ಅಕ್ಕ ಯಾಕಲ್ಲ?
ನಮ್ಮ ಮೊಗಸಾಲೆ ಮುಂದೆ
ಜುಳು ಜುಳು ಎಂದು
ಹರಿವ ಸುಗ್ಗಿಯ ತೋಡನೀರು
ಹಾವು ಸರಿದಂತೆ
ಕಾದ ನೆಲಮೇಲೆ ಮೆಲ್ಲ
ಮೆಲ್ಲನೆ
ತೋಡು ತುಂಬಿದರೆ
ಕಿಲ ಕಿಲ ನಗುತ್ತಾ
ನೀರಿಗೆ ಜಿಗಿವಾಗ
ನೀರೂ ನೆಗೆಯುತ್ತಿತ್ತು
ಖುಷಿಗೊಂಡು ತುಳುಕುತ್ತಿತ್ತು
ಹನಿ ಹನಿಯಾಗಿ ಗುಳ್ಳೆಗಳಾಗಿ
ನೆಗೆಯುತ್ತಿತ್ತು
ಹೆಣ್ಣು ಗಂಡೆಂಬ
ಭೇದ ವಿಲ್ಲದೆ
ಮೊಗಸಾಲೆಯ ಮಂಚದಿಂದ
ಅಂಗಿ ಬಿಚ್ಚಿದ ಬಾಲ
ಬಾಲೆಯರ
ನೀರಲ್ಲಿ ಥಕಥೈ ಕುಣಿತ
.
ನೀರೆರಚಿ ಹಾರಾಡಿ
ಚೀರಾಡಿ
ಬಾಕಿಮಾರಿನ ಕಟ್ಟೆ
ಒಡೆದಾಗ
ಹುಣಸೆ ಮರದ ಚಾಟಿ
ಹಿಡಿದು
ಬರುವ ನಿಯಂತ್ರಕರು.
‘ಗೊಮ್ಮಟಗಳೇ” ಎಂದು
ಗದರಿದ್ದು ಬಾಲರಿಗೆ
‘ಧಗಣೆಗಳೇ’ ಎಂದದ್ದು
ಬಾಲೆಯರಿಗೆ
ಬಾಲೆಯರು ‘ಅಕ್ಕ’
ಯಾಕಲ್ಲ?
`ಸೇಸಿ ‘ ಎಳತ್ತೂರು
No comments:
Post a Comment