ಅಸದ್ವಾದಿಸಿದೆ.   ಹೆಲಿಕಾಪ್ಟರ್,  ಪರ್ವತ ಶಿಖರದತ್ತ ಮೇಲ್ಮುಖವಾಗಿ ಗೆರೆ ಎಳೆದಂತೆ ಓಡಿತು. ಪದರು ಪದರಾಗಿ ಬೆಳೆದು ನಿಂತ ಶಿಲಾಪರ್ವತಗಳು ನಮ್ಮ ಕೆಳಗೆ ಕಂಡಾಗ  ರೋಮಾಂಚನ. 8 ನಿಮಿಷದ ಪ್ರಯಾಣ ಇದು.   ‘ನಾನೆಷ್ಟು ಎತ್ತರಕ್ಕೆ ಏರಿ ಹೋದೆ’ ಎಂದೆನಿಸಿತು. ವೈಷ್ಣವಿಯ ಗುಹೆ  ಅಲ್ಲಿಂದ 3 ಕಿಲೋಮೀಟರ್ ದೂರ. ಕುದುರೆ ಸವಾರರು ಕುದುರೆ ಮೇಲೆ ಹತ್ತಿಸಿ ಕರೆದೊಯ್ಯುತ್ತೇವೆಂದು ವಿನಂತಿಸಿದರು.  ಆದರೆ 13 ಕಿ.ಲೋಮೀಟರ್ ಬೆಟ್ಟ ಹತ್ತಲು ಸಾಧ್ಯವಾಗದು ಎಂದು ಬಂದ ನಾವು ಮೂರು ಕಿಲೋಮೀಟರ್ ಆದರೂ ನಡೆಯದೆ ದೇವಿಯ ಬಳಿಹೋಗಿ ನಿಲ್ಲುವುದು ಹೇಗೆ? ಅದೂ ಇಳಿಜಾರು ರಸ್ತೆಯಲ್ಲಿ. ಏದುಸಿರು ಬರುತ್ತದೆ ಎಂಬ ಆತಂಕ ಇಲ್ಲ. ಹೀಗಾಗಿ ನಾವು ನಡೆದೇ ಹೋದೆವು. ನಡೆದು ಹೋಗುವಾಗ ಕಡಿದಾದ ಶಿಲಾ ಪರ್ವತಗಳ ಈ ಕೊರಕಲು ದಾರಿಯಲ್ಲಿ ಕೆಳಗೆ ಇಣುಕಲು ಭಯ. ಆದರೆ ದೂರದಿಂದ ಮಡಿಕೆ ಮಡಿಕೆಯಾಗಿ ಕಾಣುವ ಶಿಲಾ ಪರ್ವತ ನೋಡಲು ರೋಮಾಂಚನ!
 ಮೂರು ಕಿಲೋಮೀಟರ್ ದೂರ ಒಳರಸ್ತೆಯ ದಾರಿ  ಸುತ್ತು ಬಳಸಿ ಬರುವಾಗ “ಈ ದಾರಿಯೂ ದೂರ” ಎಂಬ ಅನುಭವವಾಯಿತು.
ಹೆಲಿಕಾಪ್ಟರ್ ಹತ್ತಿ ಬಂದವರಿಗೆ ಉದ್ದ ಸರದಿ ಇಲ್ಲದೆ ದರ್ಶನಕ್ಕೆ ಆದ್ಯತೆ ಇತ್ತು. ನಾವು ಈ ದಾರಿಯಲ್ಲಿ ಹೋಗುವಾಗ ಶಿಲಾ ಬಂಡೆಗಳನ್ನು ಗುಹೆಯೊಂದಕ್ಕೆ ಅಡ್ಡ ಇಟ್ಟಂತೆ ಕಂಡಿತು. ನಾನು ಸೈನಿಕರ ವಸತಿ ನಿಲಯದಲ್ಲಿ ಇದ್ದಾಗ (ಸುಮಾರು 1974 ಇಸವಿ ಇರಬೇಕು.)  ಮಹಿಷಾಸುರನಿಂದ ತಪ್ಪಿಸಿ ಕೊಂಡು ಜಮ್ಮು ಶಿಖರದ ಗುಹೆಯ ಒಳಗೆ ಅಡಗಿ ಕುಳಿತ ‘ವೈಷ್ಣವಿ ಮಾ’ ಬಗ್ಗೆ  ನಮ್ಮ ಸೈನಿಕ ಮಿತ್ರರ ಮಡದಿಯರು ಹೇಳುತ್ತಿದ್ದರು. (ವೈಷ್ಣವಿಯ ಪಿಂಡಿ ಇರುವ ಗುಹೆಗೆ ಭೂವಿಜ್ಞಾನಿಗಳ ಪ್ರಕಾರ ಮಿಲಿಯಗಟ್ಟಲೆ ವರ್ಷ ಆಗಿದೆ.)  ವೈಷ್ಣವಿ ಮಾತೆ ಇರುವುದು ಗುಹೆಯ ಒಳಗೆ ಅಲ್ಲಿಗೆ ಭಕ್ತರು ಮಾತ್ರ ತೆವಳಿ ಹೋಗಬಹುದು’ ಎಂದಿದ್ದು ನೆನಪಾಯಿತು. ಬಹುಷ ಅದೇ ಗುಹಾ ದ್ವಾರ ಇದು ಇರಬಹುದು ಎಂದು ಕೊಂಡೆ. ಗುಹೆಯ ಪ್ರವೇಶ ಬಂಡೆಗಳ ಸಂಧಿಯಲ್ಲಿ ಇದೆ. ಭಕ್ತಿಯಿಂದ ಹೋಗುವವರಿಗೆ ಮಾತ್ರ ಒಳಗೆ ತೆವಳಿಕೊಂಡು ನುಸಳಲು ಸಾದ್ಯ ಇಲ್ಲವಾದಲ್ಲಿ ಬಂಡೆಗಳ ಸಂಧಿಯಲ್ಲಿ ದೇಹ ತೂರದು ಎಂದಿದ್ದರು.

ವೈಷ್ಣವಿ ಮಾತೆ, ದೇವಿ 5300 ಅಡಿ ಎತ್ತರದ ‘ಶೈವ ತ್ರಿಕೂಟ’ ಪರ್ವತ ಶಿಖರದ ಗುಹೆಯ ಒಳಗೆ ಅಡಗಿ ಕೂತವಳು. ಭೂಮಿ ಮಟ್ಟದಲ್ಲಿ ಒಂದೇ ಆಗಿದ್ದ ವೈಷ್ಣವಿಯ ಶಿಲಾಪರ್ವತ ನೆಲಭಾಗದಿಂದ ಮೇಲೇರಿದಂತೆ ಮೂರು ಕವಲುಗಲಾಗಿ ಹೊಮ್ಮಿದೆ. ಹೀಗಾಗಿ ಈ ಪರ್ವತವನ್ನು ತ್ರಿಕೂಟ ಪರ್ವತ ಎಂದು ಕರೆಯುತ್ತಾರೆ. ಈ ತ್ರಿಕೂಟ ಶಿಖರವನ್ನು ‘ಭಗವತಿ ತ್ರಿಕೂಟ ಶಿಖರ’ ಎಂದೂ ಕರೆಯುತ್ತಾರೆ. ತುಳುನಾಡು ಕೇರಳದಲ್ಲೀ ಭಗವತಿ ಆರಾಧನೆ ನೆಲದ ಸಂಸೃತಿಯ ಬೂತಾರಾಧನೆಯ ಸ್ವರೂಪದಲ್ಲಿ ಈಗಲೂ ನಡೆಯುತ್ತಿದೆ.

 ಎಲ್ಲರಿಗೂ ಹಿಂಬಾಗಿಲ ಮಾನವ ನಿರ್ಮಿತ ಗುಹಾ ರಸ್ತೆಯ ಪ್ರವೇಶದ್ವಾರದ ಮೂ;ಲಕ ಪಿಂಡಿಗಳ ದರ್ಶನ ಮಾಡಲು ಅವಕಾಶ ಇದೆ. ದೇವಸ್ಥಾನದ ವತಿಯಿಂದ ಎಲ್ಲವೂ ವ್ಯವಸಿತ್ಥಯವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಸಿಡುಕು ಸಿಟ್ಟು ಯಾರಲ್ಲಿಯೂ ಇಲ್ಲ. ತಾಳ್ಮೆ ಸಹಕಾರವೇ ಎಲ್ಲೆಲ್ಲೂ ಕಾಣ ಬರುತ್ತದೆ.  ಈ ವೈಷ್ಣವಿಯನ್ನು ನೋಡಲು ಗುಹೆಯ ಮುಂದೆ ನಾವೂ ಸರದಿಯಲ್ಲಿ ನಿಂತೆವು. 100 ಅಡಿ ಉದ್ದದ ಸ್ವಲ್ಪ ಬಾಗಿದ ಗುಹಾ ಮಾರ್ಗದ ಮೂಲಕ ವೈಷ್ಣವಿಯ ಪಿಂಡಿಗಳ ಬಳಿಗೆ ನಡೆಯಬೇಕು. ದಾರಿಯನ್ನು ಶುಭ್ರ ಬಿಳಿಯ ಅಮೃತ ಶಿಲೆಯ ನೆಲಹಾಸುಗಳಿಂದ ಸೊಗಸು ಗೊಳಿಸಿದ್ದರೂ ಪರ್ವತ ಶಿಖರದ ಒಳಗಿರುವ ನೀರು ಜಿನುಗಳು ಅವಕಾಶ ಕಲ್ಪಿಸಿದ್ದರು. ಹೀಗಾಗಿ ನಾವು ನಡೆವ ದಾರಿಯಲ್ಲಿ ನೀರಿನ ಗೋಡೆಯಿಂದ ಒರೆತ ಚಿಮ್ಮ್ತಿ ಹರಿಯುತ್ತದೆ. ಭಕ್ತರ ಪಾದಗಳನ್ನು ಪ್ರಕೃತಿಯೇ ತೊಳೆದು  ವೈಷ್ಣವಿ ಮಾತೆಯ ಬಳಿ ಕಳುಹಿಸಿಕೊಡುತ್ತದೆ. ಭಕ್ತರು ನಡೆದಾಡುವಾಗ ಜಾರದಿರಲಿ ಎಂದು ಕೆಂಪು ನಡೆಮುಡಿ ಹಾಸಿದ್ದಾರೆ. ಪ್ರಕೃತಿ ಸಹಜ ಏಕ ಶಿಲೆಯ ಮೂರು ಶಿಖರಗಳು ಮೂರು ಪವಿತ್ರ ಪಿಂಡಿಗಳೆನಿಸಿವೆ. ಈ ಪಿಂಡಿಗಳು ಇರುವ ಪೀಠ ಸಮುದ್ರ ಮಟ್ಟದಿಂದ 5200 ಅಡಿ ಎತ್ತರದಲ್ಲಿ ಇವೆ. ಇಲ್ಲಿಯ ಪ್ರಕಾರ ಈ ಶಿಖರ ಪಿಂಡಿಗಳು ಮಹಾಸರಸ್ವತಿ, ಮಹಾ ಲಕ್ಷ್ಮಿ, ಮಹಾ ಕಾಳಿಯರನ್ನು ಸಂಕೇತಿಸುತ್ತವೆ  ಈ ‘ಪಿಂಡಿ’ಗಳು ಶಿಖರದೊಳಗಿಂದ ಚಿಮ್ಮುವ ನೀರಲ್ಲಿ ಮುಳುಗಿವೆ. ಇಲ್ಲಿಂದ ನೀರು  ಗುಹೆಯ ಹೊರಭಾಗಕ್ಕೆ ಹರಿದು ಮುಂದೆ ಹೋಗುತ್ತದೆ. ಭಕ್ತರಿಗೆ ಇದು ಪವಿತ್ರ ತೀರ್ಥ! ವೇದಗಳಲ್ಲಿ ಪ್ರಸ್ಥಾಪಿತವಾಗಿರುವ ಈ ಕ್ಷೇತ್ರದ ಮೂರು ಪಿಂಡಿಗಳು ಸೃಷ್ಟಿ, ಸ್ಥಿತಿ, ಲಯವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಮೂರ್ತಿ ಶಿಲ್ಪಗಳು ಇಲ್ಲ.  ಮೂರು ಪಿಂಡಿಗಳ ಸುತ್ತ  ಅಮೃತಶಿಲೆಯಿಂದ ಪೀಠ ನಿರ್ಮಿಸಿದ್ದಾರೆ. ಅವುಗಳಿಗೆ ಕಟಾಂಜನ ಇದೆ.

ಅಲ್ಲಿಂದ  ಮರಳುವಾಗ ನಾನು ಹಳೆಯ ಪ್ರವೇಶ ದ್ವಾರದ ಬಗ್ಗೆ ವಿಚಾರಿಸಿದೆ. ನಾನು ಊಹಿಸಿದ್ದ ದ್ವಾರವೇ ಪುರಾತನ  ಪ್ರಕೃತಿ ಸಹಜ ದ್ವಾರ ಎಂದು ತಿಳಿದು ಬಂತು. ಈಗಲೂ ನವಂಬರ್ 15ರ ನಂತರ ಆ ದ್ವಾರವನ್ನು ತೆರೆಯುತ್ತಾರೆ ಎಂದ ಅಲ್ಲಿದ್ದ ಕಾವಲುಗರ. ಹಿಂಬಾಗಿಲ ಬಳಿ ಹಿಮಚ್ಚಾದಿತವಾಗಿ ಮಾಣವ ನಿರ್ಮಿತ ಗುಹಾ ದ್ವಾರವೂ ಹಿಮದಿಂದ ಮುಚ್ಚುತ್ತದೆಯಂತೆ. ಆ ಸಮಯದಲ್ಲಿ ಈಗಿನ ಮಾನವ ನಿರ್ಮಿತ ಗುಹಾ ಪ್ರವೇಶ ದ್ವಾರ (ಹಿಂಬಾಗ)  ಹಿಮದಿಂದ ಮುಚ್ಚಿಹೋಗುತ್ತದೆ. ಹಳೆಯ ಪ್ರವೇಶ ದ್ವಾರದ ಶಿಲೆಗಳ ಸಂಧಿಯಲ್ಲಿ ತೆವಳಿಕೊಂಡು ಹೋಗಲು ಎಲ್ಲರಿಗೂ ಸಾಧ್ಯವಾಗÀದು ಎಂದು ಹೊಸ ಪ್ರವೇಶದ್ವಾರವನ್ನು ನಿರ್ಮಿಸಿದ್ದಾರೆ. ಆದರೆ ತ್ರಿ ಶಕ್ತಿಗಳ ಪಿಂಡಿ ಇರುವುದು ಪ್ರಕೃತಿ ಸಹಜ ದ್ವಾರದ ಬಳಿ. ಇಲ್ಲಿ ತೆವಳಿ ದರ್ಶನ ಪಡೆಯುವುದು ಕಷ್ಟ ಎಂದು ಹಿಂಭಾಗದಿಂದ ಈಗಿನ ಗುಹದ್ವಾರ ರಚಿಸಿದ್ದಾರೆ. ಹೀಗಾಗಿ ಹಿಂಭಾಗದಿಂದ ಪಿಂಡಿಯ ಕ್ಷೇತ್ರ ಸಾಕಷ್ಟು ಒಳಭಾಗದಲ್ಲಿದೆ.  ನಾನು ಬಹುದಿನಗಳಿಂದ ಬಯಸಿದ್ದ ಗುಹೆಯ ಒಳಗಿನ ಪಿಂಡಿಗಳನ್ನು ನೋಡಿದ ಸಮಾಧಾನ ನನಗೆ.

 ಇಲ್ಲಿಯ ವ್ಯವಸ್ಥೆಯ ಬಗ್ಗೆ ಒಂದೆರಡು ಮೆಚ್ಚುಗೆಯ ಮಾತನ್ನು ಬರೆಯಲೇ ಕೇಕು. ಹೋಟೇಲ್ ಬುಕ್ಕಿಂಗ್‍ನಿಂದ ಹಿಡಿದು ದೇವಿಯ ದರ್ಶನ ಮಾಡಿ ಬರುವವರೆಗೆ ಯಾವ ದಗಾ ಕೋರರ ಬಲೆಗೆ ಬೀಳದ ರೀತಿಯಲ್ಲಿ ವೈಷ್ಣವಿಯ ಶೈನ್ ಬೋರ್ಡ್ ಯಾತ್ರಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ. ಅದೂ ಮಿತವ್ಯಯದಲ್ಲಿ. ಎಲ್ಲೂ ಹಣಕ್ಕಾಗಿ ಬಾಯಿ ಬಿಡುವವರಿಲ್ಲ. ಮೂಲ ವೈಷ್ಣವಿಯ ಪಿಂಡಿಗಳ ಬಳಿ ಇರುವ ಪಂಡಿತರಿಂದ ಹಿಡಿದು ಕೆಲಸಗಾಗರರವರೆಗೆ ಎಲ್ಲರೂ ಎಲ್ಲವನ್ನೂ ಅಚ್ಚು ಕಟ್ಟಾಗಿ ನಿರ್ವಹಿಸುತ್ತಾರೆ. ಸಮರ್ಪಣಾ ಬಾವದಿಂದ ದುಡಿಯುವವರನ್ನು ನಾವು ಇಲ್ಲಿ ಕಾಣಬಹುದು. ದೇವರ ಸನ್ನಿಧಿಯಲ್ಲಿ ಇಂತಹ ಅಚ್ಚು ಕಟ್ಟು ನನ್ನ ಜೀವಮಾನದಲ್ಲಿ ನಾನು ಇದೇ ಮೊದಲು ನೋಡಿದ್ದು.

ವೈಷ್ಣವಿಯ ಬಗ್ಗೆ ಪುರಾಣದ ವ್ಯಾಖ್ಯಾನ ಏನೇ ಇರಲಿ ಬೆಟ್ಟಗಳ ಶಿಖರಗಳಲ್ಲಿ ಇಂತಹ ಶಕ್ತಿದೈವಗಳಿರುವ ಸ್ಥಳ ಭಾರತದ ಅನೇಕ ಕಡೆ ಇವೆ. ತುಳುನಾಡಿನಲ್ಲಿಯೂ ಬೆಟ್ಟದ ಮೇಲೆ ಪರ್ವತ ಶಿಖರದ ಮೇಲೆ ಜಾನಪದ ಸಂಸ್ಕøತಿಯ ಶಕ್ತಿ ಪೀಠಗಳು ಇದ್ದುವು.  ಅವುಗಳು ವೈದಿಕ ಪದ್ಧತಿಯ ಪೂಜಾ ಕ್ರಮವನ್ನು ಅಳವಡಿಸಿಕೊಂಡ ಮೇಲೆ ಪುರೋಹಿತರಿಗೆ ಬೆಟ್ಟ ಹತ್ತಲು ಕಷ್ಟ ವಾಗುತ್ತದೆ ಎಂದು ಅವಗಳನ್ನು ಬೆಟ್ಟದಿಂದ ಕೆಳಗೆ ಇಳಿಸಿ ನೆಲ ಮಟ್ಟದಲ್ಲಿ ಗುಡಿ ರಚಿಸಿದರು. ನೆಲದ ಸಂಸ್ಕøತಿಯಲ್ಲಿ ತಿಂಗಳಿಗೆ ಒಮ್ಮೆ ಗುಡಿಯ ಬಾಗಿಲು ತೆರೆದೆರೆ ಸಾಕಿತ್ತು. ಆದರೆ ವೈದಿಕ ಪದ್ಧತಿಯಲ್ಲಿ ದಿನಾ ಪೂಜೆ ಆಗಬೇಕಲ್ಲ. ಅದಕ್ಕಾಗಿ ದೇವರನ್ನೇ ಬೆಟ್ಟದಿಂದ ಇಳಿಸಲಾಯಿತು!

ಹೆಲಿಕಾಪ್ಟರ್‍ನಲ್ಲಿ ಪ್ರಯಾಣಿಸಿದ ತಪ್ಪಿಗೆ ವೈಷ್ಣವಿಯ ದರ್ಶನ ಮಾತ್ರ ಮಾಡಿ ನಾವು ಮರಳಬೇಕಾಯಿತು. ಭೈರಚ ಬೆಟ್ಟಕ್ಕೆ ಹೋಗಲಾಗಲಿಲ್ಲ. ಹೆಲಿಕಾಪ್ಟರ್‍ನವನು ಕೊಟ್ಟ ಸಮಯದ ಮೊದಲು ಅವರಲ್ಲಿಗೆ ತಲುಪಬೇಕಿತ್ತು. ದರ್ಶನ ಮುಗಿಸಿ ಮರಳುವಾಗ ನಾವು ನಡೆಯುವ ಬಗ್ಗೆ ನಮ್ಮ ನಮ್ಮ ಪುರುಷರು ಅನುಮಾನ ವ್ಯಕ್ತಪಡಿಸಿ ಕುದುರೆ ಮೇಲೆ ಪಯಣಿಸಲು ಸೂಚಿಸಿದರು. ಕುದುರೆ ಹತ್ತುವುದೇ ರಗಳೆ. ಆದೂ ಸೀರೆಯುಟ್ಟು ಹೇಗೆ ಹತ್ತುವುದು? ಅಂಜುತ್ತಾ ಎಡಭಾಗದ ದಂಡೆಯ ಸಹಾಯದಿಂದ ಜಾಗರೂಕರಾಗಿ ಹತ್ತಿದೆವು. ಹೆಗ್ಗಡೆಯವರು ಮತ್ತು ಜೀವನ್ ಶೆಟ್ಟಿಯವರು  ನಡೆದು ಬರುತ್ತೇವೆ ಎಂದರು.
ನಾವು ಸ್ವಲ್ಪ ದೂರ ಸಾಗಿದ್ದವು. ಎರಡೂ ಕುದುರೆ ಸವಾರರು ಹಣ ಕೇಳಿದರು. ನಮ್ಮಿಬ್ಬರಲ್ಲೂ ಹಣ ಇರಲಿಲ್ಲ. ನಾವು ಪತಿ ಭಕ್ತ ಭಾರತೀಯ ನಾರಿಯರಲ್ಲವೆ? ‘ಹಣ ಕೊಡುವವರು ನಡೆದು ಬರುತ್ತಾರೆ. ಮುಂದೆ ಹೋಗೋಣ’ ಎಂದೆ. ಆತ ಒಪ್ಪಲಿಲ್ಲ. ನಡೆದು ಬರುವವರು ಬರಲಿ. ಕಾಯುತ್ತೇವೆ” ಎಂದು ಕಾದ. ನಾನಂದೆ, “ ನೀನು ಇಲ್ಲಿಯೇ ನಿಲ್ಲು. ನಮ್ಮವರು ಬೇರೆ ದಾರಿಯಿಂದ ಮೇಲೆ ಹತ್ತಿರಬಹುದು” ಎಂದೆ. ಇಬ್ಬರು ದೋಗ್ರಾ ಭಾಷೆಯಲ್ಲಿ ಮಾತನಾಡಿ ಪ್ರಯಾಣ ಮುಂದುವರಿಸಿದರು. ಸ್ವಲ್ಪ ದೂರ ಸಾಗುವಾಗ  ಹೆಗ್ಗಡೆಯವರು ಮತ್ತು ಜೀವನ ಶೆಟ್ಟಿಯವರು ನಮ್ಮನ್ನು ಕಾದು ಕುಳಿತಿದ್ದರು. ಅವರು ಮೆಟ್ಟಲು ಒಳದಾರಿಯಲ್ಲಿ ಮೆಟ್ಟಲು ಹತ್ತಿ ನಮಗಿಂತ ಮೊದಲು ತಲುಪಿದ್ದರು.
ಹೆಲಿ ಪ್ಯಾಡ್ ಬಳಿ ಕುದುರೆ ಇಳಿಯುವಾಗ ನಾನು ಮುಗ್ಗರಿಸಿದರೂ, ಸಾವರಿಸಿ, ಕುದುರೆ ಏರಿ ಹೋದ ಹೊಸ ಅನುಭವ ಪಡೆದ ಹುಮ್ಮಸ್ಸು ದೇಹವನ್ನು ಚೈತ್ನನ್ಯಗೊಳಿಸಿತ್ತು.

ಈಗಲಾದರೂ ಹೆಲಿಕಾಪ್ಟ್‍ರ್‍ನಲ್ಲಿ ಮುಂದಿನ ಆಸನದಲ್ಲಿ  ಕುಳಿತುಕೊಳ್ಳಬೇಕೆಂದು ಬಯಸಿದ್ದ ನನಗೆ ಜೀವನ್ ಶೆಟ್ಟಿಯವರನ್ನು ಮುಂದಿನ ಆಸನ ಸ್ವೀಕರಿಸಲು ವ್ಯವಸ್ಥಾಪಕ  ಹೇಳಿದಾಗ ನಿರಾಶೆಯಯಿತು. ಆ ಮೇಲೆ ತಿಳಿಯಿತು ಮುಂದಿನ ಆಸನದಲ್ಲಿ ಇರುವವರ ತೂಕ ಕಡಿಮೆ ಇರಬೇಕೆಂದು. ಆ ಶಿಖರಗಳ ಮಧ್ಯೆ ಮಿಂಚುಳ್ಳಿಯಂತೆ ಕೆಳಮುಖವಾಗಿ ನಾವು ಹಾರುವಾಗ ರೋಮಾಂಚನವಾಗುತ್ತದೆ ಎಂದು ತಮ್ಮ ಅನುಭವವನ್ನು ವಿವರಿಸಿದರು ಮದಗ ಜೀವನದಾಸ್ ಶೆಟ್ಟಿಯವರು.

 ಆ ದಿನ ರಾತ್ರಿ ಜಮ್ಮು ಮಾರುಕಟ್ಟೆ ನೋಡಿದೆವು. ಬಸ್ ನಿಲ್ದಾಣ ಮಾರುಕಟ್ಟೆ ಬಳಿ ಇತ್ತು. ದಕ್ಷಿಣ ಭಾರತದ ಹೊಟೇಲ್ ಹುಡುಕಿ ರಾತ್ರಿಯ ಊಟ ಮುಗಿಸಿದೆವು.  ಊಟವಾದ ಮೇಲೆ ಮರುದಿನ ಜಮ್ಮುಗೆ ಹೋಗಲು ಟ್ಯಾಕ್ಸಿಯ ಬಗ್ಗೆ ವಿಚಾರಿಸಲು ಹೆಗ್ಗಡೆಯವರು ಮತ್ತು ಜೀವನ್ ಶೆಟ್ಟಿಯವರು ನಡೆದರು. ನಾನು ಮತ್ತು ಸುಯೋಜ ಮಾರುಕಟ್ಟೆಯಲ್ಲಿ ಇರುವ ರಾಶಿ ರಾಶಿ ಒಣ ಹಣ್ಣುಗಳನ್ನು ನೋಡುತ್ತಾ ನಡೆದೆವು. ಆಕ್ರೂಟ್, ಒಣ ದ್ರಾಕ್ಷಿ, ಗೋಡಂಬಿ-ಮುಂತಾದ ವೈವಿಧ್ಯಮಯ ಒಣಹಣ್ಣುಗಳು ರಾಶಿ ರಾಶಿಯಾಗಿ  ಗ್ರಾಹಕರನ್ನು ಕಾಯಿತ್ತಿತ್ತು.

ಮರುದಿನ ಕಟ್ರಾದಿಂದ ಟ್ಯಾಕಿಯಲ್ಲಿ ಜಮ್ಮು ತಾವಿಗೆ ಪಯಣಿಸಿದೆವು.  ಜಮ್ಮು ರೈಲು ನಿಲ್ದಾಣದ ಸ್ಥಳವನ್ನು ಸ್ಥಳೀಯರು ಜಮ್ಮು ತಾವು ಎನ್ನುತ್ತಾರೆ.  ದಾರಿಯಲ್ಲಿ ನಮ್ಮೊಂದಿಗೆ ಜಿನಾಬ್ (ನದಿ) ಹರಿಯುತ್ತಿದ್ದಳು. ಅವಳ ಬಳುಕು ದಾರಿಯಲ್ಲಿ ಅವಳ ನಡೆಯನನ್ನುಸರಿಸಿ ನಾವು ಕೆಳಗೆ ಇಳಿದೆವು. ಒಂದು ಕಡೆ ಅವಳ ಎಡದಿಂದ ಬಲ ಭಾಗಕ್ಕೆ ಸೇತುವೆಯ ಮೂಲಕ ಬಂದೆವು. ಉದ್ದಕ್ಕೂ ರಸ್ತೆಯ ಅಕ್ಕ ಪಕ್ಕದಲ್ಲಿ ಕಬ್ಬಿಣದ ಜಾಲರಿಯ ಬೇಲಿ ಹಾಕಿದ್ದರು. ಮುಷ್ಟಿ ಗಾತ್ರ್ರದಿಂದ ಮೊದಲ್ಗೊಂಡು ದೊಡ್ಡ ದೊಡ್ಡ ಗಾತ್ರದ ಉರುಟಾದ ಸುಂದರ ಕಲ್ಲುಗಳು ಪರ್ವತಗಳಿಂದ ಉರುಳುತ್ತಾ ಬಂದು ಜಾಲರಿಯೊಳಗೆ ಬಿದ್ದಿದ್ದುವು. ರಸ್ತೆಗೆ ಬಿದ್ದರೆ ಅಡಚಣೆಯಾಗುತ್ತದೆ ಎಂದು ಈ ರೀತಿ ಜಾಲರಿ ನಿರ್ಮಿಸಿದ್ದಾರೆ. ಇಲ್ಲವಾದಲ್ಲಿ ಆ ಉರುಟು ಕಲ್ಲುಗಳು ರಸ್ತೆಯ ಮೇಲೆ ಬಿದ್ದು ನೇರವಾಗಿ ಚಿನಾಬ್ ನದಿಗೆ ಉರುಳುತ್ತದೆ. ಈ ಅನುಭವವನ್ನು ಕಟ್ರಾಕ್ಕೆ ಹೋಗುವಾಘ ಪಡೆಯಲಾಗಲಿಲ್ಲ. ಕಾರಣ ಅದು ಬಸ್ಸು ಪ್ರಯಾಣ!
ಜಮ್ಮು ನಗರ ಸಮೀಪಿಸುವಾಗ ನಾನಂದೆ “ಹೋಗುತ್ತಾ ಇಲ್ಲೊಂದು ಮ್ಯೂಸಿಯಮ್‍ನ ಫಲಕ ಕಂಡಿದ್ದೆ. ನಮ್ಮಲ್ಲಿ ಸಮಯವಿದ್ದರೆ ಅಲ್ಲಿಗೆ ಹೋಗಬಹುದಲ್ಲಾ? “ಡ್ರೈವರ್ ನನ್ನ ಮಾತಿಗೆ ಬೆಂಬಲ ವ್ಯಕ್ತಪಡಿಸಿ ‘ನೋಡಲೇ ಬೇಕಾದ ಮ್ಯೂಸಿಯಮ್’ ಸಮಯವಿದೆ ನಾನು ತೋರಿಸುತ್ತೇನೆ.” ಎಂದ.

ಕೆಂಪು ಕಲ್ಲಿನ ಈ ಸುಂದರ ಕಟ್ಟಡ ಮ್ಯೂಸಿಯಮ್ ಮೂಲತಃ ಇದು ಕಾಶ್ಮೀರದ ಅರಸ ಹರಿಸಿಂಗ್‍ನ ಅರಮನೆ.  ಇದರ ಹೆಸರು ‘ಅಮಲ್ ಮಹಲ್.’ ಈಗ ‘ಅಮಲ್ ಮಹಲ್ ಮ್ಯೂಸಿಯಮ್’. ಫ್ರೆಂಚ್ ವಾಸ್ತುಶಿಲ್ಪಿಯ ಕಲ್ಪನೆಯ ಕೂಸಾದ ಈ ಕಟ್ಟಡ ಫ್ರೆಂಚ್  (ಛಿhಚಿಣeಚಿu ) ಕಟ್ಟಡಗಳನ್ನು ಹೋಲುತ್ತದೆ. ಇದು ಮಿಲಿಟರಿಯ ಸುಪರ್ದಿಯಲ್ಲಿ ಇದೆ. ಮ್ಯೂಸಿಯಮ್‍ನ  ಹಿಂಭಾಗದ ಕಣಿವೆಯಲ್ಲಿ ಜಿನಾಬ್ ನದಿ ಹರಿಯುತ್ತದೆ. ಇಲ್ಲಿಂದ ನದಿಗೆ ಇಳಿಯಲು ಅನೇಕ ಮೆಟ್ಟಲುಗಳಿವೆ. ಅದರಾಚೆ ಸುಂದರ ಪರ್ವತಸಾಲುಗಳು. ಕಾಶ್ಮೀರ ಬೆಟ್ಟಗಳಿಂದ ಇಳಿದು ಹರಿದು ಬರುವ ಈ ನದಿ ಪರ್ವತ ಶ್ರೇಣಿಗಳನ್ನು ಸುತ್ತಿ ಸುತ್ತಿ ಪಾಕಿಸ್ತಾನದ ಮಣ್ಣಿನಲ್ಲಿ ಹರಿದು ಸಮುದ್ರ ಸೇರುತ್ತದೆ..

ಈ ನದಿಯ ದಡದಲ್ಲಿ ಇರುವ ಅಮಲ್ ಮಹಲ್ ಬಹು ದೊಡ್ಡ ಲೈಬ್ರೆರಿಯನ್ನು ಹೊಂದಿದೆ. ಇಲ್ಲಿಯ ಮುಖ್ಯ ಆಕರ್ಷಣೆ ಜಮ್ಮು ಕಾಶ್ಮೀರದ ಅರಸನ ಚಿನ್ನದ ಸಿಂಹಾಸನ. ಈ ಸಿಂಹಾಸನ ಮಿರಮಿರನೇ ಹೊಳೆಯುತ್ತಿತ್ತು. 120 ಕಿಲೋ ಚಿನ್ನದ ಗಟ್ಟಿಯಿಂದ ಸಿದ್ಧಗೊಳಿಸಿದ ಸಿಂಹಾಸನ
ವೈಷ್ಣವಿ ದೇವಿ ಜಮ್ಮು .ಚಿತ್ರ ಕೃಪೆ ವಿಕಿಪೀಡಿಯಾ
ವಂತೆ ಇದು. ದರ್ಬಾರ್ ಹಾಲ್‍ನಲ್ಲಿ ಚಿತ್ರ ಕಲಾಕರತಿಗಳ ಪ್ರದರ್ಶನ ಇದೆ.  ಈ ಮಹಲ್ ಮ್ಯೂಸಿಯಮ್‍ನಲ್ಲಿ ಅರಸನ ಪರಿವಾರದ ಕಲಾಕೃತಿಗಳು, ಪಹಾರಿ ಕಲಾಕೃತಿಗಳು,  ಶಿಲ್ಪಗಳು, ಹಸ್ತಪ್ರತಿಗಳು ಹಾಗೂ ಪುಸ್ತಕಗಳು ಹಾಗೂ ಇನ್ನು ಕೆಲವು ಅಪೂರ್ವ ವಸ್ತುಗಳು ಇದ್ದುವು. ಇಂದಿರಾ ಗಾಂದಿಯ ಜೊತೆ ಇರುವ ರಾಜಾ ಹರಿಸಿಂಗ್ ಹಾಗೂ ಆತನ ಸುಂದರಿಯಾದ ಮಗಳ ಪೋಟೋ ನೋಡಿ ಕಾಶ್ಮೀರದ ಕನ್ಯೆ ಅಹಾ! ಎಂದೆನಿಸಿತು.  ರಾಜಾ ಹರಿಸಿಂಗನ ಮಗಳಲ್ಲಿ ಅದೆಂತಹ ಸೌಂದರ್ಯ ಅಡಗಿತ್ತೋ? ಆ ಸೌಂದರ್ಯವನ್ನು ಒಬ್ಬ ಅನುಭಾವಿಯಂತೆ ಸವಿದೆ.

ಮುಂದುವರಿಯುವುದು.....


No comments:

Post a Comment