Sunday, September 29, 2013

Lumbini/Sidharthas birthplace ಲುಂಬಿಣಿ ನೋಡ ಬನ್ನಿ

At Nepal Up border
At nepal-UP border
Bhodhi tree
Mayadevi temple
ಲುಂಬಿಣಿ 10-07-2013 

“ಬುದ್ಧ ಜನಿಸಿದ ಲುಂಬಿಣಿಗೆ ನಾವು ಹೋಗದೆ ಮರಳಿದೆವು’ ತುಂಬಾ ಬೆಸರವಾಗುತ್ತಿದೆ.”
ಇಂಡಾಲಜಿ ಗುರುಗಳ ಜೊತೆಗೆ ಭಾರತೀಯ ಪುರಾತತ್ವ ಸ್ಥಳಗಳಿಗೆ ಪ್ರವಾಸ ಹೋದ ನಾವು ಲುಂಬಿಣಿ ನೋಡದೆ ಮರಳಿದಾಗ ಹೆಗ್ಗಡೆಯವರಲ್ಲಿ ಬೇಸರ ಹಂಚಿಕೊಂಡಿದ್ಚದೆ. 
“ಬುದ್ಧ ಜನಿಸಿದ ಸ್ಥಳ ನೋಡಿ ನಿನಗೇನಾಗಬೇಕು?” ಹೆಗ್ಗಡೆಯವರ ಉತ್ತರ.
“ನನಗೆ ಮಾಯದೇವಿ ಹೆರಿಗೆ ನೋವು ಕೊಟ್ಟ ಸಾಲಪತ್ರದ ಮರವನ್ನೂ ನೋಡುವಾಸೆ”
“ ನಿನಗೇನು ಇನ್ನು ಹೆರಿಗೆಯಾಗದು. ಸಾಲ ಪತ್ರದ ಮರವನ್ನು ಹುಡುಕಿ ನೇಪಾಳಕ್ಕೆ ಹೋಗಲು. ಗಯಾ, ಬೋಧ ಗಯಾ, ಸಾರನಾಥ್ ಮುಂತಾದ ಬುದ್ಧ ಕ್ಷೇತ್ರಗಳನ್ನು ನೋಡಿ ಬಂದಿರಲ್ಲ? ಅದು ಸಾಲದಾ?” 
ನಾನು ಮೌನದ ಮೊರೆಹೊಕ್ಕರೂ ಗಾಳಿಯಲ್ಲಿ ಬಿತ್ತಿದ್ದ ಲುಂಬಿಣಿ ನೋಡುವ ಆಶೆಯ ಬೀಜವನ್ನು ವಾಪಾಸ್ ಪಡೆಯಲಿಲ್ಲ. ಅಚ್ಚರಿಯ ಸಂಗತಿ ಎಂದರೆ ಗಾಳಿಯಲ್ಲಿ ಬಿತ್ತಿದ್ದ ಬೀಜ ಮೊಳಕೆಯೊಡೆಯಲು ಹೆಗ್ಗಡೆಯವರೇ ವ್ಯವಸ್ಥೆ ಕಲ್ಪಿಸಿದ್ದು ಭಾರತೀಯ ರೈಲು ನಿಗಮ ಆಯೋಜಿಸಿದ್ದ ಬುದ್ಧ ಪರಿನಿರ್ವಾಣ ರೈಲಿನಲ್ಲಿ ವಿದೇಶಿಯರ ಜೊತೆ ಪ್ರವಾಸ ಮಾಡಿದಾಗ.  ಈಗ ಮತ್ತೊಮ್ಮೆ ಬುದ್ಧ ಕ್ಷೇತ್ರಗಳ ದರ್ಶನ! ಅವುಗಳಲ್ಲಿ ಲುಂಬಿಣಿಯೂ ಇತ್ತು.

2010ರಲ್ಲಿ ಬುದ್ಧ ಪರಿನಿರ್ವಾಣ ರೈಲು ಪ್ರವಾಸದಲಿ ಲುಂಬಿಣಿ ತಲುಪಿದ್ದೆವು. ಗೋರಖಪುರದವರೆಗೆ ರೈಲಿನಲ್ಲಿ ಹೋಗಿ ನಮ್ಮನ್ನು ಅನುಸರಿಸುತ್ತಾ ನಮ್ಮ ಹಿಂದೆಯೇ ಬಂದಿದ್ದ ಬಸ್ಸನ್ನು ಹತ್ತಿ ನಾವು ನೇಪಾಳದ ಕಡೆಗೆ ಉತ್ತರ ಪ್ರದೇಶದಿಂದ ಪಯಣಿಸಿದೆವು. ವಿದೇಶಿಗರ ವೀಸಾ ತಪಾಸಣೆ ಇಲ್ಲಿ ಆಗುತ್ತದೆ. ಆದರೆ ಭಾರತೀಯರನ್ನು ಇಲ್ಲಿ ಪ್ರಶ್ನಿಸುತ್ತಿರಲಿಲ್ಲ. ಗಡಿಯಾಚೆ  ಈಚೆ -ಎಲ್ಲರೂ ಮುಕ್ತವಾಗಿ ಓಡಾಡುತ್ತಿದ್ದರು.
 ನೇಪಾಳ ಭಾಗದಲ್ಲಿ ಕುಳಿತಿದ್ದ ಅಪರಿಚಿತನನ್ನು ನಾನು ಮಾತನಾಡಿಸಿದೆ. ಅವನ ಹೆಸರು ಪ್ರೇಮ್ ಎಂದ. “ನೀನು ಬೌದ್ಧಧರ್ಮಿಯನಾ?” ಎಂದು ಕೇಳಿದ್ದೇ ತಪ್ಪಾಯಿತು.  “ನಾವು ಬುರ್ಧಧರ್ಮವನ್ನು ಒಪ್ಪುವುದಿಲ್ಲ. ನಾವು ಹಿಂದೂ’ ಎಂದ ಅಸಹನೆಯಿಂದ. ನಾನು ಸಾವರಿಸಿ ‘ನಾನೂ ಹಿಂದೂ” ಎಂದು ಮಂದಸ್ಮಿತಳಾದೆ. 
ಅವನಿಂದ ಪಡೆದ ಮಾಹಿತಿಯಂತೆ ಇಲ್ಲಿ ನೇಪಾಳ ಹಾಗೂ ಭಾರತದೊಳಗೆ ಓಡಾಡಲು ಅಡ್ಡಿ ಇಲ್ಲ. ಎರಡೂ ಕಡೆಯವರು ಒಂದೇ ದೇಶದ ಪ್ರಜೆಗಳಂತೆ ಜೀವಿಸುತಿದ್ದಾರೆ. ವೀಸಾ ಪಾಸ್‍ಪೋರ್ಟ್ ಏನೂ ಬೇಕಿಲ್ಲ. ಗೇಟ್  ಮಾತ್ರ ಇದೆ. ಅದರಿಂದ ಜನಸಾಮಾನ್ಯ್ಯರಿಗೆ ಯಾವ ಬಾಧವೂ ಇಲ್ಲ. ನೀವು ಇಲ್ಲಿಯ ಸಿಮ್ ತೆಗೆದುಕೊಳ್ಳಬಹುದು. ನಾವು ಅಲಿಯ ಸಿಮ್ ತೆಗೆದುಕೊಳ್ಳಬಹುದು ಎಂದ.
 ಮಾತಿನ ಮಧ್ಯೆ ““ಬುದ್ಧ ನೇಪಾಳದವ ನೀವು ಅವನನ್ನು ಭಾರತದವ ಎನ್ನುತ್ತೀರೀ.” ಅವನ ಮಾತಿನಲ್ಲಿ ನಾವು ಭಾರತೀಯರು ನೇಪಾಳೀಯರ ಬುದ್ಧನನ್ನು ಅಪಹರಿಸುತ್ತಿದ್ದೇವೆ ಎಂಬ ನೋವು ಅಡಗಿತ್ತು. ಆತ ಜನಿಸಿದ್ದು ಮಾತ್ರ ಇಲ್ಲಿ. ಆತನ ಕಾರ್ಯ ಕ್ಷೇತ್ರ ಭಾರತದಲ್ಲಿ ಅಲ್ಲವೆ?" ಎಂದೆ.
“ಲುಂಬಿಣಿಯಿಂದ ಸ್ವಲ್ಪ ಪಶ್ಚಿಮಕ್ಕೆ ಕಪಿಲವಸ್ತು ಇದೆ. ಅದು ಬುದ್ಧನ ತಂದೆಯ ರಾಜ್ಯ, ಅದರಿಂದ ಉತ್ತರಕ್ಕೆ ಕೋಲಿಯಾ -ಬುದ್ಧನ ತಾಯಿಯ ತವರು ರಾಜ್ಯ. ಇಲ್ಲಿಂದ 40ಕಿಲೋಮೀಟರ್ ಭಾರತದ ಕಡೆ ಕುಶಿನಗರ. ಅವನು ನೋಡಲು ಭಾರತೀಯರಂತೆ ಇದ್ದನಾ? ಅವನ ಮುಖ ನೋಡಿ. ಆತ ನೇಪಾಳಿ. ಭಾರತೀಯ ಅಲ್ಲ.” ಎಂದಾಗ ಻ವನ ಮಾತಿನಲ್ಲಿ ತಥ್ಯ ಕಂಡಿತು. ಆದರೂ 
"ಎಲಾ? ಈಗಷ್ಟೇ ತಾನು ಬೌದ್ಧ ಧರ್ಮೀಯನಲ್ಲ ಎಂದವನು ಇವನೇ ಏನು? " ಎಂದೆನಿಸಿದಿರಲಿಲ್ಲ.ಿರಲಿ. ನಾವೀಗ ಲುಂಬಿಣಿ ನೋಡೋಣ ಬನ್ನಿ.

ಲುಂಬಿನಿ ವಿಹಾರವನ:
ಹಿಮಾಲಯದ ಚೌರಿಯಾ ಶಿಖರದ ತಪ್ಪಲಿನ ನೇಪಾಳದ ರೂಪಾಂದೇಹಿ ಜಿಲ್ಲೆಯಲ್ಲಿ ಲುಂಬಿಣಿ ಇದೆ. ಇದು ಸಾಲ ಪತ್ರಗಳ ಮರಗಳ ಕಾನನದ ಮಧ್ಯ ಇರುವ ವಿಹಾರ ಸ್ಥಳ. ಆಗಿನ ಕಾಲದಲ್ಲಿ ದೂರದ ಊರುಗಳಿಗೆ ಪುರುಷರು ಕುದುರೆಗಳ ಮೇಲೆ ರಾಜಪರಿವಾರದ ಮಹಿಳೆಯರು ಮೇಣೆಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಇಂತ ದೂರ ಪ್ರಯಾಣಗಳಲ್ಲಿ ಮಾರ್ಗಾಯಾಸ ಪರಿಹಾರಕ್ಕಾಗಿ ಅಲ್ಲಲ್ಲಿ ತಂಗುವ ಅವಶ್ಯಕತೆ ಇರುತ್ತಿತ್ತು. ಅಂತಹ ಒಂದು ತಂಗುದಾಣವಾಗಿ ಲುಂಬಿಣಿ ಇತ್ತು. ಹಾಗಾಗಿ ಇದು ವಿಹಾರ ಸ್ಥಳ ಆಗಿತ್ತು. ಇಲ್ಲೊಂದು ಸಿಹಿನೀರಿನ ಆಯಾತಾಕಾರದ ಸುಂದರ ಕೊಳವೂ ಇತ್ತು. ತಿಳಿನೀರಿನ ಕೆರೆ ಈಗಲೂ ಸುಂದರವಾಗಿಯೇ ಇದೆ. 
ಲುಂಬಿಣಿ ವಿಹಾರ ವನದಲ್ಲಿ ಮಾಯಾದೇವಿ ಸಿದ್ಧಾರ್ಥನಿಗೆ ಜನ್ಮ ನೀಡಿದ್ದಳು ಎನ್ನುತ್ತದೆ ಇತಿಹಾಸ. ಹೀಗಾಗಿ ನೇಪಾಳದ ಲುಂಬಿಣಿ ಶಾಕ್ಯವಂಶದ ರಾಜಕುಮಾರ ಸಿದ್ಧಾರ್ಥನ ಜನ್ಮ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.  
ಆಗಿನ್ನೂ ಶಾಕ್ಯರ ಕಪಿಲವಸ್ತು ಅಥವಾ ಲುಂಬಿಣಿ ನೇಪಾಳದ ಭಾಗವಾಗಿರಲಿಲ್ಲ. ಜನಪದ ಗಣರಾಜ್ಯಗಳ ಕಾಲ ಅದು. ಶಾಕ್ಯ ವಂಶದ ಶುದ್ಧೋಧನ ಕಪಿಲ ವಸ್ತುವಿನ  ಅರಸನಾಗಿದ್ದ. ಆತನ  ರಾಣಿ ಮಾಯಾದೇವಿಯ ತವರು ಮನೆಯ ದಾರಿಯಲ್ಲಿ ಕಾಡಿನ ನಡುವೆ ಲುಂಬಿಣಿ ಹೆಸೆರಿನ ವಿಹಾರ ಸ್ಥಳ ಇತ್ತು.  
2600ವರ್ಷಗಳ ಹಿಂದೆ ಈ ಹಿಮಾಲಯದ ತಪ್ಪಲು ಭಾಗದ ಕಾಡಿನÀಲ್ಲಿ ಹುಲಿ ಚಿರೆತೆ, ಆನೆಗಳೂ ಇದ್ದರೂ  ವಿಹಾರವನವು ಬಣ್ಣ ಬಣ್ಣದ ಪತಂಗಗಳು ಹಕ್ಕಿಗಳು, ಹೂಗಳಿಧ ಆಹ್ಲಾದಕರ ಪರಿಸರದಿಂದ ಇದು ಕೂಡಿತ್ತು. 

ಲುಂಬಿಣಿ ಹೆಸರಿನ ಹಿನ್ನೆಲೆ : 
ಕೋಲಿಯಾ ಜನಪದದ ದೇವದಹದ ಅರಸ ಅಂಜನಾನ ಮಡದಿ ಕೋಲಿಯಾ ರಾಜಕುಮಾರಿ ರೂಪಾದೇವಿಯಿಂದಾಗಿ ಈ ಉದ್ಯಾನವನಕ್ಕೆ ಲುಂಬಿಣಿ ಎನ್ನುವ ಹೆಸರು ಬಂದಿದೆ. ನೇಪಾಳಿಯಲ್ಲಿ ರೂಪಾ ಅಂದರೆ ಸೌಂದರ್ಯ. ದೇವಿ ಅಂದರೆ ಮಹಿಳೆ. ಲುಂಬಿಣಿ ಅಂದರೂ ರೂಪವತಿ. ರಾಜ ಅಂಜನಾ ತನ್ನ ರಾಣಿ ರೂಪಾದೇವಿಯ ಆಶಯದಂತೆ ಉದ್ಯಾನವನವನ್ನು ವಿನ್ಯಾಸಗೊಳಿಸುತ್ತಾನೆ. ಹೀಗಾಗಿ ಈ ವಿಹಾರ ವನವನ್ನು ರೂಪಾದೇವಿಯ ಹೆಸರಲ್ಲಿ ಕರೆಯಲಾಗುತ್ತಿತ್ತು. ಆದರೆ  ಮುಂದೆ ಜನಪದರ ಬಾಯಿಯಲ್ಲಿ ರೂಪಾದೇವಿ> ರೂಮಾ ದೇವಿ ಆಗಿ ಲುಂಬಿಣಿ ಆಯಿತು ಎನ್ನುತ್ತಾರೆ.  
ಆ ಕಾಲದಲ್ಲಿ ಲುಂಬಿಣಿಯು ಶಾಕ್ಯರ ಕಪಿಲವಸ್ತು ಮತ್ತು ಕೋಲಿಯರ ದೇವದಹದ ನಡುವೆ ಇತ್ತು . ಹೀಗಾಗಿ ಕೋಲಿ ಮತ್ತು ಶಾಕ್ಯ ರಾಜರುಗಳು ಜಂಟಿಯಾಗಿ ಈ ವನದ ನಿರ್ವಹಣೆ ಮಾಡುತ್ತಿದ್ದರು. ಈ ಎರಡೂ ರಾಜ ವಂಶಗಳ ನಡುವೆ ವೈವಾಹಿಕ ಬಾಂಧವ್ಯ ಇತ್ತು.  ಶಾಕ್ಯ ವಂಶದ ಕಪಿಲ ವಸ್ತುವಿನ ಶುದ್ಧೋದನನು ಕೋಲಿಯ ವಂಶದ ದೇವದಹದ ಮಾಯಾದೇವಿಯನ್ನು ವರಿಸಿದ್ದನು. ಮುಂದೆ ಆಕೆಯ ತಂಗಿ ಪ್ರಜಾಪತಿಯನ್ನು ಶುದ್ಧೋಧನನೇ ವರಿಸುತ್ತಾನೆ. 
ವಿವಾಹವಾಗಿ ಸುಮಾರು ಹತ್ತು ವರ್ಷಗಳ ಮೇಲೆ ಮಾಯಾದೇವಿ ಬಸುರಿಯಾಗುತ್ತಾಳೆ. ಹೆರಿಗೆಗೆ ಕಪಿಲವಸ್ತುವಿನ ಉತ್ತರಕ್ಕಿರುವ ಕೋಲಿಯ ರಾಜ್ಯಕ್ಕೆ ಲುಂಬಿಣಿ ಮಾರ್ಗವಾಗಿ ಹೋಗುತ್ತಾಳೆ. ಮಾರ್ಗ ಮಧ್ಯೆ ಲುಂಬಿಣಿಯ ಉದ್ಯಾನವನದಲ್ಲಿ  ವಿಶ್ರಮಿಸಿ, ಕೊಳದಲ್ಲಿ ಸ್ನಾನಮಾಡುತ್ತಾಳೆ. ಸ್ನಾನ ಮುಗಿಸಿ 25 ಹೆಜ್ಜೆ ನಡೆಯುವಾಗ ಹೆರಿಗೆ ನೋವು ಬರುತ್ತದೆ. ಮಾಯಾದೇವಿ ಸಾಲ ವೃಕ್ಷದ  ರೆಂಬೆಯನ್ನು ಆಧಾರವಾಗಿ ಹಿಡಿದು ಸಿದ್ಧಾರ್ಥನಿಗೆ ಜನ್ಮನೀಡುತ್ತಾಳೆ. ಜನಿಸಿದ ಮಗು ಕೂಡಲೇ ತಾವರೆಯ ಹೂವಿನ ಮೇಲೆ ಎರಡೂ ಕೈಗಳನ್ನು ಮೇಲೆತ್ತಿ ಎದ್ದು ನಿಂತಿತ್ತು ಎಂಬ ನಂಬಿಕೆ ಬೌದ್ಧ ಧsರ್ಮೀಯರಲ್ಲಿ ಇದೆ. 
 ಅವನ ಜನ್ಮಸ್ಥಳದಲ್ಲಿ ಆಗ ಇದ್ದ ಶಿಲೆಯನ್ನು ಪವಿತ್ರ ಶಿಲೆ ಎಂದು ನಂಬಿ ರಕ್ಷಿಸಲಾಗಿದೆ. ಎಳೆ ಕಂದ ಬುದ್ಧನಿಗೆ ಮೊದಲ ಸ್ನಾನವನ್ನು ಈ ಕೊಳದಲ್ಲಿ ಮಾಡಲಾಗಿದೆ ಎನ್ನುತ್ತಾರೆ. ಆ ಕಾಲದಲ್ಲಿ ಈ ಕೊಳದಲ್ಲಿ ಒಂದು ಭಾಗದಲ್ಲಿ ಬಿಸಿನೀರಿನ ಬುಗ್ಗೆ ಹಾಗೂ ಇನ್ನೊಂದು ಭಾಗದಲ್ಲಿ ತಣ್ಣೀರಿನ ಬುಗ್ಗೆ ಇತ್ತು ಎನ್ನುವ ಮಾಹಿತಿಯೂ ಇದೆ.  ಹೀಗಾಗಿ ಬುದ್ಧನಿಗೆ ಬಿಸಿನೀರಿನ ಸ್ನಾನ ಆಗುತ್ತದೆ.
ಕೊಳದ ಬಳಿ ಬೃಹತ್ ಅರಳೀ ಮರದ  ಪೊಟರೆಯ ಒಳಭಾಗÀದಲ್ಲಿ ಏನೋ ಪವಿತ್ರ ಶಕ್ತಿ ಇದ್ದು ಅಲ್ಲಿಯೂ ಬೌದ್ಧ ಯಾತ್ರಿಕರು ಪೂಜೆ ಮಾಡುತ್ತಿದ್ದರು. ಆ ಮರದ ಕಟ್ಟೆಯ ಮೇಲೆ ಕೆಲವು ಬಿಕ್ಕುಗಳು ಕುಳಿತದ್ದರು. ಅವರಲ್ಲಿ “ಸಾಲ ಪತ್ರದ ಮರ ಎಲ್ಲಿ? ಎಂದು ಕೇಳಿದೆ. ಆತ ‘ಅಲ್ಲಿ ಮಾಯಾದೇವಿ ಮಂದಿರದ ಆ ಕಡೆ” ಎಂದುತ್ತರಿಸಿದರು. ನನಗೆ ಗೊತ್ತಾಗಲಿಲ್ಲ. 
ನಾನು ಸಾಲ ಪತ್ರದ ಮರವನ್ನು ಹುಡುಕುತ್ತಾ ಉದ್ಯಾನವನದಲ್ಲಿ ಸುತ್ತಾಡಿದೆ. ಅದರ ಬಗ್ಗೆ ಯಾರಿಗೂ ಕುತೂಹಲ ಇಲ್ಲ. ನಾನು ಅದುವರೆಗೆ ಸಾಲ ಪತ್ರದ ಮರವನ್ನು ಕಂಡಿರಲಿಲ್ಲ. ಕೊನೆಗೂ ಒಬ್ಬ ಬಿಕ್ಕು ಸಾಲ ಪತ್ರದ ಮರವನ್ನು ತೋರಿಸಿದರು. ಆ ಮರಕ್ಕೆ ಪುಟ್ಟ ಫಲಕ ಹಾಕಿತ್ತು ಅದರಲ್ಲಿ ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಸಾಲ ಪತ್ರ ಮರ ಎಂದು ಬರೆಯಲಾಗಿತ್ತು. ನನಗೋ ನಿಧಿ ಸಿಕ್ಕಿದಷ್ಟು ಆನಂದ. ಸಾಲ ಪತ್ರದ ಮರಕ್ಕೆ ಒರಗಿ ನಿಂತ ನಾನು ಫೋಟೋ ತೆಗೆಸಿಕೊಂಡೆ. ನನ್ನ ಯಾವುದೇ ಪ್ರವಾಸ ಕಾಲದಲ್ಲಿ ನನ್ನ ಪೋಟೊಗಳು ಅತ್ಯಂತ ಕಡಿಮೆ. ಆದರೆ ಇಲ್ಲಿ ನನಲ್ಲಿ ಭಾವನಾತ್ಕಕ ಚಲನೆ ಉಂಟಾಗಿತ್ತು. ಅಷ್ಟರಲ್ಲಿ ಹೆಗ್ಗಡೆಯವರು ಮತ್ತು ನಮ್ಮೊಂದಿಗೆ ನಿಕಟವಾಗಿದ್ದ ವಿದೇಶಿಯರೂ ಬಂದು ಸಾಲ ಪತ್ರ ಮರದ ಬಗ್ಗೆ, ಬುದ್ಧನ ಜನ್ಮದ ಬಗ್ಗೆ ವಿವರÀ ಪಡೆದರು.
ಬುದ್ಧನ ಜನನ ಆದುದು  ಕ್ರಿಸ್ತ ಪೂರ್ವ 563ರ ವೈಶಾಖ ಪೂರ್ಣಿಮೆಯಂದು. ಆತನಿಗೆ ಜ್ಞಾನೋದಯ ಆದುದು ಪೂರ್ಣಿಮೆಯಂದು. ಆತ ಪರಿನಿರ್ವಾಣ ಪಡೆದುದು ಪೂರ್ಣಿಮೆಯಂದು. ಹುಣ್ಣಿಮೆ ಬುದ್ಧನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದೆ. 
 1997ರಲ್ಲಿ ಯುನೆಸ್ಕೋ ಈ ಕ್ಷೇತ್ರವನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿತು. ಸುಮಾರು 2700 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರ ವಿಶ್ವ ನಾಗರಿಕತೆಯನ್ನು ಅರಿಯುವವರಿಗೆ ಈಗಲೂ ದಿಕ್ಸೂಚಿ ಯಾಗಿಯೂ ಇದೆ ಎಂದರೆ ತಪ್ಪಾಗಲಾರದು. ಈ ಕ್ಷೇತ್ರ ನೇಪಾಳ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿ ಇದೆ. 
ಮಾಯಾದೇವಿ ಸಿದ್ದಾರ್ಥನಿಗೆ ಜನ್ಮ ನೀಡಿದ ಮೇಲೆ 7 ದಿನ ಮಾತ್ರ ಜೀವಿಸಿದ್ದಳು.  ಮಾಯಾದೇವಿಯ ಮಂದಿರ, ಸಿದ್ಧಾರ್ಥಮಗುವಾಗಿ ಮಲಗಿದ ಶಿಲೆ, (ಮಾರ್ಕರ್ ಸ್ಟೋನ್) ಜನನ ಸ್ಥಳದ ಶಿಲ್ಪಗಳು, ಅಶೋಕ ಸ್ಥಂಭ, ಸುಂದರ ಕೊಳ, ಸುಮಾರು 31 ಪುಟ್ಟ ಪುಟ್ಟ ಸ್ಥೂಪಗಳ ರಚನೆಗಳು 2 ವಿಹಾರ ಸ್ಥಳಗಳು-ಇವೆಲ್ಲ ಇದುವರೆಗೆ ಉತ್ಖನನ ಆದ ಪುರಾತತ್ವ ಅವಶೇಷಗಳು.
ಅಶೋಕನು ಇಲ್ಲಿಗೆ ಕ್ರಿ.ಸ್ತ ಪೂರ್ವ 249ರಲ್ಲಿ ಯಾತ್ರಾರ್ಥಿಯಗಿ ಬಂದಿದ್ದ ಎನ್ನುತ್ತದೆ ಮಾಹಿತಿ. ಅವನ ಆಸ್ಥಾನ ಪುರೋಹಿತನಾದ ಉಪಗುಪ್ತ ಅವನಿಗೆ ಮಾರ್ಗದರ್ಶಿಯಾಗಿದ್ದ. ಇಲ್ಲಿಗೆ ಬಂದ ಮೇಲೆ  ಆತ ಒಂದು ಸಾಲ ಪತ್ರದ ಮರವನ್ನು ತೋರಿಸಿ ಇಲ್ಲಿ ದಿವ್ಯ ಚೇತನದ ಜನನವಾಯಿತು ಎಂದನಂತೆ.  ಅದರಡಿಯಲ್ಲಿ ಒಂದು ಕಟ್ಟೆ ಇತ್ತು. ಅಶೋಕ ಸೇರಿ ಎಲ್ಲರೂ ಅಲ್ಲಿ ನಿಂತು ಪ್ರಾರ್ಥಿಸಿದರು. ಆದರೆ ಭಗವಾನ್ ಬುದ್ಧನ ಜನ್ಮ ಸ್ಥಳ ಬರೇ ಕಟ್ಟೆಯಾಗಿದ್ದುದು ಸಾಮ್ರಾಟ್ ಅಶೋಕನಗೆÀ ಪಥ್ಯೆ ಆಗಲಿಲ್ಲ. ಆತ ಅಲ್ಲಿ ಒಂದು ದೇವಸ್ಥಾನ ಕಟ್ಟಲು ಲುಂಬಿಣಿಯ ಹಳ್ಳಿಯ ಜನರಿಗೆ ತಿಳಿಸಿ ಚಿನ್ನದ ನಾಣ್ಯಗಳನ್ನು ನೀಡಿದ ಎನ್ನುತ್ತವೆ ಮೂಲಗಳು.  ಹೀಗೆ ಈ ಕ್ಷೇತ್ರದಲ್ಲಿÀ ಕ್ರಿಸ್ತ ಪೂರ್ವ ಸುಮಾರು ಮೂರನೆಯ ಶತಮಾನದಲ್ಲಿ ಮಾಯಾದೇವಿಯ ದೇವಸ್ಥಾನವನ್ನು  ಕಟ್ಟಲಾಗುತ್ತದೆ.  ಕ್ರಿಸ್ತ ಪೂರ್ವ ಮೂರನೆಯ ಶತಮಾನದಲ್ಲಿ ಕಟ್ಟಿದೆ ಎನ್ನುವುದಕ್ಕೆ ಈ ಕಟ್ಟಡದ ಮೂಲ ಇಟ್ಟಿಗೆಗಳು, ಹಾಗೂ ಚೇಂಭರ್ಸ್  ಮೌರ್ಯಯುಗದವು ಎನ್ನುವುದು ಪುರಾತತ್ವಕಾರರ ಆಧಾರ.
 ಕ್ರಿ.ಶ 1896ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಸರ್ವೇಯ ಡಾ ಅಲೋಇಸ್ ಫ್ಯೂರರ್  ಮತ್ತು  ಪಾಲ್ಪಾದ ಗವರ್ನರ್ ಖಾಡ್ಗಾ ಶಮ್‍ಶೇರ್ ಈ ಕ್ಷೇತ್ರವನ್ನು ಗಮನಿಸಿ ಬೇಳಕಿಗೆ ತಂದರು. ಮುಂದೆ 1898ರಲ್ಲಿ ಪಿ.ಚೊ ಮುಖರ್ಜಿಯವರು ಇಟ್ಟಿಗೆಗಳಿಂದ ನಿರ್ಮಿಸಲಾದ ಅವಶೇಷಗಳನ್ನು ಪತ್ತೆ ಹಚ್ಚಿದರು. ಆಗ ಮಾಯಾದೇವಿಯ ಮಂದಿರದ ಹಳೆಯ ಅವಶೇಷಗಳ ಮೇಲೆ ಪುಟ್ಟ ದಿಣ್ಣೆಯನ್ನು ಕಟ್ಟಲಾಗಿತ್ತು. ಕಾಲಾಂತರದಲ್ಲಿ ಈ ಕ್ಷೇತ್ರ ಭಾರತದ ಇತರ ಬೌದ್ಧ ಕ್ಷೇತ್ರಗಳಂತೆ ಕತ್ತಲೆಗೆ ಸರಿಯಿತು. ಬುದ್ಧನ ಜನನ ಕ್ಷೇತ್ರ ಎನ್ನುವುದನ್ನು ಜನರು ಮರೆತರೂ ಮಾಯಾದೇವಿಯ ದೈವತ್ವ ಪ್ರಸಿದ್ಧಿ ಪಡೆಯಿತು. 
1933ರಿಂದ 1939ರವರೆಗೆ ಮುಂದೆ ನಡೆದ ಉತ್ಖನನದಲ್ಲಿ ಮಂದಿರದ ಒಳಗೆ ಭೂಮಿ ಮಟ್ಟದಿಂದ ಮೇಲಿನವರೆಗೆ ನಿರ್ಮಿಸಿದ ಕಟಕಟೆಗೆ ಇಟ್ಟಿಗೆಯ ಏಣಿ ಕಟ್ಟಿರುವುದು ಬೆಳಕಿಗೆ ಬಂತು ಎನ್ನುತ್ತದೆ ಪುರಾತ್ವಕಾರರ ಮಾಹಿತಿ.
ಈಗ ಬುದ್ಧ ಹುಟ್ಟಿದ ಕ್ಷೇತ್ರದ ಮೇಲೆ ಸುಂದರ ಕಟ್ಟಡÀ ಎದ್ದಿದೆ. ಇದುವೆ ಮಾಯಾದೇವಿ ಮಂದಿರ. ಇದರೊಳಗೆ ಒಂದು ಕ್ಷೇತ್ರವನ್ನು ಮಾಯಾದೇವಿಗೆ ಹೆರಿಗೆಯಾದ ಸ್ಥಳ ಎಂದು ಗುರುತಿಸಲಾಗಿದೆ. ಅಲ್ಲೊಂದು ಚಪ್ಪಟೆ ಶಿಲೆ ಇದೆ.

 ತಾಯಿಯ ಗರ್ಭದಿಂದ ಹೊರ ಬಂದ ಮಗುವನ್ನು ಆ ಕಲ್ಲಿನ ಮೇಲೆ ಮಲಗಿಸಲಾಯಿತು ಎನ್ನುವುದು ನಂಬಿಕೆ.
 ಕಟಕಟೆಯ ಮೇಲೆ ಮಾಯದೇವಿ ಸಾಲಮರಕ್ಕೆ ಜೋತು ಬಿದ್ದು ಹೆರಿಗೆ ನೋವು ನೀಡುವ ಪ್ರತಿಮೆ ಇದೆ. ಆ ಪ್ರತಿಮೆಯ  ಬಳಿ ಅವಳ ಸೋದರಿ ಪ್ರಜಾಪತಿಯ ಪ್ರತಿಮೆಯೂ ಇದೆ. ಭೂಮಿಗೆ ಜನಿಸಿದ ಕೂಡಲೇ ಬುದ್ಧ ಕೈಗಳನ್ನು ಮೇಲೆತ್ತಿ ತಾವರೆಯ ಮೇಲೆ ನಿಂತಿದ್ದ ಎನ್ನುವುದು ಬೌದ್ಧ ಧರ್ಮೀಯರ ನಂಬಿಕೆ. ಅದನ್ನು ತೋರಿಸುವ ಬುದ್ಧನ ಪುಟ್ಟ ಶಿಲ್ಪ  ಹಾಗೂ ಇಬ್ಬರು ಸಂನ್ಯಾಸಿಗಳು ಪುಟ್ಟ ಮಗುವಿನತ್ತ ಕೈಚಾಚಿರುವ ಶಿಲ್ಪಗಳು ಇವೆ. 

ಇಲಿ ಉತ್ಖಖನನ ಮಾಡುವಾಗ ದೊರೆತ ಶಿಲ್ಪಗಳನ್ನೇ ಅದು ಇದ್ದ ಸ್ಥಳದಲ್ಲಿಯೇ ಮರು ಸ್ಥಾಪಿಸಲಾಗಿದೆ.  ಈ ಶಿಲ್ಪಗಳು ಕೆಂಪು ಮರಳು ಶಿಲೆಯ ಮಥುರಾ ಶೈಲಿಯಲ್ಲಿದೆ. ದೇವಸ್ಥಾನದ ಒಳಭಾಗದಲ್ಲಿ ನಮಗÉ ಫೋಟೋತೆಗೆಯಲು ಅವಕಾಶ ಇಲ್ಲ. ಒಳಭಾಗದ ಕಾರಿಡಾರಿನಲ್ಲಿ ನಡೆದು ಈ ಪ್ರತಿಮೆಗಳ ಕಟಕಟೆಯತ್ತ ಬರಲು ಅವಕಾಶ ಇದೆ. ಕೆಳಗೆ ಇರುವ ಶಿಲೆಗೆ ಇರುವ ಎಣಿ ಅಶೋಕನ ಕಾಲದಲ್ಲಿಯೂ ಇತ್ತು ಎನ್ನುತ್ತದೆ ಇಲ್ಲಿಯ ಮಾಹಿತಿ. 

ಲುಂಬಿಣಿಯ ಅಶೋಕ ಸ್ಥಂಭ: ಕ್ರಿ.ಪೂರ್ವ 249ರಲ್ಲಿ ಈ ಸ್ಥಂಭsÀವನ್ನು ಅಶೋಕನು ಇಲ್ಲಿ ನೆಡಿಸಿದನು. ಅಶೋಕ ಸ್ಥಾಪಿಸಿದ 40 ಸ್ಥಂಭಗಳಲ್ಲಿ 3 ಸ್ಥಂಭಗಳು ಪ್ರಸ್ತುತ ನೇಪಾಳದಲ್ಲಿದೆ.  ಭದ್ರ ಕಲ್ಪದ ಮೊದಲ ಮಾನುಷಿ ಬುದ್ಧ ಕ್ರಕುಚಂದ ಬುದ್ಧನ ಜನ್ಮಸ್ಥಳದಲ್ಲಿ ಒಂದು,  ಎರಡನೆಯ ಮಾನುಷಿ ಬುದ್ಧಟಿ ಜನ್ಮಸ್ಥಳ ನಿಗಿಲಿಹವಾದಲ್ಲಿ ಎರಡನೆಯದು, ಮೂರನೆಯದು ಇಲ್ಲಿ ಲುಂಬಿಣಿಯಲ್ಲಿ. ಈ ಸ್ಥಂಭವನ್ನು ಸುಮಾರು 50 ಆನೆಗಳ ಮೂಲಕ ಚುನಾರ್‍ನಿಂದ ಸಾಗಿಸಲಾಯಿತು ಎನ್ನುತ್ತಾರೆ. ಈ ಸ್ಭಂಭದ ವಿವರವನ್ನು ಹೂಯೆತ್ಸಾಂಗ್ ನೀಡುತ್ತಾನೆ. ತಾವರೆ, ಬ್ರೆಕೆಟ್ ನತ್ತು ಕುದುರೆಯ ಚಿತ್ರವನ್ನು ಸ್ಥಂಭದ ಬುಡದಲ್ಲಿ ಚಿತ್ರಿಸಲಾಗಿತ್ತು ಎಂದು ಹೂಯೇ£ತ್ಸಾಂಗ್ ಬರೆಯುತ್ತಾನೆ. ಅವನ ಪ್ರಕಾರ ಮೇಲಿನ ಎರಡು ಭಾಗವು ಸಿಡಿಲಿನ ಹೊಡೆತಕ್ಕೆ ಮುರಿದು ಮುದ್ದಿತ್ತು. 
ನಾನು ಭಾರತದ ಎಲ್ಲಾ ಭೌದ್ಧ ಯಾತ್ರಾ ಸ್ಥಳಗಳನ್ನು ನೋಡಿದ್ದೆ. ಭಾರತದ ಯಾವುದೇ ಬೌದ್ಧ ಯಾತ್ರಾ ಸ್ಥಳಕ್ಕಿಂತ ಈ ಯಾತ್ರಾ ಸ್ಥಳ ಹೆಚ್ಚು ಪ್ರಶಾಂತವಾಗಿದೆ. ಈ ಪರಿಸರ ಬುದ್ಧನ ಶಾಂತಿ ಸಂದೇಶವನ್ನು ಸಾರುತ್ತಿದೆ.Mayadevi temple and lake . In this lake baby Sidhartha took first bathe.
Sala patra tree; whereMayadevi gave birth  to Sidhartha.
Ashoka Pillar at lumbini Nepal

No comments:

Post a Comment