ರಾಮಾಯಣ ಮಹಾಭಾರತ ಪುರಾಣ ಮುಂತಾದುವುಗಳನ್ನು ಬರಯುತ್ತಿದ್ದುದು ಬೋಜ್ ಪತ್ರದಲ್ಲಿ. ಬೋಜ್ ಎನ್ನುವ ಮರದ ತೊಗಟೆ ಹಾಳೆಯ ರೂಪದಲ್ಲಿ ಬಿಡುತ್ತದೆ. ಅಂದರೆ ಪೊರೆಯಂತೆ ಉದ್ದವಾದ ಹಾಳೆಗಳನ್ನು ಬಿಟ್ಟುಕೊಡುತ್ತವೆ. ಇಂತಹ ಹಾಳೆಗಳನ್ನು ಸಂಸ್ಕರಿಸಿ ಅದರ ಮೇಲೆ ಬರೆಯುತ್ತಿದ್ದರು. ದಕ್ಷಿಣದಲ್ಲಿ ಬರೆಯುವಂತೆ ತಾಳೆಗರಿಯ ಮೇಲೆ ಬರೆಯುತ್ತಿರಲಿಲ್ಲ. ಭೋಜ್ ವೃಕ್ಷ ಹಿಮಾಲಯದ ಶಿಖರಭಾಗದಲ್ಲಿ ಬೆಳೆಯುತ್ತದೆ. ಹೆಚ್ಚಾಗಿ ಹಿಮಾಚಲದ ಪರ್ವತ ಭಾಗದಲ್ಲಿ ಬೆಳೆಯುತ್ತದೆ. ಸಿಮ್ಲಾದ ಶಿಖರದ ಮೇಲೆ ಕಂಡ ವಿಶಿಷ್ಟ ಮರವು ತನ್ನ ಗುರುತು ಕೇಳಲ್ಲು ನನ್ನನ್ನು ಪ್ರೇರೇಪಿಸಿತು. ಸ್ಥಳೀಯರನ್ನು ಹುಡುಕಿ " ಇದೆಂತ ಮರ ? ಬಿಳಿ ರೆಂಬೆಕೊಂಬೆಗಳ ಮರ? " ಎಂದು ವಿಚಾರಿಸಿದಾಗ ಅವರಿಂದ ದೊರೆತ ಉತ್ತರ " ಇದು ಬೋಜ್ ಪತ್ರದ ಮರ. ರಾಮಯಣ ಬರೆದುದು ಬೋಜ್ ಪತ್ರದ ತೊಗಟೆಯ ಮೇಲೆ"
|
ಬೋಜ್ ವೃಕ್ಷ
|
No comments:
Post a Comment