ನಡಿದಾಡ ಬನ್ನಿ ಹಿಮಾಲಯ ಶಿಖರಗಳ ಸನ್ನಿಧಾನದಲ್ಲಿ…….ನಾ ಕಂಡ ಕಥೆ ಹೇಳುವ ಕೇಳ ಬನ್ನಿ…..
ಸಹೃದಯರ ಸನ್ನಿಧಾನಕ್ಕೆ ಅರಿಕೆ ನನ್ನ ಮೂರನೆಯ ಪ್ರವಾಸ ಕಥನವನ್ನು ನಿಮ್ಮ ಕೈಗಿಡುತ್ತಿದ್ದೇನೆ. ಮಾನವನ ಕಟ್ಟ ಕಡೆಯ ಅಗತ್ಯ ಪ್ರವಾಸ ಎಂಬುದು ಜನರ ಭಾವನೆ. ಆದರೆ ಅನೇಕ ಕಡೆ ಪ್ರವಾಸ ಹೋಗಿ ಬಂದ ನನಗೆ ಪ್ರವಾಸ ಕೂಡಾ ಮಾನವನ ಅಗತ್ಯದ ಸಾಲಲ್ಲಿ ಬರುತ್ತದೆ ಎಂದರಿವಾಗಿದೆ. ‘ದೇಶ ಸುತ್ತು ಕೋಶ ಓದು’ ಎನ್ನುವುದು ಈ ನಿಟ್ಟಿನಿಂದ ನಮ್ಮ ಅರಿವು ಹೆಚ್ಚಿಸಲು. ಬಹುತ್ವ ಭಾರತದ, ಬಹುಮುಖೀ ಸಂಸ್ಕøತಿಯ ಪರಿಚಯ ಆಗುವುದು ಪ್ರವಾಸದಿಂದ. ಉದಾಹರಣೆಗೆ ಹಿಡಿಂಬಾ ಅಥವಾ ಹಡಿಂಬಾಳನ್ನು ನೋಡಿ. ನಾವಿಲ್ಲಿ ಅವಳನ್ನು ರಾಕ್ಷಸಿ ಎಂದು ಬಾಯಿಪಾಠ ಮಾಡಿದ್ದೇವೆ. ಮಹಾಭಾರತದಲ್ಲಿ ಹಾಗೆ ಪರಿಚಯಿಸಲಾಗಿದೆ. ಆದರೆ ವಾಸ್ತವವಾಗಿ ಅಲ್ಲಿಯವರು ಅವಳನ್ನು ದೇವಿಯಾಗಿ ಆರಾಧಿಸುತ್ತಾರೆ. ‘ಲಿವಿಂಗ್ ಟುಗೆದರ್’ ನಮ್ಮ ಭಾಗದ ಭಾರತೀಯರಿಗೆ ಪಾಶ್ಚಾತ್ಯ ಸಂಸ್ಕøತಿ. ಈಶಾನ್ಯ ಭಾರತೀಯರಿಗೆ ಅದು ನೆಲದ ಸಂಸ್ಕøತಿ! ಈ ಪ್ರವಾಸ ಕಥನದಲ್ಲಿ ನುಬ್ರಾ ವ್ಯಾಲಿ ಭಾಗದ ಆರ್ಯನರ ಬಗ್ಗೆ ಕೆಲವು ಮಾತುಗಳಿವೆ. ‘ಆರ್ಯನರು ಭಾರತಕ್ಕೆ ನುಬ್ರಾ ಮೂಲಕ ಬಂದಿದ್ದರು ಎನ್ನುವುದು. ಭಾರತ - ಪಾಕಿಸ್ತಾನ ಭಾಗದಲ್ಲಿ ಅಂದಿನ ಈ ವಲಸಿಗರ ವಂಶವಾಹಿಗಳನ್ನು ನಾವು ಈಗಲೂ ಕಾಣಬಹುದು. ಹಾಗೂ ಯೇಸುವನ್ನು ಹುಡುಕಿಕೊಂಡು ಬಂದ ರೋಮನರಲ್ಲಿ ಕೆಲವರು ಇಲ್ಲಿಯೇ ಉಳಿದರು, ಅವರ ಮುಖ ಚಹರೆಯಿಂದಲೂ ಅವರನ್ನು ಗ್ರೀಕ್ ಮೂಲದವರು ಎಂದು ಗುರುತಿಸಬಹುದು’-ಮುಂತಾದುವು. ಆ ಎರಡೂ ಜನಾಂಗಗಳ ವಂಶವಾಹಿಗಳನ್ನು ಅವರ ಮುಖ ಚಹರೆಯಿಂದ ಗುರುತಿಸಬಹುದು ಎಂಬ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಮುಂದೆ ನಾನು ವಾಯುಸೇನೆಯ ಕರ್ನಲ್ ಒಬ್ಬರನ್ನು ಭೇಟಿಯಾದೆ. ಲಡಾಕ್, ನುಬ್ರಾ ಭಾಗದಲ್ಲಿ ಅನೇಕ ಬಾರಿ ಇಂತಹ ಹಳ್ಳಿಗಳಿಗೆ ಪುಟ್ಟ ವಿಮಾನದಲ್ಲಿ ಹಾರಿ ಜನವಸತಿ ಇದ್ದಲ್ಲಿ ತಂಗಿ ಬರುತ್ತಿದ್ದರಾತ. ಆತನಲ್ಲಿ ನಾನು ಈ ದಾರಿಯಾಗಿ ಭಾರತಕ್ಕೆ ಬಂದಿರುವ ಆರ್ಯನರು ಮತ್ತು ಯೇಸು ಸಮಾಧಿಯನ್ನು ಹುಡುಕಿ ಬಂದ ರೋಮನರ ವಂಶವಾಹಿಗಳು ಈಗಲೂ ಇಲ್ಲಿ ಇರುವ ಬಗ್ಗೆ ಇಲ್ಲಿಯ ಜನರು ಮಾತಾಡಿಕೊಳ್ಳುವ ವಿಷಯ ಹೇಳಿದೆ. ಕರ್ನಲ್ “ಅಂತಹ ಹಳ್ಳಿಗಳಲ್ಲಿ ಇದ್ದು ಬಂದಿದ್ದೇನೆ. ಹಾಗೂ ನೀವು ಕೇಳಿದ್ದು ವಾಸ್ತವ” ಎಂದರು." ಈ ಕೃತಿಯ ಲೇಖಕಿಯ ಅರಿಕೆಯಿಂದ…. ಮಾನವ ವಲಸೆಯ ಬಗ್ಗೆ, ಆ ಮೂಲಕ ಆಗುವ ಸಂಸ್ಕತಿಯ ವಲಸೆಯ ಬಗ್ಗೆ ತಿಳಿದುಕೊಳ್ಳಲು ದೇಶ ಸುತ್ತ ಬೇಕು ಕೋಶ ಓದಬೇಕು.For this book please contact :
Online store:
www.navakarnataka.com
Mob 7353530805
Navakarnataka showrooms at --
1) K. G. Road, Bengaluru
Mob 9480686862.
2) Crescent Road, Bengaluru
Mob 9480686858.
3) Ramaswamy Circle, Mysuru
Mob 9480686863.
4) K S R Road, Mangaluru
Mob 9480686864
5) Balmatta, Mangaluru
Mob 9480686866
6) Station Road, Kalaburagi
Mob 9480686865
No comments:
Post a Comment