Tuesday, September 16, 2014

ಬಾರ್ಕೂರು ಭಾಗದ ಚಿಕ್ಕು ಮತ್ತು ಸಿರಿ

ಕೃಷಿ ಸಂಸ್ಕೃತಿಯ ಪೋಷಕ ದೈವ ಶಕ್ತಿಗಳಾದ 'ಸಿರಿಉಪಾಸನೆ' ಉಡುಪಿ, ಕಾರ್ಕಳದ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಪ್ರಸರಣದ ಕಾರಣದಿಂದಲೋ ಎನೋ ಬೆಳ್ತಂಗಡಿ ತಾಲೂಕು ಭಾಗದದಲ್ಲೂ ಒಂದೆರಡು ಕಡೆ ಇದೆ. ಆದರೆ ಬಾರ್ಕೂರು ನಿಂದ  ಆಚೆ ಸಿರಿ ಉಪಾಸನೆ ಕಂಡು ಬಂದಿಲ್ಲ.  ಆದರೆ ಸಿರಿ ಉಪಾಸನೆಯ  ಆಚರಣೆಗೆ ಸಾಮ್ಯ ಇರುವ, ಸಿರಿ ಉಪಾಸನೆಯ ಆಶಯ ಇರುವ, ಚಿಕ್ಕುವಿನ ಆರಾಧನೆ ಇದೆ.  ಸಿರಿಗೆ ಬಳಗದ ಇರುವ ನಂದಿಗೋಣ (ಕೋಣ) ರೆಕ್ಕೆಸಿರಿ , ಮತ್ತಿತರ ದೈವಗಳೂ ಇವೆ.  ಇಲ್ಲಿ ಕಾಣುವ ಹುತ್ತದ ಆರಾಧನೆಯೂ ನಾಗಬ್ರಹ್ಮನ ಆರಾಧನೆಯ ಮೂಲ ರೂಪ.

ಕೆಳಗೆ ಕೆಲವು ಚಿಕ್ಕುಗಳ ಚಿತ್ರಗಳನ್ನು ನೀಡುತ್ತಿದ್ದೇನೆ. ಈ ಬಗ್ಗೆ ತಿಳಿದವರಿಂದ ಪ್ರತಿಕ್ರಿಯೆ ಬಯಸುತ್ತೇನೆ..




No comments:

Post a Comment