Sunday, November 17, 2013

ಚುಟುಕುಗಳು



ಚುಟುಕುಗಳು

1 ಮಾಗಿಯ ನಸುಕು

ಹಸಿರು ಹುಲ್ಲಿನ ಮೇಲೆ
ಇಬ್ಬನಿಯ ಸಿಂಗಾರ
ಕಾದಿದೆ ಪಾದ ಪೂಜೆ.


2  ಪ್ರತಿಬಿಂಬ

 ತೊರೆಯ  ದಡದ ನಡೆ
  ನೀರೊಳಗೆ ಪ್ರತಿಬಿಂಬದ ನಡೆ

3 ಕಂಬುಲ

ಭೂಮಿಗೆ ಮದುವೆ
ಬಾನಿನೊಂದಿಗೆ

4 ವಯಸ್ಸು
ಕೆಂದಳಿರ ಚಿಗುರು
ನಾಚಿ ಲಾಸ್ಯವಾಡಿತು 
ಹಣ್ಣೆಲೆ ಗದರಿತು

ಬಿರಿವ ಮೊಗ್ಗಿನಬಳಿ
ದುಂಬಿ ಹಾಡಿತು
ನಿನ್ನೆ ಅರಳಿದ ಗುಲಾಬಿ
ಬಿರಿವ ಮೊಗ್ಗನು ಗದರಿತು



5 ನೀರೊಳಗೆ ನಡಿಗೆ
 
ಬೇಕು ನೀರೊಳಗೆ
ಜೋಡು ಕಳಚದ ನಡೆ. 


   6 ನಾಟಿ

ಕೆಸರು ಗದ್ದೆಯ ನಾಟಿ

ಓಬೇಲೆಗಾ ದಾಡಿನ ದಾಟಿ
ಆವುದು ಸಾಟಿ 
ಸುರಿವ ಮಳೆಯೂ 
ತೊನೆಯುತ್ತಿದೆ ಶ್ರಮಿಕರ
ಜೀವನೋತ್ಸಾಹಕೆ 

 
 7 ಎರವಲು
ಮಳೆ ನಿಂತ ಮರ
ಎಲೆ ಎಲೆಗಳ ಹನಿಗಳನೂ
ಕೊಡುವುತಿದೆ
ಎಲೆಎಲೆಗೂ ತಾಕೀತು
ಎರವಲು ಉಳಿಸದಿರಿ
 8 ರಾತ್ರಿ
ರವಿ ಮುಳುಗುವ ಕಂಡ 
ನಿಶೆ ಜಿಗಿದಳು ಭುವಿಗೆ
ಈಗವಳದೇ ರಾಜ್ಯ 
ಚಂದಿರನು ಮರೆಯಾದರೆ
ಸಾಗರವನೂ ನುಂಗುವಳು
ಹಗಲು
ರವಿ ಉದಯಿಸಿದ ಕಂಡು
ನಿಶೆ ಸರಿದಳು ಮರೆಗೆ
ಸದ್ದಿಲ್ಲದೆ ಸುದ್ದಿ ಮಾಡದೆ





 



 








 


 






















   





No comments:

Post a Comment