ಅಮ್ಮ
ನನ್ನಮ್ಮನ ಗರ್ಭದಲ್ಲಿ ನಾನು ಅಣುವಾಗಿ ಮೂಡುವಲ್ಲಿ
ಅಪ್ಪನ ಪಾಲು ಇದ್ದರೂ ಅದು ಆತ ಪಡೆದ ಆನಂದದ ಅನುಭೂತಿ!
ಬೀಜಾಂಕುರವಾಗಿ ಗರ್ಭದಲ್ಲಿ ಅಮ್ಮ ಉಣ್ಣುವ ತುತ್ತು
ಒಡಲು ಸೇರದಂತೆ ತಡೆದಿದ್ದೆ!
ಬಹಿಷ್ಕರಿಸಿ ಪರೀಕ್ಷಿಸಿದ್ದೆ.
ಅಮ್ಮನ ಮೋಹವನ್ನು.
ಅಮ್ಮನಿಗೆ ಆನಂದ
ಬಸಿರೊಳಗಿನ ಹಸುಳೆ ಒದ್ದರೂ!
ಕಂದನ ಮೇಲೆ ಮುನಿಸಿಲ್ಲ.
ತುತ್ತು ಉಣ್ಣಲಾಗದೆ
ತಿಂಗಳು ಒಂಬತ್ತೂ
ಸಹಿಸಿದಳು ವಾಕರಿಕೆಯನ್ನು
ಬಸಿರು ಸವರುತ್ತಾ.
ಇಡುವ ಹೆಜ್ಜೆಗತಿಯಲ್ಲೂ ಒಡಲ ಕಂದಗೆ
ನೋವಾಗದಿರಲೆಂಬ ಎಚ್ಚರ!
ಒಡಲ ಕುಡಿಯನ್ನು ಮಡಿಲಿಗಿಳಿಸಲು ಬಯಸಿದಾಗ
ಮೃತ್ಯು ದರ್ಶನ! ಬೆಚ್ಚಿದಳು !
ಎಚ್ಚರಗೊಂಡಾಗ ನನ್ನ ಕಂಡು ನೋವ ಮರೆತಳು
ಮನದಾಳದ ಆನಂದ ಹಂಚಿದಳು
ನನ್ನೊಂದಿಗೆ
ಒಂದು ನೋಟದಲ್ಲಿ
ಆದರೂ ನನ್ನ ಅಸ್ಮಿತೆಗೆ ಅಪ್ಪನ ಹೆಸರು…
ಆಸ್ವತ್ರೆಯಲ್ಲಿ ಶಾಲೆಯಲ್ಲಿ ದಾಖಲೆಗಳಲ್ಲಿ !
*****
‘ಸೇಸಿ’ ಎಳತ್ತೂರು
ನಂ.
ಕೃಷ್ನಾ ರೆಸಿಡೆನ್ಸಿ
4ನೆಯ
ತಿರುವು
ಅಮರಜ್ಯೋತಿನಗರ
ವಿಜಯನಗರ
ಬೆಂಗಳೂರು 560040
No comments:
Post a Comment