Thursday, April 17, 2014

Siri Idol of Siri folklore

siri  ವಿಶ್ವ ಜಾನಪದ ಪರಂಪರೆಯ ಕಾವ್ಯಗಳಲ್ಲಿ ಸಿರಿ ಪಠ್ಯಕ್ಕೆ ಎರಡನೆಯ ಸ್ಥಾನ ಇದೆ.ಆದರೆ ಈ ಪಾಡ್ದನ ಬಗ್ಗೆ ಐತಿಹಾಸಿಕ ಮಾಹಿತಿ ಲಭ್ಯವಾಗಿಲ್ಲ.


  ಆಲಡೆ ಕ್ಷೇತ್ರವೊಂದರ ಮುಕ್ಕಾಲ್ದಿ (ಬಂಟ ಅರ್ಚಕ) ಮನೆಯ ಬಳಿ ಮರುನಿರ್ಮಾ‍ಣ ಕ್ಕೆ ಅಗೆದ ಸ್ಥಳದಲ್ಲಿ ನನ್ನ ಕಾಲಡಿಗೆ  ಸಿಕ್ಕ ಶಿಲ್ಪ ಇದು. ಸಿರಿ ಶಿಲ್ಪ.  ಶಿಲ್ಪದ ಒಟ್ಟು  ಉದ್ದ ಪೀಠ ಸೇರಿ 7.5 ಇಂಚು. ಬಲ ಕೈಯ್ಯಲಿ ಹೊಂಬಾಲೆ ಇದೆ.   ಎಡಕೈಯ ವಸ್ತು ಬಿದ್ದು ಹೋಗಿದೆ. ಕೂದಲು ಬಾಚಿ ಹಿಂದುಗಡೆ ಗಂಟು (ಸೂಡಿ)ಕಾಕಿದೆ. ಕಿವಿಯೋಲೆ (ತಾಳೆ ಓಲೆ) ಹಾಕಿದ್ದ ಅಗಲವಾದಂತೆ ಕಿವಿಯ ತೂತು ಇದೆ.ಕಿವಿಯ ಒಡವೆಯ ಗುರುತು ಹಿಡಿಯಲಾಗದು. ಸೊಂಟದ ಕೆಳಗೆ ನೆರಿಗೆ ಇರುವ ವಸ್ತ್ರ ವಿನ್ಯಾಸ. ಸೊಂಟದ ಮೇಲೆ ಬಟ್ಟೆ ಇಲ್ಲ. ಸೊಂಟಕ್ಕೆ ಾಭರಣ ಪಟ್ಟಿ (ಡಾಬು)ಇದೆ. ಕೈಗಡಗಗಳುಇವೆ. ಕತ್ತಿನಲ್ಲಿ ನೆಕ್ಲೆಸ್ ಇದೆ. ಕಾಲಿಗೆ ಗೆಜ್ಜೆ ಇಲ್ಲ,

ಪಂಚಲೋಹದಿದ್ದಿರಬಹುದಾದ   ಈ ತೆರೆನ ಶಿಲ್ಬ ಬಹುಷ ನಂದಳಿಕೆಯ ಆಲಡೆಯ ಗರ್ಭ ಗುಡಿಯಲ್ಲಿ  ಇರಬಹುದು. ಹೆಬ್ರಿ ಬೀಡಿನ ಅಜ್ಜಮ್ಮ ಬಲ್ಲಾಲ್ತಿಯ ಶಿಲ್ಪದ  ಸಾಮ್ಯತೆ ಇದೆ.

ಈ ಶಿಲ್ಪದ ಕಾಲ ನಿರ್ಣಯ ಆದರೆ ತುಳುನಾಡಿನಲ್ಲಿ ಪಾಡ್ದನ ಕಥಾ ಭಾಗದ ಸಿರಿಯ ಶಿಲ್ಪರಚನೆಯ ಕಾಲನಿರ್ಣಯ ಆಗುತ್ತದೆ. ಕಾಲ ನಿರ್ಣಯ ಮಾಡಲು ಸಂಬಂಧಪಟ್ಟವರ ನೆರವು ಬೇಕಾಗಿದೆ



No comments:

Post a Comment