The recent Kannada book on Tulu culture by Dr. Indira Hegde,
ತುಳುವರು ತಮ್ಮ ಮೂಲಸ
ಸಂಸ್ಕೃತಿಯ ಬಗ್ಗೆ ಇರುವ ಬದ್ಧತೆ---
ಎಷ್ಟೋ ಕೋಲಗಳನ್ನು
ನಾಗಮಂಡಲಗಳನ್ನು ನಾನು ನೋಡಿದ್ದರೂ ನನಗೆ ಅರ್ಥ ಆಗಿದ್ದು ಇಂದಿರಾ ಹೆಗ್ಗಡೆಯವರ ಈ ಮುಸ್ತಕ ಓದಿದ ಮೇಲೆ.
ತುಳುನಾಡಿನ ವೈ಼ಶಿಷ್ಟ್ಯಗಳನ್ನು
ತುಳುನಾಡಿನ ಸಾಂಸ್ಕೃತಿಕ ಚೌಕಟ್ಟಿನಲ್ಲಿ ನಿರ್ವಹಿಸದೆ ಬೇರೆ ರೀತಿಯಲ್ಲಿ ನಿರ್ವಹನೆ ಮಾಡುವಂತಿಲ್ಲ. ಕೆಲವರು ಹೇಳುತ್ತಾರೆ ಕೊರಗರು ಇಲ್ಲಿಯ ಮೂಲನಿವಾಸಿಗಳು
ಎಂದು.
ಇದು ಅಂತರ್ ಶಿಸ್ತೀಯ
ಅಧ್ಯಯನ. ಮೊದಲು ಮಾನವಶಾಸ್ತ್ರವನ್ನು ತೆಗೆದುಕೊಳ್ಳುತ್ತಾರೆ . ನಾಗರಿಕತೆಯ ಪೂರ್ವ ಕೃಷಿ ಸಂಸ್ಕೃತಿಯ
ಅಧ್ಯಯನ ತೆಗೆದುಕೊಳ್ಳುತ್ತಾರೆ. ಸಮಾಜ ಶಾಸ್ತ್ರವನ್ನು ತೆಗೆದುಕೊಳ್ಳುತ್ತಾರೆ.
ಇಂದಿರಾ ಅವರ ಸಂಶೋಧನೆ
ಯಾಕೆ ಭಿನ್ನವಾಗುತ್ತದೆ ಎಂದರೆ ಅವರು ವಿಷಯದ ಮೂಲಕ್ಕೆ
ಹೋಗುತ್ತಾರೆ.
ಮಾನವ ಸಮುದಾಯ ಒಂದು
ಪ್ರದೇಶದಲ್ಲಿ ನೆಲೆ ನಿಂತು ಕೃಷಿ ಜೀವನವನ್ನು ಆರಂಭಿಸಿರುವ ಬಗ್ಗೆ ಬರೆಯುತ್ತಾರೆ. ನಾಗನನ್ನು, ರೆಕ್ಕೆಸಿರಿಯನ್ನು
ನೀರಿಗೆ ಸಮೀಕರಿಸಿದ್ದಾರೆ.
ಇಂದಿರಾ ಹೆಗ್ಗಡೆಯವರು
ತುಳು ಸಮುದಾಯದ ಮೇಲ್ಮಟ್ಟದ ಹಂತದವರು . ತುತ್ತ ತುದಿಯಲ್ಲಿ ಇರುವವರು. ಎಲ್ಲಿಯೂ ಅವರು ವೈಭವೀಕರಿದುವುದಿಲ್ಲ.
ಇಂದಿರಾ ಹೆಗ್ಗಡೆಯವರು
ಕೊನೆಯವರೆಗ ಇದನ್ನು ಕಾಪಾಡಿಕೊಂಡು ಬಂದಿದ್ದಾರೆ.ಡಾ|ಗೀತಾ ಶೆಣೈ ದಿನಾಂಕ 14 ಎಪ್ರಿಲ್ 2013 ರಂದು
ನಡೆದ ವಿಚಾರ ಸಂಕಿರಣದಲ್ಲಿ.
No comments:
Post a Comment