ಮೂಲ:
ಹೊಸ ದಿಗಂತ
೧೫ – ೦೪ – ೨೦೧೩
2
- ಮುಖ್ಯಾಂಶಗಳು:
·
- ಇಂದಿರಾ ಹೆಗ್ಗಡೆ ಕೃತಿ ಬಗ್ಗೆ ಸಂವಾದ
- Udayavani | Apr 14, 2013ಬೆಂಗಳೂರು: ಲೇಖಕಿ ಡಾ.ಇಂದಿರಾ ಹೆಗ್ಗಡೆ ಅವರ 'ತುಳುವರ ಮೂಲತಾನ ಆದಿ ಆಲಡೆ' ಕೃತಿ ಸಂಶೋಧಕರಿಗೆ ಮಾರ್ಗದರ್ಶಕ ಕೃತಿ ಎಂದು ಶಿಕ್ಷಣ ತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪರಂಪರೆ ಮತ್ತು ಪರಿವರ್ತನೆ ಕುರಿತ ಇಂದಿರಾ ಹೆಗ್ಗಡೆ ಅವರ 'ತುಳುವರ ಮೂಲತಾನ ಆದಿ ಆಲಡೆ' ಕೃತಿ ಬಗ್ಗೆ ಸಾಹಿತ್ಯ-ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೊಂದು ಸಂಶೋಧನಾ ಕೃತಿ ಆದರೂ ನಿರಂತರ ಓದಿಸಿಕೊಂಡು ಹೋಗುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ಇದೊಂದು ದೊಡ್ಡ ಕೊಡುಗೆ. ಆದಿಯ ಮೂಲ ಹುಡುಕುವುದು ಸವಾಲಿನ ಕೆಲಸ. ಆದರೆ ಇಂದಿರಾ ಹೆಗ್ಗಡೆಯವರು ಯಾವುದೇ ಪೂರ್ವಾಗ್ರಹಗಳಿಲ್ಲದೇ ಮುಕ್ತ ಮನಸ್ಸಿನಿಂದ ತುಳು ಪರಂಪರೆಯ ಮೂಲವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.
ಕನ್ನಡದ ಮೇಲೆ ಆಂಗ್ಲ ಭಾಷೆಯ ಆಕ್ರಮಣ ಹೆಚ್ಚಾಗಿದೆ. ಇದಕ್ಕೆ ತುಳು ಭಾಷೆಯೂ ಹೊರತಾಗಿಲ್ಲ. ಅನ್ನದ ಭಾಷೆ ಮತ್ತು ಆತ್ಮದ ಭಾಷೆ ಬೇರೆ ಆಗಿರುವುದೇ ಇದಕ್ಕೆಲ್ಲ ಕಾರಣ. ಹೊಟ್ಟೆಗಾಗಿ ಅನ್ನದ ಭಾಷೆಗೆ ಆದ್ಯತೆ ನೀಡುವುದರಿಂದ ಸಹಜವಾಗಿ ಆತ್ಮದ ಭಾಷೆ ಮೇಲಿನ ಆದ್ಯತೆ ಕಡಿಮೆ ಆಗುತ್ತದೆ ಎಂದು ರಾಧಾಕೃಷ್ಣ ಹೇಳಿದರು.
ಲೇಖಕಿ ಇಂದಿರಾ ಹೆಗ್ಗಡೆ ಮಾತನಾಡಿ, ಪರಂಪರೆ ಒಪ್ಪಿಕೊಳ್ಳುವುದು ಬೇರೆ, ಅದನ್ನು ಗೌರವಿಸುವುದು ಬೇರೆ. ತುಳು ಪರಂಪರೆ ಅದೊಂದು ಅನಿಷ್ಟ ಎಂಬ ರೀತಿಯಲ್ಲಿ ಬಿಂಬಿತವಾಗಿದೆ. ಪರಂಪರೆ ಉಳಿಸುವ ನೆಪದಲ್ಲಿ ಅಪಾಯಗಳಿಗೆ ಆಸ್ಪದ ಕೊಡಬಾರದು ಎಂದ ಅವರು, ತುಳು ನಾಡಿನ ಪರಂಪರೆಯ ಬಗ್ಗೆ ಯುವ ಪಿಳೀಗೆಯನ್ನು ಅಜ್ಞಾತರನ್ನಾಗಿ ಮಾಡುವುದುಬೇಡ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಸಾಹಿತ್ಯ ಸಂಶೋಧನೆಯಲ್ಲಿ ಲೇಖಕಿಯರು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಲೇಖಕಿಯರಾದ ಉಷಾ ಪಿ. ರೈ, ಕಮಲಾ ಬಾಲು ಹಾಗೂ ಗೀತಾ ಶೆಣೈ ಕೃತಿಯ ಕುರಿತು ಮಾತನಾಡಿದರು.
3
ತುಳುವರು ತಮ್ಮ ಮೂಲಸ
ಸಂಸ್ಕೃತಿಯ ಬಗ್ಗೆ ಇರುವ ಬದ್ಧತೆ---
ಎಷ್ಟೋ ಕೋಲಗಳನ್ನು
ನಾಗಮಂಡಲಗಳನ್ನು ನಾನು ನೋಡಿದ್ದರೂ ನನಗೆ ಅರ್ಥ ಆಗಿದ್ದು ಇಂದಿರಾ ಹೆಗ್ಗಡೆಯವರ ಈ ಪುಸ್ತಕ ಓದಿದ ಮೇಲೆ.
ತುಳುನಾಡಿನ ವೈ಼ಶಿಷ್ಟ್ಯಗಳನ್ನು
ತುಳುನಾಡಿನ ಸಾಂಸ್ಕೃತಿಕ ಚೌಕಟ್ಟಿನಲ್ಲಿ ನಿರ್ವಹಿಸದೆ ಬೇರೆ ರೀತಿಯಲ್ಲಿ ನಿರ್ವಹಣೆ ಮಾಡುವಂತಿಲ್ಲ.
ಇದು ಅಂತರ್ ಶಿಸ್ತೀಯ
ಅಧ್ಯಯನ. ಇಂದಿರಾ ಹೆಗ್ಗಡೆಯವರು ಮೊದಲು ಮಾನವಶಾಸ್ತ್ರವನ್ನು ತೆಗೆದುಕೊಳ್ಳುತ್ತಾರೆ . ನಾಗರಿಕತೆಯ ಪೂರ್ವ ಕೃಷಿ ಸಂಸ್ಕೃತಿಯ
ಅಧ್ಯಯನ ತೆಗೆದುಕೊಳ್ಳುತ್ತಾರೆ. ಸಮಾಜ ಶಾಸ್ತ್ರವನ್ನು ತೆಗೆದುಕೊಳ್ಳುತ್ತಾರೆ.
ಇಂದಿರಾ ಅವರ ಸಂಶೋಧನೆ
ಯಾಕೆ ಭಿನ್ನವಾಗುತ್ತದೆ ಎಂದರೆ ಅವರು ವಿಷಯದ ಮೂಲಕ್ಕೆ
ಹೋಗುತ್ತಾರೆ. ಕೆಲವರು ಹೇಳುತ್ತಾರೆ ಕೊರಗರು ಇಲ್ಲಿಯ ಮೂಲನಿವಾಸಿಗಳು ಎಂದು.
ಮಾನವ ಸಮುದಾಯ ಒಂದು
ಪ್ರದೇಶದಲ್ಲಿ ನೆಲೆ ನಿಂತು ಕೃಷಿ ಜೀವನವನ್ನು ಆರಂಭಿಸಿರುವ ಬಗ್ಗೆ ಬರೆಯುತ್ತಾರೆ. ನಾಗನನ್ನು, ರೆಕ್ಕೆಸಿರಿಯನ್ನು
ನೀರಿಗೆ ಸಮೀಕರಿಸಿದ್ದಾರೆ.
ಇಂದಿರಾ ಹೆಗ್ಗಡೆಯವರು
ತುಳು ಸಮುದಾಯದ ಮೇಲ್ಮಟ್ಟದ ಹಂತದವರು . ತುತ್ತ ತುದಿಯಲ್ಲಿ ಇರುವವರು. ಎಲ್ಲಿಯೂ ಅವರು ತಮ್ಮ ಸುಮುದಾಯವನ್ನು, ಆ ಸಮುದಾಯದ ಆಚರಣೆಗಳನ್ನು ವೈಭವೀಕರಿದುವುದಿಲ್ಲ. ಇಂದಿರಾ ಹೆಗ್ಗಡೆಯವರು
ಕೊನೆಯವರೆಗ ಇದನ್ನು ಕಾಪಾಡಿಕೊಂಡು ಬಂದಿದ್ದಾರೆ.
; ಡಾ|ತಾ ಶೆಣೈ ದಿನಾಂಕ 14 ಎಪ್ರಿಲ್ 2013 ರಂದು ನಡೆದ
ವಿಚಾರ ಸಂಕಿರಣದಲ್ಲಿ.
No comments:
Post a Comment