Monday, April 27, 2020

-Indraprsatadinda
part 2

ಪನ್ನಾ ನೇಷನಲ್ ಪಾರ್ಕ್- ಕೆನ್ ನದಿಯಲ್ಲಿ ಪ್ರಕೃತಿಯ ಚಮತ್ಕಾರ-ರಾಣೆ ಪಾಲ್ಸ್:
ಬೆಳಿಗ್ಗೆ ಉಪಹಾರ ಎಲ್ಲಿ ಎಂದು ವಿಚಾರಿಸುವಾಗ ಒಂದು ತಮಿಳು ಕುಟುಂಬ ನಡೆಸುತ್ತಿದ್ದ ಹೊಟೇಲ್ ಕಣ್ಣಿಗೆ ಬಿತ್ತು. ಮನೆಯೂ ಅದೇ ಹೊಟೇಲೂ ಅದೇ. ಅವಿಭಕ್ತ ಕುಟುಂಬ ಹೊಟೇಲ್ ನಡೆಸುತ್ತಿತ್ತು. ಈಕೆ ಮತ್ತು ಇವರ ಕುಟುಂಬ ಇಲ್ಲಿಗೆ ವಲಸೆ ಬಂದು ಸುಮಾರು 40 ವರ್ಷಗಳಾದುವಂತೆ. ಈಕೆ ತನ್ನ ಪತಿ ಇಹಲೋಕ ತ್ಯಜಿಸಿದ ಮೇಲೆ ಅಣ್ಣನ ಜತೆಗೆ ನೆಲಸಲು ಬಂದವಳು. ಅಣ್ಣ ತಂಗಿ ಕುಟುಂಬದ ಎಲ್ಲರೂ ಇಲ್ಲಿ ಇದ್ದಾರೆ.
ಮನೆಯವರೇ ಮಾಡುವ ದೋಸೆ ಆದರೂ ದೊಸೆತಿಂದು ಬಾಯಿ ಕೆಡಿಸಿಕೊಂಡು ನಾವು ರಾಣೆಫಾಲ್ಸ್ ನೋಡಲು ರಿಕ್ಷಾ ಹಿಡಿದು ಹೊರಟೆವು. ರಾಣೆ ಫಾಲ್ಸ್ ಇಲ್ಲಿಂದ 20 ಕಿಲೋಮೀಟರ್ ದೂರ.
ಪನ್ನಾ ರಾಷ್ಟ್ರೀಯ ಉದ್ಯಾನವನದ ಮಧ್ಯದಿಂದ ಹರಿದು ಬರುವ ಕೆನ್ ನದಿಯ ಮುಂದಿನ ಹೆಜ್ಜೆ ರಾಣೆ ಫಾಲ್ಸ್. ರಾಣೆ ಫಾಲ್ಸ್ ರಾಷ್ಟ್ರೀಯ ಉದ್ಯಾನವನದ ಭಾಗ. ಕೆನ್ ನದಿಗೆ ತಲುಪಬೇಕಾದ 20 ಕಿಲೋಮೀಟರ್ ಕಚ್ಚಾ ರಸ್ತೆ ಪನ್ನಾ ರಾಷ್ಟ್ರೀಯ ಉದ್ಯಾನವನದ ಮೂಲಕ ಹೋಗುತ್ತದೆ. ಆದರೆ ಮಳೆಬಾರದೆ ಉದ್ಯಾನವನದ ಹಸಿರು ಕಡಿಮೆಯಾಗಿದೆ. ಕುರುಚಲು ಗಿಡಗಳು ಇಲ್ಲವೇ ಇಲ್ಲ. ಕೆಲವೊಂದು ಸೊರಗಿದ ಸಣ್ಣ ಮರಗಳಿವೆ. ಅದರಡಿ ಜಿಂಕೆ, ಸಾರಂಗ, ಊರವರು ಸಾಕಿರುವ ಹಸುಗಳು ವಿಶ್ರಮಿಸಿದ್ದವು. ದಾರಿಯುದ್ದಕ್ಕೂ ಜಿಂಕೆ ಸಾರಂಗಗಳನ್ನು ನೋಡಬಹುದು.
ಕೆನ್ ನದಿಯ ಶಿಲಾಪದರಗಳಲ್ಲಿ ಕಲಾಕೃತಿ ರಚಿಸಿದವಳು ವಸುಂಧರೆ. ಅವಳ ಈ ಅದ್ಭುತವನ್ನು ವರ್ಣಿಸಲು ಭೂಗರ್ಭ ಶಾಸ್ತ್ರಜ್ಷರ ಅಗತ್ಯ ಇದೆ. ನದಿ ಪಾತ್ರದ ಭೂಮಿಯ ಶಿಲಾ ಪದರದ ಮೇಲೆ ವಾಲ್ಕೆನಾ ಬಿದ್ದ ಪರಿಣಾಮವಾಗಿ ಭೂಮಿಯ ಮೇಲೆ ಈ ರೀತಿಯ ಅದ್ಭುತ ಚಿತ್ರಕಲೆ ರಚಿತವಾಗಿದೆ ಎನ್ನುತ್ತಾನೆ ಕಾವಲುಗಾರ. ಬೂದು, ಪಿಂಕ್. ಕೆಂಪು, ಪಚ್ಚೆ, ನೀಲ ಗ್ರೆನೆಟ್ಗಳುಳ್ಳ ಶಿಲಾಭೂಮಿ ಇದು. ಕಮರಿಗಳಲ್ಲಿ, ಕೊರಕಲುಗಳಲ್ಲಿ ಪದರ ಪದರವಾಗಿ ಕಾಣುವ ಅನೇಕ ಬಣ್ಣಗಳ ಗ್ರೆನೆಟ್ನ್ನು ನೂರು ಅಡಿ ಮೇಲಿನಿಂದ ಗುರುತಿಸಬಹುದು. ಈ ಶಿಲಾಭೂಮಿಯನ್ನು ಅತಿಸೂಕ್ಷ್ಮ ಯಂತ್ರದಿಂದ ಕಲಾತ್ಮಕವಾಗಿ ಕತ್ತರಿಸಿ ಚಿತ್ರಿಸಿದಂತೆ ಇದೆ ಇಲ್ಲಿಯ ದೃಶ್ಯ ವೈಭವ. ವಸುಂಧರೆಯ ಈ ಅದ್ಭುತ ಡಿoಛಿಞ ಜಿoಡಿmಚಿಣioಟಿsನ್ನು ಪ್ರವಾಸಿಗರು ನೋಡಲೇಬೇಕು. ವಸುಂಧರೆಯ ಗರ್ಭದಲ್ಲಿ ಮೂಡಿರುವ ಈ ಅದ್ಭುತ ಸೃಷ್ಟಿ ಇದು! ಗರ್ಭಗುಡಿಯಲ್ಲಿ ಬಂದಿಯಾಗಿರುವ ಪುರೋಹಿತರ ಕಪಿ ಮುಷ್ಟಿಯಲ್ಲಿ ನಲುಗುತ್ತಿರುವ ದೇವರನ್ನು ಕಾಣುವುದಕ್ಕಿಂತ ತನ್ನ ಕೌಶಲ, ಚಮತ್ಕಾರದಿಂದ ನಮ್ಮನ್ನು ಬೆರಗುಗೊಳಿಸುವ ಇಂತಹ ಪ್ರಕೃತಿಯನ್ನು ಕಂಡರೆ ನಮ್ಮ ಅಜ್ಞಾನ ದೂರವಾಗಬಹುದೇನೊ? ದಡದಲ್ಲಿ ಕಾಣುವ ಈ ವಿóಶಿಷ್ಟ ಕಲ್ಲುಗಳ ಮೇಲೆ ತಕ ತೈ ಎಂದು ನಡೆದಾಡ ಬೇಕು. ಹೀಗಾಗಿ ನಡೆದಾಡಲು ದಾರಿ ನಿರ್ಮಾಣವಾಗಿದೆ. ಈ ಪ್ರಕೃತಿ ನಿರ್ಮಿತ ಅದ್ಭುತವು ಸುಮಾರು 5 ಕಿಲೋಮೀಟರ್ ದೂರದವರೆಗೆ ಹಬ್ಬಿದೆ. ಕೊರಕಲಿನ ಆಳ ಸುಮಾರು 30 ಮೀಟರ್. ಅಷ್ಟು ಆಳದಲ್ಲಿಯೂ ಒಂದೇ ಸಮವಾಗಿ ನದಿ ಹರಿಯುವುದಿಲ್ಲ. ಅಲ್ಲಿಂದಲೂ ಕೆಳಗೆ ಜಿಗಿದು, ನಿಂತು, ಸಾವರಿಸಿ, ತಾಳ್ಮೆಯಿಂದ ಹರಿಯುತ್ತಾಳೆ. ನಿಂತ ನೀರಿನ ಆಳವನ್ನು ಯಾರು ಬಲ್ಲರು? ಅಲ್ಲಲ್ಲಿ ಇರುವ ಮಡು(ಹರಿವ ನೀರಿನಲ್ಲಿ ಇರುವ ಆಳ ಹೊಂಡ)ವಿನÀ ನೀಲ ಬಣ್ಣವು ಅದರ ಆಳವನ್ನು ಸಂಕೇತಿಸುತ್ತದೆ. ಕಾಲ ಕಾಲಕ್ಕೆ ಮಳೆ ಬಂದರೆ ಅಲ್ಲಲ್ಲಿ ಧುಮುಕುವ ಅನೇಕ ಜಲಪಾತಗಳ ನೋಟವನ್ನು ಆನಂದಿಸಬಹುದು ಎನ್ನುತ್ತಾನೆ ಕಾವಲುಗಾರ. ಅದು ಸುಳ್ಳಳ್ಳ. ಮಳೆ ಹೆಚ್ಚಾಗಿ ಸುರಿದು ನೆರೆ ಬಂದರೆ ನದಿಯ ಮೇಲ್ಭಾಗದ ನದಿ ಪಾತ್ರ ಮಾತ್ರವಲ್ಲ ನದಿಯ ಮೇಲ್ಭಾಗದ ಭೂಮಿಯೂ ಜಲಾವೃತವಾಗಿ ನಾವು ಬಂದ ರಸ್ತೆ, ಅಲ್ಲಿ ಇರುವ ಸಣ್ಣ ಅಂಗಡಿಗಳು ಜಲಾವೃತವಾಗುತ್ತದೆ ಎಂದು ಅಂಗಡಿಯವರೂ ಹೇಳಿದರು. ಆಗ ಇಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸುತ್ತಾರೆ ಎಂದ ಕಾವಲುಗಾರ. ಈಗ ನೀರು ನದಿ ಪಾತ್ರಕ್ಕಿಂತ 30 ಅಡಿ ಆಳದಲ್ಲಿ (ಜಿಗಿದು) ಹರಿಯುತ್ತದೆ. ಈ ಭಾಗದಲ್ಲಿ ಮಳೆ ಹೆಚ್ಚು ಸುರಿದಾಗ ಒಮ್ಮೆ ಬಂದು ಇಲ್ಲಿಯ ಸುಂದರ ದೃಶ್ಯವನ್ನು ನೋಡಬೇಕು ಎಂದು ಮನಸ್ಸಾಯಿತು.
ಕೆನ್ ನದಿ ಒಂದು ವಿಶಿಷ್ಟ ಜಾತಿಯ ಮೊಸಳೆಗಳಿಗೆ ಪ್ರಸಿದ್ಧ. ಪನ್ನಾ ಕಾಡಿನ ಒಳಬಾಗದಲ್ಲಿ ಕೆನ್ ನದಿಯಲ್ಲಿ ghಚಿಡಿiಚಿಟ (ಉದ್ದಮೂತಿಯ ಏಷ್ಯಾದ ಮೊಸಳೆ) ಎಂಬ ಅಪರೂಪದ ಜಾತಿಯ ಮೊಸಳೆಗಳು ಹೆಚ್ಚಾಗಿದ್ದು ಮೊಸಳೆ ಪಾರ್ಕ್(ಏeಟಿ ಉhಚಿಡಿiಚಿಟ sಚಿಟಿಛಿಣuಚಿಡಿಥಿ ) ಇಲ್ಲಿ ನಿರ್ಮಾಣವಾಗಿದೆ.
ಕಾವಲುಗಾರ ನಮ್ಮನ್ನು ಮೊಸಳೆ ಇರುವಲ್ಲಿಗೆ ಕರೆದೊಯ್ದ. ‘ದಿನಾ ಮುಂಜಾವದಲ್ಲಿ ಮೊಸಳೆಗಳು ನೀರಿನಿಂದ ಹೊರಗೆ ಬಂದು ಬಿಸಿಲು ಕಾಯುತ್ತವೆ’ ಎಂದು ಒಂದು ಸ್ಥಳ ತೋರಿಸಿದರು ಸ್ಥಳೀಯರು. ಆ ಭಾಗದಲ್ಲಿ ನದಿಗೆ ಇಳಿಯಲು ಅವಕಾಶ ಇದೆ. ಉಳಿದೆಡೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ‘ನೀವು ಇಷ್ಟ ಪಟ್ಟರೆ ನದಿಗೆ ಇಳಿದು ಸ್ನಾನ ಮಾಡಬಹುದು’ ಎಂದ ಊರ ಹುಡುಗ. “ಮೊಸಳೆ ಇದೆಯೆನ್ನುತ್ತೀರಿ, ಸ್ನಾನ ಮಾಡಲು ಸಲಹೆ ನೀಡುತ್ತೀರಿ” ಎಂದಳು ಮಗಳು ಸರಿತಾ. ಕೆಲವರು ಅಲ್ಲಿ ಸ್ನಾನ ಮಾಡುತ್ತಿದ್ದರು. ಅವರನ್ನು ತೋರಿಸಿ, “ನೋಡಿ ಅವರು ಸ್ನಾನ ಮಾಡುತ್ತಿದ್ದಾರೆ. ಮೊಸಳೆ ನೀರಿನೊಳಗೆ ಇರುವವರನ್ನು ಹಿಡಿಯುವುದಿಲ್ಲ. ದಡದಲ್ಲಿ ಇರುವವರನ್ನು ಮಾತ್ರ ಹಿಡಿಯುತ್ತದೆ” ಎಂದರು. ಈ ಗುಟ್ಟು ನಮಗೆ ಗೊತ್ತಿರಲಿಲ್ಲ. ಕೆನ್ ನದಿ ಮುಂದೆ ಹರಿಯುವುದನ್ನು ನಾವು ಈ ಎತ್ತರದಿಂದ ದೂರದವರೆಗೆ ಕಾಣಬಹುದು. ಇಲ್ಲಿ ಬೋಟಿಂಗ್ ವ್ಯವಸ್ಥೆ ಇದೆ. ಕೆನ್ ನದಿಯ ದ್ವೀಪದಲ್ಲಿ ದೊಡ್ಡದಾದ ಮತ್ತು ವಿಶಿಷ್ಟ ಗ್ರೇ ಫಿಷ್ ಪ್ರಸಿದ್ಧಿ. ಇದನ್ನು ಬೇಟೆಯಾಡಲು ದೊಡ್ಡಗಾತ್ರದ ಹದ್ದುಗಳು ಇಲ್ಲಿ ಹಾರಾಡುತ್ತವೆಯಂತೆ.
ವಿಂದ್ಯ ಪರ್ವತದ ಕಡೆಯಿಂದ ಹರಿದು ಪನ್ನಾ ರಾಷ್ಟ್ರೀಯ ಉದ್ಯಾನವನದ ಒಳಗಿನ 55 ಕಿಲೋಮೀಟರ್ ದೂರವನ್ನು ಕೆನ್ ನದಿ ಉತ್ತರದಿಂದ ದಕ್ಷಿಣಕ್ಕೆ ಕ್ರಮಿಸುತ್ತದೆ. ಮುಂದೆ ಇದು ಯಮುನೆಗೆ ಸೇರುತ್ತದೆ. ಪನ್ನಾ ಉದ್ಯಾನವನದ ಪ್ರಾಣಿಗಳಿಗೆ ಕುಡಿಯಲು ಬೇಕಾಗುವ ಜಲಮೂಲದ ಈ ನದಿಗೆ ಪನ್ನಾ ಕಾಡಿನಲ್ಲಿ ಹಲವು ನೀರಿನ ಝರಿಗಳು ಸೇರುತ್ತವೆ. ಈ ನದಿಯ ದಡದಲ್ಲಿ ರಾಮಾಯಣದ ಕಾಲದ ಚಿತ್ರಕೂಟ ಇದೆಯಂತೆ. ಪುರಾತನ ಭಾರತದ ಖoಛಿಞ Pಚಿiಟಿಣiಟಿgs ಇರುವ ಉoಟಿಜತಿಚಿಟಿಚಿ ಇರುವುದು ಈ ಭಾಗದಲ್ಲೇ. ಈ ಭಾಗದ ವಜ್ರದ ಗಣಿಯಲ್ಲಿ ಕೊಹಿನೂರು ವಜ್ರ ದೊರಕಿತ್ತು ಎಂದೂ ಹೇಳುತ್ತಾರೆ. ಸಮಗ್ರ ಭಾರತ ಸಂದರ್ಶಿಸಲು ಒಂದು ಜನ್ಮ ಸಾಲದೇನು?
ಅಲ್ಲಿ ಕುಳಿತ ಕೆಲವು ಯುವಕರ ಜೊತೆ ಹೆಗ್ಗಡೆಯವರು ವಿಶ್ವಾಸದಿಂದ ಮಾತನಾಡಿದಾಗ ಒಬ್ಬ ಹುಡುಗ “ ತನಗೆ ಸೈನ್ಯ ಸೇರಬೇಕೆಂದು ಇಚ್ಚೆ ಇದೆ. ಅದಕ್ಕೆ ಬೇಕಾದ ಮಾಹಿತಿ ಹೇಗೆ ಪಡೆಯುವುದು?”ಎಂದು ವಿಚಾರಿಸಿದ. ನಿವೃತ್ತ ಸೈನಿಕರಾಗಿದ್ದ ಹೆಗ್ಗಡೆಯವರು ಅವನಿಗೆ ಮಾಹಿತಿ ನೀಡಿ, ಸಲಹೆ ನೀಡಿದರು. ಮರಳಿ ಬರುತ್ತಾ, “ಯುವಕ ಸೈನ್ಯಕ್ಕೆ ಯೋಗ್ಯ ದೇಹದಾಢ್ರ್ಯಹೊಂದಿದ್ದಾನೆ. ಇಂತಹ ಹಳ್ಳಿಯ ಹುಡುಗರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಒಂದು ವಾರ್ತಾ ಪತ್ರಿಕೆಯೂ ತಲುಪದ ಅನೇಕ ಹಳ್ಳಿಗಳೂ ಈಗಲೂ ಭಾರತದಲ್ಲಿ ಇವೆ.” ಎಂದರು ಆ ಹುಡುಗರ ಬಗೆಗಿನ ಅನುಕಂಪದಿಂದ.

No comments:

Post a Comment