Wednesday, June 25, 2014

Yamunetri

ಚಾರ್ ‍ಧಾಮಾ ಮೃತ್ಯಕೂಪದ ಹೆಬ್ಬಾಗಿಲು.

 ಹೋಗಿದ್ದೆವು ಚಾರ್ ಧಾಮಾ ಯಾತ್ರಕ್ಕೆ. ಯಾತ್ರಿಕರಾಗಿ ಅಲ್ಲ. ಪ್ರವಾಸಿಗರಾಗಿ . ನಾಲ್ಕು ಮಂದಿ ಕಾರಿನಲ್ಲಿ ಮೊದಲು ಯಮುನಾ ಮೂಲದ ದಾರಿಯಾಗಿ, ಮತ್ತೆ ಗಂಗಾ ಮೂಲದ ದಾರಿಯಾಗಿ  ಮತ್ತೆ ಕೆದಾರಕ್ಕೆ ಕೊನೆಗೆ ಬದರಿಗೆ. ನದಿಮೂಲವನ್ನು ಯಾತ್ರಾಸ್ಥಳವನ್ನಾಗಿ ಮಾಡಿ ಮುಗ್ಧ ಭಕ್ತರನ್ನು ವಂಚಿಸುವುದು ಸರಕಾರ ಮಾಡುವ ದ್ರೋಹ. ಯಾತ್ರಾ ಸ್ಥಳಗಳಲ್ಲಾಗಲೀ, ಪ್ರವಾಸಿ ಸ್ಥಳಗಳಲ್ಲಾಗಲೀ, ಪ್ರವಾಸಿಗರಿಗೆ, ಯಾತ್ರಿಕರಿಗೆ ಇರಬೇಕಾದ ಮೂಲಭೂತ ಸೌಲಭ್ಯವೂ ಅಲ್ಲಿ ಎಲ್ಲೂ ಇಲ್ಲ.( ಭಾರತದಲ್ಲಿ ಇರುವ ಕೋಟ್ಯಾಧಿಪತಿಗಳನ್ನು ಕರೆದು ಅವರಿಗಾದರೂ ಈ ಹೊಣೆಯನ್ನು ಒಪ್ಪಿಸಬಹುದಿತ್ತು) ಸರಿಯಾದ ರಸ್ತೆ ನಿರ್ಮಾಣ ಮಾಡಿಲ್ಲ.  ಹಿಮಾಲಯಗಳ ಕಡಿದಾದ ಶಿಖರಗಳನ್ನು ಕೊರೆದು ಜರಿದು ಮಾಡಿದ ರಸ್ತೆಗಳು ಎಂದೆಂದೂ ಮೃತ್ಯುಕೂಪದ ಹೆಬ್ಬಾಗಿಲು.  ಅಂಕುಡೊಂಕಾಗಿ ಹಾವಿನ ಪಥವನ್ನು ಅನುಸರಿಸಿ ಸಾಗುವ  ರಸ್ತೆಗಳು ದ್ವಿಮುಖ ಸಂಚಾರಕ್ಕೆ ಯೋಗ್ಯವಲ್ಲ. ಆದರೂ ಇಂತಹ ರಸ್ತೆಗಳಲ್ಲಿ ವಾಹನಗಳು ಜಾಮ್ ಆಗಿ ನಿಂತಲ್ಲೇ ನಿಂತರೆ ಅದನ್ನು ಸರಿಪಡಿಸುವ ಸರಕಾರದ ಯಾವ ಪ್ರತಿನಿಧಿಯೂ ಅಲ್ಲಿ ಇರುವುದಿಲ್ಲ. ಅಲ್ಲಿ ರಸ್ತೆ ಕುಸಿತಕ್ಕೆ ಮಳೆಬರಬೇಕಾಗಿಲ್ಲ. ಹಿಮಾಲಯಗಳ ಗರ್ಭದಿಂದ ಒಸರುವ ನೀರು ಇಂತಹ ರಸ್ತೆಗಳನ್ನು ಸೀಳಿ ಕೆಳಗೆ ಹರಿಯುತ್ತದೆ. ಮೇಲಿನಿಂದ ಹರಿಯುವ ನೀರು ರಸ್ತೆಯನ್ನು ಸೀಳದಂತೆ ಮಾಡುವ ಕನಿಷ್ಟ ತಂತ್ರಜ್ಞಾನವನ್ನೂ ನಮ್ಮ ಭಾರತೀಯರು ಬೆಳೆಸಲಿಚ್ಚಿಸುವುದಿಲ್ಲ. ಮೇಲಿನಿಂದ ಹರಿಯುವ ನೀರು ರಸ್ತೆಯ ಮಣ್ಣನ್ನು ಸೀಳದಂತೆ ಅಥವಾ ನೀರಿನ ಮೇಲೆ ಸಂಚರಿಸುವ ವಾಹನಗಳಿಂದ ರಸ್ತೆ ಜರಿಯದಂತೆ ಮರದ  ಮಿನಿಸೇತುವೆ ನಿರ್ಮಿಸಿ ಅದರ ಮೇಲೆ ವಾಹನಗಳು ಓಡಾಡಲು ಅನುಕೂಲ ಕಲ್ಪಿಸಿಲ್ಲ. ಹೀಗಾಗಿ ಇಂತಹ ಕಡೆ ಮಣ್ಣು ಕುಸಿದು ವಾಹನ ಸಂಚಾರಕ್ಕೆ ತಡೆಯಾಗುತ್ತದೆ. ಅಕಸ್ಮಾತ್ ವಾಹನ ಸಂಚಾರಕ್ಕೆ ತಡೆಯಾದರೆ ವಾಹನಗಳನ್ನು ನಿಯಂತ್ರಿಸಲು ಸಂಬಂಧ ಪಟ್ಟವರು ಅಲ್ಲಿಗೆ ತಲುಪಲು ಸಾದ್ಯವಾಗದು. ಈ ಕೆಲಸವನ್ನು ವಾಹನ ಚಾಲಕರು ಮತ್ತು ಕೆಲವು ಪ್ರಜ್ಞಾವಂತ ಪ್ರಯಾಣಿಕರೇ ಮಾಡಬೇಕಾಗಿದೆ. ಇದಕ್ಕಿಂತ ಹೆಚ್ಚಾಗಿ ಅಕಸ್ಮಾತ್ ವಾಹನಗಳು ಕೆಳಗಿನ ಕಂದಕಕ್ಕೆ ಉರುಳಿದರೆ ತನ್ನ ರೌದ್ರತೆಯನ್ನು ತೋರುವ ಅಲಕನಂದಾಳ ಒಡಲಿಗೋ ಯಮುನೆ ಭಾಗಗೀರಥಿಯರ ಒಡಲಿಗೋ ಸೇರಬೇಕಾಗುತ್ತದೆ.  ಅಂತಹ ಕಂದಕಗಳಿಗೆ ಉರುಳಿಯೂ ಸಾಯದೆ ಉಳಿದರೆ ಅವರನ್ನು ಬದುಕಿಸಲು  ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕೆಲಸ ಆಗಬೇಕು.  ಅಂತಹ ಸಂದರ್ಭಗಳಲ್ಲಿ ರಸ್ತೆಯಲ್ಲಿ ಇರುವವರೂ ಇದ್ದಲ್ಲೇ ನರಕಯಾನೆ ಅನುಭವಿಸಬೆಕು, ಕೆಳಗೆ ಬಿದ್ದವರು ನರಕಯಾತನೆಯಲ್ಲೂ ತನಗೆ ಸಾವೇ ಗತಿಯಾಗಬಹುದೇ ಎಂಬ ಆತಂಕದಲ್ಲಿರಬೇಕು. ಭಾರತದಲ್ಲಿ ಜೀವಕ್ಕೆ ಬೆಲೆ ಇಲ್ಲ.  ಬೆರಗುಗೊಳಿಸುವ ಹಿಮಾಲಯ ಶಿಖರಗಳ  ಭವ್ಯ ಸೌಂರ್ಯವನ್ನು ಆಸ್ವಾದಿಸಲು ಮತ್ತೆ ಮತ್ತೆ ಹೋಗಲು ಮನಸ್ಸಾಗುತ್ತದೆ. ಆದರೆ ಪ್ರಯಾಸಿಗರ ಯಾತ್ರಾರ್ಥಿಗಳ ಜೀವಕ್ಕೆ ಉತ್ತರಖಂಡ ಸರಕಾರ ಕಿಂಚಿತ್ತೂ ಗೌರವ ಕೊಡುತ್ತಿಲ್ಲ ಎನ್ನುವುದು ಪ್ರವಾಸಿಗರಾಗಿ ನಾವು ಖಂಡಿದ್ದ ಸತ್ಯ. ನಮ್ಮ ಅನಿಸಿಕೆಯನ್ನು ಮುಂದೆ ನಡೆದ
Yamunetri
 ವರ್ಷದ ಮಳೆ ತಂದ ದುರಂತ ಸಮರ್ಥಿಸಿದೆ. ವಿದೇಶಗಳಲ್ಲಾದರೆ ಹವಾಮಾನ ಇಲಾಖೆ  ಮುನ್ನೆಚ್ಚರಿಕೆ ನೀಡಿ ಮುಂಬರುವ ನೈಸರ್ಗಿಕ ಆಪತ್ತುಗಳನ್ನು ಸರಕಾರ ಸಮರ್ಥವಾಗಿ ಎದುರಿಸಿ ಒಂದು ಜೀವಕ್ಕೂ ಹಾನಿಯಾಗದಂತೆ ನೋಡಿಕೊಳ್ಳುತ್ತಿತ್ತು

No comments:

Post a Comment