Monday, May 4, 2020

ಮೇಲೆ ಬಾನು ಕೆಳಗೆ ಭೂಮಿ...


                                                                               
                                                              

ಕವತಾರ್ ಆಲಡೆಯ ಜಾತ್ರೆಯ ರಾತ್ರೆಯಲ್ಲಿ ಆಲಡೆಯಲ್ಲಿ ಎಲ್ಲಾ ಶ್ರಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರಮಿಕರನ್ನು ಮಾತನಾಡಿಸುತ್ತಾ ಇದ್ದೆ.  ಆಗ ಒಬ್ಬ ವ್ಯಕ್ತಿಅಬ್ಬಕ್ಕ ದಾರಗರ ಸಾವಿನ ಸಂಕೇತವಾಗಿ ನಡೆಯುವ ಜಾತ್ರೆ ಇದು. ತುಳುವರ ಸಾವಿನ ಸೂತಕಾಚರಣೆಯ ರೀತಿ ಜಾತ್ರೆಗೂ 16 ದಿನದ ಸೂತಕಾಚರಣೆ ಜಾತ್ರೆಯ ವೈಶಿಷ್ಟ್ಯ ಕೊನೆಯ ಜಾತ್ರೆ 16ನೆಯ ದಿನ. ಅದು ಇಲ್ಲಿ ದೇವಸ್ತಾನದಲ್ಲಿ ಅಲ್ಲ. ಮೂಲದ ನಾಗ ಬೆರ್ಮರ ಪರಿವಾರ ದೈವಗಳ ಮೂಲದ ನೆಲೆ ಕಾಡಿನಲ್ಲಿ .  ನಾಗ ಬೆರ್ಮ ಅರ್ಥಾತ್  ಉಲ್ಲಾಯನನ್ನು  ಕಾಡಿನಿಂದ ಇಲ್ಲಿಗೆ ತಂದು ಸ್ಥಾಪಿಸಿದ್ದಲ್ಲವೆ? ಆದರೂ ಮೂಲದ   ಕಾಡಿನ ಕ್ಷೇತ್ರದಲ್ಲಿ 16ನೆಯ ದಿನ ಸಮರಾಧನೆ ನಡೆಯುತ್ತದೆ. ನೀವು ದಿನ ಅಲ್ಲಿಗೆ ಬನ್ನಿಎಂದರು. ಹುಣ್ಣಿಮೆಯ ಲೆಕ್ಕಾಚಾರದಂತೆ ನಡೆಯುವ ಕವತ್ತಾರು ಆಲಡೆ ಜಾತ್ರೆಯ ದಿನಾಂಕವನ್ನು ಆಯಾ ವರ್ಷ ಮಾತ್ರ ಗೊತ್ತು ಪಡಿಸಿಕೊಳ್ಳಬಹುದು.

ನಾನು ಕವತಾರಿನ ನೆರೆಯ ಗ್ರಾಮ ಎಳತ್ತೂರಿನವಳು. ನಮ್ಮೂರಿನಿಂದ ಇಲ್ಲಿಗೆ ನಡೆದುಕೊಂಡೇ ಜನ ಬರುತ್ತಿದ್ದರು. ಈಗಲೂ ಬರುತ್ತಾರೆ. ದೇವಸ್ಥಾನದ ಆಡಳಿತದ ಮನೆಗೂ ನಮ್ಮ ಗುತ್ತುಗೂ ವೈವಾಹಿಕ ನಂಟುತನ ಇದೆ. ಹೀಗಾಗಿ 16ನೆಯ ದಿನ ಮತ್ತೆ ಅಲ್ಲಿಗೆ ನಾನು ಬೆಂಗಳೂರಿನಿಂದ ಹೋದೆ. ಬೇಸಗೆಯ ಕಾಲವಾದುದರಿಂದ ನನ್ನ ಕಾರು ಕಾಡಿನ ಮಣ್ಣಿನ ರಸ್ತೆಯಲ್ಲಿ ಕ್ಷೇತ್ರದ ಬಳಿಗೆ ಹೋಯಿತು.
ಅಂದು ಕೆಲವೇ ಜನ ಸೇರಿದ್ದರು. ನಾನು ನನ್ನ ಕ್ಯಾಮರಾ ಹಿಡಿದು ಸಹಾಯಕನೊಂದಿಗೆ ಹೋದೆ. ಬ್ರಾಹ್ಮಣ ಅರ್ಚಕರು ಪೂಜೆ ಮಾಡುತ್ತಿದ್ದರು. ವೃದ್ಧ ಅರ್ಚಕ ಮಂತ್ರ ಹೇಳುತ್ತಿದ್ದವರು ಮಂತ್ರ ವನ್ನು ನುಂಗಿ, ನನ್ನತ್ತ ನೋಡಿ, “ ನಿಲ್ಲು ನಿಲ್ಲು ನಿಲ್ಲು. ಅಲ್ಲೆ ನಿಲ್ಲು.  ಅಲ್ಲೆ...” ಎಂದು  ಬಡಬಡಿಸಿದಾಗ  ನನಗೆ ದಿಗಿಲು! ಹಾವಿನ ಕ್ಷೇತ್ರ! ಬೆರ್ಮೆರೆ ಕ್ಷೇತ್ರ! ನನ್ನ ಕಾಲಬಳಿ ಏನಾದರೂ...?” ಎಂದು ಗಾಬರಿ ಗೊಂಡೆ. ಕಾಡಿನ ಪೊದೆಗಳೆಡೆಯಿಂದ, ಹಾವು, ಸರ್ಪ ಸರಿದು ಬಂದಿರಬಹುದು. ಎಷ್ಟೆಂದರೂ ಇದು ನಾಗ ಬೆರ್ಮೆರ  ಕಾಡು..ನಾಗಬೆರ್ಮೆ ಅಂದರೆ 1001 ಹೆಡೆಯ ಸಂಕಪಾಲ ಸರ್ಪ ಎಂದು ಹೇಳುತ್ತಾರಲ್ಲ?
ನಾನು ನನ್ನ ಪಾದದ ಅತ್ತ ಇತ್ತ ನೋಡಿದೆ. ಅವು ಬರೇ ಬೇರುಗಳು! ಹಾವುಗಳಾಗಿರಲಿಲ್ಲ! ಸಮಧಾನ ಆಗಿ ಮತ್ತೆ ಸಾವರಿಸಿ
 ಏನಾಯಿತು  ಎಂದು ಕೇಳಿದೆ.
ನೀವು ಎಲ್ಲಿಗೆ ಬರುವುದು?ಈಗ ದಡಿ ಹಾಕಿ ಕೇಳಿದರು ಸಣಕಲು ಕಡ್ಡಿಯಂತಿದ್ದ ವಯಸ್ಕ.   
ನಾನು ಸಾವಧಾನವಾಗಿ ಉತ್ತರಿಸಿದೆ. “ನನ್ನ ಆದಿ ಆಲಡೆಯ ಮೂಲಕ್ಷೇತ್ರಕ್ಕೆ.”
ನೀನು ಅಲ್ಲೇ ನಿಲ್ಲು  ದೂರ...ದೂರ...” ನನಗೆ ಯಾಕೆಂದು ತಿಳಿಯಲಿಲ್ಲ. ಅರ್ಥಮಾಡಿಕೊಳ್ಳು ಸೋತು ಕೇಳಿದೆ,
ಅಂದರೆ
ನಿಂತಲ್ಲಿಂತ  ಹೆಜ್ಜೆ ಈಚೆ ಇಡಬೇಡ.”
ಯಾಕೆ?”
ಇದು ಬ್ರಾಹ್ಮಣರು ಕುಳಿತು ಕೊಳ್ಳುವ ಸ್ಥಳ. ಇಲ್ಲಿಗೆ ನೀನು ಬರ ಬಾರದು.”
ಬ್ರಾಹ್ಮಣರು  ಕುಳಿತುಕೊಳ್ಳಲಿ. ನಾನು ಅಲ್ಲಿ ಕುಳಿತುಕೊಳ್ಳುವುದಿಲ್ಲ.
“ನೀನು ಅಲ್ಲೇ ನಿಲ್ಲಬೇಕು.”
“ಇದು ನನ್ನ ಆದಿ ಆಲಡೆಯ ಕ್ಷೇತ್ರ. ನನ್ನ ಪೂರ್ವಜರ ಮೂಲಕ್ಷೇತ್ರ.” 
ಇರಬಹುದು ಜಾಗದಲ್ಲಿ  ಈಗ ನಾವು ಇದ್ದೇವೆ. ನೀನು ಆಚೆ ಹೋಗು
ನೀವಿದ್ದರೆ ಏನಂತೆ? ಇಲ್ಲಿ ಕಟ್ಟಡ ಇಲ್ಲವಲ್ಲ. ಗುಡಿ ಇಲ್ಲ. ನಿಮ್ಮ ಮೈಲಿಗೆ ಆಗಲು!  ಮೇಲೆ ಭಾನು ! ಕೆಳಗೆ ಭೂಮಿ! ಪ್ರಕೃತಿಯ  ಕ್ಷೇತ್ರ ಇದು. ನಮ್ಮ ಪ್ರವೇಶವನ್ನು ಹೇಗೆ ತಡೆಯುತ್ತೀರಿ? ಹೊಸಿಲು ಇಲ್ಲದ ಪ್ರಕೃತಿಯ ಕ್ಷೇತ್ರಕ್ಕೆ? “
ತಡೆಯುತ್ತೇವೆ
ಹೇಗೆ?”
 ನಿಮ್ಮ ಕಾಲಿನ  ಬಳಿ ಬೇರು ಇದೆ. ಬೇರನ್ನು ದಾಟಿ ನೀವು ಮುಂದೆ ಬರಬಾರದು
ನನಗೆ ಅಚ್ಚರಿ. ಬ್ರಾಹ್ಮಣ್ಯ ಕಾಡಿನ ಮುಕ್ತಪರಿಸರವನ್ನು ಬಿಡದೆ ಅಂಟುತ್ತಿದೆಯೆ? ಇದನ್ನು ನಾನು ಕನಸಿನಲ್ಲಿಯೂ ಕಲ್ಪಿಸಿರಲಿಲ್ಲ. ಕ್ಷೇತ್ರಕಾರ್ಯದಲ್ಲಿ ಸಾಮಾನ್ಯವಾಗಿ ನಾನು ಎಲ್ಲರ ಭಾವನೆಗಳನ್ನು ಗೌರವಿಸಿ ಹೆಜ್ಜೆ ಇಡುತ್ತೇನೆ. ಅವರವರ ನಂಬಿಕೆಗಳನ್ನು ಗೌರವಿಸುತ್ತೇನೆ. ಗೌರವಿಸುವ ಅಗತ್ಯ ಇದೆ. ಆದರೆ ಇಲ್ಲಿ?”
ತಾಳ್ಮೆ ಕಳೆದುಕೊಳ್ಳದೆ ಹೇಳಿದೆ ನಾನು, “ ನಾನು ಅಜಿಲರ ( ಕ್ಷೇತ್ರದ ಆಡಳಿತ ನಡೆಸುವ ಮನೆ) ಬಂಧು. ಒಂದು ಗುತ್ತು ಮನೆತನದನ ಒಕ್ಕೆಂದಿ (ಬಂಟ) ಮಹಿಳೆ
ಹಾಗಾದರೆ ಅಜಿಲರ ಮನೆಯವರಿಗಾಗಿ ಇರುವ ಸ್ಥಳದಲ್ಲಿ ಹೋಗಿ ಕುಳಿತುಕೊಳ್ಳಿಎಂದು ಇನ್ನೊಂದು ದಿಕ್ಕು ತೋರಿಸಿದರು. (ಅಜಿಲರ ಮನೆಯವರು ಆಗಿನ್ನೂ ಬಂದಿರಲಿಲ್ಲ) ಅಲ್ಲಿ ಹೋಗಲು ನನ್ನ ಅಡ್ಡಿ ಏನಿರಲಿಲ್ಲ. ಆದರೆ ಅಲ್ಲಿಗೂ ನೇರದಾರಿಯಿಂದ ಹೋಗಬಾರದಂತೆ. ಮಣ್ಣಿನ ಜೆಡ್ಡೆಗೆ ಸುತ್ತಿ ಬಳಸಿ ಹೋಗಬೇಕಾಗಿತ್ತು. ಅಲ್ಲಿಂದ ಇಲ್ಲಿ ನಡೆಯುವ ಆಚರಣೆಗಳನ್ನು ಗಮನಿಸಲೂ ಸಾಧ್ಯ ಇಲ್ಲ.
 ನನ್ನೊಳಗೆ ಆಗುತ್ತಿರುವ ಯೊಯ್ದಾಟ ಅಲ್ಲಿದ್ದವರಿಗೆ ಅರ್ಥವಾದೀತು. ನನಗೆ ಅಚ್ಚರಿ ಮತ್ತು ಅವಮಾನ ಆಗಿತ್ತು. ನಮ್ಮ ಮೂಲತಾನ ಕ್ಷೇತ್ರದಲ್ಲಿ ಪರಿಯ ಅಸ್ಪøಶ್ಯತೆ! ಅಧಿಕಾರಸ್ಥ ಜಾತಿಗೆ! 
ನಾನು ಮೌನವಾಗಿ ನಿಂತುದನ್ನು ಕಂಡ ಒಬ್ಬ ವಿದ್ಯಾವಂತ ಬ್ರಾಹ್ಮಣ ತರುಣ ಹೇಳಿದ.
ಮೇಡಮ್.  ನೀವು ತಪ್ಪು ತಿಳಿಯ ಬೇಡಿ. ನೀವು ಇಲ್ಲಿ ಫೋಟೋ ತೆಗೆದರೂ ಫೋಟೋ ಬರುವುದಿಲ್ಲ. ಇದು ಬಹಳ ಕಾರನಿಕದ ಕ್ಷೇತ್ರ.’
ಪೋಟೋ ಬರುತ್ತದೋ ಬಿಡುತ್ತದೋ ಅದು ಮೇಲಿನ ಮಾತು ಅದು ನನಗೆ ಸಂಬಂಧಿಸಿದ ವಿಚಾರ. ಆದರೆ ಶೂದ್ರರ ಮೂಲತಾನದಲ್ಲಿ ಬ್ರಾಹ್ಮಣರು ಹೀಗೆ ಮಾಡುವುದು ಸರಿಯಲ್ಲಎಂದೆ ಮನಸ್ಸಿನಲ್ಲಿ.  
ಒಂದು ಹೆಣ್ಣಿನ ಎದೆಯಾಳದ ನೋವಿನ ಮಾತು  ಇದು. ಮತ್ತೆ ಅಲ್ಲಿ ನಿಲ್ಲಲು ಮನಸ್ಸಾಗಲಿಲ್ಲ.ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು. ನನಗೆ ಅದನ್ನು ತೋರಿಸಿಕೊಳ್ಳಲು ಮನಸ್ಸಿಲ್ಲ.   ನನ್ನದೇ ಆದಿ ಆಲಡೆ ಮೂಲತಾನ ಕ್ಷೇತ್ರದಲ್ಲಿ ಕ್ಷೇತ್ರಕ್ಕೆ ಸೇರದವರಿಂದ ಆದ ಅವಮಾನ ಇದು. 
 ಇದೇ ಕ್ಷೇತ್ರಕ್ಕೆ ಮರಳಿ ಬರುತ್ತೇನೆ. ಇಲ್ಲಿಯ ಪೋಟೋ ನನ್ನ ಕೃತಿಯ ಮುಖಪುಟದಲ್ಲಿರಬೇಕುನನ್ನ ಅಂತಶಕ್ತಿ ಹೇಳಿತು! .
                ಮೇಡಮ್ ಊಟ ಮಾಡಿ ಹೋಗಿ. ಇದು ಸಮರಾಧನೆ. ಎಲ್ಲರಿಗೂ..”  ಮತ್ತೆ ಆ ಬ್ರಾಹ್ಮ್ಮಣ ತರುಣ ಒತ್ತಾಯಿಸಿದ.  ನಾನು ಸಮರಾಧನೆಯ ಊಟ ಉಂಡು ದಕ್ಷಿಣೆ ಪಡೆಯಲು ಬಂದವಳಲ್ಲವಲ್ಲಅಂದುಕೊಂಡೆ ಮನಸ್ಸಲ್ಲಿ. ಮಾತು ಆಡಲಿಲ್ಲ.
ಆ ತರುಣನಿಗೆ ಇರಲಿ ಬಿಡಿ ನಾನು ಹೊರಡುತ್ತೇನೆಎಂದೆ ಎಲ್ಲರೂ ಗಪ್ ಚುಪ್!
ತಿರುಗುವ ಮುನ್ನ ಶ್ರೀ ನಾರಾಯಣ ಗುರುವನ್ನು ನೆನಸಿಕೊಂಡೆ. ಕೇರಳದಲ್ಲಿ ಅವಮಾಣಕ್ಕೆ ಒಳಗಾದ ವಿವೇಕಾನಂದರು ನೆನಪಾದರು. ಕಣ್ಣಂಚಿನ ನೀರು ತುಳುಕಬಾರದು!
 ಒಮ್ಮೆ ಸುತ್ತ ಕಣ್ಣು ಹಾಯಿಸಿದೆ.             
ಆ ದಿನ ಮಳೆಗಾಲದಲ್ಲಿ ನೀರು ಹರಿಯುತ್ತಿದ್ದ ಕ್ಷೇತ್ರದ ತೋಡು ಒಣಗಿತ್ತು. ಈಗ ಅಡುಗೆಯ ನೀರಿಗಾಗಿ ಗುಂಡಿ ತೆಗೆದಿದ್ದರು. ಅಲ್ಲೇ ಇದ್ದ ರುಬ್ಬುವ ಕಲ್ಲಿನಲ್ಲಿ ಅಡುಗೆ ಭಟ್ಟರು (ಬ್ರಾಹ್ಮಣರು) ಅಡುಗೆಗಾಗಿ ರುಬ್ಬುತ್ತಿದ್ದರು. ತರಕಾರಿಗಳನ್ನು  ಕೆಲವರು ಹಚ್ಚುತ್ತಿದ್ದರು. ಸಮಾರಾಧನೆಗೆ ಬೇರೆಡೆ ಬೇಯಿಸಿ ತರುವ ಅಡುಗೆ ಆಗುವುದಿಲ್ಲ. ಇಲ್ಲಿಯೇ ಬೇಯಬೇಕಂತೆ.
                ಮರಳಿ ಮನೆಗೆ ಬಂದರೂ ನನ್ನೊಳಗಿನ  ನೋವು ನನ್ನನ್ನೇ ಕೊರೆಯುತ್ತಿತ್ತು. ನಮ್ಮ ಮೂಲತಾನ  ಆದಿ ಆಲಡೆ ಕ್ಷೇತ್ರ ಅದು. ಬ್ರಾಹ್ಮಣರು ಯಾರೂ ಅಲ್ಲಿ ಪ್ರಾರ್ಥಿಸುವುದಿಲ್ಲ. ಅಲ್ಲಿ ಇರುವ ಬೆರ್ಮರು ನನ್ನನ್ನು ತಡೆದ ಅರ್ಚಕರ  ದೇವರಲ್ಲ,ಅವರ ದೈವವೂ ಇಲ್ಲ.  ಅವರು ಅಲ್ಲಿಗೆ ಬಂದು ಅವರ ವೃತ್ತಿಗಾಗಿ.
ತುಳು ನಲೆದ ಜಾತಿ ಸಮನ್ವಯತೆ ಧರ್ಮ ಸಮನ್ವಯತೆ ಮಾದರಿ ಯಾಗಿದ್ದುದು.
“ಈ ಕ್ಷೇತ್ರದ ಕಾಡು ಪರಿಶಿಷ್ಟ ಪಂಗಡದ ಆಸ್ತಿ! ಆಡಳಿತ ಬಂಟರದ್ದು! ಪೂಜೆ ಬ್ರಾಹ್ಮಣರದ್ದು!’ ಇಲ್ಲೂ ಸಮನ್ವಯತೆ ಮೆಚ್ಚಬೇಕಾದುದೆ.
 ಬಟ್ರು (ಪೂಜೆಯ) ಪಂಡಿತರು, ತಿಳಿದವರುಎಂದು ಶೂದ್ರವರ್ಗ ಆವರನ್ನು ಗೌರವಿಸುತ್ತದೆ. ಇದೇ ಏನು ಅವರ ಜ್ಞಾನ! ಇದೇ ಏನು ಅವರ ತಿಳುವಳಿಕೆ!  ರಾತ್ರಿ  ನಿದ್ದೆ ಬರಲಿಲ್ಲ.
                ಪುರಾತನ ತುಳುನಾಡಿನಲ್ಲಿ ನಾಗ ಪೂಜೆ ಮಾಡುತ್ತಿದ್ದವರು ಇಲ್ಲಿಯ ಬಿರುವ ಬಿಲ್ಲವ/ಬಿಲ್ಲಾಳು) ಜನಾಂಗ. ಇವರು ಸ್ಥಳೀಯ ದೈವಗಳ ಪೂಜೆ ಮಾಡಿ ಪೂಜಾರಿ ಜಾತಿಯಾಗಿ ಗುರುತಿಸಿಕೊಂಡವರು.  ಪೂಪೂಜನದಾಯೆ  ಪೂಜಾರಿ!  ಮುಂದೆ ಪೂಜಾರಿ  ಜಾತಿ ಹೆಸರು ಬಿಲ್ಲವರಿಗೆ ಅನ್ವಯವಾತು. ಈಗಲೂ ಅಪರೂಪಕ್ಕಾದರೂ ಪೂಜಾರಿಗಳು ಪೂಜೆ ಮಾಡುವ ನಾಗ ಕ್ಷೇತ್ರ ಕೂಡಾ ಉಳಿದು ಬಂದಿರುವುದೇ ಇದಕ್ಕೆ ಜೀವಂತ ಸಾಕ್ಷಿ. ಕೆಲವೆಡೆ ಪರಿಶಿಷ್ಟರೂ ನಾಗಪೂಜೆ ಮಾಡುತ್ತಿದ್ದಾರೆ. ಅವರ ಪೂಜೆಯ ನೆಲದ ಗಂಧವನ್ನು ಬ್ರಾಹ್ಮಣರೂ ಸ್ವೀಕರಿಸುತ್ತಾರೆ! ಇದು ಈ ನೆಲದ ದೋಷವಲ್ಲ!
ನಾನು ನನ್ನ ಕ್ಷೇತ್ರ ಕಾರ್ಯವನ್ನು ಮೊಟಕುಗೊಳಿಸಿ  ಬೆಂಗಳೂರಿಗೆ ಮರಳಿದೆ.
   ಮಳೆಗಾಲ ಆರಂಭವಾಯಿತು!  ಮರಳಿ ಪಯಣಿಸಿದೆ, ನನ್ನೂರಿಗೆ ,ನನ್ನ  ಮೂಲ ಕ್ಷೇತ್ರಕ್ಕೆ . ಅಲ್ಲಿಯ ಅಧ್ಯಯನ ಪೂರ್ಣಗೊಳಿಸಲು.
 ಊರಿಗೆ ಬಂದವಳೇ ಅದೇ ಕ್ಷೇತ್ರಕ್ಕೆ ಪ್ರಯಾಣಿಸಿದೆ. ಜೊತೆಗೆ ನನ್ನ ಸೋದರ ಜಯರಾಮ ಶೆಟ್ಟಿ ಇದ್ದರು. ಅಣ್ಣನ ಪರಿಚಯ ಇದ್ದ ಸ್ಥಳೀಯ ಪರಿಶಿಷ್ಟ (ನಲ್ಕೆಯವ)ಪಂಗಡದ ಒಬ್ಬರು ನಮ್ಮ ಜೊತೆಗೆ ಬಂದರು. ನಾವು ಹೋದಾಗ ಪಸುರುಟ್ಟು ಬೆರ್ಮೆರ ಕಾಡು ಸ್ವಾಗತಿಸಿತು! ಚೈತನ್ಯದಾಯಕ ಹಚ್ಚ ಹಸಿರು ಕಾನನ ನನ್ನನ್ನು ಮುದಗೊಳಿಸಿತು.
 ಬೆರ್ಮೆರ ಕಾಡು ಅಂದರೆ ಭಯಾನಕ ಎಂದೇ ಲೆಕ್ಕ.  ಹೊರಗಡೆಯ ನೋಟ  ಇಲ್ಲೂ ಭಯಾನಕವೇ! ಬಿದ್ದ ಮಳೆಗೆ ಈಗ ಕಾಡು ಸೊಂಪಾಗಿ  ಬೆಳೆದು ನಡೆವ ದಾರಿಯನ್ನು ಕೂಡಾ ಮುಚ್ಚಿತ್ತು!
                ನಾವು ನಡೆದು  ಬೆರ್ಮೆರ ಕಾಡಿನೊಳಗೆ ಹೋದೆವು! ಕಾಡೊಳಗೆ  ಬಂದು ನೋಡಿದಾಗ ಮೈಪುಳಕಗೊಂಡಿತು! ಈಗ  ಇಲ್ಲಿ ವಸುಂಧರೆಯ ಸೌಂದರ್ಯ ನೂರ್ಮಡಿಸಿತ್ತು! ಎಂತಹ ಆನಂದಮಯಿ ಪ್ರಕೃತಿ! ನವೋನವ್ಮೋಶಾಲಿನಿ ವಸುಂಧರೆ!  ನನ್ನ ಮನಸ್ಸಿನಲ್ಲಿ ಚೈತನ್ಯ ಪುಟಿದೆದ್ದಿತು, ಇಲ್ಲೇ ಕಳೆದು ಹೋಗಿದ್ದ ಚೈತನ್ಯ  ಚಿಮ್ಮಿ ಕುಣಿಯಿತು! ದೇವರು ಎಂದರೆ ಇದೇ...ಇದೇ...ಇದೇ.....ಬೆರ್ಮೆರ ಗುಂಡ ಎನ್ನುವ ಜೆಡ್ಡೆಯ (ಅದು ಜರಿದ ಚೈತ್ಯ/ಮುಡಿಂಜ) ಸುತ್ತಲೂ ಸಣ್ಣ ತೊರೆ  ಜುಳು ಜುಳು ಎಂದು ಹರಿಯುತ್ತಿದೆ ಸ್ಪಟಿಕ ನಿರ್ಮಲ ಸಲಿಲ. ಗಾಜಿನ ಮುತ್ತುಗಳಂತೆ ಪುಟಿಯುತ್ತಿವೆ. ನೀರ ಹನಿಗಳು!  ಜಿಡ್ಡೆಯ ಮೇಲೆ ಒಂದು ಗುಂಡು ಕಲ್ಲು. ಸಮರಾಧನೆಯ ದಿನ ಅದನ್ನು ಅಲಂಕರಿಸಿದ ಹೂ ಇಂದು  ಸ್ವಲ್ಪ ಮಾತ್ರ ಬಾಡಿತ್ತು. ಜಿಡ್ಡೆಯ ಮೇಲಿನಿಂದ ಹಬ್ಬಿರುವ ಬಳ್ಳಿಗೆ  (ಬಿಳಲು) ನೇತಾಡಿಸಿದ್ದ ಹೂಮಾಲೆ ಸಮರಾಧನೆ ನಡೆದುದಕ್ಕೆ ಸಾಕ್ಷಿ ಒದಗಿಸಿತ್ತಿತ್ತು!   ಗುಂಡುಕಲ್ಲುಬೆರ್ಮೆರ್  ಬಾಡಿದ ಹೂಗಳಿಂದ ತನ್ನ ಪಾವಿತ್ರ್ಯವನ್ನು ಎತ್ತಿ ತೋರಿಸುತ್ತಿತ್ತು. ನೆಲದಲ್ಲಿ ನಾಗಶಿಲ್ಪಗಳ ಮೂರು ಶಿಲೆಗಳು ಇದ್ದುವು! ಅವುಗಳ ಮೇಲೆ ಇದ್ದ ಪಿಂಗಾರದ ಎಸಳುಗಳು ಬಾಡಿದ್ದರೂ ಒಣಗಿರಲಿಲ್ಲ. ನಾಗ ಶಿಲ್ಪಗಳಲ್ಲಿ ಒಂದು ಭಿನ್ನವಾಗಿತ್ತು.
ನಿಜ ಹೇಳ್ತೀನಿ. ಕ್ಷಣ ನನಗನಿಸಿದ್ದು, “ ನಾಗ ಬೆರ್ಮ (ನನ್ನ ಲೆಕ್ಕದಲ್ಲಿ ನಾಗ ಬೆರ್ಮ ಅಂದರೆ ಇಂತಹ ಪ್ರಕೃತಿ) ನಿಜವಾಗಿ ಇದೆಲ್ಲ ನಿನ್ನ ಕಾರ್ಣಿಕ! ಖಂಡಿತಾ ಕ್ಷೇತ್ರಕ್ಕೆ ಕಾರ್ಣಿಕ ಇದೆ! ಪ್ರಕೃತಿಯೇ  ಒಂದು ಅದ್ಭುತ  ಕಾರ್ಣಿಕ ಶಕ್ತಿ!
 ಅಂದು ಅರ್ಚಕ ನನ್ನನ್ನು ಅವಮಾನಿಸಿ ಮರಳಿಸದೆ ಇದ್ದಿದ್ದರೆ ನಿನ್ನ ನಿಜದ ದರ್ಶನ ನನಗೆ ನೀನು ತೋರುತ್ತಿರಲಿಲ್ಲ!”  
ನಾನು ಜುಳು ಜುಳು ಹರಿಯುವ ನೀರಿನಲ್ಲಿ ಕಾಲೂರುತ್ತಾ, ಆಡುತ್ತಾ, ನೀರು ಹಾರಿಸುತ್ತಾ ಶಾಲಾ ಹುಡುಗಿಯಂತೆ ನಡೆದೆ. ಆಗ  ನನ್ನ ಮಾಹಿತಿದಾರ  ಬೇಡ ...ನೀವು ಗುಂಡದ ಹತ್ತಿರ ಹೋಗಬೇಡಿ...ಕಾಡು ಇದು.  ಬೇಗ ಈಚೆ ಬನ್ನಿ ....ಎಂದ.”  ಅವನಿಗೆ ನಾಗ ಬೆರ್ಮ, ಸರ್ಪ ಪರಿವಾರದ ಭಯ. ಆತ ಬೆರ್ಮರ ಪರಿವಾರಗಳಿಗೆ ಕೋಲ ಕಟ್ಟುವವ. 
ಇದು ನನ್ನ ಕುಲದೇವ ನಾಗಬೆರ್ಮ ಮಾರಾಯ. ನಾನು ಶಕ್ತಿಯ ಬಳಿ ಹೋಗದೆ ಇನ್ನಾರು ಹೋಗುವುದು?” ಎಂದು ಅಲ್ಲೇ ಕ್ಷಣ ಹೊತ್ತು ನಿಂತೆ. ನನಗೆ ಬೇಕಾದಂತೆ ಫೋಟೋ ಕ್ಲಿಕ್ಕಿಸಿದೆ. ನನ್ನದುನಿಕಾನ್ ಡಿ 90’  ಡಿಜಿಟಲ್ ಕೆಮರಾ. ಫೋಟೋ ತೆಗೆದು ಪರಿಶೀಲಿಸಿದೆ. ಪೋಟೋ ಬರಲ್ಲ ಎಂದಿದ್ದನಲ್ಲ ಅಂದು. ಪದವಿ ಓದಿದ ಹುಡುಗ. ಅದಕ್ಕಾಗಿ ಅಲ್ಲೇ ನಿಂತು ಪರಿಸೀಲಿಸಿದೆ!
ಓದಿದ ಬ್ರಾಹ್ಮಣ ಹುಡುಗನೂ ಕಾರ್ಣಿಕದ ಹೆಸರಲ್ಲಿ ನನ್ನ ನೋವು ಮರೆಯಲು ಹಾಗೆ ಹೇಳಿದನೋ  ಅಥವಾ ಆತನೂ ಹಾಗೆ ಭಾವಿಸಿದ್ದನೆ?  ಅದು ಮುಖ್ಯವಲ್ಲ. ಆದರೆ ನನಗೆ ಬ್ರಹ್ಮ/ವಸುಂಧರೆ ಒಲಿದು ಬಂದಿದ್ದಳು!
ಮುಂದೆ ನನ್ನ ಡಿಲಿಟ್ ನಿಬಂಧ ನವ ಕರ್ನಾಟಕ ಪ್ರಕಾಶನದಿಂದ  ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆಹೆಸರಲ್ಲಿ ಅಚ್ಚಾಯಿತು  ‘ಕವತ್ತಾರು ಆದಿ ಆಲಡೆ ಮೂಲತಾನ ಕ್ಷೇತ್ರಈ ಪೋಟೋವನ್ನು  ಮುಖಪುಟಕ್ಕೆ ಹಾಕಲು  ಸಲಹೆ ನೀಡಿದೆ ರಾಜಾರಾಂ  ಅವರಿಗೆ. ಅವರು ಒಪ್ಪಿಕೊಂಡರು. ಕವತಾರು ಮೂಲತಾನ ನಾಗಬ್ರಹ್ಮ ಕ್ಷೇತ್ರದ ಮುಖ ಪುಟ ಹೊತ್ತು ಕೃತಿ ಹೊರಗೆ ಬಂತು. ನನಗೆ ಬಹಳ ತೃಪ್ತಿ ತಂದಿದೆ ಕೆಲಸ; ಕೃತಿ.  ಬಂಟರು ಕೃತಿಗಿಂತಲೂ ಹೆಚ್ಚನ ತೃಪ್ತಿ ಕೃತಿಯಿಂದ ನನಗಾಗಿದೆ!
2012ರಲ್ಲಿ ಮೊದಲ ಮುದ್ರಣವಾದ ಕೃತಿ 2016ರಲ್ಲಿ ಮರು ಮದ್ರಣ ಕಂಡಿದೆ.
ನನ್ನ ಎಲ್ಲ ಸಹೃದಯರಿಗೂ ನಮಸ್ಕಾರ.

ಡಾ. ಇಂದಿರಾ ಹೆಗ್ಗಡೆ





No comments:

Post a Comment