ಆಸ್ಟ್ರೇಲಿಯಾದಲ್ಲಿ
ವಸಂತ
ವಸಂತ
ಬಂದಿದೆ ಸಾಗರ ಕುದುರಲ್ಲಿ
ಮರ ಮರದಲ್ಲೂ ಅರಳಿವೆ ಹೂಗಳು
ಮರ ಮರದಲ್ಲೂ ಅರಳಿವೆ ಹೂಗಳು
ಕನ್ಯೆಯ
ತೆರೆದಿ ಕೆನ್ನೆ ಕೆಂಪಾಗಿಸಿ
ಕಿಲ
ಕಿಲ ನಗುತಿವೆ ಅರಳಿದ ಮರಗಳು
ಅರಳಿಹ ಮರಗಳು ತೋರಣ ಕಟ್ಟಿವೆ
ಬಣ್ಣವ ತುಂಬಿದೆ ಭುವಿಯಾಕಾಶದಿ
ಅರಳಿಹ ಮರಗಳು ತೋರಣ ಕಟ್ಟಿವೆ
ಬಣ್ಣವ ತುಂಬಿದೆ ಭುವಿಯಾಕಾಶದಿ
ಪಕ್ಕಿಗಳಿಂಚರ
ಕಛೇರಿ ನಡೆಸಿದೆ
ಗಾಯಕಿ ಕೋಗಿಲೆ ಹಾಡಲು ತೊಡಗಿದೆ
ವೈಶಾಖ
ಮಾಸ ಅಲ್ಲದ ಕಾಲದಿ
ವಸಂತ
ಬಂದಿಹ ಸಾಗರ ಕುದುರಲ್ಲಿ
ನೋಡುವ
ನೋಟದ ನೋವನು ಮರೆಸಿ
ದುಗುಡದ ಮೊಗದಲು ಐಸ್ರ ತಂದಿದೆ
ವಸಂತ ಬಂದಿದೆ ಸಾಗರ ಕುದುರಲ್ಲಿ
ಮರ ಮರದಲ್ಲೂ ಅರಳಿವೆ ಹೂಗಳು
ವಸಂತ ಬಂದಿದೆ ಸಾಗರ ಕುದುರಲ್ಲಿ
ಮರ ಮರದಲ್ಲೂ ಅರಳಿವೆ ಹೂಗಳು
(ಆಸ್ಟ್ರೇಲಿಯಾ
ದೇಶದಲ್ಲಿ ಅಕ್ಟೋಬರ್ ನಲ್ಲಿ ಶರಧೃತು ಆರಂಭವಾಗುತ್ತದೆ.)
ಡಾ.
ಇಂದಿರಾ ಹೆಗ್ಗಡೆ 21-10-2015
1.
5
No comments:
Post a Comment