ಕ್ರಿ.ಶ 4ನೆಯ ಶತಮಾನದಲ್ಲಿ ಬುದ್ಧ ದಂತ ಕಳಿಂಗ ಅರಸ ಗುಹಸೇನನ ಕೈವಶವಾಗುತ್ತದೆ.
ಕಳಿಂಗ ಅರಸನು ಈ ಬುದ್ಧ ದಂತವನ್ನು ಪೂಜಿಸಲು ತೊಡಗುತ್ತಾನೆ. ಇದನ್ನು ಕಂಡು ಕಳಿಂಗದ ಜನರು ‘ಗುಹಸೇನ
ದೇವರಲ್ಲಿ ಶ್ರದ್ಧೆ ಇಲ್ಲದವ. ಬುದ್ಧನ ಹಲ್ಲನ್ನು ಪೂಜೆ ಮಾಡುತ್ತಾನೆ.” ಎಂದು ಕಳಿಂಗದ ಅರಸ
ಪಾಂಡುಮಹಾರಾಜನಲ್ಲಿ ದೂರುತ್ತಾರೆ. ಬುದ್ಧ ನಿರೀಶ್ವರವಾದಿ. ಪಾಂಡು ಮಹಾರಾಜನು ಬುದ್ಧನ ದಂತವನ್ನು
ನಾಶಮಾಡುವ ಉದ್ದೇಶದಿಂದ ದಂತವನ್ನು ತನ್ನಲ್ಲಿಗೆ
ತರಲು ಆಜ್ಞಾಪಿಸುತ್ತಾನೆ.
ಆದರೆ
ಬುದ್ಧ ದಂತ ತರುವಷ್ಟರಲ್ಲಿ ಅರಸನ ಮನಸ್ಸು ಪರಿವರ್ತನೆಗೊಂಡು ಆತನೂ ಬೌದ್ಧಧರ್ಮವನ್ನು ಒಪ್ಪಿಕೊಳ್ಳುತ್ತಾನೆ.
ಈ ವಿಷಯ ಕ್ಷೀರಧಾರ ಅರಸನಿಗೆ ತಿಳಿದು ಆತ ಸೇನೆಯೊಂದಿಗೆ ಪಾಂಡುರಾಜನ ಮೇಲೆ ದಂಡೆತ್ತಿ
ಬರುತ್ತಾನೆ. ಯುದ್ಧದಲ್ಲಿ ಕ್ಷೀರಧಾರ ಸಾವನ್ನಪ್ಪುತ್ತಾನೆ. ಉದೆನಿಯ ರಾಜಕುಮಾರ ಬುದ್ಧ ದಂತವನ್ನು
ಭಕ್ತಿಯಿಂದ ಪೂಜಿಸಲು ಆರಂಭಿಸುತ್ತಾನೆ. ಹೀಗಾಗಿ ಈತನನ್ನು ‘ದಂತ’ ಎಂದೇ ಕರೆಯುತ್ತಾರೆ. ಈತನ
ಭಕ್ತಿಯನ್ನು ಕಂಡು ಪಾಂಡುರಾಜ ತನ್ನ ಮಗಳು ರಾಜಕುಮಾರಿ ಹೇಮಮಾಲಿಯನ್ನು ದಂತನಿಗೆ
ವಿವಾಹಮಾಡಿಕೊಡುತ್ತಾನೆ.
ಇಷ್ಟರಲ್ಲಿ
ಕ್ಷೀರಧಾರ ಅರಸನ ಮಗ ಬೃಹತ್ ಸೇನೆಯೊಂದಿಗೆ ಪಾಂಡು ರಾಜ್ಯಕ್ಕೆ ದಂಡೆತ್ತಿ ಬರುತ್ತಾನೆ. ಆಗ ಪಾಂಡು
ರಾಜನು ಮತ್ತು ಅಳಿಯನನ್ನು ಕರೆದು ಬುದ್ಧ ದಂತದ ಪುಟ್ಟ ಕರಂಡಕವನ್ನು ಅವರಿಗೆ ಒಪ್ಪಿಸಿ ಅದರ
ರಕ್ಷಣೆಯ ಭಾರವನ್ನು ಹೊರಲು ಹೇಳಿ ನಗರದಿಂದ ಹೊರಗೆ ಕಳುಹಿಸುತ್ತಾನೆ.
ದಂತ
ಮತ್ತು ರಾಜಕುಮಾರಿ ಹೇಮ ಮಾಲಿ ಬುದ್ಧ ದಂತದ ಕರಂಡಕವನ್ಉ ರಾಜಕುಮಾರಿಯ ಕೂದಲ ಗಂಟಿನಲ್ಲಿ ಅಡಗಿಸಿ
ಬ್ರಾಹ್ಮಣರ ವೇಷದಲ್ಲಿ ಶ್ರೀ ಲಂಕಾದತ್ತ ಪ್ರಯಾಣಿಸುತ್ತಾರೆ.
ಕಥೆಯ
ಪ್ರಕಾರ ಕಳಿಂಗದ (ಒರಿಸ್ಸಾ) ತಾಮ್ರಲಿಪಿ ಬಂದರಿನಿಂದ ದೋಣಿಯ ಮೂಲಕ ಪ್ರಯಾಣಿಸಿ ಲಂಕಾ ಪಟ್ಟಣಕ್ಕೆ
ತಲುಪುತ್ತಾರೆ. ಆ ಕಾಲದಲ್ಲಿ ಶ್ರಿಲಂಕಾದ ಅನುರಾಧಪುರದಲ್ಲಿ ರಾಜ ಮೇಘವನ್ ಆಳುತ್ತಿದ್ದ. ಬುದ್ಧ
ದಂತ ಸಿಂಹಳಕ್ಕೆ ಬಂದ ಸುದ್ಧಿ ಕೇಳಿ ಆತ ಸಂಬ್ರಮದಿಂದ ಬರಮಾಡಿಕೊಳ್ಳುತ್ತಾನೆ.ತನ್ನ ಅರಮನೆಯ ಬಳಿಯೇ
ಸುಂದರ ಮಂದಿರ ಕಟ್ಟಿ ಅದರಲ್ಲಿ ಬುದ್ಧ ದಂತವನ್ನು ಇಡುತ್ತಾನೆ. ಮುಂದಿ ಅರಸ ರಾಜಧಾನಿಯನ್ನು
ಕ್ಯಾಂಡಿಗೆ ಬದಲಾಯಿಸುತ್ತಾನೆ. ಅಗ ದಂತವನ್ನು ಅರಮನೆಯ ಬಳಿ ಪ್ರತಿಷ್ಟಾಪಿಸಿ ಮಂದಿರ
ಕಟ್ಟುತ್ತಾನೆ. ಈಗ ಇರುವ ದಂತ ಮಂದಿರ ಸಿಂಹಳದ ಕೊನೆಯ ಅರಸನ ಅರಮನೆ ಎನ್ನಲಾಗುತ್ತದೆ.
ಈಗ ಬುದ್ಧ ದಂತ ಇರುವ ಮಂದಿರ.
ಇಸ್ರುಮುನಿಯ ಗುಹೆ: ಇಲ್ಲಿ ಸ್ವತಃ ಬುದ್ಧ ತಪಸ್ಸಿಗೆ ಕುಳಿತಿದ್ದ ಎನ್ನುತ್ತಾರೆ. ಮುಂದೆ ಈ ಜಾಗದಲ್ಲಿ ಮಂದಿರ ಕಟ್ಟುತ್ತಾರೆ. ಬಾರತದಿಂದ ಹೋದ ಬುದ್ಧನ ಹಲ್ಲನ್ನು
ಇಸ್ರುಮುನಿಯ ಗುಹೆ |
ಇಸ್ರುಮುನಿಯ=ಬುದ್ಧ.
Add caption |
No comments:
Post a Comment