Monday, April 14, 2014

Dolphin ಡಾಲ್ಫಿನ್

Brisben  River Australia


Brisben  River Australia


Dolpin at Goldcoast Australia


Dolpin at Goldcoast Australia


Dolpin at Goldcoast Australia


Dolpin at Goldcoast Australia

Dolpin at Goldcoast Australia


ಆಸ್ಟ್ರೇಲಿಯಾ ಮೂಲನಿವಾಸಿಗಳ ಜಾನಪದ ನಂಬಿಕೆಗಳ ಪ್ರಕಾರ ಡಾಲ್ಫಿನ್ ಮೀನು ಮಾನವ ಪ್ರೇಮಿ. ಆದ್ದರಿಂದ ಮಾನವನೂ ಡಾಲ್ಫಿನ್ ಮೀನನ್ನು ಹೆಚ್ಚು ಇಷ್ಟ ಪಡುತ್ತಾನೆ. ಅದರ ಫಲವಾಗಿ ಡಾಲ್ಪಿನ್ ಮೀನುಗಳಿಗೆ ತರಬೇತಿ ನೀಡಿ ಮನರಂಜನೆಗೆ ಸಿದ್ಧಗೊಳಿಸುತ್ತಾರೆ. ಮಾನವನನ್ನು ಹರಿದು ತಿನ್ನುವ ಹುಲಿ ಸಿಂಹಗಳನ್ನು ಪಳಗಿಸುವ ಮಾನವರಿಗೆ ಡಾಲ್ಫಿನ್ ಮೀನುಗಳನ್ನು ಪಳಗಿಸುವುದು ಬಹಳ ಸುಲಭದ ಕೆಲಸ.
ಮೂಲನಿವಾಸಿಗಳ ಪ್ರಕಾರ ಡಾಲ್ಫಿನ್ ತನ್ನ ಸಹಜ ಚರ್ಯೆದಲ್ಲಿ ಮಾನವ ಪ್ರೇಮಿಯಾಗಿದೆ. ಅದು ಮಾನವರನ್ನು ಸೋದರರಂತೆ ನಡೆಸುತ್ತದೆ. ರಕ್ತಸಂಬಂಧಿಗಳಂತೆ ನಡೆಸುತ್ತದೆ.
ಚಳಿಗಾಲದಲ್ಲಿ ಮೂಲನಿವಾಸಿಗಳು ಗುಹೆಗಳಲ್ಲಿ ಆಸರೆ ಪಡೆಯುತ್ತಿದ್ದರು. ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿಯನ್ನು ಉರಿಸುತ್ತಿದ್ದರು. ಸಮುದ್ರದಲ್ಲಿ ಮೀನಿನ ಹರವು ಅರಿವಾದಾಗ ಮೀನು ಬೇಟೆಗೆ ಇಳಿಯುತ್ತಿದ್ದರು. ಮಹಿಳೆಯರು ಬಲೆಗಳನ್ನು ಹಿಡಿದು ನಿಲ್ಲುತ್ತಿದ್ದರು  ಬಡಿಗೆಗಳಿಂದ ನೀರನ್ನು ಬಡಿದು ಮೀನುಗಳನ್ನು ಬಲೆಗಳತ್ತ ತಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಡಾಲ್ಫಿನ್ ಗಳನ್ನು ನೆರವಿಗಾಗಿ ಕರೆಯುತ್ತಿದ್ದರು. ಡಾಲ್ಫಿನ್ ಗಳು ಮೀನುಗಳಿಗೆ ಬೇಲಿಯಂತೆ ಈಜುತ್ತಾ ಮೀನುಗಳನ್ನು ಬಲೆಯತ್ತ ತಳ್ಳುತ್ತಿದ್ದುವು . ಆಗ ಅಪಾರ ಪ್ರಮಾಣದ ಮೀನು ಸಿಗುತ್ತಿತ್ತು. ವಯಸ್ಕ ಹಿರಿಯರು ಇಂತಹ ಮೀನನ್ನು ಸಂಗ್ರಹಿಸಿ ಸಮಪಾಲು ಮಾಡುತ್ತಿದ್ದರು.
ಒಂದು ಕಾಲದಲ್ಲಿ ಡಾಲ್ಫಿನ್ಗಳು ಜನರನ್ನು ಶಾರ್ಕ್ ಗಳಿಂದ ರಕ್ಷಿಸುತ್ತಿತ್ತು. ಮೂಲನಿವಾಸಿಗಳು ಸಮುದ್ರ ಸೇರುವ ನದಿಗಳ ಅಳಿವೆಯ ಬಳಿ ಅಳಿವೆ ದಾಟಬೇಕಾದರೆ ಡಾಲ್ಫಿನ್ ಅನ್ನು ರಕ್ಷಣೆಗೆ ಕರೆಯುತ್ತಿದ್ದರು. ಆಗ ಡಾಲ್ಫಿನ್ ಗಳು  ಈಜುತ್ತಾ ಬಂದು ಇವರ ದೋಣಿಗಳಿಗೆ ರಕ್ಷಣೆ ನೀಡುತ್ತಿದ್ದುವು.ಇದನ್ನು ಮನಗಂಡ ಒಬ್ಬ ಬುದ್ಧಿವಂತ ಡಾಲ್ಫಿನ್ ಗಳ ಮಿದುಳಿಗಾಗಿ ಡಾಲ್ಫಿನ್ ಗಳನ್ನು ವಂಚಿಸಿ ಅದರ ಮಿದುಳನ್ನು ಬೇಯಿಸಿ ತಿಂದ. ಆ ನಂತರ ಡಾಲ್ಫಿನ್ ಗಳು ಮನುಷ್ಯನ  ಮೇಲಿನ ನಂಬಿಕೆಯನ್ನು ಕಳೆದುಕೊಂಡುವು. –



No comments:

Post a Comment