ಸರ್ವಶಕ್ತಳು ನನ್ನಮ್ಮ ಹೆತ್ತಮ್ಮ
ಜನ್ಮ ನೀಡಿ ಎದೆಹಾಲುಣಿಸಿ
ಪೋಷಿಸಿದ ಮಹಾ ಶಕ್ತಿ ಆಕೆ
ಹೆತ್ತಮ್ಮ ಪಾಠಮಾಡಿದಳು
‘ಶಾಮಿ ಮಾಡು ಮಗಾ’ದೇವರಿಗೆ
ಅಪ್ಪಿ ಕೊಳ್ಳದ ತಬ್ಬಿಕೊಳ್ಳದ
ಮುದ್ದಾಡದ ಎದೆ ಹಾಲುಣಿಸದ
ನಿರ್ಜಿವ ಮೂರ್ತಿಗೆ ಶಾಮಿ ಮಾಡಿಸಿದಳು
ಗಾಳಿಯಲ್ಲಿ ಕೈಮುಗಿಸಿದಳು
ನೋವಾದಾಗ ಓಡಿ ಬಂದು
ಅಮ್ಮನ ಮಡಿಲು ಸೇರುವೆ
ಆಕೆ ಎದೆಗಾನಿಸಿ
ಮುಂಗರಳು ನೇವರಿಸಿ
ಮುತ್ತೊಂದನಿತ್ತಾಗ ಸುಖವ
ತೋಡಿ ಕುಡಿಸಿದಂತೆ
ನೂರು ದೇವರು ಯಾಕೆ?
ಅಮ್ಮ ಇದ್ದರೆ ಸಾಕೆನೆಗೆ.
ಡಾ. ಇಂದಿರಾ ಹೆಗ್ಗಡೆ 8-5-2016
No comments:
Post a Comment