ಫ್ರೀತಿ |
ಗೌರವ -ಹೆಮ್ಮೆ ಇವು ಹೆಗ್ಗಡೆಯವರ ವಿಶೇಷತೆ |
ನನ್ನ
ಆತ್ಮೀಯ ಸಂಗಾತಿ ಎಂದೇ ನಮ್ಮ ಬಂದು ಮಿತ್ರ ವರ್ಗದಲ್ಲಿ ಗುರುತಿಸಿಕೊಂಡಿದ್ದ ಚೇಳಾರುಗುತ್ತು ಸೀತಾರಾಮ
ಹೆಗ್ಡೆ(ಎಸ್ ಆರ್ ಹೆಗ್ಡೆ)ಯವರು ಸಮುದ್ರ ಸ್ನಾನ ಮಾಡುತ್ತಾ ನೀರಾಟದಲ್ಲಿ ಸಂತೋಷದಿಂದರುವಾಗಲೇ ಅವರಿಗರಿವಿಲ್ಲದಂತೆ
ಉಸಿರು ನಿಂತು ನಮ್ಮೆಲ್ಲರಿಂದ ದೂರ ಆಗಿ ನಾಳೆಗ 4
ತಿಂಗಳು.(ಡಿಸೆಂಬರ್ 22)ಮೊದಲೇ ದೈಹಿಕವಾಗಿ ಜರ್ಜರಿತಳಾಗಿದ್ದ ನನಗೆ ಹೆಗ್ಗಡೆಯವರ ಆಕಸ್ಮಿಕ ಅಗಲುವಿಕೆಯನ್ನು
ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ದೈಹಿಕಳಾಗಿ ಕೂಡಾ
ಅಸಮರ್ಥಳಾಗಿದ್ದ ನಾನು ಕಡಲ ಕಿನಾರೆಗೆ ಹೋಗಿ ಹೆಗ್ಗಡೆಯವರು ಪಂಚ ಭೂತಗಳಲ್ಲಿ ಐಕ್ಯರಾದ ಕ್ಷೇತ್ರ ನೋಡಲಾಗಲಿಲ್ಲ.ಅವರ
ಎಲ್ಲಾ ಕೆಲಸ ಮುಗಿಸಿ ಬೆಂಗಳೂರಿಗೆ ಬಂದ ಮೆಲೂ ಹೆಗ್ಡೆಯವರು ಸ್ನಾನ ಮಾಡಿದ ಸ್ಥಳಕ್ಕೆ ಹೋಗಬೇಕೆಂಬ
ನನ್ನ ತುಡಿತ ಕೂಡಾ ನನ್ನೊಳಗೇ ಹಾಗೆಯೇ ಉಳಿದಿತ್ತು. ಸ್ವಲ್ಪ ನಡೆದಾಡಲು ಸಾದ್ಯವಾದ ಮೇಲೆ ಮತ್ತೆ ಸುರತ್ಕಲ್
ಹೋಗಿ ಕಡಲತಡಿಗೆ ಅಂದು ಹೆಗ್ಡೆಯವರ ಜೊತೆಗೆ ಇದ್ದ ಉದಯ ಗೌಡರ ಜೊತೆ ಇಂದು ಹೋದೆ. ಕಡಲ ಮರಳಿನ ಮೇಲೆ
ಕಾಲಿಟ್ಟು ಎಡಕ್ಕೆ ಹೆಗ್ಡೆಯವರು ನೀರಿಗಿಳಿದ ಸ್ಥಳಕ್ಕೆ
ನಮ್ಮ ಕಣ್ಣು ಹೊರಳುವ ಮೊದಲೇ ಬಲಗಡೆ ಸಮವಸ್ತ್ರದಲ್ಲಿ ಪೋಲೀಸರು ನಮ್ಮ ಗಮನ ಸೆಳೆದರು. ಹತ್ತಿರ ಹೋಗಲು
ನಾಲ್ಕು ಹೆಜ್ಜೆ ಊರುವಾಗಲೇ ಸ್ಟ್ರೆಚರಲ್ಲಿ ಶವವೊಂದನ್ನು ರಸ್ತೆಯಲ್ಲಿ ನಿಂತಿದ ಅಂಬ್ಯುಲೆನ್ಸ್ ನತ್ತ
ತೆಗೆದುಕೊಂಡು ಹೋದರು. ಪೋಲೀಸರ ಪ್ರಕಾರ ಕಡಲು ಕಕ್ಕಿದ ಶವದ ವಾರಸದಾರರು ಯಾರೆಂದು ಗೊತ್ತಿಲ್ಲ. ಆದರೆ
ಹೆಗ್ಗಡೆಯವರ ಆಕಸ್ಮಿಕ ಅಗಲಿಕೆಯ ಘಟನೆಯಂತೆ ಈ ಘಟನೆ ನಮ್ಮ ಮನಸ್ಸು ಕಲಕಲಿಲ್ಲ. ಅಂದಿನ ಆಘಾತ ಈ ಘಟನೆ ತಂದಿಲ್ಲ. ಬಹುಷಃ ಕಡಲು ನನಗೆ ಹೇಳಿದಿಷ್ಟು
: ಬದುಕು ಇಷ್ಟೆನೇ!
No comments:
Post a Comment