Who is in his crown? Is he Buddha?
It is lokeshwara/ as per inscription.
It is lokeshwara/ as per inscription.
ಶ್ರೀ
ಕುಂದವರ್ಮಗುಣಾವಾನಾಳುಪೇಂದ್ರೋ ಮಹೀಪತಿ|
ಪಾದಾರವಿಂದ
ಭ್ರಮರೋ ಬಾಲ ಚಂದ್ರಶಿಖಾಮಣೀ: ||
ಲೋಕೇಶ್ವರ ದೇವಸ್ಯ ಪ್ರತಿಷ್ಠಾಮಕರೋತ್ಪ್ರಭು:|
ಶ್ರೀಮತ್ಕದಿರಿಕಾನಾಮ್ನಿ ವಿಹಾರೇ ಸುಮನೋಹರೇ:||
ಕದಿರಿಯ
ಮಂಜುನಾಥ ದೇವಾಲಯದಲ್ಲಿ ಇರಿಸಲಾಗಿರುವ ಇನ್ನೂ ಕೆಲವು ಪ್ರಾಚೀನ ಮೂರ್ತಿಗಳಿಂದ ಪ್ರಭಾವಿತರಾದ ಕೆಲವಿದ್ವಾಂಸರುಗಳು
ಈ ಮೇಲಿನ ಶ್ಲೋಕದಲ್ಲಿ ಉಕ್ತವಾಗಿರುವ ಬಾಲ ಚಂದ್ರಶಿಖಾಮಣಿಯು ಒಬ್ಬ ಬೌದ್ಧ ಬಿಕ್ಕುವೆಂದೂ, ಲೋಕೇಶ್ವರನು
ಬೌದ್ಧಧರ್ಮದ ದೇವತೆಗಳಲ್ಲಿ ಒಬ್ಬನಾದ ಅವಲೋಕಿತೇಶ್ವರನೆಂದೂ, ವಿಹಾರ ಶಬ್ದ ಬೌದ್ಧರ ದೇವಾಲಯವನ್ನೇ
ಗುರುತಿಸುತ್ತದೆಯೆಂದೂ ವಾದಿಸಿರುವರು. ಇದಕ್ಕನುಗುಣವಾಗಿ ಲೋಕೇಶ್ವರ ಪ್ರತಿಮೆಯು ಶಿಲ್ಪ ಶಾಸ್ತ್ರ
ದೃಷ್ಟಿಯಿಂದ ಬೌದ್ಧ ಮತಕ್ಕೆ ಸೇರಿದ ಪ್ರತಿಮೆಗಳ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.
ಆದರೆ
ಈ ಮೇಲಿನ ವಿಷಯಗಳು ವಿವಾದಗ್ರಸ್ತವಾದವು. ‘ಬಾಲಚಂದ್ರಶಿಖಾಮಣಿ` ಬೌದ್ಧಗುರುವೊಬ್ಬನ ಹೆಸರಿತ್ತೆನ್ನುವುದಕ್ಕಿಂತಲೂ
ಪರಮಶಿವನ ಗುಣವಾಚಕವೆಂದುಕೊಳ್ಳುವುದೂ ‘ಲೋಕೇಶ್ವರ’ನು ಅವಲೋಕಿತೇಶ್ವರನಲ್ಲ, ಈಶ್ವರನೇ ಎಂದು ಗ್ರಹಿಸುವುದು
ಹೆಚ್ಚು ಸಮಂಜಸವೆಂದು ನಮ್ಮ ಅಭಿಪ್ರಾಯ. 'ವಿಹಾರ’ ಶಬ್ದವು ಕೇವಲ ಬೌದ್ಧಧರ್ಮದೇವಾಲಯವನ್ನಷ್ಟೇ ಅಲ್ಲದೆ
ಹಿಂದೂಗಳ ದೇವಾಲಯವನ್ನೂ ಸೂಚಿಸುವಂತಾಗಿದೆ.
ಇನ್ನು
ಬೌದ್ಧಧರ್ಮದ ತತ್ವಗಳು ಕೆಲವು ಶೈವ ಪಂಥದ ಮೇಲೆ ಪರಿಣಾಮಕಾರಿಯಾದ ಪ್ರಭಾವ ಬೀರಿದ್ದವೆಂಬುದು ವಿದ್ವಾಂಸರುಗಳು
ಒಪ್ಪಿಕೊಂಡಿರುವ ವಿಷಯ. ಈ ಸಂದರ್ಭದಲ್ಲಿ ಗೋರಖನಾಥ ಪಂಥವನ್ನು ಸ್ಮರಿಸಬಹುದಾಗಿದೆ. ಕದಿರಿಯ ಮಂಜುನಾಥ ದೇವಸ್ಥಾನದಲ್ಲೇ ದೊರೆತಿರುವ 12ನೆಯ ಮತ್ತು
14ನೆಯ ಶತಮಾನಗಳ ಶಾಸನಗಳು ಆ ದೇವಾಲಯವು ನಾಥಪಂಥಕ್ಕೆ ಸೇರಿದ್ದಾಗಿತ್ತೆಂಬುದನ್ನು ಸ್ಪಷ್ಟ ಪಡಿಸುತ್ತದೆ.
–ಕೆ.ವಿ
ರಮೇಶ್ ಮತ್ತು ಎಂ. ಜೆ. ಶರ್ಮಾ 1985
No comments:
Post a Comment